A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 318

Backtrace:

File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 319

Backtrace:

File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 320

Backtrace:

File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler

File: /Appdata/padakanaja.karnataka.gov.in/index.php
Line: 318
Function: require_once

Padakanaja - Dictionary View
ಅನಿಸಿಕೆ

ಪದಕೋಶ: ಕಂಪ್ಯೂಟರ್ ತಂತ್ರಜ್ಞಾನ ಪದವಿವರಣ ಕೋಶ | ಇಂಗ್ಲೀಷ್-ಕನ್ನಡ |ಪ್ರಕಾಶಕರು - ಕನ್ನಡ ಅಭಿವೃದ್ಧಿ ಪ್ರಾಧಿಕಾರ (2017)

Show entries
ಕ್ರಮ ಸ೦ಖ್ಯೆ ಇಂಗ್ಲೀಷ್ ಪದ
(English Word)
ಕನ್ನಡ ಪದ
(Kannada Word)
ಕನ್ನಡ ಅರ್ಥ
(Kannada Meaning)
ವಿಷಯ ವರ್ಗೀಕರಣ
(Word Subject)
ವ್ಯಾಕರಣ ವಿಶೇಷ
(Word Grammer)
ಕನ್ನಡ ಉಚ್ಚಾರಣೆ
(Kannada Pronunciation)
ಪರ್ಯಾಯ ಪದ
(Word Synonyms)
ಇಂಗ್ಲೀಷ್ ಅರ್ಥ
(English Meaning)
ಸಂಕ್ಷಿಪ್ತ ವಿವರಣೆ
(Short Description)
ದೀರ್ಘ ವಿವರಣೆ
(Long Description)
ಆಡಳಿತಾತ್ಮಕ ಪದ
(Administrative Word)
11 App ಆಪ್ ಸ್ಮಾರ್ಟ್‌ಫೋನ್ - ಟ್ಯಾಬ್ಲೆಟ್ ಸೇರಿದಂತೆ ವಿವಿಧ ವಿದ್ಯುನ್ಮಾನ ಸಾಧನಗಳಲ್ಲಿ ಬಳಕೆಯಾಗುವ ತಂತ್ರಾಂಶ, 'ಅಪ್ಲಿಕೇಶನ್' ಎಂಬ ಹೆಸರಿನ ಹ್ರಸ್ವರೂಪ ಆಪ್ ಎನ್ನುವುದು ಸ್ಮಾರ್ಟ್‌ಫೋನ್ ಬಳಕೆದಾರರಿಗೆಲ್ಲ ಅತ್ಯಂತ ಪರಿಚಿತವಾದ ಹೆಸರು. ನಮ್ಮ ಮೊಬೈಲಿನಲ್ಲಿ ಬೇರೆಬೇರೆ ಆಪ್‌ಗಳನ್ನು ಬಳಸಿ ಬೇರೆಬೇರೆ ಕೆಲಸಗಳನ್ನು ಸಾಧಿಸಿಕೊಳ್ಳುವುದು ನಮಗೆಲ್ಲ ಚೆನ್ನಾಗಿಯೇ ಗೊತ್ತು. ಆಪ್ ಎನ್ನುವುದು 'ಅಪ್ಲಿಕೇಶನ್' ಎಂಬ ಹೆಸರಿನ ಹ್ರಸ್ವರೂಪ. ಅಪ್ಲಿಕೇಶನ್ ಎಂದರೂ ಆಪ್ ಎಂದರೂ ತಂತ್ರಾಂಶವೇ. ಮೊಬೈಲ್ ಸಾಧನಗಳಲ್ಲಿ ಬಳಕೆಯಾಗುವ ಪ್ರತಿ ಕಾರ್ಯಾಚರಣ ವ್ಯವಸ್ಥೆಯಲ್ಲೂ ಹಲವಾರು ರೀತಿಯ ಆಪ್‌ಗಳು ದೊರಕುತ್ತವೆ. ಇದಕ್ಕಾಗಿ ಆಯಾ ಕಾರ್ಯಾಚರಣ ವ್ಯವಸ್ಥೆಗಳು ತಮ್ಮದೇ ಆದ ಆಪ್ ಸ್ಟೋರುಗಳನ್ನು ರೂಪಿಸಿಕೊಂಡಿರುತ್ತವೆ. ಸ್ವಂತದ ಓಎಸ್ ಇಲ್ಲದ ಅಮೆಜಾನ್‌ನಂತಹ ಸಂಸ್ಥೆಗಳೂ ಆಪ್ ಅಂಗಡಿಗಳನ್ನು ರೂಪಿಸಿಕೊಂಡಿವೆ. ಆಪ್ ಎಂದತಕ್ಷಣ ಮೊಬೈಲು - ಟ್ಯಾಬ್ಲೆಟ್ಟುಗಳಷ್ಟೇ ನಮ್ಮ ನೆನಪಿಗೆ ಬರುತ್ತವಲ್ಲ, ಆಪ್‌ಗಳ ಬಳಕೆಯಾಗುವುದು ಈ ಸಾಧನಗಳಲ್ಲಿ ಮಾತ್ರವೇನಲ್ಲ. ಇದೀಗ ಕಂಪ್ಯೂಟರುಗಳಲ್ಲೂ ಆಪ್ ಬಳಕೆ ಸಾಮಾನ್ಯವಾಗಿದೆ. ಗೂಗಲ್ ಕ್ರೋಮ್ ಬ್ರೌಸರ್‌ನ ಬಳಕೆದಾರರು ಅದರಲ್ಲಿ ಅನೇಕ ಬಗೆಯ ಆಪ್‌ಗಳನ್ನು ಬಳಸಬಹುದು. ಗೂಗಲ್‌ನದೇ ಉತ್ಪನ್ನವಾದ 'ಕ್ರೋಮ್‌ಬುಕ್'ನಂತಹ ಕಂಪ್ಯೂಟರ್ ಕೊಂಡವರು ಈ ಆಪ್‌ಗಳನ್ನು ಮಾತ್ರವೇ ಬಳಸುವುದು ಸಾಧ್ಯ. ಮೊಬೈಲುಗಳಲ್ಲಿ ಇರುವಂತೆ ವಿಂಡೋಸ್ ಕಾರ್ಯಾಚರಣ ವ್ಯವಸ್ಥೆಯ ಹೊಸ ಆವೃತ್ತಿಗಳಲ್ಲೂ (ಉದಾ: ವಿಂಡೋಸ್ ೧೦) ಆಪ್ ಸ್ಟೋರ್ ಇದೆ. ಮೊಬೈಲ್ ಆಪ್ ಸ್ಟೋರುಗಳಂತೆ ಇಲ್ಲಿಯೂ ಉಚಿತ ಹಾಗೂ ಹಣ ಪಾವತಿಸಿ ಬಳಸಬೇಕಾದ ಆಪ್‌ಗಳೆರಡೂ ದೊರಕುತ್ತವೆ.
