A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 318

Backtrace:

File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 319

Backtrace:

File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 320

Backtrace:

File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler

File: /Appdata/padakanaja.karnataka.gov.in/index.php
Line: 318
Function: require_once

Padakanaja - Dictionary View
ಅನಿಸಿಕೆ

ಪದಕೋಶ: ಕಂಪ್ಯೂಟರ್ ತಂತ್ರಜ್ಞಾನ ಪದವಿವರಣ ಕೋಶ | ಇಂಗ್ಲೀಷ್-ಕನ್ನಡ |ಪ್ರಕಾಶಕರು - ಕನ್ನಡ ಅಭಿವೃದ್ಧಿ ಪ್ರಾಧಿಕಾರ (2017)

Show entries
ಕ್ರಮ ಸ೦ಖ್ಯೆ ಇಂಗ್ಲೀಷ್ ಪದ
(English Word)
ಕನ್ನಡ ಪದ
(Kannada Word)
ಕನ್ನಡ ಅರ್ಥ
(Kannada Meaning)
ವಿಷಯ ವರ್ಗೀಕರಣ
(Word Subject)
ವ್ಯಾಕರಣ ವಿಶೇಷ
(Word Grammer)
ಕನ್ನಡ ಉಚ್ಚಾರಣೆ
(Kannada Pronunciation)
ಪರ್ಯಾಯ ಪದ
(Word Synonyms)
ಇಂಗ್ಲೀಷ್ ಅರ್ಥ
(English Meaning)
ಸಂಕ್ಷಿಪ್ತ ವಿವರಣೆ
(Short Description)
ದೀರ್ಘ ವಿವರಣೆ
(Long Description)
ಆಡಳಿತಾತ್ಮಕ ಪದ
(Administrative Word)
61 Client - Server ಕ್ಲೈಂಟ್-ಸರ್ವರ್ ನಿರ್ದಿಷ್ಟ ಮಾಹಿತಿಯನ್ನು ಅಪೇಕ್ಷಿಸುವ ಹಾಗೂ ಅದನ್ನು ಒದಗಿಸುವ ಸಾಧನಗಳ ಜೋಡಿ ಜಾಲತಾಣವನ್ನು ತೆರೆದಾಗ, ಇಮೇಲ್ ಖಾತೆಗೆ ಲಾಗ್‌ಇನ್ ಆದಾಗ, ಕಡತವೊಂದನ್ನು ಡೌನ್‌ಲೋಡ್ ಮಾಡಿದಾಗಲೆಲ್ಲ ನಮ್ಮ ಕಂಪ್ಯೂಟರ್ ಅಥವಾ ಸ್ಮಾರ್ಟ್‌ಫೋನಿಗೆ ಬೇರೊಂದು ಕಂಪ್ಯೂಟರಿನಿಂದ ಮಾಹಿತಿ ಬರುತ್ತದೆ. ನಾವು ಅಪೇಕ್ಷಿಸಿದ ಸೇವೆ, ಅರ್ಥಾತ್ ಮಾಹಿತಿಯನ್ನು ನಮಗೆ ಒದಗಿಸುವ ಈ ಕಂಪ್ಯೂಟರನ್ನು 'ಸರ್ವರ್' ಎಂದು ಕರೆಯುತ್ತಾರೆ. ವೆಬ್ ಸರ್ವರ್, ಇಮೇಲ್ ಸರ್ವರ್, ಫೈಲ್ ಸರ್ವರ್‌ಗಳೆಲ್ಲ ಇಂತಹ ವ್ಯವಸ್ಥೆಗೆ ಉದಾಹರಣೆಗಳು. ಸರ್ವರ್‌ಗೆ ನಮ್ಮ ಪರವಾಗಿ ಬೇಡಿಕೆ ಸಲ್ಲಿಸುವುದು ನಮ್ಮ ಕಂಪ್ಯೂಟರ್ ಅಥವಾ ಸ್ಮಾರ್ಟ್‌ಫೋನ್ ತಾನೇ? ಹಾಗಾಗಿ ಈ ವ್ಯವಹಾರದಲ್ಲಿ ಗ್ರಾಹಕರ ಸ್ಥಾನ ಅವುಗಳದೇ. ನಿರ್ದಿಷ್ಟ ಸೇವೆಗೆ ಬೇಡಿಕೆ ಸಲ್ಲಿಸುವ ಈ ಸಾಧನಗಳನ್ನು 'ಕ್ಲೈಂಟ್'ಗಳೆಂದು ಗುರುತಿಸಲಾಗುತ್ತದೆ. ಸರ್ವರ್ ಹಾಗೂ ಕ್ಲೈಂಟ್ ಎಂಬ ಎರಡು ಸಾಧನಗಳ ನಡುವೆ ಮಾಹಿತಿಯ ವರ್ಗಾವಣೆಯನ್ನು ಸಾಧ್ಯವಾಗಿಸುವ ಈ ಏರ್ಪಾಡಿಗೆ 'ಕ್ಲೈಂಟ್ - ಸರ್ವರ್ (ಗ್ರಾಹಕ - ಸೇವಕ) ವಿನ್ಯಾಸ' ಎಂದೇ ಹೆಸರು. ನಾವು ದಿನನಿತ್ಯವೂ ಬಳಸುವ ಅನೇಕ ಸೌಲಭ್ಯಗಳು ಕ್ಲೈಂಟ್ - ಸರ್ವರ್ ವಿನ್ಯಾಸವನ್ನು ಆಧರಿಸಿಕೊಂಡೇ ಕೆಲಸಮಾಡುತ್ತವೆ. ಇಂತಹ ಸೌಲಭ್ಯಗಳಲ್ಲಿ ಸರ್ವರ್ ಅನ್ನು ಸಂಪರ್ಕಿಸಲು ನಾವು ವಿವಿಧ ತಂತ್ರಾಂಶ ಸೇವೆಗಳನ್ನು ಬಳಸುತ್ತೇವಲ್ಲ (ಉದಾ: ಇಮೇಲ್ ಖಾತೆಯ ಜಾಲತಾಣ ಅಥವಾ ಆಪ್), ಅವುಗಳನ್ನು 'ಕ್ಲೈಂಟ್ ಸಾಫ್ಟ್‌ವೇರ್' ಎಂದು ಕರೆಯುತ್ತಾರೆ. ಗ್ರಾಹಕರ ಹಾಗೂ ಸರ್ವರ್‌ಗಳ ನಡುವೆ ಸಂಪರ್ಕ ಏರ್ಪಡಿಸುವುದು ಇಂತಹ ತಂತ್ರಾಂಶಗಳ ಕೆಲಸ.
