A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 318

Backtrace:

File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 319

Backtrace:

File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 320

Backtrace:

File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler

File: /Appdata/padakanaja.karnataka.gov.in/index.php
Line: 318
Function: require_once

Padakanaja - Dictionary View
ಅನಿಸಿಕೆ

ಪದಕೋಶ: ಕಂಪ್ಯೂಟರ್ ತಂತ್ರಜ್ಞಾನ ಪದವಿವರಣ ಕೋಶ | ಇಂಗ್ಲೀಷ್-ಕನ್ನಡ |ಪ್ರಕಾಶಕರು - ಕನ್ನಡ ಅಭಿವೃದ್ಧಿ ಪ್ರಾಧಿಕಾರ (2017)

Show entries
ಕ್ರಮ ಸ೦ಖ್ಯೆ ಇಂಗ್ಲೀಷ್ ಪದ
(English Word)
ಕನ್ನಡ ಪದ
(Kannada Word)
ಕನ್ನಡ ಅರ್ಥ
(Kannada Meaning)
ವಿಷಯ ವರ್ಗೀಕರಣ
(Word Subject)
ವ್ಯಾಕರಣ ವಿಶೇಷ
(Word Grammer)
ಕನ್ನಡ ಉಚ್ಚಾರಣೆ
(Kannada Pronunciation)
ಪರ್ಯಾಯ ಪದ
(Word Synonyms)
ಇಂಗ್ಲೀಷ್ ಅರ್ಥ
(English Meaning)
ಸಂಕ್ಷಿಪ್ತ ವಿವರಣೆ
(Short Description)
ದೀರ್ಘ ವಿವರಣೆ
(Long Description)
ಆಡಳಿತಾತ್ಮಕ ಪದ
(Administrative Word)
301 Timeout ಟೈಮ್‌ಔಟ್ ಕಂಪ್ಯೂಟರ್ ವ್ಯವಸ್ಥೆಗಳನ್ನು ಬಳಸುವಾಗ ಯಾವುದೇ ಪ್ರತಿಕ್ರಿಯೆಗಾಗಿ ಪೂರ್ವನಿರ್ಧಾರಿತ ಸಮಯದವರೆಗೆ ಮಾತ್ರ ಕಾಯುವ ಪರಿಕಲ್ಪನೆ. ಈ ಅವಧಿಯಲ್ಲಿ ಅಪೇಕ್ಷಿತ ಪ್ರತಿಕ್ರಿಯೆ ಬಾರದಿದ್ದಲ್ಲಿ ಅಂತಹ ವ್ಯವಹಾರವನ್ನು ಕೊನೆಗೊಳಿಸಲಾಗುತ್ತದೆ. ಕಂಪ್ಯೂಟರ್ ಜಗತ್ತು ಎಷ್ಟೇ ಸೂಪರ್ ಫಾಸ್ಟ್ ಅನಿಸಿದರೂ ಇಲ್ಲಿ ಹಲವಾರು ಕೆಲಸಗಳಿಗೆ ಕಾಯುವುದು ಅನಿವಾರ್ಯ. ವೆಬ್‌ಸೈಟ್ ತೆರೆದುಕೊಳ್ಳಲು ಬಳಕೆದಾರ ಕಾಯುವುದು, ಬಳಕೆದಾರ ತನ್ನ ಆಯ್ಕೆ ದಾಖಲಿಸುವವರೆಗೂ ಎಟಿಎಂ ಕಾಯುವುದು - ಇಲ್ಲಿ ಸರ್ವೇಸಾಮಾನ್ಯ ಸಂಗತಿಗಳು. ಆದರೆ ಈ ಕಾಯುವಿಕೆಗೆ ಒಂದು ಮಿತಿ ಇರಬೇಕು. ಕೋರಿಕೆಗೆ ಸ್ಪಂದಿಸದ ವೆಬ್ ಸೈಟಿಗಾಗಿ ಕಾಯುವುದನ್ನು ತಪ್ಪಿಸಲು, ಮರೆತು ಹಾಗೆಯೇ ಬಿಟ್ಟುಹೋದ ನೆಟ್‌ಬ್ಯಾಂಕಿಂಗ್ ಪರದೆಯನ್ನು ಯಾರಾದರೂ ದುರುಪಯೋಗಪಡಿಸಿಕೊಳ್ಳುವುದನ್ನು ತಪ್ಪಿಸಲು ಇದು ಅತ್ಯಗತ್ಯ. ಇದನ್ನು ಸಾಧ್ಯವಾಗಿಸುವುದು 'ಟೈಮ್ ಔಟ್'ನ ಪರಿಕಲ್ಪನೆ. ಯಾವುದೇ ಪ್ರತಿಕ್ರಿಯೆಗಾಗಿ ಪೂರ್ವನಿರ್ಧಾರಿತ ಸಮಯದವರೆಗೆ ಮಾತ್ರ ಕಾಯುವುದು ಇದರ ಹೂರಣ. ವೆಬ್‌ಸೈಟ್ ತೆರೆಯಲು ಪ್ರಯತ್ನಿಸುವಾಗ ಕೆಲ ಸೆಕೆಂಡುಗಳಲ್ಲಿ ಅದು ತೆರೆದುಕೊಳ್ಳದಿದ್ದರೆ ನಮಗೊಂದು ಸಂದೇಶ ಕಾಣುತ್ತದಲ್ಲ, ಅದಕ್ಕೆ ಇದೇ ಕಾರಣ. ನೆಟ್‌ಬ್ಯಾಂಕಿಂಗ್‌ಗೆ ಲಾಗಿನ್ ಆದಮೇಲೆ ಒಂದಷ್ಟು ಕಾಲ ಯಾವುದೇ ಚಟುವಟಿಕೆ ಇಲ್ಲದಿದ್ದರೆ ಅದು ತನ್ನಷ್ಟಕ್ಕೆ ತಾನೇ ಲಾಗ್‌ಔಟ್ ಆಗುವುದು, ಬಳಸಿ ಎತ್ತಿಟ್ಟ ಮೊಬೈಲ್ ಪರದೆ ಲಾಕ್ ಆಗಿ ಲೈಟ್ ಆರುವುದು - ಇವೆಲ್ಲದರ ಹಿನ್ನೆಲೆಯಲ್ಲೂ ಇದೇ ಪರಿಕಲ್ಪನೆ ಕೆಲಸಮಾಡುತ್ತದೆ. ಗ್ರಾಹಕರಿಂದ ಪ್ರತಿಕ್ರಿಯೆ ನಿರೀಕ್ಷಿಸುವ ವ್ಯವಸ್ಥೆಗಳಲ್ಲೂ ಈ ಪರಿಕಲ್ಪನೆಯನ್ನು ಬಳಸಲಾಗುತ್ತದೆ. ಎಟಿಎಂನಲ್ಲಿ ಪಿನ್ ದಾಖಲಿಸಲು ಇಂತಿಷ್ಟೇ ಸಮಯ ನೀಡಿರುವುದು, ಐವಿಆರ್ ವ್ಯವಸ್ಥೆಯಲ್ಲಿ ನಮ್ಮ ಆಯ್ಕೆ ಏನೆಂದು ತಿಳಿಸಲು ಸಮಯದ ನಿರ್ಬಂಧ ಇರುವುದನ್ನೆಲ್ಲ ಇಲ್ಲಿ ಉದಾಹರಿಸಬಹುದು.
