A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 318

Backtrace:

File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 319

Backtrace:

File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 320

Backtrace:

File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler

File: /Appdata/padakanaja.karnataka.gov.in/index.php
Line: 318
Function: require_once

Padakanaja - Dictionary View
ಅನಿಸಿಕೆ

ಪದಕೋಶ: ಕಂಪ್ಯೂಟರ್ ತಂತ್ರಜ್ಞಾನ ಪದವಿವರಣ ಕೋಶ | ಇಂಗ್ಲೀಷ್-ಕನ್ನಡ |ಪ್ರಕಾಶಕರು - ಕನ್ನಡ ಅಭಿವೃದ್ಧಿ ಪ್ರಾಧಿಕಾರ (2017)

Show entries
ಕ್ರಮ ಸ೦ಖ್ಯೆ ಇಂಗ್ಲೀಷ್ ಪದ
(English Word)
ಕನ್ನಡ ಪದ
(Kannada Word)
ಕನ್ನಡ ಅರ್ಥ
(Kannada Meaning)
ವಿಷಯ ವರ್ಗೀಕರಣ
(Word Subject)
ವ್ಯಾಕರಣ ವಿಶೇಷ
(Word Grammer)
ಕನ್ನಡ ಉಚ್ಚಾರಣೆ
(Kannada Pronunciation)
ಪರ್ಯಾಯ ಪದ
(Word Synonyms)
ಇಂಗ್ಲೀಷ್ ಅರ್ಥ
(English Meaning)
ಸಂಕ್ಷಿಪ್ತ ವಿವರಣೆ
(Short Description)
ದೀರ್ಘ ವಿವರಣೆ
(Long Description)
ಆಡಳಿತಾತ್ಮಕ ಪದ
(Administrative Word)
51 Cache ಕ್ಯಾಶ್ ಪದೇಪದೇ ಬಳಸುವ ನಿರ್ದೇಶನಗಳನ್ನು, ದತ್ತಾಂಶವನ್ನು ಸುಲಭಕ್ಕೆ ಸಿಗುವಂತೆ ಉಳಿಸಿಟ್ಟುಕೊಳ್ಳಲು ಬಳಕೆಯಾಗುವ ವ್ಯವಸ್ಥೆ ಪದೇಪದೇ ಬೇಕಾಗುವ ವಸ್ತುಗಳನ್ನು ಸುಲಭಕ್ಕೆ ಕೈಗೆ ಸಿಗುವಂತೆ ಇಟ್ಟುಕೊಳ್ಳುವುದು ನಮ್ಮೆಲ್ಲರ ಸಾಮಾನ್ಯ ಅಭ್ಯಾಸ ತಾನೇ? ಕಂಪ್ಯೂಟರು - ಮೊಬೈಲ್ ಫೋನುಗಳಿಗೂ ಈ ಅಭ್ಯಾಸ ಇದೆ. ತಮ್ಮ ಕಾರ್ಯನಿರ್ವಹಣೆಯಲ್ಲಿ ಆಗಾಗ್ಗೆ ಬಳಸುವ ನಿರ್ದೇಶನಗಳನ್ನು, ದತ್ತಾಂಶವನ್ನು ಸುಲಭಕ್ಕೆ ಸಿಗುವಂತೆ ಉಳಿಸಿಟ್ಟುಕೊಳ್ಳಲು ಅವು 'ಕ್ಯಾಶ್' ಎನ್ನುವ ಪರಿಕಲ್ಪನೆಯನ್ನು ಬಳಸುತ್ತವೆ. ಇಲ್ಲಿ ಕ್ಯಾಶ್ ಎಂದರೆ ಹಣ (cash) ಅಲ್ಲ. Cache ಎನ್ನುವುದು ಈ ಕ್ಯಾಶ್‌ನ ಸ್ಪೆಲ್ಲಿಂಗು. ಕಾರ್ಯಾಚರಣ ವ್ಯವಸ್ಥೆ (ಆಪರೇಟಿಂಗ್ ಸಿಸ್ಟಂ) ಪದೇಪದೇ ಬಳಸುವ ನಿರ್ದೇಶನಗಳನ್ನು, ದತ್ತಾಂಶವನ್ನು ಮೆಮೊರಿಯಲ್ಲಿ ಪ್ರತ್ಯೇಕವಾಗಿ ಉಳಿಸಿಟ್ಟುಕೊಳ್ಳುವ ಮೂಲಕ ಅವನ್ನು ಥಟ್ಟನೆ ಪಡೆದುಕೊಳ್ಳುವುದನ್ನು ಸಾಧ್ಯವಾಗಿಸುವುದು ಕ್ಯಾಶ್‌ನ ಉದ್ದೇಶ. ಈ ಮೂಲಕ ಒಂದೇ ವಿಷಯವನ್ನು ಪದೇಪದೇ ಮೂಲದಿಂದ ಹೆಕ್ಕಿತರುವ ಅಗತ್ಯ ಇರುವುದಿಲ್ಲ; ಅಲ್ಲದೆ ಇದರಿಂದ ಸಂಪನ್ಮೂಲದ ಉಳಿತಾಯವೂ ಸಾಧ್ಯವಾಗುತ್ತದೆ. ಇತರ ತಂತ್ರಾಂಶಗಳೂ ಕ್ಯಾಶ್ ಪರಿಕಲ್ಪನೆಯನ್ನು ಬಳಸುತ್ತವೆ. ನಾವು ಆಗಾಗ್ಗೆ ನೋಡುವ ಜಾಲತಾಣಗಳಲ್ಲಿರುವ ಮಾಹಿತಿಯನ್ನು ಬ್ರೌಸರ್ ಕ್ಯಾಶ್‌ನಲ್ಲಿ ಉಳಿಸಿಟ್ಟುಕೊಳ್ಳುವ ಮೂಲಕ ಅದನ್ನು ಪದೇಪದೇ ಡೌನ್‌ಲೋಡ್ ಮಾಡುವ ಅನಿವಾರ್ಯತೆ ತಪ್ಪುತ್ತದೆ. ಪದೇಪದೇ ಬೇಕಾಗುವ ಇಂತಹ ಮಾಹಿತಿಯನ್ನು ಉಳಿಸಿಟ್ಟುಕೊಳ್ಳಲು ಮೊಬೈಲ್ ಆಪ್‌ಗಳೂ ಇದೇ ತಂತ್ರ ಬಳಸುತ್ತವೆ. ನಮ್ಮ ಬಳಕೆಗೆ ಅನುಗುಣವಾಗಿ ಕ್ಯಾಶ್‌ನಲ್ಲಿ ಉಳಿಯುವ ಮಾಹಿತಿ ಕ್ರಮೇಣ ಬದಲಾಗುತ್ತ ಹೋಗುತ್ತದೆ. ಆದರೂ ಅಗತ್ಯಬಿದ್ದಾಗ ಇಲ್ಲಿರುವ ಮಾಹಿತಿಯನ್ನು ನಾವೇ ಅಳಿಸಿಹಾಕುವುದು ಕೂಡ ಸಾಧ್ಯ. ನಾವು ಯಾವೆಲ್ಲ ತಾಣಗಳಲ್ಲಿ ಏನೆಲ್ಲ ಮಾಡಿದ್ದೇವೆ ಎನ್ನುವುದು ಬೇರೆಯವರಿಗೆ ಗೊತ್ತಾಗಬಾರದು ಎಂದಾಗ, ಕ್ಯಾಶ್‌ನಲ್ಲಿ ಉಳಿದ ಹಳೆಯ ಮಾಹಿತಿಯಿಂದಾಗಿ ಜಾಲತಾಣಗಳು ಸರಿಯಾಗಿ ಕೆಲಸಮಾಡದಿದ್ದಾಗ - ಹೀಗೆ ಅನೇಕ ಸಂದರ್ಭಗಳಲ್ಲಿ ಈ ಸೌಲಭ್ಯವನ್ನು ಬಳಸಿಕೊಳ್ಳಬಹುದು.
