Severity: Notice
Message: Trying to access array offset on value of type null
Filename: controllers/Dictionary.php
Line Number: 318
Backtrace:
File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 319
Backtrace:
File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 320
Backtrace:
File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler
File: /Appdata/padakanaja.karnataka.gov.in/index.php
Line: 318
Function: require_once
ಕ್ರಮ ಸ೦ಖ್ಯೆ | ಇಂಗ್ಲೀಷ್ ಪದ (English Word) |
ಕನ್ನಡ ಪದ (Kannada Word) |
ಕನ್ನಡ ಅರ್ಥ (Kannada Meaning) |
ವಿಷಯ ವರ್ಗೀಕರಣ (Word Subject) |
ವ್ಯಾಕರಣ ವಿಶೇಷ (Word Grammer) |
ಕನ್ನಡ ಉಚ್ಚಾರಣೆ (Kannada Pronunciation) |
ಪರ್ಯಾಯ ಪದ (Word Synonyms) |
ಇಂಗ್ಲೀಷ್ ಅರ್ಥ (English Meaning) |
ಸಂಕ್ಷಿಪ್ತ ವಿವರಣೆ (Short Description) |
ದೀರ್ಘ ವಿವರಣೆ (Long Description) |
ಆಡಳಿತಾತ್ಮಕ ಪದ (Administrative Word) |
---|---|---|---|---|---|---|---|---|---|---|---|
71 | ಐಶ್ವರ್ಯಮ್ | ಎಲ್ಲವನ್ನೂ ಆಳುವ ಸ್ವಾತಂತ್ರ್ಯ. ಐಶ್ವರ್ಯವು ಮನುಷ್ಯನಿಂದ ಹಿಡಿದು ಹಿರಣ್ಯ ಗರ್ಭನವರೆಗೆ ಹೆಚ್ಚುತ್ತಾ ಹೋಗಿರುತ್ತದೆ. ಹಿರಣ್ಯಗರ್ಭನಲ್ಲಿ ಎಲ್ಲರಿಗಿಂತಲೂ ಹೆಚ್ಚಾಗಿದೆ. ನಿತ್ಯೈಶ್ವರ್ಯವು ಪರಮಾತ್ಮನಲ್ಲಿ ಮಾತ್ರ ಸ್ವಾಭಾವಿಕವಾಗಿದೆ. ಬ್ರಹ್ಮಸೂತ್ರ ಭಾಷ್ಯ. ೧-೩-೩೦, ಮುಂಡಕೋಪನಿಷತ್ ಭಾಷ್ಯ. ೧-೧-೧, ಭಗವದ್ಗೀತಾಭಾಷ್ಯ. ಅವತರಣಿಕೆ, ಬ್ರಹ್ಮಸೂತ್ರ ಭಾಷ್ಯ. ೪-೪-೧೭. ಯೋಗಮಹಿಮೆಯಿಂದಲೂ ಈಶ್ವರಾನುಗ್ರಹದಿಂದ ಐಶ್ವರ್ಯವು ಬರಬಹುದು ಮಾಂಡೂಕ್ಯಕಾರಿಕಾ ಭಾಷ್ಯ. ೪-೯. ಆತ್ಮನಲ್ಲಿ ಈಶ್ವರ, ಈಶಿತವ್ಯ- ಎಂಬ ವಿಭಾಗವು ವ್ಯಾವಹಾರಿಕ. ಬ್ರಹ್ಮಸೂತ್ರ ಭಾಷ್ಯ. ೨-೧-೧, ೩-೨-೩೮. | |||||||||
