A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 318

Backtrace:

File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 319

Backtrace:

File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 320

Backtrace:

File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler

File: /Appdata/padakanaja.karnataka.gov.in/index.php
Line: 318
Function: require_once

Padakanaja - Dictionary View
ಅನಿಸಿಕೆ

ಪದಕೋಶ: ಕೃಷಿ ರಸಾಯನಶಾಸ್ತ್ರ ಶಬ್ದಾರ್ಥ ನಿರೂಪಣಾವಳಿ | ಇಂಗ್ಲೀಷ್-ಕನ್ನಡ | ಪ್ರಕಾಶಕರು - ಕೃಷಿ ವಿಶ್ವವಿದ್ಯಾನಿಲಯ (1973)

Show entries
ಕ್ರಮ ಸ೦ಖ್ಯೆ ಇಂಗ್ಲೀಷ್ ಪದ
(English Word)
ಕನ್ನಡ ಪದ
(Kannada Word)
ಕನ್ನಡ ಅರ್ಥ
(Kannada Meaning)
ವಿಷಯ ವರ್ಗೀಕರಣ
(Word Subject)
ವ್ಯಾಕರಣ ವಿಶೇಷ
(Word Grammer)
ಕನ್ನಡ ಉಚ್ಚಾರಣೆ
(Kannada Pronunciation)
ಪರ್ಯಾಯ ಪದ
(Word Synonyms)
ಇಂಗ್ಲೀಷ್ ಅರ್ಥ
(English Meaning)
ಸಂಕ್ಷಿಪ್ತ ವಿವರಣೆ
(Short Description)
ದೀರ್ಘ ವಿವರಣೆ
(Long Description)
ಆಡಳಿತಾತ್ಮಕ ಪದ
(Administrative Word)
611 Symbols ಸಂಕೇತಗಳು. ಮೂಲವಸ್ತುಗಳನ್ನು ಸಂಕ್ಷಿಪ್ತ ರೀತಿಯಲ್ಲಿ ಸೂಚಿಸುವ ರೀತಿಗೆ ಸಂಕೇತಗಳೆಂದು ಹೆಸರು. ಉದಾಹರಣೆ: ಸಾರಜನಕಕ್ಕೆ N; ಇಂಗಾಲಕ್ಕೆ C; ಜಲಜನಕಕ್ಕೆ H; ಆಮ್ಲಜನಕಕ್ಕೆ O ಇತ್ಯಾದಿ ಸಂಕೇತಗಳ್ನು ಬಳಸುತ್ತಾರೆ.
612 Terrace ಜಗತಿಭೂಮಿ ; ಅಟ್ಟಳಿಗೆಭೂಮಿ; ತಟ್ಟೆ ಭೂಮಿ. ಇಳಿಜಾರು ಭೂಮಿಗೆ ಅಡ್ಡಲಾಗಿ ನಿರ್ಮಿಸಲ್ಪಟ್ಟ ಬದು ಅಥವಾ ಕಟ್ಟೆ. ಇದು ಭೂಮಿಯ ಮೇಲೆ ಹರಿಯುವ ನೀರಿನ ವೇಗಕ್ಕೆ ತಡೆಯಾಗಿ, ಮೇಲ್ಮಣ್ಣು ಕೊಚ್ಚುವುದು ತಪ್ಪುತ್ತದೆ. ಇದರಿಂದಾಗಿ, ತೇವ ಮತ್ತು ಮಣ್ಣಿನ ರಕ್ಷಣೆ ಸಾಧ್ಯವಾಗುತ್ತದೆ.