52 Captcha ಕ್ಯಾಪ್ಚಾ ಯಾವುದೇ ಪ್ರಶ್ನೆಗೆ ಉತ್ತರಿಸುತ್ತಿರುವುದು ಸ್ವಯಂಚಾಲಿತ ತಂತ್ರಾಂಶವಲ್ಲ, ಮಾನವ ಬಳಕೆದಾರರೇ ಎಂದು ಖಾತರಿಪಡಿಸಿಕೊಳ್ಳುವ ಉದ್ದೇಶದಿಂದ ಬಳಕೆಯಾಗುವ ಪರೀಕ್ಷೆ; 'ಕಂಪ್ಲೀಟ್‌ಲಿ ಆಟೋಮೇಟೆಡ್ ಪಬ್ಲಿಕ್ ಟ್ಯೂರಿಂಗ್ ಟೆಸ್ಟ್ ಟು ಟೆಲ್ ಕಂಪ್ಯೂಟರ್ಸ್ ಆಂಡ್ ಹ್ಯೂಮನ್ಸ್ ಅಪಾರ್ಟ್' ಎಂಬುದರ ಹ್ರಸ್ವರೂಪ ಹಲವು ಜಾಲತಾಣಗಳಲ್ಲಿ ಮಾಹಿತಿ ತುಂಬುವಾಗ ಅಕ್ಷರ-ಅಂಕಿಗಳ ಕಲಸುಮೇಲೋಗರದಂತೆ ಕಾಣುವ ಚಿತ್ರವೊಂದು ಕಾಣಿಸಿಕೊಳ್ಳುವುದು ನಮ್ಮೆಲ್ಲರ ಅನುಭವಕ್ಕೂ ಬಂದಿರುವ ಸಂಗತಿ. ಆ ಅಕ್ಷರ-ಅಂಕಿಗಳನ್ನೆಲ್ಲ ಸರಿಯಾಗಿ ಗುರುತಿಸಿ ಟೈಪ್ ಮಾಡಿದಾಗಲಷ್ಟೇ ನಮ್ಮ ಕೆಲಸದಲ್ಲಿ ಮುಂದುವರೆಯುವುದು ಸಾಧ್ಯ. ದುರುದ್ದೇಶಪೂರಿತ ತಂತ್ರಾಂಶಗಳ ಅನಗತ್ಯ ಹಸ್ತಕ್ಷೇಪ ತಪ್ಪಿಸಿ ಸೌಲಭ್ಯಗಳ ದುರುಪಯೋಗವನ್ನು ತಡೆಯುವ ಈ ವಿಧಾನಕ್ಕೆ 'ಕ್ಯಾಪ್ಚಾ' ಎಂದು ಹೆಸರು. ಇದು 'ಕಂಪ್ಲೀಟ್‌ಲಿ ಆಟೋಮೇಟೆಡ್ ಪಬ್ಲಿಕ್ ಟ್ಯೂರಿಂಗ್ ಟೆಸ್ಟ್ ಟು ಟೆಲ್ ಕಂಪ್ಯೂಟರ್ಸ್ ಆಂಡ್ ಹ್ಯೂಮನ್ಸ್ ಅಪಾರ್ಟ್' ಎಂಬುದರ ಹ್ರಸ್ವರೂಪ. ಯಾವುದೇ ಪ್ರಶ್ನೆಗೆ ಉತ್ತರಿಸುತ್ತಿರುವುದು ಸ್ವಯಂಚಾಲಿತ ತಂತ್ರಾಂಶವಲ್ಲ, ಮಾನವ ಬಳಕೆದಾರರೇ ಎಂದು ಖಾತರಿಪಡಿಸಿಕೊಳ್ಳುವ ಉದ್ದೇಶದಿಂದ ಬಳಕೆಯಾಗುವ ಪರೀಕ್ಷೆ ಇದು. ಪರದೆಯ ಮೇಲೆ ತೋರಿಸುವ ಚಿತ್ರದಲ್ಲಿನ ಅಕ್ಷರ ಅಥವಾ ಅಂಕಿಗಳನ್ನು ಗುರುತಿಸುವಂತೆ, ಅಥವಾ ಸರಳ ಪ್ರಶ್ನೆಗಳಿಗೆ ಉತ್ತರಿಸುವಂತೆ ಬಳಕೆದಾರರನ್ನು ಕೇಳುವುದು ಕ್ಯಾಪ್ಚಾಗಳ ಲಕ್ಷಣ. ಹತ್ತಕ್ಕೆ ಮೂರು ಸೇರಿಸಿದರೆ ಎಷ್ಟು, ಅಥವಾ ಆಕಾಶದ ಬಣ್ಣ ಯಾವುದು ಎನ್ನುವಂತಹ ಸರಳ ಪ್ರಶ್ನೆಗಳಿಂದ ಪ್ರಾರಂಭಿಸಿ ತಿರುಚಾದ ಅಕ್ಷರ ಅಥವಾ ಅಂಕಿಗಳನ್ನು ಗುರುತಿಸಿ ಎಂದು ಕೇಳುವವರೆಗೆ ಕ್ಯಾಪ್ಚಾಗಳು ಅನೇಕ ಬಗೆಯವಾಗಿರಬಹುದು. ಒದಗಿಸಲಾಗುವ ಶ್ರವ್ಯ ಸಂದೇಶವನ್ನು ಕೇಳಿ ಅದನ್ನು ದಾಖಲಿಸಿ ಎಂದು ಕೇಳುವ ಕ್ಯಾಪ್ಚಾಗಳೂ ಇವೆ. ಇಂತಹ ಚಿತ್ರವಿಚಿತ್ರ ಕ್ಯಾಪ್ಚಾಗಳ ಬಳಕೆಯನ್ನು ನಿಲ್ಲಿಸುವ ನಿಟ್ಟಿನಲ್ಲೂ ಪ್ರಯತ್ನಗಳು ನಡೆದಿವೆ. ನಿರ್ದಿಷ್ಟ ಸ್ಥಳದಲ್ಲಿ ಕ್ಲಿಕ್ ಮಾಡುವ ಮೂಲಕ ನಾನು ರೋಬಾಟ್ ಅಲ್ಲ ಎಂದು ದೃಢೀಕರಿಸುವಂತೆ ಕೇಳುವ ಸರಳ ಕ್ಯಾಪ್ಚಾ ಇಂತಹ ಪ್ರಯತ್ನಗಳಿಗೊಂದು ಉದಾಹರಣೆ.