62 Clipboard ಕ್ಲಿಪ್‌ಬೋರ್ಡ್ ಕಾಪಿ ಮಾಡಿಕೊಂಡ ಮಾಹಿತಿಯನ್ನು ಇನ್ನೊಂದೆಡೆ ಬಳಸುವವರೆಗೆ ಉಳಿಸಿಟ್ಟುಕೊಳ್ಳುವ ಸೌಲಭ್ಯ ಕಂಪ್ಯೂಟರಿನಲ್ಲಾಗಲಿ ಸ್ಮಾರ್ಟ್‌ಫೋನಿನಲ್ಲೇ ಆಗಲಿ, ಡಿಜಿಟಲ್ ರೂಪದ ಮಾಹಿತಿಯನ್ನು ನಕಲಿಸಿಕೊಳ್ಳುವುದು ಹಾಗೂ ಇನ್ನೊಂದು ಕಡೆ ಬಳಸುವುದು ನಮಗೆಲ್ಲ ಚೆನ್ನಾಗಿಯೇ ಗೊತ್ತು. ಕಾಪಿ-ಪೇಸ್ಟ್ ಎಂದು ಗುರುತಿಸುವುದು ಈ ಪ್ರಕ್ರಿಯೆಯನ್ನೇ. ನಕಲಿಸಿಕೊಂಡ ಮಾಹಿತಿಯನ್ನು ಇನ್ನೊಂದೆಡೆ ಬಳಸುವವರೆಗೆ ಅದು ಒಂದು ಕಡೆ ಉಳಿದಿರಬೇಕಲ್ಲ, ಅದಕ್ಕಾಗಿ ಬಳಕೆಯಾಗುವುದೇ 'ಕ್ಲಿಪ್‌ಬೋರ್ಡ್'. ಈ ಉದ್ದೇಶಕ್ಕಾಗಿ ಕಂಪ್ಯೂಟರಿನ ರ್‍ಯಾಂಡಮ್ ಆಕ್ಸೆಸ್ ಮೆಮೊರಿಯ (ರ್‍ಯಾಮ್) ಒಂದು ಭಾಗವನ್ನು ಬಳಸಲಾಗುತ್ತದೆ. ಯಾವುದೇ ಮಾಹಿತಿಯನ್ನು ಕಾಪಿ ಮಾಡಿಕೊಂಡ ತಕ್ಷಣ ಅದು ಈ ಕ್ಲಿಪ್‌ಬೋರ್ಡಿಗೆ ವರ್ಗಾವಣೆಯಾಗುತ್ತದೆ. ಆ ಮಾಹಿತಿಯನ್ನು ಇನ್ನೊಂದೆಡೆ ಬಳಸಲು 'ಪೇಸ್ಟ್' ಆಯ್ಕೆ ಬಳಸುತ್ತೇವಲ್ಲ, ಆಗ ಅದೇ ಮಾಹಿತಿ ಕ್ಲಿಪ್‌ಬೋರ್ಡಿನಿಂದ ನಮ್ಮ ಆಯ್ಕೆಯ ತಂತ್ರಾಂಶಕ್ಕೆ ವರ್ಗಾವಣೆಯಾಗುತ್ತದೆ. ಈ ಮಾಹಿತಿಯೆಲ್ಲ ರ್‍ಯಾಮ್‌ನಲ್ಲಿರುತ್ತದಲ್ಲ, ಹಾಗಾಗಿ ಅದು ಬಳಕೆಗೆ ಲಭ್ಯವಿರುವುದು ಕಂಪ್ಯೂಟರಿಗೆ ವಿದ್ಯುತ್ ಪೂರೈಕೆ ಇರುವವರೆಗೆ ಮಾತ್ರ. ಬಹಳಷ್ಟು ಸಂದರ್ಭಗಳಲ್ಲಿ ಕ್ಲಿಪ್‌ಬೋರ್ಡಿನಲ್ಲಿರುವ ಮಾಹಿತಿ ನಮಗೆ ದೊರಕುವುದು ಬೇರೆಯ ಇನ್ನಷ್ಟು ಮಾಹಿತಿಯನ್ನು ಕಾಪಿ ಮಾಡಿಕೊಳ್ಳುವವರೆಗೆ ಮಾತ್ರ. ಕ್ಲಿಪ್‌ಬೋರ್ಡಿನಲ್ಲಿ ಮಾಹಿತಿಯ ಒಂದಕ್ಕಿಂತ ಹೆಚ್ಚು ತುಣುಕುಗಳನ್ನು ಏಕಕಾಲದಲ್ಲೇ ಉಳಿಸಿಡಲು ನೆರವಾಗುವ ತಂತ್ರಾಂಶಗಳೂ ಇವೆ - ಈ ಕುರಿತ ಮಾಹಿತಿಗಾಗಿ 'ಮಲ್ಟಿ ಕ್ಲಿಪ್‌ಬೋರ್ಡ್' ಅಥವಾ 'ಕ್ಲಿಪ್‌ಬೋರ್ಡ್ ಮ್ಯಾನೇಜರ್' ಎಂದು ಗೂಗಲ್ ಮಾಡಬಹುದು. ಇದೇ ಸೌಲಭ್ಯವನ್ನು ಮೊಬೈಲಿನಲ್ಲಿ ಒದಗಿಸುವ ಆಪ್‌ಗಳೂ ಇವೆ.
