A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 318

Backtrace:

File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 319

Backtrace:

File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 320

Backtrace:

File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler

File: /Appdata/padakanaja.karnataka.gov.in/index.php
Line: 318
Function: require_once

Padakanaja - Dictionary View
ಅನಿಸಿಕೆ

ಪದಕೋಶ: ಕಂಪ್ಯೂಟರ್ ತಂತ್ರಜ್ಞಾನ ಪದವಿವರಣ ಕೋಶ | ಇಂಗ್ಲೀಷ್-ಕನ್ನಡ |ಪ್ರಕಾಶಕರು - ಕನ್ನಡ ಅಭಿವೃದ್ಧಿ ಪ್ರಾಧಿಕಾರ (2017)

Show entries
ಕ್ರಮ ಸ೦ಖ್ಯೆ ಇಂಗ್ಲೀಷ್ ಪದ
(English Word)
ಕನ್ನಡ ಪದ
(Kannada Word)
ಕನ್ನಡ ಅರ್ಥ
(Kannada Meaning)
ವಿಷಯ ವರ್ಗೀಕರಣ
(Word Subject)
ವ್ಯಾಕರಣ ವಿಶೇಷ
(Word Grammer)
ಕನ್ನಡ ಉಚ್ಚಾರಣೆ
(Kannada Pronunciation)
ಪರ್ಯಾಯ ಪದ
(Word Synonyms)
ಇಂಗ್ಲೀಷ್ ಅರ್ಥ
(English Meaning)
ಸಂಕ್ಷಿಪ್ತ ವಿವರಣೆ
(Short Description)
ದೀರ್ಘ ವಿವರಣೆ
(Long Description)
ಆಡಳಿತಾತ್ಮಕ ಪದ
(Administrative Word)
91 Docking Station ಡಾಕಿಂಗ್ ಸ್ಟೇಶನ್ ಲ್ಯಾಪ್‌ಟಾಪ್ ಹಾಗೂ ಪೂರಕ ಸಾಧನಗಳ ನಡುವೆ ಸಂಪರ್ಕವನ್ನು ಸುಲಭವಾಗಿಸುವ ಸಾಧನ; ಮಾನಿಟರ್, ಪ್ರಿಂಟರ್ ಇತ್ಯಾದಿಗಳನ್ನೆಲ್ಲ ಇದಕ್ಕೆ ಸಂಪರ್ಕಿಸಿಟ್ಟು ಅಗತ್ಯಬಿದ್ದಾಗ ಲ್ಯಾಪ್‌ಟಾಪನ್ನೂ ಥಟ್ಟನೆ ಸಂಪರ್ಕಿಸುವುದು ಸಾಧ್ಯ. ಬಂದರಿನಲ್ಲಿ ಹಡಗನ್ನು ಕಟ್ಟೆಗೆ ತರುವ ಪ್ರಕ್ರಿಯೆಯನ್ನು ಡಾಕಿಂಗ್ (docking) ಎಂದು ಕರೆಯುವ ಪರಿಪಾಠವಿದೆ. ಹಡಗಿನ ಓಡಾಟವನ್ನು ನಿರ್ಬಂಧಿಸಿ ಅದನ್ನು ಒಂದೆಡೆ ನಿಲ್ಲಿಸುವುದು ಇದರ ಉದ್ದೇಶ. ಹಡಗಿನಂತೆ, ಹಡಗಿನಷ್ಟು ಓಡಾಡದಿದ್ದರೂ ಕಂಪ್ಯೂಟರ್ ಪ್ರಪಂಚದ ಮಟ್ಟಿಗೆ ಲ್ಯಾಪ್‌ಟಾಪ್ ಸಂಚಾರಿಯೇ. ವೈಫೈ ಸಂಪರ್ಕವಿರುವ ಯಾವ ಜಾಗದಲ್ಲಿ ಬೇಕಿದ್ದರೂ ಅದನ್ನು ಬಳಸುವುದು ಸಾಧ್ಯ. ಕಿರಿಕಿರಿ ಶುರುವಾಗುವುದೇನಿದ್ದರೂ ಅದಕ್ಕೆ ಬೇರೆ ಸಾಧನಗಳನ್ನು ಸಂಪರ್ಕಿಸುವ ಅಗತ್ಯ ಬಿದ್ದಾಗ ಮಾತ್ರ: ಚಾರ್ಜರ್, ಮಾನಿಟರ್, ಪ್ರಿಂಟರ್, ನೆಟ್‌ವರ್ಕ್ ಕೇಬಲ್ಲುಗಳನ್ನೆಲ್ಲ ಜೋಡಿಸುತ್ತ ಹೋದಂತೆ ಒಂದು ದೊಡ್ಡ ಗೋಜಲೇ ಸೃಷ್ಟಿಯಾಗಿಬಿಡುತ್ತದೆ. ಇವನ್ನೆಲ್ಲ ಒಂದು ಸಾಧನಕ್ಕೆ ಜೋಡಿಸಿಟ್ಟು ಅಗತ್ಯಬಿದ್ದಾಗ ಅದಕ್ಕೆ ಲ್ಯಾಪ್‌ಟಾಪನ್ನು ಸಂಪರ್ಕಿಸುವಂತಿದ್ದರೆ ಈ ಕಿರಿಕಿರಿಯನ್ನು ತಪ್ಪಿಸಬಹುದಲ್ಲ? ಇದಕ್ಕಾಗಿ ಬಳಕೆಯಾಗುವ ಸಾಧನವೇ 'ಡಾಕಿಂಗ್ ಸ್ಟೇಶನ್'. ಸಮುದ್ರದಲ್ಲಿ ಓಡಾಡುವ ಹಡಗನ್ನು ಬಂದರಿನಲ್ಲಿ ಬಂಧಿಸುವಂತೆ ಸಂಚಾರಿ ಲ್ಯಾಪ್‌ಟಾಪನ್ನು ಇದು ಒಂದುಕಡೆ ಜೋಡಿಸಿಡುವುದರಿಂದಲೇ ಈ ಹೆಸರಿನಲ್ಲೂ 'ಡಾಕಿಂಗ್' ಬಂದಿದೆ. ವಿವಿಧ ಸಾಧನಗಳನ್ನು ಜೋಡಿಸಲು ಬೇಕಾದ ಪೋರ್ಟ್‌ಗಳು ಡಾಕಿಂಗ್ ಸ್ಟೇಶನಿನಲ್ಲಿ ಸಾಕಷ್ಟು ಸಂಖ್ಯೆಯಲ್ಲಿರುತ್ತವೆ. ಗೃಹಬಳಕೆಯ ಸನ್ನಿವೇಶದಲ್ಲಿ ಇಷ್ಟೆಲ್ಲ ಸಂಖ್ಯೆಯ ಸಾಧನಗಳನ್ನು ಜೋಡಿಸುವ ಅಗತ್ಯ ಬರುವುದು ಅಪರೂಪವಾದ್ದರಿಂದ ಡಾಕಿಂಗ್ ಸ್ಟೇಶನ್ ಬಳಕೆ ಕಚೇರಿಗಳಲ್ಲೇ ಹೆಚ್ಚು. ಬೇರೆಬೇರೆ ಸಂಸ್ಥೆಗಳ ಲ್ಯಾಪ್‌ಟಾಪ್‌ಗಳಿಗೆ ಬೇರೆಬೇರೆ ಡಾಕಿಂಗ್ ಸ್ಟೇಶನುಗಳನ್ನು ಬಳಸಬೇಕಾದ ಪರಿಸ್ಥಿತಿ ಹೋಗಲಾಡಿಸಲು ಯುಎಸ್‌ಬಿ ಡಾಕಿಂಗ್ ಸ್ಟೇಶನ್‌ಗಳನ್ನು ಪರಿಚಯಿಸಲಾಗಿದೆ. ಅಂದಹಾಗೆ ಸ್ಮಾರ್ಟ್‌ಫೋನ್, ಟ್ಯಾಬ್ಲೆಟ್ ಹಾಗೂ ಹೈಬ್ರಿಡ್ ಕಂಪ್ಯೂಟರಿನಂತಹ ಸಾಧನಗಳ ಜೊತೆ ಬಳಸಲೂ ಡಾಕಿಂಗ್ ಸ್ಟೇಶನಿನಂತಹ ಸಾಧನಗಳು ದೊರಕುತ್ತವೆ; ಅವನ್ನು 'ಡಾಕ್'ಗಳೆಂದೂ ಗುರುತಿಸುವ ಅಭ್ಯಾಸವಿದೆ.
