A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 318

Backtrace:

File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 319

Backtrace:

File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 320

Backtrace:

File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler

File: /Appdata/padakanaja.karnataka.gov.in/index.php
Line: 318
Function: require_once

Padakanaja - Dictionary View
ಅನಿಸಿಕೆ

ಪದಕೋಶ: ಕಂಪ್ಯೂಟರ್ ತಂತ್ರಜ್ಞಾನ ಪದವಿವರಣ ಕೋಶ | ಇಂಗ್ಲೀಷ್-ಕನ್ನಡ |ಪ್ರಕಾಶಕರು - ಕನ್ನಡ ಅಭಿವೃದ್ಧಿ ಪ್ರಾಧಿಕಾರ (2017)

Show entries
ಕ್ರಮ ಸ೦ಖ್ಯೆ ಇಂಗ್ಲೀಷ್ ಪದ
(English Word)
ಕನ್ನಡ ಪದ
(Kannada Word)
ಕನ್ನಡ ಅರ್ಥ
(Kannada Meaning)
ವಿಷಯ ವರ್ಗೀಕರಣ
(Word Subject)
ವ್ಯಾಕರಣ ವಿಶೇಷ
(Word Grammer)
ಕನ್ನಡ ಉಚ್ಚಾರಣೆ
(Kannada Pronunciation)
ಪರ್ಯಾಯ ಪದ
(Word Synonyms)
ಇಂಗ್ಲೀಷ್ ಅರ್ಥ
(English Meaning)
ಸಂಕ್ಷಿಪ್ತ ವಿವರಣೆ
(Short Description)
ದೀರ್ಘ ವಿವರಣೆ
(Long Description)
ಆಡಳಿತಾತ್ಮಕ ಪದ
(Administrative Word)
41 Boot Sector ಬೂಟ್ ಸೆಕ್ಟರ್ ಬೂಟ್ ಮಾಡಲು ಅಗತ್ಯವಾದ ಮಾಹಿತಿ ಹಾಗೂ ತಂತ್ರಾಂಶಗಳನ್ನು ಉಳಿಸಿಟ್ಟಿರುವ ಮೆಮೊರಿಯ ಭಾಗ ಕಂಪ್ಯೂಟರ್, ಸ್ಮಾರ್ಟ್‌ಫೋನ್ ಮುಂತಾದ ಸಾಧನಗಳು ಕೆಲಸ ಶುರುಮಾಡುವಾಗ ಮೊದಲಿಗೆ ಕಾರ್ಯಾಚರಣ ವ್ಯವಸ್ಥೆಯನ್ನು ಪ್ರಾರಂಭಿಸುವ ಪ್ರಕ್ರಿಯೆಯನ್ನು ಬೂಟ್ ಮಾಡುವುದು ಎಂದು ಕರೆಯುತ್ತಾರೆ. ಬೂಟ್ ಮಾಡಲು ಏನು ಮಾಡಬೇಕು ಎನ್ನುವುದನ್ನು ಕಂಪ್ಯೂಟರಿನ ರೀಡ್ ಓನ್ಲಿ ಮೆಮೊರಿ ನಿರ್ದೇಶಿಸುತ್ತದೆ. ಅದು ಹೇಳಿದ ಕೆಲಸಗಳನ್ನೆಲ್ಲ ಪೂರೈಸಲು ತಂತ್ರಾಂಶಗಳು ಬೇಕಲ್ಲ, ಅವನ್ನು ಹಾರ್ಡ್ ಡಿಸ್ಕಿನ (ಅಥವಾ ಬೇರೊಂದು ಶೇಖರಣಾ ಸಾಧನದ) ನಿರ್ದಿಷ್ಟ ಭಾಗವೊಂದರಲ್ಲಿ ಉಳಿಸಿಡಲಾಗಿರುತ್ತದೆ. ಈ ಭಾಗವನ್ನು ಬೂಟ್ ಸೆಕ್ಟರ್ ಎಂದು ಕರೆಯುತ್ತಾರೆ. ಇಲ್ಲಿರುವ ತಂತ್ರಾಂಶಗಳನ್ನು ಬಳಸಿ ಬೂಟ್ ಮಾಡುವ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ. ಹಾರ್ಡ್ ಡಿಸ್ಕಿನಲ್ಲಿ ಎಷ್ಟು ವಿಭಜನೆಗಳಿವೆ (ಪಾರ್ಟಿಶನ್), ಆ ಪೈಕಿ ಯಾವುದರಲ್ಲಿ ಕಾರ್ಯಾಚರಣ ವ್ಯವಸ್ಥೆ ಇದೆ ಎನ್ನುವಂತಹ ವಿವರಗಳೂ ಬೂಟ್ ಸೆಕ್ಟರಿನಲ್ಲೇ ಇರುತ್ತವೆ. ಇಷ್ಟೆಲ್ಲ ಪ್ರಮುಖ ಪಾತ್ರ ವಹಿಸುವುದರಿಂದಲೇ ಬೂಟ್ ಸೆಕ್ಟರಿಗೆ ಎಲ್ಲಿಲ್ಲದ ಮಹತ್ವ. ಭೌತಿಕ ಹಾನಿ ಅಥವಾ ವೈರಸ್ ಕಾಟದಿಂದ ಇಲ್ಲಿರುವ ಮಾಹಿತಿಗೆ ಯಾವುದೇ ತೊಂದರೆಯಾದರೆ ಕಂಪ್ಯೂಟರ್ ತನ್ನ ಕೆಲಸವನ್ನೇ ಪ್ರಾರಂಭಿಸದ ಸ್ಥಿತಿ ಸೃಷ್ಟಿಯಾಗಬಹುದು. ವೈರಸ್ ತೊಂದರೆಯಾದರೆ ಅದನ್ನು ಸರಿಪಡಿಸಿಕೊಳ್ಳಲು ಆಂಟಿವೈರಸ್ ನೆರವು ಪಡೆಯುವುದು ಸಾಧ್ಯ; ಇನ್ನಿತರ ಸಮಸ್ಯೆಗಳನ್ನು ಪತ್ತೆಹಚ್ಚಿ ಸರಿಪಡಿಸಲು ಅಗತ್ಯವಾದ ಹಲವು ತಂತ್ರಾಂಶ ಸಾಧನಗಳು ಕಾರ್ಯಾಚರಣ ವ್ಯವಸ್ಥೆಯಲ್ಲೇ ಇರುತ್ತವೆ (ಈ ಕುರಿತ ಹೆಚ್ಚಿನ ಮಾಹಿತಿಗಾಗಿ ಗೂಗಲ್ ಮೊರೆಹೋಗಬಹುದು).
