A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 318

Backtrace:

File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 319

Backtrace:

File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 320

Backtrace:

File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler

File: /Appdata/padakanaja.karnataka.gov.in/index.php
Line: 318
Function: require_once

Padakanaja - Dictionary View
ಅನಿಸಿಕೆ

ಪದಕೋಶ: ಕಂಪ್ಯೂಟರ್ ತಂತ್ರಜ್ಞಾನ ಪದವಿವರಣ ಕೋಶ | ಇಂಗ್ಲೀಷ್-ಕನ್ನಡ |ಪ್ರಕಾಶಕರು - ಕನ್ನಡ ಅಭಿವೃದ್ಧಿ ಪ್ರಾಧಿಕಾರ (2017)

Show entries
ಕ್ರಮ ಸ೦ಖ್ಯೆ ಇಂಗ್ಲೀಷ್ ಪದ
(English Word)
ಕನ್ನಡ ಪದ
(Kannada Word)
ಕನ್ನಡ ಅರ್ಥ
(Kannada Meaning)
ವಿಷಯ ವರ್ಗೀಕರಣ
(Word Subject)
ವ್ಯಾಕರಣ ವಿಶೇಷ
(Word Grammer)
ಕನ್ನಡ ಉಚ್ಚಾರಣೆ
(Kannada Pronunciation)
ಪರ್ಯಾಯ ಪದ
(Word Synonyms)
ಇಂಗ್ಲೀಷ್ ಅರ್ಥ
(English Meaning)
ಸಂಕ್ಷಿಪ್ತ ವಿವರಣೆ
(Short Description)
ದೀರ್ಘ ವಿವರಣೆ
(Long Description)
ಆಡಳಿತಾತ್ಮಕ ಪದ
(Administrative Word)
71 Coupon Site ಕೂಪನ್ ಸೈಟ್ ಆನ್‌ಲೈನ್ ಶಾಪಿಂಗ್, ಪ್ರವಾಸ, ಬಿಲ್ ಪಾವತಿ ಮುಂತಾದ ಸೇವೆಗಳನ್ನು ಒದಗಿಸುವ ತಾಣಗಳಲ್ಲಿ ದೊರಕುವ ವಿಶೇಷ ಕೊಡುಗೆಗಳ ಕುರಿತು ಮಾಹಿತಿ ನೀಡುವ ತಾಣ ಜಾಲತಾಣಗಳಲ್ಲಿ ಶಾಪಿಂಗ್ ಮಾಡುವಾಗ, ಬಿಲ್ ಪಾವತಿಸುವಾಗ, ಟಿಕೇಟು ಕಾಯ್ದಿರಿಸುವಾಗಲೆಲ್ಲ ಡಿಸ್ಕೌಂಟ್ ಕೂಪನ್ ಅಥವಾ ಕೂಪನ್ ಕೋಡ್ ದಾಖಲಿಸುವ ಅವಕಾಶವಿರುವುದು ನಮ್ಮ ಗಮನಕ್ಕೆ ಬರುತ್ತದೆ. ಅಲ್ಲಿ ಸೂಕ್ತ ಕೋಡ್ ದಾಖಲಿಸಿದ್ದೇ ಆದರೆ ಬೆಲೆಯಲ್ಲಿ ರಿಯಾಯಿತಿಯೋ, ಪಾವತಿಸಿದ ಹಣದ ಮೇಲೆ ಕ್ಯಾಶ್‌ಬ್ಯಾಕ್ ಕೊಡುಗೆಯೋ ನಮಗೆ ದೊರಕುತ್ತದೆ. ನಿರ್ದಿಷ್ಟ ತಾಣಗಳಲ್ಲಿ ದಾಖಲಿಸಬಹುದಾದ ಕೂಪನ್ ಕೋಡ್‌ಗಳು ಪತ್ರಿಕೆಗಳ, ಸಮಾಜಜಾಲಗಳ ಇಲ್ಲವೇ ಎಸ್ಸೆಮ್ಮೆಸ್ ಸಂದೇಶಗಳ ಮೂಲಕ ನಮ್ಮನ್ನು ಕಾಲಕಾಲಕ್ಕೆ ತಲುಪುತ್ತಿರುತ್ತವೆ. ಆದರೆ ಎಲ್ಲ ತಾಣಗಳಲ್ಲೂ ನೋಂದಾಯಿಸಿಕೊಂಡಿರುವುದು, ಸಮಾಜಜಾಲದಲ್ಲಿ ಅವೆಲ್ಲವುಗಳನ್ನೂ ಗಮನಿಸುತ್ತಿರುವುದು ಸಾಧ್ಯವಿಲ್ಲವಲ್ಲ! ಈ ಸಮಸ್ಯೆಗೆ ಪರಿಹಾರ ಒದಗಿಸುವ ಜಾಲತಾಣಗಳನ್ನು 'ಕೂಪನ್ ಸೈಟ್'ಗಳೆಂದು ಕರೆಯುತ್ತಾರೆ. ಆನ್‌ಲೈನ್ ಶಾಪಿಂಗ್, ಪ್ರವಾಸ, ಬಿಲ್ ಪಾವತಿ ಮುಂತಾದ ಸೇವೆಗಳನ್ನು ಒದಗಿಸುವ ತಾಣಗಳಲ್ಲಿ ವಿಶೇಷ ಕೊಡುಗೆಗಳನ್ನು ಪಡೆಯಲು ಬಳಸಬಹುದಾದ ಕೂಪನ್‌ಗಳನ್ನು ಕುರಿತ ಮಾಹಿತಿ ನೀಡುವುದಷ್ಟೇ ಈ ಕೂಪನ್ ಸೈಟ್‌ಗಳ ಕೆಲಸ. ವಿಶೇಷ ಕೊಡುಗೆಗಳ ಹುಡುಕಾಟದಲ್ಲಿರುವವರು ನೇರವಾಗಿಯೋ ಗೂಗಲ್ ಮೂಲಕವೋ ಕೂಪನ್ ಸೈಟ್‌ಗಳಿಗೆ ಬರುವ ಸಾಧ್ಯತೆ ಹೆಚ್ಚು. ಕೊಡುಗೆಗಳ ಬಗ್ಗೆ ಮಾಹಿತಿ ಪಡೆಯುವ ಅವರು ಇಲ್ಲಿಂದ ಆಯಾ ತಾಣಗಳಿಗೆ ಹೋಗಿ ಶಾಪಿಂಗ್ ಮಾಡುವ ಸಾಧ್ಯತೆಯೂ ಹೆಚ್ಚು. ಈ ಮೂಲಕ ಬಳಕೆದಾರನಿಗೆ ಹೆಚ್ಚುವರಿ ಕೊಡುಗೆ ದೊರೆತ ಖುಷಿ ಸಿಗುತ್ತದೆ, ಶಾಪಿಂಗ್ ಜಾಲತಾಣಕ್ಕೆ ತನ್ನ ವಹಿವಾಟು ಹೆಚ್ಚಿದ ಸಂತೋಷವೂ ಆಗುತ್ತದೆ. ಇವೆರಡನ್ನೂ ಸಾಧ್ಯವಾಗಿಸಿದ ಕೂಪನ್ ಸೈಟ್ ಈ ಸೇವೆ ಒದಗಿಸಿದ್ದಕ್ಕಾಗಿ ಆ ಜಾಲತಾಣದಿಂದ ಕಮೀಶನ್ ಪಡೆದುಕೊಳ್ಳುತ್ತದೆ, ಇನ್ನಷ್ಟು ಕೊಡುಗೆಗಳ ಬಗ್ಗೆ ಗ್ರಾಹಕರಿಗೆ ತಿಳಿಸಲು ತಯಾರಾಗುತ್ತದೆ!
