A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 318

Backtrace:

File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 319

Backtrace:

File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 320

Backtrace:

File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler

File: /Appdata/padakanaja.karnataka.gov.in/index.php
Line: 318
Function: require_once

Padakanaja - Dictionary View
ಅನಿಸಿಕೆ

ಪದಕೋಶ: ಶಾಂಕರವೇದಾಂತ ನಿಘಂಟು | ಕನ್ನಡ-ಕನ್ನಡ | ಪ್ರಕಾಶಕರು - ಅಧ್ಯಾತ್ಮ ಪ್ರಕಾಶಕಾರ್ಯಾಲಯ (2014)

Show entries
ಕ್ರಮ ಸ೦ಖ್ಯೆ ಇಂಗ್ಲೀಷ್ ಪದ
(English Word)
ಕನ್ನಡ ಪದ
(Kannada Word)
ಕನ್ನಡ ಅರ್ಥ
(Kannada Meaning)
ವಿಷಯ ವರ್ಗೀಕರಣ
(Word Subject)
ವ್ಯಾಕರಣ ವಿಶೇಷ
(Word Grammer)
ಕನ್ನಡ ಉಚ್ಚಾರಣೆ
(Kannada Pronunciation)
ಪರ್ಯಾಯ ಪದ
(Word Synonyms)
ಇಂಗ್ಲೀಷ್ ಅರ್ಥ
(English Meaning)
ಸಂಕ್ಷಿಪ್ತ ವಿವರಣೆ
(Short Description)
ದೀರ್ಘ ವಿವರಣೆ
(Long Description)
ಆಡಳಿತಾತ್ಮಕ ಪದ
(Administrative Word)
61 ಉಪನಿಷತ್‌-೨ ಯಾರು ಇದರ ಬಳಿಗೆ ಬಂದು (ಉಪ), ನಿಶ್ಚಯದಿಂದ ಇದನ್ನು ಪರಿಶೀಲಿಸುವರೋ ಅವರ ಅವಿದ್ಯಾದಿಗಳನ್ನು ನಾಶಮಾಡುವದರಿಂದ ಇದು ಉಪನಿಷತ್‌ ಎನಿಸುವದು. ಕಠೋಪನಿಷತ್ ಭಾಷ್ಯ. ಮತ್ತು ಮುಂಡಕೋಪನಿಷತ್ ಭಾಷ್ಯ. ಗಳ ಅವತರಣಿಕೆಯನ್ನು ನೋಡಿ. ಈ ವಿದ್ಯೆಯನ್ನು ಹೇಳುವ ಗ್ರಂಥವನ್ನೂ ಉಪನಿಷತ್ತೆಂದು ಕರೆಯುವದು ಉಪಚಾರಕ್ಕೆ.
62 ಉಪನಿಷತ್‌-೩ ಅಭಿಧಾಯಕವಾದ ಶಬ್ದವು. ಬೃಹದಾರಣ್ಯಕೋಪನಿಷತ್ ಭಾಷ್ಯ. ೨-೧-೨೦.
