A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 318

Backtrace:

File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 319

Backtrace:

File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 320

Backtrace:

File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler

File: /Appdata/padakanaja.karnataka.gov.in/index.php
Line: 318
Function: require_once

Padakanaja - Dictionary View
ಅನಿಸಿಕೆ

ಪದಕೋಶ: ಕಂಪ್ಯೂಟರ್ ತಂತ್ರಜ್ಞಾನ ಪದವಿವರಣ ಕೋಶ | ಇಂಗ್ಲೀಷ್-ಕನ್ನಡ |ಪ್ರಕಾಶಕರು - ಕನ್ನಡ ಅಭಿವೃದ್ಧಿ ಪ್ರಾಧಿಕಾರ (2017)

Show entries
ಕ್ರಮ ಸ೦ಖ್ಯೆ ಇಂಗ್ಲೀಷ್ ಪದ
(English Word)
ಕನ್ನಡ ಪದ
(Kannada Word)
ಕನ್ನಡ ಅರ್ಥ
(Kannada Meaning)
ವಿಷಯ ವರ್ಗೀಕರಣ
(Word Subject)
ವ್ಯಾಕರಣ ವಿಶೇಷ
(Word Grammer)
ಕನ್ನಡ ಉಚ್ಚಾರಣೆ
(Kannada Pronunciation)
ಪರ್ಯಾಯ ಪದ
(Word Synonyms)
ಇಂಗ್ಲೀಷ್ ಅರ್ಥ
(English Meaning)
ಸಂಕ್ಷಿಪ್ತ ವಿವರಣೆ
(Short Description)
ದೀರ್ಘ ವಿವರಣೆ
(Long Description)
ಆಡಳಿತಾತ್ಮಕ ಪದ
(Administrative Word)
21 Backup ಬ್ಯಾಕಪ್ ಅಗತ್ಯಬಿದ್ದಾಗ ಬಳಸಲು ಅನುವಾಗುವಂತೆ ನಮ್ಮ ಮಾಹಿತಿಯ ಇನ್ನೊಂದು ಪ್ರತಿಯನ್ನು ಉಳಿಸಿಟ್ಟುಕೊಳ್ಳುವ ಅಭ್ಯಾಸ ಈಚಿನ ವರ್ಷಗಳಲ್ಲಿ ನಮ್ಮ ಅದೆಷ್ಟೋ ಕೆಲಸಗಳಿಗಾಗಿ ನಾವು ಕಂಪ್ಯೂಟರ್ ಹಾಗೂ ಸ್ಮಾರ್ಟ್‌ಫೋನಿನ ಮೇಲೆ ಅವಲಂಬಿತರಾಗಿದ್ದೇವೆ. ಹತ್ತಾರು ವಿಷಯಗಳಿಗೆ ಸಂಬಂಧಪಟ್ಟ ನೂರೆಂಟು ಬಗೆಯ ಮಾಹಿತಿಯನ್ನು, ರಾಶಿಗಟ್ಟಲೆ ಕಡತಗಳನ್ನು ನಾವು ಈ ಸಾಧನಗಳಲ್ಲಿ ಉಳಿಸಿಡುತ್ತೇವೆ. ಹಾಗೆ ಉಳಿಸಿಟ್ಟ ಮಾಹಿತಿಯನ್ನು ಬೇಕಾದಾಗೆಲ್ಲ ಬಳಸುತ್ತೇವೆ ಕೂಡ. ಕಂಪ್ಯೂಟರು, ಸ್ಮಾರ್ಟ್‌ಫೋನುಗಳೆಲ್ಲ ಎಷ್ಟೇ ಆದರೂ ಭೌತಿಕ ವಸ್ತುಗಳು. ಅವು ಕಳೆದುಹೋಗುವುದು ಅಥವಾ ಕೆಟ್ಟುಹೋಗುವುದು ಅಸಾಧ್ಯವೇನಲ್ಲ. ಹಾಗೇನಾದರೂ ಆದಾಗ ಅವುಗಳಲ್ಲಿರುವ ನಮ್ಮ ಮಾಹಿತಿಯ ಗತಿ? ಅನಿರೀಕ್ಷಿತ ಸಂದರ್ಭಗಳಲ್ಲಿ ನಮ್ಮ ಮಾಹಿತಿ ಕಳೆದುಹೋಗುವುದನ್ನು ತಪ್ಪಿಸಲು ಬಳಕೆಯಾಗುವ ತಂತ್ರವೇ ಬ್ಯಾಕಪ್. ಮತ್ತೊಮ್ಮೆ ಬೇಕಾಗಬಹುದಾದ ಮಾಹಿತಿಯನ್ನು ಆಗಿಂದಾಗ್ಗೆ ಪ್ರತಿಮಾಡಿಟ್ಟುಕೊಂಡು ಅಗತ್ಯಬಿದ್ದಾಗ ಬಳಸಲು ಅನುವುಮಾಡಿಕೊಡುವುದು ಈ ತಂತ್ರದ ಉದ್ದೇಶ. ನಮ್ಮ ಮಾಹಿತಿಯನ್ನು ಬ್ಯಾಕಪ್ ಮಾಡಿಟ್ಟುಕೊಳ್ಳಲು ಹಲವು ವಿಧಾನಗಳನ್ನು ಬಳಸಬಹುದು. ಮುಖ್ಯವೆನಿಸುವ ಮಾಹಿತಿಯನ್ನು ವಾರಕ್ಕೋ ಹದಿನೈದು ದಿನಕ್ಕೋ ಒಮ್ಮೆ ನಾವೇ ಬೇರೊಂದು ಕಡೆ (ಎಕ್ಸ್‌ಟರ್ನಲ್ ಹಾರ್ಡ್‌ಡಿಸ್ಕ್, ಪೆನ್ ಡ್ರೈವ್ ಇತ್ಯಾದಿಗಳಲ್ಲಿ) ಕಾಪಿ ಮಾಡಿಡುವುದು ಈ ಪೈಕಿ ಅತ್ಯಂತ ಸರಳವಾದದ್ದು. ಆದರೆ ಕಾಪಿಮಾಡಿಡಲು ಮರೆಯುವ ಸಾಧ್ಯತೆ ಇರುತ್ತದಲ್ಲ, ಅದನ್ನು ತಪ್ಪಿಸಲು ಬ್ಯಾಕಪ್ ತಂತ್ರಾಂಶಗಳನ್ನು ಬಳಸಬಹುದು. ಬೇರೊಂದು ಸಾಧನದಲ್ಲಿ ಕಾಪಿ ಮಾಡಿಟ್ಟ ಮಾಹಿತಿಯೂ ಹಾಳಾಗುವ ಸಾಧ್ಯತೆ ತಪ್ಪಿಸಲು ಗೂಗಲ್ ಡ್ರೈವ್, ಡ್ರಾಪ್ ಬಾಕ್ಸ್ ಮುಂತಾದ ಕ್ಲೌಡ್ ಆಧರಿತ ಸೇವೆಗಳನ್ನು ಬಳಸುವುದು ಸಾಧ್ಯ. ಅಂದಹಾಗೆ ಬ್ಯಾಕಪ್ ಪರಿಕಲ್ಪನೆ ಕೇವಲ ಕಡತಗಳಿಗಷ್ಟೇ ಸೀಮಿತವೇನಲ್ಲ. ಸಮಾಜಜಾಲದಲ್ಲಿ ಹಂಚಿಕೊಂಡ ಮಾಹಿತಿ, ಬ್ಲಾಗ್‌ನಲ್ಲಿ ಬರೆದ ಲೇಖನಗಳು, ಇಮೇಲ್ ಸಂದೇಶಗಳನ್ನೂ ಬ್ಯಾಕಪ್ ಮಾಡಿಟ್ಟುಕೊಳ್ಳಬಹುದು.
