A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 318

Backtrace:

File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 319

Backtrace:

File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 320

Backtrace:

File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler

File: /Appdata/padakanaja.karnataka.gov.in/index.php
Line: 318
Function: require_once

Padakanaja - Dictionary View
ಅನಿಸಿಕೆ

ಪದಕೋಶ: ಯಕ್ಷಗಾನ ಪದಕೋಶ | ಕನ್ನಡ-ಕನ್ನಡ | ಪ್ರಕಾಶಕರು - ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರ, ಎಂ.ಜಿ.ಎಂ. ಕಾಲೇಜು (1994)

Show entries
ಕ್ರಮ ಸ೦ಖ್ಯೆ ಇಂಗ್ಲೀಷ್ ಪದ
(English Word)
ಕನ್ನಡ ಪದ
(Kannada Word)
ಕನ್ನಡ ಅರ್ಥ
(Kannada Meaning)
ವಿಷಯ ವರ್ಗೀಕರಣ
(Word Subject)
ವ್ಯಾಕರಣ ವಿಶೇಷ
(Word Grammer)
ಕನ್ನಡ ಉಚ್ಚಾರಣೆ
(Kannada Pronunciation)
ಪರ್ಯಾಯ ಪದ
(Word Synonyms)
ಇಂಗ್ಲೀಷ್ ಅರ್ಥ
(English Meaning)
ಸಂಕ್ಷಿಪ್ತ ವಿವರಣೆ
(Short Description)
ದೀರ್ಘ ವಿವರಣೆ
(Long Description)
ಆಡಳಿತಾತ್ಮಕ ಪದ
(Administrative Word)
1 ಅಂಗದನ ಸುಳಿ ಅಂಗದನ ಪಾತ್ರದ ಮುಖವರ್ಣಿಕೆಯಲ್ಲಿ ಬರುವ ಸುಳಿಯಂತಹ ವಿನ್ಯಾಸ. ತುಟಿಗಳ ಸುತ್ತ ಮಂಗನ ಮುಖದ ರೂಪ ಬರೆದು, ಅದರ ಎರಡು ತುದಿಗಳಿಗೆ ಕೊಕ್ಕೆಯಾಕಾರದ ಸುಳಿ ಬರೆಯುವರು. ಇವು ಸುಮಾರಾಗಿ ಹನುಮಂತನ ಮುಖದ ಸುಳಿಗಳಂತೆ ಇರುವುವು ಸಮಗ್ರ ಯಕ್ಷಗಾನ ರಂಗ ಅಥವಾ ಕರಾವಳಿಯ ಎಲ್ಲ ತಿಟ್ಟುಗಳಿಗೆ ಅನ್ವಯ
