A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 318

Backtrace:

File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 319

Backtrace:

File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 320

Backtrace:

File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler

File: /Appdata/padakanaja.karnataka.gov.in/index.php
Line: 318
Function: require_once

Padakanaja - Dictionary View
ಅನಿಸಿಕೆ

ಪದಕೋಶ: ಶಾಂಕರವೇದಾಂತ ನಿಘಂಟು | ಕನ್ನಡ-ಕನ್ನಡ | ಪ್ರಕಾಶಕರು - ಅಧ್ಯಾತ್ಮ ಪ್ರಕಾಶಕಾರ್ಯಾಲಯ (2014)

Show entries
ಕ್ರಮ ಸ೦ಖ್ಯೆ ಇಂಗ್ಲೀಷ್ ಪದ
(English Word)
ಕನ್ನಡ ಪದ
(Kannada Word)
ಕನ್ನಡ ಅರ್ಥ
(Kannada Meaning)
ವಿಷಯ ವರ್ಗೀಕರಣ
(Word Subject)
ವ್ಯಾಕರಣ ವಿಶೇಷ
(Word Grammer)
ಕನ್ನಡ ಉಚ್ಚಾರಣೆ
(Kannada Pronunciation)
ಪರ್ಯಾಯ ಪದ
(Word Synonyms)
ಇಂಗ್ಲೀಷ್ ಅರ್ಥ
(English Meaning)
ಸಂಕ್ಷಿಪ್ತ ವಿವರಣೆ
(Short Description)
ದೀರ್ಘ ವಿವರಣೆ
(Long Description)
ಆಡಳಿತಾತ್ಮಕ ಪದ
(Administrative Word)
1 ಅಕ್ಷರಮ್‌ ನಿರುಪಾಧಿಕವಾದ ಪರಬ್ರಹ್ಮ (ಭಗವದ್ಗೀತಾಭಾಷ್ಯ. ೭-೩) ಇದರಲ್ಲಿ ಯಾವ ವಿಶೇಷವೂ ಇಲ್ಲದ್ದರಿಂದ ಇದನ್ನು ಅಸ್ಥೂಲ, ಅನಣು-ಎಂದು ಮುಂತಾಗಿ (ಬೃಹದಾರಣ್ಯಕೋಪನಿಷತ್ ಭಾಷ್ಯ. ೩-೮-೮) ರಲ್ಲಿ ವರ್ಣಿಸಿರುತ್ತದೆ. ಇದು ಯಾವ ಇಂದ್ರಿಯಕ್ಕೂ ಗೋಚರವಿಲ್ಲದಿದ್ದರೂ ಎಲ್ಲರಿಗೂ ಆತ್ಮನಾಗಿರುವದರಿಂದ ವಿಶೇಷಗಳನ್ನು ಅಲ್ಲಗಳೆದರೆ ಇದನ್ನು ನಾನೇ ಎಂದು ಅರಿತುಕೊಳ್ಳಬಹುದು. (ಮುಂಡಕೋಪನಿಷತ್. ಭಾಷ್ಯ. ೧-೧-೬) ಇದರ ಆಳ್ವಿಕೆಗೆ ಒಳಪಟ್ಟು ಜಗತ್ತಿನ ವ್ಯವಹಾರವು ನಿಯಮದಿಂದ ಸಾಗಿರುತ್ತದೆ (ಬೃಹದಾರಣ್ಯಕೋಪನಿಷತ್ ಭಾಷ್ಯ. ೩-೮-೯) ಇದನ್ನು ಅರಿಯದ್ದರಿಂದ ಸಂಸಾರವೂ, ಅರಿತುಕೊಳ್ಳುವದರಿಂದ ಮುಕ್ತಿಯೂ ಆಗುವವು (ಬೃಹದಾರಣ್ಯಕೋಪನಿಷತ್ ಭಾಷ್ಯ. ೩-೮-೧೧) ಇದನ್ನು ತಿಳಿಯುವ ವಿದ್ಯೆಗೆ 'ಪರವಿದ್ಯೆ' ಎಂದು ಹೆಸರು. ಅಕ್ಷರೋಪಾಸಕರು ಆ ಪರಬ್ರಹ್ಮವನ್ನೇ ಸೇರುವರು; ಆದರೆ ಸೋಪಾಧಿಕನಾದ ಈಶ್ವರನ ಉಪಾಸಕರಿಗಿಂತಲೂ ಅವರಿಗೆ ಕ್ಲೇಶವು ಹೆಚ್ಚು (ಭಗವದ್ಗೀತಾಭಾಷ್ಯ. ೧೨-೫).