613 Texture ಸ್ವರೂಪ. ವಿವಿಧ ಗಾತ್ರದ ಮಣ್ಣಿನ ಕಣಗಳ ಪ್ರಮಾಣವನ್ನು ಸೂಚಿಸುವ ಶಬ್ಧ.
614 Thermodynamic Law ಉಷ್ಣಗತಿ ನಿಯಮ. ಬೇರೆ ಬೇರೆ ಶಕ್ತಿಯನ್ನು ಉಷ್ಣವಾಗಿ ಪರಿವರ್ತಿಸಿದಾಗ ಅಥವಾ ಉಷ್ಣವನ್ನು ಬೇರೆ ರೀತಿಯ ಶಕ್ತಿಯನ್ನಾಗಿ ಪರಿವರ್ತಿಸಿದಾಗ, ಉಷ್ಣ ಮತ್ತು ಶಕ್ತಿಯ ಪರಿಮಾಣ ಒಂದು ಗೊತ್ತಾದ ಪ್ರಮಾಣದಲ್ಲಿರುತ್ತದೆ.
615 Thermophyllic Bacteria ಉಷ್ಣಪ್ರಿಯ ಬ್ಯಾಕ್ಟೀರಿಯಾ. ಹೆಚ್ಚು ಉಷ್ಣವಿರುವಲ್ಲಿ ಅಂದರೆ 50°c ಗಿಂತ ಹೆಚ್ಚು ಶಾಖದಲ್ಲಿ ಅಧಿಕವಾಗಿ ವೃದ್ಧಿಯಾಗುವ ಬ್ಯಾಕ್ಟೀರಿಯಾ.
616 Tile Drain ಹೆಂಚು ಬಸಿಗಾಲುವೆ. ಜೌಗು ಭೂಮಿಗಳಿಂದ ನೀರು ತೆಗೆಯಲು ಇಳಿಜಾರಿಗೆ ಅಭಿಮುಖವಾಗಿ ಸೂಕ್ತ ಆಳದಲ್ಲಿ ಮಣ್ಣಿನಲ್ಲಿ ಇಡುವ ಹೆಂಚಿನ ಕಾಲುವೆ.
617 Tilth ಮಣ್ಣಿನ ಹದ; ಉತ್ತು. ಮಣ್ಣಿನ ಈ ಭೌತಿಕ ಸ್ಥಿತಿ, ಸಾಮಾನ್ಯವಾಗಿ, ಸಸ್ಯಗಳ ಬೆಳವಣಿಗೆಗೆ ಸಹಾಯಕವಾಗುತ್ತದೆ.
618 Titration ಗಾತ್ರ ಮಾಪನ. ಒಂದು ದ್ರಾವಣದ ತೀಕ್ಷ್ಣತೆಯನ್ನಾಗಲೀ, ದ್ರಾವಣದಲ್ಲಿನ ವಸ್ತುವಿನ ಪ್ರಮಾಣವನ್ನಾಗಲಿ, ಮತ್ತೊಂದು ಗೊತ್ತಾದ ನಿಖರ ಗಾತ್ರ ಪ್ರಮಾಣದ ದ್ರಾವಣದೊಡನೆ ಸಂಪೂರ್ಣ ಪ್ರತಿಕ್ರಿಯೆಗೊಳಿಸಿ, ಕಂಡುಹಿಡಿಯುವ ವಿಧಾನ.
619 Total Cat – ion Exchange Capacity ಒಟ್ಟು ಧನ ಅಯಾನ್ ವಿನಿಮಯ ಸಾಮರ್ಥ್ಯ. ಏಕ ಸಂಯೋಗ ಸಾಮರ್ಥ್ಯವುಳ್ಳ ತಟಸ್ಥ ದ್ರಾವಣದಿಂದ ಒಂದು ಮಣ್ಣು ಹೀರಿಕೊಳ್ಳಬಹುದಾದಂತಹ ಧನ ಅಯಾನ್ ಗಳ ಮೊತ್ತ.
620 Transported Soil ಸಾಗುಮಣ್ಣು. ನೀರು, ಗಾಳಿ ಮುಂತಾದವುಗಳಿಂದ ಕೊಚ್ಚಿ ಬಂದು ಶೇಖರವಾದ ವಸ್ತುಗಳಿಂದುಂಟಾದ ಮಣ್ಣು.