A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 318

Backtrace:

File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 319

Backtrace:

File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 320

Backtrace:

File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler

File: /Appdata/padakanaja.karnataka.gov.in/index.php
Line: 318
Function: require_once

Padakanaja - Dictionary View
ಅನಿಸಿಕೆ

ಪದಕೋಶ: ಕಂಪ್ಯೂಟರ್ ತಂತ್ರಜ್ಞಾನ ಪದವಿವರಣ ಕೋಶ | ಇಂಗ್ಲೀಷ್-ಕನ್ನಡ |ಪ್ರಕಾಶಕರು - ಕನ್ನಡ ಅಭಿವೃದ್ಧಿ ಪ್ರಾಧಿಕಾರ (2017)

Show entries
ಕ್ರಮ ಸ೦ಖ್ಯೆ ಇಂಗ್ಲೀಷ್ ಪದ
(English Word)
ಕನ್ನಡ ಪದ
(Kannada Word)
ಕನ್ನಡ ಅರ್ಥ
(Kannada Meaning)
ವಿಷಯ ವರ್ಗೀಕರಣ
(Word Subject)
ವ್ಯಾಕರಣ ವಿಶೇಷ
(Word Grammer)
ಕನ್ನಡ ಉಚ್ಚಾರಣೆ
(Kannada Pronunciation)
ಪರ್ಯಾಯ ಪದ
(Word Synonyms)
ಇಂಗ್ಲೀಷ್ ಅರ್ಥ
(English Meaning)
ಸಂಕ್ಷಿಪ್ತ ವಿವರಣೆ
(Short Description)
ದೀರ್ಘ ವಿವರಣೆ
(Long Description)
ಆಡಳಿತಾತ್ಮಕ ಪದ
(Administrative Word)
101 e-Ink ಇ-ಇಂಕ್ ಇಲೆಕ್ಟ್ರಾನಿಕ್ ಇಂಕ್; ವಿದ್ಯುನ್ಮಾನ ಸಾಧನಗಳಲ್ಲಿ ಬೆಳಕನ್ನು ಹೊರಸೂಸದ ಪರದೆಗಳನ್ನು ರೂಪಿಸಲು ನೆರವಾಗುವ ತಂತ್ರಜ್ಞಾನ. ಇದು ಇ-ಬುಕ್ ರೀಡರುಗಳಲ್ಲಿ ವ್ಯಾಪಕವಾಗಿ ಬಳಕೆಯಾಗುತ್ತದೆ. ಕಂಪ್ಯೂಟರ್, ಮೊಬೈಲ್ ಫೋನ್, ಟ್ಯಾಬ್ಲೆಟ್ ಮುಂತಾದ ಸಾಧನಗಳ ಪರದೆ ಬೆಳಕನ್ನು ಹೊರಸೂಸುವುದರಿಂದ ಅವುಗಳನ್ನು ದೀರ್ಘಕಾಲ ಬಳಸಿದರೆ ಕಣ್ಣಿಗೆ ಕಿರಿಕಿರಿಯಾಗುತ್ತದೆ. ಈ ಸಮಸ್ಯೆಗೆ ಪರಿಹಾರವಾಗಿ ರೂಪುಗೊಂಡಿರುವುದೇ 'ಇ-ಇಂಕ್' ತಂತ್ರಜ್ಞಾನ. ಈ ತಂತ್ರಜ್ಞಾನ ಬಳಸುವ ಪರದೆಗಳು ಬೆಳಕನ್ನು ಹೊರಸೂಸುವುದಿಲ್ಲವಾದ್ದರಿಂದ ಅವನ್ನು ನೋಡುವುದು ಕಣ್ಣಿಗೆ ಶ್ರಮವೆನಿಸುವುದಿಲ್ಲ. ಇವು ಕಡಿಮೆ ವಿದ್ಯುತ್ ಬಳಸುವುದರಿಂದ ಬ್ಯಾಟರಿಯೂ ಹೆಚ್ಚು ಕಾಲ ಬಾಳಿಕೆ ಬರುತ್ತದೆ; ಪದೇಪದೇ ಚಾರ್ಜ್ ಮಾಡುವ ತಾಪತ್ರಯವೂ ಇರುವುದಿಲ್ಲ. ಅಷ್ಟೇ ಅಲ್ಲ, ಪರದೆಯ ಮೇಲೆ ಮೂಡಿರುವ ಪಠ್ಯವನ್ನು ಬಿಸಿಲಿನಲ್ಲೂ ಶ್ರಮವಿಲ್ಲದೆ ಓದುವುದು ಸಾಧ್ಯ. ಹೀಗಾಗಿ ಇ-ಬುಕ್ ರೀಡರುಗಳಲ್ಲಿ ಈ ತಂತ್ರಜ್ಞಾನ ವ್ಯಾಪಕವಾಗಿ ಬಳಕೆಯಾಗುತ್ತದೆ. ಅಮೆಜಾನ್ ಕಿಂಡಲ್, ಕೋಬೋ ಮುಂತಾದ ನಿರ್ಮಾತೃಗಳು ಹಲವು ಮಾದರಿಯ ಇ-ಬುಕ್ ರೀಡರುಗಳನ್ನು ಮಾರುಕಟ್ಟೆಗೆ ಪರಿಚಯಿಸಿದ್ದಾರೆ. ಪಠ್ಯ-ಚಿತ್ರಗಳನ್ನು ಬಹುವರ್ಣದಲ್ಲಿ ಪ್ರದರ್ಶಿಸುವ ಇ-ಇಂಕ್ ತಂತ್ರಜ್ಞಾನವೂ ಇದೆ; ಆದರೆ ಸದ್ಯ ಮಾರುಕಟ್ಟೆಯಲ್ಲಿರುವ ಬಹುತೇಕ ಇ-ಬುಕ್ ರೀಡರುಗಳು ಕಪ್ಪು ಬಿಳುಪಿನ ಪರದೆಯನ್ನೇ ಬಳಸುತ್ತಿವೆ. ಹಲವು ಸ್ಮಾರ್ಟ್‌ವಾಚ್‌ಗಳಲ್ಲೂ ಇ-ಇಂಕ್ ಪರದೆಯನ್ನು ಬಳಸಲಾಗಿದೆ.