302 TLD ಟಿಎಲ್‌ಡಿ ಟಾಪ್ ಲೆವೆಲ್ ಡೊಮೈನ್; ಜಾಲತಾಣಗಳ ವಿಳಾಸದ ಪೂರ್ವಾರ್ಧ. ಜಾಲತಾಣ ಯಾವ ವಿಷಯಕ್ಕೆ ಸಂಬಂಧಪಟ್ಟದ್ದು ಎಂದು ಸೂಚಿಸಲು ಇವನ್ನು ಬಳಸಲಾಗುತ್ತದೆ. ಜಾಲತಾಣಗಳನ್ನೆಲ್ಲ ಡಾಟ್ ಕಾಮ್‌ಗಳೆಂದು ಗುರುತಿಸುವುದು ಸಾಮಾನ್ಯ ಅಭ್ಯಾಸ. ಆದರೆ ವಾಸ್ತವದಲ್ಲಿ ಈ ಡಾಟ್ ಕಾಮ್ ಎನ್ನುವುದು ಜಾಲತಾಣಗಳ ವಿಳಾಸದ ಒಂದು ಭಾಗ ಮಾತ್ರ. ಡಾಟ್ ಕಾಮ್, ಡಾಟ್ ನೆಟ್ ಮುಂತಾದ ಈ ಬಾಲಂಗೋಚಿಗಳನ್ನು ಟಾಪ್ ಲೆವೆಲ್ ಡೊಮೈನ್ ಅಥವಾ ಟಿಎಲ್‌ಡಿಗಳೆಂದು ಗುರುತಿಸುತ್ತಾರೆ. ಜಾಲತಾಣ ಯಾವ ವಿಷಯಕ್ಕೆ ಸಂಬಂಧಪಟ್ಟದ್ದು ಎಂದು ಸೂಚಿಸಲು ಇವನ್ನು ಬಳಸಲಾಗುತ್ತದೆ: ಶೈಕ್ಷಣಿಕ ಸಂಸ್ಥೆಗಳ ತಾಣಕ್ಕೆ .edu, ಸರ್ಕಾರಿ ತಾಣಗಳಿಗೆ .gov, ವಾಣಿಜ್ಯೇತರ ಸಂಸ್ಥೆಗಳಿಗೆ .org - ಹೀಗೆ. ಅಂತರರಾಷ್ಟ್ರೀಯ ಸಂಸ್ಥೆಗಳ .int, ಮಿಲಿಟರಿ ಕ್ಷೇತ್ರದ .mil, ವಿಮಾನಯಾನಕ್ಕೆ ಸಂಬಂಧಪಟ್ಟ .aero, ಸುದ್ದಿತಾಣಗಳ .news ಮುಂತಾದವನ್ನೂ ಇಲ್ಲಿ ಹೆಸರಿಸಬಹುದು. ಹಾಗೆ ನೋಡಿದರೆ .com ಎಂಬ ಬಾಲಂಗೋಚಿ ಮೊದಲಿಗೆ 'ಕಮರ್ಶಿಯಲ್' ತಾಣಗಳಿಗೆ ಹಾಗೂ .net ಎನ್ನುವುದು 'ನೆಟ್‌ವರ್ಕ್'ಗಳಿಗೆ ಮಾತ್ರವೇ ಸೀಮಿತವಾಗಿತ್ತು - ಈಗ ಎಲ್ಲರೂ ಅವನ್ನು ಬಳಸುತ್ತಾರೆ ಅಷ್ಟೆ! ತಾಣ ಯಾವ ದೇಶದ್ದು ಎನ್ನುವುದನ್ನು ಸೂಚಿಸುವ ಬಾಲಂಗೋಚಿಗಳಿಗೆ 'ಕಂಟ್ರಿ ಕೋಡ್ ಟಿಎಲ್‌ಡಿ'ಗಳೆಂದು (ಸಿಸಿಟಿಎಲ್‌ಡಿ) ಹೆಸರು. ಭಾರತದ .in, ಜರ್ಮನಿಯ .deಗಳೆಲ್ಲ ಇದಕ್ಕೆ ಉದಾಹರಣೆ. ಇಂಟರ್‌ನ್ಯಾಶನಲೈಸ್ಡ್ ಡೊಮೈನ್ ನೇಮ್ ಪರಿಕಲ್ಪನೆಯಿಂದಾಗಿ ಟಾಪ್ ಲೆವೆಲ್ ಡೊಮೈನ್‌ಗಳು ಇಂಗ್ಲಿಷ್ ಜೊತೆಗೆ ಇನ್ನಿತರ ಭಾಷೆಗಳಲ್ಲೂ ಇರುವುದು ಸಾಧ್ಯವಾಗಿದೆ.
303 Toggle Key ಟಾಗಲ್ ಕೀ ಪ್ರತಿ ಬಾರಿ ಒತ್ತಿದಾಗಲೂ ಬೇರೆಯದೇ ರೀತಿಯ ಫಲಿತಾಂಶ ನೀಡುವ ಕೀಲಿ ಕಂಪ್ಯೂಟರ್ ಕೀಲಿಮಣೆ ಕೆಲಸಮಾಡುವ ರೀತಿ ಬಹಳ ಸರಳವಾದದ್ದು: ನಿರ್ದಿಷ್ಟ ಕೀಲಿಯನ್ನು ಒತ್ತಿದಾಗ ನಿರ್ದಿಷ್ಟ ಸಂಕೇತವನ್ನು ಕಂಪ್ಯೂಟರಿಗೆ ಕಳುಹಿಸುವುದಷ್ಟೇ ಅದರ ಕೆಲಸ. ಕೀಲಿಮಣೆಯ ಬಹುತೇಕ ಕೀಲಿಗಳು ಅಕ್ಷರ - ಅಂಕಿ - ಲೇಖನಚಿಹ್ನೆಗಳನ್ನು ಮೂಡಿಸಲು ಬಳಕೆಯಾಗುತ್ತವೆ. ಇವೆಲ್ಲದರ ಜೊತೆಗೆ ಸಾಮಾನ್ಯ ಕೀಲಿಗಳಿಗಿಂತ ವಿಭಿನ್ನವಾಗಿ ವರ್ತಿಸುವ ಕೆಲವು ಕೀಲಿಗಳೂ ಇರುತ್ತವೆ. ಕ್ಯಾಪ್ಸ್ ಲಾಕ್, ನಮ್ ಲಾಕ್, ಸ್ಕ್ರಾಲ್ ಲಾಕ್ ಮುಂತಾದ ಕೀಲಿಗಳನ್ನು ಇಲ್ಲಿ ಉದಾಹರಿಸಬಹುದು. ಕೀಲಿಮಣೆಯ ಬಹುತೇಕ ಕೀಲಿಗಳ ಕೆಲಸ ಮನೆಯ ಕಾಲಿಂಗ್ ಬೆಲ್ ಗುಂಡಿಯಂತೆ. ಒಮ್ಮೆ ಒತ್ತಿದರೆ ಅದರ ಕೆಲಸ ಮುಗಿಯುತ್ತದೆ, ಯಾವುದೋ ಅಕ್ಷರ ಪರದೆಯ ಮೇಲೆ ಮೂಡುತ್ತದೆ. ಆದರೆ ಮೇಲೆ ಹೇಳಿದ ಕೀಲಿಗಳ ಕಾರ್ಯಾಚರಣೆ ಲೈಟ್ ಹಾಕುವ ಸ್ವಿಚ್ಚಿನಂತೆ - ಪ್ರತಿ ಬಾರಿ ಒತ್ತಿದಾಗಲೂ ಅದರ ಫಲಿತಾಂಶ ಬೇರೆಯದೇ ಆಗಿರುತ್ತದೆ: ಕ್ಯಾಪ್ಸ್ ಲಾಕ್ ಕೀಲಿಯನ್ನು ಒಂದುಬಾರಿ ಒತ್ತಿದ ನಂತರ ಬರಿಯ ದೊಡ್ಡಕ್ಷರಗಳೂ (ಅಪ್ಪರ್ ಕೇಸ್) ಎರಡನೇ ಬಾರಿ ಒತ್ತಿದಾಗ ಸಣ್ಣಕ್ಷರಗಳೂ (ಲೋಯರ್ ಕೇಸ್) ಮೂಡುತ್ತವೆಯಲ್ಲ, ಹಾಗೆ! ಇದಕ್ಕಾಗಿಯೇ ಈ ಕೀಲಿಗಳನ್ನು 'ಟಾಗಲ್ ಕೀ'ಗಳೆಂದು ಕರೆಯುತ್ತಾರೆ (ಟಾಗಲ್ = ಹೊರಳು). ಕೆಲವು ಕೀಲಿಮಣೆಗಳಲ್ಲಿ ಟಾಗಲ್ ಕೀಲಿಗಳ ಜೊತೆ ಅದರ ಸದ್ಯದ ಸ್ಥಿತಿಯನ್ನು ತೋರಿಸುವ ಪುಟ್ಟದೊಂದು ಎಲ್‌ಇಡಿ ಸಂಕೇತವೂ ಇರುವುದುಂಟು.
304 Touch screen ಟಚ್ ಸ್ಕ್ರೀನ್ ಕೈಬೆರಳು ಅಥವಾ ಸ್ಟೈಲಸ್ ಕಡ್ಡಿಯ ಸ್ಪರ್ಶವನ್ನು ಗ್ರಹಿಸಿ ಅದಕ್ಕೆ ಸೂಕ್ತ ಪ್ರತಿಕ್ರಿಯೆ ನೀಡುವ ಪರದೆ ಮೊಬೈಲ್ ಫೋನಿನಿಂದ ಕಾರಿನ ಮ್ಯೂಸಿಕ್ ಸಿಸ್ಟಂವರೆಗೆ, ಎಟಿಎಂನಿಂದ ಏರ್‌ಪೋರ್ಟಿನ ಚೆಕಿನ್ ಯಂತ್ರದವರೆಗೆ ಈಗ ಎಲ್ಲಿ ನೋಡಿದರೂ ಟಚ್ ಸ್ಕ್ರೀನ್‌ನದೇ ಕಾರುಬಾರು. ಕೀಬೋರ್ಡ್ ಕೀಲಿಗಳನ್ನು ಕುಟ್ಟುವ ಬದಲು ಪರದೆಯ ಮೇಲಿನ ಅಕ್ಷರಗಳನ್ನು ಮುಟ್ಟಿದರೆ ಸಾಕು, ನಮ್ಮ ಕೆಲಸ ಸಲೀಸಾಗಿ ಮುಗಿಯುತ್ತದೆ. ಬಹುತೇಕ ಮೊಬೈಲ್ ಫೋನ್ ಹಾಗೂ ಟ್ಯಾಬ್ಲೆಟ್ಟುಗಳಲ್ಲಿ ಬಳಕೆಯಾಗುವ ಸ್ಪರ್ಶಸಂವೇದಿ ಪರದೆಗಳನ್ನು 'ಕೆಪಾಸಿಟಿವ್' ಟಚ್‌ಸ್ಕ್ರೀನುಗಳೆಂದು ಕರೆಯುತ್ತಾರೆ. ನೀವು ಈ ಪರದೆಯನ್ನು ಮುಟ್ಟಿದಾಗ ಅದರ ವಿದ್ಯುತ್‌ಕ್ಷೇತ್ರದಲ್ಲಿ (ಇಲೆಕ್ಟ್ರಿಕಲ್ ಫೀಲ್ಡ್) ಬದಲಾವಣೆಯಾಗುವಂತೆ ಅದನ್ನು ವಿನ್ಯಾಸಗೊಳಿಸಲಾಗಿರುತ್ತದೆ. ಈ ಬದಲಾವಣೆಯನ್ನು ಗ್ರಹಿಸಿ ನೀವು ಪರದೆಯ ಯಾವ ಭಾಗ ಮುಟ್ಟಿದ್ದೀರಿ ಎಂದು ತಿಳಿದುಕೊಳ್ಳುವುದು, ಅದಕ್ಕೆ ಅನುಗುಣವಾಗಿ ಮುಂದಿನ ಕೆಲಸಗಳನ್ನು ನಡೆಸುವುದು ಸಾಧ್ಯವಾಗುತ್ತದೆ. ಅಂದಹಾಗೆ ಪರದೆಯ ವಿದ್ಯುತ್‌ಕ್ಷೇತ್ರವನ್ನು ಬದಲಾಯಿಸಲು ಮನುಷ್ಯನ ಚರ್ಮ, ಸ್ಟೈಲಸ್ ಕಡ್ಡಿ ಮುಂತಾದ ವಿಶಿಷ್ಟ ವಸ್ತುಗಳಿಗಷ್ಟೇ ಸಾಧ್ಯ. ಕೈಚೀಲ ಹಾಕಿಕೊಂಡಾಗ, ಬೆರಳಿಗೆ ಬ್ಯಾಂಡೇಜ್ ಸುತ್ತಿದಾಗ ಅಥವಾ ಪೆನ್ನಿನಿಂದ ಕುಟ್ಟಿದಾಗ ಕೆಪಾಸಿಟಿವ್ ಟಚ್‌ಸ್ಕ್ರೀನ್ ಸ್ಪಂದಿಸದಿರಲು ಇದೇ ಕಾರಣ. 'ರೆಸಿಸ್ಟಿವ್ ಟಚ್‌ಸ್ಕ್ರೀನ್' ಎನ್ನುವುದು ಸ್ಪರ್ಶಸಂವೇದಿ ಪರದೆಗಳ ಇನ್ನೊಂದು ವಿಧ. "ಕಡಿಮೆ ಬೆಲೆ"ಯ ಹಣೆಪಟ್ಟಿಯೊಡನೆ ಮೊದಮೊದಲು ಬಂದ ಟ್ಯಾಬ್ಲೆಟ್ಟುಗಳಲ್ಲಿ ಈ ಬಗೆಯ ಟಚ್‌ಸ್ಕ್ರೀನ್ ಇದ್ದದ್ದು ನಿಮ್ಮ ನೆನಪಿನಲ್ಲಿರಬಹುದು. ಕೈಬೆರಳನ್ನೋ ಬೇರಾವುದೇ ಸಾಧನವನ್ನೋ ಪರದೆಯ ಮೇಲೆ ಒತ್ತಿದಾಗ ಉಂಟಾಗುವ ಒತ್ತಡವನ್ನು ಗ್ರಹಿಸಿ ಈ ಬಗೆಯ ಟಚ್‌ಸ್ಕ್ರೀನುಗಳು ಕೆಲಸಮಾಡುತ್ತವೆ. ಕೆಪಾಸಿಟಿವ್ ಟಚ್‌ಸ್ಕ್ರೀನುಗಳ ಹೋಲಿಕೆಯಲ್ಲಿ ಇವುಗಳ ಬಳಕೆ ಅಷ್ಟೊಂದು ಸರಾಗ ಎನ್ನಿಸುವುದಿಲ್ಲ.