2 ಅಂಗಿ ವೇಷಗಳು ಧರಿಸುವ ಅಂಗಿ ಅಥವಾ ದೊಗಲೆಗಳು. ಇವು ಪಾತ್ರಾನುಸಾರ, ವಿವಿಧ ಬಣ್ಣ ಮತ್ತು ಗಾತ್ರಗಳಲ್ಲಿರುತ್ತವೆ. ರಾಜವೇಷ, ಬಣ್ಣದ ವೇಷ, ದೊಡ್ಡ ಪಗಡಿ ವೇಷಗಳಿಗೆ ಇಡಿತೋಳಿನ ಅಂಗಿ. ಹಿಂದೆ, ತೆಂಕುತಿಟ್ಟಿನಲ್ಲಿ ಸ್ತ್ರೀಪಾತ್ರಗಳಿಗೂ ಇಡಿತೋಳಿನ ಅಂಗಿಯಿದ್ದಿತು. ಪುಂಡು (ತರುಣ) ವೇಷಗಳಿಗೆ ಅರ್ಧತೋಳಿನ ಅಂಗಿ. ಬಡಗುತಿಟ್ಟಿನಲ್ಲಿಕೇದಗೆ ಮುಂದಲೆ (ಚಿಕ್ಕ ಪಗಡಿ) ವೇಷಗಳಿಗೆ ಅರ್ಧತೋಳಿನ ಅಂಗಿ. ಉತ್ತರ ಕನ್ನಡದಲ್ಲಿ ಎಲ್ಲಬಗೆಯ ಪುರುಷ ವೇಷಗಳಿಗೆ ಇಡಿತೋಳಿನ ಅಂಗಿಯಿದ್ದುದು; ಅರೆತೋಳಿನದಿರಲಿಲ್ಲ. ಮೂಡಲಪಾಯ, ಗಟ್ಟದಕೋರೆ ಸಂಪ್ರದಾಯಗಳಲ್ಲೂ ಹಾಗೆಯೇ. ಈಗ ಎಲ್ಲಕಡೆಗಳಲ್ಲೂ ಅರ್ವಾಚೀನ ನಾಟಕ ವೇಷಗಳ ಪ್ರವಾಭದಿಂದ ನಿಲುವಂಗಿಗಳು, ತುಂಡಂಗಿಗಳೂ, ಕಪಿಪಾತ್ರಗಳಿಗೆ ರೋಮದ ಅಂಗಿಗಳೂ ಬಳಕೆಗೆ ಬಂದಿವೆ. ದಗಲೆ. ಸಮಗ್ರ ಯಕ್ಷಗಾನ ರಂಗ ಅಥವಾ ಕರಾವಳಿಯ ಎಲ್ಲ ತಿಟ್ಟುಗಳಿಗೆ ಅನ್ವಯ
3 ಅಂಟು ವಿವಿಧ ರೀತಿಯ ಅಂಟಿಸುವಿಕೆಗಳಿಗೆ ಬಳಸುವ ಅಂಟುಗಳು, ಗಮ್. ವೇಷ ಸಾಮಗ್ರಿಗಳಿಗೆ ಬೇಗಡೆ, ಕನ್ನಡಿ ಹರಳುಗಳನ್ನು ಅಂಟಿಸಲು ಹಲಸಿನ ಮೇಣ ಮತ್ತು ಜೇನು ಮೇಣಗಳನ್ನು ಬೆರೆಸಿ ಕುದಿಸಿದ ಅಂಟು, ಅಥವಾ ಗೇರುಮರದ ಸೊನೆ ಅಂಟು. ಚೆಂಡೆ, ಮದ್ದಲೆಗಳ ಕವಳ (ಚರ್ಮ) ಗಳನ್ನು ಅಂಟಿಸಲು ಹುಣಸೆಬೀಜ ಅರೆದು ಕುದಿಸಿ ಮಾಡಿದ ಅಂಟು. ಮದ್ದಲೆಗೆ ಕರ್ನ ಕೂರಿಸಲು ಗುಲಗುಂಜಿ ಪುಡಿಯ ಅಂಟು. ಇತರ ಸಾಮಾನ್ಯ ಸಂದರ್ಭಗಳಲ್ಲಿ ಗೋದಿ ಹಿಟ್ಟಿನ ಅಂಟನ್ನು ಬಳಸುವರು. ಈಗ, ಮೀಸೆ ಅಂಟಿಸಲು ರಾಳ ಮತ್ತು ಪೆಟ್ರೊಮ್ಯಾಕ್ಸ್ ಸ್ಪಿರಿಟನ್ನು ಉರಿಸಿ ಮಾಡಿದ ಸ್ಪಿರಿಟ್ ಗಮ್ ಬಳಕೆಯಿದೆ. ಈಗ ಎಲ್ಲ ವಿಷಯಗಳಿಗೆ, ಮಾರುಕಟ್ಟೆಯ ಆಧುನಿಕ ರೆಸಿನ್‌ಗಳು ಬಳಕೆಗೆ ಬರುತ್ತಿವೆ. ಸಮಗ್ರ ಯಕ್ಷಗಾನ ರಂಗ ಅಥವಾ ಕರಾವಳಿಯ ಎಲ್ಲ ತಿಟ್ಟುಗಳಿಗೆ ಅನ್ವಯ
4 ಅಂಡು ನಿತಂಬ ಎಂಬುದು ಇದರ ಶಬ್ದಾರ್ಥ. ಯಕ್ಷಗಾನದ ವೇಷಕ್ಕೆ ಸೊಂಟದಿಂದ ಮೊಣಕಾಲಿನವರೆಗೆ, ಗಾತ್ರ ನೀಡಲು ಬಳಸುವ ವಸ್ತ್ರಗಳ ಮೊತ್ತಕ್ಕೂ, ಅದರ ಕಟ್ಟುವಿಕೆಯ ವ್ಯವಸ್ಥೆಗೂ ಅಂಡು ಎನ್ನುವರು. ಹಗ್ಗವೊಂದರ ಮೇಲೆ, ಬಟ್ಟೆಗಳನ್ನು ಹರಡಿ ಒಳಗೆ ಗಿಡ್ಡ, ಹೊರಗೆ ಉದ್ದ ಭಾಗವಿಟ್ಟು ಸೊಂಟದ ಸುತ್ತ ಬಿಗಿಯುವರು. ಇದಕ್ಕೆ ಹಳೆಯ ಮೆತ್ತನೆಯ ವಸ್ತ್ರಗಳನ್ನು ಉಪಯೋಗಿಸುವುದು ಕ್ರಮ. ಹಗ್ಗವನ್ನು ಬಟ್ಟೆಗಳ ಮೇಲಿನಿಂದ ಎರಡು ಸುತ್ತು ಬಿಗಿದು, ಹೊಕ್ಕುಳ ಬಳಿ ಗಂಟು ಹಾಕುವರು. ಅಂಡಿನ ವಸ್ತ್ರಗಳು ಹೊಕ್ಕುಳ ಕೆಳಗಿನ ಭಾಗದಲ್ಲಿ ಪೊಳ್ಳು ಬಿಡಬೇಕು. ಇಲ್ಲಿ ಕಾಂಚೀಧಾಮವನ್ನು ಕಟ್ಟುವುದರಿಂದ, ಬಿಡುವಾಗಿರಬೇಕಾಗುತ್ತದೆ. ಅಂಡಿನ ವಸ್ತ್ರಗಳ ಮೊತ್ತ, ಗಾತ್ರಗಳು ವೇಷಧಾರಿಯ ದೇಹಗಾತ್ರ, ಅವನು ಧರಿಸುವ ಪಾತ್ರವನ್ನೂ ಹೊಂದಿಕೊಂಡಿರುತ್ತದೆ. ಬಣ್ಣದ ವೇಷಕ್ಕೆ ಅತಿದೊಡ್ಡ ಕಿರೀಟ ವೇಷಗಳಿಗೆ ಅದಕ್ಕಿಂತ ಚಿಕ್ಕ, ಪುಂಡು ವೇಷಗಳಿಗೆ ಇನ್ನೂ ಚಿಕ್ಕ ಅಂಡನ್ನು ಕಟ್ಟುವರು. ಸ್ತ್ರೀ ವೇಷ, ಋಷಿ ವೇಷಗಳ ಅಂಡು ಮತ್ತಷ್ಟು ಚಿಕ್ಕದು. ತೆಂಕು ತಿಟ್ಟನಲ್ಲಿ ದೊಡ್ಡ ಅಂಡಿನ ಬಳಕೆ, ಬಡಗು, ಉ.ಕ. ತಿಟ್ಟುಗಳಲ್ಲಿ ಸಣ್ಣದರ ಬಳಕೆ. ತೆಂಕಣ ವೇಷಗಳು ಆಕಾರದಲ್ಲಿ ದೊಡ್ಡವು. ಅವುಗಳಿಗೆ ಸೊಂಟದ ಕೆಳಗೆ ಬಾಲಮುಂಡು ಇರುತ್ತದೆ, ಹೀಗಾಗಿ ಅಂಡು ಅವಶ್ಯಕ. ಅಂಡಿನ ಮೇಲೆ ಬಿಳಿ ದಟ್ಟಿ ಬಿಗಿದು ಕಟ್ಟುತ್ತಾರೆ. ಅದರ ಮೇಲೆ ಹಿಂಬದಿಯ ಡಾಬು ನಿಲ್ಲುತ್ತದೆ. ತೆಂಕುತಿಟ್ಟು
