A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 318

Backtrace:

File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 319

Backtrace:

File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 320

Backtrace:

File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler

File: /Appdata/padakanaja.karnataka.gov.in/index.php
Line: 318
Function: require_once

Padakanaja - Dictionary View
ಅನಿಸಿಕೆ

ಪದಕೋಶ: ಕಂಪ್ಯೂಟರ್ ತಂತ್ರಜ್ಞಾನ ಪದವಿವರಣ ಕೋಶ | ಇಂಗ್ಲೀಷ್-ಕನ್ನಡ |ಪ್ರಕಾಶಕರು - ಕನ್ನಡ ಅಭಿವೃದ್ಧಿ ಪ್ರಾಧಿಕಾರ (2017)

Show entries
ಕ್ರಮ ಸ೦ಖ್ಯೆ ಇಂಗ್ಲೀಷ್ ಪದ
(English Word)
ಕನ್ನಡ ಪದ
(Kannada Word)
ಕನ್ನಡ ಅರ್ಥ
(Kannada Meaning)
ವಿಷಯ ವರ್ಗೀಕರಣ
(Word Subject)
ವ್ಯಾಕರಣ ವಿಶೇಷ
(Word Grammer)
ಕನ್ನಡ ಉಚ್ಚಾರಣೆ
(Kannada Pronunciation)
ಪರ್ಯಾಯ ಪದ
(Word Synonyms)
ಇಂಗ್ಲೀಷ್ ಅರ್ಥ
(English Meaning)
ಸಂಕ್ಷಿಪ್ತ ವಿವರಣೆ
(Short Description)
ದೀರ್ಘ ವಿವರಣೆ
(Long Description)
ಆಡಳಿತಾತ್ಮಕ ಪದ
(Administrative Word)
81 Datatype ಡೇಟಾಟೈಪ್ ಯಾವುದೇ ತಂತ್ರಾಂಶದಲ್ಲಿ ಬಳಕೆಯಾಗುವ ದತ್ತಾಂಶ (ಡೇಟಾ) ಯಾವ ಬಗೆಯದಾಗಿರಬೇಕು ಎನ್ನುವುದನ್ನು ಸೂಚಿಸುವ ಅಂಶ ತಂತ್ರಾಂಶಗಳು ಸದಾಕಾಲವೂ ಒಂದಲ್ಲ ಒಂದು ಬಗೆಯ ದತ್ತಾಂಶವನ್ನು (ಡೇಟಾ) ಬಳಸುತ್ತಿರುತ್ತವೆ. ಬಳಕೆದಾರರು ದಾಖಲಿಸುವ (ಇನ್‌ಪುಟ್) ದತ್ತಾಂಶ, ಆಂತರಿಕ ಲೆಕ್ಕಾಚಾರಗಳಿಗೆ ಬಳಕೆಯಾಗುವ ದತ್ತಾಂಶ, ಅಂತಿಮವಾಗಿ ಉತ್ತರವನ್ನು (ಔಟ್‌ಪುಟ್) ಸಿದ್ಧಪಡಿಸಲು ಬೇಕಾದ ದತ್ತಾಂಶಗಳೆಲ್ಲ ಈ ಪಟ್ಟಿಯಲ್ಲಿ ಸೇರುತ್ತವೆ. ಇಂತಹ ಪ್ರತಿ ಉದಾಹರಣೆಯಲ್ಲೂ ಯಾವ ಬಗೆಯ ದತ್ತಾಂಶವನ್ನು ನಿರೀಕ್ಷಿಸಬೇಕು ಎನ್ನುವ ವಿವರವನ್ನು ತಂತ್ರಾಂಶದಲ್ಲಿ ಮುಂಚಿತವಾಗಿಯೇ ನೀಡಲಾಗಿರುತ್ತದೆ: ಜನ್ಮದಿನ ದಾಖಲಿಸುವಂತೆ ಬಳಕೆದಾರರನ್ನು ಕೇಳಿದ್ದರೆ ಅದಕ್ಕೆ ಪ್ರತಿಯಾಗಿ ಒಂದು ದಿನಾಂಕವೇ ಸಿಗಬೇಕು ಎಂದು ತಂತ್ರಾಂಶಕ್ಕೆ ಗೊತ್ತಿರುತ್ತದೆ. ಇದೇ ರೀತಿ ಪಿನ್‌ಕೋಡ್‌ನಲ್ಲಿ ಅಂಕಿಗಳೇ ಇರಬೇಕು, ಹಣ ವರ್ಗಾಯಿಸುವಾಗ ರೂಪಾಯಿಗಳ ಜೊತೆಗೆ ಪೈಸೆಗಳನ್ನೂ ನಮೂದಿಸಬಹುದು ಎನ್ನುವಂತಹ ನಿಯಮಗಳೂ ಇರುತ್ತವೆ. ಸಂಖ್ಯೆಯೊಂದರಲ್ಲಿ ಎಷ್ಟು ಅಂಕಿಗಳಿರಬಹುದು, ಪಠ್ಯದಲ್ಲಿ ಎಷ್ಟು ಅಕ್ಷರಗಳಿರಬಹುದು ಎನ್ನುವಂತಹ ನಿರ್ಬಂಧಗಳನ್ನೂ ಇಡುವುದು ಸಾಧ್ಯ. ಹೀಗೆ ಯಾವ ದತ್ತಾಂಶ ಯಾವ ಬಗೆಯದಾಗಿರಬೇಕು ಎನ್ನುವುದನ್ನು ಅದರ ಡೇಟಾಟೈಪ್ (ದತ್ತಾಂಶದ ಬಗೆ) ಸೂಚಿಸುತ್ತದೆ. ಅಂಕಿಗಳು, ದಶಾಂಶಗಳು, ಅಕ್ಷರಗಳು, ದಿನಾಂಕ - ಹೀಗೆ ಡೇಟಾಟೈಪ್‌ಗಳಲ್ಲಿ ಹಲವು ವಿಧ. ತಂತ್ರಾಂಶ ಯಾವ ಬಗೆಯ ದತ್ತಾಂಶವನ್ನು ನಿರೀಕ್ಷಿಸುತ್ತದೋ ಅದನ್ನು ಅದೇ ಬಗೆಯಲ್ಲಿ ನೀಡದಿದ್ದರೆ ತಂತ್ರಾಂಶದ ಕಾರ್ಯಾಚರಣೆಯಲ್ಲಿ ಅಡಚಣೆಯಾಗುವ ಸಾಧ್ಯತೆ ಇರುತ್ತದೆ.
