A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 318

Backtrace:

File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 319

Backtrace:

File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 320

Backtrace:

File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler

File: /Appdata/padakanaja.karnataka.gov.in/index.php
Line: 318
Function: require_once

Padakanaja - Dictionary View
ಅನಿಸಿಕೆ

ಪದಕೋಶ: ಕುಂಬಾರಿಕೆ ವೃತ್ತಿ ಪದಕೋಶ | ಕನ್ನಡ-ಕನ್ನಡ | ಪ್ರಕಾಶಕರು - ಕನ್ನಡ ಸಾಹಿತ್ಯ ಪರಿಷತ್ತು (2007)

Show entries
ಕ್ರಮ ಸ೦ಖ್ಯೆ ಇಂಗ್ಲೀಷ್ ಪದ
(English Word)
ಕನ್ನಡ ಪದ
(Kannada Word)
ಕನ್ನಡ ಅರ್ಥ
(Kannada Meaning)
ವಿಷಯ ವರ್ಗೀಕರಣ
(Word Subject)
ವ್ಯಾಕರಣ ವಿಶೇಷ
(Word Grammer)
ಕನ್ನಡ ಉಚ್ಚಾರಣೆ
(Kannada Pronunciation)
ಪರ್ಯಾಯ ಪದ
(Word Synonyms)
ಇಂಗ್ಲೀಷ್ ಅರ್ಥ
(English Meaning)
ಸಂಕ್ಷಿಪ್ತ ವಿವರಣೆ
(Short Description)
ದೀರ್ಘ ವಿವರಣೆ
(Long Description)
ಆಡಳಿತಾತ್ಮಕ ಪದ
(Administrative Word)
361 ಸೋಸು ಸೋಸುವುದು, ನಾಜೂಕಾದ ಪಾತ್ರೆ, ಗೊಂಬೆ, ಮೂರ್ತಿ ಇತ್ಯಾದಿಗಳನ್ನು ಮಾಡಲು ಜರಡಿಯಿಂದ ಮಣ್ಣನ್ನು ಸೋಸಿ ನಯವಾದ ಮಣ್ಣನ್ನು ತಯಾರಿಸುವರು. (ಕ್ರಿ)
362 ಹಂಚು ಓಡು, ಛಾವಣಿಗೆ ಹೊದಿಸುವ ಹಂಚು, ಅಧಿಕ ಮಳೆ ಬೀಳುವ ಪ್ರದೇಶಗಳಲ್ಲಿ ಮತ್ತು ಮಲೆನಾಡಿನಲ್ಲಿ ಹಂಚಿನ ಬಳಕೆ ಹೆಚ್ಚು ಒಡೆದ ಮಡಿಕೆ ಚೂರಿಗೂ ಕೂಡ ಹಂಚು ಎನ್ನುವರು. ಹಂಚಿನಲ್ಲಿ ನಾನಾ ವಿಧಿಗಳಿವೆ ಕೊರಡು ಹಂಚು, ಹರಿಹಂಚು, ದಂಬೆ ಹಂಚು, ಬೆಂಕ್ಚಿ ಹಂಚು ಇತ್ಯಾದಿ. "ಹಂಚಿನಿದಿರಲಿ ಹಲ್ಲು ತೆರದರೆ ಮಿಂಚುಕನ್ನಡಿಯಾಗಬಲ್ಲುದೆ?" (ಪ್ರಸನ್ನವೆಂಕಟದಾಸರು) ಹಂಚು ಕಾಣದವಳು ಕಂಚು ಕಂಡ್ರೆ ದಿನಕ್ಕೆ ಮೂರಾವರ್ತೆ ಬೆಳಗಿ ತಿಂದ್ಲು (ಗಾದೆ) ಪರ್ಯಾಯ ಪದ : "ದಂಬೆ ಹಂಚು ಮಾಳಿಗೆ ಹಂಚು" (ನಾ)
363 ಹಣತೆ ನೋಡಿ - ಪಣತಿ. (ನಾ)
364 ಹರವಿ ಪರವಿ, ಹರಿವಿ, ಹರಿಬಿ, ಹರುಬಿ, ಹರುವಿ, ಕುಡಿಯುವ ನೀರನ್ನು ಹಾಕಿಡಲು ಬಳಸುವ ದೊಡ್ಡ ಗಡಿಗೆ, ನೀರನ ಪಡಗ, ಹಂಡೆ ತರಹ ಇರುವುದು. "ದಂಡಿಗಂಜುವ ಭಂಟ ಒಡಕು ಹರವಿಯ ಕಂಠ" (ಕನಕದಾಸ) ಹರವಿಯ ಅನ್ನದಲ್ಲಿ ಒಂದಗಳು ನೋಡಿದರೆ ಸಾಕು (ಗಾದೆ) ಮುರುವಿಗೆ ಬಗೆ ಇಲ್ಲದಿದ್ರ ಹರವಿಗೂ ದರಿದ್ರವೆ (ಗಾದೆ) (ನಾ)
365 ಹರವೀಡು ದಪ್ಪ ಗಡಿಗೆ. ದಕ್ಷಿಣ ಕರ್ನಾಟಕದಲ್ಲಿ ಈ ಪದ ಹೆಚ್ಚಾಗಿ ಬಳಕೆಯಲ್ಲಿದೆ. (ನಾ)
366 ಹರಿಗಲ್ಲು ದೊಡ್ಡ ಮಡಿಕೆಗಳನ್ನು ತಟ್ಟುವ ಕಲ್ಲು (ನಾ)
367 ಹರಿನಾಳಿಗೆ ಮಣ್ಣಿನ ಕೊಳವೆ, ಪೈಪು, ಮಳೆಗಾಲದಲ್ಲಿ ಮಾಳಿಗೆಯ ನೀರು ಹರಿದು ಹೋಗಲು ಕುಂಬಿಯಲ್ಲಿ ಹರಿನಾಳಿಗೆಯನ್ನು ಕೂಡ್ರಿಸುವರು. ಇವು ಸುಮಾರು ಒಂದು ಮೀಟರದಷ್ಟು ಉದ್ದ ಇರುತ್ತವೆ. ಜೋಡು ಹರಿನಾಳಗೆ ಕೂಡ ಇಡುವರು. ಹಳ್ಳಿಗಳಲ್ಲಿ ಮಳೆ ಬಿದ್ದ ಪ್ರಮಾಣವನ್ನು ಹೇಳುವಾಗ 'ಮಳಿ ಹರಿ ನಾಳಿಗಿ ನೀರ ಬಿದ್ದಂಗ ಬಿತ್ತು' - ಎನ್ನುವರು. ಶಾನಬೋಗರ ಕುದುರೆ ನಿಂತು ನೀರು ಹೊಯ್ಯುತ್ತೆ (ಒಗಟು) (ನಾ)
368 ಹರಿವಾಣ ಅರಿವಾಣ, ಅಗಲವಾದ ತಟ್ಟೆ. ಪರಾತ ಚಿನ್ನದ ಹರಿವಾಣವಾದರೂ ಮಣ್ಣಿನ ಗೋಡೆಗೆ ಒರಗಬೇಕು (ಗಾದೆ) (ನಾ)
369 ಹಲ್ಲೆ ಕುಂಬಾರಗಿತ್ತಿಯರು ಕೈಯಿಂದ ಮಡಕೆ ಮಾಡುವಾಗ ಮಣ್ಣನ್ನು ಸುರುಳಿ ಮಾಡಿ, ತುಂಡು ತುಂಡು ಮಾಡಿಕೊಂಡು, ಒಂದೊಂದೆ ತುಂಡನ್ನು ಜಜ್ಜುವಕಲ್ಲಿನಿಂದ ಜಜ್ಜಿ ಅಗಲ ಮಾಡುವರು, ಇದು ರೊಟ್ಟಿಯ ಹಾಗೆ ದುಂಡಗಿರುವದು ಇದನ್ನೇ ಹಲ್ಲೆ ಎನ್ನುವರು, ಮಾಡುವ ಮಡಕೆಯ ಗಾತ್ರಕ್ಕನುಗುಣವಾಗಿ ಸಣ್ಣ ದೊಡ್ಡ ಹಲ್ಲಿ ಮಾಡಿಕೊಳ್ಳುವರು, ಅದನ್ನೇ ತೆಗೆದು ಅಟ್ಟಿಗೆ ಹಾಕಿ ಕೈಯಿಂದ ತೀಡುವರು. (ನಾ)
370 ಹವೆ ಗೂಡು ಆವಿಗೆಯಲ್ಲಿ ಮಡಕೆಗಳನ್ನಿಟ್ಟು ಸುಡುವಾಗ ಒಳಗಿನ ಹಬೆ ಹೊರಕ್ಕೆ ಹೋಗುವಂತೆ ಆವಿಗೆಯ ಮಧ್ಯದಲ್ಲಿ ಬಿಟ್ಟ ಚಿಕ್ಕ ಕಿಂಡಿ. (ನಾ)