A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 318

Backtrace:

File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 319

Backtrace:

File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 320

Backtrace:

File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler

File: /Appdata/padakanaja.karnataka.gov.in/index.php
Line: 318
Function: require_once

Padakanaja - Dictionary View
ಅನಿಸಿಕೆ

ಪದಕೋಶ: ಕಂಪ್ಯೂಟರ್ ತಂತ್ರಜ್ಞಾನ ಪದವಿವರಣ ಕೋಶ | ಇಂಗ್ಲೀಷ್-ಕನ್ನಡ |ಪ್ರಕಾಶಕರು - ಕನ್ನಡ ಅಭಿವೃದ್ಧಿ ಪ್ರಾಧಿಕಾರ (2017)

Show entries
ಕ್ರಮ ಸ೦ಖ್ಯೆ ಇಂಗ್ಲೀಷ್ ಪದ
(English Word)
ಕನ್ನಡ ಪದ
(Kannada Word)
ಕನ್ನಡ ಅರ್ಥ
(Kannada Meaning)
ವಿಷಯ ವರ್ಗೀಕರಣ
(Word Subject)
ವ್ಯಾಕರಣ ವಿಶೇಷ
(Word Grammer)
ಕನ್ನಡ ಉಚ್ಚಾರಣೆ
(Kannada Pronunciation)
ಪರ್ಯಾಯ ಪದ
(Word Synonyms)
ಇಂಗ್ಲೀಷ್ ಅರ್ಥ
(English Meaning)
ಸಂಕ್ಷಿಪ್ತ ವಿವರಣೆ
(Short Description)
ದೀರ್ಘ ವಿವರಣೆ
(Long Description)
ಆಡಳಿತಾತ್ಮಕ ಪದ
(Administrative Word)
291 SSD ಎಸ್‌ಎಸ್‌ಡಿ ಸಾಲಿಡ್ ಸ್ಟೇಟ್ ಡ್ರೈವ್; ಮಾಹಿತಿ ಶೇಖರಣೆಯಲ್ಲಿ ಹಾರ್ಡ್ ಡಿಸ್ಕ್‌ಗೆ ಪರ್ಯಾಯವಾಗಿ ಬೆಳೆಯುತ್ತಿರುವ ಹೆಚ್ಚು ಸಕ್ಷಮ - ವಿಶ್ವಾಸಾರ್ಹ ಸಾಧನ. ಕಂಪ್ಯೂಟರಿನಲ್ಲಿ ಮಾಹಿತಿ ಸಂಗ್ರಹಿಸಿಡಲು ಹಾರ್ಡ್ ಡಿಸ್ಕ್‌ಗಳು ವ್ಯಾಪಕವಾಗಿ ಬಳಕೆಯಾಗುತ್ತವೆ. ಆದರೆ ಅವುಗಳಲ್ಲಿ ಮಾಹಿತಿಯನ್ನು ಓದಿ-ಬರೆಯುವ ವೇಗ ಕಡಿಮೆ, ಜೊತೆಗೆ ಯಾಂತ್ರಿಕ ವೈಫಲ್ಯದ ಸಾಧ್ಯತೆಯೂ ಇರುತ್ತದೆ. ಈ ಪರಿಸ್ಥಿತಿ ಬದಲಿಸಬೇಕೆಂದರೆ ಮಾಹಿತಿ ಶೇಖರಣೆಯಲ್ಲಿ ವಿಭಿನ್ನ ಮಾರ್ಗಗಳ ಬಳಕೆ ಅಗತ್ಯವಾಗುತ್ತದೆ. ಅಂತಹುದೊಂದು ಮಾರ್ಗವೇ ಸಾಲಿಡ್ ಸ್ಟೇಟ್ ಡ್ರೈವ್ (ಎಸ್‌ಎಸ್‌ಡಿ). ಹಾರ್ಡ್ ಡಿಸ್ಕ್‌ನ ತಟ್ಟೆಗಳ, ಚಲಿಸುವ ಭಾಗಗಳ ಜಾಗದಲ್ಲಿ ಇದು ಫ್ಲಾಶ್ ಮೆಮೊರಿ ಚಿಪ್‌ಗಳನ್ನು ಬಳಸುತ್ತದೆ. ಪೆನ್‌ಡ್ರೈವ್‌ಗಳಲ್ಲಿ ಬಳಕೆಯಾಗುವುದೂ ಫ್ಲಾಶ್ ಮೆಮೊರಿಯೇ, ಆದರೆ ಎಸ್‌ಎಸ್‌ಡಿಯಲ್ಲಿ ಇನ್ನೂ ಹೆಚ್ಚು ಕಾರ್ಯಕ್ಷಮತೆಯ ಚಿಪ್‌ಗಳು ಬಳಕೆಯಾಗುತ್ತವೆ ಅಷ್ಟೇ. ಎಸ್‌ಎಸ್‌ಡಿಗಳು ಹಾರ್ಡ್ ಡಿಸ್ಕ್‌ಗಿಂತ ಗಾತ್ರದಲ್ಲಿ ಚಿಕ್ಕದಾಗಿರುತ್ತವೆ, ಹೆಚ್ಚು ವೇಗವಾಗಿ ಕೆಲಸಮಾಡುತ್ತವೆ ಮತ್ತು ಅವುಗಳ ವಿಶ್ವಾಸಾರ್ಹತೆಯೂ ಹೆಚ್ಚು. ಜೊತೆಗೆ ಅವುಗಳ ಬೆಲೆಯೂ ಹೆಚ್ಚು: ಸದ್ಯ ಹಲವು ದುಬಾರಿ ಕಂಪ್ಯೂಟರುಗಳಲ್ಲಿ ಮಾತ್ರವೇ ಅವು ಬಳಕೆಯಾಗುತ್ತಿವೆ. ಹಾರ್ಡ್ ಡಿಸ್ಕ್ ಡ್ರೈವ್ ಹಾಗೂ ಸಾಲಿಡ್ ಸ್ಟೇಟ್ ಡ್ರೈವ್‌ಗಳೆರಡರ ತಂತ್ರಜ್ಞಾನಗಳನ್ನೂ ಒಟ್ಟಿಗೆ ಬಳಸುವ ಸಾಲಿಡ್ ಸ್ಟೇಟ್ ಹೈಬ್ರಿಡ್ ಡ್ರೈವ್ (ಎಸ್‌ಎಸ್‌ಎಚ್‌ಡಿ) ಎನ್ನುವ ಸಾಧನ ಕೂಡ ಇದೆ. ಸಾಮಾನ್ಯ ಹಾರ್ಡ್ ಡಿಸ್ಕ್ ಜೊತೆಗೆ ಕೊಂಚಮಟ್ಟಿನ ಸಾಲಿಡ್ ಸ್ಟೇಟ್ ಶೇಖರಣಾ ಸಾಮರ್ಥ್ಯವನ್ನೂ ಒದಗಿಸುವುದು ಈ ಸಾಧನದ ವೈಶಿಷ್ಟ್ಯ.