53 Carrier Billing ಕ್ಯಾರಿಯರ್ ಬಿಲ್ಲಿಂಗ್ ಮೊಬೈಲ್ ಬಳಸಿ ಕೊಂಡ ವಸ್ತು-ಸೇವೆಗಳಿಗೆ ನೀಡಬೇಕಾದ ಹಣವನ್ನು ಮೊಬೈಲ್ ಬಿಲ್ ಜೊತೆಯಲ್ಲೇ ಪಾವತಿಸುವುದನ್ನು ಸಾಧ್ಯವಾಗಿಸುವ ವ್ಯವಸ್ಥೆ ಕರೆಯ ರೂಪದಲ್ಲೋ ಸಂದೇಶದ ರೂಪದಲ್ಲೋ ಮೊಬೈಲ್ ಮೂಲಕ ನಾವು ರವಾನಿಸುವ ಮಾಹಿತಿ ತಲುಪಬೇಕಾದವರನ್ನು ತಲುಪುತ್ತದೆಯಲ್ಲ, ಅದಕ್ಕೆ ಮಾಧ್ಯಮವಾಗುವುದು ರೇಡಿಯೋ ಅಲೆಗಳು. ರೇಡಿಯೋ ಅಲೆಗಳ ಮೂಲಕ ಈ ಮಾಹಿತಿಯನ್ನು ಕೊಂಡೊಯ್ಯುವುದು ಮೊಬೈಲ್ ಸಂಸ್ಥೆಗಳ ಕೆಲಸ. ಸರಕು ಸಾಮಗ್ರಿಯನ್ನು ಲಗೇಜ್ ಕ್ಯಾರಿಯರ್‌ಗಳು ಹೊತ್ತೊಯ್ಯುವ ರೀತಿಯಲ್ಲಿಯೇ ನಮ್ಮ ಮಾಹಿತಿ ಕೊಂಡೊಯ್ಯುವ ಮೊಬೈಲ್ ಸಂಸ್ಥೆಗಳನ್ನು 'ಟೆಲಿಕಾಮ್ ಕ್ಯಾರಿಯರ್' ಎಂದು ಕರೆಯುತ್ತಾರೆ. ಈಚಿನ ದಿನಗಳಲ್ಲಿ ಅಂತರಜಾಲ ಸಂಪರ್ಕಕ್ಕಾಗಿ ಮೊಬೈಲ್ ಬಳಕೆ ಬಹಳ ವ್ಯಾಪಕವಾಗಿದೆ. ಮೊಬೈಲ್ ಬಳಸಿ ಹಲವು ವಸ್ತುಗಳನ್ನು, ಸೇವೆಗಳನ್ನು ಕೊಳ್ಳುವುದೂ ಈಗ ಸಾಮಾನ್ಯವಾಗಿರುವ ಸಂಗತಿ. ಹೀಗೆ ಕೊಂಡ ವಸ್ತುಗಳಿಗೆ ಹಣ ಪಾವತಿಸಲು ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್, ವ್ಯಾಲೆಟ್ ಮುಂತಾದ ಹಲವು ಸೌಲಭ್ಯಗಳಿರುವುದು ನಮಗೆ ಗೊತ್ತೇ ಇದೆ. ಆದರೆ ಎಲ್ಲ ಸಂದರ್ಭಗಳಲ್ಲೂ ಈ ಸೌಲಭ್ಯಗಳನ್ನು ಬಳಸುವುದು ಕಷ್ಟ - ಕೆಲವು ಬಾರಿ ಅಷ್ಟೆಲ್ಲ ವಿವರ ದಾಖಲಿಸುವುದು ಕಿರಿಕಿರಿ ಎನಿಸಿದರೆ ಇನ್ನು ಕೆಲ ಬಾರಿ ನಮ್ಮ ಮಾಹಿತಿ ಇಲ್ಲಿ ಸುರಕ್ಷಿತವೇ? ಎಂಬ ಸಂಶಯ ಬರುತ್ತದೆ. ಇದಕ್ಕೆ ಸರಳ ಪರಿಹಾರ ಒದಗಿಸುವುದು 'ಕ್ಯಾರಿಯರ್ ಬಿಲ್ಲಿಂಗ್' ವ್ಯವಸ್ಥೆ. ಮೊಬೈಲ್ ಬಳಸಿ ಕೊಂಡ ವಸ್ತು-ಸೇವೆಗಳಿಗೆ ನೀಡಬೇಕಾದ ಹಣವನ್ನು ಮೊಬೈಲ್ ಬಿಲ್ ಜೊತೆಯಲ್ಲೇ ಪಾವತಿಸುವುದನ್ನು ಈ ವ್ಯವಸ್ಥೆ ಸಾಧ್ಯವಾಗಿಸುತ್ತದೆ. ಬ್ಯಾಂಕ್ ವಿವರದ ಬದಲು ಮೊಬೈಲ್ ಸಂಖ್ಯೆಯನ್ನಷ್ಟೇ ದಾಖಲಿಸಿ ಅದನ್ನು ಓಟಿಪಿ ಮೂಲಕ ದೃಢೀಕರಿಸಿದರೆ ಸಾಕು, ಮುಂದಿನ ಬಿಲ್ಲಿನಲ್ಲಿ ಅಷ್ಟು ಮೊತ್ತ ಸೇರಿಕೊಳ್ಳುತ್ತದೆ; ಪ್ರೀಪೇಯ್ಡ್ ಆಗಿದ್ದರೆ ಖಾತೆಯ ಬ್ಯಾಲೆನ್ಸಿನಲ್ಲಿ ಹಣ ಕಡಿತವಾಗುತ್ತದೆ. ಈ ವ್ಯವಸ್ಥೆ ಹಲವು ತಾಣಗಳಲ್ಲಿ ಈಗಾಗಲೇ ಬಳಕೆಯಲ್ಲಿದೆ. ಈಚೆಗೆ ಗೂಗಲ್ ಪ್ಲೇಸ್ಟೋರ್‌ನಂತಹ ದೊಡ್ಡ ವ್ಯವಸ್ಥೆಗಳೂ ಕ್ಯಾರಿಯರ್ ಬಿಲ್ಲಿಂಗ್ ಪ್ರಾರಂಭಿಸಿರುವುದರಿಂದ ಮುಂದೆ ಈ ವ್ಯವಸ್ಥೆ ಇನ್ನೂ ಜನಪ್ರಿಯವಾಗಲಿದೆ ಎಂದು ನಿರೀಕ್ಷಿಸಲಾಗಿದೆ.