63 Cloud Computing ಕ್ಲೌಡ್ ಕಂಪ್ಯೂಟಿಂಗ್ ತಂತ್ರಾಂಶ, ಸಂಸ್ಕರಣಾ ಸಾಮರ್ಥ್ಯ, ಮಾಹಿತಿ ಸಂಗ್ರಹಣೆಗೆ ಸ್ಥಳಾವಕಾಶ ಮುಂತಾದ ಮೂಲಸೌಕರ್ಯಗಳನ್ನು ಅಂತರಜಾಲದ ಮೂಲಕ ನಮಗೆ ಬೇಕಾದಾಗ ಬೇಕಾದಂತೆ ಒದಗಿಸುವ ವ್ಯವಸ್ಥೆ ಕ್ಲೌಡ್ ಕಂಪ್ಯೂಟಿಂಗ್ ಎಂಬ ಹೆಸರು ಕೇಳಿದ ತಕ್ಷಣ ನಮ್ಮ ಮನದಲ್ಲಿ ಕೊಂಚ ಗೊಂದಲವಾಗುವುದು ಸಹಜ. ಕ್ಲೌಡ್ ಅಂದರೆ ಮೋಡ ಎನ್ನುವುದು ನಿಜವಾದರೂ ಇಲ್ಲಿ ಕ್ಲೌಡ್ ಎಂದರೆ ಆಕಾಶದ ಮೋಡ ಅಲ್ಲ. ತಂತ್ರಾಂಶ, ಸಂಸ್ಕರಣಾ ಸಾಮರ್ಥ್ಯ, ಮಾಹಿತಿ ಸಂಗ್ರಹಣೆಗೆ ಸ್ಥಳಾವಕಾಶ ಮುಂತಾದ ಮೂಲಸೌಕರ್ಯಗಳನ್ನು ಅಂತರಜಾಲದ ಮೂಲಕ ನಮಗೆ ಬೇಕಾದಾಗ ಬೇಕಾದಂತೆ ಒದಗಿಸುವ ವ್ಯವಸ್ಥೆಯ ಹೆಸರೇ ಕ್ಲೌಡ್ ಕಂಪ್ಯೂಟಿಂಗ್. ಇದನ್ನು ಬಳಸುವವರು ತಮಗೆ ಬೇಕಾದ ಕಂಪ್ಯೂಟರ್ ವ್ಯವಸ್ಥೆಯನ್ನು ಸ್ವತಃ ಹೊಂದಿಸಿಕೊಳ್ಳುವ ಬದಲು ಕ್ಲೌಡ್ ಕಂಪ್ಯೂಟಿಂಗ್ ಸೇವೆ ಒದಗಿಸುವವರಿಂದ ಪಡೆದುಕೊಂಡು ತಮ್ಮ ಬಳಕೆಗೆ ಅನುಗುಣವಾದ ಶುಲ್ಕ ಪಾವತಿಸುತ್ತಾರೆ - ಇಷ್ಟು ಯೂನಿಟ್ಟಿಗೆ ಇಷ್ಟು ರೂಪಾಯಿಯ ಲೆಕ್ಕದಂತೆ ಲೈಟ್ ಬಿಲ್ ಕಟ್ಟುತ್ತೇವಲ್ಲ, ಹಾಗೆ! ಜಾಲತಾಣಕ್ಕೆ ಬೇಕಾದ ಸರ್ವರ್ ಸ್ಥಳಾವಕಾಶ, ಇಮೇಲ್ ನಿರ್ವಹಣೆಗೆ ಬೇಕಾದ ವ್ಯವಸ್ಥೆ, ಕಡತಗಳನ್ನು ಶೇಖರಿಸಿಡಲು ಜಾಗ ಮುಂತಾದನ್ನೆಲ್ಲ ನಾವೇ ಕೊಂಡು, ಕಾರ್ಯಗತಗೊಳಿಸಿ, ನಿರ್ವಹಿಸುವ ಬದಲಿಗೆ ಬಾಡಿಗೆಗೆ ಪಡೆದುಕೊಳ್ಳುವುದು ಇದರಿಂದ ಸಾಧ್ಯವಾಗುತ್ತದೆ. ಹಣ ಉಳಿತಾಯವಾಗುವುದರ ಜೊತೆಗೆ ನಿರ್ವಹಣೆಯ ತಲೆನೋವೂ ಕಡಿಮೆಯಾಗುತ್ತದೆ.
64 CMS ಸಿಎಂಎಸ್ ಕಂಟೆಂಟ್ ಮ್ಯಾನೇಜ್‌ಮೆಂಟ್ ಸಿಸ್ಟಂ; ಜಾಲತಾಣದ ಪುಟಗಳನ್ನು ರೂಪಿಸುವುದು, ಅವುಗಳಿಗೆ ಅಗತ್ಯ ಮಾಹಿತಿ ಸೇರಿಸುವುದು ಹಾಗೂ ವಿಶ್ವವ್ಯಾಪಿ ಜಾಲದಲ್ಲಿ ಪ್ರಕಟಿಸುವುದನ್ನು ಸಾಧ್ಯವಾಗಿಸುವ ವ್ಯವಸ್ಥೆ ಜಾಲತಾಣಗಳನ್ನು ನಡೆಸುವವರು ಸಾಕಷ್ಟು ಪ್ರಮಾಣದ, ಹಲವು ರೂಪಗಳಲ್ಲಿರುವ (ಪಠ್ಯ, ಚಿತ್ರ, ವೀಡಿಯೋ, ಧ್ವನಿ ಇತ್ಯಾದಿ) ಮಾಹಿತಿಯನ್ನು ನಿಭಾಯಿಸಬೇಕಾಗುತ್ತದೆ. ಆಗಿಂದಾಗ್ಗೆ ಹೊಸ ಮಾಹಿತಿ ಸೇರಿಸುವುದು, ಇರುವ ಮಾಹಿತಿಯನ್ನು ಬದಲಿಸುವುದು ಇಲ್ಲಿ ಸಾಮಾನ್ಯ. ಈ ಕೆಲಸದಲ್ಲಿ ನೆರವಾಗುವ ವ್ಯವಸ್ಥೆಯೇ ಸಿಎಂಎಸ್. ಇದು 'ಕಂಟೆಂಟ್ ಮ್ಯಾನೇಜ್‌ಮೆಂಟ್ ಸಿಸ್ಟಂ' ಎಂಬ ಹೆಸರಿನ ಹ್ರಸ್ವರೂಪ. ಜಾಲತಾಣದ ಪುಟಗಳನ್ನು ರೂಪಿಸುವುದು, ಅವುಗಳಿಗೆ ಅಗತ್ಯ ಮಾಹಿತಿ ಸೇರಿಸುವುದು ಹಾಗೂ ವಿಶ್ವವ್ಯಾಪಿ ಜಾಲದಲ್ಲಿ ಪ್ರಕಟಿಸುವುದನ್ನು ಈ ವ್ಯವಸ್ಥೆ ಸಾಧ್ಯವಾಗಿಸುತ್ತದೆ. ವರ್ಡ್‌ಪ್ರೆಸ್, ಬ್ಲಾಗರ್, ಜೂಮ್ಲಾ, ದ್ರುಪಾಲ್ - ಇವೆಲ್ಲ ಸಿಎಂಎಸ್‌ಗೆ ಉದಾಹರಣೆಗಳು. ಸಿಎಂಎಸ್ ಅನ್ನು ನಾವೇ ಇನ್‌ಸ್ಟಾಲ್ ಮಾಡಿ ನಿಭಾಯಿಸಬಹುದು, ಇಲ್ಲವೇ ನಿರ್ದಿಷ್ಟ ಜಾಲತಾಣದ ಮೂಲಕ ಬಳಸಿಕೊಳ್ಳಬಹುದು. ಸಿಎಂಎಸ್‌ನ ಹೊಸ ಆವೃತ್ತಿಗಳು ಬಂದಂತೆಲ್ಲ ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುವುದು ಇಂತಹ ಜಾಲ ಆಧರಿತ (ವೆಬ್-ಬೇಸ್ಡ್) ಸೌಲಭ್ಯಗಳ ವೈಶಿಷ್ಟ್ಯ. ಇಲ್ಲಿ ನಾವೇ ನಿಭಾಯಿಸುವ ಸಿಎಂಎಸ್‌ನಂತೆ ಅಗತ್ಯ ತಂತ್ರಾಂಶಗಳನ್ನು ಆಗಿಂದಾಗ್ಗೆ ಅಪ್‌ಡೇಟ್ ಮಾಡಬೇಕಾದ ಅನಿವಾರ್ಯತೆ ಇರುವುದಿಲ್ಲ. ಗೂಗಲ್ ಸಂಸ್ಥೆಯ 'ಬ್ಲಾಗರ್'ನಂತಹ ಕೆಲ ಸಿಎಂಎಸ್‌ಗಳನ್ನು ಯಾವುದೇ ಶುಲ್ಕವಿಲ್ಲದೆ ಬಳಸುವುದು ಸಾಧ್ಯ. ಹಣ ಪಾವತಿಸಿ ಬಳಸಬೇಕಾದ ಸಿಎಂಎಸ್‌ಗಳಲ್ಲಿ, ಸಹಜವಾಗಿಯೇ, ಉಚಿತ ಸಿಎಂಎಸ್‌ಗಳ ಹೋಲಿಕೆಯಲ್ಲಿ ಹೆಚ್ಚಿನ ಸೌಲಭ್ಯಗಳು ದೊರಕುತ್ತವೆ. ವರ್ಡ್‌ಪ್ರೆಸ್‌ನಂತಹ ಸಿಎಂಎಸ್‌ಗಳಲ್ಲಿ ನಮ್ಮ ತಾಣಕ್ಕೆ ಹೆಚ್ಚುವರಿ ಸೌಲಭ್ಯಗಳನ್ನು ಒದಗಿಸುವ 'ಪ್ಲಗ್-ಇನ್'ಗಳನ್ನು ಪ್ರತ್ಯೇಕವಾಗಿ ಕೊಳ್ಳುವ ಆಯ್ಕೆಯೂ ಇರುತ್ತದೆ.
65 Command Prompt ಕಮ್ಯಾಂಡ್ ಪ್ರಾಂಪ್ಟ್ ಕಂಪ್ಯೂಟರಿಗೆ ನೀಡಬೇಕಾದ ಪಠ್ಯರೂಪದ ಆದೇಶವನ್ನು ಟೈಪ್ ಮಾಡಲು ಅನುವುಮಾಡಿಕೊಡುವ ಸೌಲಭ್ಯ ಕಂಪ್ಯೂಟರ್ ಉಪಯೋಗಿಸುವಾಗ ಐಕನ್‌ಗಳ ಮೇಲೆ ಕ್ಲಿಕ್ಕಿಸುವುದು, ಆ ಮೂಲಕ ನಮ್ಮ ಕೆಲಸಗಳನ್ನು ಸಾಧಿಸಿಕೊಳ್ಳುವುದು ತೀರಾ ಸಾಮಾನ್ಯವಾಗಿರುವ ಸಂಗತಿ. ಇದನ್ನು ಸಾಧ್ಯವಾಗಿಸುವ ವ್ಯವಸ್ಥೆಗಳನ್ನು 'ಗ್ರಾಫಿಕಲ್ ಯೂಸರ್ ಇಂಟರ್‌ಫೇಸ್' (ಜಿಯುಐ) ಎಂದು ಕರೆಯುತ್ತಾರೆ. ಇಂತಹ ವ್ಯವಸ್ಥೆಗಳು ರೂಪುಗೊಳ್ಳುವ ಮೊದಲು ಕಂಪ್ಯೂಟರಿಗೆ ನೀಡುವ ಆದೇಶಗಳೆಲ್ಲ ಪಠ್ಯರೂಪದಲ್ಲಿರಬೇಕಾದ್ದು ಅಗತ್ಯವಾಗಿತ್ತು. ಹೊಸ ಕಡತ ರೂಪಿಸುವುದು, ಅದರ ಹೆಸರು ಬದಲಿಸುವುದು, ಒಂದೆಡೆಯಿಂದ ಇನ್ನೊಂದೆಡೆಗೆ ವರ್ಗಾಯಿಸುವುದು ಎಲ್ಲವೂ ನಿರ್ದಿಷ್ಟ ಆದೇಶಗಳನ್ನು ಟೈಪಿಸಿದರೆ ಮಾತ್ರ ಸಾಧ್ಯವಾಗುವಂತಿತ್ತು. ಇಂತಹ ವ್ಯವಸ್ಥೆಗೆ ಸಿಯುಐ, ಅಂದರೆ 'ಕ್ಯಾರೆಕ್ಟರ್ ಯೂಸರ್ ಇಂಟರ್‌ಫೇಸ್' ಎಂಬ ಹೆಸರು. ಇಲ್ಲಿ ಆದೇಶಗಳನ್ನು ಟೈಪ್ ಮಾಡಲು, ಆ ಮೂಲಕ ಕಂಪ್ಯೂಟರಿನೊಡನೆ ಸಂವಹನ ನಡೆಸಲು ಇರುತ್ತಿದ್ದ ಸೌಲಭ್ಯವೇ ಕಮ್ಯಾಂಡ್ ಪ್ರಾಂಪ್ಟ್. ನಮ್ಮ ಮುಂದಿನ ಆದೇಶವನ್ನು (ಕಮ್ಯಾಂಡ್) ನಿರ್ದಿಷ್ಟ ಸಾಲಿನಲ್ಲಿ ಟೈಪ್ ಮಾಡಲು ಬಳಕೆದಾರರನ್ನು ಪ್ರೇರಿಸುವುದು (ಪ್ರಾಂಪ್ಟ್) ಈ ಸೌಲಭ್ಯದ ವೈಶಿಷ್ಟ್ಯ. ಕಮ್ಯಾಂಡ್ ಪ್ರಾಂಪ್ಟ್‌ನ ಬಳಕೆ ಈಚಿನ ವರ್ಷಗಳಲ್ಲಿ ತೀರಾ ಕಡಿಮೆಯಾಗಿಬಿಟ್ಟಿದೆ. ಆದರೂ ಆಧುನಿಕ ಕಾರ್ಯಾಚರಣ ವ್ಯವಸ್ಥೆಗಳಲ್ಲಿ ಅದಕ್ಕೆ ಇನ್ನೂ ಜಾಗವಿದೆ. ವಿಂಡೋಸ್ ಬಳಕೆದಾರರು 'ವಿಂಡೋಸ್+ಆರ್' ಕೀಲಿಗಳನ್ನು ಒತ್ತಿ 'cmd' ಎಂದು ಟೈಪಿಸುವ ಮೂಲಕ ಕಮ್ಯಾಂಡ್ ಪ್ರಾಂಪ್ಟ್‌ಗೆ ತಲುಪಬಹುದು. ನಿರ್ದಿಷ್ಟ ಫೋಲ್ಡರಿನಲ್ಲಿರುವ ಕಡತಗಳ ಪಟ್ಟಿಯನ್ನು ಪ್ರದರ್ಶಿಸುವ 'dir', ಇಂದಿನ ದಿನಾಂಕ ತೋರಿಸುವ 'date' - ಇಲ್ಲಿ ಬಳಸಬಹುದಾದ ಪಠ್ಯರೂಪದ ಆದೇಶಗಳಿಗೆ ಇವೆಲ್ಲ ಉದಾಹರಣೆಗಳು.