2 ಅಕ್ಷರಮ್‌೨ ನಾಮರೂಪಗಳ ಬೀಜವಾಗಿರುವ ಅವ್ಯಾಕೃತ (ಮುಂಡಕೋಪನಿಷತ್. ಭಾಷ್ಯ. ೨-೧-೨) ಇದರಿಂದ ಹುಟ್ಟುವ ಕಾರ್ಯವೆಲ್ಲವೂ ನಾಶವಾಗುವದರಿಂದ ಕ್ಷರವು. ಕ್ಷರವು ನಾಶವಾದರೂ ಇದು ನಾಶವಾಗುವದಿಲ್ಲವಾದ್ದರಿಂದಲೂ (ಭಗವದ್ಗೀತಾಭಾಷ್ಯ. ೧೫-೧೬), ಕಾಲತ್ರಯವನ್ನೂ ಮೀರಿರುವದರಿಂದಲೂ; (ಬೃಹದಾರಣ್ಯಕೋಪನಿಷತ್ಭಾಷ್ಯ. ೩-೮-೭, ಮುಂಡಕೋಪನಿಷತ್. ಭಾಷ್ಯ. ೧) ಇದು ‘ಅಕ್ಷರ'ವೆನಿಸುತ್ತದೆ. ಇದೇ ಪರಮಾತ್ಮನ ಮಾಯಾಶಕ್ತಿ (ಭಗವದ್ಗೀತಾಭಾಷ್ಯ. ೧೫-೧೬) ಇದು ಅಕ್ಷರವೆಂಬ ಪರಬ್ರಹ್ಮದಲ್ಲಿ ಓತಪ್ರೋತವಾಗಿರುತ್ತದೆ. (ಮುಂಡಕೋಪನಿಷತ್. ಭಾಷ್ಯ. ೨-೧-೨). ಇದಕ್ಕಿಂತಲೂ ಹೆಚ್ಚಿನದಾದ್ದರಿಂದ ಬ್ರಹ್ಮಕ್ಕೆ ಮುಖ್ಯಾರ್ಥದಲ್ಲಿ ಅಕ್ಷರವೆಂದು ಹೆಸರು. (ಮುಂಡಕೋಪನಿಷತ್. ಭಾಷ್ಯ. -೧-೨, ಭಗವದ್ಗೀತಾಭಾಷ್ಯ. ೮-೨೧)
3 ಅಕ್ಷರಮ್‌೩ ಓಂಕಾರವೆಂಬ ಅಕ್ಷರವು; ಬ್ರಹ್ಮದ ಹೆಸರು (ಭಗವದ್ಗೀತಾಭಾಷ್ಯ. ೮-೧೩, ಬ್ರಹ್ಮಸೂತ್ರ ಭಾಷ್ಯ. ೧-೩-೧೦).
