A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 318

Backtrace:

File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 319

Backtrace:

File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 320

Backtrace:

File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler

File: /Appdata/padakanaja.karnataka.gov.in/index.php
Line: 318
Function: require_once

Padakanaja - Dictionary View
ಅನಿಸಿಕೆ

ಪದಕೋಶ: ಶಾಂಕರವೇದಾಂತ ನಿಘಂಟು | ಕನ್ನಡ-ಕನ್ನಡ | ಪ್ರಕಾಶಕರು - ಅಧ್ಯಾತ್ಮ ಪ್ರಕಾಶಕಾರ್ಯಾಲಯ (2014)

Show entries
ಕ್ರಮ ಸ೦ಖ್ಯೆ ಇಂಗ್ಲೀಷ್ ಪದ
(English Word)
ಕನ್ನಡ ಪದ
(Kannada Word)
ಕನ್ನಡ ಅರ್ಥ
(Kannada Meaning)
ವಿಷಯ ವರ್ಗೀಕರಣ
(Word Subject)
ವ್ಯಾಕರಣ ವಿಶೇಷ
(Word Grammer)
ಕನ್ನಡ ಉಚ್ಚಾರಣೆ
(Kannada Pronunciation)
ಪರ್ಯಾಯ ಪದ
(Word Synonyms)
ಇಂಗ್ಲೀಷ್ ಅರ್ಥ
(English Meaning)
ಸಂಕ್ಷಿಪ್ತ ವಿವರಣೆ
(Short Description)
ದೀರ್ಘ ವಿವರಣೆ
(Long Description)
ಆಡಳಿತಾತ್ಮಕ ಪದ
(Administrative Word)
41 ಆತ್ಮಜ್ಞಾನಮ್‌, ಆತ್ಮವಿಜ್ಞಾನಮ್‌, ಆತ್ಮವಿದ್ಯಾ ಆತ್ಮಸ್ವರೂಪವನ್ನು ಇದ್ದಂತೆ ಅರಿತುಕೊಳ್ಳುವದು. ಇದಕ್ಕೆ ಶಾಸ್ತ್ರಾಚಾರ್ಯರ ಉಪದೇಶವೂ ಶಮದಮಾದಿಗಳಿಂದಾದ ಸಂಸ್ಕಾರವೂ ಬೇಕು.
42 ಆತ್ಮೈಕತ್ವಜ್ಞಾನಮ್‌, ಆತ್ಮೈಕತ್ವವಿದ್ಯಾ ಆತ್ಮನು ತನಗೆರಡನೆಯದಿಲ್ಲದ ಒಬ್ಬನೇ ಎಂಬ ಜ್ಞಾನ. ಸಂಸಾರಕ್ಕೆ ಕಾರಣವಾಗಿರುವ ಅಜ್ಞಾನವನ್ನು ಕಳೆಯುವದಕ್ಕೆ ಇದೊಂದೇ ಕಾರಣ; ಇದನ್ನು ತಿಳಿಸುವದಕ್ಕಾಗಿಯೇ ಉಪನಿಷತ್ತುಗಳೆಲ್ಲವೂ ಹೊರಟಿರುತ್ತವೆ.
