A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 318

Backtrace:

File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 319

Backtrace:

File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 320

Backtrace:

File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler

File: /Appdata/padakanaja.karnataka.gov.in/index.php
Line: 318
Function: require_once

Padakanaja - Dictionary View
ಅನಿಸಿಕೆ

ಪದಕೋಶ: ಕೃಷಿ ರಸಾಯನಶಾಸ್ತ್ರ ಶಬ್ದಾರ್ಥ ನಿರೂಪಣಾವಳಿ | ಇಂಗ್ಲೀಷ್-ಕನ್ನಡ | ಪ್ರಕಾಶಕರು - ಕೃಷಿ ವಿಶ್ವವಿದ್ಯಾನಿಲಯ (1973)

Show entries
ಕ್ರಮ ಸ೦ಖ್ಯೆ ಇಂಗ್ಲೀಷ್ ಪದ
(English Word)
ಕನ್ನಡ ಪದ
(Kannada Word)
ಕನ್ನಡ ಅರ್ಥ
(Kannada Meaning)
ವಿಷಯ ವರ್ಗೀಕರಣ
(Word Subject)
ವ್ಯಾಕರಣ ವಿಶೇಷ
(Word Grammer)
ಕನ್ನಡ ಉಚ್ಚಾರಣೆ
(Kannada Pronunciation)
ಪರ್ಯಾಯ ಪದ
(Word Synonyms)
ಇಂಗ್ಲೀಷ್ ಅರ್ಥ
(English Meaning)
ಸಂಕ್ಷಿಪ್ತ ವಿವರಣೆ
(Short Description)
ದೀರ್ಘ ವಿವರಣೆ
(Long Description)
ಆಡಳಿತಾತ್ಮಕ ಪದ
(Administrative Word)
621 True Density ನೈಜ ಸಾಂದ್ರತೆ. ರಂಧ್ರದ ಆವರಣವನ್ನು ಬಿಟ್ಟು ಮಣ್ಣಿನ ಘನವಸ್ತುಗಳಿಂದ ಕೂಡಿರುವ ಏಕಮಾನ ಗಾತ್ರದ ತೂಕ.
622 True Solution ನೈಜ ದ್ರಾವಣ. ಹೆಚ್ಚು ಅಭಿಸರಣ ಒತ್ತಡ ಮತ್ತು ಪಾರದರ್ಶಕ, ಹಾಗೂ ಕವಚಗಳ ಮೂಲಕ ಹಾದು ಹೋಗುವ ಒಂದು ಗಾತ್ರದ ಕಣಗಳಿಂದ ತುಂಬಿರುವ ದ್ರಾವಣ.
623 Tundra Soils ಟುಂಡ್ರಾ ಮಣ್ಣುಗಳು. ಇವು ಜೋನಲ್ ಗುಂಪಿಗೆ ಸೇರಿದ ಮಣ್ಣುಗಳು. ಮೇಲ್ಮಣ್ಣು ಅಧಿಕ ಸಾವಯವಾಂಶದಿಂದ ಕೂಡಿದ್ದು ಕಪ್ಪು ಅಥವಾ ಕಂದುಬಣ್ಣದ್ದಾಗಿರುತ್ತದೆ. ಇವು ಧ್ರುವ ಪ್ರದೇಶದ ಶೀತಕಟಿಬಂಧದ ಮಣ್ಣುಗಳು.
