A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 318

Backtrace:

File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 319

Backtrace:

File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 320

Backtrace:

File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler

File: /Appdata/padakanaja.karnataka.gov.in/index.php
Line: 318
Function: require_once

Padakanaja - Dictionary View
ಅನಿಸಿಕೆ

ಪದಕೋಶ: ಶಾಂಕರವೇದಾಂತ ನಿಘಂಟು | ಕನ್ನಡ-ಕನ್ನಡ | ಪ್ರಕಾಶಕರು - ಅಧ್ಯಾತ್ಮ ಪ್ರಕಾಶಕಾರ್ಯಾಲಯ (2014)

Show entries
ಕ್ರಮ ಸ೦ಖ್ಯೆ ಇಂಗ್ಲೀಷ್ ಪದ
(English Word)
ಕನ್ನಡ ಪದ
(Kannada Word)
ಕನ್ನಡ ಅರ್ಥ
(Kannada Meaning)
ವಿಷಯ ವರ್ಗೀಕರಣ
(Word Subject)
ವ್ಯಾಕರಣ ವಿಶೇಷ
(Word Grammer)
ಕನ್ನಡ ಉಚ್ಚಾರಣೆ
(Kannada Pronunciation)
ಪರ್ಯಾಯ ಪದ
(Word Synonyms)
ಇಂಗ್ಲೀಷ್ ಅರ್ಥ
(English Meaning)
ಸಂಕ್ಷಿಪ್ತ ವಿವರಣೆ
(Short Description)
ದೀರ್ಘ ವಿವರಣೆ
(Long Description)
ಆಡಳಿತಾತ್ಮಕ ಪದ
(Administrative Word)
11 ಅನುಮಾನಮ್‌ ಪ್ರತ್ಯಕ್ಷವಾದ ಗುರುತಿನಿಂದ ನಿಶ್ಚಯಿಸುವದು; ಇದನ್ನು ತರ್ಕವೆಂದೂ ಕರೆಯುವರು. ಆತ್ಮನನ್ನು ಕೇವಲ ಅನುಮಾನದಿಂದ ಅರಿಯುವದಕ್ಕೆ ಎಂದಿಗೂ ಆಗುವದಿಲ್ಲ. ಬ್ರಹ್ಮಸೂತ್ರಭಾಷ್ಯ. ೧-೧-೨, ೨-೧-೬, ಐತರೇಯ ಭಾಷ್ಯ. ೧ ನೆಯ. ಅಧ್ಯಾಯ ಭಾಷ್ಯದ ಉಪಸಂಹಾರ (ಭಾಷ್ಯ ಭಾಗ. ೬೩), ಬೃಹದಾರಣ್ಯಕೋಪನಿಷತ್ ಭಾಷ್ಯ. ೨-೧ರ ಉಪಸಂಹಾರ.