82 DDoS ಡಿಡಿಓಎಸ್ ಕುತಂತ್ರಾಂಶಗಳ ಸಹಾಯದಿಂದ ಕಂಪ್ಯೂಟರ್ ಜಾಲಗಳ ಹಾಗೂ ಜಾಲತಾಣಗಳತ್ತ ಕೃತಕ ಮಾಹಿತಿಯ ಪ್ರವಾಹವನ್ನು ಸೃಷ್ಟಿಸುವ, ಆ ಮೂಲಕ ಅವುಗಳ ಕಾರ್ಯಾಚರಣೆಗೆ ಅಡ್ಡಿಪಡಿಸುವ ಬ್ಲ್ಯಾಕ್‌ಮೇಲ್ ತಂತ್ರ ತಂತ್ರಜ್ಞಾನ ಸರ್ವವ್ಯಾಪಿಯಾಗಿ ಬೆಳೆದಂತೆ ಸಮಾಜಮುಖಿ ಕೆಲಸಗಳ ಜೊತೆಗೆ ಸಮಾಜವಿರೋಧಿ ಕೃತ್ಯಗಳಲ್ಲೂ ಅದು ಬಳಕೆಯಾಗುತ್ತಿದೆ. ತಂತ್ರಜ್ಞಾನದ ನೆರವಿನಿಂದ ನಡೆಯುವ ದುಷ್ಕೃತ್ಯಗಳಿಗೆ 'ಡಿಸ್ಟ್ರಿಬ್ಯೂಟೆಡ್ ಡಿನಯಲ್ ಆಫ್ ಸರ್ವಿಸ್' ದಾಳಿಗಳು ಒಂದು ಉದಾಹರಣೆ. ಡಿಡಿಓಎಸ್ ಎನ್ನುವುದು ಈ ಹೆಸರಿನ ಹ್ರಸ್ವರೂಪ. ಕುತಂತ್ರಾಂಶಗಳ ಸಹಾಯದಿಂದ ಕಂಪ್ಯೂಟರ್ ಜಾಲಗಳ ಹಾಗೂ ಜಾಲತಾಣಗಳತ್ತ ಕೃತಕ ಮಾಹಿತಿಯ ಪ್ರವಾಹವನ್ನು ಸೃಷ್ಟಿಸುವ ಬ್ಲ್ಯಾಕ್‌ಮೇಲ್ ತಂತ್ರ ಇದು. ಇಂತಹ ದಾಳಿಗೆ ಗುರಿಯಾದ ವ್ಯವಸ್ಥೆ ಅಪಾರ ಒತ್ತಡಕ್ಕೆ ಗುರಿಯಾಗುವುದರಿಂದ ಅದರ ಕಾರ್ಯಾಚರಣೆ ಬಲು ನಿಧಾನವಾಗಿಬಿಡುತ್ತದೆ. ದಾಳಿ ಹೆಚ್ಚುಕಾಲ ಮುಂದುವರೆದದ್ದೇ ದಾಳಿಗೀಡಾದ ವ್ಯವಸ್ಥೆ ಸಂಪೂರ್ಣವಾಗಿ ಸ್ಥಗಿತಗೊಳ್ಳುವ (ಕ್ರ್ಯಾಶ್ ಆಗುವ) ಸಾಧ್ಯತೆಯೂ ಇರುತ್ತದೆ. ಹೀಗೆ ಮಾಹಿತಿಯ ಪ್ರವಾಹವನ್ನು ಸೃಷ್ಟಿಸಲು ಜಗತ್ತಿನ ಬೇರೆಬೇರೆ ಕಡೆಗಳಲ್ಲಿರುವ ಕಂಪ್ಯೂಟರುಗಳು - ಕಂಪ್ಯೂಟರ್ ಜಾಲಗಳು ಬಳಕೆಯಾಗುತ್ತವೆ. ಬಹಳಷ್ಟು ಸಂದರ್ಭಗಳಲ್ಲಿ ತಮ್ಮ ಕಂಪ್ಯೂಟರುಗಳು ದುರ್ಬಳಕೆಯಾಗುತ್ತಿರುವ ಸಂಗತಿ ಅವುಗಳ ಮಾಲೀಕರಿಗೆ ಗೊತ್ತೇ ಇರುವುದಿಲ್ಲ! ಇಂತಹ ದಾಳಿಗಳನ್ನು ನಡೆಸುವುದರಿಂದ ಅದರ ಹಿಂದಿರುವ ಕುತಂತ್ರಿಗಳಿಗೆ ಆಗುವ ಲಾಭಗಳು ಹಲವು ಬಗೆಯವು. ದಾಳಿಗೆ ತುತ್ತಾದ ಜಾಲತಾಣ ನಿಷ್ಕ್ರಿಯವಾದರೆ ಅವರ ಮೊದಲ ಉದ್ದೇಶ ಪೂರ್ಣವಾದಂತೆ - ಯಾವುದೋ ಸಂಘಸಂಸ್ಥೆಯ ತಾಣವಾದರೆ ಅವರಿಗೆ ಆಗುವ ಅವಮಾನ ಇಲ್ಲವೇ ವಾಣಿಜ್ಯ ಉದ್ದೇಶದ ತಾಣವಾದರೆ ಅವರಿಗೆ ಆಗುವ ನಷ್ಟ ಕುತಂತ್ರಿಗಳಿಗೆ ಸಮಾಧಾನ ನೀಡುತ್ತದೆ. ತಮ್ಮ ವಿರುದ್ಧ ಕೆಲಸಮಾಡುತ್ತಿರುವವರಿಗೆ ತೊಂದರೆ ಕೊಡಲು ಈ ತಂತ್ರ ಬಳಸುವ ದುಷ್ಕರ್ಮಿಗಳೂ ಇದ್ದಾರೆ. ಇನ್ನು ಕೆಲವು ಸಂದರ್ಭಗಳಲ್ಲಿ ದಾಳಿ ನಿಲ್ಲಿಸಿ ಜಾಲತಾಣ ಮತ್ತೆ ಕೆಲಸಮಾಡುವಂತೆ ಮಾಡಲು ಅವರು ಹಣಕ್ಕಾಗಿ ಬೇಡಿಕೆಯಿಡುವುದೂ ಉಂಟು.
