A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 318

Backtrace:

File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 319

Backtrace:

File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 320

Backtrace:

File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler

File: /Appdata/padakanaja.karnataka.gov.in/index.php
Line: 318
Function: require_once

Padakanaja - Dictionary View
ಅನಿಸಿಕೆ

ಪದಕೋಶ: ಕಂಪ್ಯೂಟರ್ ತಂತ್ರಜ್ಞಾನ ಪದವಿವರಣ ಕೋಶ | ಇಂಗ್ಲೀಷ್-ಕನ್ನಡ |ಪ್ರಕಾಶಕರು - ಕನ್ನಡ ಅಭಿವೃದ್ಧಿ ಪ್ರಾಧಿಕಾರ (2017)

Show entries
ಕ್ರಮ ಸ೦ಖ್ಯೆ ಇಂಗ್ಲೀಷ್ ಪದ
(English Word)
ಕನ್ನಡ ಪದ
(Kannada Word)
ಕನ್ನಡ ಅರ್ಥ
(Kannada Meaning)
ವಿಷಯ ವರ್ಗೀಕರಣ
(Word Subject)
ವ್ಯಾಕರಣ ವಿಶೇಷ
(Word Grammer)
ಕನ್ನಡ ಉಚ್ಚಾರಣೆ
(Kannada Pronunciation)
ಪರ್ಯಾಯ ಪದ
(Word Synonyms)
ಇಂಗ್ಲೀಷ್ ಅರ್ಥ
(English Meaning)
ಸಂಕ್ಷಿಪ್ತ ವಿವರಣೆ
(Short Description)
ದೀರ್ಘ ವಿವರಣೆ
(Long Description)
ಆಡಳಿತಾತ್ಮಕ ಪದ
(Administrative Word)
31 Bit - Byte ಬಿಟ್ - ಬೈಟ್ ಡಿಜಿಟಲ್ ರೂಪದ ಮಾಹಿತಿಯ ಪ್ರಮಾಣವನ್ನು ಅಳೆಯಲು ಬಳಕೆಯಾಗುವ ಅತ್ಯಂತ ಸಣ್ಣ ಏಕಮಾನಗಳು ನಾವು ಟೈಪ್ ಮಾಡಿದ ಮಾಹಿತಿ - ಡೌನ್‌ಲೋಡ್ ಮಾಡಿ ತಂದ ಕಡತಗಳೆಲ್ಲ ಕಂಪ್ಯೂಟರಿನ ಮೆಮೊರಿಯಲ್ಲಿರುತ್ತವಲ್ಲ, ಅದೆಲ್ಲ ಕಂಪ್ಯೂಟರಿಗೆ ಅರ್ಥವಾಗಬೇಕಾದರೆ ಮೊದಲಿಗೆ ದ್ವಿಮಾನ ಪದ್ಧತಿಯ ಅಂಕಿಗಳಾಗಿ (೧ ಅಥವಾ ೦) ಬದಲಾದಾಗಬೇಕಾದ್ದು ಅನಿವಾರ್ಯ. ದ್ವಿಮಾನ ಸಂಖ್ಯೆಯ ಆಂಗ್ಲ ಹೆಸರು ಬೈನರಿ ಡಿಜಿಟ್; ಈ ಹೆಸರಿನ ಮೊದಲ ಎರಡು ಹಾಗೂ ಕೊನೆಯದೊಂದು ಅಕ್ಷರಗಳನ್ನು ಸೇರಿಸಿ ಬಿಟ್ ಎಂಬ ಹೆಸರು ರೂಪಗೊಂಡಿದೆ. ಇದು ಮಾಹಿತಿಯ ಪ್ರಮಾಣ ಅಳೆಯಲು ಬಳಕೆಯಾಗುವ ಅತ್ಯಂತ ಸಣ್ಣ ಏಕಮಾನ. ಎಂಟು ಬಿಟ್‌ಗಳು ಸೇರಿದಾಗ ಒಂದು ಬೈಟ್ ಆಗುತ್ತದೆ. ಇಂಗ್ಲಿಷಿನ ಅಕ್ಷರವನ್ನೋ ಅಂಕಿ-ಲೇಖನಚಿಹ್ನೆಯನ್ನೋ ಕಂಪ್ಯೂಟರಿನ ಮೆಮೊರಿಯಲ್ಲಿ ಉಳಿಸಿಡಲು ಒಂದು ಬೈಟ್ ಸ್ಥಳಾವಕಾಶ ಬೇಕು. ಮೆಗಾಬೈಟ್, ಗಿಗಾಬೈಟ್, ಟೆರಾಬೈಟುಗಳೆಲ್ಲ ಇದೇ ಬೈಟ್‌ನ ಗುಣಕಗಳು. ೧೦೨೪ ಬೈಟ್‌ಗಳು ಒಂದು ಕಿಲೋಬೈಟ್‌ಗೆ (ಕೆಬಿ), ೧೦೨೪ ಕೆಬಿ ಒಂದು ಮೆಗಾಬೈಟ್‌ಗೆ (ಎಂಬಿ), ೧೦೨೪ ಎಂಬಿ ಒಂದು ಗಿಗಾಬೈಟ್‌ಗೆ (ಜಿಬಿ) ಹಾಗೂ ೧೦೨೪ ಜಿಬಿ ಒಂದು ಟೆರಾಬೈಟ್‌ಗೆ (ಟಿಬಿ) ಸಮಾನ.