66 Comment ಕಮೆಂಟ್ ಕಂಪ್ಯೂಟರ್ ಪ್ರೋಗ್ರಾಮಿನಲ್ಲಿ ಬಳಸಿದ ತರ್ಕವನ್ನು ಅದೇ ಪ್ರೋಗ್ರಾಮಿನೊಳಗೆ ಸಂಕ್ಷಿಪ್ತವಾಗಿ ವಿವರಿಸುವ ಪಠ್ಯ ನಿರ್ದಿಷ್ಟ ಫೇಸ್‌ಬುಕ್ ಪೋಸ್ಟ್‌ಗಳಿಗೆ ಪ್ರತಿಕ್ರಿಯೆಯಾಗಿ ಬರೆಯುವ ಸಂದೇಶ ಹಾಗೂ ಹಂಚಿಕೊಳ್ಳುವ ಮಾಹಿತಿಯನ್ನು 'ಕಮೆಂಟ್' ಎಂದು ಕರೆಯುವುದು ನಮಗೆಲ್ಲ ಗೊತ್ತೇ ಇದೆ. ಇದರ ಜೊತೆಗೆ ಕಂಪ್ಯೂಟರ್ ಪ್ರೋಗ್ರಾಮಿಂಗ್ ಜಗತ್ತಿನಲ್ಲಿ ಇನ್ನೊಂದು ಬಗೆಯ ಕಮೆಂಟ್ ಕೂಡ ಇದೆ. ಕಂಪ್ಯೂಟರ್ ಪ್ರೋಗ್ರಾಮಿನಲ್ಲಿ ನಾವು ಬಳಸಿದ ತರ್ಕವನ್ನು ಅದೇ ಪ್ರೋಗ್ರಾಮಿನೊಳಗೆ ಸಂಕ್ಷಿಪ್ತವಾಗಿ ವಿವರಿಸುವ ಪಠ್ಯವನ್ನು ಕೂಡ 'ಕಮೆಂಟ್' ಎಂದೇ ಕರೆಯುತ್ತಾರೆ. ಪ್ರೋಗ್ರಾಮಿನ ಕಾರ್ಯಾಚರಣೆಗೆ ಅನಗತ್ಯವಾದ, ಆದರೆ ಅದನ್ನು ಅರ್ಥಮಾಡಿಕೊಳ್ಳುವಲ್ಲಿ ಬಹಳ ಮಹತ್ವದ ಮಾಹಿತಿ ಇದು. ಪ್ರೋಗ್ರಾಮಿನ ಉದ್ದೇಶ ಏನು, ಅದರ ನಿರ್ದಿಷ್ಟ ಭಾಗಗಳು ಏನು ಕೆಲಸ ಮಾಡುತ್ತಿವೆ, ಪ್ರೋಗ್ರಾಮಿನ ಈ ಹೆಜ್ಜೆಯನ್ನು ಹೀಗೆಯೇ ಬರೆದಿರುವುದು ಏಕೆ - ಮುಂತಾದ ಅನೇಕ ಪ್ರಶ್ನೆಗಳಿಗೆ ಕಮೆಂಟುಗಳ ರೂಪದ ಉತ್ತರ ಬರೆದಿಟ್ಟರೆ ಮುಂದೆ ಆ ಪ್ರೋಗ್ರಾಮನ್ನು ನಿರ್ವಹಿಸುವುದು, ಬದಲಿಸುವುದು ಸುಲಭವಾಗುತ್ತದೆ. ಕಮೆಂಟುಗಳನ್ನು ಸೇರಿಸುವ ವಿಧಾನ ಬೇರೆಬೇರೆ ಪ್ರೋಗ್ರಾಮಿಂಗ್ ಭಾಷೆಗಳಲ್ಲಿ ಬೇರೆಬೇರೆ ರೀತಿಯಾಗಿರುತ್ತದೆ. ಸಾಮಾನ್ಯವಾಗಿ ಕಮೆಂಟುಗಳನ್ನು ನಿರ್ದಿಷ್ಟ ಲೇಖನಚಿಹ್ನೆಗಳ ನಂತರ (', //), ಅಥವಾ ನಡುವೆ (/*, */ ಇತ್ಯಾದಿ) ಬರೆಯುವುದು ಸಂಪ್ರದಾಯ. ಪ್ರೋಗ್ರಾಮಿನಲ್ಲಿರುವ ಆದೇಶಗಳನ್ನೆಲ್ಲ ಪಾಲಿಸುವ ಕಂಪ್ಯೂಟರ್ ಈ ಚಿಹ್ನೆಗಳನ್ನು ಗುರುತಿಸಿ ಅವುಗಳ ಜೊತೆಯಲ್ಲಿ ಬರೆದಿರುವುದನ್ನೆಲ್ಲ ಸಾರಾಸಗಟಾಗಿ ಉಪೇಕ್ಷಿಸುವುದರಿಂದ ಕಮೆಂಟುಗಳು ಪ್ರೋಗ್ರಾಮ್ ಕಾರ್ಯಾಚರಣೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.