83 Debug ಡೀಬಗ್ ಸಿದ್ಧವಾದ ತಂತ್ರಾಂಶವನ್ನು ಬಳಕೆದಾರರಿಗೆ ನೀಡುವ ಮುನ್ನ ಅದರಲ್ಲಿರಬಹುದಾದ ತಪ್ಪುಗಳನ್ನು (ಬಗ್) ಗುರುತಿಸಿ ಸರಿಪಡಿಸುವ ಕೆಲಸ ತಂತ್ರಾಂಶ ರಚನೆ ಅಸಮರ್ಪಕವಾಗಿದ್ದರೆ ಅದರ ಕಾರ್ಯನಿರ್ವಹಣೆಯಲ್ಲಿ ತಪ್ಪುಗಳಾಗುವುದು ಸಹಜ. ಅನಪೇಕ್ಷಿತ ಫಲಿತಾಂಶಗಳನ್ನು ನೀಡುವ, ಬಳಕೆದಾರರಿಗೆ ಕಿರಿಕಿರಿಮಾಡುವ ಇಂತಹ ತಪ್ಪುಗಳನ್ನು 'ಬಗ್' ಎಂದು ಕರೆಯುತ್ತಾರೆ. ಬಗ್ ದೆಸೆಯಿಂದ ತಂತ್ರಾಂಶಗಳ ಕಾರ್ಯನಿರ್ವಹಣೆಯಲ್ಲಾಗುವ ವ್ಯತ್ಯಯ ಕಿರಿಕಿರಿಯ ಜೊತೆಗೆ ಭಾರೀ ಪ್ರಮಾಣದ ಆರ್ಥಿಕ ನಷ್ಟವನ್ನೂ ಉಂಟುಮಾಡಬಲ್ಲದು. ತಂತ್ರಾಂಶವನ್ನು ಬಳಕೆದಾರರಿಗೆ ನೀಡುವ ಮೊದಲು ಇಂತಹ ತಪ್ಪುಗಳನ್ನೆಲ್ಲ ಗುರುತಿಸಿ ಸರಿಪಡಿಸುವುದು ಅಪೇಕ್ಷಣೀಯ. 'ಡೀಬಗಿಂಗ್', ಅಂದರೆ 'ಡೀಬಗ್ ಮಾಡುವುದು' ಎಂದು ಗುರುತಿಸುವುದು ಈ ಪ್ರಕ್ರಿಯೆಯನ್ನೇ. ಈ ಕೆಲಸದ ಬಹುಪಾಲು ತಂತ್ರಾಂಶ ಪರೀಕ್ಷೆಯ (ಟೆಸ್ಟಿಂಗ್) ಸಂದರ್ಭದಲ್ಲಿ ನಡೆಯುತ್ತದೆ. ತಂತ್ರಾಂಶ ಅಭಿವರ್ಧನೆಯ (ಡೆವೆಲಪ್‌ಮೆಂಟ್) ಹಂತದಲ್ಲೂ ಆವರೆಗೆ ಸಿದ್ಧವಾದಷ್ಟು ಭಾಗವನ್ನು ಡೀಬಗ್ ಮಾಡುವುದು ಅಪರೂಪವೇನಲ್ಲ. ಸಣ್ಣಪುಟ್ಟ ಬಗ್‌ಗಳನ್ನು ಹಿಡಿದುಹಾಕುವುದು ಸುಲಭವೇ. ಆದರೆ ಸಂಕೀರ್ಣ ತಂತ್ರಾಂಶಗಳಲ್ಲಿ ಕಾಣಿಸಿಕೊಳ್ಳುವ ಕೆಲ ತಪ್ಪುಗಳ ಮೂಲವನ್ನು ಹುಡುಕಿ ಸರಿಪಡಿಸುವುದು ಸವಾಲಿನ ಕೆಲಸ. ಈ ಪ್ರಕ್ರಿಯೆಯಲ್ಲಿ ನೆರವಾಗಲು ಡೀಬಗರ್‌ಗಳೆಂಬ ತಂತ್ರಾಂಶಗಳನ್ನು ಬಳಸಲಾಗುತ್ತದೆ. ಪರೀಕ್ಷಿಸಲಾಗುತ್ತಿರುವ ತಂತ್ರಾಂಶವನ್ನು ಹೆಜ್ಜೆಗಳಲ್ಲಿ ಕಾರ್ಯಗತಗೊಳಿಸುವ ಮೂಲಕ ನಡುವೆ ಎಲ್ಲೋ ಇರಬಹುದಾದ ತಪ್ಪನ್ನು ಗುರುತಿಸಲು ಸಹಾಯಮಾಡುವುದು ಈ ತಂತ್ರಾಂಶದ ಹೆಚ್ಚುಗಾರಿಕೆ. ಪರೀಕ್ಷೆಯ ಅಗತ್ಯಗಳಿಗೆ ತಕ್ಕಂತೆ ತಂತ್ರಾಂಶದ ಕಾರ್ಯಾಚರಣೆಯನ್ನು ನಿರ್ದಿಷ್ಟ ಹಂತದಲ್ಲಿ ನಿಲ್ಲಿಸುವ ಹಾಗೂ ಆ ಹಂತದ ಇನ್‌ಪುಟ್-ಔಟ್‌ಪುಟ್‌ಗಳನ್ನು ಪರಿಶೀಲಿಸುವ ಸೌಲಭ್ಯವೂ ಬಹುತೇಕ ಡೀಬಗರ್‌ಗಳಲ್ಲಿರುತ್ತದೆ.
84 Desktop ಡೆಸ್ಕ್‌ಟಾಪ್ ಕಂಪ್ಯೂಟರಿನ ವಿಧಗಳಲ್ಲೊಂದು; ಕಂಪ್ಯೂಟರನ್ನು ಆನ್ ಮಾಡಿದ ನಂತರ ಕಾಣುವ, ವಿವಿಧ ಐಕನ್‌ಗಳಿರುವ ಪ್ರಾರಂಭಿಕ ಪರದೆಗೂ ಡೆಸ್ಕ್‌ಟಾಪ್ ಎಂದೇ ಹೆಸರು ಮೇಜಿನ ಮೇಲೆ ಕೂರುವಷ್ಟು ದೊಡ್ಡದಾದ, ಮಾನಿಟರ್ - ಕ್ಯಾಬಿನೆಟ್ - ಕೀಬೋರ್ಡ್ - ಮೌಸ್ - ಸ್ಪೀಕರ್ ಇತ್ಯಾದಿ ನಾಲ್ಕಾರು ಪ್ರತ್ಯೇಕ ಅಂಗಗಳಿರುವ ಕಂಪ್ಯೂಟರನ್ನು ಡೆಸ್ಕ್‌ಟಾಪ್ ('ಡೆಸ್ಕ್‌ಟಾಪ್ ಕಂಪ್ಯೂಟರ್'ನ ಹ್ರಸ್ವರೂಪ) ಎಂದು ಕರೆಯುವುದು ಸಾಮಾನ್ಯ ಅಭ್ಯಾಸ. ಒಂದು ಕಾಲಕ್ಕೆ ಅತ್ಯಂತ ವ್ಯಾಪಕ ಬಳಕೆಯಲ್ಲಿದ್ದು ಇದೀಗ ನಿಧಾನಕ್ಕೆ ಮರೆಯಾಗುತ್ತಿರುವ ಕಂಪ್ಯೂಟರ್ ಮಾದರಿ ಇದು. ಹಾಗೆಂದಮಾತ್ರಕ್ಕೆ ಡೆಸ್ಕ್‌ಟಾಪ್ ಎಂಬ ಹೆಸರಿನ ಅರ್ಥ ಮೇಜಿನ ಮೇಲೆ ಕೂರುವ ಕಂಪ್ಯೂಟರು ಎಂದಷ್ಟೇ ಅಲ್ಲ. ಕಂಪ್ಯೂಟರ್ (ಲ್ಯಾಪ್‌ಟಾಪ್, ಡೆಸ್ಕ್‌ಟಾಪ್ ಯಾವುದೇ ಇರಲಿ) ಆನ್ ಮಾಡಿದಾಗ ಪರದೆಯೊಂದು ಕಾಣುತ್ತದಲ್ಲ, ಬೇರೆಬೇರೆ ಐಕನ್‌ಗಳಿರುವಂಥದ್ದು, ಅದನ್ನೂ ಡೆಸ್ಕ್‌ಟಾಪ್ ಎಂದೇ ಕರೆಯುತ್ತಾರೆ. ಕಂಪ್ಯೂಟರ್ ಇಲ್ಲದ ಕಾಲದಲ್ಲಿ ಕೆಲಸದ ಮೇಜಿನ ಮೇಲೆ ಇರುತ್ತಿದ್ದ ವಸ್ತುಗಳೆಲ್ಲ ಈಗ ಕಂಪ್ಯೂಟರಿನ ಈ ಪರದೆಯ ಮೇಲೆ ಇರುತ್ತವಲ್ಲ, ಅದರಿಂದಾಗಿಯೇ ಈ ಪರದೆಗೆ 'ಡೆಸ್ಕ್‌ಟಾಪ್' ಎಂಬ ಹೆಸರು ಬಂದಿದೆ. ಕಡತ - ಪುಸ್ತಕಗಳನ್ನೆಲ್ಲ ವಿನ್ಯಾಸಗೊಳಿಸುವ ಕೋರೆಲ್‌ಡ್ರಾ, ಇನ್‌ಡಿಸೈನ್ ಮುಂತಾದ ತಂತ್ರಾಂಶಗಳನ್ನು 'ಡಿಟಿಪಿ' ತಂತ್ರಾಂಶಗಳೆಂದು ಕರೆಯುತ್ತಾರೆ. ಇಲ್ಲಿ ಡಿಟಿಪಿ ಎಂದರೆ ಡೆಸ್ಕ್‌ಟಾಪ್ ಪಬ್ಲಿಶಿಂಗ್. ಮುದ್ರಣಾಲಯದ ಮೇಜಿನ ಮೇಲೆ ಮೊಳೆಜೋಡಿಸಿ ಮಾಡುತ್ತಿದ್ದ ಕೆಲಸ ಈಗ ಕಂಪ್ಯೂಟರಿನಲ್ಲೇ ಆಗುತ್ತದಲ್ಲ, ಹಾಗಾಗಿ ಇಲ್ಲಿಯೂ ಡೆಸ್ಕ್‌ಟಾಪ್ ಬಂದಿದೆ.
