A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 318

Backtrace:

File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 319

Backtrace:

File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 320

Backtrace:

File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler

File: /Appdata/padakanaja.karnataka.gov.in/index.php
Line: 318
Function: require_once

Padakanaja - Dictionary View
ಅನಿಸಿಕೆ

ಪದಕೋಶ: ನವಕರ್ನಾಟಕ ವಿಜ್ಞಾನ - ತಂತ್ರಜ್ಞಾನ ಪದಸಂಪದ | ಕನ್ನಡ-ಕನ್ನಡ-ಇಂಗ್ಲೀಷ್ |ಪ್ರಕಾಶಕರು - ನವಕರ್ನಾಟಕ ಪಬ್ಲಿಕೇಷನ್ಸ್‌ ಪ್ರೈವೇಟ್ ಲಿಮಿಟೆಡ್ (2012)

Show entries
ಕ್ರಮ ಸ೦ಖ್ಯೆ ಇಂಗ್ಲೀಷ್ ಪದ
(English Word)
ಕನ್ನಡ ಪದ
(Kannada Word)
ಕನ್ನಡ ಅರ್ಥ
(Kannada Meaning)
ವಿಷಯ ವರ್ಗೀಕರಣ
(Word Subject)
ವ್ಯಾಕರಣ ವಿಶೇಷ
(Word Grammer)
ಕನ್ನಡ ಉಚ್ಚಾರಣೆ
(Kannada Pronunciation)
ಪರ್ಯಾಯ ಪದ
(Word Synonyms)
ಇಂಗ್ಲೀಷ್ ಅರ್ಥ
(English Meaning)
ಸಂಕ್ಷಿಪ್ತ ವಿವರಣೆ
(Short Description)
ದೀರ್ಘ ವಿವರಣೆ
(Long Description)
ಆಡಳಿತಾತ್ಮಕ ಪದ
(Administrative Word)
51 ಅಂಟುತುರಿ (ವೈ) ಸ್ಟಫೈಲೊಕಾಕೈ ಅಥವಾ ಸ್ಟ್ರಪ್ಟೋಕಾಕೈ ಬ್ಯಾಕ್ಟೀರಿಯಾಗಳಿಂದ ತಲೆದೋರುವ ಚರ್ಮದ ಮೇಲೆ ಕೀವುಗುಳ್ಳೆ ರೂಪದ ತೀವ್ರ ಸೋಂಕು. ಆರಂಭದಲ್ಲಿ ನೀರು ತುಂಬಿದ ಗುಳ್ಳೆಗಳಿದ್ದು, ಅನಂತರ ಅವು ಒಡೆದು ಹಳದಿ ಬಣ್ಣದ ಹೆಪ್ಪಳಿಕೆಗಟ್ಟುತ್ತವೆ. ಇದು ಸಾಮಾನ್ಯವಾಗಿ ಮುಖ ಮತ್ತು ಕೈಗಳಲ್ಲಿ ಹೆಚ್ಚು ಕಂಡುಬರುತ್ತದೆ. ಇಂಪೆಟಿಗೊ impetigo
52 ಅಂಟುಪ್ಲಾಸ್ತ್ರಿ (ವೈ) ಒಂದು ಪಕ್ಕದಲ್ಲಿ ಅಂಟು ಲೇಪಿಸಿರುವ ಹತ್ತಿ, ಕಾಗದ, ಪ್ಲಾಸ್ಟಿಕ್ ಪಟ್ಟಿ; ಗಾಯದ ಮೇಲೆ ಅಂಟಿಸಲು ಇಲ್ಲವೇ ಅದಕ್ಕೆ ಕಟ್ಟಿದ ಪಟ್ಟಿಯನ್ನು ಆ ಸ್ಥಳದಲ್ಲಿ ಬಿಗಿಯಾಗಿ ಹಿಡಿದಿಡಲು ಬಳಸುವ ಬಂಧಕ. ಆಸಂಜನ ಬಂಧಕ, ಅಂಟುಪಟ್ಟಿ adhesive plaster