42 Bot ಬಾಟ್ ಮತ್ತೆಮತ್ತೆ ಮಾಡುವ ಯಾವುದೇ ನಿರ್ದಿಷ್ಟ ಕೆಲಸವನ್ನು ಅತ್ಯಂತ ನಿಖರವಾಗಿ, ಕ್ಷಿಪ್ರವಾಗಿ, ಸ್ವಯಂಚಾಲಿತವಾಗಿ ಮಾಡುವ ತಂತ್ರಾಂಶ ಹಲವು ಕೆಲಸಗಳನ್ನು ಸ್ವಯಂಚಾಲಿತವಾಗಿ ಮಾಡಬಲ್ಲ ಯಂತ್ರಗಳನ್ನು ರೋಬಾಟ್‌ಗಳೆಂದು ಕರೆಯುವುದು ನಮಗೆ ಗೊತ್ತಲ್ಲ, ಅಂತರಜಾಲದ ಲೋಕದಲ್ಲೂ ರೋಬಾಟ್‌ಗಳಿವೆ. ಕಣ್ಣಿಗೆ ಕಾಣುವ ರೋಬಾಟ್‌ಗಳು ಹಲವು ಯಂತ್ರಾಂಶಗಳ ಜೋಡಣೆಯಿಂದ ರೂಪುಗೊಂಡಿದ್ದರೆ ಜಾಲಜಗತ್ತಿನ ರೋಬಾಟ್‌ಗಳು ಬರಿಯ ತಂತ್ರಾಂಶಗಳಷ್ಟೇ! ಇವುಗಳನ್ನು 'ಬಾಟ್'ಗಳೆಂದು ಗುರುತಿಸುವುದು ಸಾಮಾನ್ಯ ಅಭ್ಯಾಸ. ಬಾಟ್ ಎನ್ನುವುದು 'ರೋಬಾಟ್' ಎಂಬ ಹೆಸರಿನ ಹ್ರಸ್ವರೂಪ. ಮತ್ತೆಮತ್ತೆ ಮಾಡುವ ಯಾವುದೇ ನಿರ್ದಿಷ್ಟ ಕೆಲಸವನ್ನು ಅತ್ಯಂತ ನಿಖರವಾಗಿ, ಕ್ಷಿಪ್ರವಾಗಿ, ಸ್ವಯಂಚಾಲಿತವಾಗಿ ಮಾಡಿ ಮುಗಿಸುವುದು ಬಾಟ್‌ಗಳ ವೈಶಿಷ್ಟ್ಯ. ಬೇರೆಬೇರೆ ತಾಣಗಳಿಂದ ಮಾಹಿತಿ ಸಂಗ್ರಹಿಸುವುದು, ಚಾಟ್ ಮೂಲಕ ಗ್ರಾಹಕರು ಕೇಳುವ ಪ್ರಶ್ನೆಗಳಿಗೆ ಉತ್ತರಿಸುವುದು, ಟ್ಯಾಕ್ಸಿ ಬುಕಿಂಗ್ ಮಾಡುವುದು, ಉಡುಗೊರೆಗಳನ್ನು ಆರ್ಡರ್ ಮಾಡುವುದು, ಸ್ವಯಂಚಾಲಿತವಾಗಿ ಹಲವು ಬಗೆಯ ಮಾಹಿತಿಯನ್ನು ಸಂಸ್ಕರಿಸುವುದು - ಹೀಗೆ ಹಲವು ಉದ್ದೇಶಗಳಿಗಾಗಿ ಬಾಟ್‌ಗಳು ಬಳಕೆಯಾಗುತ್ತವೆ. ಒಳ್ಳೆಯ ಕೆಲಸಗಳಲ್ಲಿ ಪ್ರಯೋಜನಕ್ಕೆ ಬಂದಂತೆ ಬಾಟ್‌ಗಳು ಕೆಟ್ಟ ಉದ್ದೇಶಗಳಿಗೂ ಬಳಕೆಯಾಗುತ್ತವೆ. ಸ್ಪಾಮ್ ಸಂದೇಶಗಳನ್ನು ಕಳುಹಿಸಲು ಅಂತರಜಾಲ ತಾಣಗಳಿಂದ ಇಮೇಲ್ ವಿಳಾಸಗಳನ್ನು ಸಂಗ್ರಹಿಸುವುದು, ಬಳಕೆದಾರರ ಕಂಪ್ಯೂಟರಿಗೆ ಅನಾವಶ್ಯಕ ತಂತ್ರಾಂಶಗಳನ್ನು ಡೌನ್‌ಲೋಡ್ ಮಾಡುವುದು, ಬ್ಲಾಗ್ ಪುಟಗಳಿಗೆ ದುರುದ್ದೇಶಪೂರಿತ ಲಿಂಕುಗಳಿರುವ ಕಮೆಂಟ್ ಸೇರಿಸುವುದು, ಇತರ ಕುತಂತ್ರಾಂಶಗಳನ್ನು ಹರಡುವುದು - ಮುಂತಾದ ಕೆಲಸಗಳಿಗೆ ಕುತಂತ್ರಿ ಬಾಟ್‌ಗಳು ಬಳಕೆಯಾಗುತ್ತವೆ. ಸಮಾಜಜಾಲಗಳಲ್ಲಿ, ಚಾಟಿಂಗ್ ಸೇವೆಗಳಲ್ಲೂ ಬಾಟ್‌ಗಳ ಹಾವಳಿ ಇದೆ.