292 Standby ಸ್ಟಾಂಡ್ ಬೈ ಯಾವುದೇ ಸಾಧನ ತನ್ನ ಬಳಕೆದಾರರ ಅಗತ್ಯಗಳಿಗೆ ಸ್ಪಂದಿಸಲು ಸಿದ್ಧವಾಗಿ ಕಾಯುತ್ತಿರುವ ಸ್ಥಿತಿ ಟೀವಿಗೆ ವಿದ್ಯುತ್ ಸಂಪರ್ಕ ಇದ್ದರೂ ಕೂಡ ಅದು ರಿಮೋಟಿನ ಗುಂಡಿ ಒತ್ತುವವರೆಗೂ ಕೆಲಸಮಾಡದೆ ಸುಮ್ಮನಿರುತ್ತದೆ. ಸ್ಮಾರ್ಟ್‌ಫೋನ್ ಕೂಡ ಅಷ್ಟೇ, ಕೊಂಚಹೊತ್ತು ಉಪಯೋಗಿಸದೆ ಬಿಟ್ಟರೆ - ಮತ್ತೊಮ್ಮೆ ಬಳಸುವವರೆಗೂ - ಅದು ತನ್ನ ಪರದೆಯನ್ನು ಆರಿಸಿ ನಿಷ್ಕ್ರಿಯವಾಗಿರುತ್ತದೆ. ಕಂಪ್ಯೂಟರ್, ಟ್ಯಾಬ್ಲೆಟ್ ಸೇರಿದಂತೆ ಇನ್ನೂ ಹಲವಾರು ವಿದ್ಯುನ್ಮಾನ ಸಾಧನಗಳಲ್ಲಿ ನಾವು ಇಂತಹುದೇ ವರ್ತನೆಯನ್ನು ನೋಡಬಹುದು. ಇಂತಹ ಯಾವುದೇ ಸಾಧನ ಹೀಗೆ ತನ್ನ ಬಳಕೆದಾರರ ಅಗತ್ಯಗಳಿಗೆ ಸ್ಪಂದಿಸಲು ಸಿದ್ಧವಾಗಿ ಕಾಯುತ್ತಿರುತ್ತದಲ್ಲ, ಆ ಸ್ಥಿತಿಯನ್ನು 'ಸ್ಟಾಂಡ್‌ಬೈ' ಎಂದು ಗುರುತಿಸಲಾಗುತ್ತದೆ. ಈ ಸ್ಥಿತಿಯಲ್ಲಿ ವಿದ್ಯುನ್ಮಾನ ಸಾಧನಗಳು ಅತ್ಯಂತ ಕಡಿಮೆ ಸಂಪನ್ಮೂಲಗಳನ್ನು (ಬ್ಯಾಟರಿ, ವಿದ್ಯುತ್ ಸಂಪರ್ಕ ಇತ್ಯಾದಿ) ಬಳಸುವುದು ವಿಶೇಷ. 'ಸ್ಲೀಪ್ ಮೋಡ್' ಎಂದು ಗುರುತಿಸುವುದೂ ಇದನ್ನೇ. ಹಾಗಾಗಿಯೇ ಕಂಪ್ಯೂಟರಿನಂತಹ ಸಾಧನಗಳನ್ನು ಕೆಲಸಮಯದವರೆಗೆ ಬಳಸದಿರುವಾಗ (ಉದಾ: ಕಚೇರಿಯ ಕಾಫಿ ಬಿಡುವು) ಅವನ್ನು ಈ ಸ್ಥಿತಿಯಲ್ಲಿಡುವುದು ಒಳ್ಳೆಯದು. ಇದಕ್ಕಾಗಿ ವಿಂಡೋಸ್ ಬಳಸುವ ಕಂಪ್ಯೂಟರುಗಳಲ್ಲಿ 'ಶಟ್‌ಡೌನ್' ಬದಲು 'ಸ್ಲೀಪ್' ಆರಿಸಿಕೊಂಡರೆ ಸಾಕು. ಅದೇ ರೀತಿ ಪವರ್ ಬಟನ್ ಅನ್ನು ಒಮ್ಮೆ ಒತ್ತಿದರೆ ಬಹುತೇಕ ಮೊಬೈಲುಗಳು ಸ್ಟಾಂಡ್‌ಬೈ ಸ್ಥಿತಿಗೆ ಹೋಗುತ್ತವೆ. ನಿರ್ದಿಷ್ಟ ಅವಧಿಯವರೆಗೆ ಯಾವುದೇ ಚಟುವಟಿಕೆ ಇಲ್ಲದಿದ್ದಾಗ ಸ್ವಯಂಚಾಲಿತವಾಗಿ ಸ್ಟಾಂಡ್‌ಬೈ ಸ್ಥಿತಿಗೆ ಕಳುಹಿಸುವ ಸೌಲಭ್ಯವೂ ಹಲವು ಸಾಧನಗಳಲ್ಲಿರುತ್ತದೆ. ಈ ಅವಧಿ ಎಷ್ಟು ನಿಮಿಷದ್ದಾಗಿರಬೇಕು ಎನ್ನುವುದನ್ನು ನಾವೇ ಸೂಚಿಸುವುದು ಸಾಧ್ಯ (ಆಂಡ್ರಾಯ್ಡ್ ಮೊಬೈಲ್ ಬಳಕೆದಾರರು ಸೆಟಿಂಗ್ಸ್ > ಡಿಸ್ಪ್ಲೇ > ಸ್ಲೀಪ್ ಅಡಿಯಲ್ಲಿ ಈ ಅವಧಿಯನ್ನು ಹೊಂದಿಸಬಹುದು).
293 Stored Program Computer ಸ್ಟೋರ್‍ಡ್ ಪ್ರೋಗ್ರಾಮ್ ಕಂಪ್ಯೂಟರ್ ದತ್ತಾಂಶವನ್ನು ಉಳಿಸಿಡುವಂತೆ ಪ್ರೋಗ್ರಾಮುಗಳನ್ನೂ ಕಂಪ್ಯೂಟರಿನ ಮೆಮೊರಿಯಲ್ಲಿ ಉಳಿಸಿಡಬಹುದೆಂದು ಮೊದಲ ಬಾರಿಗೆ ಸೂಚಿಸಿದ ಪರಿಕಲ್ಪನೆ ಕಂಪ್ಯೂಟರಿನಲ್ಲಿ, ಮೊಬೈಲ್ ಫೋನಿನಲ್ಲಿ ಬೇರೆಬೇರೆ ಕೆಲಸಗಳಿಗೆ ಬೇರೆಬೇರೆ ತಂತ್ರಾಂಶಗಳನ್ನು ಬಳಸುವುದು ನಮಗೆ ಹೊಸ ವಿಷಯವೇನಲ್ಲ. ಹೀಗೆ ತಂತ್ರಾಂಶಗಳನ್ನು, ಅದರ ಅಂಗವಾದ ಪ್ರೋಗ್ರಾಮುಗಳನ್ನು ಬರೆಯುವ ಕೆಲಸಕ್ಕೆ ಪ್ರೋಗ್ರಾಮಿಂಗ್ ಎಂಬ ಹೆಸರಿರುವುದೂ ನಮಗೆ ಗೊತ್ತು. ನಮಗೇನು ಬೇಕೆಂದು ಕಂಪ್ಯೂಟರಿಗೆ ಹೇಳುವ ಈ ಕೆಲಸ ಹಿಂದೆಲ್ಲ ಇಷ್ಟು ಸುಲಭವಾಗಿರಲಿಲ್ಲ. ಮೊದಮೊದಲು ಕಂಪ್ಯೂಟರುಗಳು ಬಂದಾಗಲಂತೂ ಅವನ್ನು ಪ್ರೋಗ್ರಾಮ್ ಮಾಡಲು ವೈರುಗಳನ್ನು