305 Touchpad ಟಚ್‍ಪ್ಯಾಡ್ ಮೌಸ್‌ನ ನೆರವಿಲ್ಲದೆಯೇ ಪರದೆಯ ಮೇಲೆ ಕರ್ಸರ್ ಅನ್ನು ಓಡಾಡಿಸಲು, ನಮಗೆ ಬೇಕಾದ ಕಡೆ ಕ್ಲಿಕ್ ಮಾಡಲು ನೆರವಾಗುವ ಸಾಧನ ಲ್ಯಾಪ್‌ಟಾಪ್ ಕೀಲಿಮಣೆಯ ಕೆಳಭಾಗದಲ್ಲಿ ಆಯತಾಕಾರದ ಇನ್ನೊಂದು ಭಾಗವಿರುತ್ತದಲ್ಲ, ಅದರ ಮೇಲೆ ನಮ್ಮ ಕೈಬೆರಳನ್ನು ಓಡಾಡಿಸಿದರೆ ಅದಕ್ಕೆ ತಕ್ಕಂತೆ ಪರದೆಯ ಮೇಲಿನ ಮೌಸ್ ಪಾಯಿಂಟರ್ (ಕರ್ಸರ್) ಕೂಡ ಚಲಿಸುತ್ತದೆ. ಬೇಕಾದ ಹೈಪರ್‌ಲಿಂಕ್‌ನ ಮೇಲೆ ಕರ್ಸರ್ ಇರಿಸಿ ಇನ್ನೊಮ್ಮೆ ಮುಟ್ಟಿದರೆ ಅದನ್ನು ತೆರೆಯುವುದೂ ಸಾಧ್ಯವಾಗುತ್ತದೆ! ಥೇಟ್ ಮೌಸ್‌ನಂತೆಯೇ ಕೆಲಸಮಾಡುವ ಈ ಭಾಗದ ಹೆಸರೇ ಟಚ್‌ಪ್ಯಾಡ್. ಮೌಸ್‌ನ ನೆರವಿಲ್ಲದೆಯೇ ಪರದೆಯ ಮೇಲೆ ಕರ್ಸರ್ ಅನ್ನು ಓಡಾಡಿಸಲು, ನಮಗೆ ಬೇಕಾದ ಕಡೆ ಕ್ಲಿಕ್ ಮಾಡಲು ನೆರವಾಗುವುದು ಟಚ್‌ಪ್ಯಾಡ್‌ನ ವೈಶಿಷ್ಟ್ಯ. ನಮ್ಮ ಕೈಬೆರಳ ಸ್ಪರ್ಶವನ್ನು ಗ್ರಹಿಸುವ ಈ ಸಾಧನ ಅದಕ್ಕೆ ತಕ್ಕಂತೆ ಪರದೆಯ ಮೇಲಿನ ಕರ್ಸರ್ ಅನ್ನು ಓಡಾಡಿಸುತ್ತದೆ. ಬಹುತೇಕ ಟಚ್‌ಪ್ಯಾಡ್‌ಗಳ ಕೆಳಭಾಗದಲ್ಲಿ ಎರಡು ಹೆಚ್ಚುವರಿ ಗುಂಡಿಗಳೂ ಇರುತ್ತವೆ. ಮೌಸ್‌ನಲ್ಲಿರುವ ಲೆಫ್ಟ್ ಕ್ಲಿಕ್ ಹಾಗೂ ರೈಟ್ ಕ್ಲಿಕ್ ಸೌಲಭ್ಯವನ್ನು ಒದಗಿಸುವುದು ಇವುಗಳ ಉದ್ದೇಶ. ಕೆಲ ಲ್ಯಾಪ್‌ಟಾಪ್‌ಗಳಲ್ಲಿ ಹೆಚ್ಚುವರಿ ಗುಂಡಿಗಳ ಬದಲಿಗೆ ಟಚ್‌ಪ್ಯಾಡ್‌ನ ಒಂದು ಭಾಗವೇ ಈ ಕೆಲಸ ಮಾಡುವುದೂ ಉಂಟು. ಅಂದಹಾಗೆ ಟಚ್‌ಪ್ಯಾಡ್‌ಗಳ ಬಳಕೆ ಲ್ಯಾಪ್‌ಟಾಪ್‌ಗಳಿಗಷ್ಟೇ ಸೀಮಿತವೇನಲ್ಲ. ಒಂದು ಬದಿಯಲ್ಲಿ ಟಚ್‌ಪ್ಯಾಡ್ ಇರುವ, ಯಾವುದೇ ಕಂಪ್ಯೂಟರಿನೊಡನೆ ಬಳಸಬಹುದಾದ, ಕೀಬೋರ್ಡ್‌ಗಳೂ ಮಾರುಕಟ್ಟೆಯಲ್ಲಿವೆ. ಕೀಬೋರ್ಡ್ - ಮೌಸ್‌ಗಳನ್ನು ಪ್ರತ್ಯೇಕವಾಗಿ ಬಳಸುವ ಬದಲಿಗೆ ಒಂದೇ ಸಾಧನ ಬಳಸಿ ಎರಡೂ ಕೆಲಸಗಳನ್ನು ಸಾಧಿಸಿಕೊಳ್ಳಲು ಇದು ನೆರವಾಗುತ್ತದೆ.
