A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 318

Backtrace:

File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 319

Backtrace:

File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 320

Backtrace:

File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler

File: /Appdata/padakanaja.karnataka.gov.in/index.php
Line: 318
Function: require_once

Padakanaja - Dictionary View
ಅನಿಸಿಕೆ

ಪದಕೋಶ: ಅಚ್ಚಗನ್ನಡ ದೇಹಾವಯವ ಪದಕೋಶ | ಕನ್ನಡ-ಕನ್ನಡ | ಪ್ರಕಾಶಕರು - ಸಂವಹನ ಪ್ರಕಾಶನ (2017)

Show entries
ಕ್ರಮ ಸ೦ಖ್ಯೆ ಇಂಗ್ಲೀಷ್ ಪದ
(English Word)
ಕನ್ನಡ ಪದ
(Kannada Word)
ಕನ್ನಡ ಅರ್ಥ
(Kannada Meaning)
ವಿಷಯ ವರ್ಗೀಕರಣ
(Word Subject)
ವ್ಯಾಕರಣ ವಿಶೇಷ
(Word Grammer)
ಕನ್ನಡ ಉಚ್ಚಾರಣೆ
(Kannada Pronunciation)
ಪರ್ಯಾಯ ಪದ
(Word Synonyms)
ಇಂಗ್ಲೀಷ್ ಅರ್ಥ
(English Meaning)
ಸಂಕ್ಷಿಪ್ತ ವಿವರಣೆ
(Short Description)
ದೀರ್ಘ ವಿವರಣೆ
(Long Description)
ಆಡಳಿತಾತ್ಮಕ ಪದ
(Administrative Word)
1 ಅಂಗಾಲ್‌ (ಅಂಗಾಲು) ಕಾಲಿನ ಅಡಿಯ ಭಾಗ, ಹೆಜ್ಜೆಯ ಅಡಿಯ ಭಾಗ, ಚರಣತಲ 1. ಅಂಗಾಲೊಳ್‌ ಮುಳ್‌ ನಡೆಯುಂ ತಾನೆಂತು ಮುಱುಗುವನಂತು.... (ಬ್ರಹ್ಮಶಿವ ಅವರ ಸಮಯ ಪರೀಕ್ಷೆ ಕೃತಿ- ೫-೬) 2. ನಿನ್ನಂಗಾಲು ದಸಿನಟ್ಟು ನಿನಗೆ ನಡೆಯಲು ಬಹುದೆ (ಭೀಮಕವಿ ಅವರ ಬಸವಪುರಾಣ ಕೃತಿ- ೪೪-೮)
2 ಅಂಗುಟ (ಉಂಗುಟ) ಪಾದದ ಹೆಬ್ಬೆರಳು; ಅಂಗುಷ್ಠ (ಸಂಸ್ಕೃತ ಪದ) 1. ತಪೋಬಲವೃದ್ಧಿಯಿಂದಾ ಪರ್ವತಮನೆಡದ ಪಾದದಂಗುಟದ ಕೊನೆಯಿಂದೊಯ್ಯ ನೊತ್ತುವುದುಂ (ನಾಗರಾಜ ಅವರ ಪುಣ್ಯಾಸ್ರವಂ ಕೃತಿ- ೫-೫೫ ವ.) 2. ಜಳರಾಶಿಯನುಂಗುಟದನಿತೊಳನೊರ್ವನಗಸ್ತ್ಯನೆಯ್ದೆ ಕುಡಿದನೆನುತ್ತುಂ (ಬ್ರಹ್ಮಶಿವ ಅವರ ಸಮಯಪರೀಕ್ಷೆ ಕೃತಿ- ೧೦-೧೦೯)
3 ಅಂಗುಳ್‌ (ಅಂಗುಳು, ಅಂಗುಳ ಅಂಗಳ, ಅಂಗುಳಿ) ಗಂಟಲಲ್ಲಿ ಮೂಗಿನ ದ್ವಾರವನ್ನೂ ಬಾಯನ್ನೂ ಪ್ರತ್ಯೇಕಿಸುವ ಕಿರುನಾಲಗೆಯ ಪ್ರದೇಶ; ಗಂಟಲಿನ ಮೇಲಟ್ಟ. 1. ಅಂಗುಳೊಳಡಸಿದ ವಿಷಮುಂ..... ಮದನಹರಂಗೆಣೆಯೆನಿಪುದಱಿನೆಮಗೆ ಖಳರಭಿವಂದ್ಯರ್‌ (ನಾಗವರ್ಮ ಅವರ ಕಾವ್ಯಾವಲೋಕನಂ ಕೃತಿ- ೭೬೩); 2. ಹೂಳಿದಂಗುಳು ಸಾರವಱತ ಬಾಯಿ (ಮೂರನೇ ಮಂಗರಸ ಕವಿಯ ಸಮ್ಯಕ್ತ್ವ ಕೌಮುದಿ- ೧೦-೪೮); 3. ನೀರಿಲ್ಲದಂಗುಳಗಳೊಣಗುತುಂ. (ವಿರೂಪಾಕ್ಷ ಪಂಡಿತ ಅವರ ಚೆನ್ನಬಸವಪುರಾಣ ಕೃತಿ- ೫೬-೨೪); 4. ಆ ಬಕಪಕ್ಷಿಯ ಅಂಗಳದಲ್ಲಿ ಉರುಪನ್ನು ಹುಟ್ಟಿಸಿದನು (ಗಳಗನಾಥರ ಭಾಗವತಾಮೃತ ಕೃತಿ- ೩-೩೧೩); 5. ಅಂಗುಳಿಯ ಮುಳ್ಳಂ ಸುದತಿ ತನ್ನಂಗುಳದಿನೊತ್ತುವಳು (ಭೀಮಕವಿ ಅವರ ಬಸವಪುರಾಣ ಕೃತಿ- ೧೫-೧೧);
4 ಅಂಗೆಯ್‌ (ಅಂಗಯ್‌, ಅಂಗೈ) ಕೈಯ ಒಳಭಾಗ; ಕರತಲ 1. ತಾನಂಗೆಯ್ಯ ಪದ್ಮದಿಂ ಚರಣಂಗಳ ಪದ್ಮಂಗಳಿಂದೆ ಗಿರಿಸುತೆಯೆಸೆದಳ್‌ (ಹರಿಹರ ಕವಿಯ ಗಿರಿಜಾಕಲ್ಯಾಣಂ ಕೃತಿ- ೩-೫೮); 2. ಮನಮನಂಗಯ್ಯಲಿಕ್ಕಿ ತೋರ್ಪೆನೆಂಬಂತೆ (ನಾಗವರ್ಮ ಅವರ ಕರ್ನಾಟಕ ಕಾದಂಬರಿ (ಪೂರ್ವಭಾಗ)- ೭-೮೬); 3. ಅಂಗೈಯೊಳಗಣ ಹಂಸೆ ಹಾಲನೊಲ್ಲದೆ ನೀರ ಕುಡಿಯಿತ್ತು (ಆದಯ್ಯ (ಸಂ.ಫ.ಗು.ಹಳಕಟ್ಟಿ) ಅವರ ಆದಯ್ಯನ ವಚನಗಳು-೧೦೪);
5 ಅಂಗೈತಳ ಅಂಗಯ್ಯ ಪ್ರದೇಶ; ಕರತಲ ನಿರ್ದೈವರಂಗೈತಳಕೆ ಬಂದರೆ ಪರುಷ ಪಾಷಾಣ (ಕುಮಾರವ್ಯಾಸ ಬರೆದ ಕುಮಾರವ್ಯಾಸ ಭಾರತ ದ್ರೋಣಪರ್ವ- ೧೦-೪೬)
6 ಅಚ್ಚಿ¹ ಕಣ್ಣು; ಅಕ್ಷಿ (ಸಂಸ್ಕೃತ ಪದ) ಅಚ್ಚಿ ಮೂಱುಳ್ಳ ಶಿವನಂ ಭಜಿಸುತಗಜಾತೆ ಸುಖಮಿರಲ್‌ (ವಿರೂಪಾಕ್ಷ ಪಂಡಿತ ಅವರ ಚೆನ್ನಬಸವಪುರಾಣ ಕೃತಿ- ೩೪-೩೧)
7 ಅಚ್ಚಿ² ಮೊಲೆ, ಮೊಲೆಯ ತೊಟ್ಟು ಅಚ್ಚಿಯೂ ಬೇಕು, ಅಪ್ಪಚ್ಚಿಯೂ ಬೇಕು (ಗಾದೆ)