92 Domain Name ಡೊಮೈನ್ ನೇಮ್ ಯಾವುದೇ ಜಾಲತಾಣವನ್ನು ಪ್ರತ್ಯೇಕವಾಗಿ ಗುರುತಿಸಲು ನೆರವಾಗುವ ಹೆಸರು ಅಂತರಜಾಲದಲ್ಲಿ ಅಪಾರ ಸಂಖ್ಯೆಯ ಜಾಲತಾಣಗಳಿರುವುದರಿಂದ ಅವನ್ನೆಲ್ಲ ಪ್ರತ್ಯೇಕವಾಗಿ ಗುರುತಿಸುವುದು ಅನಿವಾರ್ಯ. ಜಾಲತಾಣಗಳನ್ನು ಹೀಗೆ ಗುರುತಿಸಲು ನೆರವಾಗುವ ಹೆಸರೇ ಡೊಮೈನ್ ನೇಮ್. ಇದನ್ನು 'ಡೊಮೈನ್' ಎಂದಷ್ಟೇ ಕರೆಯುವ ಅಭ್ಯಾಸವೂ ಇದೆ. ಇಜ್ಞಾನ ಜಾಲತಾಣದ ಉದಾಹರಣೆ ತೆಗೆದುಕೊಂಡರೆ "ejnana.com" ಎನ್ನುವುದು ಅದರ ಡೊಮೈನ್ ನೇಮ್. ಬಹುತೇಕ ವೆಬ್ ವಿಳಾಸಗಳ ಪ್ರಾರಂಭದಲ್ಲಿ ಕಾಣಿಸುವ "www" ಅದರ ಡೊಮೈನ್ ನೇಮ್‌ನ ಭಾಗವಲ್ಲ ಎನ್ನುವುದು ಗಮನಾರ್ಹ (ಅದೊಂದು ಪೂರ್ವಪ್ರತ್ಯಯ, ಅಂದರೆ ಪ್ರಿಫಿಕ್ಸ್ ಅಷ್ಟೇ). ಡೊಮೈನ್ ನೇಮ್‌ಗಳ ಕೊನೆಯಲ್ಲಿರುವ ಡಾಟ್ ಕಾಮ್, ಡಾಟ್ ಇನ್, ಡಾಟ್ ನೆಟ್ ಮುಂತಾದ ಬಾಲಂಗೋಚಿಗಳನ್ನು 'ಡೊಮೈನ್ ಸಫಿಕ್ಸ್' (ಸಫಿಕ್ಸ್ = ಅಂತ್ಯಪ್ರತ್ಯಯ) ಎಂದು ಕರೆಯುತ್ತಾರೆ. ಪೂರ್ಣಪ್ರಮಾಣದ ಪ್ರತಿ ಜಾಲತಾಣಕ್ಕೂ ತನ್ನದೇ ಆದ ವಿಶಿಷ್ಟ ಡೊಮೈನ್ ನೇಮ್ ಇರಬೇಕಾದ್ದು ಅತ್ಯಗತ್ಯ - ಅಂದರೆ ಇಡೀ ಅಂತರಜಾಲದಲ್ಲಿ ಒಂದೇ ಒಂದು ejnana.com ಮಾತ್ರವೇ ಇರಬಹುದು. ಆದರೆ ಒಂದು ಡೊಮೈನ್ ನೇಮ್ ಅಡಿಯಲ್ಲಿ ಇನ್ನಷ್ಟು ಡೊಮೈನ್ ನೇಮ್‌ಗಳನ್ನು ರೂಪಿಸಿಕೊಳ್ಳುವುದು, ಅದನ್ನು ಬೇರೆಬೇರೆ ಜಾಲತಾಣಗಳಿಗೆ - ಪುಟಗಳಿಗೆ ನಿಯೋಜಿಸುವುದು ಸಾಧ್ಯ (ಉದಾ: ejnana.com ಅಡಿಯಲ್ಲಿ learning.ejnana.com, techbook.ejnana.com ಇತ್ಯಾದಿ). ಮೂಲ ತಾಣದ ಡೊಮೈನ್ ನೇಮ್ ಅನ್ನು ಅಂತ್ಯಪ್ರತ್ಯಯದಂತೆ ಬಳಸುವ ಇಂತಹ ವಿಳಾಸಗಳಿಗೆ 'ಸಬ್‌ಡೊಮೈನ್'ಗಳೆಂದು ಹೆಸರು. ಉಚಿತ ಜಾಲತಾಣಗಳನ್ನು, ಬ್ಲಾಗ್‌ಗಳನ್ನು ಒದಗಿಸುವ ವ್ಯವಸ್ಥೆಗಳು (ಉದಾ: ಗೂಗಲ್‌ನ ಬ್ಲಾಗರ್) ತಮ್ಮ ಗ್ರಾಹಕರಿಗೆ ನೀಡುವುದು ಸಬ್‌ಡೊಮೈನ್‌ಗಳನ್ನೇ.