72 Crash ಕ್ರ್ಯಾಶ್ ವಿದ್ಯುನ್ಮಾನ ಉಪಕರಣಗಳ ಕಾರ್ಯಾಚರಣೆಯಲ್ಲಿ ಎದುರಾಗುವ ಅನಿರೀಕ್ಷಿತ ಅಡಚಣೆ ಕಂಪ್ಯೂಟರ್ ಆಗಲಿ ಮೊಬೈಲ್ ಫೋನ್ ಆಗಲಿ, ಬಳಕೆ ಸರಾಗವಾಗಿರಬೇಕಾದರೆ ಅದರ ಯಂತ್ರಾಂಶ - ತಂತ್ರಾಂಶಗಳೆರಡೂ ಸರಿಯಾಗಿ ಕೆಲಸಮಾಡುತ್ತಿರಬೇಕು. ಈ ಪೈಕಿ ಯಾವುದೇ ಕೈಕೊಟ್ಟರೂ ನಮ್ಮ ಬಳಕೆಯಲ್ಲಿ ಅಡಚಣೆ ಉಂಟಾಗುತ್ತದೆ. 'ಕ್ರ್ಯಾಶ್ ಆಯಿತು' ಎಂದು ಹೇಳುತ್ತೇವಲ್ಲ, ಅದು ಈ ಅಡಚಣೆಯನ್ನೇ ಕುರಿತದ್ದು. ಕಂಪ್ಯೂಟರಿನ ತಂತ್ರಾಂಶ, ಮೊಬೈಲಿನ ಆಪ್‌ಗಳ ಕಾರ್ಯಾಚರಣೆಯಲ್ಲಿ ಎದುರಾಗುವ ಅನಿರೀಕ್ಷಿತ ಅಡಚಣೆಗಳನ್ನು ಕ್ರ್ಯಾಶ್ ಎಂದು ಕರೆಯುತ್ತಾರೆ. ಹಾರ್ಡ್ ಡಿಸ್ಕ್‌ನಂತಹ ಯಂತ್ರಾಂಶಗಳು ವಿಫಲವಾದಾಗಲೂ ಅದನ್ನು 'ಕ್ರ್ಯಾಶ್' ಎಂದೇ ಗುರುತಿಸಲಾಗುತ್ತದೆ. ತಂತ್ರಾಂಶಗಳು ಕ್ರ್ಯಾಶ್ ಆದಾಗ ಅದು ಬಹಳಷ್ಟು ಸಾರಿ ತಾತ್ಕಾಲಿಕ ಅಡ್ಡಿಯಷ್ಟೇ ಆಗಿರುತ್ತದೆ. ಇಂತಹ ಅಡ್ಡಿಗಳಿಗೆ ಸಂಪನ್ಮೂಲಗಳ ಕೊರತೆ, ಸಂಪರ್ಕದ ಅಡಚಣೆ - ಹೀಗೆ ಅನೇಕ ಕಾರಣಗಳಿರಬಹುದು. ತಂತ್ರಾಂಶ ರಚನೆಯಲ್ಲಿನ ನ್ಯೂನತೆಯಿಂದಲೂ ತಂತ್ರಾಂಶಗಳು ಕ್ರ್ಯಾಶ್ ಆಗುತ್ತವೆ. ಹಲವು ತಂತ್ರಾಂಶ ನಿರ್ಮಾತೃಗಳು ಕ್ರ್ಯಾಶ್ ಆದ ಸಂದರ್ಭದ ಬಗ್ಗೆ ಮಾಹಿತಿ ಸಂಗ್ರಹಿಸಿ ಮುಂದಿನ ಆವೃತ್ತಿಗಳಲ್ಲಿ ಆ ತೊಂದರೆಗಳನ್ನು ನಿವಾರಿಸಲು ಪ್ರಯತ್ನಿಸುತ್ತಾರೆ. ತಂತ್ರಾಂಶಗಳು ಕ್ರ್ಯಾಶ್ ಆಗುವ ಕೆಲ ಪರಿಚಿತ ಸಂದರ್ಭಗಳನ್ನು ನಿಭಾಯಿಸುವ ಕ್ಷಮತೆ ಕಾರ್ಯಾಚರಣ ವ್ಯವಸ್ಥೆಗಳಲ್ಲಿ ಇರುವುದೂ ಉಂಟು. ಯಂತ್ರಾಂಶಗಳು ಕ್ರ್ಯಾಶ್ ಆದಾಗ ಅವುಗಳಿಗೆ ಭೌತಿಕ ಹಾನಿಯಾಗುವ ಸಾಧ್ಯತೆಯೂ ಇರುತ್ತದೆ. ಉದಾಹರಣೆಗೆ ಹಾರ್ಡ್ ಡಿಸ್ಕ್ - ಮೆಮೊರಿ ಕಾರ್ಡ್ ಇತ್ಯಾದಿಗಳು ಕ್ರ್ಯಾಶ್ ಆದವೆಂದರೆ ಅವನ್ನು ಮತ್ತೆ ಬಳಸುವುದು ಸಾಧ್ಯವಾಗದೆ ಇರಬಹುದು. ಇನ್ನು ಕೆಲ ಸಂದರ್ಭಗಳಲ್ಲಿ ಬಾಹ್ಯ ನೆರವು ಪಡೆದುಕೊಂಡು ಅದರಲ್ಲಿರುವ ಮಾಹಿತಿಯನ್ನು ಹೊರತೆಗೆಯಬೇಕಾಗುತ್ತದೆ.