12 App Store ಆಪ್ ಸ್ಟೋರ್ ಸ್ಮಾರ್ಟ್‌ಫೋನ್, ಟ್ಯಾಬ್ಲೆಟ್ ಮುಂತಾದ ವಿದ್ಯುನ್ಮಾನ ಸಾಧನಗಳಲ್ಲಿ ಬಳಸಬಹುದಾದ ಆಪ್‌ಗಳನ್ನು ಪಡೆದುಕೊಳ್ಳಲು ರೂಪಿಸಲಾಗಿರುವ ವ್ಯವಸ್ಥೆ ಆಂಡ್ರಾಯ್ಡ್, ಐಓಎಸ್, ವಿಂಡೋಸ್ - ಹೀಗೆ ಹಲವಾರು ಕಾರ್ಯಾಚರಣ ವ್ಯವಸ್ಥೆಗಳು (ಓಎಸ್) ಇಂದಿನ ಸ್ಮಾರ್ಟ್‌ಫೋನುಗಳಲ್ಲಿ ಬಳಕೆಯಾಗುತ್ತವೆ. ಸ್ಮಾರ್ಟ್‌ಫೋನ್ ಎಂದಾಕ್ಷಣ ಅದರಲ್ಲಿ ಉಪಯೋಗಿಸಲು ಆಪ್‌ಗಳು ಬೇಕಲ್ಲ, ಯಾವ ಮೊಬೈಲಿನಲ್ಲಿ ಯಾವೆಲ್ಲ ಆಪ್‌ಗಳು ಸಿಗುತ್ತವೆ ಎನ್ನುವುದು ಅದರಲ್ಲಿ ಬಳಕೆಯಾಗುವ ಕಾರ್ಯಾಚರಣ ವ್ಯವಸ್ಥೆಯನ್ನೇ ನೇರವಾಗಿ ಅವಲಂಬಿಸಿರುತ್ತದೆ. ಇಂತಹ ಪ್ರತಿಯೊಂದು ಕಾರ್ಯಾಚರಣ ವ್ಯವಸ್ಥೆಯಲ್ಲೂ ಆಪ್‌ಗಳನ್ನು ಪಡೆದುಕೊಳ್ಳಲು ನಿರ್ದಿಷ್ಟ ವ್ಯವಸ್ಥೆ ಇರುತ್ತದೆ. ನಮಗೆ ಅಗತ್ಯವಾದ ಆಪ್ ಅನ್ನು ಹುಡುಕುವ, ಆರಿಸಿಕೊಳ್ಳುವ, ಅಗತ್ಯವಾದರೆ ಹಣ ಪಾವತಿಸುವ ಮತ್ತು ಡೌನ್‌ಲೋಡ್ ಮಾಡಿ ಅನುಸ್ಥಾಪಿಸಿಕೊಳ್ಳುವ (ಇನ್‌ಸ್ಟಾಲ್) ಸೌಲಭ್ಯವನ್ನು ಒದಗಿಸುವ ಇಂತಹ ವ್ಯವಸ್ಥೆಗಳನ್ನು ಆಪ್ ಅಂಗಡಿಗಳೆಂದೇ (ಆಪ್ ಸ್ಟೋರ್) ಕರೆಯುವುದು ವಾಡಿಕೆ. ಬರಿಯ ಸ್ಮಾರ್ಟ್‌ಫೋನ್‌ಗಳಿಗಷ್ಟೇ ಅಲ್ಲ, ಟ್ಯಾಬ್ಲೆಟ್ಟುಗಳಿಗೆ - ಸ್ಮಾರ್ಟ್ ವಾಚುಗಳಿಗೆಂದೇ ರೂಪಿಸಲಾದ ಆಪ್‌ಗಳೂ ಇಂತಹ ಅಂಗಡಿಗಳಲ್ಲಿ ದೊರಕುತ್ತವೆ. ಸ್ಮಾರ್ಟ್ ಟೀವಿಗಳಲ್ಲಿ ಪ್ರತ್ಯೇಕ ಆಪ್ ಅಂಗಡಿಗಳಿರುವುದೂ ಉಂಟು. ಬೇರೆಬೇರೆ ಕಾರ್ಯಾಚರಣ ವ್ಯವಸ್ಥೆಗಳಲ್ಲಿ ಆಪ್ ಅಂಗಡಿಗಳನ್ನು ಬೇರೆಬೇರೆ ಹೆಸರಿನಿಂದ ಗುರುತಿಸುವ ಅಭ್ಯಾಸವಿದೆ. ಐಓಎಸ್ ಸಾಧನಗಳಲ್ಲಿ 'ಆಪಲ್ ಆಪ್ ಸ್ಟೋರ್' ಇದ್ದರೆ ಆಂಡ್ರಾಯ್ಡ್‌ನಲ್ಲಿ 'ಗೂಗಲ್ ಪ್ಲೇ' ಸ್ಟೋರ್ ಇದೆ. ಅದೇ ರೀತಿ ವಿಂಡೋಸ್ ಫೋನುಗಳಲ್ಲಿ 'ವಿಂಡೋಸ್ ಸ್ಟೋರ್' ಇರುತ್ತದೆ. ಅಂದಹಾಗೆ ಕಾರ್ಯಾಚರಣ ವ್ಯವಸ್ಥೆಯ ನಿರ್ಮಾತೃಗಳು ಮಾತ್ರ ಆಪ್ ಅಂಗಡಿಗಳನ್ನು ರೂಪಿಸಬೇಕು ಎಂದೇನೂ ಇಲ್ಲ. ಸ್ವಂತ ಮೊಬೈಲ್ ಓಎಸ್ ಇಲ್ಲದ ಹಲವು ಸಂಸ್ಥೆಗಳೂ ಇಂತಹ ಆಪ್ ಅಂಗಡಿಗಳನ್ನು ರೂಪಿಸಿ ನಡೆಸುತ್ತಿವೆ. ಇಂತಹ ಸಂಸ್ಥೆಗಳ ಸಾಲಿನಲ್ಲಿ ನಾವು ಅಮೆಜಾನ್, ಸ್ಯಾಮ್‌ಸಂಗ್ ಮುಂತಾದ ದೊಡ್ಡ ಹೆಸರುಗಳನ್ನೂ ನೋಡಬಹುದು.