306 Track ಟ್ರ್ಯಾಕ್ ಮಾಹಿತಿ ಶೇಖರಣೆಗೆ ಬಳಕೆಯಾಗುವ ಡಿಸ್ಕ್‌ಗಳ ಕೇಂದ್ರದಿಂದ ಪ್ರಾರಂಭಿಸಿ ಅದರ ಹೊರಭಾಗದವರೆಗೂ ಇರುವ, ಏಕಕೇಂದ್ರದ ವೃತ್ತಾಕಾರದ ಹಾದಿ; ಮಾಹಿತಿ ಶೇಖರವಾಗುವುದು ಈ ಹಾದಿಯಲ್ಲೇ. ಹಿಂದಿನ ಫ್ಲಾಪಿಡಿಸ್ಕ್‌ಗಳಿಂದ ಇಂದಿನ ಹಾರ್ಡ್ ಡಿಸ್ಕ್, ಸಿ.ಡಿ., ಡಿವಿಡಿಗಳವರೆಗೆ ಹಲವಾರು ಶೇಖರಣಾ ಸಾಧನಗಳಲ್ಲಿ ಮಾಹಿತಿ ಶೇಖರವಾಗುವುದು ವೃತ್ತಾಕಾರದ ತಟ್ಟೆಗಳಂತಹ (ಡಿಸ್ಕ್) ಮಾಧ್ಯಮದ ಮೇಲೆ. ಇಂತಹ ತಟ್ಟೆಗಳಲ್ಲಿ, ಸಹಜವಾಗಿಯೇ, ಮಾಹಿತಿ ಶೇಖರವಾಗುವ ಹಾದಿಯೂ ವೃತ್ತಾಕಾರವಾಗಿಯೇ ಇರುತ್ತದೆ. ಡಿಸ್ಕ್‌ನ ಕೇಂದ್ರದಿಂದ ಪ್ರಾರಂಭಿಸಿ ಅದರ ಹೊರಭಾಗದವರೆಗೂ ಇರುವ, ಏಕಕೇಂದ್ರದ ಇಂತಹ ವೃತ್ತಗಳನ್ನು 'ಟ್ರ್ಯಾಕ್' ಎಂದು ಕರೆಯುತ್ತಾರೆ. ಫ್ಲಾಪಿ ಡಿಸ್ಕ್‌ನಂತಹ ಕಡಿಮೆ ಸಾಮರ್ಥ್ಯದ ಶೇಖರಣಾ ಸಾಧನಗಳಲ್ಲಿ ಟ್ರ್ಯಾಕ್‌ಗಳ ಸಂಖ್ಯೆ ಬಹಳ ಕಡಿಮೆಯಿರುತ್ತಿತ್ತು - ೮೦, ೧೬೦ ಹೀಗೆ. ಇದರ ಹೋಲಿಕೆಯಲ್ಲಿ ನೋಡಿದರೆ ಇಂದಿನ ಹಾರ್ಡ್ ಡಿಸ್ಕ್‌ಗಳ ಪ್ರತಿ ತಟ್ಟೆಯಲ್ಲೂ ಸಾವಿರಾರು ಸಂಖ್ಯೆಯ ಟ್ರ್ಯಾಕ್‌ಗಳಿರುತ್ತವೆ. ಇಂತಹ ಪ್ರತಿ ಟ್ರ್ಯಾಕ್ ಅನ್ನೂ ಹಲವು ಸಣ್ಣಸಣ್ಣ ಭಾಗಗಳಾಗಿ ವಿಂಗಡಿಸಲಾಗಿರುತ್ತದೆ - ಪ್ರತಿ ರಸ್ತೆಯಲ್ಲೂ ಇಂತಿಷ್ಟು ಸಂಖ್ಯೆಯ ನಿವೇಶನಗಳಿರುತ್ತವಲ್ಲ, ಹಾಗೆ. ಇಂತಹ ಭಾಗಗಳಿಗೆ ಸೆಕ್ಟರ್ ಎಂದು ಹೆಸರು. ನಮ್ಮ ಕಡತಗಳಲ್ಲಿನ ಮಾಹಿತಿಯನ್ನು ಇಂತಹ ನೂರಾರು-ಸಾವಿರಾರು ಸೆಕ್ಟರ್‌ಗಳಲ್ಲಿ ಉಳಿಸಿಡಲಾಗುತ್ತದೆ. ಈ ಪೈಕಿ ಯಾವುದೇ ಸೆಕ್ಟರಿನಲ್ಲಿ ಯಾಂತ್ರಿಕ ದೋಷ ಕಾಣಿಸಿಕೊಂಡರೆ, ಅಲ್ಲಿ ಮಾಹಿತಿಯನ್ನು ಉಳಿಸುವಾಗ ಏನಾದರೂ ತಪ್ಪಾಗಿದ್ದರೆ ಆ ಕಡತವನ್ನು ತೆರೆಯುವುದೇ ಅಸಾಧ್ಯವಾಗಬಹುದು. ಇಂತಹ ದೋಷಯುಕ್ತ ಸೆಕ್ಟರುಗಳನ್ನು 'ಬ್ಯಾಡ್ ಸೆಕ್ಟರ್' ಎಂದು ಗುರುತಿಸಲಾಗುತ್ತದೆ. ಬ್ಯಾಡ್‌ಸೆಕ್ಟರುಗಳನ್ನು ಪರಿಶೀಲಿಸಿ ಸರಿಪಡಿಸಲು ಪ್ರಯತ್ನಿಸುವ ಕೆಲ ತಂತ್ರಾಂಶಗಳಿವೆ. ಯಾಂತ್ರಿಕ ದೋಷವಿರುವ ಸೆಕ್ಟರುಗಳನ್ನು ಸರಿಪಡಿಸುವುದು ಬಹುತೇಕ ಅಸಾಧ್ಯವಾದ್ದರಿಂದ ಇಂತಹ ತಂತ್ರಾಂಶಗಳು ಮುಂದೆ ಅವನ್ನು ಬಳಸದಂತೆ ಗುರುತಿಸುತ್ತವೆ, ಅಷ್ಟೇ.