73 Creative Commons ಕ್ರಿಯೇಟಿವ್ ಕಾಮನ್ಸ್ ನಾವು ರೂಪಿಸಿದ ಮಾಹಿತಿಯನ್ನು ಹೇಗೆಲ್ಲ ಬಳಸಬಹುದು ಎಂದು ನಿರ್ದಿಷ್ಟ ಪರವಾನಗಿಗಳ ಮೂಲಕ ನಮೂದಿಸುವುದನ್ನು ಸಾಧ್ಯವಾಗಿಸುವ ವ್ಯವಸ್ಥೆ ಯಾವುದೇ ಮಾಹಿತಿ ವಿಶ್ವವ್ಯಾಪಿ ಜಾಲದಲ್ಲಿ ಇದೆ ಎಂದಾಕ್ಷಣ ಅದನ್ನು ನಮಗೆ ಬೇಕಾದಂತೆ ಬಳಸಿಕೊಳ್ಳಬಹುದೇ? ಯಾರೋ ಬರೆದ ಲೇಖನವನ್ನು ಲೇಖಕರ ಹೆಸರಿಲ್ಲದೆ ಹಂಚಿಕೊಳ್ಳುವುದು, ಛಾಯಾಚಿತ್ರಗಳನ್ನು ಬಳಸಿಕೊಳ್ಳುವಾಗ ಛಾಯಾಗ್ರಾಹಕರ ಹೆಸರು ಹಾಕದಿರುವುದು ಮುಂತಾದ ಅನೇಕ ಸಂಗತಿಗಳು ವಿವಾದ ಸೃಷ್ಟಿಸುವ ಹಿನ್ನೆಲೆಯಲ್ಲಿ ನಮಗೆ ಎದುರಾಗುವುದು ಇದೇ ಪ್ರಶ್ನೆ. ಹಕ್ಕುಸ್ವಾಮ್ಯ ಅಥವಾ ಕಾಪಿರೈಟ್ ಬಗೆಗಿನ ಇಂತಹ ಗೊಂದಲಗಳನ್ನು ಕಡಿಮೆಮಾಡಲು ನಡೆದಿರುವ ಪ್ರಯತ್ನಗಳ ಮುಂಚೂಣಿಯಲ್ಲಿರುವುದು ಕ್ರಿಯೇಟಿವ್ ಕಾಮನ್ಸ್ ಎಂಬ ಲಾಭಾಪೇಕ್ಷೆಯಿಲ್ಲದ ಜಾಗತಿಕ ಸಂಸ್ಥೆ. ಕ್ರಿಯೇಟಿವ್ ಕಾಮನ್ಸ್‌ನಡಿ ರೂಪಿಸಲಾಗಿರುವ ವಿವಿಧ ಪರವಾನಗಿಗಳನ್ನು (ಲೈಸನ್ಸ್) ಬಳಸಿ ನಾವು ರೂಪಿಸಿರುವ ಮಾಹಿತಿಯನ್ನು ಹೇಗೆಲ್ಲ ಬಳಸಬಹುದು ಎನ್ನುವ ಬಗ್ಗೆ ಸ್ಪಷ್ಟನೆ ಕೊಡುವುದು ಸಾಧ್ಯವಿದೆ. ಚಿತ್ರ, ಸಂಗೀತ, ಪಠ್ಯ - ಹೀಗೆ ಹಲವು ಬಗೆಯ ಮಾಹಿತಿಯ ಜೊತೆಗೆ ನಾವು ಈ ಪರವಾನಗಿಗಳನ್ನು ಬಳಸಬಹುದು. ನಮ್ಮ ಮಾಹಿತಿಯನ್ನು ವಾಣಿಜ್ಯ ಉದ್ದೇಶಗಳಿಗೆ ಬಳಸಬಹುದೇ, ಅಗತ್ಯಕ್ಕೆ ತಕ್ಕಂತೆ ಬದಲಿಸಿಕೊಳ್ಳಬಹುದೇ, ಅದನ್ನು ಬಳಸಿದಾಗ ನಮ್ಮ ಹೆಸರು ನಮೂದಿಸುವುದು ಅಪೇಕ್ಷಣೀಯವೇ - ನಿರ್ದಿಷ್ಟ ಪರವಾನಗಿಯನ್ನು ನಮೂದಿಸುವ ಮೂಲಕ ಇಂತಹ ಹಲವು ಪ್ರಶ್ನೆಗಳಿಗೆ ಉತ್ತರಿಸುವುದು ಸಾಧ್ಯ. ಯಾವುದೋ ಛಾಯಾಚಿತ್ರವನ್ನು ನಾವು ನಿರ್ದಿಷ್ಟ ಪರವಾನಗಿಯಡಿಯಲ್ಲಿ ನೀಡಿದ್ದೇವೆ ಎಂದುಕೊಂಡರೆ ಆ ಚಿತ್ರದ ಎಲ್ಲ ರೂಪಾಂತರಗಳನ್ನೂ ಅದೇ ಪರವಾನಗಿಯಲ್ಲಿ ನೀಡಬೇಕು ಎನ್ನುವುದನ್ನೂ ಸ್ಪಷ್ಟಪಡಿಸಲು ಅವಕಾಶವಿದೆ. ಮಾಹಿತಿಯನ್ನು ಯಾವುದೇ ನಿರ್ಬಂಧವಿಲ್ಲದೆ ಬಳಸಬಹುದೆಂದು ತಿಳಿಸುವ 'ಪಬ್ಲಿಕ್ ಡೊಮೈನ್ ಮಾರ್ಕ್' ಪರಿಕಲ್ಪನೆ ಕೂಡ ಕ್ರಿಯೇಟಿವ್ ಕಾಮನ್ಸ್‌ನದೇ ಸೃಷ್ಟಿ.
74 Crop ಕ್ರಾಪ್ ಡಿಜಿಟಲ್ ರೂಪದಲ್ಲಿರುವ ಚಿತ್ರಗಳನ್ನು ನಮ್ಮ ಅಗತ್ಯಕ್ಕೆ ತಕ್ಕಂತೆ ಕತ್ತರಿಸಿ ಸಣ್ಣದಾಗಿಸುವ ಪ್ರಕ್ರಿಯೆ ಮೊಬೈಲ್ ಫೋನ್ - ಡಿಜಿಟಲ್ ಕ್ಯಾಮೆರಾಗಳನ್ನು ಬಳಸಿ ನಾವು ಕ್ಲಿಕ್ಕಿಸುವ ಫೋಟೋಗಳೆಲ್ಲ ನಮ್ಮ ಎಲ್ಲ ಅಗತ್ಯಗಳಿಗೂ ಹೊಂದಿಕೊಳ್ಳುವಂತಿರಬೇಕು ಎಂದೇನೂ ಇಲ್ಲ. ಮೊಬೈಲಿನಲ್ಲಿ ಕ್ಲಿಕ್ಕಿಸಿದ್ದನ್ನು ಪ್ರಿಂಟ್ ಹಾಕಿಸುವಾಗ, ನಮ್ಮ ಮುಖದ ಭಾಗವನ್ನಷ್ಟೇ ಆರಿಸಿ ಫೇಸ್‌ಬುಕ್ ಪ್ರೊಫೈಲ್ ಚಿತ್ರ ಮಾಡಿಕೊಳ್ಳುವಾಗೆಲ್ಲ ಮೂಲ ಚಿತ್ರದ ಹಲವು ಭಾಗಗಳನ್ನು ಕತ್ತರಿಸಬೇಕಾಗುತ್ತದೆ. ನಾವು ನಿರೀಕ್ಷಿಸದ ವಸ್ತು-ವಿಷಯಗಳೇನಾದರೂ ಚಿತ್ರದಲ್ಲಿ ಸೇರಿಕೊಂಡಿದ್ದರೆ (ಉದಾ: ಲಾಲ್‌ಬಾಗ್ ಕೆರೆಯ ಪಕ್ಷಿಯ ಪಕ್ಕದಲ್ಲಿ ಪ್ಲಾಸ್ಟಿಕ್ ಡಬ್ಬಿ) ಅದನ್ನು ನಿವಾರಿಸಿಕೊಳ್ಳಲೂ ಕತ್ತರಿಪ್ರಯೋಗ ಅನಿವಾರ್ಯವಾಗುತ್ತದೆ. ಹೀಗೆ ನಮ್ಮ ಅಗತ್ಯಕ್ಕೆ ತಕ್ಕಂತೆ ಚಿತ್ರಗಳನ್ನು ಕತ್ತರಿಸಿ ಸಣ್ಣದಾಗಿಸುವುದನ್ನು 'ಕ್ರಾಪ್' ಮಾಡುವುದು ಎಂದು ಕರೆಯುತ್ತಾರೆ. ಕಂಪ್ಯೂಟರಿನಲ್ಲಿ, ಮೊಬೈಲಿನಲ್ಲಿ ಚಿತ್ರಗಳನ್ನು ನೋಡಲು-ತಿದ್ದಲು ಬಳಕೆಯಾಗುವ ಬಹುತೇಕ ಎಲ್ಲ ತಂತ್ರಾಂಶಗಳಲ್ಲೂ ಈ ಆಯ್ಕೆ ಇರುತ್ತದೆ. ನಮ್ಮ ಇಷ್ಟದ ಆಕಾರಕ್ಕೆ ಕತ್ತರಿಸಿಕೊಳ್ಳುವುದಷ್ಟೇ ಅಲ್ಲ, ಮುದ್ರಣಕ್ಕೆ-ಪ್ರದರ್ಶನಕ್ಕೆ ಅಗತ್ಯವಾದ ನಿರ್ದಿಷ್ಟ ಆಸ್ಪೆಕ್ಟ್ ರೇಶಿಯೋಗೆ ಹೊಂದುವಂತೆ ಚಿತ್ರವನ್ನು ಕ್ರಾಪ್ ಮಾಡುವ ಸೌಲಭ್ಯವೂ ಇಂತಹ ತಂತ್ರಾಂಶಗಳಲ್ಲಿರುತ್ತದೆ. ಹಲವು ಜಾಲತಾಣಗಳಿಗೆ ಚಿತ್ರಗಳನ್ನು ಸೇರಿಸುವಾಗ (ಉದಾ: ಫೇಸ್‌ಬುಕ್ ಪ್ರೊಫೈಲ್ ಚಿತ್ರ) ನಿರ್ದಿಷ್ಟ ಆಕಾರಕ್ಕೆ ಚಿತ್ರವನ್ನು ಕ್ರಾಪ್ ಮಾಡಿಕೊಳ್ಳುವ ಸೌಲಭ್ಯವನ್ನು ಅಲ್ಲೇ ಕೊಟ್ಟಿರುತ್ತಾರೆ. ಅಂದಹಾಗೆ ಪೂರ್ತಿ ಚಿತ್ರವನ್ನು ಹಾಗೆಯೇ ಉಳಿಸಿಕೊಂಡು ಅದರ ಗಾತ್ರವನ್ನು ಕಡಿಮೆಮಾಡುವುದು, ಚಿತ್ರವನ್ನು ಕ್ರಾಪ್ ಮಾಡುವುದು ಎರಡೂ ಬೇರೆಬೇರೆ ಸಂಗತಿಗಳು. ಮೊದಲ ಸನ್ನಿವೇಶದಲ್ಲಿ ಚಿತ್ರದ ಉದ್ದ-ಅಗಲಗಳನ್ನು ಸಮಪ್ರಮಾಣದಲ್ಲಿ ಕಡಿಮೆಮಾಡುವುದರಿಂದ ಚಿತ್ರದ ಗಾತ್ರ-ಗುಣಮಟ್ಟಗಳೆರಡೂ ಕಡಿಮೆಯಾಗುತ್ತವೆ. ಕ್ರಾಪ್ ಮಾಡಿದಾಗ ಚಿತ್ರದ ಹಲವು ಭಾಗಗಳನ್ನು ತೆಗೆದುಹಾಕುತ್ತೇವಲ್ಲ, ಆಗಲೂ ಅದರ ಗಾತ್ರ ಕಡಿಮೆಯಾಗುತ್ತದೆ. ಆದರೆ ಅದರ ಗುಣಮಟ್ಟ (ರೆಸಲ್ಯೂಶನ್) ಮೂಲ ಚಿತ್ರದಷ್ಟೇ ಇರುತ್ತದೆ.
75 Cryptography ಕ್ರಿಪ್ಟೋಗ್ರಫಿ ಮಾಹಿತಿಯನ್ನು ಸುರಕ್ಷಿತ ರೂಪಕ್ಕೆ ಪರಿವರ್ತಿಸುವ ಮೂಲಕ ಅದನ್ನು ಜೋಪಾನಮಾಡುವ ವಿಜ್ಞಾನ ಹಲವು ಸಂದರ್ಭಗಳಲ್ಲಿ ಮಾಹಿತಿ ವಿನಿಮಯಕ್ಕೆ ನೀಡುವಷ್ಟು, ಅಥವಾ ಅದಕ್ಕಿಂತ ಕೊಂಚ ಹೆಚ್ಚೇ, ಪ್ರಾಮುಖ್ಯವನ್ನು ಆ ವಿನಿಮಯ ಸುರಕ್ಷಿತವಾಗಿರುವಂತೆ ನೋಡಿಕೊಳ್ಳುವುದಕ್ಕೆ ಕೊಡಬೇಕಾಗುತ್ತದೆ. ವ್ಯಕ್ತಿಗಳಿಗೆ ಅಥವಾ ಸಂಸ್ಥೆಗಳಿಗೆ ಸಂಬಂಧಿಸಿದ ಖಾಸಗಿ ಮಾಹಿತಿ ಮೂರನೆಯವರ ಕೈಸೇರದಂತೆ ಕಾಪಾಡಿಕೊಳ್ಳಲು ಇದು ಅತ್ಯಗತ್ಯ. ಇಂತಹ ಸಂದರ್ಭಗಳಲ್ಲಿ ಕ್ರಿಪ್ಟೋಗ್ರಫಿ ಅತ್ಯಂತ ಮಹತ್ವ ಪಡೆದುಕೊಳ್ಳುತ್ತದೆ. ಮಾಹಿತಿಯನ್ನು ಸುರಕ್ಷಿತ ರೂಪಕ್ಕೆ ಪರಿವರ್ತಿಸುವ ಮೂಲಕ ಅದನ್ನು ಜೋಪಾನಮಾಡುವ ವಿಜ್ಞಾನವೇ ಕ್ರಿಪ್ಟೋಗ್ರಫಿ. ಮಾಹಿತಿಯನ್ನು ಹೀಗೆ ಸುರಕ್ಷಿತ ರೂಪಕ್ಕೆ ಪರಿವರ್ತಿಸಲು ಎನ್‌ಕ್ರಿಪ್‌ಶನ್ (ಗೂಢಲಿಪೀಕರಣ) ಎಂಬ ಪ್ರಕ್ರಿಯೆಯನ್ನು ಬಳಸಲಾಗುತ್ತದೆ. ಕಳುಹಿಸಲಾಗುವ ಮಾಹಿತಿಯನ್ನು ನಿರ್ದಿಷ್ಟ ಸೂತ್ರ ಬಳಸಿ ಗೂಢಲಿಪಿಯನ್ನಾಗಿ ಪರಿವರ್ತಿಸುವುದು (ಎನ್‌ಕ್ರಿಪ್ಟ್ ಮಾಡುವುದು) ಈ ಪ್ರಕ್ರಿಯೆಯ ಮೂಲ ಮಂತ್ರ. ಮಾಹಿತಿಯನ್ನು ಗೂಢಲಿಪಿಗೆ ಪರಿವರ್ತಿಸಿ ಸುರಕ್ಷಿತವಾಗಿ ಕಳಿಸುವ ಅಭ್ಯಾಸ ಹಿಂದಿನ ಕಾಲದಿಂದಲೇ ಇತ್ತು. ಇಂದಿನ ಸನ್ನಿವೇಶಕ್ಕೆ ತಕ್ಕಂತೆ ಡಿಜಿಟಲ್ ರೂಪದ ಮಾಹಿತಿಯನ್ನು ಜೋಪಾನಮಾಡಲು, ಅದು ಅನಧಿಕೃತ ವ್ಯಕ್ತಿಗಳ ಕೈಸೇರದಂತೆ ತಡೆಯಲು ಕ್ರಿಪ್ಟೋಗ್ರಫಿಯನ್ನು ಬಳಸಲಾಗುತ್ತದೆ. ಜಾಲದ ಮೂಲಕ ರವಾನಿಸುವಾಗ ಮಾತ್ರವೇ ಅಲ್ಲ, ನಮ್ಮದೇ ಕಂಪ್ಯೂಟರಿನಲ್ಲಿರುವ ದಾಖಲೆಗಳನ್ನೂ ಗೂಢಲಿಪೀಕರಣ ಮಾಡಿ ಇಟ್ಟುಕೊಳ್ಳಬಹುದು. ಅಂದಹಾಗೆ ಕ್ರಿಪ್ಟೋಗ್ರಫಿಯ ದುರುಪಯೋಗ ಕೂಡ ಸಾಧ್ಯ. ಯಾರಾದರೂ ನಮ್ಮ ಕಂಪ್ಯೂಟರನ್ನು ಹ್ಯಾಕ್ ಮಾಡಿ ಅಲ್ಲಿರುವ ಮಾಹಿತಿಯನ್ನೆಲ್ಲ ಎನ್‌ಕ್ರಿಪ್ಟ್ ಮಾಡಿಟ್ಟರೆ ಆ ಮಾಹಿತಿಯನ್ನು ನಾವೇ ತೆರೆಯಲು ಸಾಧ್ಯವಾಗದಂತಹ ಪರಿಸ್ಥಿತಿ ರೂಪುಗೊಳ್ಳಬಹುದು (ರ್‍ಯಾನ್ಸಮ್‌ವೇರ್‌ಗಳು ಬಳಸುವುದು ಇದೇ ತಂತ್ರವನ್ನು). ಇಂತಹ ಸನ್ನಿವೇಶದಿಂದ ಪಾರಾಗಲು ನಾವು ಕೈಗೊಳ್ಳಬಹುದಾದ ಕೆಲವು ಕ್ರಮಗಳೆಂದರೆ: ಅಪರಿಚಿತರು ಕಳಿಸಿದ ಇಮೇಲ್-ಮೆಸೇಜುಗಳ ಮೂಲಕವಾಗಲಿ ಸಂಶಯಾಸ್ಪದ ಜಾಲತಾಣಗಳಿಂದಾಗಲಿ ಏನನ್ನೂ ಡೌನ್‌ಲೋಡ್ ಮಾಡದಿರುವುದು, ನಮ್ಮ ಮಾಹಿತಿಯನ್ನು ಕಾಲಕಾಲಕ್ಕೆ ಬ್ಯಾಕಪ್ ಮಾಡಿಡುವುದು ಹಾಗೂ ಸೂಕ್ತ ಆಂಟಿವೈರಸ್ ತಂತ್ರಾಂಶ ಬಳಸುವುದು.
76 Cursor ಕರ್ಸರ್ ಮೌಸ್ ಅನ್ನು ಆಚೀಚೆ ಓಡಾಡಿಸುವಾಗ ನಾವು ಪರದೆಯ ಯಾವ ಭಾಗವನ್ನು ತಲುಪಿದ್ದೇವೆ ಎನ್ನುವುದನ್ನು ಸೂಚಿಸುವ ಚಿಹ್ನೆ ಕಂಪ್ಯೂಟರಿನೊಡನೆ ಮೌಸ್ ಬಳಸುವುದು ನಮಗೆ ಚೆನ್ನಾಗಿಯೇ ಅಭ್ಯಾಸವಾಗಿದೆ. ಕಡತಗಳನ್ನು ತೆರೆಯಲು, ಜಾಲತಾಣಕ್ಕೆ ಭೇಟಿಕೊಡಲು ಕ್ಲಿಕ್ ಮಾಡುವುದೂ ನಮಗೆ ಗೊತ್ತು. ಈ ಪ್ರಕ್ರಿಯೆಯಲ್ಲಿ ಕಂಪ್ಯೂಟರ್ ಪರದೆಯ ಮೂಲೆಗಳನ್ನು ತಲುಪಲು ನಾವು ಮೌಸನ್ನು ಆಚೀಚೆ ಓಡಾಡಿಸುತ್ತೇವೆ; ಈ ಓಡಾಟದ ಫಲವಾಗಿ ಪರದೆಯ ಯಾವ ಭಾಗವನ್ನು ತಲುಪಿದ್ದೇವೆ ಎನ್ನುವುದನ್ನು ಅಲ್ಲಿ ಕಾಣಿಸಿಕೊಳ್ಳುವ ಒಂದು ಸಣ್ಣ ಚಿಹ್ನೆ ಸೂಚಿಸುತ್ತದೆ. ಈ ಚಿಹ್ನೆಯ ಹೆಸರೇ 'ಕರ್ಸರ್'. ಬಹುತೇಕ ಸಂದರ್ಭಗಳಲ್ಲಿ ಇದು ಒಂದು ಬಾಣದ ಗುರುತಿನಂತೆ ಕಾಣಿಸಿಕೊಳ್ಳುತ್ತದೆ (ಇದನ್ನು ಮೌಸ್ ಪಾಯಿಂಟರ್ ಎಂದು ಗುರುತಿಸುವ ಅಭ್ಯಾಸವೂ ಇದೆ). ಕಡತಗಳನ್ನು ತೆರೆಯುವುದಕ್ಕೆ, ತಂತ್ರಾಂಶದೊಳಗಿನ ಆಯ್ಕೆಗಳನ್ನು ಬಳಸುವುದಕ್ಕೆಲ್ಲ ಇದು ಸಹಕಾರಿ. ಪರದೆಯ ಮೇಲೆ ಪಠ್ಯವನ್ನು ಟೈಪಿಸಬಹುದಾದ ಭಾಗಗಳಲ್ಲಿ ಕರ್ಸರ್‌ನ ರೂಪ ಲಂಬ ರೇಖೆಯ ಆಕಾರಕ್ಕೆ ಬದಲಾಗುತ್ತದೆ. ಟೈಪ್ ಮಾಡಲು ಪ್ರಾರಂಭಿಸಿದಂತೆ ಇದೂ ಮಾಯವಾಗಿ ನಾವು ಟೈಪ್ ಮಾಡುವ ಮುಂದಿನ ಅಕ್ಷರ ಎಲ್ಲಿ ಮೂಡಲಿದೆ ಎನ್ನುವುದನ್ನು ಅಲ್ಲಿ ಮಿಂಚುವ ಲಂಬ ಗೆರೆಯೊಂದು ಸೂಚಿಸುತ್ತದೆ. ಇದೇ ರೀತಿಯ ವರ್ತನೆಯನ್ನು ನಾವು ಮೊಬೈಲ್ ಫೋನುಗಳಲ್ಲೂ ನೋಡಬಹುದು. ಜಾಲತಾಣಗಳ ಕೊಂಡಿಯ (ಲಿಂಕ್) ಮೇಲೆ ಮೌಸ್ ಕೊಂಡೊಯ್ದಾಗಲೂ ಕರ್ಸರ್‌ನ ರೂಪ ಬದಲಾಗುವುದುಂಟು. ಅಂತಹ ಸಂದರ್ಭದಲ್ಲಿ ಬಹಳಷ್ಟು ತಂತ್ರಾಂಶಗಳು ಪುಟ್ಟ ಕೈ ಆಕಾರದ ಕರ್ಸರ್ ಅನ್ನು ಪ್ರದರ್ಶಿಸುತ್ತವೆ.
77 CVV ಸಿವಿವಿ ಕಾರ್ಡ್ ವೆರಿಫಿಕೇಶನ್ ವ್ಯಾಲ್ಯೂ; ಭೌತಿಕವಾಗಿ ಕಾರ್ಡ್ ಸ್ವೈಪ್ ಮಾಡದೆ ನಡೆಸುವ ಹಣಕಾಸು ವ್ಯವಹಾರಗಳನ್ನು ದೃಢೀಕರಿಸಲು ನೀಡಬೇಕಾದ ಮಾಹಿತಿಯ ಪೈಕಿ ಈ ಸಂಖ್ಯೆಯೂ ಒಂದು. ಆನ್‌ಲೈನ್ ಜಗತ್ತಿನಲ್ಲಿ ಕ್ರೆಡಿಟ್ ಕಾರ್ಡ್-ಡೆಬಿಟ್ ಕಾರ್ಡುಗಳನ್ನು ಬಳಸುವಾಗ ಒಂದಷ್ಟು ಮಾಹಿತಿಯನ್ನು ತಪ್ಪದೇ ದಾಖಲಿಸಬೇಕು: ಕಾರ್ಡ್ ಸಂಖ್ಯೆ, ಕೊನೆಗೊಳ್ಳುವ ದಿನಾಂಕ, ಕೆಲವೊಮ್ಮೆ ಕಾರ್ಡುದಾರರ ಹೆಸರು. ಇಷ್ಟು ಮಾಹಿತಿಯ ಜೊತೆಗೆ ನಾವು ದಾಖಲಿಸಬೇಕಾದ ಇನ್ನೊಂದು ಸಂಖ್ಯೆಯ ಹೆಸರೇ ಸಿವಿವಿ, ಅರ್ಥಾತ್ 'ಕಾರ್ಡ್ ವೆರಿಫಿಕೇಶನ್ ವ್ಯಾಲ್ಯೂ'. ಇದನ್ನು ಸಿವಿವಿ೨, ಸಿವಿಸಿ, ಸಿವಿಸಿ೨ ಎಂದೂ ಗುರುತಿಸಲಾಗುತ್ತದೆ (ಸಿವಿಸಿ ಎನ್ನುವುದು 'ಕಾರ್ಡ್ ವೆರಿಫಿಕೇಶನ್ ಕೋಡ್' ಎಂಬ ಹೆಸರಿನ ಹ್ರಸ್ವರೂಪ). ಮೂರಂಕಿಯ ಈ ಸಂಖ್ಯೆ ಬಹುತೇಕ ಕಾರ್ಡುಗಳ ಹಿಂಬದಿಯಲ್ಲಿ, ಹಸ್ತಾಕ್ಷರದ ಪಕ್ಕದಲ್ಲಿ ಮುದ್ರಿತವಾಗಿರುತ್ತದೆ. ಭೌತಿಕವಾಗಿ ಕಾರ್ಡ್ ಸ್ವೈಪ್ ಮಾಡದೆ ನಡೆಸುವ ("ಕಾರ್ಡ್ ನಾಟ್ ಪ್ರೆಸೆಂಟ್") ವ್ಯವಹಾರಗಳಲ್ಲಿ ವಂಚನೆಯನ್ನು ತಡೆಯಲು ಕೈಗೊಳ್ಳಲಾಗಿರುವ ಹಲವು ಕ್ರಮಗಳಲ್ಲಿ ಸಿವಿವಿ ಬಳಕೆಯೂ ಒಂದು. ಕ್ರೆಡಿಟ್ ಕಾರ್ಡಿನ ಮ್ಯಾಗ್ನೆಟಿಕ್ ಪಟ್ಟಿಯಲ್ಲಾಗಲಿ, ಕಾರ್ಡ್ ವಿವರಗಳನ್ನು ಉಳಿಸಿಟ್ಟುಕೊಂಡಿರುವ ಜಾಲತಾಣದಲ್ಲಾಗಲಿ ಈ ಸಂಖ್ಯೆಯನ್ನು ಶೇಖರಿಸಲಾಗಿರುವುದಿಲ್ಲ - ಹಾಗಾಗಿ ಆನ್‌ಲೈನ್ ವಹಿವಾಟು ನಡೆಸುವಾಗ ಮೇಲೆ ಹೇಳಿದ ಮಾಹಿತಿಯ ಜೊತೆಗೆ ಈ ಸಂಖ್ಯೆಯನ್ನೂ ದಾಖಲಿಸುವಂತೆ ಕೇಳಲಾಗುತ್ತದೆ. ಭಾರತ ಸೇರಿದಂತೆ ಜಗತ್ತಿನ ಹಲವೆಡೆ ಸಿವಿವಿ ಜೊತೆಗೆ ಇನ್ನೊಂದು ಪಾಸ್‌ವರ್ಡನ್ನೂ ದಾಖಲಿಸುವಂತೆ ಕೇಳಲಾಗುತ್ತದೆ. ಆ ಪಾಸ್‌ವರ್ಡು ಸಿವಿವಿಯಂತೆ ಕಾರ್ಡಿನ ಮೇಲೆ ಮುದ್ರಿತವಾಗಿರುವುದಿಲ್ಲ; ಹಾಗಾಗಿ ಅದು ಸಿವಿವಿಗಿಂತ ಕೊಂಚ ಹೆಚ್ಚಿನ ಸುರಕ್ಷತೆ ಒದಗಿಸುತ್ತದೆ. ನೆನಪಿಡಿ, ಕಾರ್ಡ್ ವಿವರಗಳನ್ನಾಗಲಿ ಸಿವಿವಿ - ಪಾಸ್‌ವರ್ಡ್ - ಓಟಿಪಿಗಳನ್ನಾಗಲಿ ಇತರರೊಡನೆ ಹಂಚಿಕೊಳ್ಳುವುದು ಖಂಡಿತಾ ಒಳ್ಳೆಯ ಅಭ್ಯಾಸವಲ್ಲ!