102 Emoji ಎಮೋಜಿ ಎಸ್ಸೆಮ್ಮೆಸ್, ಚಾಟ್ ಹಾಗೂ ವಾಟ್ಸ್‌ಆಪ್ ಮೆಸೇಜಿನಂತಹ ಮಾಧ್ಯಮಗಳಲ್ಲಿ ಭಾವನೆಗಳನ್ನು ಅಭಿವ್ಯಕ್ತಿಸಲು ನೆರವಾಗುವ ಪುಟಾಣಿ ಚಿತ್ರ; ಎಮೋಟೈಕನ್‌ಗಳ ಸುಧಾರಿತ ರೂಪ ಎಂದರೂ ಸರಿಯೇ ಎಸ್ಸೆಮ್ಮೆಸ್ ಕಳುಹಿಸುವಾಗ, ಚಾಟ್ ಮಾಡುವಾಗಲೆಲ್ಲ ಪಠ್ಯದೊಡನೆ ಕೆಲ ಭಾವನೆಗಳನ್ನೂ ಅಭಿವ್ಯಕ್ತಿಸಲು ನೆರವಾಗುವ ಪುಟ್ಟ ಚಿತ್ರಗಳನ್ನು 'ಎಮೋಜಿ'ಗಳೆಂದು ಕರೆಯುತ್ತಾರೆ. ಈ ಚಿತ್ರಾಕ್ಷರಗಳು ಮೊದಲಿಗೆ ಕಾಣಿಸಿಕೊಂಡದ್ದು ಜಪಾನ್ ದೇಶದಲ್ಲಿ. ಅಲ್ಲಿನ ಎನ್‌ಟಿಟಿ ಡೋಕೋಮೋ ಸಂಸ್ಥೆ ೧೯೯೦ರ ದಶಕದ ಕೊನೆಯಲ್ಲಿ ಇವುಗಳನ್ನು ಪರಿಚಯಿಸಿತಂತೆ. ಸ್ಮಾರ್ಟ್‌ಫೋನುಗಳ, ಮೆಸೇಜಿಂಗ್ ಸೇವೆಗಳ ಬಳಕೆ ಹೆಚ್ಚುತ್ತಿದ್ದಂತೆ ಇವು ಈಗ ಎಲ್ಲೆಲ್ಲೂ ಕಾಣಸಿಗುತ್ತಿವೆ. ಜಿಮೇಲ್, ಫೇಸ್‌ಬುಕ್ ಸೇರಿದಂತೆ ಹಲವೆಡೆ ಎಮೋಟೈಕನ್‌ಗಳನ್ನು ಟೈಪಿಸುತ್ತಿದ್ದಂತೆ ಅದು ತನ್ನಷ್ಟಕ್ಕೆ ತಾನೇ ಎಮೋಜಿ ಆಗಿ ಬದಲಾಗುವ ವ್ಯವಸ್ಥೆ ಕೂಡ ಇದೆ. ಯುನಿಕೋಡ್ ಶಿಷ್ಟತೆಯಲ್ಲೂ ಈ ಚಿತ್ರಾಕ್ಷರಗಳು ಸ್ಥಾನಪಡೆದಿವೆ. ಬೇರೆಬೇರೆ ತಂತ್ರಾಂಶ ಬಳಸುವ ಸಾಧನಗಳಲ್ಲಿ ನಾವು ಬೇರೆಬೇರೆ ವಿನ್ಯಾಸದ ಎಮೋಜಿಗಳನ್ನು ನೋಡಬಹುದು. ಆಪಲ್ ಸಂಸ್ಥೆ ತಯಾರಿಸುವ ಐಫೋನ್, ಐಪ್ಯಾಡ್ ಮುಂತಾದ ಸಾಧನಗಳಲ್ಲಿರುವ ಎಮೋಜಿಗಳ ಪೈಕಿ ಕ್ಯಾಲೆಂಡರ್ ಚಿತ್ರವಿರುವ ಎಮೋಜಿಯಲ್ಲಿ ಜುಲೈ ೧೭ ಎಂಬ ದಿನಾಂಕ ಇದೆ. ಅದಕ್ಕಾಗಿ ಆ ದಿನವನ್ನು ಎಮೋಜಿ ದಿನ ಎಂದು ಕರೆಯುತ್ತಾರೆ. ೨೦೦೨ರಲ್ಲಿ ಆಪಲ್ ಕ್ಯಾಲೆಂಡರ್ ತಂತ್ರಾಂಶ (ಐಕ್ಯಾಲ್) ಬಿಡುಗಡೆಯಾದದ್ದು ಆ ದಿನದಂದು.
103 Emoticon ಎಮೋಟೈಕನ್ ಭಾವನೆಗಳನ್ನು (ಎಮೋಶನ್) ವ್ಯಕ್ತಪಡಿಸಲು ನೆರವಾಗುವ ಸಂಕೇತಗಳು (ಐಕನ್) ಕೆಲವೇ ಪದ-ಅಕ್ಷರಗಳಲ್ಲಿ ನಮ್ಮ ಸಂದೇಶವನ್ನು ಮುಗಿಸಬೇಕಿರುವ ಎಸ್ಸೆಮ್ಮೆಸ್‌ನಂತಹ ಮಾಧ್ಯಮಗಳಲ್ಲಿ ಭಾವನೆಗಳನ್ನು ಪರಿಣಾಮಕಾರಿಯಾಗಿ ವ್ಯಕ್ತಪಡಿಸುವುದು ಕಷ್ಟ. ಈ ಸಮಸ್ಯೆಯನ್ನು ಎದುರಿಸಲು ಬಳಕೆಯಾಗುವ ಸುಲಭ ಉಪಾಯವೇ ಎಮೋಟೈಕನ್‌ಗಳ ಬಳಕೆ. ಭಾವನೆಗಳನ್ನು (ಎಮೋಶನ್) ವ್ಯಕ್ತಪಡಿಸಲು ನೆರವಾಗುವ ಈ ಸಂಕೇತಗಳ (ಐಕನ್) ಹೆಸರು ರೂಪುಗೊಂಡಿರುವುದು ಎಮೋಶನ್ ಹಾಗೂ ಐಕನ್ - ಎರಡೂ ಪದಗಳು ಸೇರಿ. ಸಂತೋಷ ವ್ಯಕ್ತಪಡಿಸಲು :-) ದುಃಖ ತೋರಿಸಲು :-( ಮುಂತಾದ ಸಂಕೇತಗಳನ್ನು ನಾವು ಎಸ್ಸೆಮ್ಮೆಸ್ ಕಳುಹಿಸುವಾಗ, ಚಾಟ್ ಮಾಡುವಾಗಲೆಲ್ಲ ಬಳಸುತ್ತೇವಲ್ಲ, ಅವೆಲ್ಲ ಎಮೋಟೈಕನ್‌ಗಳೇ. ಗಹಗಹಿಸಿ ನಗುವ ಮುಖ, ಆಶ್ಚರ್ಯದಿಂದ ಬಾಯಿತೆರೆದಿರುವ ಮುಖ, ಕಿಲಾಡಿತನದಿಂದ ಕಣ್ಣುಹೊಡಿಯುತ್ತಿರುವ ಮುಖ, ಕನ್ನಡಕ ಧರಿಸಿ ಸ್ಮಾರ್ಟ್ ಆಗಿರುವ ಮುಖ, ಮೀಸೆಧಾರಿಯ ನಗುಮುಖಗಳೂ ಎಮೋಟೈಕನ್ ಲೋಕದಲ್ಲಿವೆ. ಇಂತಹ ಎಲ್ಲ ಸಂಕೇತಗಳನ್ನೂ ಅಕ್ಷರ, ಅಂಕಿ ಹಾಗೂ ಲೇಖನ ಚಿಹ್ನೆಗಳ ಜೋಡಣೆಯಿಂದ ರೂಪಿಸಲಾಗಿರುತ್ತದೆ ಎನ್ನುವುದು ವಿಶೇಷ. ಈಗ ಪರಿಚಿತವಾಗಿರುವ ರೂಪದಲ್ಲಿ ಎಮೋಟೈಕನ್‌ಗಳ ಸೃಷ್ಟಿಯಾದದ್ದು ೧೯೮೨ರಲ್ಲಿ. ಅವನ್ನು ರೂಪಿಸಿದ್ದು ಅಮೆರಿಕಾದ ಸ್ಕಾಟ್ ಫಾಲ್‌ಮನ್ ಎನ್ನುವ ವಿಜ್ಞಾನಿ.
104 Encoding ಎನ್‌ಕೋಡಿಂಗ್ ಕಂಪ್ಯೂಟರಿನಂತಹ ಸಾಧನಗಳಲ್ಲಿ ದಾಖಲಿಸಿದ ಪಠ್ಯವನ್ನು ದ್ವಿಮಾನ ಪದ್ಧತಿಯ ಅಂಕಿಗಳ ರೂಪಕ್ಕೆ ಪರಿವರ್ತಿಸುವ ಪ್ರಕ್ರಿಯೆ ಕಂಪ್ಯೂಟರಿನಲ್ಲಾಗಲಿ ಸ್ಮಾರ್ಟ್‌ಫೋನಿನಲ್ಲೇ ಆಗಲಿ, ನಾವು ಟೈಪ್ ಮಾಡಿದ ಪಠ್ಯ ಅಂತಿಮವಾಗಿ ಶೇಖರವಾಗುವುದು ದ್ವಿಮಾನ ಪದ್ಧತಿಯ (ಬೈನರಿ) ಅಂಕಿಗಳ ರೂಪದಲ್ಲೇ. ಹೀಗೆ ಶೇಖರವಾಗುವ ಪ್ರತಿ ಅಕ್ಷರ, ಅಂಕಿ ಹಾಗೂ ವ್ಯಾಕರಣ ಚಿಹ್ನೆಯನ್ನೂ ನಿರ್ದಿಷ್ಟವಾದ ಒಂದು ಸಂಖ್ಯೆ ಪ್ರತಿನಿಧಿಸುತ್ತದೆ. ಪಠ್ಯವನ್ನು ಹೀಗೆ ಸಂಖ್ಯಾರೂಪಕ್ಕೆ ಪರಿವರ್ತಿಸುವ ಪ್ರಕ್ರಿಯೆಯಿದೆಯಲ್ಲ, ಅದನ್ನು 'ಎನ್‌ಕೋಡಿಂಗ್' ಎಂದು ಕರೆಯುತ್ತಾರೆ. ಇಲ್ಲಿ ನಿರ್ದಿಷ್ಟ ಸೂತ್ರ ಬಳಸಿಕೊಂಡು ಮೂಲ ದತ್ತಾಂಶವನ್ನು ಮುಂದಿನ ಬಳಕೆಗಾಗಿ (ಉದಾ: ಹಾರ್ಡ್ ಡಿಸ್ಕ್‌ನಲ್ಲಿ ಉಳಿಸಿಡಲು) ಪರಿವರ್ತಿಸಲಾಗುತ್ತದೆ. ಹೀಗೆ ಪರಿವರ್ತಿಸುವಾಗ ಯಾವ ಅಕ್ಷರವನ್ನು ಯಾವ ಸಂಖ್ಯೆ ಪ್ರತಿನಿಧಿಸಬೇಕು ಎಂದು ತಿಳಿಸುವ ಕೆಲಸವನ್ನು ಎನ್‌ಕೋಡಿಂಗ್ ವ್ಯವಸ್ಥೆಗಳು ಮಾಡುತ್ತವೆ. ನಾವು ಆಗಿಂದಾಗ್ಗೆ ಕೇಳುವ ಹೆಸರುಗಳಾದ ಆಸ್ಕಿ (ಅಮೆರಿಕನ್ ಸ್ಟಾಂಡರ್ಡ್ ಕೋಡ್ ಫಾರ್ ಇನ್‌ಫರ್ಮೇಶನ್ ಇಂಟರ್‌ಚೇಂಜ್), ಯುನಿಕೋಡ್ ಮುಂತಾದವೆಲ್ಲ ಎನ್‌ಕೋಡಿಂಗ್ ವ್ಯವಸ್ಥೆಗಳೇ. ಆಸ್ಕಿಯ ಉದಾಹರಣೆಯನ್ನೇ ತೆಗೆದುಕೊಂಡರೆ ೦ಯಿಂದ ೧೨೭ರವರೆಗಿನ ಸಂಖ್ಯೆಗಳು ಅಲ್ಲಿ ಇಂಗ್ಲಿಷ್ ವರ್ಣಮಾಲೆ, ಅಂಕಿಗಳು ಹಾಗೂ ಕೆಲವು ಚಿಹ್ನೆಗಳನ್ನು ಪ್ರತಿನಿಧಿಸುತ್ತವೆ. ಸೀಮಿತ ಸಂಖ್ಯೆಯ ಅಕ್ಷರ ಹಾಗೂ ಚಿಹ್ನೆಗಳನ್ನಷ್ಟೇ ಪ್ರತಿನಿಧಿಸುವ ಈ ವ್ಯವಸ್ಥೆಗೆ ತದ್ವಿರುದ್ಧವಾಗಿ ವಿಶ್ವದ ಹಲವು ಲಿಪಿಗಳನ್ನು ಒಂದೇ ಎನ್‌ಕೋಡಿಂಗ್ ವ್ಯವಸ್ಥೆ ಮೂಲಕ ಪ್ರತಿನಿಧಿಸುತ್ತಿರುವುದು ಯುನಿಕೋಡ್‌ನ ಹೆಗ್ಗಳಿಕೆ. ಹೀಗಾಗಿಯೇ ಒಂದೇ ಕಡತದಲ್ಲಿ ಹಲವು ಭಾಷೆಗಳ ಪಠ್ಯವನ್ನು - ನಿರ್ದಿಷ್ಟ ಫಾಂಟ್‌ಗಳನ್ನೇ ಉಪಯೋಗಿಸಬೇಕೆಂಬ ನಿರ್ಬಂಧವಿಲ್ಲದೆ - ಉಳಿಸಿಡುವುದನ್ನು ಯುನಿಕೋಡ್ ಸಾಧ್ಯವಾಗಿಸುತ್ತದೆ.
105 Encryption ಎನ್‌ಕ್ರಿಪ್ಶನ್ ಜಾಲಗಳ ಮೂಲಕ ಮಾಹಿತಿ ರವಾನಿಸುವಾಗ ನಿರ್ದಿಷ್ಟ ಸೂತ್ರ ಬಳಸಿ ಗೂಢಲಿಪಿಯನ್ನಾಗಿ ಪರಿವರ್ತಿಸುವ ಮೂಲಕ ಅದು ವಿಳಾಸದಾರರಿಗೆ ಮಾತ್ರ ತಲುಪುವಂತೆ ನೋಡಿಕೊಳ್ಳುವ ಪ್ರಕ್ರಿಯೆ ಅಂತರಜಾಲ ಸಂಪರ್ಕವಿಲ್ಲದ ಕಾಲದಲ್ಲಿ ನಮ್ಮ ಕಂಪ್ಯೂಟರಿನ ತಂತ್ರಾಂಶಗಳನ್ನು ಹೇಗೆ ಬಳಸುತ್ತಿದ್ದೆವೋ ವಿವಿಧ ಜಾಲತಾಣಗಳನ್ನು ಈಗ ಅಷ್ಟೇ ಸರಾಗವಾಗಿ ಬಳಸುತ್ತೇವೆ. ಆದರೆ ಅಂತರಜಾಲ ಸಂಪರ್ಕವಿಲ್ಲದ ಕಂಪ್ಯೂಟರಿನಲ್ಲಿ ತಂತ್ರಾಂಶ ಬಳಸುವುದಕ್ಕೂ ಜಾಲತಾಣಗಳನ್ನು ಬಳಸುವುದಕ್ಕೂ ಒಂದು ಮುಖ್ಯ ವ್ಯತ್ಯಾಸವಿದೆ. ಜಾಲತಾಣಗಳ ಮೂಲಕ ವ್ಯವಹರಿಸುವಾಗ ಅಪಾರ ಪ್ರಮಾಣದ ಮಾಹಿತಿಯನ್ನು ನಾವು ನಮ್ಮ ಕಂಪ್ಯೂಟರಿನಿಂದ ಹೊರಕ್ಕೆ ಕಳುಹಿಸುತ್ತೇವೆ ಎನ್ನುವುದೇ ಆ ವ್ಯತ್ಯಾಸ. ಹೀಗೆ ಹೊರಹೋಗುವ ಮಾಹಿತಿಯಲ್ಲಿ ಒಂದಷ್ಟು ನಮ್ಮ ಖಾಸಗಿ ಮಾಹಿತಿಯಾಗಿರುತ್ತದೆ, ಇನ್ನಷ್ಟು ಹಣಕಾಸು ವ್ಯವಹಾರಗಳಿಗೆ ಸಂಬಂಧಪಟ್ಟದ್ದೂ ಇರುತ್ತದೆ. ಈ ಮಾಹಿತಿಯೆಲ್ಲ ಕಿಡಿಗೇಡಿಗಳ ಕೈಗೆ ಸಿಕ್ಕದಂತೆ, ನಾವು ಯಾರಿಗೆ ಕಳುಹಿಸಿದ್ದೆವೋ ಅವರಿಗೆ ಮಾತ್ರ ತಲುಪುವಂತೆ ನೋಡಿಕೊಳ್ಳಲು ಎನ್‌ಕ್ರಿಪ್‌ಶನ್, ಅಂದರೆ ಗೂಢ ಲಿಪೀಕರಣವನ್ನು ಬಳಸಲಾಗುತ್ತದೆ. ಕಳುಹಿಸಲಾಗುವ ಮಾಹಿತಿಯನ್ನು ನಿರ್ದಿಷ್ಟ ಸೂತ್ರ ಬಳಸಿ ಗೂಢಲಿಪಿಯನ್ನಾಗಿ ಪರಿವರ್ತಿಸುವುದು ಎನ್‌ಕ್ರಿಪ್‌ಶನ್‌ನ ಮೂಲ ಮಂತ್ರ. ಮನೆಯ ಬಾಗಿಲಿಗೆ ಎರಡು ಡೋರ್‌ಲಾಕ್ ಇರುತ್ತದಲ್ಲ, ಹಾಗೆ ಗೂಢಲಿಪಿಯನ್ನಾಗಿ ಪರಿವರ್ತಿಸುವ ಸೂತ್ರದಲ್ಲೂ ಎರಡು ಭಾಗಗಳಿರುತ್ತವೆ. ಇವೆರಡೂ ಬೀಗದ ಕೀಲಿಗಳು ಸಿಕ್ಕವರು ಮಾತ್ರ ಗೂಢಲಿಪಿಯನ್ನು ಮತ್ತೆ ಮೂಲರೂಪಕ್ಕೆ ಬದಲಿಸಿಕೊಳ್ಳುವುದು ಸಾಧ್ಯವಾಗುತ್ತದೆ. ಮಾಹಿತಿ ಸಂವಹನದಲ್ಲಿ ಎನ್‌ಕ್ರಿಪ್‌ಶನ್‌ನ ಹಲವು ವಿಧಾನಗಳು ಬಳಕೆಯಾಗುತ್ತವೆ. ನಾವು ಯಾರಿಗೆ ಕಳುಹಿಸಿದ್ದೆವೋ ಅವರು ನಾವು ಕಳುಹಿಸಿದ ಮಾಹಿತಿಯನ್ನು ಹೇಗೆ ಪಡೆದುಕೊಳ್ಳುತ್ತಾರೆ ಎನ್ನುವುದು ಆಯಾ ವಿಧಾನವನ್ನು ಅವಲಂಬಿಸಿರುತ್ತದೆ. 'ಪಬ್ಲಿಕ್ ಕೀ ಎನ್‌ಕ್ರಿಪ್‌ಶನ್' ಎನ್ನುವ ವಿಧಾನದಲ್ಲಿ ಮೇಲಿನ ಉದಾಹರಣೆಯ ಎರಡು ಬೀಗಗಳ ಪೈಕಿ ಒಂದರ ಕೀಲಿ ಮೂಲ ವಿಳಾಸದಾರರ ಬಳಿಯಲ್ಲಿ ಮಾತ್ರವೇ ಇರುವಂತೆ ನೋಡಿಕೊಳ್ಳಲಾಗುತ್ತದೆ.