13 Application Software ಅಪ್ಲಿಕೇಶನ್ ಸಾಫ್ಟ್‌ವೇರ್ ಬಳಕೆದಾರನ ನಿರ್ದಿಷ್ಟ ಉದ್ದೇಶವನ್ನು ಪೂರೈಸಿಕೊಳ್ಳಲು ನೆರವಾಗುವ ತಂತ್ರಾಂಶ ಮೊಬೈಲ್ ಫೋನ್, ಕಂಪ್ಯೂಟರ್ ಮುಂತಾದ ಸಾಧನಗಳಿಗೆಲ್ಲ ಪಾಠಹೇಳುವ ಕೆಲಸ ಸಾಫ್ಟ್‌ವೇರ್, ಅಂದರೆ ತಂತ್ರಾಂಶದ್ದು. ತಂತ್ರಾಂಶಗಳು ಯಾವ ಉದ್ದೇಶಕ್ಕಾಗಿ ಬಳಕೆಯಾಗುತ್ತವೆ ಎನ್ನುವುದರ ಆಧಾರದ ಮೇಲೆ ಅವನ್ನು ಬೇರೆಬೇರೆ ಗುಂಪುಗಳಲ್ಲಿ ವರ್ಗೀಕರಿಸುತ್ತಾರೆ. ಆನ್ವಯಿಕ ಹಾಗೂ ವ್ಯವಸ್ಥಾ ತಂತ್ರಾಂಶಗಳು ಇಂತಹ ಗುಂಪುಗಳಿಗೆ ಎರಡು ಉದಾಹರಣೆ. ಬಳಕೆದಾರನ ನಿರ್ದಿಷ್ಟ ಉದ್ದೇಶವನ್ನು (ಉದಾ: ಪತ್ರ ಟೈಪ್ ಮಾಡುವುದು, ಲೆಕ್ಕಾಚಾರವನ್ನು ದಾಖಲಿಸಿಕೊಳ್ಳುವುದು ಇತ್ಯಾದಿ) ಪೂರೈಸಿಕೊಳ್ಳಲು ನೆರವಾಗುವ ತಂತ್ರಾಂಶಗಳನ್ನು ಅಪ್ಲಿಕೇಶನ್ ಸಾಫ್ಟ್‌ವೇರ್, ಅಂದರೆ ಆನ್ವಯಿಕ ತಂತ್ರಾಂಶಗಳೆಂದು ಕರೆಯುತ್ತಾರೆ. ಪದಸಂಸ್ಕರಣೆ, ಲೆಕ್ಕಾಚಾರ, ಸ್ಲೈಡ್ ಪ್ರೆಸೆಂಟೇಶನ್‌ಗಳಲ್ಲೆಲ್ಲ ನೆರವಾಗುವ ತಂತ್ರಾಂಶಗಳು (ಹಾಗೂ ಮೊಬೈಲ್ ಆಪ್‌ಗಳು) ಆನ್ವಯಿಕ ತಂತ್ರಾಂಶಗಳೇ. ಆನ್ವಯಿಕ ತಂತ್ರಾಂಶಗಳು ಕೆಲಸಮಾಡಲು ನೆರವಾಗುವ ಆಪರೇಟಿಂಗ್ ಸಿಸ್ಟಂನಂತಹ ತಂತ್ರಾಂಶಗಳಿಗೆ ಸಿಸ್ಟಂ ಸಾಫ್ಟ್‌ವೇರ್, ಅಂದರೆ ವ್ಯವಸ್ಥಾ ತಂತ್ರಾಂಶಗಳೆಂದು ಹೆಸರು. ಆನ್ವಯಿಕ ತಂತ್ರಾಂಶಗಳಂತೆ ಯಾವುದೋ ಒಂದು ನಿರ್ದಿಷ್ಟ ಉದ್ದೇಶಕ್ಕಾಗಿ ನಾವು ಇವನ್ನು ಬಳಸುವುದಿಲ್ಲ, ನಿಜ. ಆದರೆ ಆನ್ವಯಿಕ ತಂತ್ರಾಂಶಗಳು ಸರಿಯಾಗಿ ಕೆಲಸಮಾಡಲು ವ್ಯವಸ್ಥಾ ತಂತ್ರಾಂಶಗಳ ಬೆಂಬಲ ಅತ್ಯಗತ್ಯ.
14 Aspect Ratio ಆಸ್ಪೆಕ್ಟ್ ರೇಶಿಯೋ ಡಿಜಿಟಲ್ ರೂಪದಲ್ಲಿರುವ ಚಿತ್ರವೊಂದರ ಉದ್ದ ಮತ್ತು ಅಗಲಗಳ ನಡುವಿನ ಅನುಪಾತ ಡಿಜಿಟಲ್ ರೂಪದಲ್ಲಿರುವ ಚಿತ್ರವೊಂದರ ಉದ್ದ ಮತ್ತು ಅಗಲಗಳ ನಡುವಿನ ಅನುಪಾತವನ್ನು ಅದರ 'ಆಸ್ಪೆಕ್ಟ್ ರೇಶಿಯೋ' ಸೂಚಿಸುತ್ತದೆ. ಉದಾಹರಣೆಗೆ ಒಂದು ಚಿತ್ರದ ಅಗಲ ಅದರ ಎತ್ತರದ ಒಂದೂವರೆಪಟ್ಟು ದೊಡ್ಡದಿದೆ ಎನ್ನುವುದಾದರೆ ಅದರ ಆಸ್ಪೆಕ್ಟ್ ರೇಶಿಯೋ ೩:೨ ಆಗಿರುತ್ತದೆ. ಪ್ರದರ್ಶಕಗಳು (ಡಿಸ್ಪ್ಲೇ) ಹಾಗೂ ಮುದ್ರಿತ ಛಾಯಾಚಿತ್ರಗಳ ಉದ್ದ-ಅಗಲಗಳ ಅನುಪಾತವನ್ನು ಪ್ರತಿನಿಧಿಸಲೂ ಆಸ್ಪೆಕ್ಟ್ ರೇಶಿಯೋವನ್ನೇ ಬಳಸಲಾಗುತ್ತದೆ. ಚಿತ್ರಗಳನ್ನು ಮುದ್ರಿಸುವಾಗ ಹಾಗೂ ಬೇರೆಬೇರೆ ಗಾತ್ರದ ಪರದೆಗಳ ಮೇಲೆ ಪ್ರದರ್ಶಿಸುವಾಗ ಅದರ ಆಸ್ಪೆಕ್ಟ್ ರೇಶಿಯೋ ಕಡೆಗೆ ಗಮನಹರಿಸಬೇಕಾದ್ದು ಅನಿವಾರ್ಯ. ಉದಾಹರಣೆಗೆ ೪:೩ ಆಸ್ಪೆಕ್ಟ್ ರೇಶಿಯೋದಲ್ಲಿ ತೆಗೆದ ಚಿತ್ರವನ್ನು ನೀವು ೬"x೪" ಗಾತ್ರದಲ್ಲಿ ಮುದ್ರಿಸಹೊರಟರೆ ಚಿತ್ರದ ಸ್ವಲ್ಪ ಭಾಗ ಕತ್ತರಿಸಿಹೋಗುತ್ತದೆ. ಅದೇ ೩:೨ ಆಸ್ಪೆಕ್ಟ್ ರೇಶಿಯೋದಲ್ಲಿ ಕ್ಲಿಕ್ಕಿಸಿದ ಚಿತ್ರವನ್ನು ೬"x೪" ಗಾತ್ರದಲ್ಲಿ ಪೂರ್ಣವಾಗಿ ಮುದ್ರಿಸಿಕೊಳ್ಳಬಹುದು. ೪:೩ ಆಸ್ಪೆಕ್ಟ್ ರೇಶಿಯೋ ಇರುವ ಚಿತ್ರ ೬"x೪.೫" ಗಾತ್ರದಲ್ಲಿ ಸರಿಯಾಗಿ ಮುದ್ರಣವಾಗುತ್ತದೆ. ಇದೇರೀತಿ ೧೬:೯ ಆಸ್ಪೆಕ್ಟ್ ರೇಶಿಯೋ ಇರುವ ಟೀವಿಯಲ್ಲಿ ೩:೨ ಆಸ್ಪೆಕ್ಟ್ ರೇಶಿಯೋ ಇರುವ ಚಿತ್ರವನ್ನು ನೋಡಿದರೆ ಎರಡೂ ಬದಿಗಳಲ್ಲಿ ಕಪ್ಪು ಬಣ್ಣ ಕಾಣಿಸುತ್ತದೆ; ೧೬:೯ ಆಸ್ಪೆಕ್ಟ್ ರೇಶಿಯೋ ಇರುವ ಚಿತ್ರವನ್ನೇ ನೋಡಿದರೆ ಈ ಸಮಸ್ಯೆ ಇರದು! ಬಹುತೇಕ ಕ್ಯಾಮೆರಾಗಳಲ್ಲಿ ಚಿತ್ರ ಕ್ಲಿಕ್ಕಿಸುವ ಮುನ್ನವೇ ನಮಗೆ ಬೇಕಾದ ಆಸ್ಪೆಕ್ಟ್ ರೇಶಿಯೋ ಹೊಂದಿಸಿಕೊಳ್ಳುವುದು ಸಾಧ್ಯ. ಕ್ಲಿಕ್ಕಿಸಿದ ನಂತರದಲ್ಲಿ ಚಿತ್ರದ ಒಂದಷ್ಟು ಭಾಗವನ್ನು ಕತ್ತರಿಸುವ ಮೂಲಕ ಅವುಗಳ ಆಸ್ಪೆಕ್ಟ್ ರೇಶಿಯೋ ಬದಲಿಸಿಕೊಳ್ಳಬಹುದು. ಕಂಪ್ಯೂಟರಿನಲ್ಲಿ ಚಿತ್ರಗಳನ್ನು ಹಿಗ್ಗಿಸಲು ಇಲ್ಲವೇ ಕುಗ್ಗಿಸಲು ಪ್ರಯತ್ನಿಸುವಾಗ ಅವುಗಳ ಮೂಲ ಆಸ್ಪೆಕ್ಟ್ ರೇಶಿಯೋ ಉಳಿಸಿಕೊಳ್ಳಬೇಕಾಗುತ್ತದೆ.
15 Attachment ಅಟ್ಯಾಚ್‌ಮೆಂಟ್ ಇಮೇಲ್ ಸಂದೇಶದ ಜೊತೆಗೆ ಕಳುಹಿಸುವ ಕಡತ ಇಮೇಲ್ ಸಂದೇಶದ ಜೊತೆಗೆ ಕಳುಹಿಸುವ ಕಡತ ಅಥವಾ ಕಡತಗಳನ್ನು 'ಅಟ್ಯಾಚ್‌ಮೆಂಟ್' ಎಂದು ಗುರುತಿಸಲಾಗುತ್ತದೆ. ಪಠ್ಯ, ಚಿತ್ರ, ವೀಡಿಯೋ - ಹೀಗೆ ಹಲವು ಬಗೆಯ ಅಟ್ಯಾಚ್‌ಮೆಂಟ್‌ಗಳನ್ನು ಇಮೇಲ್ ಸಂದೇಶದೊಡನೆ ಕಳುಹಿಸುವುದು ಸಾಧ್ಯ. ಇಮೇಲ್ ಸೇವೆ ಒದಗಿಸುವ ಸಂಸ್ಥೆಗಳು ತಮ್ಮ ಸೇವೆ ಬಳಸಿ ಎಷ್ಟು ಗಾತ್ರದ ಕಡತಗಳನ್ನು ಕಳುಹಿಸಬಹುದು ಎಂದು ನಿರ್ಧರಿಸುತ್ತವೆ. ಆ ಮಿತಿಗಿಂತ ಹೆಚ್ಚು ಗಾತ್ರದ ಕಡತಗಳನ್ನು ಅಟ್ಯಾಚ್‌ಮೆಂಟ್ ಆಗಿ ಕಳುಹಿಸುವಂತಿಲ್ಲ. ಅವಕಾಶವಿದ್ದಾಗಲೂ ತೀರಾ ದೊಡ್ಡ ಗಾತ್ರದ ಅಟ್ಯಾಚ್‌ಮೆಂಟುಗಳನ್ನು ಕಳುಹಿಸುವುದು ಉತ್ತಮ ಅಭ್ಯಾಸವೇನಲ್ಲ. ಸಾಧ್ಯವಾದ ಕಡೆ ನಾವು ಕಳಿಸಹೊರಟಿರುವ ಕಡತದ ಗಾತ್ರವನ್ನು ಆದಷ್ಟೂ ಕಡಿಮೆಮಾಡುವುದು, ಹೆಚ್ಚು ಸಂಖ್ಯೆಯ ಕಡತಗಳಿದ್ದಾಗ ಅವನ್ನೆಲ್ಲ ಒಟ್ಟುಸೇರಿಸಿ ಜಿಪ್ ಮಾಡುವುದು ಒಳ್ಳೆಯದು. ಅಟ್ಯಾಚ್‌ಮೆಂಟ್ ರೂಪದಲ್ಲಿ ನಾವು ಏನನ್ನು ಕಳುಹಿಸುತ್ತಿದ್ದೇವೆ ಎನ್ನುವುದನ್ನು ಸಂದೇಶದಲ್ಲಿ ಬರೆಯುವುದೂ ಅಪೇಕ್ಷಣೀಯ. ಸಂದೇಶ ಪಡೆದುಕೊಂಡವರು ಅಟ್ಯಾಚ್‌ಮೆಂಟ್ ಅನ್ನು ಸುಲಭಕ್ಕೆ ತೆರೆಯುವಂತಿರಬೇಕಾದ್ದೂ ಅತ್ಯಗತ್ಯ. ಉದಾ: ನುಡಿ ಕಡತ ಕಳಿಸಿದ್ದರೆ ಅದನ್ನು 'ನುಡಿ' ತಂತ್ರಾಂಶ ಇದ್ದವರು ಮಾತ್ರ ತೆರೆದು ನೋಡಬಹುದು. ಇಲ್ಲವಾದರೆ ಬರೀ ಗೋಜಲು