624 Tyndall’s Effect ಟಿಂಡಾಲ್ ನ ಪರಿಣಾಮ. ಒಂದು ಕಿರಣ ಪುಂಜ, ಅಸ್ಫಟಿಕ ಕಣಗಳ ವ್ಯವಸ್ಥೆಯನ್ನು ಹಾದು ಹೋದಾಗ, ಕಿರಣ ಪುಂಜದ ಒಂದು ಭಾಗ ನೇರವಾಗಿ ಸಂಚರಿಸಿ ಮತ್ತೊಂದು ಭಾಗ ನಮನವಾಗುತ್ತದೆ. ಇದಕ್ಕೆ ಟಿಂಡಾಲ್ ಪರಿಣಾಮ ಎಂದು ಹೆಸರು.
625 Typical Profile ಲಾಕ್ಷಣಿಕ ಪ್ರೊಫೈಲ್. ಒಂದು ಮಣ್ಣಿನ ಲಕ್ಷಣಗಳನ್ನು ಎತ್ತಿತೋರಿಸುವ, ಉಪಯೋಗಿಸಬಹುದಾದಂತಹ ಪ್ರೊಫೈಲ್. ಇದು ಒಂದು ಮಣ್ಣಿನ ಶ್ರೇಣಿಯಲ್ಲಿರುವ ವಿಶಿಷ್ಟ ಗುಣಗಳನ್ನೆಲ್ಲಾ ಪ್ರತಿಬಿಂಬಿಸುತ್ತದೆ.
626 Unsaturated Soil ಅಸಂತೃಪ್ತ ಮಣ್ಣು. ಮಣ್ಣಿನ ವಿನಿಮಯ ಸಂಕೀರ್ಣದಲ್ಲಿ ಜಲಜನಕ ಒಂದುಗೂಡಿದಾಗ ಮಣ್ಣು ಅಸಂತೃಪ್ತವಾಗಿದೆ ಎಂದು ಹೇಳುತ್ತಾರೆ. ಈ ಸ್ಥಿತಿಯಲ್ಲಿ ಮಣ್ಣಿನ ಪಿ. ಎಚ್. ಆಮ್ಲಗತಿಯನ್ನು ತಾಳುತ್ತದೆ.
627 Upper Plastic Limit ನಮ್ಯತೆಯ ಮೇಲ್ಮಟ್ಟದ ಮಿತಿ ; ಮೇಲ್ಮಟ್ಟದ ಆಕೃತಿ ರೂಪಣೆಯ ಮಿತಿ. ಪ್ರಯೋಗಿಸಿದ ಒತ್ತಡದಲ್ಲಿ ಮಣ್ಣು ಸರಾಗವಾಗಿ ಹರಡಿಕೊಳ್ಳವ ಮಣ್ಣಿನ ತೇವಾಂಶ.
628 Urea ಯೂರಿಯಾ. ಇದು ಕಾರ್ಬನಿಕ್ ಆಮ್ಲದ ಸಂಯೋಜಿತ ಆಮೈಡ್, ಈ ಸಾವಯವ ಸಾರಜನಕ ರಾಸಾಯನಿಕ ಗೊಬ್ಬರದಲ್ಲಿ ಶೇಕಡ 44-46 ರಷ್ಟು ಸಾರಜನಕವಿರುತ್ತದೆ.
629 Valency ಸಂಯೋಗಸಾಮರ್ಥ್ಯ. ಒಂದು ಮೂಲವಸ್ತುವಿನ ಪರಮಾಣು ಮತ್ತೊಂದು ಮೂಲವಸ್ತುವಿನ ಪರಮಾಣುವಿನೊಂದಿಗೆ ಸಂಯೋಗವಾಗಲು ಹೊಂದಿರುವ ಸಾಮರ್ಥ್ಯ.
630 Vesicular Rock ವೆಸಿಕುಲಾರ್ ಶಿಲೆ; ನಾಳಯುಕ್ತ ಶಿಲೆ. ಶಿಲೆಯ ಮಡ್ಡಿ ಇನ್ನೂ ಕುದಿಯುವ ಸ್ಥಿತಿಯಲ್ಲಿದ್ದಾಗ ಅನಿಲ ಹಿಗ್ಗುವುದರಿಂದ ಹಲವು ಅಗ್ನಿಶಿಲೆಗಳಲ್ಲಿ ಕೋಶಾಕಾರದ ಸ್ಥಳವುಂಟಾಗುತ್ತದೆ. ಈ ಸ್ಥಿತಿಯನ್ನು ತೋರುವ ಶಿಲೆಗೆ ವೆಸಿಕುಲಾರ್ ಶಿಲೆ ಎಂದು ಹೆಸರು.