106 End User ಎಂಡ್ ಯೂಸರ್ ಯಾವುದೇ ತಂತ್ರಾಂಶ ಅಥವಾ ತಂತ್ರಾಂಶ ಸೇವೆಯ ಬಳಕೆದಾರರನ್ನು ಸೂಚಿಸುವ ಹೆಸರು ತಂತ್ರಾಂಶಗಳನ್ನು ಇನ್‌ಸ್ಟಾಲ್ ಮಾಡಿಕೊಳ್ಳುವಾಗ, ಜಾಲತಾಣಗಳಲ್ಲಿ ನೋಂದಾಯಿಸಿಕೊಳ್ಳುವಾಗ ಬಳಕೆಯ ನಿಯಮ-ನಿಬಂಧನೆಗಳನ್ನು ಕುರಿತ ವಿಸ್ತೃತ ಮಾಹಿತಿ ನಮಗೆ ಕಾಣಸಿಗುವುದು ಸಾಮಾನ್ಯ. ಇನ್‌ಸ್ಟಾಲ್ ಮಾಡುವ ಅಥವಾ ನೋಂದಣಿಯ ಪ್ರಕ್ರಿಯೆ ಪೂರ್ಣಗೊಳ್ಳುವುದು ಇದನ್ನೆಲ್ಲ ಓದಿ ಒಪ್ಪಿದ್ದೇನೆ ಎಂದು ದೃಢೀಕರಿಸಿದ ನಂತರವೇ. ನಿರ್ದಿಷ್ಟ ತಂತ್ರಾಂಶ ಅಥವಾ ಜಾಲತಾಣದ ಬಳಕೆಯನ್ನು ಕುರಿತ ಈ ನಿಯಮ-ನಿಬಂಧನೆಗಳನ್ನು 'ಎಂಡ್ ಯೂಸರ್ ಲೈಸೆನ್ಸ್ ಅಗ್ರೀಮೆಂಟ್' (ಇಯುಎಲ್‌ಎ) ಎಂದು ಕರೆಯುತ್ತಾರೆ. ಇದನ್ನು ತಂತ್ರಾಂಶದ ನಿರ್ಮಾತೃ ಹಾಗೂ ಅದರ ಬಳಕೆದಾರರ ನಡುವಿನ ಒಪ್ಪಂದ ಎಂದೂ ಕರೆಯಬಹುದು. ಇಲ್ಲಿ ಬಳಕೆಯಾಗಿರುವ 'ಎಂಡ್ ಯೂಸರ್' ಎಂಬ ಹೆಸರು ಯಾವುದೇ ತಂತ್ರಾಂಶ ಅಥವಾ ತಂತ್ರಾಂಶ ಸೇವೆಯ ಬಳಕೆದಾರರನ್ನು ಸೂಚಿಸುತ್ತದೆ. ತಂತ್ರಾಂಶಗಳು - ಜಾಲತಾಣಗಳು ಸೃಷ್ಟಿಯಾಗುವುದೇ ಇವರನ್ನು ಗಮನದಲ್ಲಿಟ್ಟುಕೊಂಡು. ತಂತ್ರಾಂಶ ರಚನೆ ಹಾಗೂ ನಿರ್ವಹಣೆ ಪ್ರಕ್ರಿಯೆಯಲ್ಲಿ ವಿನ್ಯಾಸಕರು - ತಂತ್ರಜ್ಞರು ಒಂದು ಕೊನೆಯಲ್ಲಿದ್ದರೆ 'ಎಂಡ್ ಯೂಸರ್'ಗಳು ಇನ್ನೊಂದು ಕೊನೆಯಲ್ಲಿರುತ್ತಾರೆ. ತಮ್ಮ ಕೆಲಸಗಳಲ್ಲಿ ತಂತ್ರಾಂಶವನ್ನು ಬಳಸುವ ಜೊತೆಗೆ ಅದರ ಕುರಿತು ಹಿಮ್ಮಾಹಿತಿ ನೀಡುವುದು, ಬೇಕಾದ ಹೊಸ ಸೌಲಭ್ಯಗಳ ಕುರಿತು ತಂತ್ರಜ್ಞರ ಗಮನಸೆಳೆಯುವುದೂ ಇಂತಹ ಬಳಕೆದಾರರದೇ ಜವಾಬ್ದಾರಿ. ಹೊಸ ತಂತ್ರಾಂಶಗಳನ್ನು ಪರಿಚಯಿಸುವಾಗ, ಇರುವ ತಂತ್ರಾಂಶಕ್ಕೆ ಹೊಸ ಸೌಲಭ್ಯಗಳನ್ನು ಸೇರಿಸುವಾಗ ಪರೀಕ್ಷೆಯ (ಟೆಸ್ಟಿಂಗ್) ಹಂತದಲ್ಲಿ ಈ ಗುಂಪಿನ ಸಹಾಯವನ್ನೂ ಪಡೆದುಕೊಳ್ಳುವುದು ವಾಡಿಕೆ.
107 Ergonomics ಎರ್ಗೊನಾಮಿಕ್ಸ್ ವಿವಿಧ ವಸ್ತುಗಳಿಗೆ ಹಾಗೂ ಅವುಗಳನ್ನು ಬಳಸುವ ಪರಿಸರಕ್ಕೆ ಅತ್ಯಂತ ಸಮರ್ಪಕವಾದ ವಿನ್ಯಾಸಗಳನ್ನು ರೂಪಿಸುವ ವಿಜ್ಞಾನದ ಶಾಖೆ ರೇಜರ್‌ನಿಂದ ಪ್ರಾರಂಭಿಸಿ ಕುರ್ಚಿ, ಚಾಕು, ಟಿವಿ ರಿಮೋಟ್, ರೋಡ್‌ರೋಲರ್‌ವರೆಗೆ ಯಾವುದೇ ವಸ್ತುವಿನ ವಿನ್ಯಾಸವಾದರೂ ಅದು ಬಳಕೆದಾರನಿಗೆ ಅನುಕೂಲವಾಗುವಂತಿರಬೇಕು. ಹೀಗಾಗಿಯೇ ವಸ್ತುಗಳ ವಿನ್ಯಾಸ ಬಹಳ ದೊಡ್ಡ ಕ್ಷೇತ್ರವಾಗಿ ಬೆಳೆದಿದೆ; ಕೆಲ ವರ್ಷದ ಹಿಂದಿನ ಪರಿಸ್ಥಿತಿಗೆ ಹೋಲಿಸಿದರೆ ನಾವು ಬಳಸುವ ಬಹುತೇಕ ವಸ್ತುಗಳ ವಿನ್ಯಾಸವೆಲ್ಲ ಗಣನೀಯವಾಗಿ ಬದಲಾಗಿದೆ. ಯಂತ್ರಗಳ ವಿನ್ಯಾಸವಷ್ಟೇ ಅಲ್ಲ, ಅವುಗಳನ್ನು ನಾವು ಬಳಸುವ ಸ್ಥಳದ ವಿನ್ಯಾಸವೂ ನಮಗೆ ತೊಂದರೆಮಾಡದಂತಿರಬೇಕು. ಅಷ್ಟೇ ಅಲ್ಲ, ವಿವಿಧ ಸಾಧನಗಳನ್ನು ಬಳಸುವಾಗ ನಮ್ಮ ದೈಹಿಕ ಭಂಗಿ ಕೂಡ ಸರಿಯಾಗಿರಬೇಕು. ಇದೆಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು, ಬೇರೆಬೇರೆ ಸನ್ನಿವೇಶಗಳಿಗೆ ಮಾನವ ಅಂಗಾಂಗ ಹೇಗೆ ಪ್ರತಿಕ್ರಿಯಿಸುತ್ತದೆ ಎಂದು ನೋಡಿಕೊಂಡು ಅತ್ಯಂತ ಸಮರ್ಪಕವಾದ ವಿನ್ಯಾಸಗಳನ್ನು ರೂಪಿಸುವ ವಿಜ್ಞಾನದ ಶಾಖೆಯೇ ಎರ್ಗೊನಾಮಿಕ್ಸ್. ಕಂಪ್ಯೂಟರನ್ನೋ ಮೊಬೈಲ್ ಫೋನನ್ನೋ ಗಂಟೆಗಟ್ಟಲೆ ಬಳಸುವುದು ಇದೀಗ ಸಾಮಾನ್ಯ ಸಂಗತಿ. ಆದರೆ ಲ್ಯಾಪ್‌ಟಾಪನ್ನೋ ಡೆಸ್ಕ್‌ಟಾಪನ್ನೋ ಬಳಸುವಾಗ ನಾವು ಕುಳಿತಿರುವ ಭಂಗಿ ಸರಿಯಿಲ್ಲದಿದ್ದರೆ, ಕತ್ತು ಬಗ್ಗಿಸಿಕೊಂಡು ಮೊಬೈಲ್ ಫೋನನ್ನು ದೀರ್ಘಕಾಲ ದಿಟ್ಟಿಸುತ್ತಿದ್ದರೆ ಅದು ಹಲವು ದೈಹಿಕ ತೊಂದರೆಗಳಿಗೆ ಕಾರಣವಾಗಬಹುದು. ಹೀಗಾಗಿ ಕಂಪ್ಯೂಟರ್ ಮುಂದೆ ಗಂಟೆಗಟ್ಟಲೆ ಕುಳಿತು ಆರಾಮವಾಗಿ ಕೆಲಸಮಾಡಬೇಕೆಂದರೆ ಎರ್ಗೊನಾಮಿಕ್ ವಿನ್ಯಾಸದ ಪೀಠೋಪಕರಣ ಬಳಸುವುದು ಅಪೇಕ್ಷಣೀಯ. ಇದೇ ರೀತಿ ಲ್ಯಾಪ್‌ಟಾಪ್-ಮೊಬೈಲ್ ಇತ್ಯಾದಿಗಳನ್ನು ಬಳಸುವಾಗ ನಮ್ಮ ದೈಹಿಕ ಭಂಗಿ ಹೇಗಿದ್ದರೆ ಒಳ್ಳೆಯದು ಎನ್ನುವುದನ್ನೂ ಎರ್ಗೊನಾಮಿಕ್ಸ್ ಪರಿಕಲ್ಪನೆಗಳು ವಿವರಿಸುತ್ತವೆ.
108 ERP ಇಆರ್‌ಪಿ ಎಂಟರ್‌ಪ್ರೈಸ್ ರಿಸೋರ್ಸ್ ಪ್ಲಾನಿಂಗ್; ಯಾವುದೇ ಸಂಸ್ಥೆಗೆ ಸಂಬಂಧಪಟ್ಟ ಎಲ್ಲ ಮಾಹಿತಿಯನ್ನೂ ಒಟ್ಟಿಗೆ ಶೇಖರಿಸಿಟ್ಟು ವಿವಿಧ ಕ್ರಮವಿಧಿಗಳ ನೆರವಿನಿಂದ ಆ ಮಾಹಿತಿಯ ಸೂಕ್ತ ಉಪಯೋಗ ಮಾಡಿಕೊಳ್ಳಲು ಇಆರ್‌ಪಿ ಸಹಾಯಮಾಡುವ ತಂತ್ರಾಂಶದ ಹೆಸರು. ಕಂಪ್ಯೂಟರೀಕರಣವಾಗಿರುವ ಸಣ್ಣ-ದೊಡ್ಡ ಸಂಸ್ಥೆಗಳಲ್ಲಿ ಇಆರ್‌ಪಿ, ಅಂದರೆ ಎಂಟರ್‌ಪ್ರೈಸ್ ರಿಸೋರ್ಸ್ ಪ್ಲಾನಿಂಗ್ ತಂತ್ರಾಂಶಗಳ ಬಳಕೆ ಸಾಮಾನ್ಯ. ನಿರ್ದಿಷ್ಟ ಸಂಸ್ಥೆಯ ಎಲ್ಲ ವಿಭಾಗಗಳ ಅಗತ್ಯಗಳಿಗೂ ಒದಗಿಬರುವುದು ಈ ತಂತ್ರಾಂಶದ ವೈಶಿಷ್ಟ್ಯ. ಯಾವುದೇ ಸಂಸ್ಥೆಗೆ ಸಂಬಂಧಪಟ್ಟ ಎಲ್ಲ ಮಾಹಿತಿಯನ್ನೂ ಒಟ್ಟಿಗೆ ಶೇಖರಿಸಿಟ್ಟು ವಿವಿಧ ಕ್ರಮವಿಧಿಗಳ ನೆರವಿನಿಂದ ಆ ಮಾಹಿತಿಯ ಸೂಕ್ತ ಉಪಯೋಗ ಮಾಡಿಕೊಳ್ಳಲು ಇಆರ್‌ಪಿ ಸಹಾಯಮಾಡುತ್ತದೆ. ಅಷ್ಟೇ ಅಲ್ಲ, ಸಂಸ್ಥೆಯ ಸಂಪನ್ಮೂಲಗಳನ್ನು ಉತ್ತಮವಾಗಿ ನಿರ್ವಹಿಸಲು ನೆರವಾಗುವ ಮೂಲಕ ಅಲ್ಲಿನ ಕೆಲಸಗಳ ನಿರ್ವಹಣೆಯನ್ನೂ ಉತ್ತಮಗೊಳಿಸುತ್ತದೆ. ಸಂಸ್ಥೆಯ ಎಲ್ಲ ಚಟುವಟಿಕೆಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಇಆರ್‌ಪಿ ವ್ಯವಸ್ಥೆಯಲ್ಲಿ ಶೇಖರಿಸಿಡಬಹುದು. ಆಸ್ತಿಪಾಸ್ತಿ ವಿವರ, ಉತ್ಪನ್ನಗಳು ಖರ್ಚಾಗುತ್ತಿರುವ ಪ್ರಮಾಣ, ಬಂದಿರುವ ಖರೀದಿ ಆದೇಶಗಳು, ಗೋದಾಮಿನಲ್ಲಿರುವ ಕಚ್ಚಾವಸ್ತುಗಳ ವಿವರ, ಮುಂದಿನ ತಿಂಗಳು ಬೇಕಾಗಬಹುದಾದ ಕಚ್ಚಾವಸ್ತುವಿನ ಪ್ರಮಾಣದ ಅಂದಾಜು, ಅದರ ತಯಾರಕರಿಗೆ ಕೊಡಬೇಕಾದ ಬಾಕಿ, ಖರ್ಚುವೆಚ್ಚ ಲಾಭನಷ್ಟಗಳ ಲೆಕ್ಕ, ಉದ್ಯೋಗಿಗಳ ಸಂಬಳ, ಗ್ರಾಹಕರ ವಿವರ - ಹೀಗೆ ಪ್ರತಿಯೊಂದು