ಚಿಹ್ನೆ ಕಾಣುತ್ತವೆ. ಅಂಥ ಸಾಧ್ಯತೆ ಇದ್ದಾಗ ಕಡತವನ್ನು ಪಿಡಿಎಫ್ ಮಾಡಿ ಕಳಿಸಬಹುದು. ಇಮೇಲ್ ಸೇವೆ ಒದಗಿಸುವ ಸಂಸ್ಥೆಗಳು ಬಳಕೆದಾರರ ಸುರಕ್ಷತೆಯ ದೃಷ್ಟಿಯಿಂದ ಕೆಲವು ಬಗೆಯ ಕಡತಗಳನ್ನು (ಉದಾ: ಪ್ರೋಗ್ರಾಮ್‌ಗಳು) ಅಟ್ಯಾಚ್‌ಮೆಂಟ್ ರೂಪದಲ್ಲಿ ಕಳುಹಿಸದಂತೆ ನಿರ್ಬಂಧಿಸಿರುತ್ತವೆ. ಆದರೂ ಕೂಡ ನಿಮಗೆ ಬಂದ ಯಾವುದೇ ಅಟ್ಯಾಚ್‌ಮೆಂಟ್ ತೆರೆಯುವ ಮುನ್ನ ಅದನ್ನು ಆಂಟಿವೈರಸ್ ಬಳಸಿ ಸ್ಕ್ಯಾನ್ ಮಾಡುವುದು ಒಳ್ಳೆಯದು. ಆನ್‌ಲೈನ್ ನಮೂನೆಗಳೊಡನೆ ಲಗತ್ತಿಸುವ ಕಡತಗಳನ್ನೂ ಅಟ್ಯಾಚ್‌ಮೆಂಟ್‌ಗಳೆಂದು ಗುರುತಿಸುವ ಅಭ್ಯಾಸವಿದೆ. ಇಮೇಲ್ ಸಂದೇಶಕ್ಕಾಗಲೀ ಆನ್‌ಲೈನ್ ನಮೂನೆಗಳಲ್ಲಾಗಲಿ ಹೀಗೆ ಕಡತವನ್ನು ಲಗತ್ತಿಸುವ ಪ್ರಕ್ರಿಯೆಯನ್ನು 'ಅಟ್ಯಾಚ್ ಮಾಡುವುದು' ಎಂದು ಕರೆಯುತ್ತಾರೆ.
16 Augmented Reality ಆಗ್‌ಮೆಂಟೆಡ್ ರಿಯಾಲಿಟಿ ವಾಸ್ತವ ಸಂಗತಿಗಳನ್ನು ಇನ್ನಷ್ಟು ಸಮೃದ್ಧಗೊಳಿಸುವುದು. ಕಣ್ಣಮುಂದಿನ ನೈಜ ದೃಶ್ಯಕ್ಕೆ ಪೂರಕವಾದ ಛಾಯಾವಾಸ್ತವ (ವರ್ಚುಯಲ್) ಮಾಹಿತಿಯನ್ನು ಪ್ರದರ್ಶಿಸಲು ಅನುವುಮಾಡಿಕೊಡುವ ತಂತ್ರಜ್ಞಾನ ನಮ್ಮ ಕಣ್ಣಮುಂದಿನ ದೃಶ್ಯವನ್ನು ಗಮನಿಸಿಕೊಂಡು ಅದಕ್ಕೆ ಪೂರಕವಾದ ಮಾಹಿತಿಯನ್ನು ಒದಗಿಸುವ ತಂತ್ರಜ್ಞಾನವನ್ನು 'ಆಗ್‌ಮೆಂಟೆಡ್ ರಿಯಾಲಿಟಿ' (ಎಆರ್) ಎಂದು ಕರೆಯುತ್ತಾರೆ. ಮೊಬೈಲ್ ಫೋನ್, ಸ್ಮಾರ್ಟ್ ಕನ್ನಡಕ ಮುಂತಾದ ಹಲವು ಸಾಧನಗಳ ಮೂಲಕ ನಮ್ಮನ್ನು ತಲುಪಬಲ್ಲ ಈ ಮಾಹಿತಿ ಚಿತ್ರ, ಧ್ವನಿ ಅಥವಾ ಪಠ್ಯ - ಯಾವ ರೂಪದಲ್ಲಾದರೂ ಇರಬಹುದು. ಒಟ್ಟಾರೆಯಾಗಿ ತಂತ್ರಜ್ಞಾನದ ಮೂಲಕ ಲಭ್ಯವಾಗುವ ಮಾಹಿತಿಗೂ ನಮ್ಮ ಕಣ್ಣಿಗೆ ಕಾಣುವ ವಾಸ್ತವ ಜಗತ್ತಿಗೂ ನಡುವೆ ವ್ಯತ್ಯಾಸವೇ ಇಲ್ಲವೇನೋ ಎನ್ನುವಂತಹ ಭಾವನೆ ಮೂಡಿಸುವುದು ಈ ತಂತ್ರಜ್ಞಾನದ ಮುಖ್ಯ ಉದ್ದೇಶ. ಶಿಕ್ಷಣ, ವೈದ್ಯಕೀಯ, ಪುರಾತತ್ವ ವಿಜ್ಞಾನ, ಪ್ರವಾಸೋದ್ಯಮ, ಗೃಹನಿರ್ಮಾಣ ವಿಜ್ಞಾನ, ಯಂತ್ರೋಪಕರಣ ನಿರ್ವಹಣೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಈ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸುವುದು ಸಾಧ್ಯ ಎಂದು ತಜ್ಞರು ಹೇಳುತ್ತಾರೆ. ಭಾರತವೂ ಸೇರಿದಂತೆ ಹಲವು ದೇಶಗಳ ಪತ್ರಿಕೆಗಳಲ್ಲಿ - ಜಾಹೀರಾತುಗಳಲ್ಲಿ ಈ ತಂತ್ರಜ್ಞಾನ ಈಗಾಗಲೇ ಬಳಕೆಯಾಗುತ್ತಿದೆ. ನಿರ್ದಿಷ್ಟ ಚಿತ್ರವನ್ನು ಮೊಬೈಲ್ ಕ್ಯಾಮೆರಾ ಬಳಸಿ ಸ್ಕ್ಯಾನ್ ಮಾಡಿದಾಗ ಅಲ್ಲಿ ಛಾಯಾಚಿತ್ರದ ಬದಲು ವೀಡಿಯೋ ಕಾಣಿಸಿಕೊಳ್ಳುವುದು ಈ ತಂತ್ರಜ್ಞಾನ ಬಳಕೆಯಾಗುವ ಬಗೆಯ ಉದಾಹರಣೆಗಳಲ್ಲೊಂದು.