54 Cashback ಕ್ಯಾಶ್‌ಬ್ಯಾಕ್ ನಿರ್ದಿಷ್ಟ ಸೇವೆಗಾಗಿ ಪಾವತಿಸಿದ ಹಣದ ಒಂದು ಭಾಗವನ್ನು ಗ್ರಾಹಕರಿಗೆ ಹಿಂದಿರುಗಿಸುವ ವ್ಯವಸ್ಥೆ ನಮ್ಮ ಸೇವೆಯನ್ನು ಬಳಸಿ ನೀವು ಪಾವತಿಸುವ ಹಣದ ಒಂದು ಭಾಗವನ್ನು (ಶೇಕಡಾವಾರು ಲೆಕ್ಕ ಅಥವಾ ನಿರ್ದಿಷ್ಟ ಮೊತ್ತ) ನಿಮಗೆ ಹಿಂದಿರುಗಿಸುತ್ತೇವೆ ಎನ್ನುವುದು 'ಕ್ಯಾಶ್‌ಬ್ಯಾಕ್' ಪರಿಕಲ್ಪನೆಯ ಸಾರಾಂಶ. ಹೀಗೆ ಮರಳಿಸುವ ಹಣ ನೇರ ರಿಯಾಯಿತಿಯ (ಇನ್ಸ್‌ಟಂಟ್ ಕ್ಯಾಶ್‌ಬ್ಯಾಕ್) ರೂಪದಲ್ಲಿರಬಹುದು ಇಲ್ಲವೇ ವ್ಯಾಲೆಟ್‌ಗೆ ಮರಳಿ ಜಮೆಯಾಗಬಹುದು. ನೇರ ರಿಯಾಯಿತಿಯಲ್ಲದ ಕ್ಯಾಶ್‌ಬ್ಯಾಕ್ ಬಳಸುವುದರ ಮೇಲೆ ಸಂಸ್ಥೆಗಳು ಹಲವು ನಿರ್ಬಂಧಗಳನ್ನು ಹೇರುವುದು ಸಾಧ್ಯವಿದೆ. ನಿಮ್ಮ ಮುಂದಿನ ವಹಿವಾಟಿನ ಮೊತ್ತದ ಶೇ. ೫ಕ್ಕೋ ಶೇ. ೧೦ಕ್ಕೋ ಸೀಮಿತವಾದ ರಿಯಾಯಿತಿ ಪಡೆಯಲು ಈ ಹಣ ಬಳಸಿ ಎಂದು ಒಂದು ಸಂಸ್ಥೆ ಹೇಳಿದರೆ ಮುಂದಿನ ಮೂವತ್ತು ದಿನಗಳಲ್ಲಿ ಇದನ್ನು ಬಳಸಿಕೊಳ್ಳಿ ಎಂದು ಇನ್ನೊಂದು ಸಂಸ್ಥೆ ಹೇಳುವುದು ಸಾಧ್ಯವಿದೆ. ಇನ್ನು ಕೆಲವೆಡೆ ಈ ಮೊತ್ತವನ್ನು ಯಾವುದೇ ನಿರ್ಬಂಧವಿಲ್ಲದೆ ನಮ್ಮ ವ್ಯವಹಾರಕ್ಕೆ ಬಳಸಿಕೊಳ್ಳಬಹುದು. ಕೆಲ ವ್ಯಾಲೆಟ್ಟುಗಳಲ್ಲಿ ನಾವು ಜಮೆ ಮಾಡಿದ ಹಣವನ್ನು ಮರಳಿ ಬ್ಯಾಂಕಿಗೆ ಹಾಕಿಕೊಳ್ಳುವ ಸೌಲಭ್ಯವಿರುತ್ತದೆ. ಆದರೆ, ಕ್ಯಾಶ್‌ಬ್ಯಾಕ್ ರೂಪದಲ್ಲಿ ದೊರೆತ ಹಣವನ್ನು ಹಾಗೆ ಬ್ಯಾಂಕಿಗೆ ಹಾಕಲು ಅನುಮತಿ ಇರುವುದಿಲ್ಲ.
55 cc - bcc ಸಿಸಿ - ಬಿಸಿಸಿ ಕಾರ್ಬನ್ ಕಾಪಿ ಹಾಗೂ ಬ್ಲೈಂಡ್ ಕಾರ್ಬನ್ ಕಾಪಿ; ಕಳುಹಿಸುತ್ತಿರುವ ಇಮೇಲ್ ಸಂದೇಶದ ಬಗ್ಗೆ ಮುಖ್ಯ ವಿಳಾಸದಾರರ ಜೊತೆಗೆ ಇತರರಿಗೂ ಮಾಹಿತಿ ನೀಡಲು ಬಳಸಬಹುದಾದ ಆಯ್ಕೆಗಳು ಇಮೇಲ್ ಕಳುಹಿಸುವಾಗ ಸಂದೇಶ ತಲುಪಬೇಕಾದವರ ವಿಳಾಸ ದಾಖಲಿಸಲು ಮೂರು ಆಯ್ಕೆಗಳಿರುವುದನ್ನು ನೋಡಿರಬಹುದು: ಟು, ಸಿಸಿ ಹಾಗೂ ಬಿಸಿಸಿ. ನಮ್ಮ ಸಂದೇಶ ಯಾರಿಗೆ ತಲುಪಬೇಕೋ ಅವರ ಇಮೇಲ್ ವಿಳಾಸವನ್ನು 'ಟು' ವಿಭಾಗದಲ್ಲಿ ದಾಖಲಿಸುತ್ತೇವೆ. ಕಳುಹಿಸುತ್ತಿರುವ ಸಂದೇಶದ ಬಗೆಗೆ ಬೇರೆ ಯಾರಿಗಾದರೂ ಮಾಹಿತಿ ನೀಡಬೇಕು ಎನ್ನುವುದಾದಲ್ಲಿ ಅವರ ವಿಳಾಸವನ್ನು 'ಸಿಸಿ' (ಕಾರ್ಬನ್ ಕಾಪಿ) ವಿಭಾಗದಲ್ಲಿ ಬರೆಯಬಹುದು. 