22 Bandwidth ಬ್ಯಾಂಡ್‌ವಿಡ್ತ್ ಯಾವುದೇ ಸಂಪರ್ಕ ನಿರ್ದಿಷ್ಟ ಅವಧಿಯಲ್ಲಿ ಎಷ್ಟು ಪ್ರಮಾಣದ ದತ್ತಾಂಶದ ಹರಿವನ್ನು ನಿಭಾಯಿಸಬಲ್ಲದು ಎನ್ನುವುದರ ಮಾಪನ ಅಂತರಜಾಲ ಸಂಪರ್ಕದ ಬಗ್ಗೆ ಮಾತನಾಡುವಾಗ ಹಲವಾರು ಬಾರಿ ಬ್ಯಾಂಡ್‌ವಿಡ್ತ್ ಎನ್ನುವ ಹೆಸರಿನ ಪ್ರಸ್ತಾಪವನ್ನೂ ನಾವು ಕೇಳುತ್ತೇವೆ. ಯಾವುದೇ ಸಂಪರ್ಕ ನಿರ್ದಿಷ್ಟ ಅವಧಿಯಲ್ಲಿ ಎಷ್ಟು ಪ್ರಮಾಣದ ದತ್ತಾಂಶದ ಹರಿವನ್ನು ನಿಭಾಯಿಸಬಲ್ಲದು ಎನ್ನುವುದನ್ನು ಇದು ಸೂಚಿಸುತ್ತದೆ. ನಿರ್ದಿಷ್ಟ ಗಾತ್ರದ ಕಡತವೊಂದನ್ನು ಡೌನ್‌ಲೋಡ್ ಮಾಡುತ್ತಿದ್ದೇವೆ ಎನ್ನುವುದಾದರೆ ಅದನ್ನು ಹೆಚ್ಚು ಬ್ಯಾಂಡ್‌ವಿಡ್ತ್ ಇರುವ ಸಂಪರ್ಕದಲ್ಲಿ ಹೆಚ್ಚು ವೇಗವಾಗಿ ಇಳಿಸಿಕೊಳ್ಳುವುದು ಸಾಧ್ಯ. ಕೊಳವೆಯ ವ್ಯಾಸ ದೊಡ್ಡದಾದಷ್ಟೂ ಅದರಲ್ಲಿ ಹೆಚ್ಚು ಪ್ರಮಾಣದ ನೀರು ಹರಿಸುವುದು ಸಾಧ್ಯವಾಗುತ್ತದಲ್ಲ, ಇದೂ ಹಾಗೆಯೇ. ಒಂದು ಸೆಕೆಂಡಿಗೆ ಎಷ್ಟು ಬಿಟ್ ದತ್ತಾಂಶ ವರ್ಗಾವಣೆಯಾಗಬಲ್ಲದು ಎಂದು ಸೂಚಿಸುವ ಮೂಲಕ ಬ್ಯಾಂಡ್‌ವಿಡ್ತ್ ಅನ್ನು ಪ್ರತಿನಿಧಿಸುವುದು ಸಾಮಾನ್ಯ ಅಭ್ಯಾಸ. ಯಾವುದೋ ಸಂಪರ್ಕದ ಬ್ಯಾಂಡ್‌ವಿಡ್ತ್ ೮ ಎಂಬಿಪಿಎಸ್ ಎಂದರೆ ಆ ಸಂಪರ್ಕದ ಮೂಲಕ ಸೆಕೆಂಡಿಗೆ ೮೦ ಲಕ್ಷ ಬಿಟ್ (೮೦ ಮೆಗಾಬಿಟ್) ದತ್ತಾಂಶದ ವರ್ಗಾವಣೆ ಸಾಧ್ಯ ಎಂದರ್ಥ. ಇದರಲ್ಲಿ ನಾವು ಕಳುಹಿಸುವ ಹಾಗೂ ಪಡೆದುಕೊಳ್ಳುವ ಅಷ್ಟೂ ದತ್ತಾಂಶ (ಜಾಲತಾಣಗಳನ್ನು ನೋಡುವುದೂ ಸೇರಿದಂತೆ) ಸೇರಿರುತ್ತದೆ. ಅಂತರಜಾಲ ಸಂಪರ್ಕದ ಬಳಕೆದಾರರಿಗೆ ಬ್ಯಾಂಡ್‌ವಿಡ್ತ್ ಒಂದು ನಿರ್ಬಂಧವಾದರೆ ಡೇಟಾ ಟ್ರಾನ್ಸ್‌ಫರ್ ಮಿತಿ ಇನ್ನೊಂದು ನಿರ್ಬಂಧ. ಎಂಬತ್ತು ಜಿಬಿವರೆಗೆ ೮ ಎಂಬಿಪಿಎಸ್ ಸಂಪರ್ಕ ಎಂದರೆ ಸೆಕೆಂಡಿಗೆ ಗರಿಷ್ಠ ೮೦ ಲಕ್ಷ ಬಿಟ್ ವೇಗದಲ್ಲಿ ಒಟ್ಟು ೮೦ ಗಿಗಾಬೈಟ್‌ನಷ್ಟು ಮಾಹಿತಿಯ ವರ್ಗಾವಣೆ ಸಾಧ್ಯ ಎಂದು ಅರ್ಥ. ಅಂತರಜಾಲ ಸಂಪರ್ಕಗಳಿಗಿರುವಂತೆ ಕೆಲವೊಮ್ಮೆ ಜಾಲತಾಣಗಳಿಗೂ ಇಂತಹ ಮಿತಿ ಇರುತ್ತದೆ. ಇಂತಿಷ್ಟು ಹೋಸ್ಟಿಂಗ್ ಶುಲ್ಕಕ್ಕೆ ಪ್ರತಿಯಾಗಿ ಆ ಜಾಲತಾಣ ತನ್ನ ಗ್ರಾಹಕರೊಡನೆ ಗರಿಷ್ಠ ಇಂತಿಷ್ಟೇ ಪ್ರಮಾಣದ ದತ್ತಾಂಶವನ್ನು ವರ್ಗಾಯಿಸಿಕೊಳ್ಳಬಹುದು ಎಂದು ಕೆಲ ಹೋಸ್ಟಿಂಗ್ ಸಂಸ್ಥೆಗಳು ನಿರ್ಬಂಧ ವಿಧಿಸಿರುತ್ತವೆ.