17 Authentication ಅಥೆಂಟಿಕೇಶನ್ ನಿರ್ದಿಷ್ಟ ಸೇವೆ ಪಡೆಯಲು ಪ್ರಯತ್ನಿಸುತ್ತಿರುವ ವ್ಯಕ್ತಿ ಅಧಿಕೃತ ಗ್ರಾಹಕನೋ ಅಲ್ಲವೋ ಎಂದು ಗುರುತಿಸಲು ಬಳಕೆಯಾಗುವ ವ್ಯವಸ್ಥೆ ನಿಮ್ಮ ಆಪ್ತರು ಕಳುಹಿಸಿದ ಇಮೇಲ್ ಸಂದೇಶ ನಿಮಗೆ ಸಿಗುವುದು ಹೇಗೆ? ನೀವು ನಿಮ್ಮ ಇಮೇಲ್ ಖಾತೆಗೆ ಲಾಗಿನ್ ಆಗುತ್ತೀರಿ, ಅಲ್ಲಿ ಆ ಸಂದೇಶ ಓದುತ್ತೀರಿ - ಅಷ್ಟೇ ತಾನೇ? ಈ ಪ್ರಕ್ರಿಯೆಯ ಮೊದಲ ಹಂತ - ಖಾತೆಗೆ ಲಾಗಿನ್ ಆಗುವುದು - ಮೇಲ್ನೋಟಕ್ಕೆ ಸರಳವೆಂದು ತೋರಿದರೂ ಬಹಳ ಕ್ಲಿಷ್ಟವಾದ ಹಂತ. ನಿಮ್ಮ ವಿವರಗಳನ್ನು (ಯೂಸರ್‌ನೇಮ್, ಪಾಸ್‌ವರ್ಡ್ ಇತ್ಯಾದಿ) ಪರಿಶೀಲಿಸುವುದು, ಹೆಸರನ್ನೂ ಪಾಸ್‌ವರ್ಡನ್ನೂ ಹೊಂದಿಸಿ ಸರಿಯಿದೆಯೇ ನೋಡುವುದು, ಪದೇಪದೇ ತಪ್ಪು ವಿವರಗಳನ್ನು ದಾಖಲಿಸಿದಾಗ ಸುರಕ್ಷತೆಯ ದೃಷ್ಟಿಯಿಂದ ಖಾತೆಯನ್ನು ಲಾಕ್ ಮಾಡುವುದು - ಹೀಗೆ ಅನೇಕ ಕೆಲಸಗಳು ಈ ಹಂತದಲ್ಲಿ ನಡೆಯುತ್ತವೆ. ದಾಖಲಿಸಿದ ಪಾಸ್‌ವರ್ಡನ್ನು ರವಾನಿಸುವಾಗ ಅದು ಕುತಂತ್ರಾಂಶಗಳ ಕೈಗೆ ಸಿಕ್ಕದಂತೆ ನೋಡಿಕೊಳ್ಳುವುದೂ ಈ ಹಂತದ ಜವಾಬ್ದಾರಿಗಳಲ್ಲೊಂದು. ಇಮೇಲ್ ಮಾತ್ರವೇ ಅಲ್ಲ, ಸೋಶಿಯಲ್ ನೆಟ್‌ವರ್ಕಿನಲ್ಲಿ, ಆನ್‌ಲೈನ್ ಬ್ಯಾಂಕಿಂಗ್ ತಾಣಗಳಲ್ಲಿ, ಕಚೇರಿಯ ಕಂಪ್ಯೂಟರುಗಳಲ್ಲೂ ಇಂತಹ ವ್ಯವಸ್ಥೆಯನ್ನು ನಾವು ಕಾಣಬಹುದು. ನಿರ್ದಿಷ್ಟ ಸೇವೆ ಪಡೆಯಲು ಪ್ರಯತ್ನಿಸುತ್ತಿರುವ ವ್ಯಕ್ತಿ ಅಧಿಕೃತ ಗ್ರಾಹಕನೋ ಅಲ್ಲವೋ ಎಂದು ಗುರುತಿಸಲು ಬಳಕೆಯಾಗುವ ಈ ವ್ಯವಸ್ಥೆಯನ್ನು 'ಅಥೆಂಟಿಕೇಶನ್' ಅಥವಾ 'ದೃಢೀಕರಣ' ಎಂದು ಕರೆಯುತ್ತಾರೆ. ಹೀಗೆ ದೃಢೀಕರಿಸಲು ಯೂಸರ್‌ನೇಮ್ - ಪಾಸ್‌ವರ್ಡ್‌ಗಳನ್ನು ಬಳಸುವುದು ಸಾಮಾನ್ಯ ಅಭ್ಯಾಸ. ಇದರ ಜೊತೆಗೆ ಈ ಉದ್ದೇಶಕ್ಕಾಗಿ ಒನ್‌ಟೈಮ್ ಪಾಸ್‌ವರ್ಡ್ (ಓಟಿಪಿ), ಬಯೋಮೆಟ್ರಿಕ್ ಅಥೆಂಟಿಕೇಶನ್ (ಬೆರಳ ಗುರುತು - ಕಣ್ಣಿನ ಪಾಪೆ ಬಳಸಿ ದೃಢೀಕರಣ) ಮುಂತಾದ ತಂತ್ರಗಳನ್ನೂ ಬಳಸಲಾಗುತ್ತದೆ.