'ಸಿಸಿ' ವಿಭಾಗದಲ್ಲಿ ನೀವು ಯಾರ ಇಮೇಲ್ ವಿಳಾಸವನ್ನು ದಾಖಲಿಸುತ್ತೀರೋ ಅವರಿಗೆ ಆ ಸಂದೇಶದ ಒಂದು ಪ್ರತಿ ತಲುಪುತ್ತದೆ. ಇಮೇಲ್ ಸಂದೇಶ ಯಾರಿಗೆಲ್ಲ ಹೋಗಿದೆ ಎನ್ನುವ ವಿಷಯ 'ಟು' ಹಾಗೂ 'ಸಿಸಿ' ವಿಭಾಗದಲ್ಲಿರುವ ಎಲ್ಲರಿಗೂ ತಿಳಿಯುತ್ತದೆ. ಇಮೇಲ್ ಸಂದೇಶವನ್ನು ಯಾರಿಗೆ ಕಳುಹಿಸುತ್ತಿದ್ದೀರಿ ಎನ್ನುವುದು ಬೇರೆಯವರಿಗೆ ತಿಳಿಯದಂತೆ ಮಾಡುವುದೂ ಸಾಧ್ಯ. ಇದಕ್ಕಾಗಿ ವಿಳಾಸಗಳನ್ನು 'ಬಿಸಿಸಿ' (ಬ್ಲೈಂಡ್ ಕಾರ್ಬನ್ ಕಾಪಿ) ವಿಭಾಗದಲ್ಲಿ ದಾಖಲಿಸಿದರೆ ಸಾಕು, ನಿಮ್ಮ ಸಂದೇಶದ ಪ್ರತಿಗಳನ್ನು ಬೇರೆ ಯಾರಿಗೆಲ್ಲ ಕಳುಹಿಸಿದ್ದೀರಿ ಎನ್ನುವ ವಿಷಯ ಆ ಸಂದೇಶವನ್ನು ಪಡೆದುಕೊಳ್ಳುವವರಿಗೆ ತಿಳಿಯುವುದಿಲ್ಲ. ನಿಮ್ಮ ಸಂದೇಶವನ್ನು ಒಂದೇಬಾರಿ ಬಹಳ ಜನರಿಗೆ ಕಳುಹಿಸುವಾಗ (ಆಮಂತ್ರಣ ಪತ್ರ ಇತ್ಯಾದಿ) ಬಿಸಿಸಿ ಆಯ್ಕೆ ಬಳಸುವುದು ಒಳ್ಳೆಯದು. ಹೀಗೆ ಮಾಡುವುದರಿಂದ ಓದುಗರು ಅನಗತ್ಯವಾಗಿ 'ರಿಪ್ಲೈ ಆಲ್' ಬಳಸಿ ಎಲ್ಲರಿಗೂ ಉತ್ತರಿಸುವುದನ್ನು ತಪ್ಪಿಸಬಹುದು.
56 Cellphone ಸೆಲ್‌ಫೋನ್ ಮೊಬೈಲ್ ಫೋನಿನ ಇನ್ನೊಂದು ಹೆಸರು; ಮೊಬೈಲ್ ಟವರ್‌ಗಳು ಸೇವೆ ಒದಗಿಸುವ ಪ್ರದೇಶವನ್ನು 'ಸೆಲ್' ಎಂದು ಕರೆಯುವುದು ಮೊಬೈಲ್ ಫೋನಿಗೆ ಈ ಹೆಸರು ಬರಲು ಕಾರಣವಾಗಿರುವ ಅಂಶ. ಮೊಬೈಲ್ ಫೋನನ್ನು ಹಲವಾರು ಮಂದಿ ಸೆಲ್ ಫೋನ್ ಎಂದು ಕರೆಯುತ್ತಾರೆ. ಇನ್ನು ಕೆಲವರು ಈ ಹೆಸರನ್ನು ಇನ್ನೂ ಹ್ರಸ್ವಗೊಳಿಸಿ 'ಸೆಲ್' ಎಂದಷ್ಟೇ ಕರೆಯುವುದೂ ಉಂಟು. ಈ ಅಭ್ಯಾಸಕ್ಕೆ ಕಾರಣ ಮೊಬೈಲ್ ನೆಟ್‌ವರ್ಕುಗಳ ವಿನ್ಯಾಸ. ಊರಿನ ತುಂಬ ಹರಡಿರುವ ಮೊಬೈಲ್ ಟವರ್‌ಗಳು ತಮ್ಮ ಸುತ್ತಲಿನ ಒಂದು ಸೀಮಿತ ಪ್ರದೇಶಕ್ಕೆ ಮೊಬೈಲ್ ಸೇವೆ ಒದಗಿಸುತ್ತವೆ. ಈ ಪ್ರದೇಶ ಬಹುತೇಕ ಆರು ಮೂಲೆಯ (ಹೆಕ್ಸಾಗನ್) ಆಕೃತಿಯಲ್ಲಿರುತ್ತದೆ; ಅಂದರೆ, ಮೊಬೈಲ್ ಜಾಲದ ಚಿತ್ರವನ್ನೇನಾದರೂ ಬರೆದರೆ ಅದು ಜೇನುಗೂಡಿನ ಒಂದು ಹಲ್ಲೆಯಂತೆ ಕಾಣುತ್ತದೆ! ಮೊಬೈಲ್ ಜಾಲವೆಂಬ ಈ ಜೇನುಗೂಡು ಟವರ್ ಸುತ್ತಲಿನ 'ಕೋಶ', ಅಂದರೆ 'ಸೆಲ್'ಗಳ ಜೋಡಣೆಯಿಂದ ರೂಪುಗೊಂಡಿರುತ್ತದಲ್ಲ, ಆ ಕೋಶಗಳೇ ಇದಕ್ಕೆ 'ಸೆಲ್' ಫೋನ್ ಎಂದು ಹೆಸರು ಬರಲು ಕಾರಣ. ನಾವು ಮಾತನಾಡುತ್ತಿರುವಾಗ ಒಂದು 'ಸೆಲ್'ನಿಂದ ಇನ್ನೊಂದಕ್ಕೆ ಹೋದರೆ ನಮ್ಮ ಕರೆಯೂ ಮೊದಲ ಟವರ್‌ನಿಂದ ಇನ್ನೊಂದಕ್ಕೆ ವರ್ಗಾವಣೆಯಾಗುತ್ತದೆ. ಒಂದಕ್ಕಿಂತ ಹೆಚ್ಚು ಸೆಲ್‌ಗಳು ಸಮೀಪದಲ್ಲಿದ್ದರೆ ಎಲ್ಲಿ ಹೆಚ್ಚು ಶಕ್ತಿಶಾಲಿ ಮೊಬೈಲ್ ಸಂಕೇತ ಲಭ್ಯವಿದೆಯೋ ಅಲ್ಲಿಗೆ ನಮ್ಮ ಕರೆಯನ್ನು ವರ್ಗಾಯಿಸುವ ಸೌಲಭ್ಯ ಕೂಡ ಇರುತ್ತದೆ. ಹೀಗಿದ್ದರೂ ಕೂಡ ಎರಡನೆಯ ಸೆಲ್‌ನಲ್ಲಿ ಸೂಕ್ತ ಸಾಮರ್ಥ್ಯದ ಮೊಬೈಲ್ ಸಂಕೇತ ದೊರಕದಿದ್ದರೆ, ಅಥವಾ ಅದರ ಪೂರ್ಣ ಸಾಮರ್ಥ್ಯವನ್ನು ಇತರ ಬಳಕೆದಾರರು ಈಗಾಗಲೇ ಬಳಸುತ್ತಿದ್ದರೆ ನಮ್ಮ ಕರೆ ಇದ್ದಕ್ಕಿದ್ದಂತೆ ಸ್ಥಗಿತಗೊಳ್ಳುತ್ತದೆ. 'ಕಾಲ್ ಡ್ರಾಪ್' ಎಂದು ಕರೆಯುವುದು ಇದನ್ನೇ.