12 ಅನ್ತಃಕರಣಮ್‌ ಅದ್ವಿತೀಯಾತ್ಮನಿಗೆ ಅನೇಕತ್ವವನ್ನೂ ಸಂಸಾರಿತ್ವವನ್ನೂ ತೋರಿಸುವ ಉಪಾಧಿ. ಇದನ್ನು ಮನಸ್ಸು ಬುದ್ಧಿ, ವಿಜ್ಞಾನ, ಚಿತ್ರ- ಎಂದೂ ಕರೆಯುವರು. ವಿಷಯಗಳನ್ನು ಒಂದೊಂದಾಗಿ ಇಂದ್ರಿಯಗಳ ಮೂಲಕ ಅರಿಯುವ ಸಾಧನವಿದು. ಕಾಮ. ಸಂಕಲ್ಪ, ಸಂಶಯ, ಶ್ರದ್ಧೆ, ಜ್ಞಾನ, ಭಯ- ಮುಂತಾದವುಗಳೆಲ್ಲವೂ ಮನಸ್ಸಿನ ವೃತ್ತಿಗಳು. ಸಂಶಯಾದಿವೃತ್ತಿಯುಳ್ಳ ಅಂತಃಕರಣವನ್ನು ಮನಸ್ಸೆಂದೂ ನಿಶ್ಚಯಾದಿವೃತ್ತಿಯುಳ್ಳದ್ದನ್ನು ಬುದ್ಧಿಯೆಂದೂ ವಿಂಗಡಿಸಿ ಕರೆಯುವರು. ಬ್ರಹ್ಮಸೂತ್ರಭಾಷ್ಯ. ೨-೩-೩೨.
13 ಅನ್ತ್ಯಂ ಪ್ರಮಾಣಮ್‌ ಆತ್ಮನಲ್ಲಿ ತೋರುವ ಪ್ರಮಾತೃತ್ವವೆಂಬ ಅಧ್ಯಾಸವನ್ನು ತೆಗೆದುಹಾಕುವದರಿಂದ ಪ್ರಮಾಣಪ್ರಮೇಯವ್ಯವಹಾರವನ್ನೇ ಕೊನೆಗೊಳಿಸುವ, ಕೊನೆಯ ಪ್ರಮಾಣವಾದ, ಶಾಸ್ತ್ರ. ಭಗವದ್ಗೀತಾಭಾಷ್ಯ. ೨-೧೮, ೨-೬೯. ಅದ್ವಿತೀಯಾತ್ಮನನ್ನು ತಿಳಿಸುವದರಿಂದ ಈ ಪ್ರಮಾಣದಿಂದಾದ ಜ್ಞಾನವುಂಟಾದ ಬಳಿಕ ಏನು? ಏತರಿಂದ? ಹೇಗೆ?- ಎಂಬ ಆಕಾಂಕ್ಷೆಯುಂಟಾಗುವುದಿಲ್ಲ. ಬ್ರಹ್ಮಸೂತ್ರಭಾಷ್ಯ. ೨-೧-೧೪.
14 ಅನ್ಯೋನ್ಯಾಧ್ಯಾಸಃ ಆತ್ಮ, ಅನಾತ್ಮ-ಇವುಗಳಲ್ಲಿ ಒಂದನ್ನು ಒಂದರಲ್ಲಿಯೂ ಒಂದರ ಧರ್ಮಗಳನ್ನು ಇನ್ನೊಂದರಲ್ಲಿಯೂ ಅಧ್ಯಾಸಮಾಡುವದು. ಅಧ್ಯಾಸಭಾಷ್ಯ; ಭಗವದ್ಗೀತಾಭಾಷ್ಯ. ೧೩-೨೬. ಆತ್ಮನನ್ನು ಅನಾತ್ಮದಲ್ಲಿ ಅಧ್ಯಾಸಮಾಡುವಾಗ ಆತ್ಮನಿಗೆ ಸಂಸರ್ಗದ ಅಧ್ಯಾಸವೇ ಹೊರತು ಸ್ವರೂಪದ ಅಧ್ಯಾಸವಾಗುವದಿಲ್ಲ ಎಂದು ವ್ಯಾಖ್ಯಾನಕಾರರು ಬರೆಯುತ್ತಾರೆ. ಆದರೆ ಇದಕ್ಕೆ ಭಾಷ್ಯದ ಆಧಾರವು ಕಾಣುವದಿಲ್ಲ.