93 Domain Name Registrar ಡೊಮೈನ್ ನೇಮ್ ರಿಜಿಸ್ಟ್ರಾರ್ ಗ್ರಾಹಕರಿಗೆ ಡೊಮೈನ್ ನೇಮ್‌ಗಳನ್ನು ಒದಗಿಸುವ ಹಾಗೂ ಡೊಮೈನ್ ನೇಮ್ ಸಿಸ್ಟಂಗಳನ್ನು ನಿಭಾಯಿಸುವ ಸಂಸ್ಥೆ ಪ್ರಚಾರಕ್ಕಾಗಿ, ವ್ಯಾಪಾರಕ್ಕಾಗಿ, ಹವ್ಯಾಸಕ್ಕಾಗಿ - ಹೀಗೆ ಹಲವಾರು ಉದ್ದೇಶಗಳಿಗಾಗಿ ಜಾಲತಾಣಗಳನ್ನು (ವೆಬ್‌ಸೈಟ್) ರೂಪಿಸಿಕೊಳ್ಳುವುದು ಸಾಮಾನ್ಯ ಅಭ್ಯಾಸ. ಜಾಲತಾಣ ರೂಪಿಸುವಾಗ ತಮ್ಮದೇ ಸ್ವಂತ ವಿಳಾಸ, ಅಂದರೆ ಡೊಮೈನ್ ನೇಮ್ ಬೇಕೆನ್ನುವವರು (ಉದಾ: ಇಜ್ಞಾನ ಡಾಟ್ ಕಾಮ್) ವಾರ್ಷಿಕ ಬಾಡಿಗೆಯ ಆಧಾರದ ಮೇಲೆ ಅದನ್ನು ಪಡೆದುಕೊಳ್ಳುವುದು ಸಾಧ್ಯ. ಹೀಗೆ ಡೊಮೈನ್ ನೇಮ್‌ಗಳನ್ನು ಒದಗಿಸುವ ಹಾಗೂ ಡೊಮೈನ್ ನೇಮ್ ಸಿಸ್ಟಂಗಳನ್ನು ನಿಭಾಯಿಸುವ ಸಂಸ್ಥೆಗಳಿಗೆ 'ಡೊಮೈನ್ ನೇಮ್ ರಿಜಿಸ್ಟ್ರಾರ್'ಗಳೆಂದು ಹೆಸರು. ನಮಗೆ ಬೇಕಾದ ಜಾಲತಾಣದ ವಿಳಾಸವನ್ನು ಇಂತಹ ರಿಜಿಸ್ಟ್ರಾರ್‌ಗಳ ಮೂಲಕವೇ ಪಡೆದುಕೊಳ್ಳಬೇಕು. ನಿಮಗೆ ಯಾವ ಬಾಲಂಗೋಚಿಯಿರುವ ವಿಳಾಸ ಬೇಕು ಎನ್ನುವುದರ ಮೇಲೆ ನೀವು ಪಾವತಿಸಬೇಕಾದ ಬಾಡಿಗೆಯ ಮೊತ್ತ ನಿರ್ಧಾರವಾಗುತ್ತದೆ. ಡಾಟ್ ಕಾಮ್, ಡಾಟ್ ಇನ್, ಡಾಟ್ ನೆಟ್ ಮುಂತಾದ ಆಯ್ಕೆಗಳ ಪೈಕಿ ನೀವು ಯಾವುದನ್ನು ಆರಿಸಿಕೊಳ್ಳುತ್ತೀರಿ ಎನ್ನುವುದರ ಮೇಲೆ ಈ ಬಾಡಿಗೆಯ ಮೊತ್ತ ಒಂದೆರಡು ನೂರು ರೂಪಾಯಿಗಳಿಂದ ಸಾವಿರಗಳವರೆಗೂ ಇರಬಹುದು. ಡೊಮೈನ್ ನೇಮ್ ರಿಜಿಸ್ಟ್ರಾರ್‌ಗಳ ಜಾಲತಾಣದಲ್ಲಿ ನಮಗೆ ಬೇಕಾದ ಡೊಮೈನ್ ನೇಮ್ ಇನ್ನೂ ಲಭ್ಯವಿದೆಯೇ ಎಂದು ಪರೀಕ್ಷಿಸುವ, ಲಭ್ಯವಿದ್ದಲ್ಲಿ ನಿರ್ದಿಷ್ಟ ಅವಧಿಗೆ ಅದನ್ನು ಬಾಡಿಗೆಗೆ ಪಡೆಯುವ ಅವಕಾಶ ಇರುತ್ತದೆ.
94 Domain Parking ಡೊಮೈನ್ ಪಾರ್ಕಿಂಗ್ ಮುಂದೆಂದೋ ಬೇಕಾಗಬಹುದಾದ ಜಾಲತಾಣದ ವಿಳಾಸವನ್ನು ಈಗಲೇ ಕಾದಿರಿಸಿಕೊಳ್ಳುವ ಅಭ್ಯಾಸ ಮಾಹಿತಿ ಪ್ರಸಾರದಿಂದ ಪ್ರಾರಂಭಿಸಿ ವ್ಯಾಪಾರದವರೆಗೆ ಅನೇಕ ಉದ್ದೇಶಗಳಿಗಾಗಿ ಜಾಲತಾಣಗಳನ್ನು ಬಳಸುವುದು ಸಾಮಾನ್ಯ. ಹೊಸದೊಂದು ಯೋಜನೆ ಕೈಗೆತ್ತಿಕೊಳ್ಳುವಾಗ ಅದಕ್ಕೆ ಹೊಂದುವಂತಹ ಹೆಸರಿನ ಜಾಲತಾಣ (ಡೊಮೈನ್ ನೇಮ್) ಲಭ್ಯವಿದೆಯೇ ಎಂದು ಪರೀಕ್ಷಿಸುವುದೂ ಅಪರೂಪವೇನಲ್ಲ. ಹೀಗಾಗಿಯೇ ಜಾಲತಾಣಗಳಿಗೆ ಇದೀಗ ಎಲ್ಲಿಲ್ಲದ ಮಹತ್ವ. ಮುಂದೆಂದೋ ಬೇಕಾಗಬಹುದಾದ ಜಾಲತಾಣದ ವಿಳಾಸವನ್ನು ಈಗಲೇ ಕಾದಿರಿಸಿಕೊಳ್ಳುವ ಅಭ್ಯಾಸಕ್ಕೆ ಕಾರಣವಾಗಿರುವುದು ಇದೇ ಅಂಶ. ಈ ಅಭ್ಯಾಸವನ್ನು 'ಡೊಮೈನ್ ಪಾರ್ಕಿಂಗ್' ಎಂದು ಕರೆಯುತ್ತಾರೆ. ಮುಂದೊಮ್ಮೆ ನಮಗೆ ಬೇಕಾಗಬಹುದಾದ, ನಮ್ಮ ವಿರುದ್ಧ ಅಪಪ್ರಚಾರ ಮಾಡಲು ಬಳಕೆಯಾಗಬಲ್ಲಂತಹ ಹೆಸರಿನ ತಾಣಗಳನ್ನು ಹೀಗೆ ಕಾದಿರಿಸಿಕೊಳ್ಳುವ ಮೂಲಕ ಅದು ಕುತಂತ್ರಿಗಳ ಕೈಸೇರದಂತೆ ತಡೆಯುವುದು ಸಾಧ್ಯವಾಗುತ್ತದೆ. ನಮ್ಮ ತಾಣದ ಹೆಸರಿನಂತೆಯೇ ಕಾಣುವ (ಉದಾ: paypal ಬದಲು paypa1) ಹೆಸರಿನ ತಾಣಗಳನ್ನು ಕಾದಿರಿಸಿಕೊಳ್ಳುವ ಮೂಲಕ ಫಿಶಿಂಗ್‌ನಂತಹ ಆನ್‌ಲೈನ್ ವಂಚನೆಗಳನ್ನೂ ತಡೆಯಬಹುದು. ಹೀಗೆ ಪಾರ್ಕ್ ಮಾಡಲಾದ ಜಾಲತಾಣಗಳಲ್ಲಿ 'ಶೀಘ್ರವೇ ಬರಲಿದೆ' ಎನ್ನುವಂತಹ ಸಂದೇಶಗಳನ್ನು (ಹಾಗೂ ಕೆಲವೊಮ್ಮೆ ಜಾಹೀರಾತುಗಳನ್ನು) ಬಿಟ್ಟರೆ ಬೇರೆ ಯಾವ ಮಾಹಿತಿಯೂ ಇರುವುದಿಲ್ಲ. ಮುಂದೆ ಹೆಚ್ಚು ಹಣಕ್ಕೆ ಮಾರಲೆಂದು ಡೊಮೈನ್ ನೇಮ್‌ಗಳನ್ನು ಕೊಂಡಿಟ್ಟುಕೊಳ್ಳುತ್ತಾರಲ್ಲ (ಸೈಬರ್ ಸ್ಕ್ವಾಟರ್‍ಸ್), ಅವರು ಇಂತಹ ತಾಣಗಳಲ್ಲಿ ಆಸಕ್ತ ಗ್ರಾಹಕರಿಗೆಂದು ತಮ್ಮ ಸಂಪರ್ಕ ವಿವರಗಳನ್ನೂ ಪ್ರಕಟಿಸಿರುತ್ತಾರೆ. ಅಷ್ಟೇ ಅಲ್ಲ, ತಾಣಗಳು ಮಾರಾಟವಾಗುವವರೆಗೂ ಅದರಲ್ಲಿ ಜಾಹೀರಾತುಗಳನ್ನು ಪ್ರದರ್ಶಿಸಿ ಒಂದಷ್ಟು ಹಣವನ್ನೂ ಸಂಪಾದಿಸಿಕೊಳ್ಳುತ್ತಾರೆ.
95 Dongle ಡಾಂಗಲ್ ಯಾವುದೇ ವಿದ್ಯುನ್ಮಾನ ಸಾಧನಕ್ಕೆ ಜೋಡಿಸಿದಾಗ ಅದಕ್ಕೆ ಹೆಚ್ಚುವರಿ ಸೌಲಭ್ಯಗಳನ್ನು ಒದಗಿಸಿಕೊಡುವ ಸಾಧನ ಹಲವು ಕೆಲಸಗಳಿಗಾಗಿ ತಂತ್ರಜ್ಞಾನದ ಮೇಲೆ ಅವಲಂಬಿತರಾಗಿರುವುದು ಇಂದಿನ ದಿನಗಳಲ್ಲಿ ಸಾಮಾನ್ಯ ಸಂಗತಿ. ಈ ಅವಲಂಬನೆಯ ಅಂಗವಾಗಿ ವಿವಿಧ ವಿದ್ಯುನ್ಮಾನ ಸಾಧನಗಳನ್ನು ಬಳಸುವುದು ಕೂಡ ಅಷ್ಟೇ ಸಾಮಾನ್ಯ. ಇಂತಹ ಸಾಧನಗಳಲ್ಲಿ ನೂರೆಂಟು ಸೌಲಭ್ಯಗಳಿರುವುದು ನಿಜವೇ. ಆದರೆ ತಂತ್ರಜ್ಞಾನ ಜಗತ್ತು ಕೇಳಬೇಕಲ್ಲ, ಪ್ರತಿದಿನವೂ ಒಂದೊಂದು ಹೊಸ ಆವಿಷ್ಕಾರವನ್ನು ತಂದು ನಮ್ಮ ಮುಂದಿಡುತ್ತದೆ. ಅಲ್ಲಿಗೆ ನಮ್ಮ ಕಂಪ್ಯೂಟರಿನಲ್ಲಿ, ಟಿವಿಯಲ್ಲಿ ಈ ಸೌಲಭ್ಯ ಇಲ್ಲವೆಂಬ ಕೊರತೆ ನಮ್ಮನ್ನು ಕಾಡತೊಡಗುತ್ತದೆ. ಹಾಗೆಂದು ದಿನದಿನವೂ ಹೊಸ ಟೀವಿ - ಕಂಪ್ಯೂಟರ್ ಕೊಳ್ಳಲು ಸಾಧ್ಯವೇ? ಅಂತಹ ಪರಿಸ್ಥಿತಿಯನ್ನು ತಪ್ಪಿಸುವುದು ಹೇಗೆ? ಇದಕ್ಕೆ ಸ್ವಲ್ಪಮಟ್ಟಿಗಾದರೂ ಪರಿಹಾರ ಒದಗಿಸಿಕೊಡುವ ಸಾಧನವೇ 'ಡಾಂಗಲ್'. ಯಾವುದೇ ವಿದ್ಯುನ್ಮಾನ ಸಾಧನಕ್ಕೆ ಜೋಡಿಸಿದಾಗ ಅದಕ್ಕೆ ಹೆಚ್ಚುವರಿ ಸೌಲಭ್ಯಗಳನ್ನು ಒದಗಿಸಿಕೊಡುವ ಪುಟಾಣಿ ಸಾಧನವೇ ಡಾಂಗಲ್. ಯುಎಸ್‌ಬಿ, ಎಚ್‌ಡಿಎಂಐ ಮುಂತಾದ ಯಾವುದೇ ಪೋರ್ಟ್ ಮೂಲಕ ಈ ಸಾಧನಗಳನ್ನು ನಾವು ಟೀವಿಗೋ ಕಂಪ್ಯೂಟರಿಗೋ ಜೋಡಿಸಿಕೊಳ್ಳಬಹುದು. ವೈ-ಫೈ ಸಂಪರ್ಕ ಪಡೆಯುವ ಸೌಲಭ್ಯವಿರಬಹುದು, ಬ್ಲೂಟೂತ್ ಸಂಪರ್ಕವಿರಬಹುದು ಅಥವಾ ಅಂತರಜಾಲ ಸಂಪರ್ಕವೇ ಇರಬಹುದು - ಡಾಂಗಲ್ ಬಳಸಿ ಕಂಪ್ಯೂಟರಿಗೆ ಹಲವು ಸೌಲಭ್ಯಗಳನ್ನು ಸೇರಿಸುವುದು ಸಾಧ್ಯ. ಇದೇ ರೀತಿ 'ಕ್ರೋಮ್ ಕಾಸ್ಟ್'ನಂತಹ ಸ್ಟ್ರೀಮಿಂಗ್ ಸಾಧನಗಳನ್ನು, ಇಂಟೆಲ್ ಕಂಪ್ಯೂಟ್ ಸ್ಟಿಕ್ - ಕ್ರೋಮ್ ಬಿಟ್ ಮುಂತಾದ ಪುಟಾಣಿ ಕಂಪ್ಯೂಟರುಗಳನ್ನು ಟೀವಿಗೆ ಜೋಡಿಸಿಕೊಳ್ಳುವುದೂ ಸಾಧ್ಯವಿದೆ.