85 Device Driver ಡಿವೈಸ್ ಡ್ರೈವರ್ ಕಂಪ್ಯೂಟರಿಗೆ ಜೋಡಿಸಿದ ಯಂತ್ರಾಂಶಗಳು ಸಮರ್ಪಕವಾಗಿ ಕೆಲಸಮಾಡಲು ಅಗತ್ಯವಾದ ತಂತ್ರಾಂಶ ಕೆಲ ವರ್ಷಗಳ ಹಿಂದೆ ಕಂಪ್ಯೂಟರಿಗೆ ಸಂಬಂಧಪಟ್ಟ ಯಾವುದೇ ಸಾಧನ ಕೊಂಡುಕೊಂಡರೂ ಅದರ ಜೊತೆಗೊಂದು ಸಿ.ಡಿ. ಇರುತ್ತಿತ್ತು. ಮೊದಲು ಆ ಸಿ.ಡಿ.ಯನ್ನು ಹಾಕಿ ಅದರಲ್ಲಿನ ತಂತ್ರಾಂಶಗಳನ್ನೆಲ್ಲ ನಮ್ಮ ಕಂಪ್ಯೂಟರಿನಲ್ಲಿ ಇನ್‌ಸ್ಟಾಲ್ ಮಾಡಿದ ನಂತರವಷ್ಟೇ ಹೊಸ ಸಾಧನ ಕೆಲಸಮಾಡಲು ಶುರುಮಾಡುತ್ತಿತ್ತು. ಆ ಸಿ.ಡಿ.ಯಲ್ಲಿರುತ್ತಿತ್ತಲ್ಲ, ಆ ತಂತ್ರಾಂಶದ ಹೆಸರೇ ಡಿವೈಸ್ ಡ್ರೈವರ್. ಬಸ್ಸು ಲಾರಿ ಮುಂದಕ್ಕೆ ಚಲಿಸಬೇಕಾದರೆ ಚಾಲಕನ ಅಗತ್ಯವಿರುವಂತೆಯೇ ಕಂಪ್ಯೂಟರಿಗೆ ಹೊಸ ಸಾಧನಗಳನ್ನು (ಡಿವೈಸ್) ಸಂಪರ್ಕಿಸಿದಾಗ ಅವು ಕೆಲಸಮಾಡಲು ಡಿವೈಸ್ ಡ್ರೈವರುಗಳು ಬೇಕಾಗುತ್ತವೆ. ಸಂಪರ್ಕಿಸುತ್ತಿರುವ ಹೊಸ ಸಾಧನವನ್ನು ಗುರುತಿಸಿ ಅದು ಕಂಪ್ಯೂಟರಿನ ಕಾರ್ಯಾಚರಣ ವ್ಯವಸ್ಥೆಯೊಡನೆ (ಓಎಸ್) ಸರಿಯಾಗಿ ಹೊಂದಿಕೊಂಡು ಕೆಲಸಮಾಡುವಂತೆ ನಿರ್ದೇಶಿಸುವುದು ಡಿವೈಸ್ ಡ್ರೈವರ್‌ನ ಕೆಲಸ. ನಾವು ಸಾಮಾನ್ಯವಾಗಿ ಬಳಸುವ ಹಲವು ಸಾಧನಗಳೊಡನೆ ಯಾವುದೇ ತಂತ್ರಾಂಶದ ಸಿ.ಡಿ. ಬರುವುದಿಲ್ಲ ಎನ್ನುವುದನ್ನು ನೀವು ಗಮನಿಸಿರಬಹುದು. ಹಾಗೆಂದಮಾತ್ರಕ್ಕೆ ಈಗ ಡಿವೈಸ್ ಡ್ರೈವರುಗಳ ಅಗತ್ಯವಿಲ್ಲ ಎಂದೇನೂ ಇಲ್ಲ: ವ್ಯಾಪಕ ಬಳಕೆಯಲ್ಲಿರುವ ಸಾಧನಗಳಿಗೆ ಬೇಕಾದ ಡ್ರೈವರುಗಳು ಈಗ ಕಂಪ್ಯೂಟರಿನ ಕಾರ್ಯಾಚರಣ ವ್ಯವಸ್ಥೆಯ ಅಂಗವೇ ಆಗಿಬಿಟ್ಟಿವೆ. ಇನ್ನಷ್ಟು ಡಿವೈಸ್ ಡ್ರೈವರುಗಳನ್ನು ಎಲ್ಲಿಂದ ಹೇಗೆ ಪಡೆದುಕೊಳ್ಳಬೇಕು ಎನ್ನುವ ಮಾಹಿತಿಯೂ ಇಂದಿನ ಕಾರ್ಯಾಚರಣ ವ್ಯವಸ್ಥೆಗಳಿಗೆ ಗೊತ್ತು. ಇವೆರಡೂ ಮಾರ್ಗಗಳಲ್ಲಿ ಪರಿಹಾರ ಸಿಕ್ಕದೆ ಹೋದಾಗ ಮಾತ್ರವೇ ನಾವು ಡಿವೈಸ್ ಡ್ರೈವರುಗಳನ್ನು ಪ್ರತ್ಯೇಕವಾಗಿ ಇನ್‌ಸ್ಟಾಲ್ ಮಾಡಬೇಕಾಗುತ್ತದೆ.
86 Digital Library ಡಿಜಿಟಲ್ ಲೈಬ್ರರಿ ವಿದ್ಯುನ್ಮಾನ ರೂಪದಲ್ಲಿರುವ ಪುಸ್ತಕಗಳ ಸಂಗ್ರಹ ಪುಸ್ತಕಗಳ ಡಿಜಿಟಲ್ ರೂಪವನ್ನು ಇ-ಪುಸ್ತಕ ಅಥವಾ ಇ-ಬುಕ್ ಎಂದು ಕರೆಯುವುದು ನಮಗೆ ಗೊತ್ತು. ಭೌತಿಕ ಪುಸ್ತಕಗಳ ಗ್ರಂಥಾಲಯ ಇದ್ದಂತೆ ಇ-ಪುಸ್ತಕಗಳ ಗ್ರಂಥಾಲಯಗಳೂ ಇರುತ್ತವೆ. 'ಡಿಜಿಟಲ್ ಲೈಬ್ರರಿ' ಎಂದು ಕರೆಯುವುದು ಇಂತಹ ಗ್ರಂಥಾಲಯಗಳನ್ನೇ. ಪುಸ್ತಕಗಳೆಲ್ಲ ಇ-ರೂಪದಲ್ಲಿದ್ದಮೇಲೆ ಈ ಗ್ರಂಥಾಲಯ ನಾಲ್ಕು ಗೋಡೆಗಳ ಕೋಣೆಯೊಳಗಿರುವುದಿಲ್ಲ, ಕಂಪ್ಯೂಟರಿನೊಳಗಿರುತ್ತದೆ ಎನ್ನುವುದೊಂದೇ ಸಾಮಾನ್ಯ ಗ್ರಂಥಾಲಯಕ್ಕೂ ಡಿಜಿಟಲ್ ಗ್ರಂಥಾಲಯಕ್ಕೂ ಇರುವ ವ್ಯತ್ಯಾಸ. ಭೌತಿಕ ಜಗತ್ತಿನ ಪರಿಮಿತಿಗಳನ್ನೆಲ್ಲ ಮೀರಿ ಹೆಚ್ಚು ಓದುಗರನ್ನು ತಲುಪಲು ಸಾಧ್ಯವಾಗುವುದು, ಪಠ್ಯರೂಪದ ಮಾಹಿತಿಗೆ ಪೂರಕವಾಗಿ ಬಹುಮಾಧ್ಯಮ ಸಂಪನ್ಮೂಲಗಳನ್ನೂ ಒದಗಿಸಿಕೊಡುವುದು ಡಿಜಿಟಲ್ ಲೈಬ್ರರಿಯ ಹೆಗ್ಗಳಿಕೆ. ತಮ್ಮ ಆಸಕ್ತಿಯ ಕ್ಷೇತ್ರ ಕುರಿತ ಪುಸ್ತಕಗಳನ್ನು ಥಟ್ಟನೆ ಹುಡುಕಿಕೊಳ್ಳುವುದು, ನಿರ್ದಿಷ್ಟ ಮಾಹಿತಿಯನ್ನು ಯಾವ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ ಎಂದು ಪತ್ತೆಮಾಡುವುದೆಲ್ಲ ಡಿಜಿಟಲ್ ಲೈಬ್ರರಿಗಳಲ್ಲಿ ಬಹಳ ಸುಲಭ. ಅಷ್ಟೇ ಅಲ್ಲ, ಒಂದೇ ಪುಸ್ತಕವನ್ನು ಬೇರೆಬೇರೆ ಬಗೆಯ ಕಡತಗಳಾಗಿ (ಟೆಕ್ಸ್ಟ್, ಪಿಡಿಎಫ್, ಇಪಬ್ ಇತ್ಯಾದಿ) ನೀಡುವ ಅವಕಾಶವೂ ಇಲ್ಲಿದೆ. ಕಂಪ್ಯೂಟರಿನ ದೊಡ್ಡ ಪರದೆಗೆ, ಮೊಬೈಲಿನ ಸಣ್ಣ ಪರದೆಗೆಲ್ಲ ಪುಸ್ತಕದ ಗಾತ್ರ ತನ್ನಷ್ಟಕ್ಕೆ ತಾನೇ ಹೊಂದಿಕೊಳ್ಳುವಂತೆ ಮಾಡುವುದು, ಆ ಮೂಲಕ ಓದುವ ಅನುಭವ ಇನ್ನಷ್ಟು ಉತ್ತಮವಾಗಿರುವಂತೆ ನೋಡಿಕೊಳ್ಳುವುದು ಕೂಡ ಸಾಧ್ಯ. ಭಾರತೀಯ ವಿಜ್ಞಾನಮಂದಿರದ ನೇತೃತ್ವದಲ್ಲಿ ರೂಪುಗೊಂಡಿರುವ 'ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ' ನಮ್ಮ ದೇಶದ ಅತಿದೊಡ್ಡ ಇ-ಗ್ರಂಥಾಲಯಗಳಲ್ಲೊಂದು. ಕಣಜ ಜ್ಞಾನಕೋಶದಲ್ಲೂ 'e-ಪುಸ್ತಕ' ಎಂಬ ಕನ್ನಡ ಪುಸ್ತಕಗಳ ಡಿಜಿಟಲ್ ಗ್ರಂಥಾಲಯ ಇದೆ. ಉಚಿತ ಸೇವೆ ಒದಗಿಸುವ ಇಂತಹ ಗ್ರಂಥಾಲಯಗಳ ಜೊತೆಗೆ ಹಲವು ವಾಣಿಜ್ಯ ಉದ್ದೇಶದ ಡಿಜಿಟಲ್ ಗ್ರಂಥಾಲಯಗಳೂ ಅಸ್ತಿತ್ವದಲ್ಲಿವೆ.