72 | ಕರಣಾನಿ | ಬುದ್ಧೀಂದ್ರಿಯಗಳು ಐದು, ಕರ್ಮೇಂದ್ರಿಯಗಳು ಐದು, ಮನಸ್ಸು ಒಂದು - ಹೀಗೆ ಹನ್ನೊಂದು ಇಂದ್ರಿಯಗಳೂ ಆತ್ಮನಿಗೆ ಸಾಧನವಾಗಿರುವದರಿಂದ ಕರಣಗಳೆನಿಸುವವು. ಭಗವದ್ಗೀತಾಭಾಷ್ಯ. ೧೩-೫; ಮನಸ್ಸನ್ನು ಮನಸ್ಸು ಬುದ್ಧಿ ಎಂದು ಒಡೆದು ಹನ್ನೆರಡು ಕರಣಗಳನ್ನೂ (ಭಗವದ್ಗೀತಾಭಾಷ್ಯ. ೧೮-೧೪), ಅಹಂಕಾರವನ್ನು ಬೇರ್ಪಡಿಸಿ ಹದಿಮೂರೆಂದೂ (ಭಗವದ್ಗೀತಾಭಾಷ್ಯ. ೧೩-೨೦), ಚಿತ್ತವನ್ನು ಬೇರ್ಪಡಿಸಿ ಹದಿನಾಲ್ಕೆಂದೂ (ಬ್ರಹ್ಮಸೂತ್ರ ಭಾಷ್ಯ. ೨-೪-೬) ಭಾವಿಸಬಹುದು. ಇವುಗಳಲ್ಲಿ ಹತ್ತು ಇಂದ್ರಿಯಗಳು ಬಾಹ್ಯಕರಣಗಳು, ಮನಸ್ಸು ಅಂತಃಕರಣವು. ಇವುಗಳಿಗೆ ಮುಖ್ಯಪ್ರಾಣವನ್ನೂ ಸೇರಿಸಿದರೆ ಪ್ರಾಣಗಳು ಎಂದು ಕರೆಯುವದುಂಟು. (ಬ್ರಹ್ಮಸೂತ್ರ ಭಾಷ್ಯ. ೨-೪-೬). ಆದರೆ ಮುಖ್ಯಪ್ರಾಣವು ಕರಣವಲ್ಲ(ಬ್ರಹ್ಮಸೂತ್ರ ಭಾಷ್ಯ. ೨-೪-೧೧) ಏಕೆಂದರೆ ಅದಕ್ಕೆ ವಿಷಯವಿಲ್ಲ. ಕರಣಗಳು ಸುಷುಪ್ತಿಯಲ್ಲಿ ಆತ್ಮನಲ್ಲಿ ಒಂದಾಗಿ ಬಿಡುವವು. (ಪ್ರಶ್ನೋಪನಿಷತ್ ಭಾಷ್ಯ ೪-೧), ಆತ್ಮನಿಗೆ ಜಾಗ್ರತ್ಸ್ವಪ್ನಗಳಲ್ಲಿ ಕರಣಗಳ ಅಪೇಕ್ಷೆಯಿಂದಲೇ ಕರ್ತೃತ್ವಭೋಕ್ತೃತ್ವವುಂಟಾಗಿರುತ್ತದೆ; ಅವನು ಸ್ವತಃ ಕರ್ತೃವೂ ಅಲ್ಲ, ಭೋಕ್ತೃವೂ ಅಲ್ಲ (ಬ್ರಹ್ಮಸೂತ್ರ ಭಾಷ್ಯ. ೨-೩-೪೦), | |||||||||
73 | ಕರ್ತೃತ್ವಭೋಕ್ತೃತ್ವೇ | ಇದನ್ನು ಮಾಡಿ ಇದನ್ನು ಅನುಭವಿಸುವೆನೆಂಬ ಸ್ವಭಾವವು. ಇದು ಉಪಾಧಿಗಳಾದ ಶರೀರೇಂದ್ರಿಯಗಳ ಧರ್ಮವನ್ನು ಮೇಲೆ ಹಾಕಿಕೊಳ್ಳುವ ಅಧ್ಯಾಸದಿಂದಲೇ ಆತ್ಮನಿಗೆ ಉಂಟಾಗಿರುತ್ತವೆ. ಅಧ್ಯಾಸಭಾಷ್ಯ, ಬ್ರಹ್ಮಸೂತ್ರ ಭಾಷ್ಯ. ೨-೩-೪೦, ಭಗವದ್ಗೀತಾಭಾಷ್ಯ. ೧೮-೬೭. | |||||||||
74 | ಕರ್ಮ | ಶಾಸ್ತ್ರದಲ್ಲಿ ಮಾಡೆಂದು ಅಥವಾ ಬಿಡೆಂದು ವಿಧಿಸಿರುವದು. ಬ್ರಹ್ಮಸೂತ್ರ ಭಾಷ್ಯ. ೧-೧-೪, ಗೇ. ಭಾ. ೧೮-೨೪. ಇದು ಪುರುಷತಂತ್ರವು, ಅಂದರೆ ಮಾಡುವದಕ್ಕೂ ಬಿಡುವದಕ್ಕೂ ಬರುವಂಥದ್ದು. ಬ್ರಹ್ಮಸೂತ್ರ ಭಾಷ್ಯ. ೧-೧-೪; ಅವಿದ್ಯಾ ಪೂರ್ವಕವಾದದ್ದು