A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 318

Backtrace:

File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 319

Backtrace:

File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 320

Backtrace:

File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler

File: /Appdata/padakanaja.karnataka.gov.in/index.php
Line: 318
Function: require_once

Padakanaja - Dictionary View
ಅನಿಸಿಕೆ

ಪದಕೋಶ: ನವಕರ್ನಾಟಕ ವಿಜ್ಞಾನ - ತಂತ್ರಜ್ಞಾನ ಪದಸಂಪದ | ಕನ್ನಡ-ಕನ್ನಡ-ಇಂಗ್ಲೀಷ್ |ಪ್ರಕಾಶಕರು - ನವಕರ್ನಾಟಕ ಪಬ್ಲಿಕೇಷನ್ಸ್‌ ಪ್ರೈವೇಟ್ ಲಿಮಿಟೆಡ್ (2012)

Show entries
ಕ್ರಮ ಸ೦ಖ್ಯೆ ಇಂಗ್ಲೀಷ್ ಪದ
(English Word)
ಕನ್ನಡ ಪದ
(Kannada Word)
ಕನ್ನಡ ಅರ್ಥ
(Kannada Meaning)
ವಿಷಯ ವರ್ಗೀಕರಣ
(Word Subject)
ವ್ಯಾಕರಣ ವಿಶೇಷ
(Word Grammer)
ಕನ್ನಡ ಉಚ್ಚಾರಣೆ
(Kannada Pronunciation)
ಪರ್ಯಾಯ ಪದ
(Word Synonyms)
ಇಂಗ್ಲೀಷ್ ಅರ್ಥ
(English Meaning)
ಸಂಕ್ಷಿಪ್ತ ವಿವರಣೆ
(Short Description)
ದೀರ್ಘ ವಿವರಣೆ
(Long Description)
ಆಡಳಿತಾತ್ಮಕ ಪದ
(Administrative Word)
61 ಅಂಡವಿಜ್ಞಾನ (ಪ್ರಾ) ಮೊಟ್ಟೆಗಳ, ವಿಶೇಷವಾಗಿ ಹಕ್ಕಿ ಮೊಟ್ಟೆಗಳ, ಅಧ್ಯಯನ ಮಾಡುವ ಪ್ರಾಣಿವಿಜ್ಞಾನ ವಿಭಾಗ oology
62 ಅಂಡಾಣು ಬೀಜ ವರ್ಗಾವಣೆ (ವೈ) ವಯೋಸಂಬಂಧಿತ ಬಂಜೆತನದಿಂದ ಅಥವಾ ಮೈಟೋಕಾಂಡ್ರಿಯಾಕ್ಕೆ ತಗಲಿದ ರೋಗಗಳಿಂದ ನರಳುತ್ತಿರುವ ಮಹಿಳೆ ಅಂಡಾಣು ಬೀಜ ವರ್ಗಾವಣೆ ವಿಧಾನದಿಂದ ಸಂತಾನವನ್ನು ಪಡೆಯಬಹುದು. ಮೊದಲ ಹಂತ, ಈ ಮಹಿಳೆಯ ಅಂಡಾಣುವಿನಲ್ಲಿರುವ ಬೀಜವನ್ನು ಹೊರ ತೆಗೆಯುವುದು. ಎರಡನೆಯ ಹಂತದಲ್ಲಿ ಆರೋಗ್ಯವಂತ ಮಹಿಳೆಯ ಅಂಡಾಣುವನ್ನು ಸಂಗ್ರಹಿಸಿ, ಅದರೊಳಗಿರುವ ಅಂಡವನ್ನು ತೆಗೆದು ಅದರ ಸ್ಥಾನದಲ್ಲಿ ಈಗಾಗಲೇ ಪ್ರತ್ಯೇಕಿಸಿಟ್ಟ ಬೀಜವನ್ನು ಸೇರಿಸುವುದು. ಮೂರನೆಯ ಹಂತದಲ್ಲಿ, ಈ ಕಸಿಗೊಂಡ ಅಂಡಾಣುವನ್ನು ಗಾಜಿನ ತಟ್ಟೆಯಲ್ಲಿಟ್ಟು ವೀರ್ಯಾಣುವಿನ ಸಂಪರ್ಕಕ್ಕೆ ಬರಿಸುವುದು. ನಾಲ್ಕನೆಯ ಹಂತದಲ್ಲಿ ಈ ನೆಡುಪೂರ್ವ ಭ್ರೂಣವನ್ನು ಬಾಡಿಗೆ-ತಾಯಿಯ ಗರ್ಭದಲ್ಲಿ ನಾಟುವುದು. ಈ ವಿಧಾನದಿಂದ ವಯಸ್ಸಾದ ಮಹಿಳೆ ಮಕ್ಕಳನ್ನು ಪಡೆಯಬಹುದು ಹಾಗೂ ಮೈಟೋಕಾಂಡ್ರಿಯಾ ರೋಗಗಳಿಂದ ನರಳುತ್ತಿರುವ ಹೆಂಗಸರೂ ಆರೋಗ್ಯವಂತ ಮಕ್ಕಳನ್ನು ಪಡೆಯಬಹುದು oocyte nuclear transfer
