Severity: Notice
Message: Trying to access array offset on value of type null
Filename: controllers/Dictionary.php
Line Number: 318
Backtrace:
File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 319
Backtrace:
File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 320
Backtrace:
File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler
File: /Appdata/padakanaja.karnataka.gov.in/index.php
Line: 318
Function: require_once
ಕ್ರಮ ಸ೦ಖ್ಯೆ | ಇಂಗ್ಲೀಷ್ ಪದ (English Word) |
ಕನ್ನಡ ಪದ (Kannada Word) |
ಕನ್ನಡ ಅರ್ಥ (Kannada Meaning) |
ವಿಷಯ ವರ್ಗೀಕರಣ (Word Subject) |
ವ್ಯಾಕರಣ ವಿಶೇಷ (Word Grammer) |
ಕನ್ನಡ ಉಚ್ಚಾರಣೆ (Kannada Pronunciation) |
ಪರ್ಯಾಯ ಪದ (Word Synonyms) |
ಇಂಗ್ಲೀಷ್ ಅರ್ಥ (English Meaning) |
ಸಂಕ್ಷಿಪ್ತ ವಿವರಣೆ (Short Description) |
ದೀರ್ಘ ವಿವರಣೆ (Long Description) |
ಆಡಳಿತಾತ್ಮಕ ಪದ (Administrative Word) |
---|---|---|---|---|---|---|---|---|---|---|---|
81 | ಕಾಪಿಲಕಾಣಾದಯಃ | ಕಪಿಲರ ಅನುಯಾಯಿಗಳಾದ ಸಾಂಖ್ಯರು, ಕಣಾದರ ಅನುಯಾಯಿಗಳಾದ ವೈಶೇಷಿಕರು ಮುಂತಾದ ತಾರ್ಕಿಕರು. ಇವರ ತರ್ಕಕ್ಕೆ ಮೂಲಪ್ರಮಾಣವಿಲ್ಲ. ತೈತ್ತಿರೀಯೋಪನಿಷತ್ ಭಾಷ್ಯ. ೨೫೨. | |||||||||
