A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 318

Backtrace:

File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 319

Backtrace:

File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 320

Backtrace:

File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler

File: /Appdata/padakanaja.karnataka.gov.in/index.php
Line: 318
Function: require_once

Padakanaja - Dictionary View
ಅನಿಸಿಕೆ

ಪದಕೋಶ: ನವಕರ್ನಾಟಕ ವಿಜ್ಞಾನ - ತಂತ್ರಜ್ಞಾನ ಪದಸಂಪದ | ಕನ್ನಡ-ಕನ್ನಡ-ಇಂಗ್ಲೀಷ್ |ಪ್ರಕಾಶಕರು - ನವಕರ್ನಾಟಕ ಪಬ್ಲಿಕೇಷನ್ಸ್‌ ಪ್ರೈವೇಟ್ ಲಿಮಿಟೆಡ್ (2012)

Show entries
ಕ್ರಮ ಸ೦ಖ್ಯೆ ಇಂಗ್ಲೀಷ್ ಪದ
(English Word)
ಕನ್ನಡ ಪದ
(Kannada Word)
ಕನ್ನಡ ಅರ್ಥ
(Kannada Meaning)
ವಿಷಯ ವರ್ಗೀಕರಣ
(Word Subject)
ವ್ಯಾಕರಣ ವಿಶೇಷ
(Word Grammer)
ಕನ್ನಡ ಉಚ್ಚಾರಣೆ
(Kannada Pronunciation)
ಪರ್ಯಾಯ ಪದ
(Word Synonyms)
ಇಂಗ್ಲೀಷ್ ಅರ್ಥ
(English Meaning)
ಸಂಕ್ಷಿಪ್ತ ವಿವರಣೆ
(Short Description)
ದೀರ್ಘ ವಿವರಣೆ
(Long Description)
ಆಡಳಿತಾತ್ಮಕ ಪದ
(Administrative Word)
11051 ಹ್ಯಾಪ್ಲೊಫೇಸ್ (ಜೀ) ಜೀವಿಯ ಜೀವನಚಕ್ರದಲ್ಲಿ ಕೋಶಬೀಜಗಳು ಹ್ಯಾಪ್‌ಲಾಯ್ಡ್ ಆಗಿರುವ (ಅಗುಣಿತವಾಗಿ ಇರುವ) ಘಟ್ಟ haplophase
11052 ಹ್ಯಾಬಿಟ್ (ಭೂವಿ) ಯಾವುದೇ ಖನಿಜದ ವಿಶಿಷ್ಟ ಸ್ಫಟಿಕರೂಪ ಅಥವಾ ರೂಪಗಳ ಸಂಯೋಜನೆ habit
11053 ಹ್ಯಾಮ್ (ಪ್ರಾ) ತೊಡೆಯ ಹಿಂಭಾಗ. ಹಂದಿ ತೊಡೆಯ ಮಾಂಸ. (ತಂ) ಹವ್ಯಾಸಿ ರೇಡಿಯೋ ನಿರ್ವಾಹಕರ ಒಂದು ಸಮುದಾಯದ ಹೆಸರು. ಅವರಿಗೆ ‘ಹ್ಯಾಮ್ಸ್’ ಎಂದು ಕರೆಯು ವುದುಂಟು. ಖಾಸಗಿಯಾಗಿ ರೇಡಿಯೋ ಪ್ರೇಷಕ ಮತ್ತು ಅಭಿಗ್ರಾಹಕಗಳನ್ನು ಉಪಯೋಗಿಸಿ ಅಂತರರಾಷ್ಟ್ರ ಮಟ್ಟದಲ್ಲೂ ಸ್ಥಳೀಯವಾಗಿಯೂ ಪರಸ್ಪರ ವಿಷಯ ವಿನಿಮಯ ಮಾಡಿ ಕೊಳ್ಳುತ್ತಾರೆ. ಪ್ರಪಂಚದಾದ್ಯಂತ ೩೦ ಲಕ್ಷ (ಭಾರತದಲ್ಲಿ ೧೫ ಸಾವಿರ) ಹ್ಯಾಮ್‌ಗಳಿದ್ದಾರೆ. ಭೂಕಂಪನ, ಸುನಾಮಿ, ಪ್ರವಾಹ, ಚಂಡಮಾರುತ ಮುಂತಾದ ನೈಸರ್ಗಿಕ ಘಟನೆಗಳ ಸಮಯದಲ್ಲಿ ತುರ್ತು ಸಂದೇಶ ರವಾನೆಗೆ ಈ ವ್ಯವಸ್ಥೆ ನೆರವಾಗುತ್ತದೆ. ಶ್ರೀಹರಿಕೋಟದಿಂದ ಇಸ್ರೋ ಉಡಾಯಿಸಿದ (೫-೫-೨೦೦೫) ‘ಹ್ಯಾಮ್‌ಸ್ಯಾಟ್’ ಉಪಗ್ರಹವು ಹ್ಯಾಮ್ ವ್ಯವಸ್ಥೆಗೆ ನೆರವಾಗುತ್ತಿದೆ ham
11054 ಹ್ಯಾಮಟಮ್ (ಪ್ರಾ) ಕೈ ಮತ್ತು ತೋಳುಗಳ ನಡುವಿನ ಅಥವಾ ಇತರ ಪ್ರಾಣಿಗಳಲ್ಲಿ ಅಂಥವೇ ಭಾಗಗಳ ನಡುವಿನ ಎಲುಬುಗಳಲ್ಲೊಂದು hamatum
11055 ಹ್ಯಾಮರ್ ಬ್ಲೋ (ತಂ) ಕೊಳವೆಯಲ್ಲಿ ದ್ರವದ ಪ್ರವಾಹಕ್ಕೆ ಹಠಾತ್ತನೆ ಅಡ್ಡಿ ಉಂಟಾದಾಗ ಅದರೊಂದಿಗೆ ಹರಿಯುತ್ತಿದ್ದ ಒತ್ತಡದ ಅಲೆ ಉಂಟುಮಾಡುವ ಶಬ್ದ hammer blow
11056 ಹ್ಯಾಮರ್ ಸ್ಕೇಲ್ (ತಂ) ಕಬ್ಬಿಣವನ್ನು ಕುಲುಮೆಯಲ್ಲಿ ಕಾಸಿದಾಗ ರೂಪುಗೊಳ್ಳುವ ಕಬ್ಬಿಣದ ಆಕ್ಸೈಡ್‌ನ ಪದರ ಅಥವಾ ಹುರುಪೆ hammer scale
11057 ಹ್ಯಾಲಾಯ್ಡ್ (ರ) ಅಡುಗೆ ಉಪ್ಪಿನಂಥ ಸಂಯೋಜನೆಯುಳ್ಳ ಲವಣ. ಹ್ಯಾಲೊಜೆನ್‌ನಂಥ ಅಥವಾ ಹ್ಯಾಲೊಜೆನ್‌ಜನ್ಯ ಸಂಯುಕ್ತ haloid
11058 ಹ್ಯಾಲಾಯ್ಡ್ ಆಮ್ಲಗಳು (ರ) ಹೈಡ್ರೊಜನ್ ಫ್ಲೂರೈಡ್, ಹೈಡ್ರೊಜನ್ ಕ್ಲೋರೈಡ್, ಹೈಡ್ರೊಜನ್ ಬ್ರೊಮೈಡ್ ಹಾಗೂ ಹೈಡ್ರೊಜನ್ ಅಯೊಡೈಡ್‌ಗಳನ್ನು ಒಳಗೊಂಡಿರುವ ಆಮ್ಲಗಳ ಒಂದು ವೃಂದ haloid acids
11059 ಹ್ಯಾಲಿಟೋಸಿಸ್ (ವೈ) ಅತಿ ಕೆಟ್ಟನಾತದ ಉಸಿರು. ನಾರುಸಿರು, ದುರ್ಗಂಧ ಶ್ವಾಸ halitosis
11060 ಹ್ಯಾಲೈಟ್ (ರ) ಕಲ್ಲುಪ್ಪು. ಸೈಂಧವ ಲವಣ. ನಿಸರ್ಗದಲ್ಲಿ ಸಹಜವಾಗಿ ಲಭ್ಯವಿರುವ ಸೋಡಿಯಮ್ ಕ್ಲೋರೈಡ್ (ಸಾಮಾನ್ಯ ಉಪ್ಪು - NaCl). ಶುದ್ಧವಾಗಿದ್ದಾಗ ವರ್ಣರಹಿತ ಅಥವಾ ಬಿಳಿ (ಕೆಲವು ವೇಳೆ ನೀಲಿ). ಕಲ್ಮಷಗಳು ಅದಕ್ಕೆ ಬೂದು, ಪಾಟಲ, ಕೆಂಪು ಅಥವಾ ಕಂದುಬಣ್ಣ ನೀಡಬಹುದು. ಕಲ್ಲುಪ್ಪು ಸಾಮಾನ್ಯವಾಗಿ ಅನ್‌ಹೈಡ್ರೈಟ್ ಹಾಗೂ ಜಿಪ್ಸಮ್‌ಗಳೊಂದಿಗೆ ದೊರಕುತ್ತದೆ. ನೋಡಿ: ಸೋಡಿಯಮ್ ಕ್ಲೋರೈಡ್ halite