57 Chatbot ಚಾಟ್‌ಬಾಟ್ ಬಳಕೆದಾರರೊಡನೆ ಸ್ವಯಂಚಾಲಿತವಾಗಿ ಸಂಭಾಷಣೆ ನಡೆಸಬಲ್ಲ ತಂತ್ರಾಂಶ ನಿಗದಿತ ಕೆಲಸವನ್ನು ಸ್ವಯಂಚಾಲಿತವಾಗಿ ಮಾಡುವ ತಂತ್ರಾಂಶವನ್ನು 'ಬಾಟ್' ಎಂದು ಕರೆಯುತ್ತಾರೆ. ಬಳಕೆದಾರರೊಡನೆ ಚಾಟ್ ಮಾಡಬಲ್ಲ ಇಂತಹ ಬಾಟ್‌ಗೆ 'ಚಾಟ್‌ಬಾಟ್' ಎಂದು ಹೆಸರು. ಯಂತ್ರಗಳ ಸಹಾಯದಿಂದ ಸ್ವಯಂಚಾಲಿತ ಗ್ರಾಹಕ ಸೇವೆ ಒದಗಿಸುವ ಉದ್ದೇಶದಿಂದ ಈ ಪರಿಕಲ್ಪನೆ ರೂಪುಗೊಂಡಿದೆ. ಚಾಟ್‌ಬಾಟ್‌ಗಳು ಗ್ರಾಹಕನ ಅಗತ್ಯಕ್ಕೆ ಸರಿಯಾಗಿ ಸ್ಪಂದಿಸಬೇಕಿರುವುದರಿಂದ ಸುಮ್ಮನೆ ಕೆಲಸಮಾಡುತ್ತಲೇ ಹೋಗುವ ಸಾಧಾರಣ ಬಾಟ್‌ಗಿಂತ ಇವು ಭಿನ್ನ ಹಾಗೂ ಹೆಚ್ಚು ಸಂಕೀರ್ಣ. ಚಾಟ್‌ಬಾಟ್‌ಗಳಲ್ಲಿ ಅನೇಕ ವಿಧಗಳಿರಬಹುದು. ಗ್ರಾಹಕನ ಪ್ರಶ್ನೆಯಲ್ಲಿರುವ ಪದಗಳನ್ನು ವಿಶ್ಲೇಷಿಸಿ ಅದಕ್ಕೆ ಹೊಂದುವಂತಹ ಉತ್ತರವನ್ನು ತಮ್ಮ ಸಂಗ್ರಹದಿಂದ ಆಯ್ದು ಕೊಡುವುದು ಈ ಪೈಕಿ ಕೆಲವು ಚಾಟ್‌ಬಾಟ್‌ಗಳು ಬಳಸುವ ತಂತ್ರ. ನಮ್ಮ ನಿರ್ದೇಶನಗಳಿಗೆ ಅನುಗುಣವಾಗಿ ಕೆಲಸಗಳನ್ನು ಮಾಡಿಕೊಡುವ (ಉದಾ: ಟಿಕೇಟು ಕಾಯ್ದಿರಿಸುವುದು, ಟ್ಯಾಕ್ಸಿ ಕರೆಸುವುದು ಇತ್ಯಾದಿ) ಚಾಟ್‌ಬಾಟ್‌ಗಳೂ ಇವೆ. ಹಿಂದಿನ ಸಂವಾದಗಳ ಅನುಭವದ ಆಧಾರದಲ್ಲಿ ತಮ್ಮ ಮುಂದಿನ ಉತ್ತರಗಳನ್ನು ಉತ್ತಮಪಡಿಸಿಕೊಳ್ಳುವ ಚಾಟ್‌ಬಾಟ್‌ಗಳನ್ನೂ ರೂಪಿಸಲಾಗುತ್ತಿದೆ. ಇಂತಹ ಚಾಟ್‌ಬಾಟ್‌ಗಳು ಮುಂದೊಮ್ಮೆ ಗ್ರಾಹಕ ಸೇವಾ ವಿಭಾಗದ ಸಿಬ್ಬಂದಿಯ ಸ್ಥಾನ ತೆಗೆದುಕೊಳ್ಳುವ ಮಟ್ಟಕ್ಕೂ ಬೆಳೆಯಬಲ್ಲವು ಎಂದು ನಿರೀಕ್ಷಿಸಲಾಗಿದೆ.
58 Check-In ಚೆಕ್-ಇನ್ ನಾವು ಇರುವ ಸ್ಥಳದ ಬಗ್ಗೆ ಸಮಾಜಜಾಲಗಳಲ್ಲಿ ಮಾಹಿತಿ ಹಂಚಿಕೊಳ್ಳುವ ಕ್ರಿಯೆ ವಿಮಾನ ನಿಲ್ದಾಣ, ಹೋಟೆಲುಗಳಲ್ಲಿ ನಮ್ಮ ಪ್ರವೇಶವನ್ನು ದಾಖಲಿಸುವ ಪ್ರಕ್ರಿಯೆಗೆ 'ಚೆಕ್ ಇನ್' ಎಂದು ಹೆಸರು. ಈ ದಿನ ಇಷ್ಟುಹೊತ್ತಿಗೆ ಹೋಟಲಿಗೆ ಬಂದಿದ್ದೇವೆ ಎಂದೋ ಇಂತಹ ವಿಮಾನದಲ್ಲಿ ಪ್ರಯಾಣಿಸಲು ಸಿದ್ಧವಾಗಿದ್ದೇವೆ ಎಂದೋ ಸಂಬಂಧಪಟ್ಟವರಿಗೆ ತಿಳಿಸುವ ಪ್ರಕ್ರಿಯೆ ಇದು. ಇದಕ್ಕೆ ನೇರ ಸಂಬಂಧವಿಲ್ಲದಿದ್ದರೂ ಇದೇ ಹೆಸರಿನ ಇನ್ನೊಂದು ಚಟುವಟಿಕೆ ಸಮಾಜಜಾಲಗಳ ಜಗತ್ತಿನಲ್ಲೂ ಚಾಲ್ತಿಯಲ್ಲಿದೆ. ನಾನು ಇಂತಹ ಸ್ಥಳದಲ್ಲಿದ್ದೇನೆ ಎಂದು ಸಮಾಜಜಾಲದ ಮಿತ್ರರಿಗೆ ಹೇಳಲು ಅನುವುಮಾಡಿಕೊಡುವ ಸೌಲಭ್ಯವನ್ನೂ 'ಚೆಕ್ ಇನ್' ಎಂದೇ ಕರೆಯುತ್ತಾರೆ. ಮೊದಲಿಗೆ ಈ ಸೌಲಭ್ಯವನ್ನಷ್ಟೇ ನೀಡುವ ಸಮಾಜಜಾಲಗಳು ಇದ್ದವಾದರೂ ಈಗ ಫೇಸ್‌ಬುಕ್‌ನಂತಹ ತಾಣಗಳಲ್ಲೂ ಈ ಸೇವೆ ಲಭ್ಯವಿದೆ. ನಾವು ಇರುವ ಸ್ಥಳದ ಬಗ್ಗೆ ನಾವೇ ಮಾಹಿತಿ ಸೇರಿಸುವುದು ಚೆಕ್ ಇನ್‌ನ ಸರಳ ವಿಧಾನ. ಇದಲ್ಲದೆ ಮೊಬೈಲಿನ ಜಿಪಿಎಸ್ ವ್ಯವಸ್ಥೆ ಬಳಸಿಕೊಂಡು ನಾವೆಲ್ಲಿದ್ದೇವೆ ಎಂದು ಪತ್ತೆಹಚ್ಚಿ ಹೆಸರಿಸುವ ಸೌಲಭ್ಯವೂ ಅನೇಕ ತಾಣಗಳಲ್ಲಿವೆ. ನಾವು ಸುಮ್ಮನೆ ಅನುಮತಿ ನೀಡಿದರೆ ಸಾಕು, ಈ ಮಾಹಿತಿ ಸಮಾಜಜಾಲದ ನಮ್ಮ ಪುಟದಲ್ಲಿ ಕಾಣಿಸಿಕೊಳ್ಳುತ್ತದೆ. ಅಷ್ಟೇ ಅಲ್ಲ, ನಮ್ಮ ಜೊತೆಯಲ್ಲಿ ಯಾರಿದ್ದಾರೆ ಎನ್ನುವ ಮಾಹಿತಿಯನ್ನೂ ಇಲ್ಲಿ ಸೇರಿಸುವುದು ಸಾಧ್ಯ. ರೈಲು - ಬಸ್ಸು - ವಿಮಾನ ನಿಲ್ದಾಣಗಳಲ್ಲಿ ಚೆಕ್ ಇನ್ ಮಾಡಿದರೆ ನಾವು ಎಲ್ಲಿಗೆ ಪ್ರಯಾಣಿಸುತ್ತಿದ್ದೇವೆ ಎಂದು ಸೇರಿಸುವ ಆಯ್ಕೆಯೂ ಕಾಣಿಸಿಕೊಳ್ಳುತ್ತದೆ.
59 Click ಕ್ಲಿಕ್ ಮೌಸ್ ಬಳಸಿ ನಿರ್ದಿಷ್ಟ ಕೆಲಸಗಳನ್ನು ಸಾಧಿಸಿಕೊಳ್ಳಲು ಅದರ ಗುಂಡಿಗಳನ್ನು ಒತ್ತುವ ಕ್ರಿಯೆ. ಛಾಯಾಚಿತ್ರ ಸೆರೆಹಿಡಿಯಲು ಕ್ಯಾಮೆರಾ ಗುಂಡಿ ಒತ್ತುವುದನ್ನೂ ಕ್ಲಿಕ್ ಮಾಡುವುದು ಎಂದೇ ಗುರುತಿಸಲಾಗುತ್ತದೆ. ಕಂಪ್ಯೂಟರ್ ಜೊತೆಗೆ ಮೌಸ್ ಬಳಸುವುದು ನಮಗೆಲ್ಲ ಚೆನ್ನಾಗಿಯೇ ಪರಿಚಯವಿರುವ ಸಂಗತಿ. ಹೀಗೆ ಬಳಸುವಾಗ ನಿರ್ದಿಷ್ಟ ಕೆಲಸಗಳನ್ನು ಸಾಧಿಸಿಕೊಳ್ಳಲು ಅದರ ಮುಂಭಾಗದಲ್ಲಿರುವ ಗುಂಡಿಗಳನ್ನು ಒತ್ತಬೇಕಾಗುತ್ತದೆ. 'ಕ್ಲಿಕ್' ಮಾಡುವುದು ಎಂದರೆ ಇದೇ. ತಂತ್ರಾಂಶಗಳನ್ನು ತೆರೆಯಲು, ಪಠ್ಯವನ್ನು ಆರಿಸಿಕೊಳ್ಳಲು, ಕಡತಗಳನ್ನು ಒಂದೆಡೆಯಿಂದ ಇನ್ನೊಂದೆಡೆಗೆ ವರ್ಗಾಯಿಸಲು ನಾವು ಸಾಮಾನ್ಯವಾಗಿ ಮೌಸಿನ ಎಡಬದಿಯ ಗುಂಡಿಯನ್ನು ಬಳಸುತ್ತೇವೆ. ಈ ಪ್ರಕ್ರಿಯೆಯೇ 'ಲೆಫ್ಟ್ ಕ್ಲಿಕ್'. ಮೌಸ್‌ನ ಬಲಬದಿಯಲ್ಲೂ ಒಂದು ಗುಂಡಿ ಇರುತ್ತದಲ್ಲ, ಅದನ್ನು ಒತ್ತಿದಾಗ ನಾವು ಬಳಸುತ್ತಿರುವ ತಂತ್ರಾಂಶದಲ್ಲಿ ಲಭ್ಯವಿರುವ ಆಯ್ಕೆಗಳ ಪಟ್ಟಿ (ಮೆನು) ಕಾಣಿಸಿಕೊಳ್ಳುತ್ತದೆ. ಹೀಗೆ ಮೌಸ್‌ನ ಬಲಬದಿಯ ಬಟನ್ ಒತ್ತುವ ಪ್ರಕ್ರಿಯೆಯನ್ನು 'ರೈಟ್ ಕ್ಲಿಕ್' ಎಂದು ಗುರುತಿಸಲಾಗುತ್ತದೆ. ರೈಟ್ ಕ್ಲಿಕ್ ಮಾಡಿದಾಗ ಕಾಣಿಸಿಕೊಳ್ಳುವ ಮೆನು ಯಾವಾಗಲೂ ಎಲ್ಲ ತಂತ್ರಾಂಶಗಳಲ್ಲೂ ಒಂದೇ ರೀತಿ ಇರುವುದಿಲ್ಲ. ಒಂದೇ ತಂತ್ರಾಂಶದಲ್ಲೂ ಆಗಿನ ಸಂದರ್ಭಕ್ಕೆ ಅನುಗುಣವಾಗಿ ಪಟ್ಟಿಯಲ್ಲಿ ಕಾಣುವ ಆಯ್ಕೆಗಳು ಬದಲಾಗುತ್ತವೆ (ಉದಾ: ಬ್ರೌಸರ್ ತಂತ್ರಾಂಶದಲ್ಲಿ ಸುಮ್ಮನೆ ರೈಟ್ ಕ್ಲಿಕ್ ಮಾಡಿದಾಗ ಬರುವ ಆಯ್ಕೆಗಳೂ ಒಂದಷ್ಟು ಪಠ್ಯವನ್ನು ಆರಿಸಿಕೊಂಡು ರೈಟ್ ಕ್ಲಿಕ್ ಮಾಡಿದಾಗ ಬರುವ ಆಯ್ಕೆಗಳೂ ಬೇರೆಬೇರೆಯಾಗಿರುತ್ತವೆ). ಆಯ್ಕೆಗಳ ಈ ಪಟ್ಟಿ ಸಂದರ್ಭಕ್ಕೆ ತಕ್ಕಂತೆ ಬದಲಾಗುವುದರಿಂದಲೇ ಇದನ್ನು 'ಕಂಟೆಕ್ಸ್‌ಚುವಲ್ ಮೆನು' ಎಂದು ಕರೆಯುತ್ತಾರೆ (ಕಂಟೆಕ್ಸ್‌ಚುವಲ್ = ಸಾಂದರ್ಭಿಕ).