307 Trojan Horse ಟ್ರೋಜನ್ ಹಾರ್ಸ್ ನಿರಪಾಯಕಾರಿ ತಂತ್ರಾಂಶದ ಸೋಗಿನಲ್ಲಿ ಬರುವ ಕುತಂತ್ರಾಂಶ ಟ್ರೋಜನ್ ಯುದ್ಧದಲ್ಲಿ ಬಸವಳಿದಿದ್ದ ಗ್ರೀಕರು ದೊಡ್ಡದೊಂದು ಮರದ ಕುದುರೆಯ ಸಹಾಯದಿಂದ ಟ್ರಾಯ್ ನಗರವನ್ನು ಗೆದ್ದರು ಎನ್ನುವುದು ಇತಿಹಾಸ. ನೋಡಲು ನಿರುಪದ್ರವಿಯಾಗಿ ಕಾಣುತ್ತಿದ್ದ ಆ ಕುದುರೆಯೊಳಗೆ ('ಟ್ರೋಜನ್ ಹಾರ್ಸ್') ಸೈನಿಕರು ಅವಿತುಕೊಂಡು ಟ್ರಾಯ್ ನಗರದವರನ್ನು ಮೋಸಗೊಳಿಸಿದ್ದರಂತೆ. ಇದೇ ರೀತಿ ನಿರಪಾಯಕಾರಿ ತಂತ್ರಾಂಶದ ಸೋಗಿನಲ್ಲಿ ಬರುವ ಕುತಂತ್ರಾಂಶಗಳು ಕಂಪ್ಯೂಟರ್ ಪ್ರಪಂಚದಲ್ಲಿವೆ. ಹೀಗಾಗಿಯೇ ಅವನ್ನು ಟ್ರೋಜನ್ ಹಾರ್ಸ್ ಅಥವಾ 'ಟ್ರೋಜನ್'ಗಳೆಂದು ಕರೆಯುತ್ತಾರೆ. ದತ್ತಾಂಶವನ್ನು ಅಥವಾ ಕಡತಗಳನ್ನು ಹಾಳುಮಾಡುವುದು, ಇತರ ಕುತಂತ್ರಾಂಶಗಳನ್ನು ಇನ್‌ಸ್ಟಾಲ್ ಮಾಡುವುದು, ಬಳಕೆದಾರರ ಖಾಸಗಿ ಮಾಹಿತಿಯನ್ನು ಕದಿಯುವುದು - ಹೀಗೆ ಟ್ರೋಜನ್‌ಗಳಿಗೆ ಅನೇಕ ಉದ್ದೇಶಗಳಿರುವುದು ಸಾಧ್ಯ. ಇತರ ಕುತಂತ್ರಾಂಶಗಳಾದ ವೈರಸ್-ವರ್ಮ್‌ಗಳಂತೆ ಟ್ರೋಜನ್ ಒಂದು ಕಂಪ್ಯೂಟರಿನಿಂದ ಇನ್ನೊಂದಕ್ಕೆ ತನ್ನಷ್ಟಕ್ಕೆ ತಾನೇ ಹರಡುವುದಿಲ್ಲ. ಬಳಕೆದಾರರು ಸಾಮಾನ್ಯವಾಗಿ ಟ್ರೋಜನ್ ಬಲೆಗೆ ಬೀಳುವುದು ಖೊಟ್ಟಿ ಜಾಹೀರಾತುಗಳ ಮೇಲೆ ಕ್ಲಿಕ್ಕಿಸುವ ಅಥವಾ ಸಂಶಯಾಸ್ಪದ ಇಮೇಲ್ ಅಟ್ಯಾಚ್‌ಮೆಂಟ್‌ಗಳನ್ನು ತೆರೆಯುವ ಮೂಲಕ. ಯಾವುದೋ ಉಪಯುಕ್ತ ತಂತ್ರಾಂಶವನ್ನೋ ಕಡತವನ್ನೋ ಡೌನ್‌ಲೋಡ್ ಮಾಡುತ್ತಿದ್ದೇವೆ ಎಂದುಕೊಳ್ಳುವ ಅವರು ತಮಗೆ ತಿಳಿಯದಂತೆಯೇ ಕುತಂತ್ರಾಂಶವನ್ನು ಇನ್‌ಸ್ಟಾಲ್ ಮಾಡಿಕೊಳ್ಳುತ್ತಾರೆ. ಟ್ರೋಜನ್‌ಗಳಿಂದ ಪಾರಾಗುವುದೂ ಸುಲಭವೇ: ಅಪರಿಚಿತರಿಂದ ಬರುವ ಇಮೇಲ್ ಅಟ್ಯಾಚ್‌ಮೆಂಟುಗಳನ್ನು ತೆರೆಯದಿರುವುದು, ಸಂಶಯಾಸ್ಪದ ಜಾಹೀರಾತುಗಳನ್ನು ಕ್ಲಿಕ್ ಮಾಡದಿರುವುದು, ಆಂಟಿವೈರಸ್ ತಂತ್ರಾಂಶ ಬಳಸುವುದು - ಹೀಗೆ ಕೆಲವು ಸರಳ ಕ್ರಮಗಳನ್ನು ಕೈಗೊಂಡರೆ ಆಯಿತು!
308 Troll ಟ್ರಾಲ್ ಅಂತರಜಾಲದ ಇತರ ಬಳಕೆದಾರರನ್ನು ಉದ್ದೇಶಪೂರ್ವಕವಾಗಿ ಹೀಗಳೆಯುವ, ಅವಮಾನಿಸುವ ಅಥವಾ ಗೇಲಿಮಾಡುವ ವ್ಯಕ್ತಿ ಅಂತರಜಾಲ ಸಂಪರ್ಕ ಸರ್ವವ್ಯಾಪಿಯಾಗಿ ಬೆಳೆದಂತೆ ಸಮಾಜಜಾಲಗಳಲ್ಲಿ (ಸೋಶಿಯಲ್ ನೆಟ್‌ವರ್ಕ್) ಸಕ್ರಿಯರಾಗುತ್ತಿರುವವರ ಸಂಖ್ಯೆಯೂ ಹೆಚ್ಚುತ್ತಿದೆ. ಈ ಬೆಳವಣಿಗೆಯ ಜೊತೆಗೆ ಸಮಾಜಜಾಲಗಳಲ್ಲಿ ದುರ್ವರ್ತನೆಯ ಪ್ರಸಂಗಗಳೂ ಜಾಸ್ತಿಯಾಗುತ್ತಿವೆ. ಸಮಾಜಜಾಲಗಳಲ್ಲಿ ಇತರ ಬಳಕೆದಾರರನ್ನು ಉದ್ದೇಶಪೂರ್ವಕವಾಗಿ ಹೀಗಳೆಯುವ, ಅವಮಾನಿಸುವ ಅಥವಾ ಗೇಲಿಮಾಡುವ ಪ್ರಸಂಗಗಳು ಇಂತಹ ದುರ್ವರ್ತನೆಯ ಉದಾಹರಣೆಗಳು. ಇಂತಹ ಯಾವುದೇ ಕ್ರಿಯೆಯನ್ನು ಟ್ರಾಲ್ ಮಾಡುವುದು ಅಥವಾ 'ಟ್ರಾಲಿಂಗ್' ಎಂದು ಗುರುತಿಸಲಾಗುತ್ತದೆ. ಈ ಕ್ರಿಯೆಯಲ್ಲಿ ತೊಡಗಿಕೊಂಡವರಿಗೂ ಟ್ರಾಲ್‌ಗಳೆಂದೇ ಹೆಸರು. ವೈಯಕ್ತಿಕ ದ್ವೇಷ, ನಿರ್ದಿಷ್ಟ ಸಿದ್ಧಾಂತದ ಕುರಿತ ವಿರೋಧ, ಇತರರನ್ನು ನೋಯಿಸಲೇಬೇಕೆಂಬ ಹಿಂಸಾಪ್ರವೃತ್ತಿ - ಹೀಗೆ ಟ್ರಾಲಿಂಗ್‌ಗೆ ಅನೇಕ ಕಾರಣಗಳಿರುವುದು ಸಾಧ್ಯ. ಟ್ರಾಲ್‌ಗಳ ಕಾಟ ಕೆಲವೊಮ್ಮೆ ಒಂದೆರಡು ಸಂದೇಶಗಳಿಗಷ್ಟೇ ಸೀಮಿತವಾಗಿದ್ದರೆ ಇನ್ನು ಕೆಲಬಾರಿ ಸುದೀರ್ಘ ಅವಧಿಯವರೆಗೆ ಮುಂದುವರೆಯುವುದೂ ಉಂಟು. ಟ್ರಾಲಿಂಗ್‌ನ ಕಾರಣ - ಸ್ವರೂಪ ಯಾವುದೇ ಆದರೂ ಟ್ರಾಲಿಂಗ್‌ಗೆ ಗುರಿಯಾದವರಿಗೆ ಇದರಿಂದ ತೊಂದರೆಯಾಗುವುದಂತೂ ನಿಜ (ಟ್ರಾಲ್‌ಗಳ ಕಾಟ ತಡೆಯಲಾರದೆ ಆತ್ಮಹತ್ಯೆಯ ಮೊರೆಹೋದವರೂ ಇದ್ದಾರೆ). ಸಿದ್ಧಾಂತಗಳ ನಡುವಿನ ಸಂಘರ್ಷದಲ್ಲಿ ಟ್ರಾಲಿಂಗ್ ಪ್ರವೇಶವಾದಾಗ ಅದು ವೈಯಕ್ತಿಕ ದ್ವೇಷಕ್ಕೆ ತಿರುಗುವ, ಕಾನೂನು ಕ್ರಮದಲ್ಲಿ ಕೊನೆಗೊಳ್ಳುವ ಸಾಧ್ಯತೆಗಳೂ ಇಲ್ಲದಿಲ್ಲ. ಅಂದಹಾಗೆ ಟ್ರಾಲಿಂಗ್ ಸಮಸ್ಯೆ ಟ್ವಿಟರ್ - ಫೇಸ್‌ಬುಕ್‌ಗಳಿಗಷ್ಟೇ ಸೀಮಿತವಲ್ಲ. ಯೂಟ್ಯೂಬ್‌ನಲ್ಲಿ, ಬ್ಲಾಗುಗಳಲ್ಲಿ, ವಾಟ್ಸ್‌ಆಪ್‌ನಲ್ಲಿ, ಕಡೆಗೆ ಇಮೇಲ್ ಮೂಲಕವೂ ಕಿರುಕುಳ ನೀಡುವ ಟ್ರಾಲ್‌ಗಳು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಇಂತಹವರು ನಮ್ಮ-ನಿಮ್ಮ ನಡುವೆಯೂ ಇರುವುದು, ಅವರ ಸಂಖ್ಯೆ ಜಾಸ್ತಿಯಾಗುತ್ತಲೇ ಇರುವುದು ನಿಜಕ್ಕೂ ಆತಂಕದ ಸಂಗತಿಯೇ!
309 Unboxed ಅನ್‌ಬಾಕ್ಸ್‌ಡ್ ಮೂಲ ಪ್ಯಾಕಿಂಗ್‌ನಲ್ಲಿಲ್ಲ ಎನ್ನುವ ಕಾರಣಕ್ಕಾಗಿ ಕಡಿಮೆ ಬೆಲೆಗೆ ಮಾರಾಟವಾಗುವ ವಿದ್ಯುನ್ಮಾನ ಉಪಕರಣಗಳು ಹೊಸ ಮಾದರಿ ಮೊಬೈಲ್ ಫೋನುಗಳನ್ನು ಪರಿಚಯಿಸುವ ವೀಡಿಯೋಗಳನ್ನು ನೀವು ಯೂಟ್ಯೂಬ್‌ನಲ್ಲಿ ನೋಡಿರಬಹುದು. ಇಂತಹ ಬಹುತೇಕ ವೀಡಿಯೋಗಳು ಪ್ರಾರಂಭವಾಗುವುದು ಮೊಬೈಲ್ ಇಟ್ಟಿರುವ ಪೆಟ್ಟಿಗೆಯನ್ನು (ಬಾಕ್ಸ್) ತೆರೆದು ಅದರೊಳಗೆ ಏನೆಲ್ಲ ಇದೆ ಎಂದು ಹೇಳುವ ಮೂಲಕ. ಹಾಗಾಗಿಯೇ ಈ ಪರಿಚಯಗಳನ್ನು 'ಅನ್‌ಬಾಕ್ಸಿಂಗ್' ಎಂದೂ ಕರೆಯುತ್ತಾರೆ. ಈ ಪರಿಕಲ್ಪನೆಗೆ ಇನ್ನೊಂದು ಆಯಾಮವೂ ಇದೆ. ಆನ್‌ಲೈನ್ ಅಂಗಡಿಗಳಿಂದ ಮೊಬೈಲ್ ತರಿಸುವ ನಾವು ಮನೆಯಲ್ಲೇ ಅನ್‌ಬಾಕ್ಸ್ ಮಾಡುತ್ತೇವೆ: ಪ್ಲಾಸ್ಟಿಕ್ ಹೊರಕವಚವನ್ನು ಹರಿದು, ಪೆಟ್ಟಿಗೆಯ ಮೇಲಿನ ಸೀಲ್ ಒಡೆದು ಮೊಬೈಲನ್ನು ಹೊರತೆಗೆಯುತ್ತೇವೆ. ಇದರ ನಂತರದಲ್ಲೂ ಮೊಬೈಲನ್ನು ಅಂಗಡಿಗೆ ಮರಳಿಸುವಂತಹ ಸನ್ನಿವೇಶ ಕೆಲವೊಮ್ಮೆ ಎದುರಾಗುತ್ತದೆ. ಅಂಗಡಿಯವರು ಒಪ್ಪಿದರೆ ಅದನ್ನು ಮರಳಿಸಿ ನಾವು ಆರಾಮಾಗಿರುತ್ತೇವೆ. ಆದರೆ ಹಾಗೆ ಮರಳಿಸಿದ ಫೋನನ್ನು ಅಂಗಡಿಯವರು ಮತ್ತೆ ಇನ್ನೊಬ್ಬರಿಗೆ ಮಾರುವುದು ಕಷ್ಟ - ತಾವು ಕೊಳ್ಳುವ ಫೋನಿನ ಪೆಟ್ಟಿಗೆ ಸೀಲ್ ಆಗಿರಬೇಕು ಎಂದು ಗ್ರಾಹಕರು ನಿರೀಕ್ಷಿಸುತ್ತಾರಲ್ಲ! ಇಂತಹ ಫೋನುಗಳನ್ನು 'ಅನ್‌ಬಾಕ್ಸ್‌ಡ್' ಫೋನುಗಳೆಂಬ ಹಣೆಪಟ್ಟಿಯೊಡನೆ ಹಲವು ಆನ್‌ಲೈನ್ ಅಂಗಡಿಗಳಲ್ಲಿ ಮಾರಲಾಗುತ್ತದೆ. ಫೋನು ಹೊಸದೇ, ಪೆಟ್ಟಿಗೆಯಲ್ಲಿರಬೇಕಾದ ಇತರ ವಸ್ತುಗಳೂ ಫೋನಿನ ಜೊತೆಗಿರುತ್ತವೆ; ಆದರೆ ಪೆಟ್ಟಿಗೆ ಸೀಲ್ ಆಗಿಲ್ಲದ ಕಾರಣದಿಂದ ಅದರ ಬೆಲೆ ಮಾತ್ರ ಮೂಲ ಬೆಲೆಗಿಂತ ಕೊಂಚ ಕಡಿಮೆಯಿರುತ್ತದೆ. ವಾರಂಟಿಯೂ ಇರುತ್ತದಾದರೂ ಹೊಸ ಫೋನುಗಳ ಹೋಲಿಕೆಯಲ್ಲಿ ವಾರಂಟಿ ಅವಧಿ ಕೊಂಚ ಕಡಿಮೆ ಇರಬಹುದು.
