A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 318

Backtrace:

File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 319

Backtrace:

File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 320

Backtrace:

File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler

File: /Appdata/padakanaja.karnataka.gov.in/index.php
Line: 318
Function: require_once

Padakanaja - Dictionary View
ಅನಿಸಿಕೆ

ಪದಕೋಶ: ನವಕರ್ನಾಟಕ ವಿಜ್ಞಾನ - ತಂತ್ರಜ್ಞಾನ ಪದಸಂಪದ | ಕನ್ನಡ-ಕನ್ನಡ-ಇಂಗ್ಲೀಷ್ |ಪ್ರಕಾಶಕರು - ನವಕರ್ನಾಟಕ ಪಬ್ಲಿಕೇಷನ್ಸ್‌ ಪ್ರೈವೇಟ್ ಲಿಮಿಟೆಡ್ (2012)

Show entries
ಕ್ರಮ ಸ೦ಖ್ಯೆ ಇಂಗ್ಲೀಷ್ ಪದ
(English Word)
ಕನ್ನಡ ಪದ
(Kannada Word)
ಕನ್ನಡ ಅರ್ಥ
(Kannada Meaning)
ವಿಷಯ ವರ್ಗೀಕರಣ
(Word Subject)
ವ್ಯಾಕರಣ ವಿಶೇಷ
(Word Grammer)
ಕನ್ನಡ ಉಚ್ಚಾರಣೆ
(Kannada Pronunciation)
ಪರ್ಯಾಯ ಪದ
(Word Synonyms)
ಇಂಗ್ಲೀಷ್ ಅರ್ಥ
(English Meaning)
ಸಂಕ್ಷಿಪ್ತ ವಿವರಣೆ
(Short Description)
ದೀರ್ಘ ವಿವರಣೆ
(Long Description)
ಆಡಳಿತಾತ್ಮಕ ಪದ
(Administrative Word)
21 ಅಂಗಕ (ಪ್ರಾ) ಸಸ್ಯದ ಅಥವಾ ಪ್ರಾಣಿಯ ಕೋಶ ದೊಳಗೆ ವಿಶಿಷ್ಟ ಕಾರ್ಯ ಜರಗಿಸುವ ಒಂದು ಸೂಕ್ಷ್ಮ ಸಂರಚನೆ. ನ್ಯೂಕ್ಲಿಯಸ್, ಮೈಟೊಕಾಂಡ್ರಿಯ ಹಾಗೂ ಲೈಸೋಸೋಮ್‌ಗಳು ಅಂಗಕಗಳಿಗೆ ನಿದರ್ಶನ organelle
22 ಅಂಗಚ್ಛೇದನೆ (ವೈ) ದೇಹದ ಹೊರಭಾಗವೊಂದನ್ನು ಕತ್ತರಿಸಿ ತೆಗೆಯುವುದು. ಉದಾ: ಬೆರಳು, ತೋಳು, ಕಾಲು, ಕಿವಿ ಮುಂತಾದವನ್ನು ಛೇದಿಸುವುದು amputation
23 ಅಂಗಮರ್ದನ (ವೈ) ಚಿಕಿತ್ಸೆ ನೀಡುವ ಉದ್ದೇಶದಿಂದ ಶರೀರದ ಸ್ನಾಯುಗಳನ್ನೂ ಅಸ್ಥಿಸಂಧಿಗಳನ್ನೂ ಅವುಗಳ ಕಾರ್ಯ ಚುರುಕಾಗುವಂತೆ ಕೈಯಿಂದ ಇಲ್ಲವೇ ಸಲಕರಣೆಯಿಂದ ನೀವುವುದು, ಉಜ್ಜುವುದು, ಹಿಸುಕುವುದು ಅಥವಾ ತಟ್ಟುವುದು. ಮಾಲೀಸು. ಸಂವಾಹನ massage
24 ಅಂಗರಚನಾವಿಜ್ಞಾನ (ಜೀ,ವೈ) ಜೀವಿಗಳ, ವಿಶೇಷವಾಗಿ ಮಾನವನ, ದೇಹರಚನೆ ಕುರಿತ ಅಧ್ಯಯನ. ಜೀವಿಗಳ ಭೌತರಚನೆ ಅರಿಯುವ ಸಲುವಾಗಿ ಅವನ್ನು ಛೇದಿಸಲಾಗುತ್ತದೆ anatomy
25 ಅಂಗವಿಕಾಸ (ವೈ) ಭ್ರೂಣ ಬೆಳವಣಿಗೆಯ ಆದಿಯಲ್ಲಿ ಜೀವಕೋಶ ಹಾಗೂ ಊತಕಗಳ ವಿಭೇದನ ಪ್ರಕ್ರಿಯೆ ನಡೆದು, ಯಾವ ಜೀವಕೋಶ/ಊತಕ ಯಾವ ಅಂಗವಾಗಿ ಬೆಳೆದು ಪರಿಪೂರ್ಣ ರೂಪವನ್ನು ಪಡೆಯಬೇಕು ಎಂಬುದರ ನಿರ್ಣಯವು ಈ ಹಂತದಲ್ಲಿ ನಡೆದು, ಅದರಂತೆ ಅವು ಬೆಳೆಯುತ್ತವೆ. ಆಕೃತಿ ವಿಕಾಸ. ಅಂಗರಚನ ವಿಕಾಸ. ರೂಪವಿಕಾಸ. ರೂಪೋತ್ಪತ್ತಿ morphogenesis
26 ಅಂಗವಿಚ್ಛೇದನ (ವೈ) ಅಂಗರಚನೆಯ ಅಧ್ಯಯನಕ್ಕಾಗಿ ಜೀವಿಯನ್ನು ಕತ್ತರಿಸುವ ಪ್ರಕ್ರಿಯೆ dissection
27 ಅಂಗಾಂಶ (ಜೀ) ನೋಡಿ : ಊತಕ tissue
28 ಅಂಗಾಂಶ ಕೃಷಿ (ಸ) ನೋಡಿ : ಊತಕ ಕೃಷಿ tissue culture
29 ಅಂಗಾಕರ್ಷಿತ (ಪ್ರಾ, ವೈ) ರಾಸಾಯನಿಕಗಳು, ಔಷಧಗಳು ಹಾಗೂ ಕ್ರಿಮಿಗಳು ಕೆಲವು ಸಲ ಒಂದು ನಿರ್ದಿಷ್ಟ ಅಂಗದತ್ತ ಒಲವನ್ನು ತೋರಿ ಆ ಕಡೆಯೇ ಸಾಗಿ ಅಲ್ಲಿ ಸಂಗ್ರಹ ಆಗುವಿಕೆ. ಅಂಗಸ್ನೇಹಿ organotropic
30 ಅಂಗಾಲು (ಪ್ರಾ) ಉನ್ನತ ವರ್ಗದ ಪ್ರಾಣಿಗಳಲ್ಲಿ ಕಾಲಿನ ತಳಭಾಗ sole