4 ಅಜಾತಿ ಅಕ್ಷರವು ಅಥವಾ ಪರಬ್ರಹ್ಮವು ಹುಟ್ಟಿಲ್ಲದ್ದು. ಇದಕ್ಕೆ ಅವಯವ ಗಳಿಲ್ಲದ್ದರಿಂದ ಅವಯವವೈಷಮ್ಯದಿಂದ ಪರಿಣಾಮವಾಗಿ ಹುಟ್ಟುವ ಸಂಭವವೇ ಇಲ್ಲ. (ಮಾಂಡೂಕ್ಯಕಾರಿಕಾಭಾಷ್ಯ. ೩-೨). ಆಕಾಶವು ಘಟವೇ ಮುಂತಾದವುಗಳ ಹುಟ್ಟುವಿಕೆ ಯಿಂದ ಘಟಾಕಾಶವೇ ಮುಂತಾದ ರೂಪಗಳಿಂದ ಹುಟ್ಟುವಂತೆ ತೋರುವ ಹಾಗೆ ಪರಮಾತ್ಮನೂ ಜೀವರೂಪದಿಂದ ಹುಟ್ಟುವಂತೆ ತೋರುತ್ತಾನೆ. ಆಕಾಶವು ಪೃಥಿವ್ಯಾದಿಗಳ ರೂಪದಿಂದ ಹುಟ್ಟಿ ಘಟವಾಗುವಂತೆ ತೋರಿದರೂ ನಿಜವಾಗಿ ಆಕಾಶವೇ ಆಗಿರುವಂತೆ ಆತ್ಮನೂ ಶರೀರೇಂದ್ರಿಯಗಳ ಗುಂಪಿನ ರೂಪದಿಂದ ತೋರಿಕೊಳ್ಳುತ್ತಾನೆ. (ಮಾಂಡೂಕ್ಯಕಾರಿಕಾಭಾಷ್ಯ. ೩-೩). ಹುಟ್ಟುವ ಸ್ವಭಾವವೇ ಇಲ್ಲದ ಬ್ರಹ್ಮಕ್ಕೆ ನಿಜವಾಗಿ ಹುಟ್ಟು ಇದೆ ಎಂದು ಕೆಲವರು ವಾದಿಗಳು ಹೇಳುವದುಂಟು; ಆದರೆ ಹುಟ್ಟಿಲ್ಲದ್ದು ಅಮೃತವು, ಹುಟ್ಟುವದು ಮರ್ತ್ಯವು. ಆದ್ದರಿಂದ ಅವರ ಮತದಲ್ಲಿ ಅಮೃತಸ್ವಭಾವವಾಗಿರುವ ಬ್ರಹ್ಮವು ಮರ್ತ್ಯವಾಗುವುದೆಂದು ಹೇಳಿದಂತೆ ಆಗುವದು. ಅದು ಎಂದಿಗೂ ಯುಕ್ತವಲ್ಲ. (ಮಾಂಡೂಕ್ಯಕಾರಿಕಾಭಾಷ್ಯ. ೩-೨೦, ೪-೯, ೪-೨೯. )
5 ಅಜ್ಞಾನಮ್‌ ಅರಿಯದಿರುವದು. ಅಗ್ರಹಣ (ಮಾಂಡೂಕ್ಯಕಾರಿಕಾಭಾಷ್ಯ. ೧-೧೩) ಅಪ್ರತಿಬೋಧ (ಮಾಂಡೂಕ್ಯಕಾರಿಕಾಭಾಷ್ಯ ೧-೧೩) ಅಪ್ರಬೋಧ (ಬ್ರಹ್ಮಸೂತ್ರಭಾಷ್ಯ. ೪-೧-೩), ಅವಿದ್ಯಾ (ಮಾಂಡೂಕ್ಯಕಾರಿಕಾಭಾಷ್ಯ. ೩-೩೬) ಅನಿಶ್ಚಯ (ಮಾಂಡೂಕ್ಯಕಾರಿಕಾಭಾಷ್ಯ. ೨-೧೭),. ಅನವಗಮ (ಬೃಹದಾರಣ್ಯಕೋಪನಿಷತ್ಭಾಷ್ಯ. ೧-೪-೧೦)--ಮುಂತಾದ ಶಬ್ದಗಳೆಲ್ಲವನ್ನೂ ಒಂದೇ ಅರ್ಥದಲ್ಲಿ ಭಾಷ್ಯಕಾರರು ಉಪಯೋಗಿಸಿರುತ್ತಾರೆ. ಈ ಶಬ್ದಗಳಿಗೆ ಮುಖ್ಯಾರ್ಥವು ಅರಿಯದಿರುವದು ಎಂದು. ವೇದಾಂತಶಾಸ್ತ್ರದಲ್ಲಿ ಬ್ರಹ್ಮವನ್ನು ಅರಿಯದಿರುವದೇ ಅಜ್ಞಾನವು. ಈ ಶಬ್ದವನ್ನು ಜ್ಞಾನಕ್ಕೆ ಬೇರೆಯಾದದ್ದು, ವಿರುದ್ಧವಾದದ್ದು-ಎಂಬ ಅರ್ಥ ದಲ್ಲಿಯೂ ಉಪಯೋಗಿಸುವದುಂಟು. ಆಗ ಅಜ್ಞಾನವೆಂದರೆ ತಪ್ಪು ತಿಳಿವಳಿಕೆ. ಆತ್ಮಾನಾತ್ಮಗಳನ್ನು ಒಂದನ್ನು ಮತ್ತೊಂದು ತಿಳಿಯುವದು, ಒಂದರ ಧರ್ಮಗಳನ್ನು ಮತ್ತೊಂದರವೆಂದು ಭಾವಿಸುವದು, ಅವಿದ್ಯೆ ಎಂದು ಸೂತ್ರಭಾಷ್ಯದ ಉಪೋದ್ಘಾತದಲ್ಲಿ ಬರೆದಿರುತ್ತದೆ. ಈ ಅರ್ಥದಲ್ಲಿ ಇದನ್ನು ಅಧ್ಯಾಸವೆಂದು ಶಂಕರಾಚಾರ್ಯರು ಕರೆದಿರುತ್ತಾರೆ. ಅಧ್ಯಾಸಶಬ್ದದ ವಿವರಣೆಯಲ್ಲಿ ಈ ವಿಷಯವನ್ನು ಮತ್ತೆ ತೆಗೆದು ಕೊಳ್ಳುವೆವು. ಬ್ರಹ್ಮವು ನಿಜವಾಗಿ ಯಾವ ವಿಕಾರವನ್ನೂ ಹೊಂದಿಲ್ಲವಾದರೂ ಅದರ ನಿಜಸ್ವರೂಪವನ್ನು ಅರಿತುಕೊಳ್ಳದೆ ಇರುವುದರಿಂದ ಅದನ್ನು ಪ್ರಪಂಚವೆಂದು ಜನರು ಕಲ್ಪಿಸಿಕೊಂಡಿರುತ್ತಾರೆ. ನಸುಗತ್ತಲೆಯಲ್ಲಿ ಕಾಣುವ ಹಗ್ಗವನ್ನು ಹಗ್ಗವೇ ಎಂದು ನಿಶ್ಚಯಿಸಿಕೊಳ್ಳದೆ ಇರುವದರಿಂದ ಅದು ಹಾವು, ಕೋಲು, ನೀರಿನಕೋಡಿ ಎಂದು ಮುಂತಾಗಿ ಜನರು ಬಗೆಬಗೆಯಾಗಿ ಕಲ್ಪಿಸಿಕೊಳ್ಳುವಂತೆ ಅಜ್ಞಾನದ ಮಬ್ಬಿನಿಂದ ಎಲ್ಲರ ಆತ್ಮನಾದ ಬ್ರಹ್ಮವನ್ನೇ ಚೇತನಾಚೇತನರೂಪವಾದ ಜಗತ್ತಿನ ರೂಪದಲ್ಲಿ ಕಲ್ಪಿಸುತ್ತಿರುವರು ಎಂಬುದೇ ಉಪನಿಷತ್ಸಿದ್ಧಾಂತವು (ಮಾಂಡೂಕ್ಯಕಾರಿಕಾಭಾಷ್ಯ. ೨-೧೭).
6 ಅಧಿಷ್ಠಾನಮ್‌ ಇಚ್ಛೆ, ದ್ವೇಷ, ಸುಖ, ದುಃಖ, ಜ್ಞಾನ- ಮುಂತಾದವುಗಳು ಹೊರತೋರಿಕೊಳ್ಳುವದಕ್ಕೆ ಆಶ್ರಯವಾದ ಶರೀರ. ಭಗವದ್ಗೀತೆಯ ಭಾಷ್ಯದಲ್ಲಿಯೂ (೧೮-೧೪) ಮಿಕ್ಕ ಭಾಷ್ಯಗಳಲ್ಲಿಯೂ ಈ ಅರ್ಥದಲ್ಲಿಯೇ ಅಧಿಷ್ಠಾನ ಶಬ್ದವನ್ನುಪಯೋಗಿಸಿದೆ. ಯಾವದರಲ್ಲಿ ಭ್ರಾಂತಿಯಿಂದ ತೋರಿಕೆಯ ವಸ್ತುಗಳನ್ನು ಆರೋಪಿಸುವರೋ ಅಂಥ ವಸ್ತು; ಹಾವಿಗೆ ಹಗ್ಗವೂ ಬೆಳ್ಳಿಗೆ ಕಪ್ಪೆಯ ಚಿಪ್ಪೂ ಅಧಿಷ್ಠಾನವು ಎಂಬರ್ಥದಲ್ಲಿಯೂ ಈಚಿನ ವೇದಾಂತಿಗಳು ಈ ಶಬ್ದವನ್ನು ಉಪಯೋಗಿಸುತ್ತಾರೆ; ಆದರೆ ಭಾಷ್ಯದಲ್ಲಿ ಈ ಅರ್ಥದಲ್ಲಿ ಪ್ರಯೋಗವಿಲ್ಲ.