23 Barcode ಬಾರ್‌ಕೋಡ್ ಕಪ್ಪು ಗೆರೆಗಳ ಮೂಲಕ ಹಲವು ಬಗೆಯ ಮಾಹಿತಿಯನ್ನು ಪ್ರತಿನಿಧಿಸಬಲ್ಲ ಸಂಕೇತ ಸೂಪರ್ ಮಾರ್ಕೆಟಿನಲ್ಲಿ ಕೊಂಡ ವಸ್ತುವಿನ ಮೇಲಿರುವ ಕಪ್ಪು ಗೆರೆಗಳ ಸಂಕೇತವನ್ನು ಬಿಲ್ಲುಕಟ್ಟೆಯ ಸಿಬ್ಬಂದಿ ಸ್ಕ್ಯಾನ್ ಮಾಡಿದ ಕೂಡಲೆ ಅದರ ಹೆಸರು ಮತ್ತು ಬೆಲೆ ಕಂಪ್ಯೂಟರಿನಲ್ಲಿ ಪ್ರತ್ಯಕ್ಷವಾಗುವುದನ್ನು ನಾವೆಲ್ಲ ನೋಡಿದ್ದೇವೆ. ಕಪ್ಪು ಗೆರೆಗಳ ಆ ಸಂಕೇತದ ಹೆಸರೇ ಬಾರ್‌ಕೋಡ್. ಈ ಸಂಕೇತಗಳನ್ನು ಸೂಪರ್‌ಮಾರ್ಕೆಟ್‌ಗಳಲ್ಲಷ್ಟೇ ಅಲ್ಲದೆ ಗ್ರಂಥಾಲಯ, ಅಂಚೆ ವ್ಯವಸ್ಥೆ, ಕಾರ್ಖಾನೆ ಮುಂತಾದ ಹಲವೆಡೆ ವ್ಯಾಪಕವಾಗಿ ಬಳಸಲಾಗುತ್ತದೆ. ಯಾವ ವಸ್ತುವಿನ ಮೇಲಿದೆಯೋ ಆ ವಸ್ತುವನ್ನು ಕುರಿತ ಏನಾದರೊಂದು ಮಾಹಿತಿಯನ್ನು (ಉದಾ: ಆಹಾರ ಪದಾರ್ಥದ ಬೆಲೆ, ಪುಸ್ತಕದ ಐಎಸ್‌ಬಿಎನ್ ಸಂಖ್ಯೆ ಇತ್ಯಾದಿ) ಈ ಸಂಕೇತ ಸೂಚಿಸುತ್ತದೆ. ಈ ಮಾಹಿತಿಯನ್ನು ಹುದುಗಿಸಿಡಲು ಕಪ್ಪು ಗೆರೆಗಳ ಗಾತ್ರ ಹಾಗೂ ಅವುಗಳ ನಡುವಿನ ಅಂತರವನ್ನು ಬಳಸಿಕೊಳ್ಳಲಾಗುತ್ತದೆ. ಆ ಮಾಹಿತಿಯನ್ನು ಸ್ಕ್ಯಾನರ್ ಸಹಾಯದಿಂದ ಓದುವಾಗಲೂ ಇವೇ ಅಂಶಗಳು ಬಳಕೆಯಾಗುತ್ತವೆ. ಅಂದಹಾಗೆ ಬಾರ್‌ಕೋಡ್‌ಗಳಲ್ಲಿ ಹಲವು ವಿಧಗಳಿವೆ. ಯೂನಿವರ್ಸಲ್ ಪ್ರಾಡಕ್ಟ್ ಕೋಡ್ (ಯುಪಿಸಿ), ಯುರೋಪಿಯನ್ ಆರ್ಟಿಕಲ್ ನಂಬರ್‌ಗಳೆಲ್ಲ (ಇಎಎನ್) ಇದಕ್ಕೆ ಕೆಲ ಉದಾಹರಣೆಗಳು. ಈಚೆಗೆ ಜನಪ್ರಿಯವಾಗುತ್ತಿರುವ ಕ್ಯೂಆರ್ ಕೋಡ್ ಅನ್ನು ಎರಡು ಆಯಾಮದ ಬಾರ್ ಕೋಡ್ ಎಂದೂ ಗುರುತಿಸಲಾಗುತ್ತದೆ. ಪಠ್ಯರೂಪದ ಬಹುತೇಕ ಯಾವುದೇ ಮಾಹಿತಿಯನ್ನು ಬಾರ್‌ಕೋಡ್ ಬಳಸಿ ಪ್ರತಿನಿಧಿಸಬಹುದು (ಉಚಿತವಾಗಿ ಬಾರ್‌ಕೋಡ್ ರೂಪಿಸಿಕೊಡುವ ಹಲವು ಆನ್‌ಲೈನ್ ಸೌಲಭ್ಯಗಳೂ ಇವೆ). ಅಲ್ಲದೆ ಬಾರ್‌ಕೋಡ್ ಸ್ಕ್ಯಾನರಿನ ಕೆಲಸಮಾಡುವ ಅನೇಕ ಕಿರುತಂತ್ರಾಂಶಗಳು ಇಂದಿನ ಸ್ಮಾರ್ಟ್‌ಫೋನುಗಳಲ್ಲಿ ಉಚಿತವಾಗಿಯೇ ದೊರಕುತ್ತವೆ. ಹೀಗಾಗಿ ಅದೆಷ್ಟೋ ಕೆಲಸಗಳಲ್ಲಿ ಬಾರ್‌ಕೋಡ್‌ಗಳನ್ನು ಸುಲಭವಾಗಿ ಬಳಸುವುದು ಸಾಧ್ಯ.