78 Cyber Squatting ಸೈಬರ್ ಸ್ಕ್ವಾಟಿಂಗ್ ಆಕರ್ಷಕವಾದ, ನೆನಪಿಡಲು ಸುಲಭವಾದ ಹೆಸರಿನ ಜಾಲತಾಣಗಳನ್ನು ಕೊಂಡಿಟ್ಟುಕೊಂಡು ಅದನ್ನು ಹೆಚ್ಚಿನ ಬೆಲೆಗೆ ಮಾರಾಟಮಾಡಲು ಪ್ರಯತ್ನಿಸುವ ಪ್ರಕ್ರಿಯೆ ಒಳ್ಳೆ ಜಾಗದಲ್ಲಿ ಸೈಟು ಕೊಂಡು ಆನಂತರ ಮಾರುವ ಮೂಲಕ ಹಣಮಾಡುವ ಜನ ರಿಯಲ್ ಎಸ್ಟೇಟ್ ಪ್ರಪಂಚದಲ್ಲಿರುವಂತೆ ಆಕರ್ಷಕವಾದ, ನೆನಪಿಡಲು ಸುಲಭವಾದ ಹೆಸರಿನ ಜಾಲತಾಣಗಳನ್ನು ಕೊಂಡಿಟ್ಟುಕೊಂಡು ಅದನ್ನು ಹೆಚ್ಚಿನ ಬೆಲೆಗೆ ಮಾರಿಕೊಳ್ಳುವವರು ಜಾಲಲೋಕದಲ್ಲೂ ಇದ್ದಾರೆ. ಜಾಲತಾಣವನ್ನು ಕೊಂಡು ಗಿರಾಕಿಗಳಿಗೆ ಕಾದುಕೂರುತ್ತಾರಲ್ಲ, ಹಾಗಾಗಿ ಇಂತಹವರಿಗೆ 'ಸೈಬರ್ ಸ್ಕ್ವಾಟರ್'ಗಳೆಂದು ಹೆಸರು ('ಸ್ಕ್ವಾಟ್' ಎಂದರೆ ಕುಳಿತುಬಿಡು ಅಥವಾ ಕುಕ್ಕರಿಸು ಎಂದರ್ಥ). ಬೇರೆಯವರಿಗೆ ಇಷ್ಟವಾಗಬಹುದಾದ ಹೆಸರಿನ ತಾಣವನ್ನು ಕೊಂಡು, ಆನಂತರ ಅದನ್ನು ಆಸಕ್ತರಿಗೆ ಮಾರಿ ಲಾಭ ಮಾಡಿಕೊಳ್ಳುವುದೇನೋ ಸರಿ. ಆದರೆ ಸಂಸ್ಥೆಗಳ, ನೋಂದಾಯಿತ ಟ್ರೇಡ್‌ಮಾರ್ಕುಗಳ ಹೆಸರಿನ ತಾಣಗಳನ್ನೆಲ್ಲ ನಾವು ಹಾಗೆ ಕೊಂಡಿಟ್ಟುಕೊಳ್ಳುವಂತಿಲ್ಲ. ಒಂದೊಮ್ಮೆ ಕೊಂಡರೂ ಸಂಬಂಧಪಟ್ಟ ಸಂಸ್ಥೆಗಳು ನ್ಯಾಯಾಲಯಕ್ಕೆ ಹೋದ ಪಕ್ಷದಲ್ಲಿ ಜಾಲತಾಣದ ಹಕ್ಕುಗಳನ್ನು ಅವರಿಗೆ ಬಿಟ್ಟುಕೊಡಬೇಕಾಗುತ್ತದೆ. ಸೈಬರ್ ಸ್ಕ್ವಾಟಿಂಗ್‌ನ ಇನ್ನೊಂದು ರೂಪವೂ ಇದೆ. ಜನಪ್ರಿಯ ತಾಣಗಳ ಹೆಸರಿನಲ್ಲಿ ಕೊಂಚವೇ ಬದಲಾವಣೆ ಮಾಡಿ (ಉದಾಹರಣೆಗೆ paypal ಬದಲು paypa1) ಹೊಸ ತಾಣಗಳನ್ನು ನೋಂದಾಯಿಸಿಕೊಳ್ಳುವುದು ಇದರ ಸಾರಾಂಶ. ಇಂತಹ ನಕಲಿ ತಾಣಗಳನ್ನು ಮೂಲ ತಾಣದಂತೆಯೇ ವಿನ್ಯಾಸಗೊಳಿಸುವ ಖದೀಮರು ಸ್ಪಾಮ್ ಹಾಗೂ ಫಿಶಿಂಗ್ ಸಂದೇಶಗಳ ಮೂಲಕ ಜನರನ್ನು ಅತ್ತ ಸೆಳೆದು ಅವರ ವೈಯಕ್ತಿಕ ಮಾಹಿತಿಯನ್ನು ಕದಿಯಲು ಪ್ರಯತ್ನಿಸುತ್ತಾರೆ.
79 Cybercrime ಸೈಬರ್‌ಕ್ರೈಮ್ ಮಾಹಿತಿ ತಂತ್ರಜ್ಞಾನದ ಸೌಲಭ್ಯ-ಸವಲತ್ತುಗಳ ನೆರವು ಪಡೆದು ಎಸಗುವ ಅಪರಾಧ ಚಟುವಟಿಕೆ ಮಾಹಿತಿ ತಂತ್ರಜ್ಞಾನದ ಸೌಲಭ್ಯ-ಸವಲತ್ತುಗಳ ನೆರವು ಪಡೆದು ಎಸಗುವ ಅಪರಾಧ ಚಟುವಟಿಕೆಗಳನ್ನು 'ಸೈಬರ್ ಕ್ರೈಮ್' ಎಂದು ಗುರುತಿಸಲಾಗುತ್ತದೆ. ಇತರರ ಅವಹೇಳನ, ಪೀಡನೆ, ಅಶ್ಲೀಲ ಮಾಹಿತಿಯ ಪ್ರಸಾರಗಳಿಂದ ಪ್ರಾರಂಭಿಸಿ ವಂಚನೆ, ಕಳ್ಳತನ, ಭಯೋತ್ಪಾದನೆಗಳವರೆಗೆ ಸೈಬರ್ ಕ್ರೈಮ್‌ನಲ್ಲಿ ಹಲವು ವಿಧ. ಈ ಬಗೆಯ ಹೈಟೆಕ್ ಚಟುವಟಿಕೆಗಳಲ್ಲಿ ಮೊಬೈಲ್, ಕಂಪ್ಯೂಟರ್ ಹಾಗೂ ಅಂತರಜಾಲ ಸಂಪರ್ಕಗಳನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ಎಸ್ಸೆಮ್ಮೆಸ್, ವಾಟ್ಸ್‌ಆಪ್, ಇಮೇಲ್, ಫೇಸ್‌ಬುಕ್ ಇತ್ಯಾದಿಗಳನ್ನೆಲ್ಲ ಸೈಬರ್ ಕ್ರಿಮಿನಲ್‌ಗಳು ತಮ್ಮ ಅಪರಾಧದಲ್ಲಿ ಬಳಸುತ್ತಾರೆ. ಬಹುಮಾನ ಬಂದಿದೆಯೆಂದೋ ವಿದೇಶದಲ್ಲಿ ಕೆಲಸ ಕೊಡಿಸುತ್ತೇವೆಂದೋ ಬರುವ ಫಿಶಿಂಗ್ ಸಂದೇಶಗಳೆಲ್ಲ ಸೈಬರ್ ಅಪರಾಧದ ಗಾಳಗಳೇ. ಇದೇರೀತಿ ಇತರರ ವೆಬ್‌ಸೈಟ್‌ಗಳನ್ನು ಹಾಳುಗೆಡವುವ, ಸಾಮಾನ್ಯವಾಗಿ 'ಹ್ಯಾಕಿಂಗ್' ಎಂದು ಗುರುತಿಸಲಾಗುವ, ಚಟುವಟಿಕೆ ಕೂಡ ಸೈಬರ್ ಅಪರಾಧ. ಭಾರತವೂ ಸೇರಿದಂತೆ ಪ್ರಪಂಚದ ಹಲವು ರಾಷ್ಟ್ರಗಳಲ್ಲಿ ಸೈಬರ್ ಕ್ರೈಮ್ ತಡೆಗೆ ಅನೇಕ ಕಾನೂನುಗಳನ್ನು ರಚಿಸಲಾಗಿದೆ.