63 ಅಂಡಾಶಯ (ಪ್ರಾ) ಹೆಣ್ಣು ಪ್ರಾಣಿಗಳಲ್ಲಿ ಹಾರ್ಮೋನ್ ಗಳನ್ನು ಉತ್ಪತ್ತಿ ಮಾಡುವ ಹಾಗೂ ಅಂಡಗಳಿಗೆ ಜನ್ಮ ನೀಡುವ ಗ್ರಂಥಿಗಳಿರುವ ಜನನಾಂಗ. ಕಶೇರುಕಗಳಲ್ಲಿ ಇಂಥ ಎರಡು ಜನನಾಂಗಗಳಿರುತ್ತವೆ. (ಸ) ಶಲಾಕೆಯ ತಳದಲ್ಲಿರುವ ಟೊಳ್ಳು ಭಾಗ. ಇದರಲ್ಲಿ ಅಂಡಕಗಳು ಉತ್ಪತ್ತಿಯಾಗುತ್ತವೆ. ಈ ಭಾಗ ಎರಡು ಅಥವಾ ಹೆಚ್ಚು ಶಲಾಕೆಗಳು ಕೂಡಿಯೂ ಉಂಟಾಗಿರಬಹುದು ovary
64 ಅಂಡಾಶಯ ಕುಹರ (ಪ್ರಾ) ಉನ್ನತ ಪ್ರಾಣಿ ವರ್ಗಗಳ ಅಂಡಾಶಯದಲ್ಲಿ ಅಂಡಗಳಿರುವ ಸಂಚಿಯಂಥ ನಾಳಗಳಲ್ಲೊಂದು ovarian follicle
65 ಅಂಡಾಶ್ಮ (ಭೂವಿ) ಸಣ್ಣ ಸಣ್ಣ ದುಂಡು ಕಣಗಳು ಒಟ್ಟುಗೂಡಿ ಆಗಿರುವ ಒಂದು ಬಗೆಯ ಜಲಜಶಿಲೆ/ಸುಣ್ಣ ಕಲ್ಲು. ಇಂಗ್ಲೆಂಡಿನ ಹಾಗೂ ಯೂರೋಪಿನ ಕೆಲವು ಭಾಗಗಳಲ್ಲಿ ಇರುವ ಜುರಾಸಿಕ್ ಭೂಸ್ತರದ ಉನ್ನತ ಭಾಗಗಳಲ್ಲಿ ವಿಶೇಷವಾಗಿ ಲಭ್ಯ oolite
66 ಅಂಡಾಶ್ಮ (ಭೂವಿ) ಕ್ಯಾಲ್ಸಿಯಮ್ ಕಾರ್ಬನೇಟ್, ಕಾಮೊಸೈಟ್ ಅಥವಾ ಡೊಲೊಮೈಟ್‌ನಿಂದ ಕೂಡಿದ, ಹೆಚ್ಚು ಕಡಿಮೆ ಗೋಳೀಯವಾದ, ಮೀನಿನ ಮೊಟ್ಟೆಯನ್ನು ಹೋಲುವ, ವ್ಯಾಸ ೨ ಮಿಮೀಗಿಂತ ಹೆಚ್ಚು ಇರದ, ಸಾಮಾನ್ಯವಾಗಿ ಏಕಕೇಂದ್ರೀಯ ಸ್ತರಗಳಿಂದ ಮತ್ತು/ಅಥವಾ ಅರೀಯ ತಂತುಗಳಿಂದ ರಚಿತವಾದ ಜಲಜಶಿಲೆಯ ಮುದ್ದೆ ಅಥವಾ ಗಟ್ಟಿ. ಸಮುದ್ರ ತಲದಲ್ಲಿ ಅಥವಾ ಸುಣ್ಣಕಲ್ಲು ರಾಶಿಯ ಮಧ್ಯೆ ಕಂಡುಬರುತ್ತದೆ oolith
67 ಅಂಡಿಸೈಟ್ (ಭೂವಿ) ಮಧ್ಯಸ್ಥ ಸಂಯೋಜನೆ ಇದ್ದು ಪ್ಲೇಜಿಯೊಕ್ಲೇಸ್ ಪ್ರಧಾನ ಫೆಲ್ಡ್‌ಸ್ಪಾರ್ ಆಗಿರುವ ಸೂಕ್ಷ್ಮ ಕಣಿಕ ಅಗ್ನಿಶಿಲೆ (ಸಾಧಾರಣವಾಗಿ ಲಾವ) andesite
68 ಅಂಡೋತ್ಸರ್ಗ (ಜೀ) ಅಂಡಗಳು ರಚಿತವಾಗುವುದು; ಸ್ತನಿಗಳಲ್ಲಿ ಅಂಡಾಶಯದಿಂದ ಅಂಡಗಳು ವಿಮೋಚನೆಗೊಳ್ಳುವ ಪ್ರಕ್ರಿಯೆ ovulation
69 ಅಂಡೋತ್ಪಾದಕ (ಪ್ರಾ) ಮೊಟ್ಟೆ ಇಟ್ಟು ಮರಿ ಮಾಡುವ (ಪ್ರಾಣಿ). ಮರಿಯಾಗಿ ಅಭಿವರ್ಧನೆಗೊಳ್ಳುವ ಪ್ರಕ್ರಿಯೆಗಳೆಲ್ಲ ತಾಯಿಯ ಒಡಲಿನ ಹೊರಗೆ ಜರುಗುತ್ತವೆ - ಹಕ್ಕಿಗಳಲ್ಲಿ ಇರುವಂತೆ. ನೋಡಿ : ಜರಾಯುಜ oviparous
70 ಅಂತಃಆಣವಿಕ (ಭೌ) ಅಣುವಿನೊಳಗೆ ನೆಲೆಗೊಂಡ intramolecular