32 Bitcoin ಬಿಟ್‌ಕಾಯಿನ್ ಅಂತರಜಾಲದ ಮೂಲಕ ಚಲಾವಣೆಯಾಗುವ ವರ್ಚುಯಲ್ ನಾಣ್ಯಪದ್ಧತಿ ಭಾರತದಲ್ಲಿ ರೂಪಾಯಿ, ಅಮೆರಿಕಾದಲ್ಲಿ ಡಾಲರುಗಳೆಲ್ಲ ಇದ್ದ ಹಾಗೆ ಜಾಲಲೋಕದಲ್ಲೂ ಅಲ್ಲಿಯದೇ ಕರೆನ್ಸಿ, ಅಂದರೆ ನಾಣ್ಯಪದ್ಧತಿಯೊಂದು ಚಾಲ್ತಿಯಲ್ಲಿದೆ. ಕಣ್ಣಿಗೆ ಕಾಣದ ಈ ವರ್ಚುಯಲ್ ಹಣದ ಹೆಸರೇ ಬಿಟ್‌ಕಾಯಿನ್. ಮೂಲತಃ ನಾಣ್ಯ-ನೋಟುಗಳಾವುದೂ ಇಲ್ಲದ ಬಿಟ್‌ಕಾಯಿನ್ ಅಸ್ತಿತ್ವ ಕಂಪ್ಯೂಟರ್ ಪ್ರಪಂಚಕ್ಕೆ ಸೀಮಿತ. ಇದನ್ನು ಯಾವುದೇ ಬ್ಯಾಂಕ್ ಅಥವಾ ಸರಕಾರ ನಿಯಂತ್ರಿಸುವುದಿಲ್ಲ. ನಾವೆಲ್ಲ ಪರ್ಸಿನಲ್ಲಿ ದುಡ್ಡು ಇಟ್ಟುಕೊಳ್ಳುತ್ತೇವಲ್ಲ, ಬಿಟ್‌ಕಾಯಿನ್‌ಗಳನ್ನು ಅದಕ್ಕೆಂದೇ ರೂಪಿಸಲಾದ ಆನ್‌ಲೈನ್ ವ್ಯಾಲೆಟ್‌ಗಳಲ್ಲಷ್ಟೆ ಇಟ್ಟುಕೊಳ್ಳುವುದು ಸಾಧ್ಯ. ಬಿಟ್‌ಕಾಯಿನ್ ವ್ಯವಸ್ಥೆ ಪರಿಚಯವಾದದ್ದು ೨೦೦೯ರಲ್ಲಿ. ಸಟೋಶಿ ನಕಾಮೋಟೋ ಎಂಬ ಹೆಸರಿನ ಅಜ್ಞಾತ ವ್ಯಕ್ತಿಯನ್ನು ಬಿಟ್‌ಕಾಯಿನ್ ಸೃಷ್ಟಿಕರ್ತ ಎಂದು ಗುರುತಿಸಲಾಗುತ್ತದೆ. ಬಿಟ್‌ಕಾಯಿನ್ ಸಂಪಾದಿಸಬೇಕು ಎನ್ನುವವರು ತಮ್ಮ ಕಂಪ್ಯೂಟರುಗಳಲ್ಲಿ ಒಂದು ವಿಶೇಷ ತಂತ್ರಾಂಶವನ್ನು ಇನ್‌ಸ್ಟಾಲ್ ಮಾಡಿಕೊಳ್ಳಬೇಕು. ಅನೇಕ ಜನರು ಹೀಗೆ ಸೇರಿದಾಗ ದೊರಕುವ ಸಂಸ್ಕರಣಾ ಸಾಮರ್ಥ್ಯವನ್ನು ಬಳಸಿಕೊಂಡು ವಿಶ್ವದೆಲ್ಲೆಡೆಯ ಬಿಟ್‌ಕಾಯಿನ್ ಬಳಕೆದಾರರು ನಡೆಸುವ ವಹಿವಾಟನ್ನೆಲ್ಲ ಸಂಸ್ಕರಿಸುವ ಕ್ಲಿಷ್ಟ ಹಾಗೂ ಬಹಳ ನಿಧಾನವಾದ ಕೆಲಸ ನಡೆಯುತ್ತದೆ. ಈ ಪ್ರಕ್ರಿಯೆ ಮುಂದುವರೆಯುತ್ತ ಹೋದಂತೆ ಅದರಲ್ಲಿ ನೆರವಾದವರಿಗೆ ಬಿಟ್‌ಕಾಯಿನ್ ರೂಪದ ಹಣ ದೊರಕುತ್ತದೆ. ಹೀಗೆ ದೊರೆತ ಹಣವನ್ನು ನಮ್ಮ ಅಗತ್ಯಗಳಿಗಾಗಿ ಖರ್ಚುಮಾಡುವುದು ಸಾಧ್ಯ. ಹಲವಾರು ವಹಿವಾಟುಗಳಲ್ಲಿ ಹಣದ ಬದಲಿಗೆ ಬಿಟ್‌ಕಾಯಿನ್ ಸ್ವೀಕರಿಸುವ ಪರಿಪಾಠ ಈಚೆಗೆ ಬೆಳೆಯುತ್ತಿದೆ.
33 Blacklist ಬ್ಲ್ಯಾಕ್‌ಲಿಸ್ಟ್ ವೀಕ್ಷಿಸಲು ಅನುಮತಿಯಿಲ್ಲದ ಜಾಲತಾಣಗಳ ಪಟ್ಟಿ ಕಾಮಗಾರಿಯೊಂದರ ಗುಣಮಟ್ಟದ ಬಗ್ಗೆ ಗಲಾಟೆಯಾದಾಗ ಸಂಬಂಧಪಟ್ಟ ಗುತ್ತಿಗೆದಾರರನ್ನೋ ಕಚ್ಚಾಸಾಮಗ್ರಿ ಪೂರೈಸಿದವರನ್ನೋ ಕಪ್ಪುಪಟ್ಟಿಗೆ ಸೇರಿಸಲಾಗುವುದು ಎನ್ನುವ ಹೇಳಿಕೆ ಸಾಮಾನ್ಯವಾಗಿ ಕೇಳಸಿಗುತ್ತದೆ. ಕಪ್ಪುಪಟ್ಟಿ ಎಂಬ ಈ ಹೆಸರಿನ ಮೂಲ ಇಂಗ್ಲಿಷಿನ 'ಬ್ಲ್ಯಾಕ್‌ಲಿಸ್ಟ್'. ಯಾವುದೇ ಉದ್ದೇಶಕ್ಕೆ ಏನನ್ನು ಬಳಸಬಾರದು ಎಂದು ಸೂಚಿಸುವುದು ಈ ಪಟ್ಟಿಯ ಕೆಲಸ. ಗುತ್ತಿಗೆದಾರರ ಉದಾಹರಣೆಯನ್ನೇ ತೆಗೆದುಕೊಂಡರೆ ಮುಂದಿನ ಕಾಮಗಾರಿಯ ಗುತ್ತಿಗೆಯನ್ನು ಕಪ್ಪುಪಟ್ಟಿಯಲ್ಲಿಲ್ಲದವರಿಗೆ ಮಾತ್ರವೇ ಕೊಡುವುದು ಸಾಧ್ಯ. ಈ ಪರಿಕಲ್ಪನೆಗೆ ಡಿಜಿಟಲ್ ಜಗತ್ತಿನಲ್ಲೂ ಅಸ್ತಿತ್ವವಿದೆ. ಯಾವುದೋ ಸಂಸ್ಥೆಯಲ್ಲಿ ನಿರ್ದಿಷ್ಟ ಜಾಲತಾಣಗಳನ್ನು (ಉದಾ: ಸಮಾಜಜಾಲಗಳು, ವೀಡಿಯೋ ತಾಣಗಳು) ನೋಡಲು ಅನುಮತಿಯಿಲ್ಲ ಎನ್ನುವುದಾದರೆ ಅವರು ಆ ತಾಣಗಳನ್ನೆಲ್ಲ ತಮ್ಮ ವ್ಯವಸ್ಥೆಯ ಕಪ್ಪುಪಟ್ಟಿಗೆ ಸೇರಿಸುತ್ತಾರೆ. ಯಾರಾದರೂ ಆ ತಾಣವನ್ನು ತೆರೆಯಲು ಪ್ರಯತ್ನಿಸಿದರೆ ಅವರಿಗೆ "ಈ ತಾಣ ತೆರೆಯುವಂತಿಲ್ಲ"ವೆಂಬ ಸಂದೇಶವಷ್ಟೇ ಕಾಣಿಸುತ್ತದೆ. ನಿರ್ದಿಷ್ಟ ತಾಣಗಳನ್ನು ನಿರ್ಬಂಧಿಸುವ ಬದಲು ಕೆಲವೇ ತಾಣಗಳನ್ನು ವೀಕ್ಷಿಸಲು ಅನುಮತಿನೀಡುವುದೂ ಸಾಧ್ಯ. ಕಚೇರಿಯಲ್ಲಿದ್ದಾಗ ಜಿಮೇಲ್ ತಾಣವನ್ನಷ್ಟೇ ಬಳಸಬಹುದು ಎನ್ನುವುದಾದರೆ ಅದನ್ನು ಆ ಸಂಸ್ಥೆ ತನ್ನ ವ್ಯವಸ್ಥೆಯ ವೈಟ್‌ಲಿಸ್ಟ್‌ಗೆ (ಬಿಳಿಪಟ್ಟಿ) ಸೇರಿಸಬೇಕಾಗುತ್ತದೆ. ಬಿಳಿಪಟ್ಟಿಯಲ್ಲಿ ಯಾವ ತಾಣಗಳಿವೆಯೋ ಬಳಕೆದಾರರು ಅವನ್ನು ಮಾತ್ರ ತೆರೆಯುವುದು ಸಾಧ್ಯವಾಗುತ್ತದೆ. ಸೂಕ್ತ ಆಪ್‌ಗಳನ್ನು ಬಳಸಿ ಈ ಪರಿಕಲ್ಪನೆಯನ್ನು ಮೊಬೈಲ್ ಫೋನಿನಲ್ಲೂ ಅಳವಡಿಸುವುದು ಸಾಧ್ಯ. ಅನಗತ್ಯವಾಗಿ ಕಿರಿಕಿರಿಯುಂಟುಮಾಡುವ ಕರೆಗಳಿಂದ ಪಾರಾಗಲು ಬಳಸಬಹುದಾದ ಆಪ್‌ಗಳನ್ನು ನಿಮ್ಮ ಸ್ಮಾರ್ಟ್‌ಫೋನಿನ ಆಪ್‌ಸ್ಟೋರಿನಲ್ಲಿ ಹುಡುಕಬಹುದು. ಯಾವುದೇ ಆಪ್ ಬಳಸುವ ಮುನ್ನ ಅವುಗಳ ವಿಮರ್ಶೆಯನ್ನು ಪರಿಶೀಲಿಸಲು ಮರೆಯಬೇಡಿ.
34 Bloatware ಬ್ಲೋಟ್‌ವೇರ್ ಕಂಪ್ಯೂಟರಿನಲ್ಲಿ - ಸ್ಮಾರ್ಟ್‌ಫೋನಿನಲ್ಲಿ ಅಳವಡಿಸಲಾಗಿರುವ ಅನಗತ್ಯ ತಂತ್ರಾಂಶ ಕಂಪ್ಯೂಟರಿನಲ್ಲಿ, ಸ್ಮಾರ್ಟ್‌ಫೋನಿನಲ್ಲಿ ನಾವು ಬೇರೆಬೇರೆ ರೀತಿಯ ತಂತ್ರಾಂಶಗಳನ್ನು ಬಳಸುತ್ತೇವೆ. ಕಚೇರಿ ವ್ಯವಹಾರದಿಂದ ಮನರಂಜನೆಯವರೆಗೆ ಈ ತಂತ್ರಾಂಶಗಳು ನಮಗೆ ಹಲವು ಕೆಲಸಗಳಲ್ಲಿ ನೆರವಾಗುತ್ತವೆ. ಆದರೆ ಎಲ್ಲ ತಂತ್ರಾಂಶಗಳೂ ಸಂಪೂರ್ಣವಾಗಿ ಉಪಯುಕ್ತವಾಗಿರಬೇಕು ಎಂದೇನೂ ಇಲ್ಲ. ಕುತಂತ್ರಾಂಶಗಳಂತೆ (ಮಾಲ್‌ವೇರ್) ಹಾನಿಕರವಲ್ಲದ, ಆದರೆ ಸಂಪೂರ್ಣವಾಗಿ ಉಪಯುಕ್ತವೂ ಅಲ್ಲದ ಅನೇಕ ತಂತ್ರಾಂಶಗಳನ್ನು ನಾವು ನೋಡಬಹುದು. ಶೇಖರಣಾ ಸಾಮರ್ಥ್ಯ - ರ್‍ಯಾಮ್ ಇತ್ಯಾದಿಗಳನ್ನು ಹೆಚ್ಚು ಪ್ರಮಾಣದಲ್ಲಿ ಬಳಸುವುದು, ಯಾವುದೇ ಪ್ರಯೋಜನವಿಲ್ಲದ ಅಥವಾ ತೋರಿಕೆಯ ಸೌಲಭ್ಯಗಳನ್ನು ಒದಗಿಸುವುದು ಇಂತಹ ತಂತ್ರಾಂಶಗಳ ಗುಣಲಕ್ಷಣ. ಕೊಬ್ಬಿನ ಅಂಶ ಹೆಚ್ಚಾದಾಗ ಸ್ಥೂಲಕಾಯ ಬಂದು ಚಟುವಟಿಕೆ ಕಡಿಮೆಯಾಗುತ್ತದಲ್ಲ, ಇಂತಹ ಅನಗತ್ಯ ತಂತ್ರಾಂಶಗಳಿಂದ ಕಂಪ್ಯೂಟರಿನ - ಸ್ಮಾರ್ಟ್‌ಫೋನಿನ ಚಟುವಟಿಕೆಗೂ ತೊಂದರೆಯಾಗುತ್ತದೆ. ಹಾಗಾಗಿಯೇ ಇಂತಹ ತಂತ್ರಾಂಶಗಳನ್ನು 'ಬ್ಲೋಟ್‌ವೇರ್' ಎಂದು