7 ಅಧ್ಯಾಸಃ, ಅಧ್ಯಾರೋಪಃ ಒಂದು ವಸ್ತುವಿನಲ್ಲಿಲ್ಲದ ಸ್ವರೂಪವನ್ನು ಅದರಲ್ಲಿ ಹುಟ್ಟುಗಟ್ಟುವ ತಪ್ಪು ತಿಳಿವಳಿಕೆ. ಶರೀರವೇ ನಾನೆಂಬುದು ಅಧ್ಯಾಸ, ಮಿಥ್ಯಾಜ್ಞಾನ ಎಂದು ತಾರ್ಕಿಕರೇ ಮೊದಲಾದವರೂ ಒಪ್ಪಿದ್ದರು. ಆದರೆ ಶರೀರಕ್ಕಿಂತ ಬೇರೆಯಾಗಿ "ನಾನು'' ಎಂದು ಅರಿಯಬರುವ ಆತ್ಮಸ್ವರೂಪವೂ ನಿಜವಾಗಿರುವದಲ್ಲ, ಅದೂ ಆತ್ಮನಲ್ಲಿ ಕಲ್ಪಿತವಾಗಿರುವ ರೂಪವೇ ಎಂದು ಶಂಕರಾಚಾರ್ಯರು ತಮ್ಮ ಸೂತ್ರ ಭಾಷ್ಯದ ಮುನ್ನುಡಿಯಲ್ಲಿ ತಿಳಿಸಿರುತ್ತಾರೆ. ನಾನು, ನೀನು- ಎಂದು ವಿಂಗಡಿಸುವದಕ್ಕೆ ಬಾರದ ಶುದ್ಧವಾದ ಆತ್ಮನಲ್ಲಿ ಅನಾತ್ಮವಾದ ಅಂತಃಕರಣವೇ ಮುಂತಾದವುಗಳನ್ನೂ ಅವುಗಳಲ್ಲಿ ಆತ್ಮನನ್ನೂ ಭ್ರಾಂತಿಯಿಂದ ಹುಟ್ಟುಗಟ್ಟುವದೇ ಎಲ್ಲಕ್ಕೂ ಮೂಲವಾದ ಅಧ್ಯಾಸವು ಎಂಬುದು ಶಾಂಕರಾದ್ವೈತದ ಸಿದ್ಧಾಂತವು. ಈ ಅಧ್ಯಾಸಕ್ಕೆ ’ಅವಿದ್ಯೆ' ಎಂಬ ಹೆಸರೂ ಉಂಟು. ಅಧ್ಯಾಸವೆಂದರೆ ’ಅದಲ್ಲದ್ದರಲ್ಲಿ ಅದೆಂಬ ಬುದ್ಧಿ’ ಎಂದು ಭಾಷ್ಯಕಾರರು ಸೂತ್ರಭಾಷ್ಯದಲ್ಲಿ ಕಂಠೋಕ್ತವಾಗಿ ಹೇಳಿರುತ್ತಾರೆ. ಆದ್ದರಿಂದ ತಪ್ಪಾದ ತಿಳಿವಳಿಕೆಯಿಂದ ಒಂದು ವಸ್ತುವನ್ನು ಮತ್ತೊಂದೆಂದು ಭಾವಿಸುವದೇ ಅಧ್ಯಾಸವು. ವಸ್ತುವಿನಲ್ಲಿ ಹುಟ್ಟುಗಟ್ಟಿದ ಹುಸಿತೋರಿಕೆಯ ವಸ್ತುವನ್ನು ಅರ್ಥಾಧ್ಯಾಸ ಎಂದು ಕರೆಯುವ ವಾಡಿಕೆಯು ವ್ಯಾಖ್ಯಾನಗಳಲ್ಲಿ ಕಂಡುಬರುತ್ತದೆ; ಆದರೆ ಭಾಷ್ಯದಲ್ಲಿ ಆ ಶಬ್ದವನ್ನು ಬಳಸಿರುವದಿಲ್ಲ. ಆತ್ಮನ ದೇಹಾದಿಗಳನ್ನೂ ಆತ್ಮನ ರೂಪವೆಂದೇ ಕಲ್ಪಿಸಿಕೊಂಡು ಆ ಕಲ್ಪಿತ ರೂಪವನ್ನೇ ಆತ್ಮಸ್ವರೂಪವನ್ನು ತಿಳಿಸುವದಕ್ಕೆ ವೇದಾಂತದಲ್ಲಿ ಉಪಾಯವಾಗಿ ಮಾಡಿಕೊಳ್ಳುವದುಂಟು; ಈ ಕಲ್ಪನೆಗೂ ಅಧ್ಯಾರೋಪ ಎಂಬ ಹೆಸರನ್ನು ಉಪಯೋಗಿಸುತ್ತಾರೆ. ಆತ್ಮಸ್ಪರೂಪವನ್ನು ತಿಳಿಸಿಕೊಟ್ಟ ಬಳಿಕ ಇಂಥ ಕಲ್ಪಿತ ರೂಪವನ್ನು ಅಲ್ಲಗಳೆಯುವದಕ್ಕೆ ’ಅಪವಾದ’ ಎಂಬ ಹೆಸರನ್ನು ಉಪಯೋಗಿಸುವರು. ಆಚಾರ್ಯರು ’ಅಧ್ಯಾರೋಪಾಪವಾದಾಭ್ಯಾಂ ನಿಷ್ಪ್ರಪಂಚಂ ಪ್ರಪಂಚ್ಯತೇ’ ಎಂಬ ಸಂಪ್ರದಾಯವಿದರ ಉಕ್ತಿಯನ್ನು ಗೀತಾಭಾಷ್ಯ (೧೩-೧೩)ದಲ್ಲಿ ಉದಾಹರಿಸಿರುತ್ತಾರೆ. ಇಲ್ಲಿಯೂ ಅಧ್ಯಾರೋಪವೆಂದರೆ ಹುಟ್ಟುಗಟ್ಟುವಿಕೆ ಎಂದೇ ಅರ್ಥವಾದರೂ ಉಪದೇಶಕ್ಕಾಗಿ ಹುಟ್ಟುಗಟ್ಟಿದವರು ಜ್ಞಾನಿಗಳಾದ್ದರಿಂದ ಈ ಅಧ್ಯಾರೋಪವು ಭ್ರಾಂತಿಯಲ್ಲ. ಶ್ರುತಿಯಲ್ಲಿ ’ನಾಮವನ್ನು ಬ್ರಹ್ಮವೆಂದು ಉಪಾಸನೆಮಾಡಬೇಕು' ಎಂದು ಮುಂತಾಗಿ ಉಪದೇಶಿಸಿರುತ್ತದೆ. ಪ್ರತಿಮೆಯೇ ಮುಂತಾದವುಗಳನ್ನು ವಿಷ್ಣುಮುಂತಾದ ದೇವತೆಗಳೆಂದು ಉಪಾಸನೆ ಮಾಡಬೇಕೆಂದು ಪುರಾಣಗಳಲ್ಲಿ ಹೇಳಿರುತ್ತದೆ. ಅದನ್ನೂ ’ಅಧ್ಯಾಸ’ ಎಂದು ಕರೆಯುವದುಂಟು. ಆದರೆ ಇದೂ ಶಾಸ್ತ್ರದಲ್ಲಿ ಹೇಳಿದ್ದಾದ್ದರಿಂದ ಭ್ರಾಂತಿಜ್ಞಾನವಲ್ಲ.