43 ಆತ್ಮೇಶ್ವರೈಕತ್ವಜ್ಞಾನಮ್‌ ಪರಮೇಶ್ವರನು ನಮ್ಮೆಲ್ಲರ ಆತ್ಮನೇ; ಆತ್ಮನಿಗೂ ಈಶ್ವರನಿಗೂ ಭೇದವಿಲ್ಲ ಎಂಬ ಜ್ಞಾನ. ಭಗವದ್ಗೀತಾಭಾಷ್ಯ. ೪-೪೧.
44 ಆತ್ಮಸ್ವರೂಪಾವಸ್ಥಾನಮ್‌ ತನ್ನ ಸ್ವರೂಪವೇ ಆಗಿರುವ ಪರಮಾತ್ಮನಲ್ಲಿ ಜ್ಞಾನದಿಂದ ನೆಲೆನಿಲ್ಲುವದು. ಭಗವದ್ಗೀತಾಭಾಷ್ಯ. ೧೮-೧೦ ಇದನ್ನು ಸ್ವಾತ್ಮನ್ಯೇವಾವಸ್ಥಾನಮ್‌ (ತೈತ್ತಿರೀಯೋಪನಿಷತ್ ಭಾಷ್ಯ. ) ಸ್ವಾತ್ಮಪ್ರತಿಷ್ಠಾ (ಮುಂಡಕೋಪನಿಷತ್ ಭಾಷ್ಯ ಭಾಗ. ೧-೧-೧) ಸ್ವರೂಪಾವಸ್ಥಾನಮ್‌ (ಭಗವದ್ಗೀತಾಭಾಷ್ಯ. ೧೮-೬೬, ಭಾಷ್ಯ ಭಾಗ. ೫೮೬) ಎಂದೂ ಕರೆಯುತ್ತಾರೆ.
45 ಆತ್ಯನ್ತಿಕಸಂಸಾರೋಪರಮಃ ಮತ್ತೆ ತೋರಿಕೊಳ್ಳದಂತೆ ಸಂಸಾರವು ನಾಶವಾಗುವದು; ಜ್ಞಾನದಿಂದ ಮಾತ್ರವೇ ಇದು ಸಾಧ್ಯ.
46 ಆನನ್ದಃ ಇಷ್ಟಲಾಭನಿಮಿತ್ತದಿಂದಾಗುವ ಹರ್ಷವೇ ಮುಂತಾದವುಗಳಲ್ಲಿ ಅನುಗತವಾಗಿರುವ ಸುಖಸಾಮಾನ್ಯ ; ಇದೇ ಆತ್ಮನ ಸ್ವರೂಪವು. ಪುಣ್ಯವಶದಿಂದ ಇಷ್ಟ ವಿಷಯಗಳ ಲಾಭದಿಂದ ಅಂತಃಕರಣವು ಪ್ರಸನ್ನವಾಗಿರುವಾಗ ಅಭಿವ್ಯಕ್ತವಾಗಿ ವಿಷಯಾನಂದವೆನಿಸುತ್ತದೆ. ತೈತ್ತಿರೀಯೋಪನಿಷತ್ ಭಾಷ್ಯ. ೨-೫. ಆತ್ಮನ ಸ್ವರೂಪವಾಗಿರುವ ಆನಂದವು ವಿಷಯಾನಂದದಂತೆ ವಿಷಯೀಕರಿಸಿ ಅನುಭವಿಸುವ ಆನಂದವಲ್ಲ. ಬೃಹದಾರಣ್ಯಕ್ಯೋಪನಿಷತ್ ಭಾಷ್ಯ. ೩-೯-೨೮.
47 ಆರಂಭ ಮಾಡುವದು, ಒಂದೇ ಜಾತಿಯ ಅನೇಕ ವಸ್ತುಗಳು ಸೇರಿ ಒಂದು ಕಾರ್ಯವನ್ನು ಮಾಡಿದರೆ ಅದಕ್ಕೆ ಆರಂಭವೆಂಬ ಹೆಸರೆಂದು ವೈಶೇಷಿಕರು ಹೇಳುತ್ತಾರೆ. ಈ ಆರಂಭವಾದವು ಆಚಾರ್ಯರಿಗೆ ಇಷ್ಟವಿಲ್ಲ ’ಆರಮ್ಭಕಮ್’ ಉಂಟುಮಾಡುವ ಕಾರಣ, ’ಆರಬ್ಧ’ ಉಂಟಾದ ಕಾರ್ಯ- ಎಂಬ ಮಾತುಗಳನ್ನು ಭಾಷ್ಯದಲ್ಲಿ ಆರಂಭವಾದದ ಹಂಗಿಲ್ಲದೆ ಉಪಯೋಗಿಸಿದೆ. ಭಗವದ್ಗೀತಾಭಾಷ್ಯ. ೪-೧೪; ೧೩-೨೦