87 Digital Signature ಡಿಜಿಟಲ್ ಸಿಗ್ನೇಚರ್ ಮಾಹಿತಿಯ ದೃಢೀಕರಣಕ್ಕೆ (ಅಥೆಂಟಿಕೇಶನ್) ಬಳಕೆಯಾಗುವ ವಿಧಾನ; ಡಿಜಿಟಲ್ ರೂಪದಲ್ಲಿರುವ ಯಾವುದೇ ಕಡತವನ್ನು ಯಾರು ದೃಢೀಕರಿಸಿದ್ದಾರೆ ಎಂದು ತಿಳಿದುಕೊಳ್ಳಲು ಇದು ನೆರವಾಗುತ್ತದೆ. ಪತ್ರಗಳೂ ಕಡತಗಳೂ ಭೌತಿಕ ರೂಪದಲ್ಲಿದ್ದಾಗ ಅವುಗಳ ಅಧಿಕೃತತೆಯನ್ನು ಪರಿಶೀಲಿಸುವುದು ಸುಲಭವಿತ್ತು. ಪತ್ರದ ಕೊನೆಯಲ್ಲಿ ಯಾರ ಸಹಿಯಿದೆ, ಜೊತೆಗಿರುವ ಮೊಹರಿನಲ್ಲಿ ಅವರ ಹುದ್ದೆಯ ಯಾವ ವಿವರಗಳಿವೆ ಎನ್ನುವುದನ್ನು ನೋಡಿದರೆ ಪತ್ರ ಅಧಿಕೃತವೋ ಅಲ್ಲವೋ ಎನ್ನುವುದನ್ನು ನಾವು ಅಂದಾಜಿಸಬಹುದಿತ್ತು. ಆದರೆ ಈಗ ಪತ್ರಗಳು - ದಾಖಲೆಗಳು ಭೌತಿಕ ರೂಪದಲ್ಲಿರುವುದೇ ಅಪರೂಪ. ಇಂತಹ ಕಡತಗಳು ಅಧಿಕೃತವೋ ಅಲ್ಲವೋ ಎಂದು ತಿಳಿಯುವುದು ಹೇಗೆ? ಇದನ್ನು ಖಚಿತಪಡಿಸುವ ಮಾರ್ಗಗಳಲ್ಲೊಂದು 'ಡಿಜಿಟಲ್ ಸಿಗ್ನೇಚರ್' ಬಳಕೆ. ಯಾವುದೇ ಕಡತದಲ್ಲಿ ಡಿಜಿಟಲ್ ಸಹಿ ಇದ್ದರೆ ಆ ಸಹಿ ಯಾರು ಮಾಡಿದ್ದಾರೆ ಎನ್ನುವುದನ್ನು ತಿಳಿದುಕೊಳ್ಳುವುದು ಸಾಧ್ಯವಾಗುತ್ತದೆ, ಕಡತ ಅಸಲಿಯೋ ಅಲ್ಲವೋ ಎಂದು ಅಂದಾಜಿಸುವುದೂ ಸುಲಭವಾಗುತ್ತದೆ. ಡಿಜಿಟಲ್ ಸಹಿ ಎಂದಮಾತ್ರಕ್ಕೆ ಅದು ಸಹಿಯ ಡಿಜಿಟಲ್ ಚಿತ್ರವೋ ಸ್ಕ್ಯಾನ್ ಮಾಡಿದ ರೂಪವೋ ಅಲ್ಲ, ಅದು ಮಾಹಿತಿಯ ದೃಢೀಕರಣಕ್ಕೆ (ಅಥೆಂಟಿಕೇಶನ್) ಬಳಕೆಯಾಗುವ ವಿಧಾನಗಳಲ್ಲೊಂದು. ಡಿಜಿಟಲ್ ಸಿಗ್ನೇಚರ್‌ಗಳನ್ನು ವಿತರಿಸುವ ಅಧಿಕಾರವಿರುವ ಸಂಸ್ಥೆಯಿಂದ ನಮ್ಮ ಸಿಗ್ನೇಚರ್ ಅನ್ನು ಪಡೆದುಕೊಂಡು, ಸೂಕ್ತ ತಂತ್ರಾಂಶ ಬಳಸಿ ಅದನ್ನು ನಮ್ಮ ಕಡತಗಳೊಡನೆ ಜೋಡಿಸಿದರೆ ಆಯಿತು - ಅದು ಪೆನ್ನಿನಿಂದ ಕಾಗದದ ಮೇಲೆ ಸಹಿ ಹಾಕಿದಂತೆಯೇ. ಹಾಗೆ ಸಹಿಮಾಡಿದ ಕಡತವನ್ನು ಕಳಿಸಿದರೆ ಪ್ರಪಂಚದಲ್ಲಿ ಯಾರಿಗೇ ಆದರೂ ಆ ಕಡತವನ್ನು ದೃಢೀಕರಿಸಿರುವುದು ನಾವೇ ಎನ್ನುವುದು ತಿಳಿಯುತ್ತದೆ. ಮೂಲ ಕಡತವನ್ನು ಬೇರೆ ಯಾರೋ ಬದಲಾಯಿಸಿ ನಮ್ಮ ಹೆಸರಿನಲ್ಲಿ ಕಳಿಸುವ ಅಪಾಯವೂ ಇಲ್ಲದಾಗುತ್ತದೆ. ವೈಯಕ್ತಿಕ ಕಡತಗಳಲ್ಲಷ್ಟೇ ಅಲ್ಲ, ಸರಕಾರಿ ಕಡತಗಳನ್ನೂ ಬ್ಯಾಂಕ್ ಮುಂತಾದ ದೊಡ್ಡ ಸಂಸ್ಥೆಗಳು ನೀಡುವ ಪತ್ರಗಳನ್ನೂ ದೃಢೀಕರಿಸಲು ಡಿಜಿಟಲ್ ಸಿಗ್ನೇಚರ್‌ಗಳು ಬಳಕೆಯಾಗುತ್ತಿವೆ.
88 Disk Drive ಡಿಸ್ಕ್ ಡ್ರೈವ್ ಡಿಸ್ಕ್‌ಗಳಲ್ಲಿ ಮಾಹಿತಿಯನ್ನು ಬರೆದಿಡುವ - ಅಗತ್ಯಬಿದ್ದಾಗ ಮತ್ತೆ ಓದುವ - ಬೇಡವಾದಾಗ ಅಳಿಸುವ ಸೌಕರ್ಯ ಒದಗಿಸುವ ವ್ಯವಸ್ಥೆ ವೃತ್ತಾಕಾರದ ತಟ್ಟೆಯಂತಹ ಸಾಧನಗಳಲ್ಲಿ ಮಾಹಿತಿಯನ್ನು ಶೇಖರಿಸಿಡುವುದು ಕಂಪ್ಯೂಟರ್ ಕ್ಷೇತ್ರದಲ್ಲಿ ಸಾಮಾನ್ಯ ಅಭ್ಯಾಸ. ಹಾರ್ಡ್ ಡಿಸ್ಕ್, ಕಾಂಪ್ಯಾಕ್ಟ್ ಡಿಸ್ಕ್ (ಸಿ.