18 Autoplay ಆಟೋಪ್ಲೇ ಕಡತಗಳು, ತಂತ್ರಾಂಶಗಳು ತಮ್ಮಷ್ಟಕ್ಕೆ ತಾವೇ ಚಾಲೂ ಆಗುವ ಪ್ರಕ್ರಿಯೆ ಕೆಲವೊಂದು ಜಾಲತಾಣಗಳನ್ನು ತೆರೆದಾಗ ಅಲ್ಲಿರುವ ವೀಡಿಯೋಗಳು ತಮ್ಮಷ್ಟಕ್ಕೆ ತಾವೇ ಚಾಲೂ ಆಗುವುದನ್ನು ನೀವು ಗಮನಿಸಿರಬಹುದು. ಯೂಟ್ಯೂಬ್‌ನಲ್ಲಿ ನೋಡುತ್ತಿರುವ ವೀಡಿಯೋ ಮುಗಿದ ತಕ್ಷಣ ಇನ್ನೊಂದು ವೀಡಿಯೋ ಪ್ರಾರಂಭವಾಗುವುದೂ ನಿಮ್ಮ ಗಮನಕ್ಕೆ ಬಂದಿರಲು ಸಾಧ್ಯ. ಧ್ವನಿ ಹಾಗೂ ವೀಡಿಯೋ ರೂಪದ ಕಡತಗಳು ಹೀಗೆ ತಮ್ಮಷ್ಟಕ್ಕೆ ತಾವೇ ಚಾಲೂ ಆಗುವ ಪ್ರಕ್ರಿಯೆಯನ್ನು 'ಆಟೋಪ್ಲೇ' ಎಂದು ಕರೆಯುತ್ತಾರೆ. ಬಳಕೆದಾರರಿಂದ ಯಾವುದೇ ಆದೇಶವನ್ನು (ಇನ್‌ಪುಟ್) ನಿರೀಕ್ಷಿಸದೆ ತನ್ನಷ್ಟಕ್ಕೆ ತಾನೇ ಪ್ರಾರಂಭವಾಗುವುದು ಈ ಪ್ರಕ್ರಿಯೆಯ ಸ್ವರೂಪ. ಹೊಸದೊಂದು ಶೇಖರಣಾ ಮಾಧ್ಯಮವನ್ನು (ಉದಾ: ಪೆನ್ ಡ್ರೈವ್ ಅಥವಾ ಮೆಮೊರಿ ಕಾರ್ಡ್) ಕಂಪ್ಯೂಟರಿಗೆ ಸಂಪರ್ಕಿಸಿದಾಗ ಅದರಲ್ಲಿರುವ ಮಾಹಿತಿಯೂ ಇದೇ ರೀತಿ ಸ್ವಯಂಚಾಲಿತವಾಗಿ ತೆರೆದುಕೊಳ್ಳುವಂತೆ ಮಾಡುವುದು ಸಾಧ್ಯ. ಈ ಪ್ರಕ್ರಿಯೆಗೂ 'ಆಟೋಪ್ಲೇ' ಎಂದೇ ಹೆಸರು. ಆಟೋಪ್ಲೇ ಸ್ವರೂಪ ಹೇಗಿರಬೇಕೆಂದು ತೀರ್ಮಾನಿಸುವ, ಯಾವುದೇ ಮಾಹಿತಿ ಸ್ವಯಂಚಾಲಿತವಾಗಿ ತೆರೆದುಕೊಳ್ಳದಂತೆ ತಡೆಯುವ ಸ್ವಾತಂತ್ರ್ಯವೂ ಬಳಕೆದಾರರಿಗೆ ಇರುತ್ತದೆ. ವೀಡಿಯೋಗಳು ನಮ್ಮ ಇಚ್ಛೆಗೆ ವಿರುದ್ಧವಾಗಿ ಆಟೋಪ್ಲೇ ಆಗದಂತೆ ತಡೆಯುವುದೂ ಸಾಧ್ಯ. ಆಟೋಪ್ಲೇ ಪ್ರಕ್ರಿಯೆಯನ್ನು ಪ್ರತಿಬಂಧಿಸುವ ಸೌಲಭ್ಯ ಫೇಸ್‌ಬುಕ್ ಹಾಗೂ ಯೂಟ್ಯೂಬ್ ಆಯ್ಕೆಗಳಲ್ಲಿ ದೊರಕುತ್ತದೆ. ಫೇಸ್‌ಬುಕ್‌ನಲ್ಲಿ ಈ ಆಯ್ಕೆ 'ಸೆಟಿಂಗ್ಸ್' > 'ವೀಡಿಯೋಸ್' ಅಡಿಯಲ್ಲಿರುತ್ತದೆ. 'ಆಟೋಪ್ಲೇ ವೀಡಿಯೋಸ್' ಅನ್ನು 'ಆಫ್' ಎಂದು ಸೂಚಿಸುವ ಮೂಲಕ ವೀಡಿಯೋಗಳು ಸ್ವಯಂಚಾಲಿತವಾಗಿ ಚಾಲೂ ಆಗುವುದನ್ನು ತಪ್ಪಿಸಬಹುದು. ವೀಡಿಯೋ ಇದ್ದಕ್ಕಿದ್ದಂತೆ ಪ್ರಾರಂಭವಾದಾಗ ಮುಜುಗರವಾಗುವುದನ್ನು, ಮೊಬೈಲ್ ಡೇಟಾ ವ್ಯರ್ಥವಾಗುವುದನ್ನೆಲ್ಲ ಈ ಸೌಲಭ್ಯ ಬಳಸುವ ಮೂಲಕ ತಪ್ಪಿಸಬಹುದು.
19 Autoresponder ಆಟೋರೆಸ್ಪಾಂಡರ್ ಇಮೇಲ್ ಖಾತೆದಾರರ ಪರವಾಗಿ ಸ್ವಯಂಚಾಲಿತ ಪ್ರತ್ಯುತ್ತರಗಳನ್ನು ಕಳಿಸುವ ಸವಲತ್ತು ಸಂಸ್ಥೆಗಳ ಗ್ರಾಹಕ ಸೇವಾ ವಿಭಾಗಕ್ಕೆ ಇಮೇಲ್ ಸಂದೇಶ ಕಳಿಸಿದಾಗ "ನಿಮ್ಮ ಪತ್ರ ತಲುಪಿದೆ" ಎಂದು ಹೇಳುವ ಪ್ರತಿಕ್ರಿಯೆ ಥಟ್ಟನೆ ಪ್ರತ್ಯಕ್ಷವಾಗುವುದನ್ನು ನೀವು ಗಮನಿಸಿರಬಹುದು. ಇದೇ ರೀತಿ "ನಾನು ರಜೆಯಲ್ಲಿದ್ದೇನೆ, ಕಚೇರಿಗೆ ಮರಳಿದ ಕೂಡಲೇ ಉತ್ತರಿಸುವೆ" ಎನ್ನುವಂತಹ ಸಂದೇಶಗಳು ನಿಮ್ಮ ಮಿತ್ರರ ಖಾತೆಗಳಿಂದಲೂ ಬಂದಿರಬಹುದು. ಇಮೇಲ್ ಖಾತೆದಾರರ ಪರವಾಗಿ ಇಂತಹ ಪೂರ್ವನಿರ್ಧಾರಿತ ಸಂದೇಶಗಳನ್ನು ಕಳುಹಿಸುವುದು ಒಂದು ತಂತ್ರಾಂಶದ ಕೆಲಸ. ಸ್ವಯಂಚಾಲಿತವಾಗಿ (ಆಟೋಮ್ಯಾಟಿಕ್) ಪ್ರತ್ಯುತ್ತರಗಳನ್ನು (ರೆಸ್ಪಾನ್ಸ್) ಕಳಿಸುವುದರಿಂದಲೇ ಈ ತಂತ್ರಾಂಶವನ್ನು 'ಆಟೋರೆಸ್ಪಾಂಡರ್' ಎಂದು ಕರೆಯುತ್ತಾರೆ. 