96 Downtime ಡೌನ್‌ಟೈಮ್ ಯಾವುದೇ ಕಂಪ್ಯೂಟರ್ ವ್ಯವಸ್ಥೆಯ ಕಾರ್ಯಾಚರಣೆ ಸ್ಥಗಿತವಾಗಿರುವ ಅವಧಿ ಬ್ಯಾಂಕಿಂಗ್ ವ್ಯವಹಾರ, ಆನ್‌ಲೈನ್ ಸೇವೆಗಳು, ಕಚೇರಿ ನಿರ್ವಹಣೆ ಮುಂತಾದ ಅನೇಕ ಉದ್ದೇಶಗಳಿಗಾಗಿ ಕಂಪ್ಯೂಟರ್ ವ್ಯವಸ್ಥೆಗಳು ಬಳಕೆಯಾಗುತ್ತವೆ. ಇವುಗಳ ಅಗತ್ಯ ಯಾವಾಗ ಬೇಕಾದರೂ ಬೀಳಬಹುದಲ್ಲ, ಹಾಗಾಗಿ ಈ ಕಂಪ್ಯೂಟರ್ ವ್ಯವಸ್ಥೆಗಳು ವರ್ಷದ ಎಲ್ಲ ದಿನಗಳಲ್ಲಿ ಇಪ್ಪತ್ತನಾಲ್ಕು ಗಂಟೆಯೂ ಕೆಲಸಮಾಡುತ್ತಿರುತ್ತವೆ. ಇಷ್ಟೂ ಸಮಯ ಅವುಗಳ ಕಾರ್ಯಾಚರಣೆ ಸುಗಮವಾಗಿರಬೇಕು ಎನ್ನುವುದು ಎಲ್ಲರ ಅಪೇಕ್ಷೆ. ಆದರೆ ಅನೇಕ ಕಾರಣಗಳಿಂದ ಇದು ಸಾಧ್ಯವಾಗದೆ ಹೋಗಬಹುದು; ಯಾಂತ್ರಿಕ ವೈಫಲ್ಯ, ತಂತ್ರಾಂಶದ ಸಮಸ್ಯೆ, ಕುತಂತ್ರಾಂಶಗಳ ಹಾವಳಿ - ಹೀಗೆ ಅನೇಕ ಸಂಗತಿಗಳು ಕಂಪ್ಯೂಟರ್ ವ್ಯವಸ್ಥೆಗಳ ಕಾರ್ಯಾಚರಣೆಗೆ ಅಡ್ಡಿಪಡಿಸಬಲ್ಲವು. ಇಂತಹ ಯಾವುದೇ ಕಾರಣದಿಂದ ಕಾರ್ಯಾಚರಣೆ ನಿಂತುಹೋಗುತ್ತದಲ್ಲ, ಹಾಗೆ ಅವುಗಳ ಸೇವೆ ಅಲಭ್ಯವಾಗಿರುವ ಅವಧಿಯನ್ನು 'ಡೌನ್‌ಟೈಮ್' ಎಂದು ಕರೆಯುತ್ತಾರೆ. ಇದಕ್ಕೆ ಔಟೇಜ್ ಎಂಬ ಹೆಸರೂ ಇದೆ. ಯಾಂತ್ರಿಕ ವೈಫಲ್ಯ, ಅಂತರಜಾಲ ಸಂಪರ್ಕದ ಅಡಚಣೆ ಮುಂತಾದ ಸಂದರ್ಭಗಳಲ್ಲಿ ಡೌನ್‌ಟೈಮ್ ಅನಿರೀಕ್ಷಿತವಾಗಿ ಉಂಟಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಅಡಚಣೆಯನ್ನು ಕ್ಷಿಪ್ರವಾಗಿ ನಿವಾರಿಸಿ ಕಂಪ್ಯೂಟರ್ ವ್ಯವಸ್ಥೆಯ ಕಾರ್ಯಾಚರಣೆಯನ್ನು ಪುನರಾರಂಭಿಸಲು ತಂತ್ರಜ್ಞರ ತಂಡ ಸನ್ನದ್ಧವಾಗಿರುತ್ತದೆ. ಯಂತ್ರಾಂಶಗಳ ಬದಲಾವಣೆ, ಕಂಪ್ಯೂಟರ್ ವ್ಯವಸ್ಥೆ ಅಥವಾ ತಂತ್ರಾಂಶದ ಉನ್ನತೀಕರಣದಂತಹ ಪೂರ್ವನಿರ್ಧಾರಿತ ಸನ್ನಿವೇಶಗಳಲ್ಲೂ ಡೌನ್‌ಟೈಮ್ ಅಗತ್ಯವಾಗುತ್ತದೆ. ಅಂತಹ ಸಂದರ್ಭಗಳಲ್ಲಿ ಆ ಕಂಪ್ಯೂಟರ್ ವ್ಯವಸ್ಥೆಯ ಬಳಕೆದಾರರಿಗೆ ಡೌನ್‌ಟೈಮ್ ಕುರಿತ ಮಾಹಿತಿಯನ್ನು ಮುಂಚಿತವಾಗಿಯೇ ನೀಡಲಾಗಿರುತ್ತದೆ. ವ್ಯವಸ್ಥೆಯ ಬಳಕೆ ಕಡಿಮೆಯಿರುವ ಸಮಯಕ್ಕೆ (ಉದಾ: ರಾತ್ರಿ, ವಾರಾಂತ್ಯಗಳು ಇತ್ಯಾದಿ) ಸರಿಯಾಗಿ ಇಂತಹ ಡೌನ್‌ಟೈಮ್ ಅನ್ನು ಯೋಜಿಸಲಾಗುವುದು ಸಾಮಾನ್ಯ.