48 ಆವರಣಮ್‌ ಮುಸುಕು, ಅವಿದ್ಯೆ, ಧರ್ಮಾಧರ್ಮಗಳು, ಕಾಮ ಎಂಬ ಅಡ್ಡಿಯಿಂದ ಜೀವರ ಜ್ಞಾನವು ಹೊರತೋರಿಕೊಳ್ಳಲಾರದೆ ಇರುವದೆಂದು ಭಾಷ್ಯಕಾರರು ಅಲ್ಲಲ್ಲಿ (ಬ್ರಹ್ಮಸೂತ್ರ ಭಾಷ್ಯ. ೧-೧-೫, ಭಗವದ್ಗೀತಾಭಾಷ್ಯ. ೩-೩೯, ೪-೫) ಬರೆದಿರುತ್ತಾರೆ. ಈಶ್ವರನಿಗೆ ಈ ಅಡ್ಡಿಯಿಲ್ಲದ್ದರಿಂದ ಅವನು ನಿರಾವರಣಜ್ಞಾನನೆಂದೂ ಬರೆದಿರುತ್ತಾರೆ. ಈ ಅಡ್ಡಿಗಿಂತ ಬೇರೆಯಾದ ಮೂಲಾವಿದ್ಯೆಯ ಆವರಣಶಕ್ತಿಯೊಂದು ಇದೆ ಎಂಬ ವ್ಯಾಖ್ಯಾನಕಾರರ ಅಭಿಪ್ರಾಯಕ್ಕೆ ಭಾಷ್ಯದಲ್ಲಿ ಆಧಾರವು ದೊರಕುವದಿಲ್ಲ.
49 ಆವೃತ್ತಿಃ-೧ ಕರ್ಮವನ್ನು ಮಾಡಿದವರು ಚಂದ್ರಲೋಕಕ್ಕೆ ಹೋಗಿ ಕರ್ಮದ ಫಲವು ಕ್ಷಯವಾಗಲು ಹಿಂತಿರುಗುವರು; ಈ ಆವೃತ್ತಿಯು ದೇವಯಾನವೆಂಬ ಮಾರ್ಗದಿಂದ ಹೋದವರಿಗೆ ಆಗುವದಿಲ್ಲ. (ಬ್ರಹ್ಮಸೂತ್ರ ಭಾಷ್ಯ. ೪-೪-೨).
50 ಆವೃತ್ತಿಃ-೨ ಮತ್ತೆ ಮತ್ತೆ ಅಭ್ಯಾಸ ಮಾಡುವದು. ಶ್ರವಣವೇ ಮುಂತಾದವುಗಳನ್ನು ಆತ್ಮದರ್ಶನವಾಗುವವರೆಗೂ ಮತ್ತೆ ಮತ್ತೆ ಆವೃತ್ತಿಮಾಡಬೇಕು; ಏಕೆಂದರೆ ದರ್ಶನಕ್ಕಾಗಿಯೇ ಅವುಗಳನ್ನು ವಿಧಿಸಿದೆ. (ಬ್ರಹ್ಮಸೂತ್ರ ಭಾಷ್ಯ. ೪-೧-೧). ಆದರೆ ಒಂದು ಸಲ ಶ್ರವಣಮಾಡಿದ್ದರಿಂದಲೇ ಯಾವನಿಗೆ ಜ್ಞಾನವುಂಟಾಗುವದೋ, ಅವನಿಗೆ ಈ ಆವೃತ್ತಿಯು ಅವಶ್ಯವಿಲ್ಲ (ಬ್ರಹ್ಮಸೂತ್ರ ಭಾಷ್ಯ. ೪-೧-೧). ಜ್ಞಾನವನ್ನು ಮತ್ತೆ ಮತ್ತೆ ಅಭ್ಯಾಸಮಾಡಿದ ಮೇಲೆಯೇ ವಿಶೇಷಾನುಭವರೂಪವಾದ ಸಾಕ್ಷಾತ್ಕಾರವುಂಟಾಗುವದೆಂಬ ಮತವನ್ನು ಅಲ್ಲಲ್ಲಿ ಆಚಾರ್ಯರು ಖಂಡಿಸಿರುತ್ತಾರೆ. (ಬ್ರಹ್ಮಸೂತ್ರ ಭಾಷ್ಯ. ೪-೧-೧, ಬೃಹದಾರಣ್ಯಕೋಪನಿಷತ್ ಭಾಷ್ಯ. ೧-೪-೭).