8 ಅನಿರ್ವಚನೀಯ ಪರಮಾತ್ಮನಲ್ಲಿ ಕಲ್ಪಿತವಾಗಿರುವ ನಾಮರೂಪಗಳು ಆತನ ಸ್ವರೂಪವೆಂದಾಗಲಿ ಆತನಿಗಿಂತ ಬೇರೆಯೊಂದಾಗಲಿ ನಿರ್ವಚನಮಾಡಿ ಹೇಳುವದಕ್ಕೆ ಆಗುವಂತಿಲ್ಲವೆಂದು ’ತತ್ತ್ವಾನ್ಯತ್ವಾಭ್ಯಾಮನಿರ್ವಚನೀಯೇ' ಎಂಬ ಪದದಿಂದ ಕರೆದಿರುವದು ಅಲ್ಲಲ್ಲಿ (ಬ್ರಹ್ಮಸೂತ್ರಭಾಷ್ಯ. ೧-೧-೫, ೨-೧-೧೪, ಬೃಹದಾರಣ್ಯಕೋಪನಿಷತ್ ಭಾಷ್ಯ. ೨-೪-೧೦) ಭಾಷ್ಯದಲ್ಲಿ ಕಂಡುಬರುತ್ತದೆ. ವ್ಯವಹಾರದೃಷ್ಟಿಯಿಂದ ಹೀಗೆ ಇವು ಅನಿರ್ವಚನೀಯವಾದರೂ ಪರಮಾರ್ಥದೃಷ್ಟಿಯಿಂದ ನೋಡಿದರೆ ಆತ್ಮಸ್ವರೂಪವೇ ಆಗಿರುತ್ತವೆ ಎಂದು ಐತರೇಯ, ಬೃಹದಾರಣ್ಯಕ, ಛಾಂದೋಗ್ಯೋಪನಿಷತ್ದೋಗ್ಯ ಭಾಷ್ಯಗಳಲ್ಲಿ ಆಚಾರ್ಯರು ಸಷ್ಟಪಡಿಸಿರುತ್ತಾರೆ. ವ್ಯಾಖ್ಯಾನಗಳಲ್ಲಿ ತತ್ತ್ವಾನ್ಯತ್ವಾಭ್ಯಾಮನಿರ್ವಚನೀಯ ಎಂಬ ಮಾತನ್ನು ಕಾಣುವದು ಅಪೂರ್ವ. ’ಅನಿರ್ವಚನೀಯ’ ವೆಂದರೆ ಸತ್ತಲ್ಲದ, ಅಸತ್ತಲ್ಲದ, ಸದಸತ್ತಲ್ಲದ; ತನ್ನ ಅಧಿಷ್ಠಾನಕ್ಕಿಂತ ಭಿನ್ನವಲ್ಲದ, ಅಭಿನ್ನವಲ್ಲದ, ಭಿನ್ನಾಭಿನ್ನವಲ್ಲದ; ಸಾಂಶವಲ್ಲದ, ನಿರಂಶವಲ್ಲದ, ಸಾಂಶನಿರಂಶವಲ್ಲದ-ಹುಸಿತೋರಿಕೆಯ ವಸ್ತು. ಭ್ರಾಂತಿಯ ಕಾಲದಲ್ಲಿ ಅದು ಅವಿದ್ಯೆಯ ಪರಿಣಾಮವಾಗಿ ಹುಟ್ಟಿ ಭ್ರಾಂತಿ ತೊಲಗುತ್ತಲೂ ನಾಶವಾಗುತ್ತದೆ. ಪ್ರಪಂಚವು ಬ್ರಹ್ಮದಲ್ಲಿ ಮೂಲಾವಿದ್ಯೆಯೆಂಬ ಶಕ್ತಿಯ ಪರಿಣಾಮವಾಗಿ ಹುಟ್ಟಿಕೊಂಡಿರುತ್ತದೆ; ಕಪ್ಪೆಯ ಚಿಪ್ಪಿನಲ್ಲಿ ಹುಸಿ ಬೆಳ್ಳಿಯು ತೂಲಾವಿದ್ಯೆಯೆಂಬ ಬಿಡಿಯಾದ ಅವಿದ್ಯೆಯ ಪರಿಣಾಮವಾಗಿ ಹುಟ್ಟಿರುತ್ತದೆ- ಎಂದು ವ್ಯಾಖ್ಯಾನಕಾರರ ಹೇಳಿಕೆ. ಈ ಅಭಿಪ್ರಾಯವು ಭಾಷ್ಯದಲ್ಲಿ ಎಲ್ಲಿಯೂ ಇಲ್ಲ. ’ಬೆಳ್ಳಿ ಎಂದು ಸುಮ್ಮನೆ ಭಾವಿಸುತ್ತಾನೆಯೇ 'ಹೊರತು ನಿಜವಾಗಿ ಬೆಳ್ಳಿಯು ಅಲ್ಲಿರುವದಿಲ್ಲ' ಎಂದು (ಬ್ರಹ್ಮಸೂತ್ರ. ಭಾಷ್ಯ. ೪-೧-೫) ಆಚಾರ್ಯರು ಬರೆದಿರುತ್ತಾರೆ.