ಕರೆಯುತ್ತಾರೆ (ಬ್ಲೋಟ್ = ಊದಿಕೊಳ್ಳು). ಬಹಳಷ್ಟು ಸಾರಿ ಸ್ಮಾರ್ಟ್‌ಫೋನ್ ಅಥವಾ ಕಂಪ್ಯೂಟರ್ ನಿರ್ಮಾತೃಗಳು ತಮ್ಮ ಉತ್ಪನ್ನಗಳಲ್ಲಿ ಇಂತಹ ತಂತ್ರಾಂಶಗಳನ್ನು ಸೇರಿಸಿರುತ್ತಾರೆ. ಯಂತ್ರಾಂಶದ ಜೊತೆಗೆ ಬಳಕೆದಾರರು ನಮ್ಮದೇ ತಂತ್ರಾಂಶಗಳನ್ನೂ ಬಳಸಲಿ ಎನ್ನುವ ಉದ್ದೇಶವಷ್ಟೇ ಇದರ ಹಿನ್ನೆಲೆಯಲ್ಲಿರುತ್ತದೆ; ಆದರೆ ಆ ತಂತ್ರಾಂಶಗಳು ಉಪಯುಕ್ತವಾಗಿವೆಯೆಂದು ಬಳಕೆದಾರರಿಗೆ ಅನ್ನಿಸದಿದ್ದಾಗ ಅವು ಬ್ಲೋಟ್‌ವೇರ್ ಎಂದು ಕರೆಸಿಕೊಳ್ಳುತ್ತವೆ. ತೀರಾ ಈಚಿನವರೆಗೂ ನಿರ್ಮಾತೃಗಳು ಸೇರಿಸಿದ ಇಂತಹ ತಂತ್ರಾಂಶಗಳನ್ನು ತೆಗೆದುಹಾಕುವ ಸ್ವಾತಂತ್ರ್ಯ ಬಳಕೆದಾರರಿಗೆ ಇರಲಿಲ್ಲ. ಬ್ಲೋಟ್‌ವೇರ್ ಕುರಿತ ಆಕ್ರೋಶ ಹೆಚ್ಚಿದಂತೆ ಕೆಲ ಸಂಸ್ಥೆಗಳು ಈಚೆಗೆ ಈ ಸ್ವಾತಂತ್ರ್ಯವನ್ನೂ ನೀಡಲು ಪ್ರಾರಂಭಿಸಿದ್ದಾರೆ. ಯಾವುದೋ ತಂತ್ರಾಂಶವನ್ನು ಇನ್‌ಸ್ಟಾಲ್ ಮಾಡಲು ಹೊರಟಾಗ ಜೊತೆಯಲ್ಲಿ ಬೇರೆಯ ಕೆಲ ತಂತ್ರಾಂಶಗಳನ್ನೂ ಇನ್‌ಸ್ಟಾಲ್ ಮಾಡಿಕೊಳ್ಳಿ ಎಂದು ಅದು ಕೇಳುತ್ತದಲ್ಲ, ಅಂತಹ ತಂತ್ರಾಂಶಗಳ ಪೈಕಿ ಬ್ಲೋಟ್‌ವೇರ್ ಕೂಡಾ ಇರುವುದು ಸಾಧ್ಯ.
35 Blog ಬ್ಲಾಗ್ ವಿಶ್ವವ್ಯಾಪಿ ಜಾಲದ ಮೂಲಕ ನಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಲು ಇರುವ ಪ್ರಭಾವಶಾಲಿ ಮಾಧ್ಯಮ ಬ್ಲಾಗ್ ಎಂಬ ಹೆಸರು ವೆಬ್ ಲಾಗ್ ಎಂಬುದರ ಅಪಭ್ರಂಶ. ಇದು ಯಾರು ಬೇಕಾದರೂ ಸುಲಭವಾಗಿ ಪಡೆದುಕೊಳ್ಳಬಹುದಾದ ಜಾಲತಾಣ. ಓದಿದ ಪುಸ್ತಕ, ಇಷ್ಟವಾದ ತಿಂಡಿ, ಇಷ್ಟವಾಗದ ಚಲನಚಿತ್ರಗಳಿಂದ ಪ್ರಾರಂಭಿಸಿ ನಮ್ಮ ಹವ್ಯಾಸಗಳು, ಬರವಣಿಗೆ, ಅಭಿಪ್ರಾಯಗಳು - ಹೀಗೆ ಮನಸ್ಸಿಗೆ ಬಂದ ಯಾವುದೇ ವಿಷಯವನ್ನು ಇಡೀ ಜಗತ್ತಿನೊಡನೆ ಹಂಚಿಕೊಳ್ಳಲು ಬ್ಲಾಗುಗಳು ಅನುವುಮಾಡಿಕೊಡುತ್ತವೆ. ಬ್ಲಾಗನ್ನು ಜಾಲತಾಣ ಅನ್ನುವುದಕ್ಕಿಂತ ಅಂತರಜಾಲದಲ್ಲಿರುವ ದಿನಚರಿ ಎನ್ನುವುದೇ ಹೆಚ್ಚು ಸೂಕ್ತ. ಹೊಸತೊಂದು ಬ್ಲಾಗನ್ನು ಸೃಷ್ಟಿಸಿಕೊಳ್ಳುವುದು ನಮಗೊಂದು ಇಮೇಲ್ ವಿಳಾಸ ಪಡೆದುಕೊಂಡಷ್ಟೇ ಸುಲಭ! ಹೊಸದಾಗಿ ಕಂಪ್ಯೂಟರ್ ಬಳಸಲು ಕಲಿತವರೂ ಕೂಡ ಬಹಳ ಸುಲಭವಾಗಿ ಬ್ಲಾಗಮಂಡಲದ ಪ್ರಜೆಯಾಗಬಹುದು. ಬ್ಲಾಗಿಂಗ್ ಸೇವೆ ಒದಗಿಸುವ ಯಾವುದೇ ತಾಣಕ್ಕೆ (ಬ್ಲಾಗರ್, ವರ್ಡ್‌ಪ್ರೆಸ್ ಇತ್ಯಾದಿ) ಹೋಗಿ ಅವರು ಕೇಳುವ ಒಂದಷ್ಟು ಮಾಹಿತಿ ಕೊಟ್ಟು ನೋಂದಾಯಿಸಿಕೊಂಡರೆ ಸಾಕು, ನಮ್ಮದೇ ಆದ ಬ್ಲಾಗು ಸಿದ್ಧವಾಗುತ್ತದೆ; ಅದರಲ್ಲಿ ನಮಗೆ ಬೇಕಾದ ಯಾವುದೇ ಬಗೆಯ ಮಾಹಿತಿ (ಪಠ್ಯ, ಚಿತ್ರ, ವೀಡಿಯೋ, ಇತರ ತಾಣಗಳ ಲಿಂಕ್ ಇತ್ಯಾದಿ) ಸೇರಿಸುವುದು ಸಾಧ್ಯವಾಗುತ್ತದೆ.