ಡಿ.), ಫ್ಲಾಪಿ ಡಿಸ್ಕ್ ಮುಂತಾದ ಸಾಧನಗಳ ಹೆಸರಿನಲ್ಲಿರುವ 'ಡಿಸ್ಕ್' ಇದೇ ಅಂಶವನ್ನು ಸೂಚಿಸುತ್ತದೆ. ಹಿಂದೆ ಬಳಕೆಯಲ್ಲಿದ್ದ ಫ್ಲಾಪಿಗಳಲ್ಲಿ, ಇಂದಿನ ಸಿ.ಡಿ.ಗಳಲ್ಲಿ ಇಂತಹ ಒಂದೇ ಒಂದು ಡಿಸ್ಕ್ ಬಳಕೆಯಾದರೆ ಹಾರ್ಡ್‌ಡಿಸ್ಕ್‌ನೊಳಗೆ ಅನೇಕ ಸಂಖ್ಯೆಯ ಡಿಸ್ಕ್‌ಗಳಿರುತ್ತವೆ. ಇಂತಹ ಡಿಸ್ಕ್‌ಗಳಲ್ಲಿ ಮಾಹಿತಿ ಶೇಖರವಾಗುತ್ತದೆ ಎನ್ನುವುದೇನೋ ಸರಿ. ಆದರೆ ಆ ಮಾಹಿತಿಯನ್ನು ಅಲ್ಲಿ ಬರೆದಿಡುವ - ಅಗತ್ಯಬಿದ್ದಾಗ ಮತ್ತೆ ಓದುವ - ಬೇಡವಾದಾಗ ಅಳಿಸುವ ಸೌಕರ್ಯ ಬೇಕಲ್ಲ, ಆ ಕೆಲಸ ಮಾಡುವ ವ್ಯವಸ್ಥೆಯೇ ಡಿಸ್ಕ್ ಡ್ರೈವ್. ಫ್ಲಾಪಿ ಡಿಸ್ಕ್‌ಗಳನ್ನು ಬಳಸಲು ನೆರವಾಗುತ್ತಿದ್ದ ಇಂತಹ ವ್ಯವಸ್ಥೆಗೆ ಫ್ಲಾಪಿ ಡಿಸ್ಕ್ ಡ್ರೈವ್ ಎಂಬ ಹೆಸರಿತ್ತು. ಇದೇ ರೀತಿ 'ಆಪ್ಟಿಕಲ್ ಡ್ರೈವ್'ಗಳು ಸಿ.ಡಿ. - ಡಿವಿಡಿಗಳನ್ನು ಉಪಯೋಗಿಸಲು ಸಹಾಯಮಾಡುತ್ತವೆ. ಹಾರ್ಡ್ ಡಿಸ್ಕ್‌ನಲ್ಲಿ ಬಳಕೆಯಾಗುವ ಈ ವ್ಯವಸ್ಥೆಗೆ ಹಾರ್ಡ್ ಡಿಸ್ಕ್ ಡ್ರೈವ್ ಎಂದು ಹೆಸರು. ಅಲ್ಲಿರುವ ಅಯಸ್ಕಾಂತೀಯ ಲೇಪನವಿರುವ ತಟ್ಟೆಗಳ ಮೇಲೆ ಓಡಾಡುವ ಒಂದು ಪುಟ್ಟ ಕಡ್ಡಿಯಂತಹ ಸಾಧನ ನಮ್ಮ ಮಾಹಿತಿಯನ್ನು ಆ ತಟ್ಟೆಗಳ ಮೇಲೆ ಬರೆದಿಡುತ್ತದೆ, ಬರೆದಿಟ್ಟ ಮಾಹಿತಿಯನ್ನು ಮತ್ತೆ ಓದಲೂ ನೆರವಾಗುತ್ತದೆ. ಈ ತಟ್ಟೆಗಳು, ಓದು-ಬರಹದ ಕಡ್ಡಿ, ಅದು ಓಡಾಡಲು ಬೇಕಾದ ವ್ಯವಸ್ಥೆ - ಇವೆಲ್ಲ ಸೇರಿದ್ದೇ ಹಾರ್ಡ್ ಡಿಸ್ಕ್ ಡ್ರೈವ್ (ಎಚ್‌ಡಿಡಿ).
89 Disk Image ಡಿಸ್ಕ್ ಇಮೇಜ್ ಇನ್‌ಸ್ಟಾಲ್ ಆಗಿರುವ ತಂತ್ರಾಂಶಗಳೂ ಸೇರಿದಂತೆ ಹಾರ್ಡ್‌ಡಿಸ್ಕ್‌ನಲ್ಲಿರುವ ಅಷ್ಟೂ ಮಾಹಿತಿಯ ಯಥಾವತ್ ನಕಲು ಪ್ರತಿ; ಕಂಪ್ಯೂಟರಿನಲ್ಲಿ ಬೇಕಾದ ತಂತ್ರಾಂಶಗಳನ್ನೆಲ್ಲ ಅಳವಡಿಸಿಕೊಂಡ ನಂತರ ಡಿಸ್ಕ್ ಇಮೇಜ್ ತೆಗೆದಿಟ್ಟುಕೊಂಡರೆ ಅದನ್ನು ನೇರವಾಗಿ ಪ್ರತಿಮಾಡುವ ಮೂಲಕ ಇತರ ಕಂಪ್ಯೂಟರುಗಳನ್ನು ಥಟ್ಟನೆ ಸಜ್ಜುಗೊಳಿಸಬಹುದು. ಹೊಸ ಕಂಪ್ಯೂಟರ್ ಕೊಂಡಾಗ ಮಾಡಬೇಕಾದ ಮೊದಲ ಕೆಲಸವೆಂದರೆ ನಮ್ಮ ಆಯ್ಕೆಯ ಕಾರ್ಯಾಚರಣ ವ್ಯವಸ್ಥೆ ಹಾಗೂ ಇತರ ತಂತ್ರಾಂಶಗಳನ್ನು ಅದರಲ್ಲಿ ಅಳವಡಿಸುವುದು. ಒಂದಾದನಂತರ ಒಂದರಂತೆ ಈ ತಂತ್ರಾಂಶಗಳನ್ನೆಲ್ಲ ಇನ್‌ಸ್ಟಾಲ್ ಮಾಡಲು ಸಾಕಷ್ಟು ಸಮಯ ಬೇಕಾಗುತ್ತದೆ. ಕೆಲ ವರ್ಷಗಳಿಗೊಮ್ಮೆ ಕೊಳ್ಳುವ ಹೊಸ ಕಂಪ್ಯೂಟರನ್ನು ಸಜ್ಜುಗೊಳಿಸಲು ಇಷ್ಟೆಲ್ಲ ಶ್ರಮವಾದರೆ ಪರವಾಗಿಲ್ಲ ಎನ್ನಬಹುದು. ಆದರೆ ತನ್ನ ಉದ್ಯೋಗಿಗಳಿಗೆಂದು ಪದೇಪದೇ ಹೊಸ ಕಂಪ್ಯೂಟರುಗಳನ್ನು ಕೊಳ್ಳುವ ಸಂಸ್ಥೆಗಳಲ್ಲಿ ಈ ಕೆಲಸ ಭಾರೀ ಶ್ರಮದಾಯಕವಾಗಬಹುದಲ್ಲ? ಈ ಶ್ರಮ ತಪ್ಪಿಸಲು ಬಳಕೆಯಾಗುವ ತಂತ್ರಗಳಲ್ಲಿ 'ಡಿಸ್ಕ್ ಇಮೇಜ್' ಕೂಡ ಒಂದು. ಇನ್‌ಸ್ಟಾಲ್ ಆಗಿರುವ ತಂತ್ರಾಂಶಗಳೂ ಸೇರಿದಂತೆ ಹಾರ್ಡ್‌ಡಿಸ್ಕ್‌ನಲ್ಲಿರುವ ಅಷ್ಟೂ ಮಾಹಿತಿಯ ಯಥಾವತ್ ನಕಲು