97 DPI ಡಿಪಿಐ ಡಾಟ್ಸ್ ಪರ್ ಇಂಚ್; ಮುದ್ರಿತ ಪ್ರತಿಯ ಒಂದು ಇಂಚಿನಲ್ಲಿ ಎಷ್ಟು ಚುಕ್ಕೆಗಳನ್ನು ಮುದ್ರಿಸಲಾಗಿದೆ ಎಂಬುದನ್ನು ಸೂಚಿಸುವ ಮಾನಕ ಡಿಜಿಟಲ್ ಚಿತ್ರಗಳ ಗುಣಮಟ್ಟದ ಬಗ್ಗೆ ಮಾತನಾಡುವಾಗ 'ಡಿಪಿಐ' ಪ್ರಸ್ತಾಪ ಬರುತ್ತದಲ್ಲ, ಅದು 'ಡಾಟ್ಸ್ ಪರ್ ಇಂಚ್' ಎನ್ನುವುದರ ಹ್ರಸ್ವರೂಪ. ಇಂಕ್‌ಜೆಟ್ ಪ್ರಿಂಟರಿನಲ್ಲಿ ಮುದ್ರಿತವಾದ ಚಿತ್ರವನ್ನು ನೋಡಿದರೆ ಅದು ಬೇರೆಬೇರೆ ಬಣ್ಣದ ಅಸಂಖ್ಯ ಚುಕ್ಕೆಗಳ ಜೋಡಣೆಯಿಂದ ರೂಪುಗೊಂಡಿರುವುದನ್ನು ಗಮನಿಸಬಹುದು. ಒಂದು ಇಂಚು ಜಾಗದಲ್ಲಿ ಅಂತಹ ಎಷ್ಟು ಚುಕ್ಕೆಗಳನ್ನು ಮುದ್ರಿಸಲಾಗಿದೆ ಎಂಬುದನ್ನು ಸೂಚಿಸುವ ಮಾನಕವೇ ಈ ಡಿಪಿಐ. ಬೇರೆಬೇರೆ ಬಗೆಯ ಪ್ರಿಂಟರುಗಳಲ್ಲಿ ಬೇರೆಬೇರೆ ಡಿಪಿಐ ಸಾಮರ್ಥ್ಯ ಇರುತ್ತದೆ. ಡಿಪಿಐ ಜಾಸ್ತಿಯಿದ್ದಷ್ಟೂ ಮುದ್ರಣ ಉತ್ತಮವಾಗಿರುತ್ತದೆ ಎನ್ನುವುದು ಒಂದು ಹಂತದವರೆಗೆ ಮಾತ್ರ ಸರಿ. ಏಕೆಂದರೆ ಡಿಪಿಐ ಲೆಕ್ಕದ ಜೊತೆಗೆ ಮೂಲ ಚಿತ್ರದ ಸ್ಪಷ್ಟತೆ, ಮುದ್ರಿಸುತ್ತಿರುವ ಗಾತ್ರ ಮುಂತಾದ ಹಲವು ಅಂಶಗಳು ಚಿತ್ರದ ಒಟ್ಟು ಗುಣಮಟ್ಟವನ್ನು ತೀರ್ಮಾನಿಸುತ್ತವೆ. ಮುದ್ರಣದ ವಿಷಯದಲ್ಲಿ ಡಾಟ್ಸ್ ಇದ್ದಂತೆ ಕಂಪ್ಯೂಟರಿನ ಚಿತ್ರಗಳಲ್ಲಿ 'ಪಿಕ್ಸೆಲ್'ಗಳಿರುತ್ತವೆ. ಫೋಟೋಶಾಪ್‌ನಂತಹ ತಂತ್ರಾಂಶಗಳಲ್ಲಿ ಚಿತ್ರವನ್ನು ರೂಪಿಸುವಾಗ ಅಲ್ಲಿರುವುದು 'ಪಿಕ್ಸೆಲ್ಸ್ ಪರ್ ಇಂಚ್' (ಪಿಪಿಐ) - ಚಿತ್ರದ ಪ್ರತಿ ಇಂಚು ವಿಸ್ತೀರ್ಣದಲ್ಲಿ ಎಷ್ಟು ಪಿಕ್ಸೆಲ್‌ಗಳಿರುತ್ತವೆ ಎಂಬ ಲೆಕ್ಕ. ೧೦೦x೧೦೦ ಪಿಕ್ಸೆಲ್‌ನ ಚಿತ್ರಕ್ಕೆ ೧೦ ಪಿಪಿಐ ನಿಗದಿಪಡಿಸಿದರೆ ಅದು ೧೦ ಇಂಚು ಉದ್ದ-ಅಗಲದಲ್ಲಿ ಮುದ್ರಣವಾಗುತ್ತದೆ. ಅದೇ ೧೦೦ ಪಿಪಿಐ ಇಟ್ಟರೆ ಚಿತ್ರದ ಗಾತ್ರ ಒಂದೇ ಇಂಚು ಉದ್ದ-ಅಗಲಕ್ಕೆ ಇಳಿಯುತ್ತದೆ. ಇದನ್ನು ಪಿಕ್ಸೆಲ್ ಸಾಂದ್ರತೆ (ಪಿಕ್ಸೆಲ್ ಡೆನ್ಸಿಟಿ) ಎಂದೂ ಗುರುತಿಸಲಾಗುತ್ತದೆ. ಇದನ್ನೂ ಡಿಪಿಐ ಎಂದೇ ಕರೆಯುವುದು ಸಾಮಾನ್ಯ ಅಭ್ಯಾಸ ಅಷ್ಟೆ. ಮೊಬೈಲ್, ಟ್ಯಾಬ್ಲೆಟ್ ಮುಂತಾದ ಸಾಧನಗಳ ಪರದೆಯ ಗುಣಮಟ್ಟವನ್ನು ಸೂಚಿಸಲಿಕ್ಕೂ 'ಪಿಪಿಐ' ಬಳಕೆಯಾಗುತ್ತದೆ. ಹೆಚ್ಚು ಪಿಪಿಐ ಇರುವ ಪರದೆಯಲ್ಲಿ ಚಿತ್ರಗಳು ಹೆಚ್ಚು ಸ್ಪಷ್ಟವಾಗಿ ಮೂಡುತ್ತವೆ.