310 Unicode ಯುನಿಕೋಡ್ ಮಾಹಿತಿ ಶೇಖರಣೆಗಾಗಿ ಬಳಸಲಾಗುವ ಜಾಗತಿಕ ಸಂಕೇತ ವಿಧಾನ. ಮಾಹಿತಿ ಸಂವಹನೆಯಲ್ಲಿ ಅಕ್ಷರಶೈಲಿಯ (ಫಾಂಟ್) ಸಂಕೇತಗಳ ಬದಲಿಗೆ ಮೂಲ ಮಾಹಿತಿಯನ್ನೇ ಕಳುಹಿಸುವುದರಿಂದ ಆ ಮಾಹಿತಿಯನ್ನು ಬಳಸುವವರು ಇಂಥದ್ದೇ ಅಕ್ಷರಶೈಲಿ ಬಳಸಬೇಕೆಂಬ ನಿರ್ಬಂಧ ಇರುವುದಿಲ್ಲ. ಹಿಂದೆ ಕನ್ನಡ ಪದಸಂಸ್ಕಾರಕಗಳನ್ನು ಬಳಸುವಾಗ ನಾವು ನಿರ್ದಿಷ್ಟ ಫಾಂಟುಗಳನ್ನು ಅವಲಂಬಿಸಬೇಕಾದ್ದು ಅನಿವಾರ್ಯವಾಗಿತ್ತು. ಟೈಪಿಸುವುದು ಹಾಗಿರಲಿ, ಫಾಂಟ್ ಇನ್‌ಸ್ಟಾಲ್ ಮಾಡಿಕೊಳ್ಳದೆ ಕನ್ನಡದ ಪಠ್ಯ ಓದುವುದೂ ಆಗ ಸಾಧ್ಯವಾಗುತ್ತಿರಲಿಲ್ಲ. ಈ ಪರಿಸ್ಥಿತಿ ಬದಲಾದದ್ದು ಯುನಿಕೋಡ್ ಸಂಕೇತ ವಿಧಾನ ಬಳಕೆಗೆ ಬಂದಾಗ (ನೆನಪಿಡಿ, ಯುನಿಕೋಡ್ ಒಂದು ಸಂಕೇತ ವಿಧಾನ - ತಂತ್ರಾಂಶ ಅಲ್ಲ). ಈ ಸೌಲಭ್ಯವಿರುವ ತಂತ್ರಾಂಶಗಳಲ್ಲಿ ಬೆರಳಚ್ಚು ಮಾಡಿದ ಮಾಹಿತಿಯನ್ನು ನೇರವಾಗಿ ಯುನಿಕೋಡ್‌ನಲ್ಲೇ ಸಂಗ್ರಹಿಸಿಡಲಾಗುತ್ತದೆ, ಹಳೆಯ ತಂತ್ರಾಂಶಗಳಂತೆ ಅಕ್ಷರಶೈಲಿಯ (ಫಾಂಟ್) ಸಂಕೇತಗಳಲ್ಲಿ ಅಲ್ಲ. ಹಾಗಾಗಿ ಯುನಿಕೋಡ್‌ನಲ್ಲಿರುವ ಮಾಹಿತಿಯನ್ನು ಬೇರೊಬ್ಬರು ಓದಲು ಕನ್ನಡದ ಯಾವುದೇ ಯುನಿಕೋಡ್ ಅಕ್ಷರಶೈಲಿ ಇದ್ದರೆ ಸಾಕು. ಹಾಗಾಗಿ ಇಮೇಲ್ ಕಳುಹಿಸುವುದು, ಜಾಲತಾಣಗಳಿಗೆ-ಬ್ಲಾಗುಗಳಿಗೆ ಮಾಹಿತಿ ಸೇರಿಸುವುದು, ಅವನ್ನು ಓದುವುದು, ಕನ್ನಡದ ಮಾಹಿತಿಯನ್ನು ಸರ್ಚ್ ಇಂಜನ್‌ಗಳಲ್ಲಿ ಕನ್ನಡದಲ್ಲೇ ಹುಡುಕುವುದು - ಇದೆಲ್ಲವನ್ನೂ ನಿರ್ದಿಷ್ಟ ತಂತ್ರಾಂಶದ ಮೇಲೆ ಅವಲಂಬಿತರಾಗದೆ ಮಾಡುವುದು ಸಾಧ್ಯವಾಗುತ್ತದೆ. 'ಬರಹ', 'ನುಡಿ', 'ಪದ' ಸೇರಿದಂತೆ ಈಚಿನ ಬಹುತೇಕ ತಂತ್ರಾಂಶಗಳನ್ನು ಬಳಸಿ ಯುನಿಕೋಡ್‌ನಲ್ಲಿ ಟೈಪ್ ಮಾಡುವುದು ಸಾಧ್ಯ. ಅಂದಹಾಗೆ ಯುನಿಕೋಡ್ ಅಕ್ಷರಶೈಲಿಯೆಂದರೆ ವಿಂಡೋಸ್‌ನಲ್ಲಿ ದೊರಕುವ 'ತುಂಗಾ' ಒಂದೇ ಅಲ್ಲ. ಬರಹ, ನುಡಿ ಸೇರಿದಂತೆ ಹಲವು ತಂತ್ರಾಂಶಗಳಲ್ಲಿ ಯುನಿಕೋಡ್‌ಗೆಂದೇ ಪ್ರತ್ಯೇಕ ಫಾಂಟುಗಳಿವೆ.