Severity: Notice
Message: Trying to access array offset on value of type null
Filename: controllers/Dictionary.php
Line Number: 318
Backtrace:
File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 319
Backtrace:
File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 320
Backtrace:
File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler
File: /Appdata/padakanaja.karnataka.gov.in/index.php
Line: 318
Function: require_once
ಕ್ರಮ ಸ೦ಖ್ಯೆ | ಇಂಗ್ಲೀಷ್ ಪದ (English Word) |
ಕನ್ನಡ ಪದ (Kannada Word) |
ಕನ್ನಡ ಅರ್ಥ (Kannada Meaning) |
ವಿಷಯ ವರ್ಗೀಕರಣ (Word Subject) |
ವ್ಯಾಕರಣ ವಿಶೇಷ (Word Grammer) |
ಕನ್ನಡ ಉಚ್ಚಾರಣೆ (Kannada Pronunciation) |
ಪರ್ಯಾಯ ಪದ (Word Synonyms) |
ಇಂಗ್ಲೀಷ್ ಅರ್ಥ (English Meaning) |
ಸಂಕ್ಷಿಪ್ತ ವಿವರಣೆ (Short Description) |
ದೀರ್ಘ ವಿವರಣೆ (Long Description) |
ಆಡಳಿತಾತ್ಮಕ ಪದ (Administrative Word) |
---|---|---|---|---|---|---|---|---|---|---|---|
101 | ಕ್ರಿಯಾಕಾರಕಫಲಬುದ್ಧಿಃ | ಇಂಥಿಂಥ ಸಾಧನಗಳಿಂದ ಇಂಥಿಂಥ ಕರ್ಮವು ಆಗಿ ಇಂಥಿಂಥ ಫಲವು ಉಂಟಾಗುವದೆಂಬ ಬುದ್ಧಿಯು. ಇದು ಅವಿದ್ಯೆಯಿಂದ ತೋರಿಕೊಂಡಿರುತ್ತದೆ. ಈ ಬುದ್ಧಿಯು ಸುಷುಪ್ತಿ, ಸಮಾಧಿ- ಮುಂತಾದ ಅವಸ್ಥೆಗಳಲ್ಲಿರುವದಿಲ್ಲ; ದೇಹ, ಇಂದ್ರಿಯ- ಮುಂತಾದವುಗಳೇ ನಾವು ಎಂಬ ಬುದ್ದಿಯಿರುವಾಗಲೇ ಇದು ಇರುತ್ತದೆ. ಆದ್ದರಿಂದ ಇದು ಭ್ರಾಂತಿಯು ಎಂದು ನಿಶ್ಚಯಿಸಿ- ’ನಾನು ಕ್ರಿಯೆಯಾಗಲಿ ಕಾರಕಗಳಾಗಲಿ ಫಲವಾಗಲಿ ಇಲ್ಲದ ಕೇವಲಾತ್ಮನು' ಎಂದು ತಿಳಿಯುವ ವಿದ್ಯೆಯಿಂದ ಅವಿದ್ಯೆಯು ನಾಶವಾಗುವದು. ಭಗವದ್ಗೀತಾಭಾಷ್ಯ. ೧೮-೬೬. | |||||||||