'ಆಟೋಮ್ಯಾಟಿಕ್ ರಿಪ್ಲೈ' ಹಾಗೂ 'ವೆಕೇಶನ್ ರೆಸ್ಪಾಂಡರ್' ಎಂದೂ ಕರೆಸಿಕೊಳ್ಳುವ ಈ ಸೌಲಭ್ಯ ಬಹುತೇಕ ಎಲ್ಲ ಇಮೇಲ್ ಸೇವೆಗಳಲ್ಲೂ ಇರುತ್ತದೆ. ಕಚೇರಿಗೆ ರಜೆ ಹಾಕಿದ್ದಾಗ, ಅಂತರಜಾಲ ಸಂಪರ್ಕವಿಲ್ಲದ ಸ್ಥಳಗಳಲ್ಲಿದ್ದಾಗ ನಮಗೆ ಬರುವ ಇಮೇಲ್ ಸಂದೇಶಗಳಿಗೆ ಈ ಸೌಲಭ್ಯ ಬಳಸಿ ಸ್ವಯಂಚಾಲಿತ ಉತ್ತರಗಳನ್ನು ಕಳಿಸುವುದು ಸಾಧ್ಯ. ನಿಮ್ಮ ಪತ್ರಕ್ಕೆ ಪ್ರತಿಕ್ರಿಯೆ ನೀಡುವುದು ಯಾವಾಗ ಸಾಧ್ಯವಾಗಬಹುದು ಎನ್ನುವ ಮಾಹಿತಿಯನ್ನು ಈ ಉತ್ತರಗಳಲ್ಲಿ ಸೂಚಿಸುವುದು ಸಾಮಾನ್ಯ ಅಭ್ಯಾಸ. ಇಂತಹ ಉತ್ತರಗಳನ್ನು ಯಾವ ದಿನಾಂಕದಿಂದ ಯಾವ ದಿನಾಂಕದವರೆಗೆ ಕಳಿಸಬೇಕು ಎಂದು ಸೂಚಿಸುವುದು ಕೂಡ ಸಾಧ್ಯ. ಗ್ರಾಹಕ ಸೇವಾ ವಿಭಾಗಕ್ಕೆ ಕಳಿಸಿದ ಪತ್ರಕ್ಕೆ ಉತ್ತರಿಸುವಾಗ ಸ್ವೀಕೃತಿ ಸಂಖ್ಯೆಯಂತಹ ಹೆಚ್ಚುವರಿ ಮಾಹಿತಿಯೂ ಸೇರಬೇಕಾಗುತ್ತದಲ್ಲ, ಅದಕ್ಕಾಗಿ ಕೊಂಚ ಹೆಚ್ಚಿನ ಸವಲತ್ತುಗಳುಳ್ಳ ಆಟೋರೆಸ್ಪಾಂಡರ್‌ಗಳು ಬಳಕೆಯಾಗುತ್ತವೆ.
20 Back end ಬ್ಯಾಕ್ ಎಂಡ್ ಜಾಲತಾಣ ಅಥವಾ ತಂತ್ರಾಂಶದಲ್ಲಿ ಮೇಲ್ನೋಟಕ್ಕೆ ನಮ್ಮ ಗಮನಕ್ಕೆ ಬಾರದ, ಹಿನ್ನೆಲೆಯಲ್ಲಿ ನಡೆಯುವ ಸಂಗತಿಗಳನ್ನು ಸೂಚಿಸುವ ಹೆಸರು ಕಂಪ್ಯೂಟರ್ ಪ್ರಪಂಚದಲ್ಲಿ ನೂರೆಂಟು ಸಂಗತಿಗಳಿರುತ್ತವಲ್ಲ, ಅವೆಲ್ಲದರ ವಿವರಗಳನ್ನು ಕೇಳುತ್ತ ಹೋದರೆ ಇದೆಷ್ಟು ಕ್ಲಿಷ್ಟ ಎಂಬ ಭಾವನೆ ಬಾರದೆ ಇರದು. ಒಂದು ಜಾಲತಾಣದ ವಿಷಯವನ್ನೇ ತೆಗೆದುಕೊಂಡರೆ ಅದರ ಹಿನ್ನೆಲೆಯಲ್ಲಿ ಅದೆಷ್ಟೋ ಸಂಗತಿಗಳು (ಸರ್ವರ್, ಡೇಟಾಬೇಸ್ ಇತ್ಯಾದಿ) ಅಡಗಿರುತ್ತವೆ. ಅವೆಲ್ಲದರ ಪೈಕಿ ನಮ್ಮ ಗಮನಕ್ಕೆ ಬರುವುದು ಜಾಲತಾಣದ ವಿನ್ಯಾಸ, ಚಿತ್ರಗಳು, ಅದರಲ್ಲಿರುವ ಮಾಹಿತಿ - ಹೀಗೆ ಪರದೆಯ ಮೇಲೆ ಕಾಣುವುದೆಷ್ಟೋ ಅಷ್ಟೇ! ಇದರ ಹಿನ್ನೆಲೆಯಲ್ಲಿ ಆಗುವ ಹಲವು ಕೆಲಸಗಳೆಲ್ಲವೂ 'ಬ್ಯಾಕ್‌ಎಂಡ್' ವ್ಯಾಪ್ತಿಯಲ್ಲಿ ಬರುತ್ತವೆ. ಜಾಲತಾಣದ ಸರ್ವರ್, ಕಚೇರಿ ಮಾಹಿತಿ ಸಂಗ್ರಹವಾಗಿರುವ ಡೇಟಾಬೇಸ್, ತಂತ್ರಾಂಶದಲ್ಲಿ ನಾವು ಯಾವುದೋ ಆಯ್ಕೆಯ ಮೇಲೆ ಕ್ಲಿಕ್ಕಿಸಿದಾಗ ನಿರ್ದಿಷ್ಟ ಕೆಲಸಗಳನ್ನು ಮಾಡುವ ಪ್ರೋಗ್ರಾಮುಗಳೆಲ್ಲ ಇರುವುದು ಈ 'ಬ್ಯಾಕ್‌ಎಂಡ್'ನಲ್ಲಿಯೇ. ನಮ್ಮ ಮಾಹಿತಿಯನ್ನು ಸೂಕ್ತವಾಗಿ ನಿಭಾಯಿಸುವುದು, ಅದರ ಸುರಕ್ಷತೆಯ ಬಗ್ಗೆ ನಿಗಾವಹಿಸುವುದು, ಯಾವ ಬಳಕೆದಾರರಿಗೆ ಯಾವಾಗ ಏನು ಮಾಹಿತಿಯನ್ನು ನೀಡಬೇಕು ಎನ್ನುವುದನ್ನೆಲ್ಲ ತೀರ್ಮಾನಿಸುವುದು ಈ ವಿಭಾಗದ ಜವಾಬ್ದಾರಿ.