98 DRM ಡಿಆರ್‌ಎಂ ಡಿಜಿಟಲ್ ರೈಟ್ಸ್ ಮ್ಯಾನೇಜ್‌ಮೆಂಟ್; ತಂತ್ರಜ್ಞಾನದ ಸೌಲಭ್ಯಗಳನ್ನು ಬಳಸಿ ಪೈರಸಿ ತಡೆಗೆ ಪ್ರಯತ್ನಿಸುವ ಪರಿಕಲ್ಪನೆ. ಭೌತಿಕ ಜಗತ್ತಿನಲ್ಲಿ ಸ್ಥಿರ-ಚರ ಆಸ್ತಿಗಳ ಮೇಲೆ ಅದರ ಮಾಲೀಕರಿಗೆ ಹೇಗೆ ಹಕ್ಕು ಇರುತ್ತದೋ ಡಿಜಿಟಲ್ ಜಗತ್ತಿನಲ್ಲಿ ವಿವಿಧ ರೂಪಗಳಲ್ಲಿರುವ ಮಾಹಿತಿಯ ಹಕ್ಕುಸ್ವಾಮ್ಯ ಅದನ್ನು ರೂಪಿಸಿದವರ ಬಳಿಯಲ್ಲಿರುತ್ತದೆ. ಸೂಕ್ತ ಶುಲ್ಕ ನೀಡಿಯೋ ಮಾಲೀಕರನ್ನು ಸೂಕ್ತವಾಗಿ ಗುರುತಿಸುವ ಮೂಲಕವೋ ಬಳಕೆದಾರರು ಆ ಹಕ್ಕನ್ನು ಗೌರವಿಸದಿದ್ದಾಗ ಪೈರಸಿ ಸಮಸ್ಯೆ ತಲೆಯೆತ್ತುತ್ತದೆ. ಪೈರಸಿ ಕೇವಲ ನೀತಿ ತತ್ವಗಳ (ಎಥಿಕ್ಸ್) ಸಮಸ್ಯೆಯಷ್ಟೇ ಅಲ್ಲ, ಬೌದ್ಧಿಕ ಹಕ್ಕುಗಳ ಮಾಲೀಕರಿಗೆ ತಮ್ಮ ಕೆಲಸಕ್ಕೆ ತಕ್ಕ ಪ್ರತಿಫಲ ಸಿಕ್ಕದೆ ಹೋದಾಗ ಅದು ಆರ್ಥಿಕ ಸಮಸ್ಯೆಗೂ ಕಾರಣವಾಗುತ್ತದೆ. ಈ ಸಮಸ್ಯೆಯ ತಡೆಗೆ ಕೈಗೊಳ್ಳಲಾಗುವ ಕ್ರಮಗಳಲ್ಲೊಂದು - 'ಡಿಜಿಟಲ್ ರೈಟ್ಸ್ ಮ್ಯಾನೇಜ್‌ಮೆಂಟ್' (ಡಿಆರ್‌ಎಂ). ತಂತ್ರಜ್ಞಾನದ ಸೌಲಭ್ಯಗಳನ್ನು ಬಳಸಿ ಪೈರಸಿ ತಡೆಗೆ ಪ್ರಯತ್ನಿಸುವುದು ಡಿಆರ್‌ಎಂನ ಮೂಲಮಂತ್ರ. ಆನ್‌ಲೈನ್‌ನಲ್ಲಿ ಮಾತ್ರವೇ ಓದಲು ದೊರಕುವ ಪುಸ್ತಕದ ಡೌನ್‌ಲೋಡ್ ನಿರ್ಬಂಧಿಸುವುದು, ಹಾಡುಗಳನ್ನು ನಿರ್ದಿಷ್ಟ ಆಪ್ ಮೂಲಕವೇ ಕೇಳಲು ಸಾಧ್ಯವಾಗುವಂತೆ ಮಾಡುವುದು, ಇನ್‌ಸ್ಟಾಲ್ ಮಾಡಿಕೊಂಡ ತಂತ್ರಾಂಶದ ನೋಂದಾವಣೆಯನ್ನು ಕಡ್ಡಾಯಗೊಳಿಸುವುದು - ಹೀಗೆ ಹಲವು ಮಾರ್ಗಗಳ ಮೂಲಕ ಡಿಆರ್‌ಎಂ ತಂತ್ರಗಳನ್ನು ಕಾರ್ಯಗತಗೊಳಿಸಬಹುದು. ಡಿಆರ್‌ಎಂ ತಂತ್ರಗಳು ಕೆಲವೊಮ್ಮೆ ಅಧಿಕೃತ ಬಳಕೆದಾರರಿಗೂ ತೊಂದರೆಕೊಡುವುದುಂಟು. ಡಿಆರ್‌ಎಂ ಕಾರ್ಯಗತಗೊಳಿಸಲು ಬಳಕೆಯಾಗುವ ಕೆಲವು ಕ್ರಮಗಳನ್ನು ದುರುದ್ದೇಶಪೂರಿತ ತಂತ್ರಾಂಶಗಳ ಮೂಲಕ ವಿಫಲಗೊಳಿಸಲಾದ ಉದಾಹರಣೆಗಳೂ ಇವೆ. ಡಿಆರ್‌ಎಂ ಕ್ರಮಗಳು ಅಂತರಜಾಲದ ಮುಕ್ತ ಸ್ವರೂಪಕ್ಕೆ ವಿರುದ್ಧ ಎಂಬ ಹಿನ್ನೆಲೆಯಲ್ಲಿ ಈ ಪರಿಕಲ್ಪನೆಯನ್ನೇ ವಿರೋಧಿಸುವವರೂ ಇದ್ದಾರೆ.