82 | ಕಾಮ | ೧. ಅವಿದ್ಯೆಯಿಂದುಂಟಾಗಿ ಕರ್ಮಕ್ಕೆ ಕಾರಣವಾಗಿರುವ ಇಚ್ಛೆ; ಇದು ಹೃದಯಾಶ್ರಿತವಾಗಿರುವದು, ಆತ್ಮನ ಧರ್ಮವಲ್ಲ. ತೈತ್ತಿರೀಯೋಪನಿಷತ್ ಭಾಷ್ಯ. ಅವತರಣಿಕೆ; ಕಠೋಪನಿಷತ್ ಭಾಷ್ಯ. ೨-೩-೧೪. (೨) ಇಚ್ಛೆಗೆ ವಿಷಯವಾಗಿರುವ ಶಬ್ದಾದಿಗಳು. ಕಠೋಪನಿಷತ್ ಭಾಷ್ಯ. ೧-೨-೩, ೨-೧-೨. | |||||||||
83 | ಕಾಮ್ಯಕರ್ಮ | ಫಲಾರ್ಥಿಗಳಿಗಾಗಿ ಶಾಸ್ತ್ರದಲ್ಲಿ ವಿಧಿಸಿರುವ ಕರ್ಮ; ಇವುಗಳನ್ನು ಬಿಟ್ಟು ಚಿತ್ತಶುದ್ಧಿಗಾಗಿ ನಿತ್ಯಕರ್ಮವನ್ನು ಮಾಡುವವನು ಮೋಕ್ಷಕ್ಕೆ ಅಧಿಕಾರಿ ಭಗವದ್ಗೀತಾಭಾಷ್ಯ. ೨-೪೩, ೪೪. | |||||||||
84 | ಕಾರಕಮ್ | ಕ್ರಿಯೆಯನ್ನುಂಟುಮಾಡುವ ಕರ್ತ್ರಾದಿಸಾಧನ. ಕಾರಕಾಪೇಕ್ಷವಾದದ್ದು ವಸ್ತುವಿನ ತತ್ತ್ವವಲ್ಲ; ಆದ್ದರಿಂದ ಸುಷುಪ್ತಿಯಲ್ಲಿ ಯಾವ ಕಾರಕವನ್ನೂ ಬಯಸದೆ ಇರುವ ಆತ್ಮರೂಪವು ಸ್ವಾಭಾವಿಕವಾದದ್ದು, ಜಾಗ್ರತ್ ಸ್ವಪ್ನಗಳ ರೂಪವು ಆವಿದ್ಯಕ. ತೈತ್ತಿರೀಯೋಪನಿಷತ್ ಭಾಷ್ಯ. ೨-೮, ಶಾಸ್ತ್ರವು ಕಾರಕವಲ್ಲ, ಹೊಸದಾಗಿ ಯಾವದನ್ನೂ ಉಂಟುಮಾಡುವದಿಲ್ಲ. ಭಗವದ್ಗೀತಾಭಾಷ್ಯ. ೩ ಅವತರಣಿಕೆ (ಭಾ. ಭಾ. ೧೪೨) | |||||||||
85 | ಕಾರಣಮ್ | ಸಕಾರಣವಾದದ್ದು ಸತ್ತಲ್ಲ, ಭಗವದ್ಗೀತಾಭಾಷ್ಯ. ೨-೧೬, ಬ್ರಹ್ಮಕ್ಕಿಂತ ಬೇರೆ ಯಾವದೂ ನಿಜವಾಗಿ ಕಾರಣವೆನಿಸಲಾರದು. ಬ್ರಹ್ಮಸೂತ್ರ ಭಾಷ್ಯ. ೧-೨. ೨೭. ಆದ್ದರಿಂದ ಸತ್ತಾದದ್ದು ಕಾರಣವಾದೀತೇ ಹೊರತು ಅಸತ್ತು ಕಾರಣವಲ್ಲ, ಮಾಂಡೂಕ್ಯಕಾರಿಕಾ ಭಾಷ್ಯ. ೩-೨೭; ಸದ್ರೂಪವಾದ ಬ್ರಹ್ಮವು ಮಾಯಿಕವಾದ ಕಾರಣವು, ಪರಮಾರ್ಥ ಕಾರಣವಲ್ಲ. ಮಾಂಡೂಕ್ಯಕಾರಿಕಾ ಭಾಷ್ಯ. ೩-೨೭. | |||||||||
86 | ಕಾರಣಶರೀರಮ್ | ಅವಿದ್ಯೆಯಿಂದ ಕಲ್ಪಿತವಾದ ಶರೀರಬೀಜವು ಎಂಬರ್ಥದಲ್ಲಿ ಈಶಾವಾಸ್ಯ ಭಾಷ್ಯ ೮ರಲ್ಲಿ ಕಾಣುತ್ತದೆ. ಈ ಶಬ್ದವನ್ನು ಮತ್ತೆಲ್ಲಿಯೂ ಭಾಷ್ಯದಲ್ಲಿ ಉಪಯೋಗಿಸಿಲ್ಲ. ಮೂಲಾವಿದ್ಯೆಯೇ ಕಾರಣಶರೀರವು ಎಂಬ ಈಚಿನ ವೇದಾಂತಿಗಳ ವಾದವು ಭಾಷ್ಯದಲ್ಲಿಲ್ಲ. | |||||||||