36 Bluetooth ಬ್ಲೂಟೂತ್ ಪರಸ್ಪರ ಸಮೀಪದಲ್ಲಿರುವ ವಿದ್ಯುನ್ಮಾನ ಸಾಧನಗಳ ನಡುವೆ ನಿಸ್ತಂತು (ವೈರ್‌ಲೆಸ್) ಸಂವಹನ ಹಾಗೂ ಕಡತಗಳ ವಿನಿಮಯವನ್ನು ಸಾಧ್ಯವಾಗಿಸುವ ತಂತ್ರಜ್ಞಾನ ವಿಚಿತ್ರ ಹೆಸರಿನಿಂದ ಗಮನಸೆಳೆಯುವ ತಂತ್ರಜ್ಞಾನಗಳ ಪೈಕಿ 'ಬ್ಲೂಟೂತ್'ಗೆ ವಿಶೇಷ ಸ್ಥಾನವಿದೆ. ಪರಸ್ಪರ ಸಮೀಪದಲ್ಲಿರುವ ವಿದ್ಯುನ್ಮಾನ ಸಾಧನಗಳ ನಡುವೆ ನಿಸ್ತಂತು (ವೈರ್‌ಲೆಸ್) ಸಂವಹನ ಹಾಗೂ ಕಡತಗಳ ವಿನಿಮಯವನ್ನು ಸಾಧ್ಯವಾಗಿಸುವುದು ಈ ತಂತ್ರಜ್ಞಾನದ ವೈಶಿಷ್ಟ್ಯ. ಮೊದಲಿಗೆ ಮೊಬೈಲ್ ಫೋನುಗಳ ನಡುವೆ ಮಾಹಿತಿ ವಿನಿಮಯ ಮಾಡಿಕೊಳ್ಳಲು ಬ್ಲೂಟೂತ್ ತಂತ್ರಜ್ಞಾನ ವ್ಯಾಪಕವಾಗಿ ಬಳಕೆಯಾಗುತ್ತಿತ್ತು. ಈಚೆಗೆ ವೈ-ಫಿ ತಂತ್ರಜ್ಞಾನ ಆಧರಿತ 'ಶೇರ್‌ಇಟ್'ನಂತಹ ಸೌಲಭ್ಯಗಳು ಬಂದಮೇಲೆ ಆ ಬಗೆಯ ಬಳಕೆ ಕೊಂಚ ಕಡಿಮೆಯಾಗಿದೆ. ಆದರೆ ನಿಸ್ತಂತು ಇಯರ್‌ಫೋನ್ ಹಾಗೂ ಸ್ಪೀಕರುಗಳಲ್ಲಿ, ಕಾರಿನ ಮನರಂಜನಾ ವ್ಯವಸ್ಥೆಯಲ್ಲೆಲ್ಲ ಬ್ಲೂಟೂತ್ ಆಧಿಪತ್ಯ ಇನ್ನೂ ಮುಂದುವರೆದಿದೆ. ಕಾರಿನಲ್ಲಿರುವ ಸ್ಪೀಕರ್ ಹಾಗೂ ಮೈಕ್ ಮೂಲಕ ಮೊಬೈಲ್ ಫೋನ್ ಬಳಸುತ್ತೇವಲ್ಲ, ಅಲ್ಲಿ ಬಳಕೆಯಾಗುವುದು ಇದೇ ತಂತ್ರಜ್ಞಾನ. ಬೆಂಗಳೂರಿನ ಸಂಚಾರಿ ಪೊಲೀಸರು ರಸ್ತೆಯಲ್ಲಿ ದಂಡ ಕಟ್ಟಿಸಿಕೊಂಡು ರಸೀತಿ ಮುದ್ರಿಸಿಕೊಡುವುದು ಬ್ಲೂಟೂತ್ ಸಂಪರ್ಕವಿರುವ ಪ್ರಿಂಟರಿನಲ್ಲೇ! ಅಂದಹಾಗೆ ಪುರಾತನ ಯುರೋಪಿನ ಭಾಗವೊಂದನ್ನು ಆಳುತ್ತಿದ್ದ ಹರಾಲ್ಡ್ ಬ್ಲಾಟಂಡ್ (Harald Blåtand) ಎಂಬಾತನ ಹೆಸರಿನ ಉತ್ತರಾರ್ಧದ ಇಂಗ್ಲಿಷ್ ಅನುವಾದ ಈ ಹೆಸರಿಗೆ ಸ್ಫೂರ್ತಿ. ತನ್ನ ಪರಿಣಾಮಕಾರಿ ಸಂವಹನ ಶೈಲಿಯಿಂದ (ಇಂದಿನ) ಡೆನ್ಮಾರ್ಕ್ ಹಾಗೂ ನಾರ್ವೆ ಪ್ರದೇಶಗಳನ್ನು ಒಗ್ಗೂಡಿಸಿದ್ದನಂತೆ. ಬ್ಲೂಟೂತ್ ತಂತ್ರಜ್ಞಾನವೂ ಇಷ್ಟೇ ಪರಿಣಾಮಕಾರಿ ಎನ್ನುವುದು ಅದಕ್ಕೆ ಹೆಸರಿಟ್ಟವರ ಅಭಿಪ್ರಾಯವಾಗಿದ್ದಿರಬಹುದು. ಈ ರಾಜನ ಒಂದು ಹಲ್ಲು ನೀಲಿಯಾಗಿ ಕಾಣುತ್ತಿತ್ತು, ಹಾಗಾಗಿ ಅವನನ್ನು ಹರಾಲ್ಡ್ ಬ್ಲೂಟೂತ್ ಎಂದು ಕರೆಯುತ್ತಿದ್ದರು ಎನ್ನುವುದು ಪ್ರಚಲಿತದಲ್ಲಿರುವ ಇನ್ನೊಂದು ಆವೃತ್ತಿ.
37 Bluray Disk ಬ್ಲೂರೇ ಡಿಸ್ಕ್ ಸಾಮಾನ್ಯ ಡಿವಿಡಿಗಳಿಗಿಂತ ಹೆಚ್ಚು ಪ್ರಮಾಣದ ಮಾಹಿತಿಯನ್ನು ಶೇಖರಿಸಿಟ್ಟುಕೊಳ್ಳಬಲ್ಲ ಮಾಧ್ಯಮ ಒಂದು ಕಾಲದಲ್ಲಿ ಮನೆಯಲ್ಲಿ ಸಿನಿಮಾ ನೋಡಬೇಕೆನಿಸಿದಾಗ ವೀಡಿಯೋ ಕ್ಯಾಸೆಟ್ಟನ್ನು - ಪ್ಲೇಯರನ್ನು ಬಾಡಿಗೆಗೆ ತರುವ ಅಭ್ಯಾಸವಿತ್ತು. ನಂತರ ವಿಸಿಡಿ - ಡಿವಿಡಿಗಳು ಬಂದವು. ಬಾಡಿಗೆಗೆ ತರುವ ಅಭ್ಯಾಸದ ಜೊತೆಗೆ ಅವನ್ನು ಕೊಂಡಿಟ್ಟುಕೊಳ್ಳುವ ಅಭ್ಯಾಸವೂ ಶುರುವಾಯಿತು. ಮುಂದೆ ಅಂತರಜಾಲ ಸಂಪರ್ಕದ ವೇಗ ಹೆಚ್ಚಿದಂತೆ, ಸಿನಿಮಾಗಳನ್ನು ಡೌನ್‌ಲೋಡ್ ಮಾಡುವುದು - ಜಾಲತಾಣಗಳಲ್ಲೇ ನೋಡುವುದು ಸಾಧ್ಯವಾದಂತೆ ಇವೆಲ್ಲ ಅಭ್ಯಾಸಗಳು ಕಡಿಮೆಯೂ ಆದವು. ಆದರೆ ಇಂತಹ ಪರಿಸ್ಥಿತಿಯಲ್ಲೂ ಆನ್‌ಲೈನ್ ಅಂಗಡಿಗಳಲ್ಲಿ ಸಿನಿಮಾ ಮುದ್ರಿಕೆಗಳು ಮಾರಾಟವಾಗುತ್ತಿವೆ. ವಿಸಿಡಿ - ಡಿವಿಡಿಗಳಿಗೆ ಹತ್ತಿಪ್ಪತ್ತು ರೂಪಾಯಿಗಳಿಂದ ನೂರಿನ್ನೂರು ರೂಪಾಯಿಗಳವರೆಗಿನ ಬೆಲೆ ಇರುವುದೇನೋ ಸರಿ, ಅದಕ್ಕೂ ಹೆಚ್ಚು - ಕೆಲವೊಮ್ಮೆ ಸಾವಿರ ರೂಪಾಯಿಯನ್ನೂ ಮೀರಿದ - ಬೆಲೆಗೂ ಕೆಲ ಸಿನಿಮಾ ಮುದ್ರಿಕೆಗಳು ಮಾರಾಟವಾಗುತ್ತವೆ! ವಿಸಿಡಿ - ಡಿವಿಡಿಗಳೆರಡೂ ಅಲ್ಲದ ಈ ಮಾಧ್ಯಮವೇ ಬ್ಲೂ-ರೇ ಡಿಸ್ಕ್. ಹೆಚ್ಚು ಸ್ಪಷ್ಟವಾದ, ಹಾಗಾಗಿಯೇ ಶೇಖರಣೆಗೆ ಹೆಚ್ಚು ಸ್ಥಳ ಬೇಡುವ ವೀಡಿಯೋಗಳನ್ನು ಶೇಖರಿಸಿಡಲು ಸೋನಿ ಸಂಸ್ಥೆ ರೂಪಿಸಿದ ತಂತ್ರಜ್ಞಾನದ ಫಲವೇ ಬ್ಲೂ-ರೇ ಡಿಸ್ಕ್‌ಗಳ ಸೃಷ್ಟಿ. ಇವುಗಳಲ್ಲಿ ಸಾಮಾನ್ಯ ಡಿವಿಡಿಗಳಿಗಿಂತ ಐದಾರು ಪಟ್ಟು ಹೆಚ್ಚು ಪ್ರಮಾಣದ ಮಾಹಿತಿಯನ್ನು ಶೇಖರಿಸುವುದು ಸಾಧ್ಯ. ವಿಸಿಡಿ, ಡಿವಿಡಿಗಳಲ್ಲಿರುವ ಮಾಹಿತಿಯನ್ನು ಓದಲು ಕೆಂಪು ಲೇಸರ್ ಕಿರಣ ಬಳಕೆಯಾದಂತೆ ಬ್ಲ್ಯೂ-ರೇ ಡಿಸ್ಕುಗಳಲ್ಲಿ ನೀಲಿ ಲೇಸರ್ ಕಿರಣಗಳನ್ನು ಬಳಸಲಾಗುತ್ತದೆ; ಇದರಿಂದಾಗಿ ಡಿಸ್ಕ್ ಮೇಲ್ಮೈಯಲ್ಲಿ ಕಡಿಮೆ ಸ್ಥಳ ಬಳಸಿಕೊಂಡು ಹೆಚ್ಚು ಮಾಹಿತಿಯನ್ನು ಶೇಖರಿಸುವುದು ಹಾಗೂ ಅದನ್ನು ಮತ್ತೆ ಸುಲಭವಾಗಿ ಓದುವುದು ಸಾಧ್ಯವಾಗುತ್ತದೆ. ಅವುಗಳ ನಾಮಕಾರಣವೂ ಈ ನೀಲಿ ಕಿರಣಗಳೇ!
38 Bookmark ಬುಕ್‌ಮಾರ್ಕ್ ಜಾಲತಾಣಗಳ ವಿಳಾಸಗಳನ್ನು ಉಳಿಸಿಟ್ಟುಕೊಳ್ಳಲು, ವಿಂಗಡಿಸಿಟ್ಟುಕೊಳ್ಳಲು ನೆರವಾಗುವ ವ್ಯವಸ್ಥೆ ವಿಶ್ವವ್ಯಾಪಿ ಜಾಲದಲ್ಲಿ ಓಡಾಡುವಾಗ ನಾವು ಅನೇಕ ಜಾಲತಾಣಗಳನ್ನು ನೋಡುತ್ತೇವೆ, ಚೆನ್ನಾಗಿದೆ ಎನಿಸಿದ ತಾಣಗಳಿಗೆ ಮತ್ತೆಮತ್ತೆ ಭೇಟಿಕೊಡುತ್ತೇವೆ. ನಾವು ನೋಡಿದ ತಾಣದಲ್ಲಿ ಒಂದೇ ಬಾರಿಗೆ ಓದಿ ಮುಗಿಸಲು ಸಾಧ್ಯವಾಗದಷ್ಟು ಮಾಹಿತಿಯಿದ್ದರೆ, ಅಥವಾ ಅಲ್ಲಿರುವ ಮಾಹಿತಿ ಮುಂದೆ ಯಾವಾಗಲೋ ಉಪಯೋಗಕ್ಕೆ ಬರಬಹುದು ಅನ್ನಿಸಿದರೆ ಅದರತ್ತ ಮರಳುವುದೂ ಸಹಜವೇ. ಹೀಗೆ ಯಾವುದೇ ಜಾಲತಾಣವನ್ನು ಮತ್ತೊಮ್ಮೆ ಸಂದರ್ಶಿಸುವುದರ ಕಾರಣ ಏನೇ ಆದರೂ ಅದರ ವಿಳಾಸಗಳನ್ನು ನೆನಪಿಟ್ಟುಕೊಳ್ಳಬೇಕಾದ್ದು ಅತ್ಯಗತ್ಯ. ವಿಳಾಸಗಳ ಸಂಖ್ಯೆ ಕಡಿಮೆಯಿದ್ದರೆ, ಅವುಗಳ ಸ್ವರೂಪ ಗೂಗಲ್ ಡಾಟ್ ಕಾಮ್ ಅಥವಾ ಇಜ್ಞಾನ ಡಾಟ್ ಕಾಮ್ ಎನ್ನುವಷ್ಟು ಸರಳವಾಗಿದ್ದರೆ ಅವನ್ನೆಲ್ಲ ನೆನಪಿಟ್ಟುಕೊಳ್ಳುವುದು ಸುಲಭ. ಆದರೆ ನಲವತ್ತು - ಐವತ್ತು ತಾಣಗಳ ವಿಳಾಸ ನೆನಪಿಟ್ಟುಕೊಳ್ಳಬೇಕೆಂದರೆ ಅದೊಂದು ಸವಾಲೇ ಸರಿ. ಇನ್ನು ನಾವು ಮರಳಬೇಕೆಂದಿರುವ ವಿಳಾಸ ಹತ್ತಾರು ಅಂಕಿಗಳು, ನಾಲ್ಕಾರು ಚಿಹ್ನೆಗಳು, ಇಪ್ಪತ್ತು ಅಕ್ಷರಗಳ ಚಿತ್ರಾನ್ನವಾದರೆ ಅದನ್ನು ನೆನಪಿಟ್ಟುಕೊಳ್ಳುವುದು ಹೇಗೆ? ಇದನ್ನು ಸಾಧ್ಯವಾಗಿಸುವುದೇ 'ಬುಕ್‌ಮಾರ್ಕ್'ನ ಪರಿಕಲ್ಪನೆ. ಮುದ್ರಿತ ಪುಸ್ತಕ ಓದುವಾಗ ಬಳಸುವ ಬುಕ್‌ಮಾರ್ಕು ಭೌತಿಕವಾದರೆ ಇದು ಡಿಜಿಟಲ್ ರೂಪದ್ದು ಎನ್ನುವುದಷ್ಟೇ ವ್ಯತ್ಯಾಸ. ನಮ್ಮ ಮೆಚ್ಚಿನ ಜಾಲತಾಣಗಳ ವಿಳಾಸಗಳನ್ನು ಉಳಿಸಿಟ್ಟುಕೊಳ್ಳಲು, ಬೇಕಾದಾಗ ಥಟ್ಟನೆ ಸಿಗುವಂತೆ ವಿಂಗಡಿಸಿಟ್ಟುಕೊಳ್ಳಲು ನೆರವಾಗುವುದು ಇವುಗಳ ವೈಶಿಷ್ಟ್ಯ. ಈ ಸೌಲಭ್ಯ ನಮಗೆ ಹಲವು ರೂಪಗಳಲ್ಲಿ ಸಿಗುತ್ತದೆ. ತಾಣಗಳ ವಿಳಾಸವನ್ನು ಬ್ರೌಸರ್ ತಂತ್ರಾಂಶದಲ್ಲೇ ಉಳಿಸಿಟ್ಟುಕೊಳ್ಳುವುದು ಈ ಪೈಕಿ ಸುಲಭದ ಆಯ್ಕೆ (ಹೆಚ್ಚಿನ ವಿವರಕ್ಕೆ ನೀವು ಬಳಸುವ ಬ್ರೌಸರ್ ತಂತ್ರಾಂಶದ ಸಹಾಯ ಪುಟ ನೋಡಿ). ಇಂತಹುದೇ ಸೌಲಭ್ಯ ಒದಗಿಸುವ ಸೋಶಿಯಲ್ ಬುಕ್‌ಮಾರ್ಕಿಂಗ್ ತಾಣಗಳು ಹಾಗೂ ಮೊಬೈಲ್ ಆಪ್‌ಗಳ ಬಗ್ಗೆ ಮಾಹಿತಿಗಾಗಿ ಗೂಗಲ್ ಮಾಡಬಹುದು.
39 Boot ಬೂಟ್ ಕಂಪ್ಯೂಟರ್, ಸ್ಮಾರ್ಟ್‌ಫೋನ್ ಮುಂತಾದ ಸಾಧನಗಳನ್ನು ಪ್ರಾರಂಭಿಸುವ ಪ್ರಕ್ರಿಯೆ ಕಂಪ್ಯೂಟರು - ಸ್ಮಾರ್ಟ್‌ಫೋನುಗಳೆಲ್ಲ ನಾವು ಹೇಳಿದ ಮಾತು ಕೇಳುವಂತೆ ಮಾಡುವುದೇ ಆಪರೇಟಿಂಗ್ ಸಿಸ್ಟಂ ಅಥವಾ ಕಾರ್ಯಾಚರಣ ವ್ಯವಸ್ಥೆಯ ಕೆಲಸ. ಆ ಸಾಧನಗಳ ಪ್ರಾಥಮಿಕ ಚಟುವಟಿಕೆಗಳನ್ನು ನಿಯಂತ್ರಿಸುವುದು, ಅದರಲ್ಲಿರುವ ಸೌಲಭ್ಯಗಳನ್ನು ಬಳಸಿಕೊಳ್ಳಲು ನೆರವಾಗುವುದು ಹಾಗೂ ವಿವಿಧ ತಂತ್ರಾಂಶಗಳು ಕೆಲಸಮಾಡಲು ಅನುವುಮಾಡಿಕೊಡುವುದು ಈ ವ್ಯವಸ್ಥೆಯೇ. ಕಂಪ್ಯೂಟರ್, ಸ್ಮಾರ್ಟ್‌ಫೋನ್ ಅಥವಾ ಅಂತಹುದೇ ಬೇರೊಂದು ಸಾಧನವನ್ನು ಬಳಸಿ ಯಾವ ಕೆಲಸ ಮಾಡಬೇಕಾದರೂ ಮೊದಲಿಗೆ ಕಾರ್ಯಾಚರಣ ವ್ಯವಸ್ಥೆ ಪ್ರಾರಂಭವಾಗಿರಬೇಕು. ನಿಷ್ಕ್ರಿಯವಾಗಿರುವ ಸಾಧನದ ಪವರ್ ಬಟನ್ ಒತ್ತಿದಾಗ ಅದು ತನ್ನಲ್ಲಿ ಈ ಕಾರ್ಯಾಚರಣ ವ್ಯವಸ್ಥೆ ಎಲ್ಲಿ ಶೇಖರವಾಗಿದೆ ಎಂದು ಹುಡುಕಿ ಅದನ್ನು ಪ್ರಾರಂಭಿಸುತ್ತದೆ. 'ಬೂಟ್' ಮಾಡುವುದು ಎನ್ನುವುದು ಇದಕ್ಕೇ. ಯಾವ ಸಾಧನವೇ ಆದರೂ ಗ್ರಾಹಕರ ಬಳಕೆಗೆ ಸಿದ್ಧವಾಗುವುದು ಬೂಟ್ ಆದ ನಂತರವಷ್ಟೇ. ಬೂಟ್ ಮಾಡುವುದು ಬಯಾಸ್ ಎಂಬ ತಂತ್ರಾಂಶದ ಕೆಲಸ. ಬಯಾಸ್ ಎನ್ನುವುದು 'ಬೇಸಿಕ್ ಇನ್‌ಪುಟ್/ಔಟ್‌ಪುಟ್ ಸಿಸ್ಟಂ'ನ ಹ್ರಸ್ವರೂಪ. ಕೆಲ ಕಂಪ್ಯೂಟರುಗಳಲ್ಲಿ ಬಯಾಸ್ ಬದಲಿಗೆ 'ಯೂನಿಫೈಡ್ ಎಕ್ಸ್‌ಟೆನ್ಸಿಬಲ್ ಫರ್ಮ್‌ವೇರ್ ಇಂಟರ್‌ಫೇಸ್' (ಯುಇಎಫ್‌ಐ) ಎಂಬ ಬೇರೊಂದು ವ್ಯವಸ್ಥೆಯನ್ನು ಬಳಸಲಾಗುತ್ತದೆ. ಬೂಟ್ ಮಾಡಲು ಅಗತ್ಯವಾದ ಮಾಹಿತಿ ಹಾಗೂ ಆದೇಶಗಳನ್ನು ಮೊದಲಿಗೆ ರೀಡ್ ಓನ್ಲಿ ಮೆಮೊರಿಯಿಂದ (ರಾಮ್) ಪಡೆದುಕೊಳ್ಳಲಾಗುತ್ತದೆ. ಆನಂತರ ಪ್ರಾರಂಭಿಸಲಾಗುವ ತಂತ್ರಾಂಶಗಳು ಆಂತರಿಕ (ಉದಾ: ಹಾರ್ಡ್ ಡಿಸ್ಕ್) ಅಥವಾ ಬಾಹ್ಯ (ಉದಾ: ಪೆನ್ ಡ್ರೈವ್, ಡಿವಿಡಿ ಇತ್ಯಾದಿ) ಸಂಗ್ರಹಣಾ ಸಾಧನಗಳ ಪೈಕಿ ಎಲ್ಲಿ ಬೇಕಾದರೂ ಇರಬಹುದು. ಬೂಟ್ ಆಗಲು ತಗಲುವ ಸಮಯ ಬೇರೆಬೇರೆ ಸಾಧನಗಳಿಗೆ ಬೇರೆಬೇರೆಯಾಗಿರುತ್ತದೆ. ಹೊಸದಾಗಿ ಬಂದಿರುವ ಕೆಲ ಕಾರ್ಯಾಚರಣ ವ್ಯವಸ್ಥೆಗಳಲ್ಲಿ ಈ ಅವಧಿ ಬಹಳ ಕಡಿಮೆ ಇರುವುದು ವಿಶೇಷ. ಅಂದಹಾಗೆ ಸ್ಟಾರ್ಟ್-ಅಪ್, ಬೂಟ್-ಅಪ್ ಎಂದೆಲ್ಲ ಕರೆಯುವುದೂ ಇದೇ ಪ್ರಕ್ರಿಯೆಯನ್ನು.