24 Batch Processing ಬ್ಯಾಚ್ ಪ್ರಾಸೆಸಿಂಗ್ ನಿರ್ದಿಷ್ಟ ಅವಧಿಯ ವಹಿವಾಟುಗಳನ್ನೆಲ್ಲ ಉಳಿಸಿಟ್ಟುಕೊಂಡು ಆ ಅವಧಿಯ ಅಂತ್ಯದಲ್ಲಿ ಅಷ್ಟನ್ನೂ ಒಟ್ಟಿಗೆ ಸಂಸ್ಕರಿಸುವ ಪ್ರಕ್ರಿಯೆ ಕ್ರೆಡಿಟ್ ಕಾರ್ಡ್ ಅಥವಾ ಪೋಸ್ಟ್‌ಪೇಯ್ಡ್ ಮೊಬೈಲಿನ ಬಿಲ್ಲಿಂಗ್ ಪ್ರಕ್ರಿಯೆ ಒಂದು ಸರಳ ಸೂತ್ರವನ್ನು ಅವಲಂಬಿಸಿರುತ್ತದೆ. ಎರಡು ನಿರ್ದಿಷ್ಟ ದಿನಾಂಕಗಳ ನಡುವಿನ ನಮ್ಮ ಅಷ್ಟೂ ಬಳಕೆಗೆ ಅನ್ವಯಿಸುವಂತೆ ಒಂದೇ ಬಾರಿ ಶುಲ್ಕ ವಿಧಿಸುವುದೇ ಈ ಸೂತ್ರ. ಐಟಿ ಕ್ಷೇತ್ರದ ದೃಷ್ಟಿಯಿಂದ ನೋಡುವುದಾದರೆ, ನಿರ್ದಿಷ್ಟ ಅವಧಿಯ ವಹಿವಾಟುಗಳನ್ನೆಲ್ಲ (ಉದಾ: ಮೊಬೈಲ್ ಕರೆ ಅಥವಾ ಕ್ರೆಡಿಟ್ ಕಾರ್ಡ್ ವ್ಯವಹಾರಗಳ ವಿವರ) ಉಳಿಸಿಟ್ಟುಕೊಂಡು ಆ ಅವಧಿಯ ಅಂತ್ಯದಲ್ಲಿ ಅಷ್ಟನ್ನೂ ಒಟ್ಟಿಗೆ ಸಂಸ್ಕರಿಸುವುದು ಈ ಪ್ರಕ್ರಿಯೆಯ ವೈಶಿಷ್ಟ್ಯ. ಮಾಹಿತಿಯ ಸಣ್ಣ ತುಣುಕುಗಳ ಬದಲು ಅಂತಹ ತುಣುಕುಗಳ ತಂಡವನ್ನು (ಬ್ಯಾಚ್) ಸಂಸ್ಕರಿಸುವ ಈ ವಿಧಾನವನ್ನು 'ಬ್ಯಾಚ್ ಪ್ರಾಸೆಸಿಂಗ್' ಎಂದು ಕರೆಯುತ್ತಾರೆ. ಸಂಬಂಧಪಟ್ಟ ಪ್ರೋಗ್ರಾಮುಗಳನ್ನು ನಿರ್ದಿಷ್ಟ ಅವಧಿಗೊಮ್ಮೆ ಸ್ವಯಂಚಾಲಿತವಾಗಿ ಕಾರ್ಯಗತಗೊಳಿಸುವ ಮೂಲಕ ಇದನ್ನು ಸಾಧ್ಯವಾಗಿಸಲಾಗುತ್ತದೆ. ಇಂತಹ ಎರಡು ಬ್ಯಾಚ್‌ಗಳ ನಡುವಿನ ಅವಧಿ ಕೆಲ ಗಂಟೆಗಳಿಂದ ಪ್ರಾರಂಭಿಸಿ ಕೆಲ ತಿಂಗಳುಗಳವರೆಗೂ ಇರುವುದು ಸಾಧ್ಯ. ಕೆಲಸದ ಅವಧಿಯಲ್ಲಿ ಸಂಗ್ರಹವಾಗುವ ಅಷ್ಟೂ ದತ್ತಾಂಶವನ್ನು ರಾತ್ರಿಯ ವೇಳೆ ಬ್ಯಾಚ್ ಪ್ರಾಸೆಸಿಂಗ್ ಮೂಲಕ ಸಂಸ್ಕರಿಸುವ ಅಭ್ಯಾಸ ದೊಡ್ಡದೊಡ್ಡ ಸಂಸ್ಥೆಗಳಲ್ಲಿ ಸಾಮಾನ್ಯ. ಮರುದಿನ ಕಚೇರಿ ಪ್ರಾರಂಭವಾಗುವ ವೇಳೆಗೆ ಅಗತ್ಯ ಮಾಹಿತಿಯೆಲ್ಲ ಸಿದ್ಧವಿರುವಂತೆ ನೋಡಿಕೊಳ್ಳುವುದು ಈ ಮೂಲಕ ಸಾಧ್ಯವಾಗುತ್ತದೆ. ಇಷ್ಟೆಲ್ಲ ಕಾಯುವಿಕೆ ಕಷ್ಟ ಎನ್ನುವ ಸಂಸ್ಥೆಗಳಲ್ಲಿ ದಿನಕ್ಕೆ ಒಂದಕ್ಕಿಂತ ಹೆಚ್ಚು ಬಾರಿ ಬ್ಯಾಚ್ ಪ್ರಾಸೆಸಿಂಗ್ ನಡೆಯುವುದೂ ಉಂಟು.
25 Beta Version ಬೀಟಾ ವರ್ಶನ್ ತಂತ್ರಾಂಶ ಅಭಿವೃದ್ಧಿಯ ಪ್ರಕ್ರಿಯೆಯಲ್ಲಿ ಬಿಡುಗಡೆಗೆ ಸಿದ್ಧವಾಗುವುದಕ್ಕೆ ಹಿಂದಿನ ಹಂತ; ಈ ಹಂತದಲ್ಲಿ ತಂತ್ರಾಂಶ ಅಭಿವೃದ್ಧಿ ಬಹುಪಾಲು ಪೂರ್ಣಗೊಂಡಿರುತ್ತದೆ ಹಾಗೂ ಪ್ರಾಥಮಿಕ ಹಂತದ ಪರೀಕ್ಷೆಗಳು ಯಶಸ್ವಿಯಾಗಿ ಮುಗಿದಿರುತ್ತವೆ. ತಂತ್ರಾಂಶಗಳ ಬಗ್ಗೆ ಮಾತನಾಡುವಾಗ ಹಲವಾರು ಬಾರಿ 'ಬೀಟಾ ವರ್ಶನ್' ಎಂಬ ಹೆಸರಿನ ಪ್ರಸ್ತಾಪ ಬರುವುದನ್ನು ನೀವು ಗಮನಿಸಿರಬಹುದು. ಮೊಬೈಲ್ ಆಪ್‌ಗಳ 'ಬೀಟಾ ರಿಲೀಸ್' ಅನ್ನು ನೀವು ಬಳಸಿರಲೂಬಹುದು. ಯಾವುದೇ ತಂತ್ರಾಂಶವನ್ನು ಅಭಿವೃದ್ಧಿಪಡಿಸುವಾಗ ಅದರ ಪ್ರಗತಿಯನ್ನು ನಿರ್ದಿಷ್ಟ ಹಂತಗಳಲ್ಲಿ ಸೂಚಿಸುವುದು ವಾಡಿಕೆ. ತಂತ್ರಾಂಶ ಅಭಿವೃದ್ಧಿ ಮುಗಿದು ಅದು ಬಿಡುಗಡೆಗೆ ಸಿದ್ಧವಾಗುತ್ತದಲ್ಲ, ಅದಕ್ಕೆ ಹಿಂದಿನ ಹಂತವೇ 'ಬೀಟಾ'. ತಂತ್ರಾಂಶವೊಂದು ಬೀಟಾ ಹಂತದಲ್ಲಿದೆ ಎಂದರೆ ಅದರ ಅಭಿವೃದ್ಧಿ ಬಹುಪಾಲು ಪೂರ್ಣಗೊಂಡಿದೆ ಹಾಗೂ ಪ್ರಾಥಮಿಕ ಹಂತದ ಪರೀಕ್ಷೆಗಳಲ್ಲಿ (ಟೆಸ್ಟಿಂಗ್) ಅದು ಯಶಸ್ವಿಯಾಗಿದೆ ಎಂದರ್ಥ. ಬೀಟಾ ಹಂತದಲ್ಲಿ ಹೆಚ್ಚು ಕೂಲಂಕಷವಾದ ಪರೀಕ್ಷೆಯ ಅಗತ್ಯವಿರುತ್ತದೆ. ಹಾಗಾಗಿ ತಂತ್ರಾಂಶ ನಿರ್ಮಾತೃಗಳು ಈ ಹಂತದ ತಂತ್ರಾಂಶವನ್ನು ಬಳಕೆದಾರರಿಗೆ ನೀಡಿ ಅವರಿಂದ ಮರುಮಾಹಿತಿಯನ್ನು ನಿರೀಕ್ಷಿಸುತ್ತಾರೆ. ಈ ಮೂಲಕ ತಂತ್ರಾಂಶದ ಹೆಚ್ಚುವರಿ ಪರೀಕ್ಷೆಯೂ ಆಗುತ್ತದೆ, ಇನ್ನೂ ಬಿಡುಗಡೆಯಾಗದ ತಂತ್ರಾಂಶವನ್ನು ಎಲ್ಲರಿಗಿಂತ ಮೊದಲು ಬಳಸಿದ ಖುಷಿ ಅದನ್ನು ಪರೀಕ್ಷಿಸಿದವರಿಗೂ ಸಿಗುತ್ತದೆ (ಬೀಟಾ ಆವೃತ್ತಿಯ ಪರೀಕ್ಷೆ ಎಲ್ಲರೂ ಬಳಸುವ ತಂತ್ರಾಂಶಗಳಿಗೆ ಮಾತ್ರ ಸೀಮಿತವೇನಲ್ಲ: ಸಾಫ್ಟ್‌ವೇರ್ ಸಂಸ್ಥೆಗಳು ನಿರ್ದಿಷ್ಟ ಗ್ರಾಹಕರಿಗೆಂದು ನಿರ್ಮಿಸುವ ತಂತ್ರಾಂಶಗಳೂ ಬೀಟಾ ಪರೀಕ್ಷೆಗೆ ಒಡ್ಡಿಕೊಳ್ಳುತ್ತವೆ). ಅಂದಹಾಗೆ 'ಬೀಟಾ' ಎನ್ನುವುದು ಗ್ರೀಕ್ ವರ್ಣಮಾಲೆಯ ಎರಡನೇ ಅಕ್ಷರ. ಮೊದಲ ಅಕ್ಷರವಾದ 'ಆಲ್ಫಾ' ತಂತ್ರಾಂಶ ಅಭಿವೃದ್ಧಿಯಲ್ಲಿ 'ಬೀಟಾ'ಗಿಂತ ಹಿಂದಿನ ಹಂತದ ಹೆಸರು!
26 Bezel ಬೆಜೆಲ್ ಪ್ರದರ್ಶಕಗಳ (ಡಿಸ್ಪ್ಲೇ) ಪರದೆಯ ಸುತ್ತ ಇರುವ ಚೌಕಟ್ಟು ದಿವಾನಖಾನೆಯ ಟೀವಿ, ಕಂಪ್ಯೂಟರಿನ ಮಾನಿಟರ್, ಅಂಗೈಯ ಸ್ಮಾರ್ಟ್‌ಫೋನ್ - ಹೀಗೆ ಒಂದಲ್ಲ ಒಂದು ರೀತಿಯ ಪ್ರದರ್ಶಕಗಳು (ಡಿಸ್ಪ್ಲೇ) ನಮ್ಮ ಕಣ್ಣಿಗೆ ಬೀಳುತ್ತಲೇ ಇರುತ್ತವೆ. ಅವು ಬಳಸುವ ತಂತ್ರಜ್ಞಾನ ಬೇರೆಯದಿರಬಹುದು; ಆದರೆ ಅಂತಹ ಎಲ್ಲ ಪ್ರದರ್ಶಕಗಳಲ್ಲೂ ಪರದೆಯ ಸುತ್ತ ಒಂದು ಚೌಕಟ್ಟು ಇರುವುದು ಸರ್ವೇಸಾಮಾನ್ಯ. ಈ ಚೌಕಟ್ಟನ್ನು ಬೆಜ಼ೆಲ್ (bezeಟ) ಎಂದು ಗುರುತಿಸುತ್ತಾರೆ. ಪ್ರದರ್ಶಕದ ಪರದೆಗೆ ಆಧಾರವಾಗಿರುವುದು, ಇಡೀ ಸಾಧನದ ವಿನ್ಯಾಸಕ್ಕೆ ಚೆಂದದ ರೂಪ ಕೊಡುವುದು, ಆಕಸ್ಮಿಕವಾಗಿ ಬೇರಾವುದೋ ವಸ್ತು ತಗುಲಿ ಪರದೆಯ ಅಂಚುಗಳು ಹಾಳಾಗದಂತೆ ನೋಡಿಕೊಳ್ಳುವುದು - ಹೀಗೆ ಬೆಜ಼ೆಲ್ ಬಳಕೆಯ ಹಿಂದೆ ಅನೇಕ ಉದ್ದೇಶಗಳಿರುವುದು ಸಾಧ್ಯ. ಅಷ್ಟೇ ಏಕೆ, ಸ್ಮಾರ್ಟ್‌ಫೋನು - ಟ್ಯಾಬ್ಲೆಟ್ಟುಗಳನ್ನು ಕೈಲಿ ಹಿಡಿದಾಗ ನಮ್ಮ ಬೆರಳುಗಳು ಟಚ್ ಸ್ಕ್ರೀನ್ ಅನ್ನು ಅನಪೇಕ್ಷಿತವಾಗಿ ಸ್ಪರ್ಶಿಸುವುದನ್ನೂ ಬೆಜ಼ೆಲ್ ತಡೆಯುತ್ತದೆ. ಇಂಚುಗಟ್ಟಲೆ ಬೆಜ಼ೆಲ್ ಇರುತ್ತಿದ್ದ ಹಿಂದಿನ ಕಾಲದ ಟೀವಿಗಳಿಗೆ ಹೋಲಿಸಿದರೆ ಈಗ ವಿನ್ಯಾಸಗಳು ಗಮನಾರ್ಹವಾಗಿ ಬದಲಾಗಿವೆ. ಟೀವಿ ಇರಲಿ ಸ್ಮಾರ್ಟ್ ಫೋನ್ ಇರಲಿ ಎಲ್ಲ ಪ್ರದರ್ಶಕಗಳಲ್ಲೂ ಆದಷ್ಟೂ ಕಡಿಮೆ ಬೆಜ಼ೆಲ್ ಇರಬೇಕು ಎನ್ನುವುದು ಈಗಿನ ಫ್ಯಾಶನ್. ಈ ಬೇಡಿಕೆಯನ್ನು ಪೂರೈಸುವ ಅನೇಕ ಉತ್ಪನ್ನಗಳನ್ನು ನಾವೀಗ ಮಾರುಕಟ್ಟೆಯಲ್ಲಿ ನೋಡಬಹುದು. ಇಲ್ಲವೇ ಇಲ್ಲವೆನ್ನುವಷ್ಟು ತೆಳುವಾದ ಚೌಕಟ್ಟಿನ ಇಂತಹ ಉತ್ಪನ್ನಗಳನ್ನು 'ಬೆಜ಼ೆಲ್-ಲೆಸ್' ಎಂದು ಕರೆಯುವುದು ವಾಡಿಕೆ.