102 | ಕ್ಲೇಶಾಃ | ಅವಿದ್ಯೆ, ಅಸ್ಮಿತೆ ಮುಂತಾದ ಯೋಗಸೂತ್ರದಲ್ಲಿ ಹೇಳಿರುವ ದೋಷಗಳು; ಇವುಗಳು ಜ್ಞಾನದಿಂದ ನಾಶವಾದರೆ ಕರ್ಮಾಶಯವು ಸಂಪೂರ್ಣವಾಗಿ ನಾಶವಾಗುವದು. ಬ್ರಹ್ಮಸೂತ್ರ ಭಾಷ್ಯ. ೩-೩-೩೨. | |||||||||
103 | ಕ್ಷೇತ್ರಕ್ಷೇತ್ರಜ್ಞಸಂಯೋಗಃ | ದೇಹವೇ ಮುಂತಾದ ಅನಾತ್ಮಕ್ಕೂ ಅದನ್ನು ಅರಿಯುತ್ತಿರುವ ಚೈತನ್ಯರೂಪನಾದ ಆತ್ಮನಿಗೂ ಇರುವ ಸ್ವರೂಪಭೇದವನ್ನು ವಿಂಗಡಿಸಿ ಅರಿಯದೇ ಇರುವದರಿಂದ ಆಗಿರುವ ಅನ್ಯೋನ್ಯಾಧ್ಯಾಸ, ಅವಿದ್ಯೆ. ಭಗವದ್ಗೀತಾಭಾಷ್ಯ. ೧೩-೨೬; ಬ್ರಹ್ಮಸೂತ್ರ ಭಾಷ್ಯ. ಉಪೋದ್ಗಾತ. | |||||||||
104 | ಕ್ಷೇಮಃ | ಜ್ಞಾನಿಯ ಶರೀರವು ಬಿದ್ದಬಳಿಕ ಅವಶ್ಯವಾಗಿ ದೊರಕುವ ಮುಕ್ತಿ ಅಥವಾ ಕೈವಲ್ಯ, ಬ್ರಹ್ಮಸೂತ್ರ ಭಾಷ್ಯ. ೪-೧-೧೫. | |||||||||
105 | ಗನ್ಧರ್ವನಗರಮ್ | ಆಕಾಶದಲ್ಲಿ ಅಕಸ್ಮಾತ್ತಾಗಿ ತೋರಿಹಾರುವ ನಗರ, ಮಾಂಡೂಕ್ಯಕಾರಿಕಾ ಭಾಷ್ಯ. ೨-೩೧. | |||||||||
106 | ಗುಣೋಪಸಂಹಾರಃ | ಬೇರೆಬೇರೆ ಕಡೆಯಲ್ಲಿ ಶ್ರುತಿಯಲ್ಲಿ ಕಂಡುಬರುವ ಒಂದೇ ಉಪಾಸನೆಯಲ್ಲಿ ಉಪಾಸ್ಯವಾದ ಬ್ರಹ್ಮದ ಗುಣಗಳನ್ನೆಲ್ಲ ಸೇರಿಸಿಕೊಂಡು ಉಪಾಸನೆ ಮಾಡುವದು, ಬ್ರಹ್ಮಸೂತ್ರ ಭಾಷ್ಯ. ೩-೩-೧೯. | |||||||||
107 | ಗುರುಸಂಪ್ರದಾಯಃ | ಪರಂಪರೆಯಿಂದ ಗುರುಗಳು ಶಿಷ್ಯನಿಗೆ ಕೊಡುವ ಸರಿಯಾದ ಜ್ಞಾನದ ಉಪದೇಶ, ಭಗವದ್ಗೀತಾಭಾಷ್ಯ. ೧೮-೫೦. | |||||||||
108 | ಗುರೂಪಸದನಮ್ | ಗುರುವಿನ ಬಳಿಗೆ ಶಾಸ್ತ್ರದಲ್ಲಿ ವಿಧಿಸಿರುವ ರೀತಿಯಿಂದ ಶಿಷ್ಯನಾಗಿ ಬರುವದು, ಭಗವದ್ಗೀತಾಭಾಷ್ಯ. ೪-೩೯. | |||||||||
109 | ಗುಹಾ | ಹೃದಯ, ಬುದ್ಧಿ. ಬ್ರಹ್ಮವು ಬುದ್ಧಿರೂಪವಾದ ಗುಹೆಯಲ್ಲಿ ತಿಳಿಯಬರುವದರಿಂದ ಅಲ್ಲಿದೆ ಎಂದು ಶ್ರುತಿ ಹೇಳುತ್ತದೆ. ತೈತ್ತಿರೀಯೋಪನಿಷತ್ ಭಾಷ್ಯ. ೨-೧. | |||||||||
110 | ಗುಹಾಗ್ರನ್ಥಯಃ | ಹೃದಯದಲ್ಲಿರುವ ಅವಿದ್ಯಾಗ್ರಂಥಿಗಳು, ಗಂಟಿನಂತೆ ಗಟ್ಟಿಯಾಗಿ ಸೇರಿಕೊಂಡಿರುವ ಅವಿದ್ಯಾಕಾಮಗಳು. ಮುಂಡಕೋಪನಿಷತ್. ೩-೨-೯. |