53 ಅಂಟುರೋಗ (ವೈ) ಗಾಳಿ, ನೀರು ಮೊದಲಾದವುಗಳಿಂದ ಯಾವುದೇ ವ್ಯಕ್ತಿಯ ಶರೀರ ಹೊಕ್ಕು ಅನಂತರ ವ್ಯಕ್ತಿಯಿಂದ ವ್ಯಕ್ತಿಗೆ ಸುಲಭವಾಗಿ ಹರಡುತ್ತ ಹೋಗುವ ರೋಗ. ಸಾಂಕ್ರಾಮಿಕ ರೋಗ infectious disease
54 ಅಂಡ್‌ಗೇಟ್ AND (ಕಂ) ಎಲ್ಲ ಇನ್‌ಪುಟ್(ನಿವೇಶ)ಗಳೂ ಏಕಕಾಲಿಕವಾಗಿ ಶಕ್ತೀಕರಿಸಲ್ಪಟ್ಟಾಗ ಮಾತ್ರ ಔಟ್‌ಪುಟ್ (ನಿರ್ಗಮ) ಸಂಜ್ಞೆಯನ್ನು ಉತ್ಪಾದಿಸುವ ದ್ವಾರ; ಅಂದರೆ ಇನ್‌ಪುಟ್ ಸಂಜ್ಞೆಗಳೆಲ್ಲವೂ ೧ ಆದಾಗ ಮಾತ್ರ ಔಟ್‌ಪುಟ್ ಸಂಜ್ಞೆ ೧ ಆಗುವುದು gate
55 ಅಂಡ (ಜೀ) ಅಂಡಕದಿಂದ ಮೈಯೋಸಿಸ್ (ಅರೆ ವಿದಳನ) ಮೂಲಕ ಉತ್ಪತ್ತಿಯಾದ ಸ್ತ್ರೀಯುಗ್ಮಕ. ಪುಲ್ಲಿಂಗ ಕೋಶಕ್ಕೆ ಹೋಲಿಸಿದರೆ ದೊಡ್ಡ ಗಾತ್ರದ ಮತ್ತು ಚಲನೆ ಇರದ ಸ್ತ್ರೀಲಿಂಗ ಕೋಶ. ಪುಲ್ಲಿಂಗ ಕೋಶದೊಂದಿಗೆ ಕೂಡಿದ ಅನಂತರ ಹೊಸ ಜೀವಿಯಾಗಿ ಅಭಿವರ್ಧಿಸುವ ಗುಣವುಳ್ಳದ್ದು. ಗೋಳಾಕಾರ. ವೈಟಲೀನ್ (ಪೀತಕ) ಪೊರೆಯಿಂದ (ಭ್ರೂಣಾವರಣ) ಆವೃತವಾಗಿರುವುದು. ಅಂಡಕೋಶ ovum
56 ಅಂಡಕ (ಜೀ) ಬೀಜಸಸ್ಯಗಳಲ್ಲಿ ಶಲಾಕೆಗೆ ಲಗತ್ತಾಗಿರುವ ಒಂದು ರಚನೆ. ಇದರೊಳಗೆ ಸ್ತ್ರೀಕೋಶವಿರುವುದು. ಫಲೀಕರಣಾ ನಂತರ ಈ ಕೋಶ ಬೀಜವಾಗುವುದು. (ಪ್ರಾ) ಅಭಿವರ್ಧನೆಯ ಆರಂಭ ಘಟ್ಟಗಳಲ್ಲಿರುವ ಅಂಡ ಅಥವಾ ಬೀಜ ovule
57 ಅಂಡಜನನ (ಪ್ರಾ) ಗರ್ಭಾದಾನಕ್ಕೆ ಸಿದ್ಧತೆಯಾಗಿ ಅಂಡ ಬೆಳೆಯುವ ಹಾಗೂ ಪಕ್ವಗೊಳ್ಳುವ ಪ್ರಕ್ರಿಯೆ oogenesis
58 ಅಂಡಜ ಸ್ತನಿ (ಪ್ರಾ) ಮೊಟ್ಟೆ ಇಡುವ ಕೆಳವರ್ಗದ ಸ್ತನಿ. ಇವುಗಳಲ್ಲಿ ಮೂತ್ರನಾಳ, ಯೋನಿ, ಜೀರ್ಣಾಂಗ ಇವೆಲ್ಲಕ್ಕೂ ಒಂದೇ ದ್ವಾರವಿದ್ದು ಕೆಳಮಟ್ಟದ ವಿಕಾಸಕ್ಕೆ ನಿದರ್ಶನ. ಏಕದ್ವಾರಿ monotreme
59 ಅಂಡನಾಳ (ಪ್ರಾ) ಅಂಡಾಶಯದ ಒಳಗಿನಿಂದ ಹೊರಕ್ಕೆ ಅಥವಾ ಗರ್ಭಾಶಯದೊಳಕ್ಕೆ ಚಾಚಿಕೊಂಡಿರುವ ನಾಳ. ಇದರ ಮೂಲಕ ಅಂಡಗಳು ವಿಸರ್ಜನೆಯಾಗುತ್ತವೆ. oviduct
60 ಅಂಡಲೂಸೈಟ್ (ಭೂವಿ) ಅಲ್ಯೂಮಿನಿಯಮ್ ಸಿಲಿಕೇಟಿನ ಮೂರು ಸ್ಫಟಿಕಾತ್ಮಕ ಖನಿಜಗಳ ಪೈಕಿ ಒಂದು. Al2siO5. ಸಮಚತುರ್ಭುಜಿ, ಕಯನೈಟ್ ಮತ್ತು ಸಿಲ್ಲಿಮನೈಟ್ ಉಳಿದೆರಡು ಖನಿಜಗಳು andalusite