27 Big Data ಬಿಗ್ ಡೇಟಾ ಬಹಳ ಕ್ಷಿಪ್ರವಾಗಿ ಹಾಗೂ ಅತ್ಯಂತ ದೊಡ್ಡ ಪ್ರಮಾಣದಲ್ಲಿ ಸೃಷ್ಟಿಯಾಗುವ, ನಿರ್ದಿಷ್ಟವಾದ ಯಾವ ಸೂತ್ರಕ್ಕೂ ಹೊಂದದ ವಿಭಿನ್ನ ರೂಪಗಳಲ್ಲಿರುವ ದತ್ತಾಂಶ ನಿತ್ಯದ ಬದುಕಿನ ಮೇಲೆ ಮಾಹಿತಿ ತಂತ್ರಜ್ಞಾನ ಬೀರಿರುವ ಪ್ರಭಾವ ಎಷ್ಟರಮಟ್ಟಿನದು ಎಂದರೆ ಒಂದಲ್ಲ ಒಂದು ಬಗೆಯ ದತ್ತಾಂಶ (ಡೇಟಾ) ನಮ್ಮನ್ನು ಸದಾಕಾಲವೂ ಆವರಿಸಿಕೊಂಡಿರುತ್ತವೆ. ಇಂತಹ ದತ್ತಾಂಶಗಳಲ್ಲಿ ಹಲವು ವಿಧ. ಈ ಪೈಕಿ ಬ್ಯಾಂಕಿನ ವಹಿವಾಟು ಅಥವಾ ದೂರವಾಣಿ ಕರೆಗಳ ಪಟ್ಟಿಯಂಥವು ಪರವಾಗಿಲ್ಲ, ಏಕೆಂದರೆ ಅವುಗಳಿಗೊಂದು ನಿರ್ದಿಷ್ಟ ರೂಪ ಇರುತ್ತದೆ. ಆದರೆ ವಾಟ್ಸ್‌ಆಪ್ ಮೆಸೇಜು - ಫೇಸ್‌ಬುಕ್ ಸಂದೇಶಗಳು ಹಾಗಲ್ಲ, ಅವು ನಿರ್ದಿಷ್ಟವಾದ ಯಾವ ಸೂತ್ರಕ್ಕೂ ಹೊಂದದ ವಿಭಿನ್ನ ರೂಪಗಳಲ್ಲಿರುವುದು ಸಾಧ್ಯ. ಸರ್ಚ್ ಇಂಜನ್ ಹುಡುಕಾಟಗಳು ಹಾಗೂ ಆನ್‌ಲೈನ್ ಅಂಗಡಿಗಳಲ್ಲಿ ಮಾರಾಟವಾಗುವ ಸರಕುಗಳ ವಿವರವೂ ಹೀಗೆಯೇ. ಈ ಬಗೆಯ ದತ್ತಾಂಶ ಸಾಮಾನ್ಯ ದತ್ತಾಂಶಗಳ ಹೋಲಿಕೆಯಲ್ಲಿ ಬಹಳ ಕ್ಷಿಪ್ರವಾಗಿ ಹಾಗೂ ಅತ್ಯಂತ ದೊಡ್ಡ ಪ್ರಮಾಣದಲ್ಲಿ ಸೃಷ್ಟಿಯಾಗುತ್ತದೆ. ಹೀಗೆ ನಿರಂತರವಾಗಿ ಹರಿದುಬರುವ, ಇಷ್ಟೆಲ್ಲ ದೊಡ್ಡ ಪ್ರಮಾಣದಲ್ಲಿರುವ ಈ ದತ್ತಾಂಶವನ್ನು 'ಬಿಗ್ ಡೇಟಾ' ಎಂದು ಕರೆಯುತ್ತಾರೆ. ಇದನ್ನು ಸೂಕ್ತವಾಗಿ ವಿಶ್ಲೇಷಿಸಿದರೆ ಆಯಾ ಕ್ಷೇತ್ರದ ಒಟ್ಟಾರೆ ಗತಿಯನ್ನು ಕುರಿತು ಉಪಯುಕ್ತವಾದ ಒಳನೋಟಗಳನ್ನು ಪಡೆದುಕೊಳ್ಳುವುದು ಸಾಧ್ಯವಾಗುತ್ತದೆ. ಅಂದಹಾಗೆ ಬಿಗ್‌ಡೇಟಾ ಅನ್ನು ಸಾಂಪ್ರದಾಯಿಕ ವಿಧಾನಗಳಲ್ಲಿ (ಉದಾ: ದತ್ತಸಂಚಯ, ಅಂದರೆ ಡೇಟಾಬೇಸ್‌ನಲ್ಲಿ) ಶೇಖರಿಸಿ ಸಂಸ್ಕರಿಸುವುದೂ ಕಷ್ಟ. ಇದನ್ನು ಸಂಸ್ಕರಿಸಿ ವಿಶ್ಲೇಷಿಸಲೆಂದೇ ಪ್ರತ್ಯೇಕ ಕಂಪ್ಯೂಟರ್ ವ್ಯವಸ್ಥೆಗಳು ಹಾಗೂ ತಂತ್ರಾಂಶಗಳನ್ನು ಬಳಸಲಾಗುತ್ತದೆ.