5 ಅಂಡಿನ ಹಗ್ಗ ಮೇಲೆ ಹೇಳಿದಂತೆ, ಅಂಡು ಕಟ್ಟುವಿಕೆಗೆ ಬಳಸುವ ನಾರು, ತೆಂಗಿನ ಹುರಿ ಅಥವಾ ಬಟ್ಟೆಯ ಹಗ್ಗ. ತೆಂಕುತಿಟ್ಟು
6 ಅಂಡಿನ ವಸ್ತ್ರ ಅಂಡು ಕಟ್ಟಲು ಬಳಸುವ ಬಟ್ಟೆಗಳು ಅಂಡು ತೆಂಕುತಿಟ್ಟು
7 ಅಂಡುಕುಟ್ಟಿ ಪೂರ್ವರಂಗದ ಕಟ್ಟು ಹಾಸ್ಯಗಳಲ್ಲಿ ಒಂದು ಬಗೆ. ಮಲೆಯಾಳಿ ಬೆಸ್ತರ ಹಾಸ್ಯ. ಬೆಸ್ತ ದಂಪತಿಗಳು "ಕುಟ್ಟಿ ಕುಟ್ಟಿ ಪೇಶಲೆ ಅಂಡುಕುಟ್ಟಿ ಪೇಶಲೆ" ಎಂಬ ಪದ್ಯವನ್ನು ಹಾಡಿಕೊಂಡು ಬರುವರು. ಅನಂತರ ಅವರೊಳಗೆ ಜಗಳವಾಗಿ, ಗಂಡನು ಹೆಂಡತಿಗೆ ಹೊಡೆಯುವಾಗ, ಮಕ್ಕಳು (ಅಂಡುಕುಟ್ಟಿಗಳು) 'ಅಡಿಕ್ಕೊಲ್ಲಾ' (ಹೊಡೆಯಬೇಡ) ಎಂದು ತಡೆಯುವರು. 'ಅಡಿಕ್ಕೊಲ್ಲ' ಹಾಸ್ಯವೆಂದರೂ ಇದೇ. ಅಡಿಕ್ಕೊಲ್ಲ ತೆಂಕುತಿಟ್ಟು
8 ಅಂತರ ತೆರೆ ಕೆಲವು ವೇಷಗಳ ಪ್ರವೇಶ ದೃಶ್ಯಕ್ಕೆ, ಚಪ್ಪರದಂತೆ ಹಿಡಿಯುವ, ಜಾಲರಿ ಇರುವ ವಸ್ತ್ರ. ಇದನ್ನು ಕೋಲುಗಳಿಗೆ ಆಧರಿಸಿ ಮೇಲೆ ಚಪ್ಪರದಂತೆ ಹಿಡಿಯುವರು. ರಾಮ, ಶಿವ ಮೊದಲಾದ ವೇಷಗಳಿಗೆ ಬಳಕೆ. ಇದು ಐಚ್ಛಿಕ, ಕಡ್ಡಾಯವಲ್ಲ. ತೆಂಕುತಿಟ್ಟು
9 ಅಂತರ ತೆರೆ ಪೊರಪ್ಪಾಡು ಅಂತರ ತೆರೆಯೊಂದಿಗೆ ಮಾಡುವ ಪ್ರವೇಶ ನೃತ್ಯ, ದೃಶ್ಯ ತೆಂಕುತಿಟ್ಟು
10 ಅಂಬಟೆ ಸೂಡಿ ಸ್ತ್ರೀ ವೇಷದ ಸರಳ ಕೇಶಾಲಂಕಾರ. ಜಡೆಹೆಣೆಯದೆ ಬಿಡಿಕೊದಲನ್ನೆ ಮಡಚಿ ಅಮಟೆಕಾಯಿ ಆಕಾರದಲ್ಲಿ ಗಂಟುಕಟ್ಟುವ ಕ್ರಮ; ಜೋಲುಮುಡಿ. ಸಖಿ, ಸೇವಕಿ ಮೊದಲಾದ ಸಾಮಾನ್ಯ ಪಾತ್ರಗಳಿಗೆ ಬಳಕೆ. ಸಮಗ್ರ ಯಕ್ಷಗಾನ ರಂಗ ಅಥವಾ ಕರಾವಳಿಯ ಎಲ್ಲ ತಿಟ್ಟುಗಳಿಗೆ ಅನ್ವಯ