ಪ್ರತಿಯನ್ನು ಡಿಸ್ಕ್ ಇಮೇಜ್ ಎಂದು ಕರೆಯುತ್ತಾರೆ. ಒಂದು ಕಂಪ್ಯೂಟರಿನಲ್ಲಿ ನಮಗೆ ಬೇಕಾದ ತಂತ್ರಾಂಶಗಳನ್ನೆಲ್ಲ ಅಳವಡಿಸಿಕೊಂಡ ನಂತರ ಅದರ ಡಿಸ್ಕ್ ಇಮೇಜ್ ತೆಗೆದಿಟ್ಟುಕೊಂಡರೆ ಅದನ್ನು ನೇರವಾಗಿ ಪ್ರತಿಮಾಡುವ ಮೂಲಕ ಇತರ ಕಂಪ್ಯೂಟರುಗಳನ್ನು ಥಟ್ಟನೆ ಸಜ್ಜುಗೊಳಿಸಬಹುದು. ಅಷ್ಟೇ ಅಲ್ಲ, ಬಳಕೆಯಲ್ಲಿರುವ ಕಂಪ್ಯೂಟರುಗಳಲ್ಲಿ ಸಮಸ್ಯೆ ಕಾಣಿಸಿಕೊಂಡಾಗಲೂ ಹಿಂದಿನ ಡಿಸ್ಕ್ ಇಮೇಜ್ ಬಳಸಿ ಅದು ಮೊದಲು ಇದ್ದಂತೆ ಮಾಡುವುದು ಸಾಧ್ಯ. ಈ ಪ್ರಕ್ರಿಯೆಯನ್ನು 'ರಿಇಮೇಜಿಂಗ್' ಎಂದು ಕರೆಯುತ್ತಾರೆ. ಅಂದಹಾಗೆ ಡಿಸ್ಕ್ ಇಮೇಜ್‌ಗಳು ಬಳಕೆಯಾಗುವುದು ಹಾರ್ಡ್ ಡಿಸ್ಕ್‌ಗಳಲ್ಲಿ ಮಾತ್ರವೇ ಅಲ್ಲ. ದೊಡ್ಡ ಸಂಖ್ಯೆಯಲ್ಲಿ ಸಿ.ಡಿ.-ಡಿವಿಡಿಗಳ ಪ್ರತಿಗಳನ್ನು ಸಿದ್ಧಪಡಿಸುವಾಗಲೂ ಅವುಗಳ ಡಿಸ್ಕ್ ಇಮೇಜ್ ಅನ್ನು ಬಳಸಲಾಗುತ್ತದೆ. ಡಿಸ್ಕ್ ಇಮೇಜ್ ಮಾಡಿಟ್ಟುಕೊಳ್ಳಲು, ಅದನ್ನು ಮತ್ತೆ ಬಳಸಲು ವಿಶೇಷ ತಂತ್ರಾಂಶಗಳ ನೆರವು ಬೇಕಾಗುತ್ತದೆ.
90 DNS ಡಿಎನ್‌ಎಸ್ ಡೊಮೈನ್ ನೇಮ್ ಸಿಸ್ಟಂ; ಜಾಲತಾಣದ ವಿಳಾಸಗಳನ್ನು (ಡೊಮೈನ್ ನೇಮ್) ಅವುಗಳ ಐಪಿ ವಿಳಾಸದೊಡನೆ ಹೊಂದಿಸಿಕೊಡುವ ವ್ಯವಸ್ಥೆ ನಾವು ಭೇಟಿಕೊಡುವ ವೆಬ್‌ಸೈಟುಗಳು ಅಂತರಜಾಲದ ಮೂಲೆಯಲ್ಲೆಲ್ಲೋ ಇರುವ ಒಂದು ಸರ್ವರಿನಲ್ಲಿ ಶೇಖರವಾಗಿರುತ್ತವೆ. ಅಂತರಜಾಲ ಸಂಪರ್ಕದಲ್ಲಿರುವ ಸಾಧನಗಳನ್ನು ಪ್ರತ್ಯೇಕವಾಗಿ ಗುರುತಿಸಲು ಐಪಿ ವಿಳಾಸ ಬಳಸುತ್ತಾರಲ್ಲ, ಪ್ರತಿ ಜಾಲತಾಣದ ಸರ್ವರ್‌ಗೂ ಇಂತಹುದೇ ಒಂದು ಐಪಿ ವಿಳಾಸ ಇರುತ್ತದೆ. ಐಪಿ ವಿಳಾಸವೆಂದರೆ ಅಂಕಿಗಳ ಒಂದು ಸರಣಿ - ೭೪.೧೨೫.೭೦.೧೨೧ ಎನ್ನುವ ರೀತಿಯದು. ನಮಗೆ ಬೇಕಾದ ಜಾಲತಾಣಗಳನ್ನು ಗೂಗಲ್ ಡಾಟ್ ಕಾಮ್ ಎಂದೋ ಇಜ್ಞಾನ ಡಾಟ್ ಕಾಮ್ ಎಂದೋ ಗುರುತಿಟ್ಟುಕೊಳ್ಳುವ ಬದಲಿಗೆ ಇಷ್ಟೆಲ್ಲ ಅಂಕಿಗಳನ್ನು ಯಾರು ತಾನೇ ನೆನಪಿಟ್ಟುಕೊಳ್ಳುತ್ತಾರೆ? ಇದನ್ನು ನೆನಪಿಟ್ಟುಕೊಳ್ಳುವ ಕೆಲಸ ನಮಗೆ ಬೇಡ ಎಂದು ರೂಪಿಸಲಾಗಿರುವ ವ್ಯವಸ್ಥೆಯೇ ಡಿಎನ್‌ಎಸ್, ಅಂದರೆ ಡೊಮೈನ್ ನೇಮ್ ಸಿಸ್ಟಂ. ಬ್ರೌಸರ್ ತಂತ್ರಾಂಶದಲ್ಲಿ ನಾವು ಟೈಪ್ ಮಾಡುವ ವಿಳಾಸವನ್ನು ಆ ತಾಣದ ಐಪಿ ವಿಳಾಸದೊಡನೆ ಹೊಂದಿಸಿಕೊಡುವ ಕೆಲಸ ಈ ವ್ಯವಸ್ಥೆಯದು. ಊರಿನ ಫೋನ್ ನಂಬರುಗಳೆಲ್ಲದರ ವಿವರ ಟೆಲಿಫೋನ್ ಡೈರೆಕ್ಟರಿಯಲ್ಲಿರುವಂತೆಯೇ ಎಲ್ಲ ಜಾಲತಾಣಗಳ ವಿವರವೂ ಡಿಎನ್‌ಎಸ್‌ಗೆ ಲಭ್ಯವಿರುತ್ತದೆ. ಅದು ಸರಿಯಾದ ಐಪಿ ವಿಳಾಸ ಹುಡುಕಿಕೊಟ್ಟರಷ್ಟೇ ನಮಗೆ ಬೇಕಾದ ಜಾಲತಾಣ ನಮ್ಮ ಕಂಪ್ಯೂಟರ್ ಅಥವಾ ಮೊಬೈಲಿನ ಪರದೆಯಲ್ಲಿ ತೆರೆದುಕೊಳ್ಳುತ್ತದೆ. ಕೆಲವರು ಡಿಎನ್‌ಎಸ್ ಅನ್ನು ಡೊಮೈನ್ ನೇಮ್ ಸರ್ವಿಸ್ ಅಥವಾ ಡೊಮೈನ್ ನೇಮ್ ಸರ್ವರ್ ಎಂದೂ ಕರೆಯುತ್ತಾರೆ.