28 Binary system ಬೈನರಿ ಸಿಸ್ಟಂ ೧ ಹಾಗೂ ೦ ಎಂಬ ಎರಡೇ ಅಂಕಿಗಳನ್ನು ಬಳಸುವ ಸಂಖ್ಯಾವ್ಯವಸ್ಥೆ ಕಂಪ್ಯೂಟರಿನ ಸ್ಮೃತಿ, ಅಂದರೆ ಮೆಮೊರಿಯಲ್ಲಿ, ಯಾವುದೇ ಮಾಹಿತಿ ಉಳಿಯಬೇಕಾದರೂ ಅದು ದ್ವಿಮಾನ (ಬೈನರಿ) ಪದ್ಧತಿಯ ಅಂಕೆಗಳ (೧ ಅಥವಾ ೦) ರೂಪದಲ್ಲಿ ಮಾತ್ರ ಶೇಖರವಾಗುವುದು ಸಾಧ್ಯ. ನಾವು ಏನೇನೆಲ್ಲ ಟೈಪುಮಾಡುತ್ತೇವೆ, ಎಷ್ಟೆಲ್ಲ ತಂತ್ರಾಂಶಗಳ ಮೂಲಕ ಆದೇಶಗಳನ್ನು ಕೊಡುತ್ತೇವೆ - ಅದೆಲ್ಲ ಕಂಪ್ಯೂಟರಿಗೆ ಅರ್ಥವಾಗಬೇಕಾದರೆ ಮೊದಲಿಗೆ ದ್ವಿಮಾನ ಪದ್ಧತಿಯ ಸಂಖ್ಯೆಗಳಾಗಿ ಬದಲಾದಾಗಬೇಕಾದ್ದು ಅನಿವಾರ್ಯ. ನಾವು ಟೈಪ್ ಮಾಡುವ ಪಠ್ಯದ ಪ್ರತಿ ಅಕ್ಷರವನ್ನೂ ದ್ವಿಮಾನ ಪದ್ಧತಿಯ ಒಂದೊಂದು ಸಂಖ್ಯೆ ಪ್ರತಿನಿಧಿಸುತ್ತದೆ. ನಿಮ್ಮ ಪಠ್ಯ ಯಾವ ಭಾಷೆಯಲ್ಲೇ ಇದ್ದರೂ ಕಂಪ್ಯೂಟರ್ ಉಳಿಸಿಟ್ಟುಕೊಳ್ಳುವುದು ಆ ಅಕ್ಷರ-ಅಕ್ಷರಭಾಗಗಳನ್ನು ಪ್ರತಿನಿಧಿಸುವ ಸಂಖ್ಯೆಯನ್ನಷ್ಟೇ. ತಂತ್ರಾಂಶಗಳ - ಪ್ರೋಗ್ರಾಮುಗಳ ಕತೆಯೂ ಇಷ್ಟೇ, ಅವನ್ನು ಯಾವುದೇ ಪ್ರೋಗ್ರಾಮಿಂಗ್ ಭಾಷೆಯಲ್ಲಿ ಬರೆದಿದ್ದರೂ ಅದು ಕಂಪ್ಯೂಟರಿಗೆ ಅರ್ಥವಾಗುವುದು ದ್ವಿಮಾನ ಪದ್ಧತಿಯ ಅಂಕಿಗಳ ರೂಪಕ್ಕೆ ಬದಲಾದಾಗ ಮಾತ್ರ. ನಮಗೆ ಕನ್ನಡ ಇಂಗ್ಲಿಷ್ ಮೊದಲಾದವೆಲ್ಲ ಇದ್ದಹಾಗೆ ಇದು ಕಂಪ್ಯೂಟರಿನ ಭಾಷೆ. ಹಾಗಾಗಿಯೇ ಇದನ್ನು ಯಂತ್ರಭಾಷೆ (ಮಷೀನ್ ಲ್ಯಾಂಗ್ವೆಜ್) ಎಂದು ಕರೆಯಲಾಗುತ್ತದೆ. ಮಾಹಿತಿಯ ಪ್ರಮಾಣವನ್ನು ಅಳೆಯಲು ಬಳಕೆಯಾಗುವ ಅತ್ಯಂತ ಸಣ್ಣ ಏಕಮಾನ 'ಬಿಟ್' ಇದೆಯಲ್ಲ, ಅದರ ಹೆಸರಿನ ಮೂಲವೂ ದ್ವಿಮಾನ ಪದ್ಧತಿಯಲ್ಲೇ ಇದೆ. ದ್ವಿಮಾನ ಅಂಕೆಯ ಆಂಗ್ಲ ಹೆಸರು ಬೈನರಿ ಡಿಜಿಟ್. ಈ ಹೆಸರಿನ ಮೊದಲ ಎರಡು ಹಾಗೂ ಕೊನೆಯದೊಂದು ಅಕ್ಷರಗಳನ್ನು ಸೇರಿಸಿ ಬಿಟ್ ಎಂಬ ಹೆಸರು ರೂಪಗೊಂಡಿದೆ.
29 Biometrics ಬಯೋಮೆಟ್ರಿಕ್ಸ್ ಪ್ರತಿಯೊಬ್ಬರಿಗೂ ವಿಶಿಷ್ಟವಾಗಿರುವ ಬೆರಳ ಗುರುತು, ಅಕ್ಷಿಪಟಲ, ಮುಖಚರ್ಯೆ ಮುಂತಾದ ವಿಷಯಗಳನ್ನು ಸುರಕ್ಷತಾ ಕ್ರಮಗಳಲ್ಲಿ ಬಳಸುವ ಪರಿಕಲ್ಪನೆ ನಮ್ಮ ಇಮೇಲ್ ಖಾತೆಯನ್ನು ಪ್ರವೇಶಿಸಬೇಕಾದರೆ ಪಾಸ್‌ವರ್ಡ್ ಗೊತ್ತಿರಲೇಬೇಕು. ಅದೇರೀತಿ ಆಕ್ಸೆಸ್ ಕಾರ್ಡ್ ಎನ್ನುವ ಗುರುತಿನ ಬಿಲ್ಲೆ ಇದ್ದರೆ ಮಾತ್ರ ಕಚೇರಿಯೊಳಗೆ ಪ್ರವೇಶಿಸಲು ಸಾಧ್ಯ. ಇನ್ನು ಎಟಿಎಂನಿಂದ ದುಡ್ಡು ತೆಗೆಯಬೇಕಾದರೆ ಕಾರ್ಡ್ ಜೊತೆಗೆ ಪಿನ್ ಸಂಖ್ಯೆಯೂ ಗೊತ್ತಿರಬೇಕು. ಇವೆಲ್ಲ 'ಅಥೆಂಟಿಕೇಶನ್' ಅಥವಾ 'ದೃಢೀಕರಣ'ವನ್ನು ಸಾಧ್ಯವಾಗಿಸುವ ವಿವಿಧ ಮಾರ್ಗಗಳು. ಆದರೆ ಇಲ್ಲಿ ಬಳಕೆಯಾಗುವ ಪಾಸ್‌ವರ್ಡನ್ನು, ಗುರುತಿನ ಬಿಲ್ಲೆಗಳನ್ನು ಯಾರಾದರೂ ಕದ್ದು ದುರುಪಯೋಗಪಡಿಸಿಕೊಳ್ಳುವುದೂ ಸಾಧ್ಯವಿದೆ. ಕದಿಯಲು ಅಥವಾ ನಕಲಿಸಲು ಸಾಧ್ಯವಿಲ್ಲದ ಅಂಶಗಳನ್ನು ಸುರಕ್ಷತೆಗಾಗಿ ಬಳಸಿ ಇಂತಹ ಪರಿಸ್ಥಿತಿಯನ್ನು ತಪ್ಪಿಸಬಹುದೇ? ಖಂಡಿತಾ ತಪ್ಪಿಸಬಹುದು. ಪ್ರತಿಯೊಬ್ಬರಿಗೂ ವಿಶಿಷ್ಟವಾಗಿರುವ ಬೆರಳ ಗುರುತು, ಅಕ್ಷಿಪಟಲ, ಮುಖಚರ್ಯೆ ಮುಂತಾದ ವಿಷಯಗಳನ್ನು ಸುರಕ್ಷತಾ ಕ್ರಮಗಳಲ್ಲಿ ಬಳಸುವುದು ಇಂತಹ ಕ್ರಮಗಳಲ್ಲೊಂದು. ಇದನ್ನು ಸಾಧ್ಯವಾಗಿಸುವ ಪರಿಕಲ್ಪನೆಯೇ ಬಯೋಮೆಟ್ರಿಕ್ಸ್. ಕಚೇರಿಗಳಲ್ಲಿ ಹಾಜರಾತಿ ದಾಖಲಿಸಲು ಬೆರಳ ಗುರುತು ಪಡೆಯುವ ಯಂತ್ರಗಳಿರುತ್ತವಲ್ಲ, ಅವು ಇದೇ ಪರಿಕಲ್ಪನೆಯನ್ನು ಬಳಸುತ್ತವೆ. ಮೊಬೈಲ್ ಫೋನ್ ಸಂಪರ್ಕ ಪಡೆಯುವಾಗ ಬೆರಳ ಗುರುತನ್ನು ನಮ್ಮ ಆಧಾರ್ ಮಾಹಿತಿಯೊಡನೆ ಹೋಲಿಸುವ ವ್ಯವಸ್ಥೆಯಲ್ಲೂ ಬಯೋಮೆಟ್ರಿಕ್ಸ್ ಬಳಕೆಯಾಗುತ್ತದೆ. ಮೊಬೈಲ್ ಫೋನು - ಲ್ಯಾಪ್‌ಟಾಪ್‌ಗಳಲ್ಲೆಲ್ಲ ಕಾಣಸಿಗುವ ಫಿಂಗರ್‌ಪ್ರಿಂಟ್ ಸೆನ್ಸರ್ ಹಿಂದಿರುವುದೂ ಇದೇ ಪರಿಕಲ್ಪನೆ. ವೀಸಾ ನೀಡುವಾಗ ಅಭ್ಯರ್ಥಿಯ ಬೆರಳ ಗುರುತುಗಳನ್ನು ಸಂಗ್ರಹಿಸುವ ಕೆಲ ದೇಶಗಳು ನಾವು ಅಲ್ಲಿಗೆ ಹೋದಾಗ ಗುರುತು ದೃಢೀಕರಿಸಲು ನಮ್ಮ ಬೆರಳೊತ್ತನ್ನು ಆ ಮಾಹಿತಿಯೊಡನೆ ಹೋಲಿಸಿ ನೋಡುವುದೂ ಉಂಟು.
30 BIOS ಬಯಾಸ್ ಬೇಸಿಕ್ ಇನ್‌ಪುಟ್/ಔಟ್‌ಪುಟ್ ಸಿಸ್ಟಂ; ಕಂಪ್ಯೂಟರನ್ನು ಬೂಟ್ ಮಾಡಲು ಅಗತ್ಯವಾದ ತಂತ್ರಾಂಶ ಕಂಪ್ಯೂಟರಿನ ಗುಂಡಿ ಒತ್ತಿದ ತಕ್ಷಣ ಅದು ಕಾರ್ಯಾಚರಣ ವ್ಯವಸ್ಥೆಯನ್ನು ಪ್ರಾರಂಭಿಸುತ್ತದೆ. 'ಬೂಟ್ ಮಾಡುವುದು' ಎಂದು ಗುರುತಿಸುವುದು ಈ ಪ್ರಕ್ರಿಯೆಯನ್ನೇ. ಈ ಪ್ರಕ್ರಿಯೆಯನ್ನು ಸುಗಮವಾಗಿ ನಡೆಸುವ ಜವಾಬ್ದಾರಿ ಬಯಾಸ್ (BIOS) ಎಂಬ ತಂತ್ರಾಂಶದ್ದು. ಇದು 'ಬೇಸಿಕ್ ಇನ್‌ಪುಟ್/ಔಟ್‌ಪುಟ್ ಸಿಸ್ಟಂ' ಎಂಬ ಹೆಸರಿನ ಹ್ರಸ್ವರೂಪ. ಕಂಪ್ಯೂಟರಿನ ಕೆಲಸ ಶುರುವಾದ ಕೂಡಲೇ ಯಂತ್ರಾಂಶ ಸಂಪರ್ಕಗಳನ್ನು ಪರಿಶೀಲಿಸುವುದು, ಅದಕ್ಕೆ ಸಂಪರ್ಕಿಸಲಾಗಿರುವ ವಿವಿಧ ಸಾಧನಗಳನ್ನು ಪತ್ತೆಮಾಡುವುದು ಈ ತಂತ್ರಾಂಶದ ಕೆಲಸ. ಇಷ್ಟೆಲ್ಲ ಕೆಲಸಕ್ಕೆ ಬೇಕಾದ ನಿರ್ದೇಶನಗಳು, ಪ್ರೋಗ್ರಾಮುಗಳು ಕಂಪ್ಯೂಟರಿನ ರೀಡ್ ಓನ್ಲಿ ಮೆಮೊರಿಯಲ್ಲಿ (ರಾಮ್) ಶೇಖರವಾಗಿರುತ್ತವೆ. ಕಂಪ್ಯೂಟರಿನ ಸಾಮಾನ್ಯ ಬಳಕೆದಾರರು ಬಯಾಸ್ ಸಂಪರ್ಕಕ್ಕೆ ಬರುವುದು ಅಪರೂಪ ಎಂದೇ ಹೇಳಬೇಕು. ಹೊಸ ಯಂತ್ರಾಂಶಗಳನ್ನು (ಉದಾ: ಹೊಸ ಹಾರ್ಡ್ ಡಿಸ್ಕ್) ಜೋಡಿಸಿದಾಗ, ಯಂತ್ರಾಂಶ ಹೊಂದಾಣಿಕೆಗಳನ್ನು ಬದಲಿಸಬೇಕಾದಾಗ ಅಥವಾ ಕಂಪ್ಯೂಟರಿನಲ್ಲಿ ಯಾಂತ್ರಿಕ ದೋಷ ಕಾಣಿಸಿಕೊಂಡಾಗ ಬಯಾಸ್ ತಂತ್ರಾಂಶವನ್ನು ತೆರೆಯುವುದು, ಅಗತ್ಯ ಬದಲಾವಣೆಗಳನ್ನು ಮಾಡುವುದು ಅನಿವಾರ್ಯವಾಗುತ್ತದೆ. ಕಂಪ್ಯೂಟರಿನ ಗುಂಡಿ ಒತ್ತಿದ ನಂತರ, ಕಾರ್ಯಾಚರಣ ವ್ಯವಸ್ಥೆ ಪ್ರಾರಂಭವಾಗುವ ಮುನ್ನ ನಿರ್ದಿಷ್ಟ ಕೀಲಿಯೊಂದನ್ನು ಒತ್ತುವ ಮೂಲಕ ಬಯಾಸ್ ಪ್ರವೇಶಿಸುವುದು ಸಾಧ್ಯ. ಈ ಕೀಲಿ ಬೇರೆಬೇರೆ ಕಂಪ್ಯೂಟರುಗಳಲ್ಲಿ ಬೇರೆಬೇರೆಯದಾಗಿರುವುದು ಸಾಧ್ಯ - ಕಂಪ್ಯೂಟರ್ ಗುಂಡಿ ಒತ್ತಿದ ತಕ್ಷಣದಲ್ಲೇ ಕಾಣಿಸಿಕೊಳ್ಳುವ ಮಾಹಿತಿಯಲ್ಲಿ ಈ ವಿವರವೂ ಸೇರಿರುತ್ತದೆ.