9 ಅನುಬೋಧಃ ಶಾಸ್ತ್ರಾಚಾರ್ಯರ ಉಪದೇಶವನ್ನು ಅನುಸರಿಸಿ ಅರಿತು ಕೊಳ್ಳುವದು. (ಮಾಂಡೂಕ್ಯಕಾರಿಕಾಭಾಷ್ಯ. ೩-೩೨). ಶಾಸ್ತ್ರದಿಂದಾದ ತಿಳಿವಳಿಕೆ, ಗುರುಗಳಿಂದಾದ ತಿಳಿವಳಿಕೆ ಮತ್ತು ತನ್ನ ಅನುಭವ- ಈ ಮೂರೂ ಒಂದಾಗಬೇಕೆಂಬ ಅಭಿಪ್ರಾಯವನ್ನು ಆಚಾರ್ಯರು ಅನುಬೋಧ, ಅನುದರ್ಶನ-ಮುಂತಾದ ಶಬ್ದಗಳಲ್ಲಿರುವ ’ಅನು' ಎಂಬ ಉಪಸರ್ಗದ ಅರ್ಥಸ್ವಾರಸ್ಯವನ್ನು ತಿಳಿಸುವದರ ಮೂಲಕ ವಿವರಿಸಿರುತ್ತಾರೆ. ಭವದ್ಗೀತಾಭಾಷ್ಯ. ೧೩-೩೦, ಛಾಂದೋಗ್ಯೋಪನಿಷತ್ದೋಗ್ಯೋಪನಿಷತ್. ಭಾಷ್ಯ. ೮-೨-೬,ಕಠೋಪನಿಷತ್. ಭಾಷ್ಯ. ೨-೫-೧೨.
10 ಅನುಭವಃ ಬ್ರಹ್ಮವಿದ್ಯೆಯಲ್ಲಿ ಶ್ರುತ್ಯಾದಿಗಳಂತೆ ಅನುಭವಾದಿಗಳೂ ಪ್ರಮಾಣವಾಗಿರುವವು; ಏಕೆಂದರೆ ಬ್ರಹ್ಮವಿದ್ಯೆಯು ಭೂತವಸ್ತುವಿಷಯವಾಗಿದೆ ಮತ್ತು ಅನುಭವದಲ್ಲಿಯೇ ಕೊನೆಕಾಣಬೇಕಾಗಿದೆ-(ಬ್ರಹ್ಮಸೂತ್ರ. ಭಾಷ್ಯ. ೧-೧-೨) ಎಂದು ಆಚಾರ್ಯರು ಬರೆದಿರುತ್ತಾರೆ. ಈ ಅನುಭವವು ಪ್ರತ್ಯಕ್ಷಾನುಮಾನಗಳಿಂದಾಗುವ ಜ್ಞಾನಕ್ಕಿಂದ ಬೇರೆ (ಬೃಹದಾರಣ್ಯಕಭಾಷ್ಯ ಸಂಬಂಧ ಭಾಷ್ಯ) ಶಾಸ್ತ್ರಾಚಾರ್ಯರ ಉಪದೇಶದಿಂದ ಇದು ಆಗುವದು. ’ಅನುಬೋಧ' ಎಂಬ ಶಬ್ದವನ್ನು ನೋಡಿ.