43 Botnet ಬಾಟ್‌ನೆಟ್ ದುಷ್ಕರ್ಮಿಗಳ ನಿಯಂತ್ರಣಕ್ಕೆ ಸಿಕ್ಕಿರುವ ಕಂಪ್ಯೂಟರುಗಳ ಜಾಲ; ಈ ಜಾಲದಲ್ಲಿರುವ ಕಂಪ್ಯೂಟರುಗಳನ್ನು ಮಾಲೀಕರ ಅರಿವಿಗೆ ಬಾರದಂತೆಯೇ ಅಪರಾಧ ಚಟುವಟಿಕೆಗಳಲ್ಲಿ ಬಳಸಿಕೊಳ್ಳಲಾಗುತ್ತದೆ. ನಿರ್ದಿಷ್ಟ ಕೆಲಸಗಳನ್ನು ಸ್ವಯಂಚಾಲಿತವಾಗಿ, ಅತ್ಯಂತ ಕ್ಷಿಪ್ರವಾಗಿ ಮಾಡಿಮುಗಿಸುವ ಬಾಟ್‌ಗಳು ಒಳ್ಳೆಯ ಉದ್ದೇಶಗಳ ಜೊತೆಗೆ ಕೆಟ್ಟ ಉದ್ದೇಶಗಳಿಗಾಗಿಯೂ ವ್ಯಾಪಕವಾಗಿ ಬಳಕೆಯಾಗುತ್ತವೆ. ಯಾರದೋ ಕಂಪ್ಯೂಟರಿನೊಳಗೆ ಸೇರಿಕೊಂಡು ಆ ಕಂಪ್ಯೂಟರಿನ ನಿಯಂತ್ರಣವನ್ನು ಸೈಬರ್ ಅಪರಾಧಿಗಳಿಗೆ ದೊರಕಿಸಿಕೊಡುವುದು ಇಂತಹ ದುರುದ್ದೇಶಗಳಲ್ಲೊಂದು. ಈ ರೀತಿಯಲ್ಲಿ ದುಷ್ಕರ್ಮಿಗಳ ನಿಯಂತ್ರಣಕ್ಕೆ ಸಿಲುಕಿಕೊಳ್ಳುವ ಕಂಪ್ಯೂಟರುಗಳು ಅವರ ನಿರ್ದೇಶನಗಳನ್ನು ಚಾಚೂತಪ್ಪದೆ ಪಾಲಿಸಲು ಪ್ರಾರಂಭಿಸುತ್ತವೆ. ಇಂತಹ ಕಂಪ್ಯೂಟರುಗಳನ್ನು 'ಜಾಂಬಿ'ಗಳೆಂದು ಗುರುತಿಸಲಾಗುತ್ತದೆ. ವಿಪರ್ಯಾಸವೆಂದರೆ ತನ್ನ ಕಂಪ್ಯೂಟರು ಹೀಗೆ ದುಷ್ಕರ್ಮಿಗಳ ಹಿಡಿತಕ್ಕೆ ಸಿಲುಕಿರುವ ಸಂಗತಿ ಬಹಳಷ್ಟು ಸಾರಿ ಕಂಪ್ಯೂಟರಿನ ಮಾಲೀಕರಿಗೆ ತಿಳಿದಿರುವುದೇ ಇಲ್ಲ. ಹೀಗೆ ತಮ್ಮ ಹಿಡಿತಕ್ಕೆ ಸಿಕ್ಕಿರುವ ಕಂಪ್ಯೂಟರುಗಳದೇ ಒಂದು ಜಾಲ ರೂಪಿಸಿಕೊಳ್ಳುವ ದುಷ್ಕರ್ಮಿಗಳು ಆ ಜಾಲವನ್ನು ಇನ್ನೂ ದೊಡ್ಡ ಪ್ರಮಾಣದ ಅಪರಾಧಗಳಿಗೆ (ಸ್ಪಾಮ್ - ಫಿಶಿಂಗ್ ಸಂದೇಶಗಳನ್ನು ಕಳುಹಿಸುವುದು, ಡಿನಯಲ್ ಆಫ್ ಸರ್ವಿಸ್ ದಾಳಿ ನಡೆಸುವುದು ಇತ್ಯಾದಿ) ಬಳಸಿಕೊಳ್ಳುತ್ತಾರೆ. ಇಂತಹ ಜಾಲಗಳನ್ನು 'ಬಾಟ್‌ನೆಟ್'ಗಳೆಂದು ಕರೆಯುತ್ತಾರೆ. ಹಣಕಾಸಿನ ಲಾಭಕ್ಕಾಗಿ ತಾವು ರೂಪಿಸಿದ ಬಾಟ್‌ನೆಟ್‌ಗಳನ್ನು ಇತರರೊಡನೆ ಹಂಚಿಕೊಳ್ಳುವ ದುಷ್ಕರ್ಮಿಗಳೂ ಇದ್ದಾರಂತೆ! ಇಂತಹ ಸೈಬರ್ ಅಪರಾಧಗಳಲ್ಲಿ ನಮ್ಮ ಮನೆಯ ಕಂಪ್ಯೂಟರ್ ಕೈವಾಡವೂ ಇಲ್ಲದಂತೆ ನೋಡಿಕೊಳ್ಳಬೇಕಾದರೆ ನಮ್ಮ ಆಂಟಿವೈರಸ್ ತಂತ್ರಾಂಶ ಸದಾಕಾಲ ಚಾಲ್ತಿಯಲ್ಲಿರುವಂತೆ ನೋಡಿಕೊಳ್ಳುವುದು ಅತ್ಯಗತ್ಯ. ಅಪರಿಚಿತರಿಂದ ಬರುವ ಅಥವಾ ಅನುಮಾನಾಸ್ಪದವಾಗಿ ಕಾಣುವ ಯಾವ ಕಡತವನ್ನೂ ಡೌನ್‌ಲೋಡ್ ಮಾಡದಿರುವುದು ಈ ನಿಟ್ಟಿನಲ್ಲಿ ಇನ್ನೊಂದು ಹೆಜ್ಜೆ.
44 Bounce ಬೌನ್ಸ್ ನಾವು ಕಳುಹಿಸಿದ ಇಮೇಲ್ ವಿಳಾಸದಾರರಿಗೆ ತಲುಪದೆ ಮರಳಿಬರುವ ಪ್ರಕ್ರಿಯೆ ಪತ್ರಗಳನ್ನು ಅಂಚೆಯಲ್ಲಿ ಕಳುಹಿಸಿದಾಗ ವಿಳಾಸ ಸರಿಯಿಲ್ಲದಿದ್ದರೆ ಅದು ಕೆಲದಿನಗಳ ನಂತರ ನಮಗೇ ಮರಳುತ್ತಿತ್ತು. ಈಗಿನ ಇಮೇಲ್ ಲೋಕದಲ್ಲೂ ಹಾಗೆಯೇ. ಕಳುಹಿಸಿದ ಸಂದೇಶ ವಿಳಾಸದಾರರನ್ನು ತಲುಪಲಿಲ್ಲ ಎಂದರೆ ಅದೂ ನಮಗೆ ವಾಪಸ್ ಬರುತ್ತದೆ. 