ಭಗವದ್ಗೀತಾಭಾಷ್ಯ. ೧೮-೬೬. ಕರ್ಮವನ್ನು ಕ್ರಿಯಾಕಾರಕಫಲ ವಿಜ್ಞಾನಪೂರ್ವಕವಾಗಿ ಮಾಡತಕ್ಕದ್ದಿರುತ್ತದೆ. ಮುಂಡಕೋಪನಿಷತ್ ಭಾಷ್ಯ. ೧-೧-೬, ಭಗವದ್ಗೀತಾಭಾಷ್ಯ. ೨-೨೧, ಬ್ರಹ್ಮಸೂತ್ರ ಭಾಷ್ಯ. ೧-೧-೧ ಜ್ಞಾನವು ಈ ವಿಷಯದಲ್ಲಿ ಕರ್ಮಕ್ಕೆ ತೀರ ವಿರುದ್ಧವಾಗಿರುತ್ತದೆ. | |||||||||
75 | ಕರ್ಮಕಾಣ್ಡಮ್ | ಕರ್ಮವನ್ನು ವಿಧಿಸುವ ಅಥವಾ ನಿಷೇಧಿಸಿರುವ ವೇದ ಭಾಗ. ಇಷ್ಟದ ಪ್ರಾಪ್ತಿಗೂ ಅನಿಷ್ಟದ ನಿವೃತ್ತಿಗೂ ಉಪಾಯವೇನೆಂಬುದನ್ನು ತಿಳಿಸುವದಕ್ಕೆ ಕರ್ಮಕಾಂಡವು ಹೊರಟಿರುತ್ತದೆ. ದೇಹವ್ಯತಿರಿಕ್ತನಾದ ಆತ್ಮನಿದ್ದಾನೆಂದು ತಿಳಿದವರಿಗೆ ಈ ಕಾಂಡವು ಕರ್ಮವೆಂಬ ಉಪಾಯವನ್ನು ತಿಳಿಸುತ್ತದೆ. ಬೃಹದಾರಣ್ಯಕೋಪನಿಷತ್ ಭಾಷ್ಯ ಅವತರಣಿಕೆ, ತೈತ್ತಿರೀಯೋಪನಿಷತ್ ಭಾಷ್ಯ. ಅವತರಣಿಕೆ. | |||||||||
76 | ಕರ್ಮಾಙ್ಗಾವಬದ್ಧೋಪಾಸನಾನಿ | ಕರ್ಮಗಳನ್ನು ಮಾಡುವವರೇ ಮಾಡಬಹುದಾದ ಉಪಾಸನೆಗಳು. ಈ ಉಪಾಸನೆಗಳಿಗೆ ಅಲ್ಲಲ್ಲಿ ಹೇಳಿರುವ ಫಲಗಳೇ ಆಗುವವು. ಇವೂ ಜ್ಞಾನದಂತೆ ಮಾನಸವಾಗಿರುವದರಿಂದ ಜ್ಞಾನ ಪ್ರಕರಣದಲ್ಲಿಯೇ ಅವುಗಳನ್ನು ಹೇಳಿದೆ. ಛಾಂದೋಗ್ಯೋಪನಿಷತ್ದೋಗ್ಯೋಪನಿಷತ್ ಭಾಷ್ಯ. ಅವತರಣಿಕೆ | |||||||||
77 | ಕರ್ಮೇನ್ದ್ರಿಯಾಣಿ | ವಾಕ್ಕು, ಪಾಣಿ, ಪಾದ, ಪಾಯು, ಉಪಸ್ಥ- ಎಂಬ ಕ್ರಿಯೆಯನ್ನು ಮಾಡುವದಕ್ಕೆ ಸಾಧನವಾಗಿರುವ ಇಂದ್ರಿ ಯಗಳು. ಭಗವದ್ಗೀತಾಭಾಷ್ಯ. ೩-೬, ೧೩- -೫. | |||||||||
78 | ಕಲಾಪ್ರಲಯಃ | ಪ್ರಾಣನೇ ಮುಂತಾದ ಹದಿನಾರು ಕಲೆಗಳನ್ನು ಜ್ಞಾನದಿಂದ ಹುಸಿಯೆಂದು ಅರಿತುಕೊಂಡು ಆತ್ಮನಲ್ಲಿಯೇ ಅಡಗಿಸುವದು. ಪ್ರಶ್ನೋಪನಿಷತ್ ಭಾಷ್ಯ ೬-೫. | |||||||||
79 | ಕಲ್ಪಿತ | ಅಧ್ಯಸ್ತವಾಗಿರುವ, ತಪ್ಪು ತಿಳಿವಳಿಕೆಯಿಂದ ಕಾಣುವ. | |||||||||
80 | ಕಷಾಯ | ರಾಗದ್ವೇಷವೇ ಮುಂತಾದ ಅಂತಃಕರಣದೋಷವು. ಮರದ ಚಕ್ಕೆಯೇ ಮುಂತಾದವುಗಳಿಂದಾಗುವ ಬಣ್ಣದಂತೆ ಇರುವದರಿಂದ ಇದಕ್ಕೆ ಕಷಾಯವೆಂದು ಹೆಸರು. ಛಾಂದೋಗ್ಯೋಪನಿಷತ್ದೋಗ್ಯೋಪನಿಷತ್ ಭಾಷ್ಯ. ೭-೨೬-೨. |