87 | ಕಾರ್ಯಮ್ | ಕಾರ್ಯವು ಕಾರಣವಾಗಿಯೇ ಮೊದಲು ಇತ್ತು; ಕಾರ್ಯಾವಸ್ಥೆಯಲ್ಲಿಯೂ ಕಾರಣವನ್ನು ಬಿಟ್ಟು ಅದು ಬೇರೆಯಾಗಿರುವದಿಲ್ಲ, ಬ್ರಹ್ಮಸೂತ್ರ ಭಾಷ್ಯ. ೨-೧-೧೪, ೨-೧-೭. | |||||||||
88 | ಕಾರ್ಯಕರಣಸಙ್ಘಾತಃ | ಆತ್ಮನಿಗಾಗಿ ಭೋಗವನ್ನು೦ಟುಮಾಡುವದಕ್ಕೆ ಒಂದರೊಡನೊಂದು ಸೇರಿಕೊಂಡು ವ್ಯಾಪಾರಮಾಡುತ್ತಿರುವ ಶರೀರೇಂದ್ರಿಯಗಳ ಗುಂಪು. ಐತರೇಯ ಭಾಷ್ಯ. (ಭಾಷ್ಯ ಭಾಗ. ೫೧), ತೈತ್ತಿರೀಯ ಭಾಷ್ಯ. ೧-೪. (ಭಾಷ್ಯ ಭಾಗ. ೨೩), ಪ್ರಶ್ನೋಪನಿಷತ್ ಭಾಷ್ಯ ೨೫ (ಭಾಷ್ಯ ಭಾಗ. ೨೫), ಭಗವದ್ಗೀತಾಭಾಷ್ಯ. ೧೩-೨ (ಭಾಷ್ಯ ಭಾಗ. ೨೨೫). ಇದು ಅವಿದ್ಯಾಕಲ್ಪಿತ. ಬ್ರಹ್ಮಸೂತ್ರ ಭಾಷ್ಯ. ೨-೧-೧೪. | |||||||||
89 | ಕಾರ್ಯಕಾರಣಬನ್ಧೌ | ಜ್ಞಾನಾಭಾವವೆಂಬ ಕಾರಣಬಂಧವು ಸುಷುಪ್ತಾತ್ಮನಿಗೂ ಇದರ ಜೊತೆಗೆ ಅನ್ಯಥಾಜ್ಞಾನವೆಂಬ ಕಾರ್ಯಬಂಧವು ಜಾಗ್ರತ್ಸ್ವಪ್ನಾತ್ಮರಿಗೂ ಇರುವವು. ಮಾಂಡೂಕ್ಯಕಾರಿಕಾ ಭಾಷ್ಯ. ೧-೧೧. | |||||||||
90 | ಕಾರ್ಯಕಾರಣಭಾವಃ | ಸತ್ತಾದ ಆತ್ಮನಿಗೂ ಅಸತ್ತಾದ ಜಗತ್ತಿಗೂ ಮಾಯೆಯಿಂದ ಕಾರ್ಯಕಾರಣಭಾವವಿರುತ್ತದೆ, ನಿಜವಾಗಿಲ್ಲ, ಮಾಂಡೂಕ್ಯಕಾರಿಕಾ ಭಾಷ್ಯ. ೩-೨೭; ಧರ್ಮಾಧರ್ಮಗಳಿಗೂ ಶರೀರಕ್ಕೂ ನಿಜವಾದ ಕಾರ್ಯಕಾರಣಭಾವವಿಲ್ಲ. ಮಾಂಡೂಕ್ಯಕಾರಿಕಾ ಭಾಷ್ಯ. ೩-೧೭, ೨೦; ಎಚ್ಚರ ಕನಸುಗಳಿಗೂ ಒಂದಕ್ಕೊಂದಕ್ಕೆ ನಿಜವಾದ ಕಾರ್ಯಕಾರಣಭಾವವಿಲ್ಲ. ಮಾಂಡೂಕ್ಯಕಾರಿಕಾ ಭಾಷ್ಯ. ೪-೩೯. ಪರಮಾರ್ಥವಾಗಿ ಕಾರ್ಯಕಾರಣಭಾವವಿಲ್ಲವೇ ಇಲ್ಲ, ಮಾಂಡೂಕ್ಯಕಾರಿಕಾ ಭಾಷ್ಯ. ೪-೪೦. |