'ಇಮೇಲ್ ಬೌನ್ಸ್ ಆಯಿತು' ಎಂದು ಹೇಳುವುದು ಇಂತಹ ಸಂದರ್ಭದಲ್ಲೇ. ನಾವು ಕಳುಹಿಸಿದ ಇಮೇಲ್ ಬೌನ್ಸ್ ಆಗಲು ಹಲವು ಕಾರಣಗಳಿರಬಹುದು. ಇಮೇಲ್ ವಿಳಾಸವನ್ನು ತಪ್ಪಾಗಿ ಟೈಪ್ ಮಾಡಿರುವುದು ಇಂತಹ ಕಾರಣಗಳ ಪೈಕಿ ಬಹಳ ಸಾಮಾನ್ಯವಾದದ್ದು. ವಿಳಾಸದಾರರ ಅಂಚೆಪೆಟ್ಟಿಗೆ (ಮೇಲ್‌ಬಾಕ್ಸ್) ಭರ್ತಿಯಾಗಿ ಹೊಸ ಸಂದೇಶಗಳಿಗೆ ಜಾಗವಿಲ್ಲದಿದ್ದರೂ ನಾವು ಕಳುಹಿಸಿದ ಇಮೇಲ್ ಬೌನ್ಸ್ ಆಗಬಹುದು. ವಿಳಾಸದಾರರ ಇಮೇಲ್ ವ್ಯವಸ್ಥೆಯಲ್ಲಿರುವ ಅಟ್ಯಾಚ್‌ಮೆಂಟ್ ಗಾತ್ರದ ಮಿತಿಗಿಂತ ದೊಡ್ಡ ಕಡತಗಳನ್ನು ಕಳುಹಿಸಿದಾಗ, ಅಲ್ಲಿನ ಆಂಟಿವೈರಸ್ ವ್ಯವಸ್ಥೆಗೆ ನಾವು ಕಳುಹಿಸಿದ ಅಟ್ಯಾಚ್‌ಮೆಂಟ್ ಸಂಶಯಾಸ್ಪದವೆಂದು ತೋರಿದಾಗ ಕೂಡ ಇಮೇಲ್ ಬೌನ್ಸ್ ಆಗುವ ಸಾಧ್ಯತೆ ಇರುತ್ತದೆ. ಕಳುಹಿಸಿದವರ ಅಥವಾ ವಿಳಾಸದಾರರ ಇಮೇಲ್ ವ್ಯವಸ್ಥೆಯಲ್ಲಿನ ತೊಂದರೆಗಳಿಂದಲೂ ಇಮೇಲ್ ಬೌನ್ಸ್ ಆಗುವುದು ಸಾಧ್ಯ. ಇಮೇಲ್ ವಿಳಾಸದಾರರನ್ನು ತಲುಪಿಲ್ಲ ಎನ್ನುವ ವಿಷಯ ಸಾಮಾನ್ಯವಾಗಿ ಇನ್ನೊಂದು ಇಮೇಲ್ ಮೂಲಕ ನಮ್ಮನ್ನು ತಲುಪುತ್ತದೆ. ಕೆಲವು ವ್ಯಕ್ತಿಗಳು ದುರುದ್ದೇಶಪೂರ್ವಕ ನಾವು ಕಳುಹಿಸಿಯೇ ಇಲ್ಲದ ಇಮೇಲ್ ಬೌನ್ಸ್ ಆಗಿದೆ ಎನ್ನುವಂತಹ ಸಂದೇಶಗಳನ್ನು ಕಳುಹಿಸಿ ಆ ಮೂಲಕ ನಮ್ಮ ಕಂಪ್ಯೂಟರಿಗೆ ಕುತಂತ್ರಾಂಶಗಳನ್ನು ತೂರಿಸುವ ಪ್ರಯತ್ನ ಮಾಡುವುದೂ ಉಂಟು.
45 BPO ಬಿಪಿಒ ಬಿಸಿನೆಸ್ ಪ್ರಾಸೆಸ್ ಔಟ್‌ಸೋರ್ಸಿಂಗ್; ಸಂಸ್ಥೆಗಳು ತಮ್ಮ ವ್ಯವಹಾರಕ್ಕೆ ಸಂಬಂಧಪಟ್ಟ ಸಂಪೂರ್ಣ ಪ್ರಕ್ರಿಯೆಗಳನ್ನೇ ಹೊರಗುತ್ತಿಗೆ ನೀಡುವ ಅಭ್ಯಾಸ ಹೊರಗುತ್ತಿಗೆ (ಔಟ್‌ಸೋರ್ಸಿಂಗ್) ಬಗ್ಗೆ ನಾವೆಲ್ಲ ಸಾಕಷ್ಟು ಕೇಳಿದ್ದೇವೆ. ಒಂದು ಸಂಸ್ಥೆ ತನ್ನ ಕೆಲಸವನ್ನು ಬೇರೊಬ್ಬರ ಕೈಲಿ ಮಾಡಿಸಿಕೊಳ್ಳುವುದು ಈ ಪರಿಕಲ್ಪನೆಯ ಹೂರಣ; ನಿಭಾಯಿಸಲು ಕಷ್ಟವೆನಿಸುವ ಕೆಲಸಗಳು, ತಾವೇ ನಿರ್ವಹಿಸಲು ದುಬಾರಿಯಾಗುವವು, ಅಗತ್ಯ ಪರಿಣತಿಯಿಲ್ಲದ ಕ್ಷೇತ್ರದ ಹೊಣೆಗಾರಿಕೆಯನ್ನೆಲ್ಲ ಹಲವು ಸಂಸ್ಥೆಗಳು ಔಟ್‌ಸೋರ್ಸ್ ಮಾಡುತ್ತವೆ. ನಮಗೆ ಪದೇಪದೇ ಕೇಳಸಿಗುವ ಬಿಪಿಒ, ಅಂದರೆ ಬಿಸಿನೆಸ್ ಪ್ರಾಸೆಸ್ ಔಟ್‌ಸೋರ್ಸಿಂಗ್ ಎಂಬ ಹೆಸರು ಕೂಡ ಇದೇ ಹೊರಗುತ್ತಿಗೆಯ ಒಂದು ವಿಧ. ಯಾವುದೇ ಸಂಸ್ಥೆ ತನ್ನ ವ್ಯವಹಾರಕ್ಕೆ ಸಂಬಂಧಪಟ್ಟ ಸಂಪೂರ್ಣ ಪ್ರಕ್ರಿಯೆಗಳನ್ನೇ ಹೊರಗುತ್ತಿಗೆ ನೀಡುವುದನ್ನು ಈ ಹೆಸರು ಪ್ರತಿನಿಧಿಸುತ್ತದೆ. ಹಣಕಾಸು, ಲೆಕ್ಕಪತ್ರ, ಸರಕು ಸಾಗಾಣಿಕೆ, ಕಡತಗಳ ನಿರ್ವಹಣೆ ಮುಂತಾದ ಹಲವು ಕ್ಷೇತ್ರಗಳಿಗೆ ಸಂಬಂಧಿಸಿದ ಪ್ರಕ್ರಿಯೆಗಳನ್ನು ಹೀಗೆ ಹೊರಗುತ್ತಿಗೆ ನೀಡಲಾಗುತ್ತದೆ. ಮೊದಲಿಗೆ ಈ ಕ್ಷೇತ್ರದ ಕೆಲಸಗಳು ಹೆಚ್ಚಾಗಿ ಮಾನವ ಸಂಪನ್ಮೂಲವನ್ನೇ ಆಧರಿಸಿ ನಡೆಯುತ್ತಿದ್ದವು; ಇದೀಗ ಇಲ್ಲೂ ಯಾಂತ್ರೀಕರಣದ ಪ್ರಯತ್ನಗಳು ಹೆಚ್ಚುತ್ತಿದ್ದು 'ರೋಬಾಟಿಕ್ ಪ್ರಾಸೆಸ್ ಆಟೋಮೇಶನ್' (ಆರ್‌ಪಿಎ) ತಂತ್ರಾಂಶಗಳು ಹಲವು ಕೆಲಸಗಳನ್ನು ತಾವೇ ನಿಭಾಯಿಸುವಷ್ಟು ಮಟ್ಟಕ್ಕೆ ಬೆಳೆದಿವೆ. ಮಾಹಿತಿ ತಂತ್ರಜ್ಞಾನ ಆಧರಿತ ಸೇವೆಗಳ ಹೊರಗುತ್ತಿಗೆ (ಐಟಿ ಎನೇಬಲ್ಡ್ ಸರ್ವಿಸ್ - ಐಟಿಇಎಸ್ - ಬಿಪಿಒ) ಹಾಗೂ ಜ್ಞಾನಾಧಾರಿತ ಸೇವೆಗಳ ಹೊರಗುತ್ತಿಗೆ (ನಾಲೆಜ್ ಪ್ರಾಸೆಸ್ ಔಟ್‌ಸೋರ್ಸಿಂಗ್ ಅಥವಾ ಕೆಪಿಒ) ಕೂಡ ಬಿಸಿನೆಸ್ ಪ್ರಾಸೆಸ್ ಔಟ್‌ಸೋರ್ಸಿಂಗ್‌ನ ಹಲವು ಬಗೆಗಳು.