67 Communications Satellite ಕಮ್ಯೂನಿಕೇಶನ್ಸ್ ಸ್ಯಾಟೆಲೈಟ್ ಸಂವಹನಕ್ಕಾಗಿ ಬಳಕೆಯಾಗುವ ಮಾನವನಿರ್ಮಿತ ಉಪಗ್ರಹ ಮಾನವನಿರ್ಮಿತ ಉಪಗ್ರಹಗಳ (ಆರ್ಟಿಫೀಶಿಯಲ್ ಸ್ಯಾಟೆಲೈಟ್) ಬಗ್ಗೆ ನಾವೆಲ್ಲ ಕೇಳಿಯೇ ಇರುತ್ತೇವೆ. ವೈಜ್ಞಾನಿಕ ಅಧ್ಯಯನ, ಹವಾಮಾನ ಮುನ್ಸೂಚನೆ ಮುಂತಾದ ಅನೇಕ ಉದ್ದೇಶಗಳಿಗಾಗಿ ಅವು ಬಳಕೆಯಾಗುತ್ತವೆ ಎನ್ನುವುದೂ ನಮಗೆ ಗೊತ್ತು. ಈ ಪೈಕಿ ಸಂವಹನಕ್ಕಾಗಿ ಬಳಕೆಯಾಗುವ ಉಪಗ್ರಹಗಳನ್ನು ಕಮ್ಯೂನಿಕೇಶನ್ಸ್ ಸ್ಯಾಟೆಲೈಟ್‌ಗಳೆಂದು ಕರೆಯುತ್ತಾರೆ. ಟೀವಿ ಪ್ರಸಾರದಲ್ಲಿ ನೆರವಾಗುವುದು ಈ ಉಪಗ್ರಹಗಳ ಪ್ರಮುಖ ಜವಾಬ್ದಾರಿ. ಮನೆಗಳಲ್ಲಿ ಡಿಟಿಎಚ್ ಮೂಲಕ ಟೀವಿ ಪ್ರಸಾರ ವೀಕ್ಷಿಸುತ್ತೇವಲ್ಲ, ಪ್ರಸಾರ ಕೇಂದ್ರದಿಂದ ನಮ್ಮ ಮನೆ ಮೇಲಿನ ಡಿಶ್ ಆಂಟೆನಾವರೆಗೆ ಟೀವಿ ಸಂಕೇತಗಳನ್ನು ತಲುಪಿಸುವುದು ಸಂವಹನ ಉಪಗ್ರಹಗಳದೇ ಕೆಲಸ. ಕೆಲವು ದಶಕಗಳ ಹಿಂದೆ ಖಂಡಾಂತರ ದೂರವಾಣಿ ಕರೆಗಳನ್ನು ಸಾಧ್ಯವಾಗಿಸಲೂ ಈ ಉಪಗ್ರಹಗಳನ್ನು ಬಳಸಲಾಗುತ್ತಿತ್ತು. ಈಗ, ದೂರಸಂಪರ್ಕದ ಬೇರೆ ಮಾರ್ಗಗಳು ರೂಪುಗೊಂಡ ನಂತರ, ಸಾಮಾನ್ಯ ದೂರವಾಣಿ ಸಂಪರ್ಕವಿಲ್ಲದ ಪ್ರದೇಶಗಳಲ್ಲಿ ಮಾತ್ರವೇ ಸ್ಯಾಟೆಲೈಟ್ ಟೆಲಿಫೋನ್ ಬಳಕೆಯಾಗುತ್ತಿದೆ. ಅಂತಹ ಪ್ರದೇಶಗಳಲ್ಲಿ ಅಂತರಜಾಲ ಸಂಪರ್ಕ ಕಲ್ಪಿಸಲೂ ಸಂವಹನ ಉಪಗ್ರಹಗಳು ನೆರವಾಗಬಲ್ಲವು. ಇದಲ್ಲದೆ ಹ್ಯಾಮ್ ರೇಡಿಯೋ ಹಾಗೂ ಮಿಲಿಟರಿ ಸಂವಹನದಂಥ ಕ್ಷೇತ್ರಗಳಲ್ಲೂ ಸಂವಹನ ಉಪಗ್ರಹಗಳು ಪ್ರಮುಖ ಪಾತ್ರ ವಹಿಸುತ್ತವೆ. ಸಂವಹನ ಉಪಗ್ರಹಗಳ ಪ್ರಯೋಜನವನ್ನು ಮೊತ್ತಮೊದಲ ಬಾರಿಗೆ ಜನಸಾಮಾನ್ಯರಿಗೂ ತಲುಪಿಸಿದ ಹಿರಿಮೆ ಅಮೆರಿಕಾದ 'ಇಂಟೆಲ್‌ಸ್ಯಾಟ್-೧' ಉಪಗ್ರಹದ್ದು.
68 Compile ಕಂಪೈಲ್ ಮೇಲುಸ್ತರದ (ಹೈ ಲೆವೆಲ್) ಪ್ರೋಗ್ರಾಮಿಂಗ್ ಭಾಷೆಯಲ್ಲಿ ಬರೆದ ಕ್ರಮವಿಧಿಯನ್ನು ಕಂಪ್ಯೂಟರಿಗೆ ಅರ್ಥವಾಗುವ ಯಂತ್ರಭಾಷೆಗೆ ಪರಿವರ್ತಿಸುವ ಪ್ರಕ್ರಿಯೆ ಕಂಪ್ಯೂಟರಿಗೆ ಅರ್ಥವಾಗುವುದು ದ್ವಿಮಾನ ಪದ್ಧತಿಯ ಅಂಕಿಗಳಷ್ಟೇ ಎನ್ನುವುದನ್ನು ನಾವು ಕೇಳಿದ್ದೇವೆ. ಆದರೆ ಅದರಲ್ಲಿ ಬಳಸಲು ಬರೆಯಲಾಗುವ ಬಹುತೇಕ ಪ್ರೋಗ್ರಾಮುಗಳು ನಮಗೆ ಅರ್ಥವಾಗುವ (ಸರಿಸುಮಾರು ಇಂಗ್ಲಿಷನ್ನು ಹೋಲುವ) ಪ್ರೋಗ್ರಾಮಿಂಗ್ ಭಾಷೆಯಲ್ಲಿರುವುದು ಸಾಮಾನ್ಯ. ಇಂತಹ ಯಾವುದೇ ಪ್ರೋಗ್ರಾಮಿಂಗ್ ಭಾಷೆಯಲ್ಲಿ ಬರೆದ ಪ್ರೋಗ್ರಾಮು ಕಂಪ್ಯೂಟರಿಗೆ ನೇರವಾಗಿ ಅರ್ಥವಾಗುವುದೇ ಇಲ್ಲ. ಇಂತಹ ಕ್ರಮವಿಧಿಯ ಭಾಷೆ ಯಂತ್ರಭಾಷೆಗಿಂತ ಹೆಚ್ಚಾಗಿ ಬಾಹ್ಯಪ್ರಪಂಚದ ಭಾಷೆಗಳನ್ನೇ ಹೋಲುವುದರಿಂದ ಅದನ್ನು ಮೊದಲಿಗೆ ಕಂಪ್ಯೂಟರಿಗೆ ಅರ್ಥವಾಗುವ ಯಂತ್ರಭಾಷೆಗೆ ಪರಿವರ್ತಿಸಿಕೊಳ್ಳುವುದು ಅಗತ್ಯವಾಗುತ್ತದೆ. ಮೇಲುಸ್ತರದ (ಹೈ ಲೆವೆಲ್) ಪ್ರೋಗ್ರಾಮಿಂಗ್ ಭಾಷೆಯಲ್ಲಿ ಬರೆದ ಕ್ರಮವಿಧಿಯನ್ನು ಅರ್ಥಮಾಡಿಕೊಂಡು ಅದನ್ನು ಕಂಪ್ಯೂಟರಿಗೆ ಅರ್ಥವಾಗುವ ಯಂತ್ರಭಾಷೆಗೆ ಪರಿವರ್ತಿಸುವ ಈ ಪ್ರಕ್ರಿಯೆಯನ್ನು 'ಕಂಪೈಲ್ ಮಾಡುವುದು' ಎಂದು ಗುರುತಿಸಲಾಗುತ್ತದೆ. ಈ ಕೆಲಸ ಮಾಡುವ ವಿಶೇಷ ತಂತ್ರಾಂಶವೇ 'ಕಂಪೈಲರ್' (ಕೆಲ ಪ್ರೋಗ್ರಾಮಿಂಗ್ ಭಾಷೆಗಳು ಈ ಪ್ರಕ್ರಿಯೆಯಲ್ಲಿ 'ಇಂಟರ್‌ಪ್ರೆಟರ್' ಎನ್ನುವ ತಂತ್ರಾಂಶವನ್ನು ಬಳಸುವುದೂ ಉಂಟು). ಕಂಪೈಲರಿನಿಂದ ದೊರಕುವ ಫಲಿತಾಂಶವನ್ನು ಕಂಪ್ಯೂಟರಿನ ಪ್ರಾಸೆಸರ್ ನೇರವಾಗಿ ಅರ್ಥಮಾಡಿಕೊಳ್ಳಬಲ್ಲದು - ಹಾಗಾಗಿ ನಮ್ಮ ಪ್ರೋಗ್ರಾಮು ನಿಜಕ್ಕೂ ಕೆಲಸಮಾಡುವುದು ಕಂಪೈಲರ್ ಮೂಲಕ ಹಾದು ಬಂದಾಗಲಷ್ಟೇ! ಅಂದಹಾಗೆ ನಾವು ಹೇಳಬೇಕಾದ್ದನ್ನು ಕಂಪ್ಯೂಟರಿಗೆ ಅರ್ಥಮಾಡಿಸಲು ಇಂತಹ ತಂತ್ರಾಂಶಗಳ ನೆರವು ದೊರಕುವುದರಿಂದ ಪ್ರೋಗ್ರಾಮಿಂಗ್ ಭಾಷೆಗಳು ಇಂಗ್ಲಿಷ್ ಲಿಪಿಯನ್ನೇ ಬಳಸಬೇಕೆಂಬ ನಿರ್ಬಂಧವೇನೂ ಇಲ್ಲ. ಸೂಕ್ತ ವ್ಯವಸ್ಥೆಗಳನ್ನು ಮಾಡಿಕೊಂಡರೆ ಇಂಗ್ಲಿಷಿನಲ್ಲಿ ಪ್ರೋಗ್ರಾಮಿಂಗ್ ಮಾಡಿದಷ್ಟೇ ಸುಲಭವಾಗಿ ಕನ್ನಡದಲ್ಲೂ ಕ್ರಮವಿಧಿಗಳನ್ನು ರಚಿಸಬಹುದು.
69 Cookie ಕುಕಿ ಜಾಲತಾಣಗಳು ತಮ್ಮ ಬಳಕೆದಾರರ ಕಂಪ್ಯೂಟರಿನಲ್ಲಿ ಉಳಿಸುವ ಕಡತ 'ಈ ಜಾಲತಾಣ ಕುಕಿಗಳನ್ನು ಬಳಸುತ್ತದೆ' ಎನ್ನುವ ಸಂದೇಶವನ್ನು ನೀವು ಹಲವು ಜಾಲತಾಣಗಳಲ್ಲಿ ನೋಡಿರಬಹುದು. ಜಾಲತಾಣಗಳು ತಮ್ಮ ಬಳಕೆದಾರರ ಕಂಪ್ಯೂಟರಿನಲ್ಲಿ ಉಳಿಸುವ ಪುಟ್ಟದೊಂದು ಕಡತಕ್ಕೆ ಕುಕಿ ಎಂದು ಹೆಸರು. ಜಾಲತಾಣ ಬಳಸುವ ಗ್ರಾಹಕರ ಅಯ್ಕೆಗಳನ್ನು ಉಳಿಸಿಟ್ಟುಕೊಳ್ಳಲು ಇವು ಬಳಕೆಯಾಗುತ್ತವೆ. ನಾಲ್ಕಾರು ಭಾಷೆಗಳಲ್ಲಿ ಲಭ್ಯವಿರುವ ಯಾವುದೋ ಜಾಲತಾಣದಲ್ಲಿ ನೀವು ಕನ್ನಡ ಭಾಷೆ ಆಯ್ದುಕೊಂಡಿದ್ದಿರಿ ಎನ್ನುವುದಾದರೆ ಅದು ನಿಮ್ಮದೇ ಕಂಪ್ಯೂಟರಿನಲ್ಲಿ ಒಂದು ಕಡೆ ಕುಕಿಯ ರೂಪದಲ್ಲಿ ಉಳಿದುಕೊಂಡಿರುತ್ತದೆ. ಅದೇ ಜಾಲತಾಣಕ್ಕೆ ನೀವು ಇನ್ನೊಮ್ಮೆ ಭೇಟಿಕೊಟ್ಟಾಗ ಆ ಕುಕಿಯ ಆಧಾರದ ಮೇಲೆ ಜಾಲತಾಣ ನೇರವಾಗಿ ಕನ್ನಡದಲ್ಲಿಯೇ ತೆರೆದುಕೊಳ್ಳುತ್ತದೆ. ವಿಶ್ವವ್ಯಾಪಿ ಜಾಲದಲ್ಲಿ ಕಾಣಿಸಿಕೊಳ್ಳುವ ಅನೇಕ ಜಾಹೀರಾತುಗಳಿಗೂ ಈ ಕುಕಿಗಳೇ ಆಧಾರ. ನೀವು ನವದೆಹಲಿ ಪ್ರವಾಸದ ಬಗೆಗಿನ ತಾಣಗಳನ್ನು ವೀಕ್ಷಿಸಿದ ಕೆಲವೇ ಸಮಯದಲ್ಲಿ ವಿಮಾನಯಾನ ಸಂಸ್ಥೆಗಳ, ಹೋಟಲ್ಲುಗಳ ಜಾಹೀರಾತುಗಳೇ ಕಾಣಿಸಲು ಶುರುವಾಗುತ್ತವೆ ಎಂದರೆ ಅಲ್ಲೆಲ್ಲ ಬಹುತೇಕ ಕುಕಿಗಳದೇ ಕೈವಾಡವಿರುತ್ತದೆ. ಆನ್‌ಲೈನ್ ಶಾಪಿಂಗ್ ತಾಣಗಳೂ ತಮ್ಮ ಬಳಕೆದಾರರ ಆಸಕ್ತಿಯನ್ನು ತಿಳಿದುಕೊಳ್ಳಲು ಕುಕಿಗಳನ್ನು ವ್ಯಾಪಕವಾಗಿ ಬಳಸುತ್ತವೆ. ಆದರೆ ವೈರಸ್ಸುಗಳಿಂದ ತೊಂದರೆ ಉಂಟಾಗುವಂತೆ ಕುಕಿಗಳಿಂದ ನಿಮ್ಮ ಕಂಪ್ಯೂಟರಿನ ಸುರಕ್ಷತೆಗೆ ತೊಂದರೆಯಾಗುವ ಸಾಧ್ಯತೆ ಕಡಿಮೆ. ಆದರೆ ನಾವು ಜಾಲಲೋಕದಲ್ಲಿ ಏನೆಲ್ಲ ಮಾಡುತ್ತಿದ್ದೇವೆ ಎಂದು ಈ ಪುಟ್ಟ ಕಡತಗಳು ನಿಗಾವಹಿಸುವುದನ್ನು ಕೆಲವರು ತಮ್ಮ ಖಾಸಗಿತನಕ್ಕೆ ಧಕ್ಕೆಯೆಂದು ಭಾವಿಸಬಹುದು. ಅಂತಹ ಸಂದರ್ಭಗಳಲ್ಲಿ ನಮ್ಮ ಕಂಪ್ಯೂಟರಿನಲ್ಲಿ ಕುಕಿಗಳ ಬಳಕೆ ಹೇಗಿರಬೇಕು ಎನ್ನುವುದನ್ನು ನಾವೇ ನಿರ್ಧರಿಸುವುದು ಸಾಧ್ಯ. ನಿಮ್ಮ ಬ್ರೌಸರ್ ತಂತ್ರಾಂಶದಲ್ಲಿ ಇದಕ್ಕಾಗಿ ಲಭ್ಯವಿರುವ ಆಯ್ಕೆಗಳನ್ನು ತಿಳಿದುಕೊಳ್ಳಲು ಗೂಗಲ್ ಮಾಡಿ.