ವಿವರವನ್ನೂ ಇಆರ್‌ಪಿಯ ಘಟಕಗಳು ಸಂಗ್ರಹಿಸಿಟ್ಟುಕೊಳ್ಳಬಲ್ಲವು. ಈ ಎಲ್ಲ ಘಟಕಗಳೂ ಒಂದರ ಜೊತೆಗೊಂದು ಸಂಪರ್ಕದಲ್ಲಿರುವುದರಿಂದ ವಿಭಾಗಗಳ ನಡುವಿನ ಮಾಹಿತಿಯ ಹರಿವು ಸರಾಗವಾಗುತ್ತದೆ, ಸಂಸ್ಥೆಯ ಕಾರ್ಯನಿರ್ವಹಣೆ ಹೆಚ್ಚು ಸಕ್ಷಮವಾಗುತ್ತದೆ. ಯಾರಿಗೆ ಯಾವ ಮಾಹಿತಿ ಲಭ್ಯವಾಗಬೇಕು ಅಥವಾ ಲಭ್ಯವಾಗಬಾರದು ಎಂಬುದನ್ನೂ ಕೂಡ ಇಆರ್‌ಪಿ ತಂತ್ರಾಂಶಗಳಲ್ಲಿ ಬಹಳ ಸುಲಭವಾಗಿ ನಿಗದಿಪಡಿಸಬಹುದು. ಎಸ್‌ಎಪಿ ಹಾಗೂ ಅರೇಕಲ್ ಸಂಸ್ಥೆಗಳು ಇಆರ್‌ಪಿ ತಂತ್ರಾಂಶಗಳ ಪ್ರಮುಖ ತಯಾರಕರು. ಹಲವು ಇಆರ್‌ಪಿ ತಂತ್ರಾಂಶಗಳೊಡನೆ ಹೊಂದಿಕೊಂಡು ಕೆಲಸಮಾಡುವ, ಅದರಲ್ಲಿರುವ ವಿವರಗಳ ಕುರಿತು ವರದಿಗಳನ್ನು ನೀಡುವ ಬಿಸಿನೆಸ್ ಇಂಟೆಲಿಜೆನ್ಸ್ ತಂತ್ರಾಂಶಗಳೂ ಇವೆ.
109 Ethernet ಈಥರ್‍‍ನೆಟ್ ಕೇಬಲ್‌ಗಳ ಮೂಲಕ ಕಂಪ್ಯೂಟರುಗಳನ್ನು, ಸಂಬಂಧಪಟ್ಟ ಸಾಧನಗಳನ್ನು ಸಂಪರ್ಕಿಸುವ ಮಾನಕ ಒಂದಕ್ಕಿಂತ ಹೆಚ್ಚು ಕಂಪ್ಯೂಟರುಗಳ ನಡುವೆ ಪರಸ್ಪರ ಸಂಪರ್ಕ ಏರ್ಪಟ್ಟಾಗ ಅದನ್ನು ನೆಟ್‌ವರ್ಕ್, ಅಂದರೆ ಜಾಲ ಎಂದು ಕರೆಯುತ್ತಾರೆ. ಒಂದೇ ಕಟ್ಟಡದೊಳಗೆ ಕಾರ್ಯನಿರ್ವಹಿಸುವ ಸ್ಥಳೀಯ ಜಾಲ ಇರಲಿ, ವಿಶ್ವಮಟ್ಟದ ವ್ಯಾಪ್ತಿಯಿರುವ ಅಂತರಜಾಲವೇ ಇರಲಿ - ಹೀಗೆ ಸಂಪರ್ಕದಲ್ಲಿರುವ ಕಂಪ್ಯೂಟರುಗಳ ನಡುವೆ ಮಾಹಿತಿ ವಿನಿಮಯ ಸಾಧ್ಯವಾಗುತ್ತದೆ. ಕಂಪ್ಯೂಟರುಗಳ ನಡುವೆ ಸಂಪರ್ಕ ಕಲ್ಪಿಸಲು ಅನೇಕ ಮಾರ್ಗಗಳಿವೆ. ಕೇಬಲ್‌ಗಳ ಬಳಕೆ ಇಂತಹ ಮಾರ್ಗಗಳಲ್ಲೊಂದು. ಈಥರ್‌ನೆಟ್ ಎನ್ನುವುದು ಹೀಗೆ ಕೇಬಲ್‌ಗಳ ಮೂಲಕ ಕಂಪ್ಯೂಟರುಗಳನ್ನು, ಸಂಬಂಧಪಟ್ಟ ಸಾಧನಗಳನ್ನು ಸಂಪರ್ಕಿಸುವ ಮಾನಕ (ಸ್ಟಾಂಡರ್ಡ್). ಕೇಬಲ್ ಸಂಪರ್ಕದ ಮೂಲಕ ರೂಪಿಸಲಾಗುವ ಸ್ಥಳೀಯ ಜಾಲಗಳಲ್ಲಿ ದತ್ತಾಂಶದ ಪ್ರಸರಣ ಯಾವ ರೀತಿಯಲ್ಲಿ ಆಗುತ್ತದೆ ಎನ್ನುವುದನ್ನು ಈ ಮಾನಕ ನಿರ್ದೇಶಿಸುತ್ತದೆ. ಈ ರೀತಿಯಾಗಿ ಕಂಪ್ಯೂಟರುಗಳನ್ನು, ರೂಟರುಗಳನ್ನೆಲ್ಲ ಸಂಪರ್ಕಿಸಲು ಬಳಕೆಯಾಗುವ ಕೇಬಲ್ ಅನ್ನು ಈಥರ್‌ನೆಟ್ ಕೇಬಲ್ ಎಂದು ಕರೆಯುತ್ತಾರೆ. ನೋಡಲು ದೂರವಾಣಿ ಕೇಬಲ್ಲಿನಂತೆಯೇ ಕಾಣುವ ಇದು ಗಾತ್ರದಲ್ಲಿ ಮಾತ್ರ ದೊಡ್ಡದಾಗಿರುತ್ತದೆ ಎನ್ನುವುದು ವಿಶೇಷ. ಕೇಬಲ್ ಮೂಲಕ ಬ್ರಾಡ್‌ಬ್ಯಾಂಡ್ ಸಂಪರ್ಕ ಬಳಸುವ ಕಂಪ್ಯೂಟರುಗಳಲ್ಲಿ ಬಳಕೆಯಾಗುವುದು ಇದೇ ಕೇಬಲ್. ಈ ಕೇಬಲ್‌ನ ಕೊನೆಗಳು ಕಂಪ್ಯೂಟರಿಗೆ - ರೂಟರಿಗೆ ಸಂಪರ್ಕಗೊಳ್ಳುತ್ತವಲ್ಲ, ಅವನ್ನು ಆರ್‌ಜೆ೪೫ ಕನೆಕ್ಟರುಗಳೆಂದು ಕರೆಯುತ್ತಾರೆ. ಬಹುತೇಕ ಕಂಪ್ಯೂಟರುಗಳಲ್ಲಿ ಇವನ್ನು ಸಂಪರ್ಕಿಸಲು ಬೇಕಾದ ವ್ಯವಸ್ಥೆ ಪೂರ್ವನಿಯೋಜಿತವಾಗಿಯೇ ಇರುತ್ತದೆ. ವೈಫೈ ತಂತ್ರಜ್ಞಾನದ ಜನಪ್ರಿಯತೆ ಹೆಚ್ಚಿದಂತೆ ಹಲವು ಕ್ಷೇತ್ರಗಳಲ್ಲಿ ಈಥರ್‌ನೆಟ್ ಬಳಕೆ ನಿಧಾನವಾಗಿ ಕಡಿಮೆಯಾಗುತ್ತಿದೆ.
110 e-Waste ಇ-ವೇಸ್ಟ್ ಇಲೆಕ್ಟ್ರಾನಿಕ್ ವೇಸ್ಟ್; ಕಸದ ರಾಶಿ ಸೇರುವ ನಿರುಪಯುಕ್ತ ವಿದ್ಯುನ್ಮಾನ ಸಾಧನಗಳನ್ನು ಪ್ರತಿನಿಧಿಸುವ ಹೆಸರು ವಿದ್ಯುನ್ಮಾನ ಸಾಧನಗಳ ಜಗತ್ತಿನಲ್ಲಿ ಬಹಳ ವೇಗವಾಗಿ ಬದಲಾವಣೆಗಳಾಗುತ್ತಿರುತ್ತವೆ. ಈ ವೇಗಕ್ಕೆ ಹೊಂದಿಕೊಳ್ಳುವ ಉದ್ದೇಶದಿಂದ ಬಳಕೆದಾರರಾದ ನಾವುಗಳೂ ಆಗಿಂದಾಗ್ಗೆ ಹೊಸಹೊಸ ಸಾಧನಗಳನ್ನು ಕೊಳ್ಳುತ್ತಿರುತ್ತೇವೆ, ಹಳೆಯವನ್ನು ಮನೆಯಿಂದಾಚೆಗೆ ಕಳುಹಿಸುತ್ತೇವೆ. ಇದನ್ನೇ ವಿದ್ಯುನ್ಮಾನ ಕಸ, ಅಥವಾ 'ಇ-ಕಸ' (ಇಲೆಕ್ಟ್ರಾನಿಕ್ ವೇಸ್ಟ್) ಎಂದು ಗುರುತಿಸಲಾಗುತ್ತದೆ. ಇಂತಹ ಪ್ರತಿ ಸಾಧನದಲ್ಲೂ ದೊಡ್ಡ ಸಂಖ್ಯೆಯ ಬಿಡಿಭಾಗಗಳಿರುತ್ತವೆ, ಮತ್ತು ಅಂತಹ ಪ್ರತಿಯೊಂದು ಬಿಡಿಭಾಗವನ್ನೂ ಪ್ಲಾಸ್ಟಿಕ್ಕಿನಿಂದ ಚಿನ್ನದವರೆಗೆ ಅನೇಕ ವಸ್ತುಗಳನ್ನು ಬಳಸಿ ರೂಪಿಸಲಾಗಿರುತ್ತದೆ. ಈ ವಸ್ತುಗಳ ಪೈಕಿ ಅನೇಕ ವಿಷಕಾರಿ ಅಂಶಗಳೂ ಇರುತ್ತವೆ. ನಾವು ಹೊರಹಾಕುವ ವಿದ್ಯುನ್ಮಾನ ಸಾಧನಗಳನ್ನು ಸರಿಯಾಗಿ ವಿಲೇವಾರಿ ಮಾಡದಿದ್ದರೆ ಅದರಲ್ಲಿರುವ ವಿಷಕಾರಿ ಅಂಶಗಳು ಪರಿಸರಕ್ಕೆ ಹಾನಿ ಉಂಟುಮಾಡಬಲ್ಲವು. ಹೀಗಾಗಿಯೇ ಪರಿಸರ ಸೇವಾ ಸಂಸ್ಥೆಗಳು, ಸರಕಾರಗಳು ಹಾಗೂ ಕೆಲವೊಮ್ಮೆ ವಿದ್ಯುನ್ಮಾನ ಉತ್ಪನ್ನ ತಯಾರಿಸುವ ಸಂಸ್ಥೆಗಳೂ ಇ-ಕಸದ ಸಮರ್ಪಕ ನಿರ್ವಹಣೆ ಕುರಿತು ಜಾಗೃತಿ ಮೂಡಿಸುವ ಪ್ರಯತ್ನದಲ್ಲಿರುತ್ತವೆ. ಉಪಯುಕ್ತ ವಸ್ತುಗಳನ್ನು (ಉದಾ: ಚಿನ್ನ, ತಾಮ್ರ) ಇ-ಕಸದಿಂದ ಬೇರ್ಪಡಿಸಿ ಮರುಬಳಕೆ ಮಾಡುವುದು, ಹಾಗೂ ನಿರುಪಯುಕ್ತ ಭಾಗಗಳನ್ನು ಸೂಕ್ತವಾಗಿ ವಿಲೇವಾರಿ ಮಾಡುವುದು ಪರಿಸರದ ದೃಷ್ಟಿಯಿಂದ ಮಾತ್ರವಲ್ಲ, ಆರ್ಥಿಕವಾಗಿಯೂ ಸಾಕಷ್ಟು ಲಾಭದಾಯಕ. ಅಷ್ಟೇ ಅಲ್ಲ, ನವೀಕರಿಸಲಾಗದ ಸಂಪನ್ಮೂಲಗಳ (ಉದಾ: ಗ್ಯಾಲಿಯಂ, ಇಂಡಿಯಂ ಮುಂತಾದ ವಿರಳ ಧಾತುಗಳು, ಅಂದರೆ ರೇರ್ ಅರ್ಥ್ ಎಲಿಮೆಂಟ್ಸ್) ದೃಷ್ಟಿಯಿಂದ ನೋಡಿದರೆ ಮರುಬಳಕೆ ಅನಿವಾರ್ಯವೂ ಹೌದು.