40 Boot Disk ಬೂಟ್ ಡಿಸ್ಕ್ ಬೂಟ್ ಮಾಡುವಾಗ ಕಾರ್ಯಾಚರಣ ವ್ಯವಸ್ಥೆಯನ್ನು ಪ್ರಾರಂಭಿಸಲು ಬಳಸಲಾಗುವ ಶೇಖರಣಾ ಮಾಧ್ಯಮ ಕಂಪ್ಯೂಟರನ್ನು ಸ್ವಿಚ್ ಆನ್ ಮಾಡಿದಾಗಲೆಲ್ಲ ಮೊದಲಿಗೆ ಕಾರ್ಯಾಚರಣ ವ್ಯವಸ್ಥೆಯನ್ನು ಪ್ರಾರಂಭಿಸಲಾಗುತ್ತದೆ. ಈ ಪ್ರಕ್ರಿಯೆಯನ್ನು ಬೂಟ್ ಮಾಡುವುದು ಎಂದು ಕರೆಯುತ್ತಾರೆ. ಇದಕ್ಕಾಗಿ ಕಾರ್ಯಾಚರಣ ವ್ಯವಸ್ಥೆ ಒಂದುಕಡೆ ಇನ್‌ಸ್ಟಾಲ್ ಆಗಿರಬೇಕು; ಅಂದರೆ, ಅಗತ್ಯ ಕಡತಗಳೆಲ್ಲ ಹಾರ್ಡ್ ಡಿಸ್ಕ್, ಡಿವಿಡಿ ಮುಂತಾದ ಯಾವುದೋ ಒಂದು ಶೇಖರಣಾ ಮಾಧ್ಯಮದಲ್ಲಿ ಇರಬೇಕು. ಬೂಟ್ ಮಾಡುವಾಗ ಕಾರ್ಯಾಚರಣ ವ್ಯವಸ್ಥೆಯನ್ನು ಪ್ರಾರಂಭಿಸಲು ಇದೇ ಮಾಧ್ಯಮವನ್ನು ಬಳಸಿಕೊಳ್ಳಲಾಗುತ್ತದೆ. ಆದುದರಿಂದಲೇ ಈ ಮಾಧ್ಯಮವನ್ನು 'ಬೂಟ್ ಡಿಸ್ಕ್' ಎಂದು ಕರೆಯುತ್ತಾರೆ. ಬಹುತೇಕ ಕಂಪ್ಯೂಟರುಗಳಲ್ಲಿ ಹಾರ್ಡ್ ಡಿಸ್ಕ್ ಅನ್ನೇ 'ಬೂಟ್ ಡಿಸ್ಕ್' ಆಗಿ ಬಳಸಲಾಗುತ್ತದೆ. ಒಂದಕ್ಕಿಂತ ಹೆಚ್ಚು ಹಾರ್ಡ್ ಡಿಸ್ಕ್‌ಗಳಿದ್ದ ಪಕ್ಷದಲ್ಲಿ ಆ ಪೈಕಿ ಬೂಟ್ ಡಿಸ್ಕ್ ಯಾವುದು ಎಂದು ಬಯಾಸ್‌ನಲ್ಲಿ ಸೂಚಿಸುವುದು ಸಾಧ್ಯ. ಹಾರ್ಡ್ ಡಿಸ್ಕ್‌ನ ಬೇರೆಬೇರೆ ಪಾರ್ಟಿಶನ್‌ಗಳಲ್ಲಿ ಬೇರೆಬೇರೆ ಕಾರ್ಯಾಚರಣ ವ್ಯವಸ್ಥೆಗಳನ್ನು ಇನ್‌ಸ್ಟಾಲ್ ಮಾಡಿದ್ದರೆ ಆ ಪೈಕಿ ಯಾವುದನ್ನು ಪ್ರಾರಂಭಿಸಬೇಕು ಎನ್ನುವುದನ್ನೂ ಬೂಟ್ ಮಾಡುವ ಸಂದರ್ಭದಲ್ಲಿ ಆರಿಸಿಕೊಳ್ಳಬಹುದು. ಹಾರ್ಡ್ ಡಿಸ್ಕ್ ವೈಫಲ್ಯದಂತಹ ಸಂದರ್ಭಗಳಲ್ಲಿ ಕಂಪ್ಯೂಟರನ್ನು ಪ್ರಾರಂಭಿಸಲು ಕಾರ್ಯಾಚರಣ ವ್ಯವಸ್ಥೆ ಶೇಖರವಾಗಿರುವ ಸಿ.ಡಿ.-ಡಿವಿಡಿಗಳನ್ನೂ ಬೂಟ್ ಡಿಸ್ಕ್‌ನಂತೆ ಬಳಸಬಹುದು. ಹಿಂದೆ ಎಂಎಸ್-ಡಾಸ್‌ನಂತಹ ಕಾರ್ಯಾಚರಣ ವ್ಯವಸ್ಥೆಗಳಲ್ಲಿ ಈ ಉದ್ದೇಶಕ್ಕಾಗಿ ಫ್ಲಾಪಿ ಡಿಸ್ಕ್‌ಗಳನ್ನೂ ಬಳಸಲಾಗುತ್ತಿತ್ತು.