ಒಂದೆಡೆಯಿಂದ ಕಿತ್ತು ಇನ್ನೊಂದೆಡೆ ಜೋಡಿಸಬೇಕಾಗಿತ್ತು. ನಂತರದ ದಿನಗಳಲ್ಲೂ ಅಷ್ಟೆ, ಪ್ರೋಗ್ರಾಮಿನ ಸೂಚನೆಗಳನ್ನು ಕಾಗದದ ಪಟ್ಟಿಯ ಮೇಲೆ ಕೊರೆದ ರಂಧ್ರಗಳು ಸೂಚಿಸುತ್ತಿದ್ದವು. ಪಂಚ್ಡ್ ಕಾರ್ಡ್ ಅಥವಾ ಪಂಚ್ಡ್ ಟೇಪ್ ಎಂಬ ಈ ಮಾಧ್ಯಮವನ್ನು ಕಂಪ್ಯೂಟರಿನೊಳಕ್ಕೆ ತೂರಿಸುವ ಮೂಲಕ ಕಂಪ್ಯೂಟರಿಗೆ ಹೇಳಬೇಕಾದುದನ್ನು ಹೇಳಲಾಗುತ್ತಿತ್ತು. ಈ ಪರಿಸ್ಥಿತಿಯನ್ನು ಬದಲಿಸಿ ಆಧುನಿಕ ಕಂಪ್ಯೂಟರುಗಳ ಉಗಮಕ್ಕೆ ಕಾರಣವಾದ ಅಂಶಗಳಲ್ಲಿ 'ಸ್ಟೋರ್‍ಡ್ ಪ್ರೋಗ್ರಾಮ್' ಪರಿಕಲ್ಪನೆಗೆ ಪ್ರಮುಖ ಸ್ಥಾನವಿದೆ. ದತ್ತಾಂಶವನ್ನು ಉಳಿಸಿಡುವಂತೆ ಪ್ರೋಗ್ರಾಮುಗಳನ್ನೂ ಕಂಪ್ಯೂಟರಿನ ಮೆಮೊರಿಯಲ್ಲಿ ಉಳಿಸಿಡಬಹುದೆಂದು ಸೂಚಿಸಿದ್ದು ಈ ಪರಿಕಲ್ಪನೆ. ಈ ಪರಿಕಲ್ಪನೆಯ ವಿಕಾಸದ ಹಿಂದೆ ಇದ್ದ ಹಲವು ತಂತ್ರಜ್ಞರಲ್ಲಿ ಜಾನ್ ವಾನ್ ನ್ಯೂಮನ್‌ರದು ಗಮನಾರ್ಹ ಹೆಸರು. ಸ್ಟೋರ್‍ಡ್ ಪ್ರೋಗ್ರಾಮ್ ಪರಿಕಲ್ಪನೆಯನ್ನು ಮೊದಲ ಬಾರಿಗೆ ಪ್ರಾಯೋಗಿಕವಾಗಿ ಬಳಸಿ ತೋರಿಸಿದ ಹೆಗ್ಗಳಿಕೆ ಮ್ಯಾಂಚೆಸ್ಟರ್ ವಿವಿಯ 'ಸ್ಮಾಲ್ ಸ್ಕೇಲ್ ಎಕ್ಸ್‌ಪೆರಿಮೆಂಟಲ್ ಮಶೀನ್'ನದು.
294 Submarine Communications Cable ಸಬ್‌ಮರೀನ್ ಕಮ್ಯೂನಿಕೇಶನ್ಸ್ ಕೇಬಲ್ ವಿವಿಧ ರಾಷ್ಟ್ರಗಳ - ಖಂಡಗಳ ನಡುವೆ ಮಾಹಿತಿ ಸಂವಹನ ಸಾಧ್ಯವಾಗಿಸುವ ಸಮುದ್ರದಾಳದ ಕೇಬಲ್ ನಾವು ಮೊಬೈಲಿನಲ್ಲಿ ಮಾತನಾಡುತ್ತೇವೆ, ಅಂತರಜಾಲ ಸಂಪರ್ಕ ಬಳಸುತ್ತೇವೆ. ಇದೆಲ್ಲ ಹೇಗೆ ಸಾಧ್ಯವಾಗುತ್ತದೆ ಎಂದು ಕೇಳಿದರೆ ಕಿಟಕಿಯಿಂದಾಚೆ ಕಾಣುವ ಮೊಬೈಲ್ ಟವರ್ ಅನ್ನು ತೋರಿಸುತ್ತೇವೆ. ಆದರೆ ಅಲ್ಲಿಂದ ಮುಂದಿನ ಸಂಪರ್ಕ ಸಾಧ್ಯವಾಗುವುದು, ನಮ್ಮ ಕರೆ ಬೇರೆಲ್ಲೋ ಇರುವ ಇನ್ನೊಬ್ಬರನ್ನು ತಲುಪುವುದು ಹೇಗೆ? ಉತ್ತರ ಗೊತ್ತಿಲ್ಲದಿದ್ದರೆ ಆಕಾಶ ನೋಡಬೇಕಿಲ್ಲ, ಕಾಲ ಕೆಳಗಿನ ನೆಲವನ್ನಷ್ಟೇ ನೋಡಿದರೆ ಸಾಕು. ಏಕೆಂದರೆ ಮೊಬೈಲ್ ಟವರ್‌ಗಳ ನಂತರದ ಹಂತದ ಸಂವಹನದಲ್ಲಿ ಪ್ರಮುಖ ಪಾತ್ರ ವಹಿಸುವುದು ನೆಲದಡಿಯ ಕೇಬಲ್ಲುಗಳು. ಇಲ್ಲಿ ಬಳಕೆಯಾಗುವುದೇ ಆಪ್ಟಿಕಲ್ ಫೈಬರ್ ಕೇಬಲ್ ಅಥವಾ ಓಎಫ್‌ಸಿ. ನೆಲದ ಮೇಲೇನೋ ಸರಿ, ಬಡಾವಣೆಯಿಂದ ಬಡಾವಣೆಗೆ - ಊರಿಂದ ಊರಿಗೆ ಈ ಕೇಬಲ್ಲುಗಳು ಸಂಪರ್ಕ ಕಲ್ಪಿಸುತ್ತವೆ. ಆದರೆ ಸಂವಹನದ ಸಮುದ್ರೋಲ್ಲಂಘನ? ಅಲ್ಲೂ ಇಂತಹ ಕೇಬಲ್ಲುಗಳೇ ಬಳಕೆಯಾಗುತ್ತವೆ! ವಿವಿಧ ರಾಷ್ಟ್ರಗಳ - ಖಂಡಗಳ ನಡುವೆ ಸಂವಹನ ಸಾಧ್ಯವಾಗಿಸುವ ಇಂತಹ ಕೇಬಲ್ಲುಗಳನ್ನು ಸಬ್‌ಮರೀನ್ ಕಮ್ಯೂನಿಕೇಶನ್ಸ್ ಕೇಬಲ್ಲುಗಳೆಂದು ಕರೆಯುತ್ತಾರೆ. ನಾವು-ನೀವು ರಸ್ತೆಬದಿಯಲ್ಲಿ ಕಾಣುವ ಕೇಬಲ್ಲುಗಳಿಗಿಂತ ಹೆಚ್ಚು ಸದೃಢ ರಚನೆಯ ಈ ಕೇಬಲ್ಲುಗಳನ್ನು ಸಮುದ್ರದಾಳದಲ್ಲಿ ಹುದುಗಿಸಿಡಲು ವಿಶೇಷ ಹಡಗುಗಳು ಬಳಕೆಯಾಗುತ್ತವೆ. ಇಂತಹ ಕೇಬಲ್ಲುಗಳನ್ನು ಅಳವಡಿಸಿ ನಿರ್ವಹಿಸುವುದೇ ಹಲವು ದೊಡ್ಡ ಸಂಸ್ಥೆಗಳ ಕೆಲಸ.
