ಅನಿಸಿಕೆ

ಪದಕೋಶ: ಅಚ್ಚಗನ್ನಡ ಪ್ರಾಣಿಪದಕೋಶ | ಕನ್ನಡ-ಕನ್ನಡ | ಪ್ರಕಾಶಕರು - ಸಪ್ನ ಬುಕ್‌ ಹೌಸ್‌ (2015)

Show entries
ಕ್ರಮ ಸ೦ಖ್ಯೆ ಇಂಗ್ಲೀಷ್ ಪದ
(English Word)
ಕನ್ನಡ ಪದ
(Kannada Word)
ಕನ್ನಡ ಅರ್ಥ
(Kannada Meaning)
ವಿಷಯ ವರ್ಗೀಕರಣ
(Word Subject)
ವ್ಯಾಕರಣ ವಿಶೇಷ
(Word Grammer)
ಕನ್ನಡ ಉಚ್ಚಾರಣೆ
(Kannada Pronunciation)
ಪರ್ಯಾಯ ಪದ
(Word Synonyms)
ಇಂಗ್ಲೀಷ್ ಅರ್ಥ
(English Meaning)
ಸಂಕ್ಷಿಪ್ತ ವಿವರಣೆ
(Short Description)
ದೀರ್ಘ ವಿವರಣೆ
(Long Description)
ಆಡಳಿತಾತ್ಮಕ ಪದ
(Administrative Word)
61 ಕಲ್ಲಾಮೆ ಶಿಲಾಕೂರ್ಮ (ಚಾ* ೨-೩೬)
62 ಗರುಡಮೂಗಿನ ಆಮೆ ಕಾಲು ಎರಡು ನಖಗಳಿಂದ ಕೂಡಿದ್ದು, ಬೆನ್ನುಫಲಕಗಳು ನಾಡ ಹೆಂಚುಗಳ ಹಾಗೆ ಜೋಡಣೆಯಾಗಿರುತ್ತವೆ (ಪ್ರಾವಿಶ್ವ. ೧೧೬, ೫೧೦)
63 ತಾಂಬೇಲು (ತಾಂಬೇಲಿ, ತಾಬಿಲೆ) (ನಮ್ಮನು.೨೪೦); ಒಂದು ಬಗೆಯ ಆಮೆ (ಕನಿ.)
64 ತೊಗಲಾಮೆ ಸಿಂಹಳದ ಕಡಲ ತೀರದಲ್ಲಿ ವಿಶೇಷವಾಗಿರುವ ಒಂದು ಜಾತಿಯ ಆಮೆ (ಪ್ರಾವಿಶ್ವ. ೨೮೫)
65 ನೀರಾಮೆ ಬೆರಳುಗಳು ಕೂಡಿಕೊಂಡು ಹುಟ್ಟುಗಳಂತೆ ಚಪ್ಪಟೆಯಾಗಿರುವ ಆಮೆ (ಪ್ರಾವಿಶ್ವ. ೭೭೨)
66 ನೈಯಾಮೆ ಹೆಚ್ಚು ನಯ ಹಾಗೂ ಸುಂದರ ಆಗಿದ್ದು, ನೀರಿನಲ್ಲೇ ವಾಸಿಸುವ ಆಮೆ (ಜನನಿ. ೨೧೬)
67 ಪಗಡೆಚಾರಿ ಆಮೆ ( ಪಗಡೆ ಆಮೆ) ಶಾರಕೂರ್ಮ (ಚಾ* ೨-೩೬) ಕಾಡಿನಲ್ಲಿ ಮೆಳೆಯ ತಾಳು ಮತ್ತು ತರಗಿನ ರಾಶಿಯ ನಡುವೆ ಇದ್ದು, ಹುಳು ಹುಪ್ಪಟೆಗಳನ್ನು ತಿಂದು ಬದುಕುತ್ತದೆ. ಕಪ್ಪುಹೊದಿಕೆಯ ಚಿಪ್ಪಿನ ಮೇಲ್ಭಾಗದಲ್ಲಿ ಚೌಕಾಕಾರದ ಅರಿಶಿನ ಬಣ್ಣದ ಗೆರೆಗಳು ಪಗಡೆ ಹಾಸನ್ನು ಹೋಲುತ್ತವೆ. (ಜನನಿ. ೨೧೬)
68 ಪೆಟ್ಟಿಗೆ ಆಮೆ ಚಿಪ್ಪು ಮುಚ್ಚಿದ ಪೆಟ್ಟಿಗೆಯಂತಿರುವ ಆಮೆ (ಪ್ರಾವಿಶ್ವ. ೮೪೧)
69 ಮುರಕಾಟಿ ಒಂದು ಬಗೆಯ ಆಮೆ; ನೀರಿನಲ್ಲಿ, ಬೇಲಿಯ ತರಗಿನಲ್ಲಿ , ಹುಲ್ಲಿನ ರಾಶಿಯಲ್ಲಿ ಬದುಕುತ್ತದೆ. ಮೈ ಸ್ವಲ್ಪ ತರಿತರಿ. ಕೈಯಲ್ಲಿ ಹಿಡಿದರೆ ವಾಸನೆ; ಮಾಂಸವೂ ಗಬ್ಬು (ಜನನಿ.೨೧೬)
70 ಮುರಿಕಿ ಆಮೆ (ನಮ್ಮನು . ೨೪೦); ಒಂದು ಬಗೆಯ ಆಮೆ