60 Click bait ಕ್ಲಿಕ್ ಬೇಯ್ಟ್ ಉತ್ಪ್ರೇಕ್ಷಿತ ಅಥವಾ ಸುಳ್ಳು ಮಾಹಿತಿಯನ್ನು ಪ್ರದರ್ಶಿಸಿ ಓದುಗರಲ್ಲಿ ಕುತೂಹಲ ಹುಟ್ಟಿಸುವ, ಮತ್ತು ಆ ಮೂಲಕ ಅವರನ್ನು ತಮ್ಮ ತಾಣದೆಡೆಗೆ ಸೆಳೆಯಲು ಪ್ರಯತ್ನಿಸುವ ಅಭ್ಯಾಸ ಸಮಾಜ ಜಾಲಗಳಲ್ಲಿ ವಿವಿಧ ರೀತಿಯ ಮಾಹಿತಿ ನಮ್ಮ ಕಣ್ಣಿಗೆ ಬೀಳುತ್ತಿರುತ್ತದೆ. ಹೆಚ್ಚು ಓದುಗರ ಗಮನವನ್ನು ತಮ್ಮತ್ತ ಸೆಳೆಯಲು ಸ್ಪರ್ಧೆ ನಡೆಸುವ ಜಾಲತಾಣಗಳ ಜಾಹೀರಾತಿಗೂ ಸಮಾಜ ಜಾಲಗಳು ಒಳ್ಳೆಯ ಮಾಧ್ಯಮವಾಗಿ ಬೆಳೆದಿವೆ. ಹೆಚ್ಚು ಓದುಗರನ್ನು ತಾಣದತ್ತ ಆಕರ್ಷಿಸಿ ಅಲ್ಲಿ ಪ್ರದರ್ಶಿಸುವ ಜಾಹೀರಾತುಗಳ ಮೂಲಕ ಹೆಚ್ಚುಹೆಚ್ಚು ಹಣ ಸಂಪಾದಿಸುವುದು ಜಾಲತಾಣಗಳ ಉದ್ದೇಶ. ಆದರೆ ಈ ಉದ್ದೇಶವನ್ನಿಟ್ಟುಕೊಂಡ ಕೆಲ ತಾಣಗಳು ಓದುಗರನ್ನು ತಮ್ಮತ್ತ ಸೆಳೆಯಲು ಹಲವು ಕುತಂತ್ರಗಳನ್ನೂ ಬಳಸುತ್ತಿವೆ. ಜಾಹೀರಾತಿನಲ್ಲಿ ಲೇಖನ ಅಥವಾ ವೆಬ್ ಪುಟವೊಂದರ ಶೀರ್ಷಿಕೆ ಇರುವುದು ಸಾಮಾನ್ಯ ತಾನೇ, ಜನರನ್ನು ಸೆಳೆಯುವ ಉದ್ದೇಶದಿಂದ ಆ ಶೀರ್ಷಿಕೆಯನ್ನು ಅನಗತ್ಯವಾಗಿ ವೈಭವೀಕರಿಸುವ ಅಭ್ಯಾಸ ಇತ್ತೀಚೆಗೆ ಸಾಮಾನ್ಯವಾಗುತ್ತಿದೆ. ಸಣ್ಣ ವಿಷಯವನ್ನು ದೊಡ್ಡದಾಗಿಸುವ ಅಥವಾ ಇಲ್ಲದ್ದನ್ನು ಇದೆಯೆಂದು ತೋರಿಸಲು ಪ್ರಯತ್ನಿಸುವ ಮೂಲಕ ಓದುಗರಲ್ಲಿ ಕುತೂಹಲ ಹುಟ್ಟಿಸುವ, ಮತ್ತು ಆ ಮೂಲಕ ಅವರನ್ನು ತಮ್ಮ ತಾಣದೆಡೆಗೆ ಸೆಳೆಯಲು ಪ್ರಯತ್ನಿಸುವ ಈ ಅಭ್ಯಾಸವನ್ನು 'ಕ್ಲಿಕ್ ಬೇಯ್ಟ್' (ಬೇಯ್ಟ್ = ಪ್ರಲೋಭನೆ) ಎಂದು ಕರೆಯುತ್ತಾರೆ. "ಪ್ರಖ್ಯಾತರನ್ನು ಕುರಿತ ರಹಸ್ಯ ಬಯಲಾಗಿದೆ"ಯೆಂದೋ "ಆಮೇಲೆ ಏನಾಯಿತೆಂದು ನೀವು ಊಹಿಸಲೂ ಸಾಧ್ಯವಿಲ್ಲ"ವೆಂದೋ ಹೇಳುವ ಪೋಸ್ಟುಗಳು ನಮಗೆ ಕಾಣಸಿಗುತ್ತವಲ್ಲ, ಅವೆಲ್ಲ ಇದೇ ತಂತ್ರವನ್ನು ಬಳಸುತ್ತವೆ. ಇಂತಹ ಬಹುತೇಕ ಲಿಂಕುಗಳ ಮೇಲೆ ಕ್ಲಿಕ್ ಮಾಡಿದಾಗ ನಮಗೆ ಹೊಸ ವಿಷಯವೇನೂ ತಿಳಿಯುವುದಿಲ್ಲ, ಜೊತೆಗೆ ಸಮಯವೂ ವ್ಯರ್ಥವಾಗುತ್ತದೆ. ಇಂತಹ ಕೆಲವು ತಾಣಗಳಿಂದ ನಮ್ಮತ್ತ ಕುತಂತ್ರಾಂಶಗಳು ಬಂದರೂ ಆಶ್ಚರ್ಯವಿಲ್ಲ. ಫೇಸ್‌ಬುಕ್ ಸೇರಿದಂತೆ ಹಲವು ಸಮಾಜಜಾಲಗಳು ಇಂತಹ ತಂತ್ರ ಬಳಸುವ ತಾಣಗಳನ್ನು ನಿರ್ಬಂಧಿಸುವ ಮೂಲಕ ಕ್ಲಿಕ್ ಬೇಯ್ಟ್ ಪಿಡುಗಿಗೆ ತಡೆಹಾಕಲು ಹೊರಟಿವೆ.