80 Database ಡೇಟಾಬೇಸ್ ದತ್ತಾಂಶವನ್ನು ವ್ಯವಸ್ಥಿತವಾಗಿ ಶೇಖರಿಸಿಟ್ಟು, ಅಗತ್ಯಬಿದ್ದಾಗ ಅಗತ್ಯಬಿದ್ದ ರೂಪದಲ್ಲಿ ಪಡೆದುಕೊಳ್ಳಲು ನೆರವಾಗುವ ವ್ಯವಸ್ಥೆ ದಿನಸಿ ಅಂಗಡಿಯಿಂದ ತರಬೇಕಾದ ಸಾಮಾನು, ತಿಂಗಳ ಮೊದಲಲ್ಲಿ ಪಾವತಿಸಬೇಕಾದ ಬಿಲ್ಲುಗಳು, ಮಕ್ಕಳು ಬೇರೆಬೇರೆ ವಿಷಯದಲ್ಲಿ ಗಳಿಸಿದ ಅಂಕಗಳು, ಆಪ್ತರ ದೂರವಾಣಿ ಸಂಖ್ಯೆಗಳು - ಹೀಗೆ ನಾವು ಸದಾಕಾಲ ವಿವಿಧ ಬಗೆಯ ದತ್ತಾಂಶಗಳನ್ನು (ಡೇಟಾ) ನಿಭಾಯಿಸುತ್ತಲೇ ಇರುತ್ತೇವೆ. ವೈಯಕ್ತಿಕ ಉದಾಹರಣೆಗಳಲ್ಲಿ ಇಂತಹ ದತ್ತಾಂಶದ ಪ್ರಮಾಣ ಕಡಿಮೆಯಿರುತ್ತದೆ - ಹೈಸ್ಕೂಲು ವಿದ್ಯಾರ್ಥಿಯ ಅಂಕಪಟ್ಟಿಯಲ್ಲಿ ಏಳೆಂಟು ವಿಷಯಗಳಿರುತ್ತವಲ್ಲ, ಹಾಗೆ. ಆದರೆ ಯಾವುದೋ ಬ್ಯಾಂಕಿನ ಗ್ರಾಹಕರ ಪಟ್ಟಿಯನ್ನೋ, ಆಧಾರ್‌ನಂತಹ ಯೋಜನೆಗಳಲ್ಲಿ ನೋಂದಾಯಿಸಿಕೊಂಡವರ ವಿವರಗಳನ್ನೋ ನೋಡಿದರೆ ಅಂತಹ ದತ್ತಾಂಶ ಅಪಾರ ಪ್ರಮಾಣದ ದಾಖಲೆಗಳನ್ನು ಒಳಗೊಂಡಿರುತ್ತದೆ. ಇಷ್ಟೆಲ್ಲ ಭಾರೀ ಪ್ರಮಾಣದ ದತ್ತಾಂಶವನ್ನು ಒಂದೆಡೆ ಶೇಖರಿಸಿಟ್ಟು, ಅಗತ್ಯಬಿದ್ದಾಗ ಅಗತ್ಯಬಿದ್ದ ರೂಪದಲ್ಲಿ ಅದನ್ನು ಪಡೆದುಕೊಳ್ಳಲು ಅನುವುಮಾಡಿಕೊಡುವ ವ್ಯವಸ್ಥೆಯನ್ನು ಡೇಟಾಬೇಸ್ ಎಂದು ಕರೆಯುತ್ತಾರೆ. ದತ್ತಾಂಶವನ್ನು ಸುಲಭವಾಗಿ ದಾಖಲಿಸಲು, ಅದರಲ್ಲಿ ಬೇಕಾದುದನ್ನು ಹುಡುಕಲು, ಅಗತ್ಯ ರೀತಿಯಲ್ಲಿ ವಿಶ್ಲೇಷಿಸಲು ಹಾಗೂ ವಿವಿಧ ರೀತಿಯ ವರದಿಗಳನ್ನು (ರಿಪೋರ್ಟ್) ತಯಾರಿಸಲು ಡೇಟಾಬೇಸ್‌ಗಳು ನೆರವಾಗುತ್ತದೆ. ಸಂಖ್ಯೆಗಳು, ಪಠ್ಯ, ಚಿತ್ರ, ಕಡತಗಳು - ಹೀಗೆ ಹಲವು ಬಗೆಯ ದತ್ತಾಂಶಗಳನ್ನು ಡೇಟಾಬೇಸ್‌ಗಳ ಮೂಲಕ ನಿಭಾಯಿಸುವುದು ಸಾಧ್ಯ. ಇಂತಹ ಡೇಟಾಬೇಸ್‌ಗಳನ್ನು ನಿರ್ವಹಿಸುವ ತಂತ್ರಾಂಶಗಳನ್ನು ಡೇಟಾಬೇಸ್ ಮ್ಯಾನೇಜ್‌ಮೆಂಟ್ ಸಿಸ್ಟಂ (ಡಿಬಿಎಂಎಸ್) ಎಂದು ಕರೆಯುತ್ತಾರೆ. ಮೈಕ್ರೋಸಾಫ್ಟ್ ಆಕ್ಸೆಸ್, ಒರೇಕಲ್, ಎಸ್‌ಕ್ಯೂಎಲ್ ಸರ್ವರ್‌ಗಳೆಲ್ಲ ಡಿಬಿಎಂಎಸ್‌ಗೆ ಉದಾಹರಣೆಗಳು.