8 ಅಡಗು (ಅಡಂಗು) ಬಾಡು; ಮಾಂಸ 1. ಬಿಸುನೆತ್ತರ್‌ ನೆಣನಡಗೆಲ್ವು ಸಮಸ್ತಂ ಸುರಿಯೆ (ಪಂಪ ಕವಿಯ ಪಂಪಭಾರತಂ ಕೃತಿ- ೮-೭೭); 2. ನೀಪೊದೆದಿರ್ದಾ ನವಕಂಬಳವನಡಂಗೆನುತವೆ ಕರ್ಚಿ ತನಕದಿನಡರ್ದುದಾಗಸಕೆ (ಮೂರನೇ ಮಂಗರಸ ಕವಿಯ ಶ್ರೀಪಾಲಚರಿತೆ ಕೃತಿ- ೭-೭೦); 3. ಅಟ್ಟಡಗು/ಉಖ್ಯ (ಪಾತ್ರೆಯಲ್ಲಿ ಅಟ್ಟ ಮಾಂಸ; ಅಭಿನವ ಮಂಗರಾಜ ಅವರ ಅಭಿನವಾಭಿದಾನಂ ಕೃತಿ- ೬೪-೪; ನಾಗವರ್ಮ ಅವರ ಅಭಿದಾನರತ್ನಮಾಲಾಕರ್ಣಾಟಕಟೀಕೆ ಕೃತಿ- ೫೪-೧೬೮); 4. ಕಾರಡಗು/ಕಪ್ಪಾದ ಮಾಂಸ, ಕಪ್ಪಿಟ್ಟ ಮಾಂಸ? (ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ನಿಘಂಟು ಸಂ.I-VIII-- ೧೭೩೨) : 5. ಕಡಂಗುವರ ಕಾರಡಗಂ ತಿನುತಿಪ್ಪ ಭೈರವಂ (ಹರಿಹರ ಕವಿಯ ಕಣ್ಣಪ್ಪನ ರಗಳೆ iv. ೧೦-೨೦, ೧೧೨೧); 6. ತಾಳಿಸಿದಡಗು/ಭರೂಟಕ, ಹುರಿದ ಮಾಂಸ (ನಾಗವರ್ಮ ಅವರ ಅಭಿದಾನರತ್ನಮಾಲಾಕರ್ಣಾಟಕಟೀಕೆ ಕೃತಿ- ೫೪-೧೬೮); 7. ಸುಟ್ಟಡಗು/ಭೂತಿ (ನಾಗವರ್ಮ ಅವರ ಅಭಿದಾನರತ್ನಮಾಲಾಕರ್ಣಾಟಕಟೀಕೆ ಕೃತಿ- ೫೪-೧೬೯)
9 ಅಡಬಳ ಬಾಡು; ಮಾಂಸ (ಅಡಗು+ಪಲ) ಹರನೇತ್ರವಹ್ನಿಯೊಳಡಬಳವ ಸುಡಬಗೆದಲಾ (ಕುಮಾರವ್ಯಾಸ ಬರೆದ ಕುಮಾರವ್ಯಾಸ ಭಾರತ ಸಭಾಪರ್ವ ಕೃತಿ- ೧೪-೩೭)
10 ಅಡಿ ಹರಡಿನಿಂದ ಕೆಳಗಿರುವ ಕಾಲಿನ ಭಾಗ; ಪಾದ, ಪಾದತಳ 1. ತಿಳಿಪಲಡಿಗೆಱಗಿದೋಪನ ತಳಂಗಳಾ ತೀಟದಿಂ (ನೃಪತುಂಗ, ಶ್ರೀವಿಜಯ ಬರೆದ ಕವಿರಾಜಮಾರ್ಗಂ ಕೃತಿ- ೩-೧೧೮); 2. ಕೇಸಡಿ/ಕೆಂಪಾದ ಪಾದತಲ : ಕೇಸಡಿ ಕೆಂದಾವರೆವೂಗಳಂ ಕೆದಱಿ (ಆಂಡಯ್ಯ ಅವರ ಕಬ್ಬಿಗರ ಕಾವಂ ಕೃತಿ- ೯೩); 3. ಪೇರಡಿ/ದೊಡ್ಡಪಾದ (ಕೇಶಿರಾಜ ಬರೆದ ಶಬ್ದಮಣಿದರ್ಪಣಂ ಕೃತಿ- ೧೮೦. ಪ್ರ.); 4. ಪೊಱಅಡಿ/ಪಾದದ ಮೇಲುಭಾಗ: ಮನುಜಮಾಂಧಾತನ ಪೊಱ ಅಡಿಗಳ್‌ ವಿರೋಧಿಭೂಪಾಳರ ನಡಿಗೆಱಗಿಸಿದ ಸಂತೋಷದೊಳುನ್ನತಂಗಳಾದಂತೆ ಕೂರ್ಮೋನ್ನತಂಗಳಾದುವು (ಪಂಪ ಕವಿಯ ಪಂಪಭಾರತಂ (ವಿಕ್ರಮಾರ್ಜುನ ವಿಜಯಂ) ಕೃತಿ- ೨-೩೯ ವ)