46 Breadcrumbs ಬ್ರೆಡ್‌ಕ್ರಂಬ್ಸ್ ಕಂಪ್ಯೂಟರಿನಲ್ಲಿ ಸದ್ಯ ನಾವು ಯಾವ ಫೋಲ್ಡರಿನೊಳಗಿದ್ದೇವೆ, ಜಾಲತಾಣದ ಯಾವ ವಿಭಾಗವನ್ನು ವೀಕ್ಷಿಸುತ್ತಿದ್ದೇವೆ ಎನ್ನುವ ಬಗ್ಗೆ ಪ್ರದರ್ಶಿಸಲಾಗುವ ಮಾಹಿತಿ ಕಂಪ್ಯೂಟರಿನಲ್ಲಿ ಬೇರೆಬೇರೆ ಫೋಲ್ಡರುಗಳನ್ನು ನೋಡುತ್ತಿದ್ದಾಗ, ಬ್ಲಾಗು-ವೆಬ್‌ಸೈಟುಗಳನ್ನು ಜಾಲಾಡುವಾಗ ಪರದೆಯ ಮೇಲ್ಭಾಗದಲ್ಲಿ (ಸಾಮಾನ್ಯವಾಗಿ ಎಡತುದಿಯಲ್ಲಿ) ನಾವೆಲ್ಲಿದ್ದೇವೆ ಎನ್ನುವ ಬಗ್ಗೆ ಮಾಹಿತಿ ಕಾಣಿಸಿಕೊಳ್ಳುತ್ತದೆ. ಕಂಪ್ಯೂಟರಿನ ಕಡತಗಳ ಪೈಕಿ ಡೌನ್‌ಲೋಡ್ಸ್ ಎನ್ನುವ ಫೋಲ್ಡರಿನಲ್ಲಿರುವ ಇಜ್ಞಾನ ಎಂಬ ಇನ್ನೊಂದು ಫೋಲ್ಡರನ್ನು 'ಡಾಕ್ಯುಮೆಂಟ್ಸ್ > ಡೌನ್‌ಲೋಡ್ಸ್ > ಇಜ್ಞಾನ' ಎನ್ನುವ ಹಾದಿ ಸೂಚಿಸುತ್ತದೆ. ಅದೇ ರೀತಿ ಇಜ್ಞಾನ ಶಾಪಿಂಗ್ ಸಂಗಾತಿ ಜಾಲತಾಣದಲ್ಲಿ ಮೊಬೈಲ್ ಫೋನ್ ಬಗೆಗಿರುವ ಒಂದು ಲೇಖನ ನೋಡುವಾಗ ಆ ಲೇಖನದ ಮೇಲೆ 'ಶಾಪಿಂಗ್ ಸಂಗಾತಿ > ಮೊಬೈಲ್ ಫೋನ್ > ಮೊಬೈಲ್ ಫೋನ್ ಕೊಳ್ಳುವ ಮುನ್ನ' ಎಂಬ ಹಾದಿ ಕಾಣಸಿಗುತ್ತದೆ. ಕಂಪ್ಯೂಟರಿನಲ್ಲಿ - ಜಾಲಲೋಕದಲ್ಲಿ ಇರುವ ಅಪಾರ ಮಾಹಿತಿಯ ನಡುವೆ ನಾವು ಕಳೆದುಹೋಗುವುದು ಸುಲಭ. ಸದ್ಯ ನಾವೆಲ್ಲಿದ್ದೇವೆ ಎಂಬುದನ್ನು ತೋರಿಸುವುದು ಈ ಗೊಂಡಾರಣ್ಯದಲ್ಲಿ ನಾವು ದಾರಿತಪ್ಪದಂತೆ ನೋಡಿಕೊಳ್ಳುವ ಉದ್ದೇಶದಿಂದಲೇ. ಪುಟ್ಟ ಮಕ್ಕಳಿಬ್ಬರು ಅರಣ್ಯಕ್ಕೆ ಹೋದಾಗ ಬಂದ ಹಾದಿ ನೆನಪಿರಲೆಂದು ದಾರಿಯುದ್ದಕ್ಕೂ ಬ್ರೆಡ್ ತುಣುಕುಗಳನ್ನು ಉದುರಿಸುತ್ತ ಹೋಗುವ ಪ್ರಸಂಗ ಗ್ರಿಮ್ ಸಹೋದರರ ಕಿನ್ನರ ಕತೆಯೊಂದರಲ್ಲಿ ಬರುತ್ತದೆ. ಈ ಪ್ರಸಂಗದಿಂದ ಸ್ಫೂರ್ತಿಪಡೆದು ಮಾಹಿತಿಯ ಅರಣ್ಯದಲ್ಲಿ ನಮ್ಮ ಸ್ಥಾನವನ್ನು ಗುರುತಿಸುವ ಹಂತಹಂತದ ಹಾದಿಯನ್ನೂ ಬ್ರೆಡ್ ತುಣುಕುಗಳು - 'ಬ್ರೆಡ್‌ಕ್ರಂಬ್ಸ್' - ಎಂದೇ ಕರೆಯಲಾಗುತ್ತದೆ.