63 ಉಪಾದಾನಕಾರಣಮ್‌ ಯಾವುದನ್ನು ತೆಗೆದುಕೊಂಡರೇ ಕಾರ್ಯವಾಗುವದೋ ಅದು; ಮಣ್ಣು, ಸುವರ್ಣ- ಮುಂತಾದವುಗಳು ಮಡಕೆ, ಒಡವೆಗಳು - ಇವುಗಳಿಗೆ ಉಪಾದಾನಕಾರಣವು. ಬ್ರಹ್ಮಸೂತ್ರ ಭಾಷ್ಯ. ೧-೪-೨೩, ೨-೧-೧, ಇಲ್ಲದಿರುವ ಮಡಕೆ, ಒಡವೆ-ಮುಂತಾದವು ಹೊಸದಾಗಿ ಹುಟ್ಟಿ ಕಾರಣದೊಡನೆ ಸಮವಾಯಸಂಬಂಧದಿಂದ ಸೇರಿಕೊಳ್ಳುವವೆಂದೂ ಮಣ್ಣು ಮುಂತಾದವು ಸಮವಾಯಿ ಕಾರಣಗಳೆಂದೂ ಹೇಳುವ ವೈಶೇಷಿಕರ ಮತವನ್ನು ಆಚಾರ್ಯರು ಖಂಡಿಸಿರುತ್ತಾರೆ! ಬ್ರಹ್ಮಸೂತ್ರ ಭಾಷ್ಯ. ೨-೧-೧೮; ಭಗವದ್ಗೀತಾಭಾಷ್ಯ. ೧೮-೪೮.
64 ಉಪಾಧಿ ಹತ್ತಿರವಿರುವದರಿಂದ ತನ್ನ ಸ್ವಭಾವವನ್ನು ಮತ್ತೊಂದರಲ್ಲಿ ತೋರಿಸುವ ಪದಾರ್ಥ. ಜೀವಾತ್ಮನಿಗೆ ದೇಹ, ಇಂದ್ರಿಯಗಳ ಪ್ರಾಣ, ಮನಸ್ಸು- ಇವು ಉಪಾಧಿಗಳು. ಬ್ರಹ್ಮಸೂತ್ರ ಭಾಷ್ಯ. ೧-೧-೫, ೧-೧-೧೭, ೧-೧-೩೧, ೧-೩-೧೯. ಈ ಉಪಾಧಿಗಳು ಅವಿದ್ಯೆಯಿಂದ ಕಲ್ಪಿತವಾಗಿರುತ್ತವೆ, ಪರಮಾರ್ಥವಲ್ಲ, ಬ್ರಹ್ಮಸೂತ್ರ ಭಾಷ್ಯ. ೩-೨-೧೫.
65 ಉಪಾಧ್ಯುಪಶಮ ಸುಷುಪ್ತಿ ಮುಂತಾದ ಅವಸ್ಥೆಗಳಲ್ಲಿ ಉಪಾಧಿಗಳು ಇಲ್ಲವಾಗುವದು. ಆಗ ಜೀವಾತ್ಮನಿಗೆ ಪರಮಾತ್ಮನೊಡನೆ ಸ್ವರೂಪಸಂಬಂಧವಾಗುವದು. ಬ್ರಹ್ಮಸೂತ್ರ ಭಾಷ್ಯ. ೩-೨-೮, ೩-೨-೩೪, ೩೫.
66 ಉಪಾಸನಮ್‌, ಉಪಾಸನಾ ಒಂದಾನೊಂದು ವಸ್ತುವನ್ನು ಶಾಸ್ತ್ರದಲ್ಲಿ ಹೇಳಿರುವಂತೆ, ಮತ್ತೊಂದು ವಸ್ತುವಿನ ಚಿಂತೆಯು ನಡುವೆ ಬರದಂತೆ, ಅದನ್ನೇ ಎಡೆಬಿಡದೆ ಚಿಂತಿಸುತ್ತಿರುವದು. ತೈತ್ತಿರೀಯೋಪನಿಷತ್ ಭಾಷ್ಯ. ೧-೩, ಬ್ರಹ್ಮಸೂತ್ರ ಭಾಷ್ಯ. ೪-೧-೧; -ಭಗವದ್ಗೀತಾಭಾಷ್ಯ. ೧೨-೩. ಈ ಉಪಾಸನೆಯು ಭಾವನಾರೂಪವಾಗಿಯೂ ಜ್ಞಾನರೂಪವಾಗಿಯೂ ಇರಬಹುದು. ಭಗವದ್ಗೀತಾಭಾಷ್ಯ. ೧೨-೩, ಬೃಹದಾರಣ್ಯಕ್ಯೋಪನಿಷತ್ ಭಾಷ್ಯ. ೧-೪-೭, ಭಾವನಾರೂಪವಾದ ಉಪಾಸನೆಗಳಿಗೆ ಪ್ರಾಣಾದಿಗಳೂ ಸಗುಣಬ್ರಹ್ಮವೂ ವಿಷಯವಾಗಿರುವವು. ಅವುಗಳಿಗೆ ದೃಷ್ಟಫಲವೂ ಅದೃಷ್ಟಫಲವೂ ಉಂಟು. ಕೆಲವಕ್ಕೆ ಜ್ಞಾನೋತ್ಪತ್ತಿ ಮೂಲಕವಾಗಿ ಮುಕ್ತಿಯು ಆಗುವದು. ಬ್ರಹ್ಮಸೂತ್ರ ಭಾಷ್ಯ. ೩-೩-೧, ಭಗವದ್ಗೀತಾಭಾಷ್ಯ. ೮-೧೨, ಪ್ರಶ್ನೋಪನಿಷತ್ ಭಾಷ್ಯ ೫-೧. ಉಪಾಸ್ಯೋಪಾಸಕವ್ಯವಹಾರವೆಲ್ಲ ಅವಿದ್ಯಾವಿಷಯವೇ. ಬ್ರಹ್ಮಸೂತ್ರ ಭಾಷ್ಯ. ೧-೧-೪.
67 ಋಣತ್ರಯಮ್‌ ದೇವಋಣ, ಋಷಋಣ, ಪಿತೃಋಣ - ಎಂಬ ಮೂರನ್ನು ತೀರಿಸಿದ ಬಳಿಕವೇ ಮೋಕ್ಷದಲ್ಲಿ ಮನಸ್ಸಿಡಬೇಕೆಂದು ಶ್ರುತಿಸ್ಮೃತಿಗಳಲ್ಲಿದೆ. ಇದು ಅವಿರಕ್ತರಾದ ಆಜ್ಞರ ವಿಷಯವೆಂಬ ಆಚಾರ್ಯರ ಅಭಿಪ್ರಾಯ. ಐತರೇಯ ಭಾಷ್ಯ. ೨೦, ಬೃಹದಾರಣ್ಯಕೋಪನಿಷತ್. ೧-೪-೧೦, ೪-೫-೧೫.
68 ಋಷಿ ಬಲ್ಲವನು, ತತ್ತ್ವವನ್ನು ಅರಿತಿರುವವನು. ಈ ಮಾತನ್ನು ವೇದ, ಕರ್ಮತತ್ತ್ವವನ್ನು ಬಲ್ಲವನು, ಉಪಾಸನಾತತ್ತ್ವವನ್ನು ಬಲ್ಲವನು, ಪರಮಾರ್ಥ ತತ್ತ್ವವನ್ನು ಬಲ್ಲವನು- ಎಂಬರ್ಥದಲ್ಲಿ ಆಚಾರ್ಯರು ಉಪಯೋಗಿಸಿರುತ್ತಾರೆ. ಐತರೇಯ ಭಾಷ್ಯ. ೨-೫, ಪ್ರಶ್ನೋಪನಿಷತ್ ಭಾಷ್ಯ ೧-೯, ಮುಂಡಕೋಪನಿಷತ್ ಭಾಷ್ಯ. ೩-೬.
69 ಏಕಮ್‌ ಬೇರೆಯಲ್ಲದೆ ಎಲ್ಲೆಲ್ಲಿಯೂ ಒಂದೇ ಆಗಿರುವ, ತನಗೆರಡನೆಯದಿಲ್ಲದ. ಆತ್ಮನು ಏಕನು ಎಂದರೆ ಎಲ್ಲರಿಗೂ ಒಬ್ಬನೇ ಎಂದರ್ಥ; ಅಥವಾ ತನಗಿಂತ ಬೇರೆಯಾದ ಎರಡನೆಯದಿಲ್ಲವನು ಎಂದರ್ಥ. ಏಕವೆಂಬ ಮಾತನ್ನು ಸಂಖ್ಯಾವಾಚಕವಾಗಿ ಉಪಯೋಗಿಸಿಲ್ಲ. ಈಶಾವಾಸ್ಯೋಪನಿಷತ್ ಭಾಷ್ಯ. ೪, ಛಾಂದೋಗ್ಯೋಪನಿಷತ್ದೋಗ್ಯೋಪನಿಷತ್ ಭಾಷ್ಯ. ೬-೨-೧.
70 ಐಕಾಶ್ರಮ್ಯ ಗಾರ್ಹಸ್ಥ್ಯವೆಂಬ ಒಂದು ಆಶ್ರಮವೇ ಶ್ರುತಿಗೆ ಇಷ್ಟವಾದದ್ದೆಂಬ ವಾದವನ್ನು ಆಚಾರ್ಯರು ಖಂಡಿಸಿರುತ್ತಾರೆ. ತೈತ್ತಿರೀಯೋಪನಿಷತ್ ಭಾಷ್ಯ. ೧-೧೧ ಉಪಸಂಹಾರ; ಬೃಹದಾರಣ್ಯಕೋಪನಿಷತ್ ಭಾಷ್ಯ. ೪-೫-೧೫ ಉಪಸಂಹಾರ.