15 ಅನ್ವೇಷಣಮ್‌ ಆತ್ಮನನ್ನು ಹುಡುಕುವದು; ಶಾಸ್ತ್ರಾಚಾರ್ಯರ ಉಪದೇಶದಿಂದ ಆತ್ಮನನ್ನು ಪರೋಕ್ಷವಾಗಿ ಅರಿತುಕೊಳ್ಳುವದು. ಛಾಂದೋಗ್ಯೋಪನಿಷತ್ದೋಗ್ಯೋಪನಿಷತ್ ಭಾಷ್ಯ. ೮-೧-೧, ೮-೭-೧. ಆತ್ಮನು ನಮ್ಮೆಲ್ಲರ ಸ್ವರೂಪವೇ ಆಗಿದ್ದರೂ ತತ್ವವನ್ನು ತಿಳಿದುಕೊಳ್ಳದಿರುವ ನಿಮಿತ್ತದಿಂದ ದೇಹಾದಿಗಳೇ ನಾವೆಂಬ ತಪ್ಪು ತಿಳಿವಳಿಕೆಯುಂಟಾಗುತ್ತದೆ. ಹೀಗೆ ದೇಹಾದಿಗಳೇ ತಾನೆಂಬ ತಿಳಿವಳಿಕೆಯುಳ್ಳವರಿಗೆ ಆತ್ಮನು ಅನ್ವೇಷ್ಟವ್ಯನಾಗುತ್ತಾನೆ, ಶಾಸ್ತ್ರಾಚಾರ್ಯರ ಉಪದೇಶದಿಂದ ಅರಿತುಕೊಳ್ಳಬೇಕಾದವನಾಗುತ್ತಾನೆ. ಬ್ರಹ್ಮಸೂತ್ರಭಾಷ್ಯ. ೧-೧-೧೭.
16 ಅಪರಂ ಬ್ರಹ್ಮ ಕಡಿಮೆಯ ಬ್ರಹ್ಮ. ಅವಿದ್ಯಾಕೃತವಾದ ನಾಮರೂಪಾದಿಗಳಿಂದ ಕೂಡಿರುವ ಉಪಾಸ್ಯಬ್ರಹ್ಮವು ಅಪರಬ್ರಹ್ಮವು. ಇದನ್ನು ಕಾರ್ಯಬ್ರಹ್ಮ, ಸಗುಣಬ್ರಹ್ಮ, ಸೋಪಾಧಿಕಬ್ರಹ್ಮ- ಎಂದೂ ಕರೆಯುವರು. ಬ್ರಹ್ಮಸೂತ್ರಭಾಷ್ಯ. ೪-೩-೭, ೪-೩-೧೪. ಪರಬ್ರಹ್ಮವನ್ನೇ ಮನೋಮಯತ್ವಾದಿಗಳಿಂದ ಕೂಡಿರುವದೆಂದು ಉಪಾಸನೆಗಾಗಿ ಉಪದೇಶಿಸಿರುತ್ತದೆ, ಇದಕ್ಕೆ ಅಪರಬ್ರಹ್ಮವೆಂದು ಹೆಸರು. ಬ್ರಹ್ಮಸೂತ್ರಭಾಷ್ಯ. ೪-೩-೯.
17 ಅಪೌರುಷೇಯಮ್‌ ಭಾರತವೇ ಮುಂತಾದ ಗ್ರಂಥದಂತೆ ಸ್ವತಂತ್ರನಾದ ಕರ್ತೃವು ಮಾಡಿದ್ದೆಂದು ಯಾವ ಸ್ಮೃತಿಯಲ್ಲಿಯೂ ಹೇಳಿಲ್ಲವಾದ್ದರಿಂದಲೂ ಶಬ್ದಾರ್ಥಸಂಬಂಧವು ನಿತ್ಯವಾಗಿರುವದರಿಂದಲೂ ವೇದವು ಯಾವ ಪುರುಷನೂ ಮಾಡಿದ್ದಲ್ಲವೆಂದು ಪೂರ್ವಮೀಮಾಂಸಕರು ಹೇಳುತ್ತಾರೆ. ಇದನ್ನು ಉತ್ತರ ಮೀಮಾಂಸದಲ್ಲಿಯೂ ಒಪ್ಪಿರುತ್ತದೆ. (ಬ್ರಹ್ಮಸೂತ್ರಭಾಷ್ಯ. ೧-೨-೨,೧-೩-೨೯). ಆದರೆ ವೇದವು ಮನುಷ್ಯನ ನಿಃಶ್ವಾಸದಂತೆ ಲೀಲಾನ್ಯಾಯದಿಂದ ಬ್ರಹ್ಮದಿಂದ ಉಂಟಾಗಿರುವದೆಂದೂ ಬ್ರಹ್ಮಸೂತ್ರಭಾಷ್ಯ. ೧-೧-೩, ಪರಮಾರ್ಥವಾಗಿ ಇದು ಆತ್ಮಸ್ವರೂಪವಾಗಿಯೇ ಸತ್ಯವಾಗಿರುವದೆಂದೂ (ತೈತ್ತಿರೀಯೋಪನಿಷತ್ ಭಾಷ್ಯ. ೨-೩, ಭಾಷ್ಯ ಭಾಗ. ೧೩೩), ತನ್ನ ರೂಪದಿಂದ ಅದೂ ಅನೃತವೇ ಎಂದೂ (ಬ್ರಹ್ಮಸೂತ್ರ ಭಾಷ್ಯ. ೪-೧೩) ಆಚಾರ್ಯರು ಅಭಿಪ್ರಾಯಪಟ್ಟಿರುತ್ತಾರೆ.
18 ಅಭಿಧಾನಮ್‌ ವಸ್ತುವನ್ನು ಹೇಳುವ ಶಬ್ದ. ಇದನ್ನು ವಾಚಕವೆಂದೂ ಕರೆಯುವರು. ಬ್ರಹ್ಮವು ಯಾವ ಅಭಿಧಾನದಿಂದಲೂ ಹೇಳಲ್ಪಡುವ ವಸ್ತುವಲ್ಲ, ಅಭಿಧೇಯವಲ್ಲ. ಅದರ ಸ್ವರೂಪವು ಅಭಿಧಾನ, ಅಭಿಧೇಯ- ಈ ಎರಡಕ್ಕಿಂತಲೂ ಬೇರೆಯಾಗಿದೆ. ನಾಮ, ಜಾತಿ- ಮುಂತಾದ ವಿಕಲ್ಪಗಳಿರುವ ವಸ್ತು ಮಾತ್ರ ಅಭಿಧಾನಕ್ಕೆ ವಿಷಯವಾಗಿ ಅಭಿಧೇಯವಾಗಿರುವದು. ಮಾಂಡೂಕ್ಯಕಾರಿಕಾಭಾಷ್ಯ. ೧; ಮಾಂಡೂಕ್ಯಕಾರಿಕಾಭಾಷ್ಯ ಭಾಗ. ೩೫; ತೈತ್ತಿರೀಯೋಪನಿಷತ್ ಭಾಷ್ಯ ೨-೯ ಭಾಷ್ಯ ಭಾಗ. ೨೨೦.
19 ಅರ್ಥವಾದಃ ಮುಖ್ಯೋಪದೇಶವನ್ನು ಹೊಗಳುವ, ಅಥವಾ ಅದಕ್ಕೆ ವಿಪರೀತವಾದದ್ದನ್ನು ನಿಂದಿಸುವ ವಾಕ್ಯ. ಕರ್ಮವನ್ನು ವಿಧಿಸುವದೇ ಶಾಸ್ತ್ರದ ಮುಖ್ಯೋದ್ದೇಶವೆಂದು ಪೂರ್ವಮೀಮಾಂಸಕರೆನ್ನುತ್ತಿದ್ದರು. ಅವರ ಅಭಿಪ್ರಾಯದಲ್ಲಿ ಉಪನಿಷತ್ತುಗಳು ಕೂಡ ಕರ್ಮಕ್ಕೆ ಬೇಕಾದ ಕರ್ತೃವನ್ನು ಅಥವಾ ದೇವತೆಯನ್ನು ತಿಳಿಸುವದರಿಂದ ಪ್ರಮಾದವಾಗಬಹುದು; ಅಥವಾ ವಿಧಿಯನ್ನು ಹೊಗಳುವ ಅರ್ಥವಾದವಾಗಬೇಕು. ಆದರೆ ಉಪನಿಷತ್ತುಗಳಲ್ಲಿರುವ ವಾಕ್ಯಗಳು ತಾತ್ಪರ್ಯದಿಂದ ಬ್ರಹ್ಮವನ್ನೇ ಹೇಳುತ್ತವೆ; ಮುಖ್ಯವಾದ ವಾಕ್ಯಗಳಲ್ಲಿರುವ ಪದಗಳು ಬ್ರಹ್ಮಸ್ವರೂಪವನ್ನು ತಿಳಿಸುವ ಸಮನ್ವಯವುಳ್ಳವಾಗಿರುವದರಿಂದ ಉಪನಿಷತ್ತುಗಳು ನೇರಾಗಿ ಬ್ರಹ್ಮವನ್ನು ತಿಳಿಸುವ ಪ್ರಮಾಣಗಳಾಗಿವೆ-ಎಂದು ಆಚಾರ್ಯರು ಪ್ರತಿಪಾದಿಸಿರುತ್ತಾರೆ. ಬ್ರಹ್ಮಸೂತ್ರ ಭಾಷ್ಯ. ೧-೧-೪, ಬೃಹದಾರಣ್ಯಕೋಪನಿಷತ್ ಭಾಷ್ಯ. ೧-೪-೧೦ ಐತರೇಯ ಭಾಷ್ಯ, ಸಂಬಂಧಗ್ರಂಥ. ಅರ್ಥವಾದಗಳಲ್ಲಿರುವ ಅಭಿಪ್ರಾಯವು ಪ್ರಮಾಣಾಂತರಕ್ಕೆ ವಿಷಯವಾಗಿದ್ದರೆ ಅದು ಅನುವಾದವು, ಎಂದರೆ ತಿಳಿದದ್ದನ್ನೇ ತಿಳಿಸತಕ್ಕದ್ದಾದ್ದರಿಂದ ಅದು ಪ್ರಮಾಣವಲ್ಲ. ಎಲ್ಲಿ ಪ್ರಮಾಣಾಂತರಕ್ಕೆ ವಿರುದ್ಧವಾಗಿರುತ್ತದೆಯೋ ಅಲ್ಲಿ ಗುಣವಾದವು, ಎಂದರೆ ಆಯಾ ಗುಣವನ್ನು ಮಾತ್ರ ತಿಳಿಸುವದು. ಆದರೆ ಎಲ್ಲಿ ಈ ಎರಡು ಪ್ರಕಾರಗಳೂ ಹೊಂದುವದಿಲ್ಲವೋ ಅಲ್ಲಿ ಭೂತಾರ್ಥವಾದವೇ, ಎಂದರೆ ಇದ್ದದ್ದನ್ನೇ ತಿಳಿಸುವದು- ಎಂದು ಇಟ್ಟುಕೊಳ್ಳಬೇಕು ಎಂಬುದು ಆಚಾರ್ಯರ ಮತವು. ಬ್ರಹ್ಮಸೂತ್ರ ಭಾಷ್ಯ. ೧-೩-೩೩.
20 ಅವಸ್ಥಾ ಜಾಗರಿತ, ಜಾಗ್ರತ್‌ (ಎಚ್ಚರ); ಸ್ವಪ್ನ (ಕನಸು), ಸುಷುಪ್ತಿ, ಸುಷುಪ್ತ (ತನಿನಿದ್ರೆ) ಎಂಬ ಮೂರೂ ಜೀವನ ಅವಸ್ಥೆಗಳು. ಈ ಮೂರು ಅವಸ್ಥೆಗಳಲ್ಲಿಯೇ ವಾದಿಗಳು ಕಲ್ಪಿಸಿರುವ ವಸ್ತುಗಳೆಲ್ಲ ಅಡಕವಾಗಿರುವವು; ಇವುಗಳ ತತ್ತ್ವವನ್ನು ಅರಿತುಕೊಂಡರೆ ಎಲ್ಲವನ್ನೂ ಅರಿತುಕೊಂಡಂತೆ. ಮಾಂಡೂಕ್ಯಕಾರಿಕಾಭಾಷ್ಯ. ೪-೮೮. ಅವಸ್ಥೆಗಳಲ್ಲಿ ಕಾಣುವ ಆಧ್ಯಾತ್ಮಿಕ, ಆಧಿಭೌತಿಕ, ಆಧಿದೈವಿಕ ದೃಷ್ಯಗಳೆಲ್ಲವೂ ಆಯಾ ಅವಸ್ಥೆಗೇ ಸೇರಿದ್ದು ಎಂದು ತಿಳಿಯಬೇಕು. ಮಾಂಡೂಕ್ಯಕಾರಿಕಾಭಾಷ್ಯ. ೩.