295 supercomputer ಸೂಪರ್‌ಕಂಪ್ಯೂಟರ್ ಅತಿ ಹೆಚ್ಚು ಸಂಸ್ಕರಣಾ ಸಾಮರ್ಥ್ಯವಿರುವ, ವೈಜ್ಞಾನಿಕ ಸಂಶೋಧನೆಯಂತಹ ಕ್ಷೇತ್ರಗಳಲ್ಲಿ ಬಳಕೆಯಾಗುವ ಕಂಪ್ಯೂಟರುಗಳು ಪ್ರಪಂಚದಲ್ಲಿ ಅನೇಕ ಬಗೆಯ ಕಂಪ್ಯೂಟರುಗಳಿರುವುದು ನಮಗೆಲ್ಲ ಗೊತ್ತು. ಅವುಗಳ ಪೈಕಿ ಅತಿ ಹೆಚ್ಚು ಸಂಸ್ಕರಣಾ ಸಾಮರ್ಥ್ಯ ಹೊಂದಿರುವವುಗಳನ್ನು ಸೂಪರ್‌ಕಂಪ್ಯೂಟರ್‌ಗಳೆಂದು ಕರೆಯುತ್ತಾರೆ. ಕ್ಲಿಷ್ಟ ಲೆಕ್ಕಾಚಾರಗಳ ಅಗತ್ಯವಿರುವ ವೈಜ್ಞಾನಿಕ ಸಂಶೋಧನೆಯಂತಹ ಕ್ಷೇತ್ರಗಳಲ್ಲಿ ಇವು ಬಳಕೆಯಾಗುತ್ತವೆ. ಇವುಗಳ ಸಂಸ್ಕರಣಾ ಸಾಮರ್ಥ್ಯವನ್ನು ಅಳೆಯಲು 'ಫ್ಲೋಟಿಂಗ್ ಪಾಯಿಂಟ್ ಇನ್ಸ್‌ಟ್ರಕ್ಷನ್ಸ್ ಪರ್ ಸೆಕೆಂಡ್' (ಫ್ಲಾಪ್ಸ್) ಎಂಬ ಏಕಮಾನವನ್ನು ಬಳಸಲಾಗುತ್ತದೆ. ದಶಾಂಶವಿರುವ ದೊಡ್ಡದೊಡ್ಡ ಸಂಖ್ಯೆಗಳ ಮೇಲೆ ಯಾವುದೇ ಕಂಪ್ಯೂಟರ್ ಒಂದು ಸೆಕೆಂಡಿನಲ್ಲಿ ಎಷ್ಟು ಲೆಕ್ಕಾಚಾರಗಳನ್ನು ಮಾಡಬಲ್ಲದು ಎನ್ನುವುದನ್ನು ಈ ಮಾಪನ ಸೂಚಿಸುತ್ತದೆ. ನಮ್ಮ-ನಿಮ್ಮ ಮನೆಗಳಲ್ಲಿರುವ ಇಂದಿನ ಸಾಮಾನ್ಯ ಕಂಪ್ಯೂಟರುಗಳು ಪ್ರತಿ ಸೆಕೆಂಡಿಗೆ ಇಂತಹ ನೂರಾರು ಕೋಟಿ ಲೆಕ್ಕಾಚಾರಗಳನ್ನು ಮಾಡಬಲ್ಲವು. ಯಾವುದೋ ಕಂಪ್ಯೂಟರ್ ಪ್ರತಿ ಸೆಕೆಂಡಿಗೆ ನೂರು ಕೋಟಿ ಲೆಕ್ಕಾಚಾರಗಳನ್ನು ಮಾಡಬಲ್ಲದು ಎಂದರೆ ಅದರ ಸಾಮರ್ಥ್ಯ ಒಂದು ಗಿಗಾಫ್ಲಾಪ್ಸ್ ಆಗುತ್ತದೆ. ಮೇಲ್ನೋಟಕ್ಕೆ ಇದು ಬಹಳ ದೊಡ್ಡ ಸಾಮರ್ಥ್ಯವೆಂದು ತೋರಿದರೂ ಸೂಪರ್‌ಕಂಪ್ಯೂಟರುಗಳ ಸಾಮರ್ಥ್ಯದ ಮುಂದೆ ಇದು ತೃಣಸಮಾನ. ಏಕೆಂದರೆ ಸದ್ಯದ ಸೂಪರ್‌ಕಂಪ್ಯೂಟರುಗಳ ಸಾಮರ್ಥ್ಯ ಹತ್ತಾರು ಪೆಟಾಫ್ಲಾಪ್ಸ್‌ಗಳಲ್ಲಿರುತ್ತದೆ. ಪೆಟಾ ಎಂದರೆ ಒಂದರ ಮುಂದೆ ಹದಿನೈದು ಸೊನ್ನೆ ಜೋಡಿಸಿದಷ್ಟು ದೊಡ್ಡ ಸಂಖ್ಯೆ!
296 Syntax ಸಿಂಟ್ಯಾಕ್ಸ್ ಯಾವುದೇ ಪ್ರೋಗ್ರಾಮಿಂಗ್ ಭಾಷೆಯನ್ನು ಬಳಸಿ ಪ್ರೋಗ್ರಾಮುಗಳನ್ನು ಬರೆಯುವಾಗ ಅಲ್ಲಿನ ಪದವಿನ್ಯಾಸ ಹಾಗೂ ವಾಕ್ಯರಚನೆಯನ್ನು ನಿರ್ದೇಶಿಸುವ ನಿಯಮಗಳು ಉಪಯೋಗಿಸುವ ಭಾಷೆ ಯಾವುದೇ ಆದರೂ ಅದರ ಬರವಣಿಗೆಯಲ್ಲಿ ಕೆಲವು ನಿಯಮಗಳನ್ನು ಪಾಲಿಸಬೇಕಾದ್ದು ಅನಿವಾರ್ಯ. ಈ ನಿಯಮ ಭೌತಿಕ ಜಗತ್ತಿನ ಭಾಷೆಗಳಿಗಷ್ಟೇ ಅಲ್ಲ, ಕಂಪ್ಯೂಟರ್ ಪ್ರಪಂಚದ ಭಾಷೆಗಳಿಗೂ ಅನ್ವಯಿಸುತ್ತದೆ. ಯಾವುದೇ ಪ್ರೋಗ್ರಾಮಿಂಗ್ ಭಾಷೆಯನ್ನು ಬಳಸಿ ಪ್ರೋಗ್ರಾಮುಗಳನ್ನು ಬರೆಯುವಾಗ ಅಲ್ಲಿನ ಪದವಿನ್ಯಾಸ ಹಾಗೂ ವಾಕ್ಯರಚನೆ ನಿರ್ದಿಷ್ಟವಾಗಿ ಹೀಗೆಯೇ ಇರಬೇಕು ಎಂದು ನಿರ್ದೇಶಿಸುವ ಹಲವು ನಿಯಮಗಳಿರುತ್ತವೆ. ಇಂತಹ ನಿಯಮಗಳನ್ನು ಒಟ್ಟಾಗಿ ಆ ಪ್ರೋಗ್ರಾಮಿಂಗ್ ಭಾಷೆಯ 'ಸಿಂಟ್ಯಾಕ್ಸ್' ಎಂದು ಕರೆಯುತ್ತಾರೆ. ಪ್ರೋಗ್ರಾಮಿನಲ್ಲಿ ಬಳಸಬಹುದಾದ ಪದಗಳು, ಲೇಖನಚಿಹ್ನೆಗಳು, ಅವೆಲ್ಲವುಗಳ ಅಪೇಕ್ಷಿತ ಅನುಕ್ರಮ - ಇದೆಲ್ಲ ಸೇರಿ ಸಿಂಟ್ಯಾಕ್ಸ್ ರೂಪುಗೊಂಡಿರುತ್ತದೆ. ಬೇರೆಬೇರೆ ಪ್ರೋಗ್ರಾಮಿಂಗ್ ಭಾಷೆಗಳಿಗೆ ಈ ನಿಯಮಗಳು ಬೇರೆಬೇರೆಯಾಗಿರುವುದು ಸಾಮಾನ್ಯ. ಕೆಲವು ಪ್ರೋಗ್ರಾಮಿಂಗ್ ಭಾಷೆಗಳಲ್ಲಿ ಒಂದೇ ರೀತಿಯ ಅಥವಾ ಒಂದಕ್ಕೊಂದು ಬಹುಪಾಲು ಹೋಲಿಕೆಯಾಗುವ ಸಿಂಟ್ಯಾಕ್ಸ್ ಇರುವುದೂ ಉಂಟು. ಸಿಂಟ್ಯಾಕ್ಸ್‌ನಲ್ಲಿ ಯಾವುದೇ ತಪ್ಪುಗಳಿದ್ದರೆ ನಮ್ಮ ಪ್ರೋಗ್ರಾಮು ಸರಿಯಾಗಿ ಕೆಲಸಮಾಡುವುದಿಲ್ಲ. ಒಂದು ಅಲ್ಪವಿರಾಮವೋ ಪೂರ್ಣವಿರಾಮವೋ ಬಿಟ್ಟುಹೋಗಿದ್ದರೂ ಪ್ರೋಗ್ರಾಮ್ ತನ್ನ ಕೆಲಸ ಮಾಡುವಲ್ಲಿ ವಿಫಲವಾಗುತ್ತದೆ. ಇಂತಹ ತಪ್ಪುಗಳನ್ನು 'ಸಿಂಟ್ಯಾಕ್ಸ್ ಎರರ್' ಎಂದು ಗುರುತಿಸಲಾಗುತ್ತದೆ. ನಮ್ಮ ಪ್ರೋಗ್ರಾಮು ಕಂಪೈಲ್ ಆಗುವ ಮೊದಲೇ ಇಂತಹ ತಪ್ಪುಗಳನ್ನು ಗುರುತಿಸಿ ಸರಿಪಡಿಸುವ ಸೌಲಭ್ಯ ಬಹುತೇಕ ಐಡಿಇಗಳಲ್ಲಿ ಇರುತ್ತದೆ. ಉಪಯೋಗಿಸುವ ಭಾಷೆ ಯಾವುದೇ ಆದರೂ ಅದರ ಬರವಣಿಗೆಯಲ್ಲಿ ಕೆಲವು ನಿಯಮಗಳನ್ನು ಪಾಲಿಸಬೇಕಾದ್ದು ಅನಿವಾರ್ಯ. ಈ ನಿಯಮ ಭೌತಿಕ ಜಗತ್ತಿನ ಭಾಷೆಗಳಿಗಷ್ಟೇ ಅಲ್ಲ, ಕಂಪ್ಯೂಟರ್ ಪ್ರಪಂಚದ ಭಾಷೆಗಳಿಗೂ ಅನ್ವಯಿಸುತ್ತದೆ. ಯಾವುದೇ ಪ್ರೋಗ್ರಾಮಿಂಗ್ ಭಾಷೆಯನ್ನು ಬಳಸಿ ಪ್ರೋಗ್ರಾಮುಗಳನ್ನು ಬರೆಯುವಾಗ ಅಲ್ಲಿನ ಪದವಿನ್ಯಾಸ ಹಾಗೂ ವಾಕ್ಯರಚನೆ ನಿರ್ದಿಷ್ಟವಾಗಿ ಹೀಗೆಯೇ ಇರಬೇಕು ಎಂದು ನಿರ್ದೇಶಿಸುವ ಹಲವು ನಿಯಮಗಳಿರುತ್ತವೆ. ಇಂತಹ ನಿಯಮಗಳನ್ನು ಒಟ್ಟಾಗಿ ಆ ಪ್ರೋಗ್ರಾಮಿಂಗ್ ಭಾಷೆಯ 'ಸಿಂಟ್ಯಾಕ್ಸ್' ಎಂದು ಕರೆಯುತ್ತಾರೆ. ಪ್ರೋಗ್ರಾಮಿನಲ್ಲಿ ಬಳಸಬಹುದಾದ ಪದಗಳು, ಲೇಖನಚಿಹ್ನೆಗಳು, ಅವೆಲ್ಲವುಗಳ ಅಪೇಕ್ಷಿತ ಅನುಕ್ರಮ - ಇದೆಲ್ಲ ಸೇರಿ ಸಿಂಟ್ಯಾಕ್ಸ್ ರೂಪುಗೊಂಡಿರುತ್ತದೆ. ಬೇರೆಬೇರೆ ಪ್ರೋಗ್ರಾಮಿಂಗ್ ಭಾಷೆಗಳಿಗೆ ಈ ನಿಯಮಗಳು ಬೇರೆಬೇರೆಯಾಗಿರುವುದು ಸಾಮಾನ್ಯ. ಕೆಲವು ಪ್ರೋಗ್ರಾಮಿಂಗ್ ಭಾಷೆಗಳಲ್ಲಿ ಒಂದೇ ರೀತಿಯ ಅಥವಾ ಒಂದಕ್ಕೊಂದು ಬಹುಪಾಲು ಹೋಲಿಕೆಯಾಗುವ ಸಿಂಟ್ಯಾಕ್ಸ್ ಇರುವುದೂ ಉಂಟು. ಸಿಂಟ್ಯಾಕ್ಸ್‌ನಲ್ಲಿ ಯಾವುದೇ ತಪ್ಪುಗಳಿದ್ದರೆ ನಮ್ಮ ಪ್ರೋಗ್ರಾಮು ಸರಿಯಾಗಿ ಕೆಲಸಮಾಡುವುದಿಲ್ಲ. ಒಂದು ಅಲ್ಪವಿರಾಮವೋ ಪೂರ್ಣವಿರಾಮವೋ ಬಿಟ್ಟುಹೋಗಿದ್ದರೂ ಪ್ರೋಗ್ರಾಮ್ ತನ್ನ ಕೆಲಸ ಮಾಡುವಲ್ಲಿ ವಿಫಲವಾಗುತ್ತದೆ. ಇಂತಹ ತಪ್ಪುಗಳನ್ನು 'ಸಿಂಟ್ಯಾಕ್ಸ್ ಎರರ್' ಎಂದು ಗುರುತಿಸಲಾಗುತ್ತದೆ. ನಮ್ಮ ಪ್ರೋಗ್ರಾಮು ಕಂಪೈಲ್ ಆಗುವ ಮೊದಲೇ ಇಂತಹ ತಪ್ಪುಗಳನ್ನು ಗುರುತಿಸಿ ಸರಿಪಡಿಸುವ ಸೌಲಭ್ಯ ಬಹುತೇಕ ಐಡಿಇಗಳಲ್ಲಿ ಇರುತ್ತದೆ.
297 Tab ಟ್ಯಾಬ್ ಪ್ರತಿಬಾರಿ ಒತ್ತಿದಾಗಲೂ ಪರದೆಯ ಮೇಲೆ ಪೂರ್ವನಿರ್ಧಾರಿತ ಸ್ಥಾನಗಳಿಗೆ ಕೊಂಡೊಯ್ಯುವ ಕೀಲಿ; ಬ್ರೌಸರ್ ತಂತ್ರಾಂಶದ ಕಿಟಕಿಯೊಳಗೆ ಒಂದರ ಪಕ್ಕ ಒಂದರಂತೆ ತೆರೆದುಕೊಳ್ಳುವ ಪರದೆಗಳನ್ನೂ ಟ್ಯಾಬ್‌ಗಳೆಂದೇ ಕರೆಯುತ್ತಾರೆ. ತಂತ್ರಜ್ಞಾನ ಲೋಕದಲ್ಲಿ ಕೆಲ ಪದಗಳು ಒಂದಕ್ಕಿಂತ ಹೆಚ್ಚು ಅರ್ಥಗಳಲ್ಲಿ ಬಳಕೆಯಾಗುತ್ತವೆ. ಅಂತಹ ಪದಗಳಿಗೆ 'ಟ್ಯಾಬ್' ಒಂದು ಉದಾಹರಣೆ. ಇದನ್ನು ಕೇಳಿದ ತಕ್ಷಣ ನಮ್ಮಲ್ಲಿ ಅನೇಕರಿಗೆ ಟ್ಯಾಬ್ಲೆಟ್ ಕಂಪ್ಯೂಟರ್ ನೆನಪಾಗುತ್ತದೆ ನಿಜ; ಆದರೆ ಟ್ಯಾಬ್ ಎನ್ನುವ ಪದಕ್ಕೆ ಇನ್ನೂ ಕೆಲ ಅರ್ಥಗಳಿವೆ. 'ಟ್ಯಾಬ್' ಹೆಸರಿನ ಕೀಲಿಯೊಂದು ಕಂಪ್ಯೂಟರಿನ ಕೀಬೋರ್ಡ್ ಎಡಬದಿಯಲ್ಲಿರುವುದನ್ನು ನೀವು ಗಮನಿಸಿರಬಹುದು. ಈ ಹೆಸರಿನ ಮೂಲ 'ಟ್ಯಾಬ್ಯುಲೇಟ್' (ಕೋಷ್ಟಕ ರೂಪದಲ್ಲಿ ಬರೆ, ಪಟ್ಟಿ ಮಾಡು) ಎನ್ನುವ ಪದ. ಮಾಹಿತಿಯನ್ನು ಕೋಷ್ಟಕ ರೂಪದಲ್ಲಿ ಟೈಪ್ ಮಾಡಲು ಟೈಪ್‌ರೈಟರಿನ ಕಾಲದಲ್ಲಿ ಬಹಳ ಕಷ್ಟಪಡಬೇಕಿತ್ತಲ್ಲ, ಅದನ್ನು ನಿವಾರಿಸಲು ರೂಪುಗೊಂಡಿದ್ದು ಟ್ಯಾಬ್ ಕೀಲಿ. ಪ್ರತಿಬಾರಿ ಒತ್ತಿದಾಗಲೂ ಪರದೆಯ ಮೇಲೆ ಪೂರ್ವನಿರ್ಧಾರಿತ ಸ್ಥಾನಗಳಿಗೆ ಕೊಂಡೊಯ್ಯುವುದು ಈ ಕೀಲಿಯ ಕೆಲಸ - ಅಂದು ಟೈಪ್ ರೈಟರಿನ ಅಚ್ಚನ್ನು ಮುಂದಕ್ಕೆ ಕೊಂಡೊಯ್ಯುತ್ತಿದ್ದ ಈ ಕೀಲಿ ಈಗ ಕಂಪ್ಯೂಟರಿನ ಕರ್ಸರನ್ನು ಓಡಾಡಿಸುತ್ತಿದೆ ಅಷ್ಟೆ. ಮೈಕ್ರೋಸಾಫ್ಟ್ ಎಕ್ಸೆಲ್‌ನಂತಹ ಸ್ಪ್ರೆಡ್‌ಶೀಟ್ ತಂತ್ರಾಂಶಗಳಲ್ಲಿ ಒಂದು ಕೋಶದಿಂದ ಇನ್ನೊಂದಕ್ಕೆ ಹೋಗಲು, ಆನ್‌ಲೈನ್ ನಮೂನೆಗಳಲ್ಲಿ (ಫಾರ್ಮ್) ಒಂದು ಭಾಗದಿಂದ ಮತ್ತೊಂದಕ್ಕೆ ಹೋಗಲು ಕೂಡ ಟ್ಯಾಬ್ ಕೀಲಿ ನೆರವಾಗುತ್ತದೆ. ಹತ್ತು ಜಾಲತಾಣಗಳಿಗೆ ಹತ್ತು ಬ್ರೌಸರ್ ಕಿಟಕಿಗಳನ್ನು ತೆರೆಯದೆ ಒಂದೇ ಕಿಟಕಿಯೊಳಗೆ ಹತ್ತೂ ತಾಣಗಳು ಪಕ್ಕಪಕ್ಕದಲ್ಲಿ ತೆರೆದುಕೊಳ್ಳುವಂತೆ ಮಾಡುವುದು ಆಧುನಿಕ ಬ್ರೌಸರ್ ತಂತ್ರಾಂಶಗಳಲ್ಲಿ ಸಾಧ್ಯವಿದೆ - ಹೀಗೆ ತೆರೆದುಕೊಳ್ಳುವ ಪುಟಗಳಲ್ಲಿ ಒಂದು ಮಾತ್ರ ಪೂರ್ತಿ ಕಾಣಿಸಿಕೊಂಡು ಮಿಕ್ಕವುಗಳ ಶೀರ್ಷಿಕೆ ಮಾತ್ರ ಪಕ್ಕದಲ್ಲಿ ಕಾಣಿಸುತ್ತಿರುತ್ತದೆ. ಹೀಗೆ ತೆರೆದುಕೊಳ್ಳುವ ಪುಟಗಳನ್ನೂ 'ಟ್ಯಾಬ್'ಗಳೆಂದು ಕರೆಯುತ್ತಾರೆ. ಈ ಸೌಲಭ್ಯ ಬಳಸಿ ಬ್ರೌಸ್ ಮಾಡುವುದಕ್ಕೆ ಟ್ಯಾಬ್ಡ್ ಬ್ರೌಸಿಂಗ್ ಎಂಬ ಹೆಸರೂ ಇದೆ.