47 Browser ಬ್ರೌಸರ್ ವಿಶ್ವವ್ಯಾಪಿ ಜಾಲದಲ್ಲಿರುವ ಜಾಲತಾಣಗಳನ್ನು ಕಂಪ್ಯೂಟರಿನಲ್ಲಿ ವೀಕ್ಷಿಸಲು ಬಳಕೆಯಾಗುವ ತಂತ್ರಾಂಶ ವಿಶ್ವವ್ಯಾಪಿ ಜಾಲದ ಜಾಲತಾಣಗಳಲ್ಲಿರುವ ಮಾಹಿತಿಯನ್ನು ನಮ್ಮ ಕಂಪ್ಯೂಟರಿಗೆ ಬರಮಾಡಿಕೊಳ್ಳಲು ಬ್ರೌಸರ್ ತಂತ್ರಾಂಶ ಅತ್ಯಗತ್ಯ. ಲ್ಯಾಪ್‌ಟಾಪ್-ಡೆಸ್ಕ್‌ಟಾಪ್‌ಗಳಿಗಷ್ಟೆ ಅಲ್ಲ, ಟ್ಯಾಬ್ಲೆಟ್ಟು-ಮೊಬೈಲುಗಳಲ್ಲೂ ಬ್ರೌಸರ್ ತಂತ್ರಾಂಶ ಬೇಕು. ಗೂಗಲ್ ಕ್ರೋಮ್, ಮೊಜಿಲ್ಲಾ ಫೈರ್‌ಫಾಕ್ಸ್, ಇಂಟರ್‌ನೆಟ್ ಎಕ್ಸ್‌ಪ್ಲೋರರ್, ಒಪೆರಾ ಮೊದಲಾದವು ಬ್ರೌಸರ್‌ಗೆ ಉದಾಹರಣೆಗಳು. ಈ ಪೈಕಿ ಹಲವು ಬ್ರೌಸರುಗಳ ಕನ್ನಡ ಆವೃತ್ತಿ ಕೂಡ ಇದೆ. ವಿಶ್ವದ ಮೂಲೆಮೂಲೆಗಳಲ್ಲಿರುವ ಕಂಪ್ಯೂಟರುಗಳಲ್ಲಿ ಶೇಖರವಾಗಿರುವ ಮಾಹಿತಿಯನ್ನು ನಮ್ಮ ಕಂಪ್ಯೂಟರ್ ಅಥವಾ ಮೊಬೈಲಿನಲ್ಲಿ ವೀಕ್ಷಿಸಲು ಈ ತಂತ್ರಾಂಶಗಳು ಅನುವುಮಾಡಿಕೊಡುತ್ತವೆ. ನಾವು ನೋಡುತ್ತಿರುವ ಜಾಲತಾಣ ಕನ್ನಡದ್ದಾಗಿರಲಿ, ಇಂಗ್ಲಿಷಿನದ್ದಾಗಿರಲಿ ಅಥವಾ ರಷ್ಯನ್ ಭಾಷೆಯದೇ ಇರಲಿ - ತಾಂತ್ರಿಕ ಹೊಂದಾಣಿಕೆಗಳೆಲ್ಲ ಸರಿಯಾಗಿದ್ದ ಪಕ್ಷದಲ್ಲಿ ಅಲ್ಲಿರುವ ಮಾಹಿತಿಯನ್ನು ನಮ್ಮೆದುರು ಪ್ರದರ್ಶಿಸುವುದು ಬ್ರೌಸರ್‌ನ ಕೆಲಸ. ಹೀಗೆ ವಿಶ್ವವ್ಯಾಪಿ ಜಾಲದಲ್ಲಿರುವ ಮಾಹಿತಿಯನ್ನು ನೋಡುವುದು ಮಾತ್ರವಲ್ಲ; ಆ ಮಾಹಿತಿಯನ್ನು ಉಳಿಸಿಕೊಳ್ಳುವುದು, ಮುದ್ರಿಸಿಕೊಳ್ಳುವುದು, ವಿವಿಧ ಪುಟಗಳ ನಡುವೆ ಹಿಂದೆಮುಂದೆ ಓಡಾಡುವುದು, ಅಚ್ಚುಮೆಚ್ಚಿನ ಪುಟಗಳ ವಿಳಾಸ ಸಂಗ್ರಹಿಸಿಟ್ಟುಕೊಳ್ಳುವುದು ಮುಂತಾದ ಇನ್ನಿತರ ಸೌಲಭ್ಯಗಳೂ ಬ್ರೌಸರ್ ತಂತ್ರಾಂಶದಲ್ಲಿರುತ್ತವೆ.
48 Buffer ಬಫರ್ ಒಂದೆಡೆಯಿಂದ ಇನ್ನೊಂದೆಡೆಗೆ ಮಾಹಿತಿಯ ವರ್ಗಾವಣೆಯಾಗುವಾಗ ಅದನ್ನು ತಾತ್ಕಾಲಿಕವಾಗಿ ಉಳಿಸಿಟ್ಟುಕೊಳ್ಳಲು ಬಳಕೆಯಾಗುವ ಮೆಮೊರಿಯ ಭಾಗ; ಹೀಗೆ ಉಳಿಸಿಟ್ಟುಕೊಳ್ಳುವ ಪ್ರಕ್ರಿಯೆಗೆ ಬಫರಿಂಗ್ ಎಂದು ಹೆಸರು. ಯೂಟ್ಯೂಬ್ ವೀಡಿಯೋ ನೋಡುವಾಗ, ನಿಮ್ಮ ಅಂತರಜಾಲ ಸಂಪರ್ಕದ ವೇಗ ಕಡಿಮೆಯಿದ್ದರೆ, ಅದು ತೆರೆದುಕೊಳ್ಳಲು ಕೊಂಚ ಸಮಯ ಬೇಕಾಗುವುದನ್ನು ನಾವೆಲ್ಲ ಗಮನಿಸಿರುತ್ತೇವೆ. ಈ ಸಮಯದಲ್ಲಿ ಅದು ಮಾಡುವ ಕೆಲಸವೇ ಬಫರಿಂಗ್. ಕಂಪ್ಯೂಟರ್ ಪ್ರಪಂಚದಲ್ಲಿ ಒಂದೆಡೆಯಿಂದ ಇನ್ನೊಂದೆಡೆಗೆ ಮಾಹಿತಿಯ ವರ್ಗಾವಣೆಯಾಗುವಾಗ ಆ ಮಾಹಿತಿಯನ್ನು ತಾತ್ಕಾಲಿಕವಾಗಿ ಒಂದೆಡೆ ಶೇಖರಿಸಿಡುವ ಅಭ್ಯಾಸವಿದೆ. ಹೀಗೆ ಮಾಹಿತಿಯನ್ನು ಉಳಿಸಿಡಲು ಬಳಕೆಯಾಗುವ ಮೆಮೊರಿಯ ಭಾಗವನ್ನು ಬಫರ್ ಎಂದು ಕರೆಯುತ್ತಾರೆ. ಬಫರಿಂಗ್ ಎನ್ನುವುದು ಮಾಹಿತಿಯನ್ನು ಅದರ ಆಕರದಿಂದ ಪಡೆದು ಬಫರ್‌ನಲ್ಲಿ ಉಳಿಸಿಟ್ಟುಕೊಳ್ಳುವ ಪ್ರಕ್ರಿಯೆ. ಅನಿರ್ದಿಷ್ಟ ವೇಗದಲ್ಲಿ ಒಳಬರುವ ಮಾಹಿತಿಯನ್ನು ಒಂದೆಡೆ ಉಳಿಸಿಟ್ಟುಕೊಂಡು ನಿರ್ದಿಷ್ಟ ವೇಗದಲ್ಲಿ ಬಳಸಲು ಈ ಪ್ರಕ್ರಿಯೆ ನೆರವಾಗುತ್ತದೆ (ಐದು ನಿಮಿಷದ ವೀಡಿಯೋ ಎಷ್ಟೇ ಬೇಗ ಅಥವಾ ನಿಧಾನವಾಗಿ ಡೌನ್‌ಲೋಡ್ ಆದರೂ ಅದನ್ನು ವೀಕ್ಷಿಸಲು ಐದು ನಿಮಿಷ ಬೇಕೇಬೇಕಲ್ಲ!). ಮೇಲಿನ ಉದಾಹರಣೆಯಲ್ಲಿ ಹೇಳಿದಂತೆ ಯೂಟ್ಯೂಬ್ ವೀಡಿಯೋ ನೋಡಲು ಹೊರಟಾಗ ಆ ಮಾಹಿತಿಯಷ್ಟೂ ನಿಮ್ಮ ಕಂಪ್ಯೂಟರನ್ನೋ ಸ್ಮಾರ್ಟ್‌ಫೋನನ್ನೋ ತಲುಪಲು ಒಂದಷ್ಟು ಸಮಯ ಬೇಕಾಗುತ್ತದೆ (ವೇಗದ ಸಂಪರ್ಕಗಳಲ್ಲಿ ಈ ಸಮಯ ನಮ್ಮ ಗಮನಕ್ಕೇ ಬಾರದಷ್ಟು ಕಡಿಮೆಯಿರುತ್ತದೆ). ಪೂರ್ವನಿರ್ಧಾರಿತ ಪ್ರಮಾಣದ ಮಾಹಿತಿ ಬಫರ್‌ಗೆ ತಲುಪುವ ಮುನ್ನವೇ ವೀಡಿಯೋ ಪ್ರದರ್ಶಿಸಲು ಪ್ರಾರಂಭಿಸಿದರೆ ಪ್ರದರ್ಶನದಲ್ಲಿ ಅಡಚಣೆಯುಂಟಾಗುತ್ತದಲ್ಲ, ಅದನ್ನು ಸಾಧ್ಯವಾದಷ್ಟೂ ತಪ್ಪಿಸಲು ಬಫರಿಂಗ್‌ನ ಮೊರೆಹೋಗಲಾಗುತ್ತದೆ. ಒಂದಷ್ಟು ವೀಡಿಯೋ ಲೋಡ್ ಆದ ನಂತರವಷ್ಟೇ ಅದರ ಪ್ರದರ್ಶನ ಶುರುವಾಗುವುದು ಇದೇ ಕಾರಣದಿಂದ. ಸಂಪರ್ಕ ತೀರಾ ನಿಧಾನವಾಗಿದ್ದರೆ ವೀಡಿಯೋ ಪ್ರದರ್ಶನದ ಮಧ್ಯದಲ್ಲೂ ಮತ್ತೆ ಬಫರಿಂಗ್ ಮೊರೆಹೋಗುವುದು ಅನಿವಾರ್ಯವಾಗುತ್ತದೆ. ಯೂಟ್ಯೂಬ್ ಮಾತ್ರವೇ ಅಲ್ಲ, ಅಂತರಜಾಲ ಸಂಪರ್ಕದ ಮೂಲಕ ವೀಡಿಯೋ, ಧ್ವನಿ ಮುಂತಾದ ದೊಡ್ಡ ಪ್ರಮಾಣದ ಮಾಹಿತಿಯನ್ನು ವರ್ಗಾಯಿಸುವ ಬಹುತೇಕ ವ್ಯವಸ್ಥೆಗಳಲ್ಲಿ ಬಫರಿಂಗ್ ಬಳಕೆಯಾಗುತ್ತದೆ.
49 Bug ಬಗ್ ತಂತ್ರಾಂಶದ ಕಾರ್ಯಾಚರಣೆಯಲ್ಲಿ ಆಗುವ ಅನಿರೀಕ್ಷಿತ ತಪ್ಪು ಕಂಪ್ಯೂಟರಿಗಾಗಲೀ ಸ್ಮಾರ್ಟ್‌ಫೋನ್‌ಗಾಗಲಿ ಸ್ವಂತ ಬುದ್ಧಿ ಇರುವುದಿಲ್ಲ. ನಿರ್ದಿಷ್ಟ ಸಂದರ್ಭಗಳಲ್ಲಿ ಹೇಗೆ ಪ್ರತಿಕ್ರಿಯೆ ನೀಡಬೇಕೆಂದು ಅದಕ್ಕೆ ನಿರ್ದೇಶನ ನೀಡಲಾಗಿರುತ್ತದೆಯೋ ಅದರ ವರ್ತನೆ ಅದೇ ರೀತಿಯಾಗಿರುತ್ತದೆ. ಹೀಗೆ ನಿರ್ದೇಶನ ನೀಡುವುದು ಸಾಫ್ಟ್‌ವೇರ್, ಅಂದರೆ ತಂತ್ರಾಂಶದ ಕೆಲಸ. ಒಂದು + ಒಂದು = ಎರಡು ಎನ್ನುವ ಬದಲು ಒಂದು + ಒಂದು = ಹನ್ನೊಂದು ಎಂದು ತಂತ್ರಾಂಶದಲ್ಲಿ ಹೇಳಿದೆ ಎಂದುಕೊಳ್ಳಿ. ನೀವು ಆ ತಂತ್ರಾಂಶ ಬಳಸುವ ಕಂಪ್ಯೂಟರನ್ನು ಒಂದು + ಒಂದು ಎಷ್ಟು ಎಂದು ಕೇಳಿದರೆ ಉತ್ತರ ಹನ್ನೊಂದು ಎಂದೇ ಬರುತ್ತದೆ. ಕಂಪ್ಯೂಟರ್ ಲೆಕ್ಕಾಚಾರದಲ್ಲಿ ಆಗುವ ಎಡವಟ್ಟುಗಳಿಗೆ ಇಂತಹ ತಪ್ಪುಗಳೇ ಕಾರಣ. ತಂತ್ರಾಂಶವನ್ನು ಸರಿಯಾಗಿ ಪರೀಕ್ಷಿಸದೆ ಬಳಕೆದಾರರಿಗೆ ಕೊಟ್ಟಾಗ ಇಂತಹ ತಪ್ಪುಗಳು ಅವರಿಗೆ ಸಾಕಷ್ಟು ತೊಂದರೆಕೊಡುತ್ತವೆ, ಹೆಚ್ಚೂಕಡಿಮೆ ತಿಗಣೆಕಾಟದ ಹಾಗೆ. ಇದರಿಂದಲೇ ಈ ತಪ್ಪುಗಳನ್ನು 'ಬಗ್' ಎಂದು ಕರೆಯುತ್ತಾರೆ. ಮಾಹಿತಿ ತಂತ್ರಜ್ಞಾನದ ಮೇಲೆ ನಮ್ಮ ಅವಲಂಬನೆ ಹೆಚ್ಚುತ್ತಿದ್ದಂತೆ ಬಗ್‌ಗಳಿಂದಾಗುವ ತೊಂದರೆಯೂ ಹೆಚ್ಚುತ್ತಿದೆ. ಬಗ್ ದೆಸೆಯಿಂದ ತಂತ್ರಾಂಶಗಳ ಕಾರ್ಯನಿರ್ವಹಣೆಯಲ್ಲಾಗುವ ವ್ಯತ್ಯಯ ಭಾರೀ ಪ್ರಮಾಣದ ಆರ್ಥಿಕ ನಷ್ಟವನ್ನೂ ಉಂಟುಮಾಡಬಲ್ಲದು. ಇದರಿಂದಾಗಿಯೇ ತಾವು ಒದಗಿಸುವ ತಂತ್ರಾಂಶಗಳಲ್ಲಿ ತಪ್ಪುಗಳಿಲ್ಲದಂತೆ ನೋಡಿಕೊಳ್ಳಲು ತಂತ್ರಾಂಶ ನಿರ್ಮಾತೃಗಳು ತಮ್ಮ ಕೈಲಾದ ಪ್ರಯತ್ನಗಳನ್ನೆಲ್ಲ ಮಾಡುತ್ತಿರುತ್ತಾರೆ, ಆದರೆ ಅವರ ಕಣ್ತಪ್ಪಿಸಿ ಅದು ಹೇಗೋ ಉಳಿದುಕೊಳ್ಳುವ ತಪ್ಪುಗಳು ತಿಗಣೆಗಳಾಗಿ ಬಂದು ಬಳಕೆದಾರರನ್ನು ಕಾಡುತ್ತಲೇ ಇರುತ್ತವೆ!
50 Bus ಬಸ್ ಕಂಪ್ಯೂಟರಿನ ಭಾಗಗಳ ನಡುವೆ ದತ್ತಾಂಶದ (ಡೇಟಾ) ವಿನಿಮಯವನ್ನು ಸಾಧ್ಯವಾಗಿಸುವ ಮಾಧ್ಯಮ ಕಂಪ್ಯೂಟರಿನ ಆಂತರಿಕ ರಚನೆ ಬಹಳ ಸಂಕೀರ್ಣವಾಗಿರುತ್ತದೆ. ಅಲ್ಲದೆ ಅದರ ಕಾರ್ಯಾಚರಣೆಯ ವೇಗದ ಕುರಿತು ನಮ್ಮ ನಿರೀಕ್ಷೆಯೂ ಉನ್ನತಮಟ್ಟದಲ್ಲೇ ಇರುತ್ತದೆ: ಕೀಬೋರ್ಡಿನಲ್ಲಿ ಟೈಪ್ ಮಾಡಿದ ಅಕ್ಷರ ಅದೇ ಕ್ಷಣದಲ್ಲಿ ಪರದೆಯ ಮೇಲೆ ಕಾಣಿಸಿಕೊಳ್ಳಬೇಕು, ಮುದ್ರಿತ ಪ್ರತಿ ಬೇಕೆಂದಕೂಡಲೇ ಪ್ರಿಂಟರಿನ ಮೂಲಕ ಹಾದು ಕಾಗದದ ಮೇಲೂ ಮೂಡಬೇಕು! ಆದುದರಿಂದಲೇ ಕಂಪ್ಯೂಟರಿನಲ್ಲಿರುವ ಹತ್ತಾರು ಸಣ್ಣ - ದೊಡ್ಡ ಭಾಗಗಳ ನಡುವೆ ದತ್ತಾಂಶದ (ಡೇಟಾ) ವಿನಿಮಯಕ್ಕೆ ಎಲ್ಲಿಲ್ಲದ ಮಹತ್ವ. ಈ ವಿನಿಮಯವನ್ನು ಸಾಧ್ಯವಾಗಿಸುವ ಮಾಧ್ಯಮವೇ 'ಬಸ್'. ರಸ್ತೆಯ ಮೇಲೆ ಓಡಾಡುವ ಬಸ್ ಅಲ್ಲ, ಇದು ದತ್ತಾಂಶದ ಓಡಾಟಕ್ಕೆ ಅನುವುಮಾಡಿಕೊಡುವ ತಂತಿಗಳ ಕಟ್ಟು. ದತ್ತಾಂಶದ ಜೊತೆಜೊತೆಗೆ ತಂತ್ರಾಂಶಗಳ ನಡುವಿನ ಸಂವಹನಕ್ಕೆ ಬೇಕಾದ ಇತರ ಸಂಕೇತಗಳೂ ಬಸ್ ಮೂಲಕವೇ ಸಂಚರಿಸುತ್ತವೆ. ಇಂತಹ ಪ್ರತಿ ಬಸ್‌ಗೂ ನಿರ್ದಿಷ್ಟ ಸಾಮರ್ಥ್ಯ ಇರುತ್ತದೆ. ಆ ಸಾಮರ್ಥ್ಯವನ್ನು ಬಿಟ್‌ಗಳಲ್ಲಿ (ಉದಾ: ೩೨ ಬಿಟ್, ೬೪ ಬಿಟ್) ಅಳೆಯಲಾಗುತ್ತದೆ. ಪ್ರತಿ ಬಸ್‌ನ ಮೂಲಕ ಏಕಕಾಲದಲ್ಲಿ ಎಷ್ಟು ಪ್ರಮಾಣದ ದತ್ತಾಂಶದ ಹರಿವು ಸಾಧ್ಯ ಎನ್ನುವುದನ್ನು ಇದು ಸೂಚಿಸುತ್ತದೆ. ಹೀಗೆ ಪ್ರತಿ ಸೆಕೆಂಡಿಗೆ ಎಷ್ಟು ಬಾರಿ ದತ್ತಾಂಶವನ್ನು ವರ್ಗಾಯಿಸಬಹುದು ಎನ್ನುವುದನ್ನು ಅದರ ಸ್ಪಂದನದ ದರ (ಫ್ರೀಕ್ವೆನ್ಸಿ) ಪ್ರತಿನಿಧಿಸುತ್ತದೆ. ಇದನ್ನು ಹರ್ಟ್ಸ್‌ಗಳಲ್ಲಿ ಅಳೆಯುತ್ತಾರೆ.