70 Copy - Paste ಕಾಪಿ-ಪೇಸ್ಟ್ ಒಂದುಕಡೆ ಇರುವ ಮಾಹಿತಿಯನ್ನು ನಕಲುಮಾಡಿಕೊಂಡು ಮತ್ತೊಂದೆಡೆ ಅಂಟಿಸಿ ಬಳಸುವ ಕ್ರಿಯೆ ಕಂಪ್ಯೂಟರ್ ಲೋಕದಲ್ಲಿ ಒಂದು ಕಡೆ ಇರುವ ಮಾಹಿತಿಯನ್ನು ನಕಲುಮಾಡಿಕೊಂಡು ಮತ್ತೊಂದೆಡೆ ಅಂಟಿಸಿ ಬಳಸುವ ಕ್ರಿಯೆಗೆ 'ಕಾಪಿ-ಪೇಸ್ಟ್' ಎಂದು ಹೆಸರು. 'ಕಂಟ್ರೋಲ್' ಮತ್ತು 'ಸಿ' ಕೀಲಿಗಳನ್ನು ಒಟ್ಟಿಗೆ ಒತ್ತಿದರೆ ಕಾಪಿ, ಹಾಗೆಯೇ 'ಕಂಟ್ರೋಲ್' ಮತ್ತು 'ವಿ' ಕೀಲಿಗಳನ್ನು ಒಟ್ಟಿಗೆ ಒತ್ತಿದರೆ ಪೇಸ್ಟ್ - ಇವು ಕಂಪ್ಯೂಟರ್ ಬಳಕೆದಾರರಿಗೆಲ್ಲ ಚಿರಪರಿಚಿತ. ಕಾಪಿ-ಪೇಸ್ಟ್‌ನ ಈ ಪರಿಕಲ್ಪನೆ ಪದಸಂಸ್ಕಾರಕ (ವರ್ಡ್‌ಪ್ರಾಸೆಸರ್) ತಂತ್ರಾಂಶಗಳ ಪರಿಚಯದ ಜೊತೆಗೇ ಕಂಪ್ಯೂಟರ್ ಲೋಕವನ್ನು ಪ್ರವೇಶಿಸಿತು. ಆದರೆ ಕಾಪಿ ಮಾಡಲು ಕಂಟ್ರೋಲ್ ಸಿ, ಹಾಗೂ ಪೇಸ್ಟ್ ಮಾಡಲು ಕಂಟ್ರೋಲ್ ವಿ ಆಯ್ಕೆಗಳ (ಶಾರ್ಟ್‌ಕಟ್) ಬಳಕೆ ಪ್ರಾರಂಭವಾದದ್ದು ೧೯೭೦ರ ದಶಕದಲ್ಲಿ, ಜೆರಾಕ್ಸ್ ಸಂಸ್ಥೆಯ ಪಾಲೋ ಆಲ್ಟೋ ರೀಸರ್ಚ್ ಸೆಂಟರ್‌ನಲ್ಲಿ. ಕಟ್ ಮಾಡಲು ಕಂಟ್ರೋಲ್ ಎಕ್ಸ್, ಹಿಂದಿನ ಕ್ರಿಯೆಯನ್ನು ರದ್ದುಪಡಿಸಲು ಕಂಟ್ರೋಲ್ ಜೆಡ್, ಮುದ್ರಿಸಲು ಕಂಟ್ರೋಲ್ ಪಿ ಮುಂತಾದ ಆಯ್ಕೆಗಳ ಬಳಕೆ ಪ್ರಾರಂಭವಾದದ್ದೂ ಇದೇ ಸಮಯದಲ್ಲಿ. ಮುಂದಿನ ದಿನಗಳಲ್ಲಿ ಕಂಟ್ರೋಲ್ ಸಿ ಹಾಗೂ ಕಂಟ್ರೋಲ್ ವಿ ಎಷ್ಟು ಪ್ರಮಾಣದ ಜನಪ್ರಿಯತೆ ಗಳಿಸಿಕೊಂಡವೆಂದರೆ ಅವು ಈಗ ಕಾಪಿ-ಪೇಸ್ಟ್‌ಗೆ ಪರ್ಯಾಯ ಹೆಸರಾಗಿ ಬೆಳೆದಿವೆ. ಒಬ್ಬರ ಬರವಣಿಗೆಯನ್ನು ನಕಲಿಸಿ ತಮ್ಮ ಕೆಲಸದಲ್ಲಿ ಬಳಸಿಕೊಳ್ಳುವ ಲೇಖಕರನ್ನೂ ತಂತ್ರಾಂಶ ತಯಾರಿಯಲ್ಲಿ ಪ್ರೋಗ್ರಾಮುಗಳನ್ನು ಕದಿಯುವ ತಂತ್ರಜ್ಞರನ್ನೂ ಲೇವಡಿಮಾಡಲು ಈ ಹೆಸರು ಬಳಕೆಯಾಗುತ್ತದೆ.