298 Testing ಟೆಸ್ಟಿಂಗ್ ಸಿದ್ಧವಾದ ತಂತ್ರಾಂಶವನ್ನು ಬಳಕೆದಾರರಿಗೆ ನೀಡುವ ಮುನ್ನ ಪೂರ್ಣವಾಗಿ ಪರೀಕ್ಷಿಸುವ ಪ್ರಕ್ರಿಯೆ ಕಂಪ್ಯೂಟರಿನಲ್ಲಿ, ಸ್ಮಾರ್ಟ್‌ಫೋನಿನಲ್ಲೆಲ್ಲ ತಂತ್ರಾಂಶಗಳದೇ ಭರಾಟೆ. ಹಲವಾರು ಉದ್ದೇಶಗಳಿಗೆ ಹೊಸಹೊಸ ತಂತ್ರಾಂಶಗಳು ರೂಪುಗೊಳ್ಳುತ್ತಲೇ ಇರುತ್ತವೆ, ಬಳಕೆದಾರರನ್ನು ತಲುಪುತ್ತಲೇ ಇರುತ್ತವೆ. ತಂತ್ರಾಂಶಗಳು ರೂಪುಗೊಳ್ಳುವಾಗ ಅದರಲ್ಲಿ ಕುಂದುಕೊರತೆಗಳು ಉಳಿದುಕೊಳ್ಳುವುದು, ಕೆಲ ಸನ್ನಿವೇಶಗಳಲ್ಲಿ ಅದರ ವರ್ತನೆ ನಿರೀಕ್ಷೆಯಂತೆ ಇಲ್ಲದಿರುವುದು ಅಪರೂಪವೇನಲ್ಲ. ಇಂತಹ ಸನ್ನಿವೇಶಗಳನ್ನು ತಪ್ಪಿಸಲು ಬೇಕಾದ ಕ್ರಮಗಳನ್ನೂ ತಂತ್ರಾಂಶ ನಿರ್ಮಾತೃಗಳು ಕೈಗೊಳ್ಳುತ್ತಾರೆ. ಸಿದ್ಧವಾದ ತಂತ್ರಾಂಶವನ್ನು ಬಳಕೆದಾರರಿಗೆ ನೀಡುವ ಮುನ್ನ ಪೂರ್ಣವಾಗಿ ಪರೀಕ್ಷಿಸುವ 'ಟೆಸ್ಟಿಂಗ್' ಪ್ರಕ್ರಿಯೆ ಇಂತಹ ಕ್ರಮಗಳಲ್ಲೊಂದು. ತಂತ್ರಾಂಶದ ಕಾರ್ಯಸಾಮರ್ಥ್ಯವನ್ನು ಪರೀಕ್ಷಿಸುವುದು, ಕೊರತೆಗಳನ್ನು ನಿವಾರಿಸಲು ಅಗತ್ಯ ಕ್ರಮ ಕೈಗೊಳ್ಳುವುದು ಈ ಪ್ರಕ್ರಿಯೆಯ ಉದ್ದೇಶ. ಹಿಂದಿನ ಕಾಲದಲ್ಲಿ ಬಹುತೇಕ ತಂತ್ರಾಂಶಗಳ ಕಾರ್ಯಾಚರಣೆಗೆ ಅಂತರಜಾಲ ಸಂಪರ್ಕದ ಅಗತ್ಯ ಇರಲಿಲ್ಲ. ಆದರೆ ಈಗ ಹಾಗಲ್ಲ, ಹೆಚ್ಚೂಕಡಿಮೆ ಎಲ್ಲ ತಂತ್ರಾಂಶಗಳೂ ಒಂದಲ್ಲ ಒಂದು ರೀತಿಯಲ್ಲಿ ಅಂತರಜಾಲದ (ಅಥವಾ ಇನ್ನಾವುದೋ ಒಂದು ನೆಟ್‌ವರ್ಕಿನ) ಸಂಪರ್ಕಕ್ಕೆ ಬರುತ್ತವೆ. ಈ ಪರಿಸ್ಥಿತಿಯಲ್ಲಿ ಅವುಗಳ ಸುರಕ್ಷತೆಯ ಬಗೆಗೂ ಹೆಚ್ಚಿನ ನಿಗಾವಹಿಸುವುದು ಅಗತ್ಯವಾಗುತ್ತದೆ. ತಂತ್ರಾಂಶದಲ್ಲಿ ಬಳಸಲಾಗುವ ಮಾಹಿತಿಯ ಕಳವು - ದುರ್ಬಳಕೆ ಇರಲಿ, ಕೆಟ್ಟ ಉದ್ದೇಶಗಳಿಗೆ ತಂತ್ರಾಂಶದ ಬಳಕೆಯೇ ಇರಲಿ, ಅದನ್ನೆಲ್ಲ ತಡೆಯಲು ತಂತ್ರಾಂಶದಲ್ಲಿರುವ ಸುರಕ್ಷತಾ ಕ್ರಮಗಳ ಪರಿಶೀಲನೆ ನೆರವಾಗುತ್ತದೆ. ಇದನ್ನು ಎಲ್ಲ ಸಂಭಾವ್ಯ ಆಯಾಮಗಳಿಂದಲೂ ಪರಿಶೀಲಿಸುವುದು ಒಬ್ಬಿಬ್ಬರಿಂದ ಆಗುವ ಕೆಲಸವಲ್ಲ. ಹಾಗಾಗಿ ತಂತ್ರಾಂಶ ನಿರ್ಮಾತೃಗಳು ಈ ಕೆಲಸದಲ್ಲಿ ತಮಗೆ ನೆರವಾಗುವಂತೆ ಪರಿಣತ ಬಳಕೆದಾರರಿಗೂ ಕರೆನೀಡುತ್ತಾರೆ; ಅವರಿಂದ ದೊರೆತ ಮಾಹಿತಿ ತಂತ್ರಾಂಶದ ಸುರಕ್ಷತಾ ಕೊರತೆಗಳನ್ನು ನೀಗಿಸಲು ನೆರವಾದರೆ ಅವರಿಗೆ ಬಹುಮಾನವನ್ನೂ ಕೊಡುತ್ತಾರೆ. 'ಬಗ್ ಬೌಂಟಿ' ಎಂದು ಕರೆಸಿಕೊಳ್ಳುವ ಇಂತಹ ಬಹುಮಾನಗಳ ಮೊತ್ತ ಲಕ್ಷಾಂತರ ರೂಪಾಯಿಗಳಷ್ಟಿರುವುದೂ ಉಂಟು.
299 Tethering ಟೆದರಿಂಗ್ ಮೊಬೈಲ್ ಫೋನಿನ ಅಂತರಜಾಲ ಸಂಪರ್ಕವನ್ನು ಇನ್ನಿತರ ಸಾಧನಗಳೊಡನೆ ಹಂಚಿಕೊಳ್ಳುವುದನ್ನು ಸಾಧ್ಯವಾಗಿಸುವ ವ್ಯವಸ್ಥೆ ಮನೆಯ ಅಥವಾ ಕಚೇರಿಯಲ್ಲಿ ಮೂಲತಃ ಕಂಪ್ಯೂಟರ್ ಬಳಕೆಗೆಂದು ಪಡೆದುಕೊಂಡ ವೈ-ಫೈ ಸಂಪರ್ಕವನ್ನು ಮೊಬೈಲಿನಲ್ಲೂ ಬಳಸುವುದು ನಮಗೆಲ್ಲ ಚೆನ್ನಾಗಿಯೇ ಅಭ್ಯಾಸವಾಗಿದೆ. ಆದರೆ ಈಗ, ಮೊಬೈಲ್ ಅಂತರಜಾಲದ ವೇಗ ಹೆಚ್ಚಿ ಬೆಲೆಯಲ್ಲಿ ಸಾಕಷ್ಟು ಇಳಿಕೆ ಕಂಡ ನಂತರ ಮೊಬೈಲಿನ ಅಂತರಜಾಲ ಸಂಪರ್ಕವನ್ನು ಕಂಪ್ಯೂಟರ್ ಜೊತೆಗೆ ಹಂಚಿಕೊಳ್ಳಬೇಕಾದ ಸಂದರ್ಭಗಳೂ ಬರುತ್ತಿವೆ. ಇಂತಹ ಸಂದರ್ಭಗಳಲ್ಲಿ ನಮಗೆ ನೆರವಾಗುವ ಸೌಲಭ್ಯವೇ ಟೆದರಿಂಗ್. ಫೋನಿನ ಅಂತರಜಾಲ ಸಂಪರ್ಕವನ್ನು ಲ್ಯಾಪ್‌ಟಾಪ್ ಜೊತೆಗೋ ಡೆಸ್ಕ್‌ಟಾಪ್ ಜೊತೆಗೋ ಹಂಚಿಕೊಳ್ಳುವುದನ್ನು ಸಾಧ್ಯವಾಗಿಸುವ ವ್ಯವಸ್ಥೆ ಇದು. ಇಲ್ಲಿ ನಮ್ಮ ಮೊಬೈಲು ಕಂಪ್ಯೂಟರಿನ ಪಾಲಿಗೆ ಮೋಡೆಮ್‌ನಂತೆ ಕೆಲಸಮಾಡುತ್ತದೆ. ಟೆದರಿಂಗ್ ಸೌಲಭ್ಯವಿರುವ ಮೊಬೈಲುಗಳನ್ನು ಯುಎಸ್‌ಬಿ ಕೇಬಲ್ ಅಥವಾ ಬ್ಲೂಟೂತ್ ಮೂಲಕ ಕಂಪ್ಯೂಟರಿಗೆ ಜೋಡಿಸಿ ಅದಕ್ಕೂ ಅಂತರಜಾಲ ಸಂಪರ್ಕ ನೀಡುವುದು ಟೆದರಿಂಗ್‌ನ ವೈಶಿಷ್ಟ್ಯ. ಅಂತರಜಾಲ ಸಂಪರ್ಕ ಬೇಕಿರುವಷ್ಟು ಹೊತ್ತು ಮೊಬೈಲನ್ನು ಹೀಗೆ ಕಂಪ್ಯೂಟರಿಗೆ ಕಟ್ಟಿಹಾಕಿರುತ್ತೇವಲ್ಲ, ಇದಕ್ಕೆ 'ಟೆದರಿಂಗ್' ಎಂಬ ಹೆಸರು ಬರಲು ಕಾರಣವೇ ಅದು - 'ಟೆದರ್' ಎಂದರೆ 'ಮೇಯುವ ಪ್ರಾಣಿಗೆ ಕಟ್ಟುವ ಹಗ್ಗ' ಎಂದರ್ಥ! ಮೊಬೈಲ್ ಫೋನನ್ನು ವೈ-ಫೈ ಹಾಟ್‌ಸ್ಪಾಟ್‌ನಂತೆ ಉಪಯೋಗಿಸುವುದು ಸಾಧ್ಯವಾದ ನಂತರ ಟೆದರಿಂಗ್ ಬಳಕೆ ನಿಧಾನಕ್ಕೆ ಕಡಿಮೆಯಾಗುತ್ತಿದೆ. 'ಹಾಟ್‌ಸ್ಪಾಟ್' ಆಯ್ಕೆಯನ್ನು (ಆ ಸೌಲಭ್ಯ ಇರುವ ಫೋನುಗಳಲ್ಲಿ) ಬಳಸುವ ಮೂಲಕ ಫೋನಿನ ಅಂತರಜಾಲ ಸಂಪರ್ಕವನ್ನು ವೈ-ಫೈ ಸೌಲಭ್ಯವಿರುವ ಕಂಪ್ಯೂಟರು, ಫೋನು, ಟ್ಯಾಬ್ಲೆಟ್ ಇತ್ಯಾದಿಗಳ ಜೊತೆಗೆಲ್ಲ ಹಂಚಿಕೊಳ್ಳುವುದು ಸಾಧ್ಯವಾಗುತ್ತದೆ. ಮನೆಯ ವೈ-ಫೈ ಸಂಪರ್ಕದಲ್ಲಿ ಮಾಡಿದಂತೆ ಇದಕ್ಕೂ ನಮ್ಮ ಇಚ್ಛೆಯ ಪಾಸ್‌ವರ್ಡ್ ನಿಗದಿಪಡಿಸಿಕೊಳ್ಳುವುದು ಸಾಧ್ಯ.
300 Text to Speech ಟೆಕ್ಸ್ಟ್ ಟು ಸ್ಪೀಚ್ ಪಠ್ಯವನ್ನು ಧ್ವನಿಗೆ ಪರಿವರ್ತಿಸುವ ತಂತ್ರಜ್ಞಾನ. ಡಿಜಿಟಲೀಕರಿಸಿದ ಪಠ್ಯವನ್ನು ಧ್ವನಿರೂಪದಲ್ಲಿ ನಮಗೆ 'ಓದಿಹೇಳುವುದು' ಈ ತಂತ್ರಜ್ಞಾನದ ವೈಶಿಷ್ಟ್ಯ. ಮಾಹಿತಿ ತಂತ್ರಜ್ಞಾನದ ಅನುಕೂಲಗಳನ್ನು ನಮಗೆ ಮುಟ್ಟಿಸುವ ಕಂಪ್ಯೂಟರ್, ಸ್ಮಾರ್ಟ್‌ಫೋನ್ ಮುಂತಾದ ಸಾಧನಗಳತ್ತ ಒಮ್ಮೆ ನೋಡಿದರೆ ಈ ಪ್ರಪಂಚದಲ್ಲಿ ಅದೆಷ್ಟು ಪ್ರಮಾಣದ ಪಠ್ಯವನ್ನು ಡಿಜಿಟಲೀಕರಿಸಲಾಗಿದೆ ಎನ್ನುವುದು ಗೊತ್ತಾಗುತ್ತದೆ. ಅಂತರಜಾಲದಲ್ಲಂತೂ ನಮ್ಮ ಸಂಪರ್ಕಕ್ಕೆ ಬರುವ ಮಾಹಿತಿಯಲ್ಲಿ ಬಹುದೊಡ್ಡ ಭಾಗ ಪಠ್ಯರೂಪದಲ್ಲೇ ಇರುತ್ತದೆ. ಇಷ್ಟೆಲ್ಲ ಪಠ್ಯ ನಮ್ಮ ಕಣ್ಣಮುಂದೆ ಕಾಣುವ ಬದಲು ಧ್ವನಿರೂಪದಲ್ಲಿ ನಮ್ಮ ಕಿವಿಯನ್ನು ತಲುಪುವಂತಿದ್ದರೆ ಅದನ್ನೆಲ್ಲ ಅರ್ಥಮಾಡಿಕೊಳ್ಳುವುದು ಇನ್ನಷ್ಟು ಸುಲಭವಾಗುತ್ತಿತ್ತು ಅಲ್ಲವೆ? ಈ ಆಲೋಚನೆಯ ಪರಿಣಾಮವೇ ಪಠ್ಯವನ್ನು ಧ್ವನಿಗೆ ಪರಿವರ್ತಿಸುವ (ಟೆಕ್ಸ್ಟ್ ಟು ಸ್ಪೀಚ್) ತಂತ್ರಜ್ಞಾನ. ಡಿಜಿಟಲೀಕರಿಸಿದ ಪಠ್ಯವನ್ನು ಧ್ವನಿರೂಪದಲ್ಲಿ ನಮಗೆ 'ಓದಿಹೇಳುವುದು' ಈ ತಂತ್ರಜ್ಞಾನದ ವೈಶಿಷ್ಟ್ಯ. ಕಂಪ್ಯೂಟರ್ ಅಥವಾ ಮೊಬೈಲಿನ ಪರದೆಯ ಮೇಲೆ ಪುಟಗಟ್ಟಲೆ ಪಠ್ಯವನ್ನು ಓದಲು ಬೇಜಾರು ಎನ್ನುವವರಿಂದ ಹಿಡಿದು ದೃಷ್ಟಿ ಸವಾಲಿನ ದೆಸೆಯಿಂದ ಓದಲು ಸಾಧ್ಯವಿಲ್ಲದವರ ತನಕ ಈ ತಂತ್ರಜ್ಞಾನ ಎಲ್ಲರಿಗೂ ನೆರವಾಗಬಲ್ಲದು. ಪಠ್ಯರೂಪದ ಕಡತಗಳನ್ನು ಓದಲು ನಾವು ಬಳಸುವ 'ಅಡೋಬಿ ರೀಡರ್'ನಂತಹ ಹಲವು ತಂತ್ರಾಂಶಗಳಲ್ಲಿ ಟೆಕ್ಸ್ಟ್ ಟು ಸ್ಪೀಚ್ ಸೌಲಭ್ಯ ಇದೆ (ಕೆಲವು ಭಾಷೆಗಳಿಗೆ ಮಾತ್ರ). ಅಷ್ಟೇ ಅಲ್ಲ, ಪಠ್ಯವನ್ನು ಧ್ವನಿಗೆ ಪರಿವರ್ತಿಸುವ ಪ್ರತ್ಯೇಕ ತಂತ್ರಾಂಶಗಳು ಕನ್ನಡವೂ ಸೇರಿದಂತೆ ಹಲವು ಭಾಷೆಗಳಲ್ಲಿವೆ.