99 DTT ಡಿಟಿಟಿ ಡಿಜಿಟಲ್ ಟೆರೆಸ್ಟ್ರಿಯಲ್ ಟೆಲಿವಿಶನ್; ಸೀಮಿತ ವ್ಯಾಪ್ತಿಯ ಪ್ರದೇಶದಲ್ಲಿ ಟೀವಿ ಕಾರ್ಯಕ್ರಮಗಳನ್ನು ನೇರವಾಗಿ - ಉಪಗ್ರಹಗಳ ಅಗತ್ಯವಿಲ್ಲದೆ - ಪ್ರಸಾರಮಾಡುವ ವ್ಯವಸ್ಥೆ ನಮ್ಮಲ್ಲಿ ಅನೇಕರು ಟೀವಿ ನೋಡಲು ಡಿಟಿಎಚ್ (ಡೈರೆಕ್ಟ್ ಟು ಹೋಮ್) ವ್ಯವಸ್ಥೆ ಬಳಸುತ್ತೇವೆ. ಈ ವ್ಯವಸ್ಥೆಯಲ್ಲಿ ಟೀವಿ ಪ್ರಸಾರ ಕೇಂದ್ರದಿಂದ ಹೊರಟ ಸಂಕೇತಗಳು ಅಂತರಿಕ್ಷಕ್ಕೆ ಚಿಮ್ಮಿ, ಉಪಗ್ರಹಗಳನ್ನು ತಲುಪಿ, ಅಲ್ಲಿಂದ ಮನೆ ಮೇಲಿನ ಡಿಶ್‌ಗೆ ಮರಳಿ ನಮ್ಮ ಟೀವಿಯನ್ನು ಮುಟ್ಟುತ್ತವೆ. ಒಂದೆರಡು ದಶಕದ ಹಿಂದೆ ಈ ವ್ಯವಸ್ಥೆ ಇರಲಿಲ್ಲ. ಆಗ ದೂರದರ್ಶನ ಕೇಂದ್ರದಿಂದ ಹೊರಟ ಸಂಕೇತಗಳು ಅಲ್ಲಿನ ಪ್ರಸಾರ ಯಂತ್ರದ ಮೂಲಕ ಸುತ್ತಲ ಪ್ರದೇಶಗಳಿಗೆ ತಲುಪುತ್ತಿದ್ದವು. ಒಂದು ಆಂಟೆನಾ ಜೋಡಿಸಿಬಿಟ್ಟರೆ ಸಾಕು, ಕಾರ್ಯಕ್ರಮಗಳು ನಮ್ಮ ಟೀವಿಯಲ್ಲಿ ಮೂಡುತ್ತಿದ್ದವು - ಯಾವುದೇ ಸಬ್ಸ್‌ಕ್ರಿಪ್ಷನ್ ಇತ್ಯಾದಿಗಳ ಗೊಡವೆಯಿಲ್ಲದೆ! ಈ ವ್ಯವಸ್ಥೆಗೆ ಡಿಟಿಟಿ (ಡಿಜಿಟಲ್ ಟೆರೆಸ್ಟ್ರಿಯಲ್ ಟೆಲಿವಿಶನ್) ಎಂದು ಹೆಸರು. ನಮ್ಮ ದೇಶದಲ್ಲಿ ಈ ವ್ಯವಸ್ಥೆ ಬಳಸುತ್ತಿರುವ ಸಂಸ್ಥೆಗಳ ಪೈಕಿ ಪ್ರಸಾರ ಭಾರತಿ (ದೂರದರ್ಶನ) ಅತ್ಯಂತ ಪ್ರಮುಖ ಹೆಸರು. ಈ ವ್ಯವಸ್ಥೆಯ ಬಳಕೆ ಹೆಚ್ಚಿದರೆ ಪ್ರತಿ ಊರಿಗೂ ಹಲವಾರು ಪ್ರತ್ಯೇಕ ಎಫ್‌ಎಂ ಚಾನೆಲ್ಲುಗಳಿರುವಂತೆ ಬೇರೆಬೇರೆ ಟೀವಿ ಚಾನೆಲ್ಲುಗಳೂ ಇರುವಂತೆ ಮಾಡುವುದು, ಅವನ್ನು ಕೇಬಲ್ ಸಂಪರ್ಕವಿಲ್ಲದೆಯೇ ನೋಡುವುದು ಸಾಧ್ಯವಾಗಲಿದೆ.
100 e-Book ಇ-ಬುಕ್ ಇಲೆಕ್ಟ್ರಾನಿಕ್ ಬುಕ್; ಕಂಪ್ಯೂಟರ್, ಮೊಬೈಲ್ ಫೋನ್, ಟ್ಯಾಬ್ಲೆಟ್, ಇ-ಬುಕ್ ರೀಡರ್ ಮುಂತಾದ ಸಾಧನಗಳಲ್ಲಿ ಓದಬಹುದಾದ ವಿದ್ಯುನ್ಮಾನ ರೂಪದ ಪುಸ್ತಕ ಪ್ರಕಟವಾದ ಒಳ್ಳೆಯ ಪುಸ್ತಕಗಳೆಲ್ಲ ನಮಗೆ ಸಿಗುವುದಿಲ್ಲ, ಸಿಕ್ಕರೂ ಎಲ್ಲವನ್ನೂ ಕೊಂಡಿಟ್ಟುಕೊಳ್ಳಲು ಮನೆಯಲ್ಲಿ ಜಾಗ ಇರುವುದಿಲ್ಲ. ಈ ಸಮಸ್ಯೆ ತಪ್ಪಿಸಲು ಹುಟ್ಟಿಕೊಂಡದ್ದೇ ವಿದ್ಯುನ್ಮಾನ ಪುಸ್ತಕ, ಅಂದರೆ ಇ-ಬುಕ್‌ಗಳ ಪರಿಕಲ್ಪನೆ. ಪುಸ್ತಕದ ಸ್ವರೂಪವನ್ನು ಹಾಗೆಯೇ ಉಳಿಸಿಕೊಂಡು ಅದರ ಭೌತಿಕ ರೂಪವನ್ನು ಡಿಜಿಟಲ್ ರೂಪಕ್ಕೆ ಪರಿವರ್ತಿಸುವುದು ಇ-ಪುಸ್ತಕಗಳ ವೈಶಿಷ್ಟ್ಯ. ಇವನ್ನು ಓದಲೆಂದೇ ಕಿಂಡಲ್‌ನಂತಹ ಪ್ರತ್ಯೇಕ ಸಾಧನಗಳು (ಇ-ಬುಕ್ ರೀಡರ್) ರೂಪುಗೊಂಡಿವೆ. ಅಂತಹುದೊಂದು ಸಾಧನವಿದ್ದರೆ ಸಾಕು, ಆ ಪುಸ್ತಕಗಳಂತೆ ಇ-ಪುಸ್ತಕದಲ್ಲೂ ಪುಟ ತಿರುಗಿಸಬಹುದು, ಬುಕ್‌ಮಾರ್ಕ್ ಇಡಬಹುದು! ಪ್ರತ್ಯೇಕವಾಗಿ ಇ-ಬುಕ್ ರೀಡರನ್ನೇಕೆ ಕೊಳ್ಳಬೇಕು ಎನ್ನುವವರೂ ಚಿಂತಿಸಬೇಕಿಲ್ಲ. ಅಪಾರ ಸಂಖ್ಯೆಯ ವಿದ್ಯುನ್ಮಾನ ಪುಸ್ತಕಗಳನ್ನು ನಮ್ಮ ಕಂಪ್ಯೂಟರ್, ಮೊಬೈಲ್ ಹಾಗೂ ಟ್ಯಾಬ್ಲೆಟ್ಟುಗಳಲ್ಲೇ ದೊರಕಿಸುವ ಅಮೆಜಾನ್ ಕಿಂಡಲ್ ಹಾಗೂ ಗೂಗಲ್ ಪ್ಲೇ ಬುಕ್ಸ್‌ನಂತಹ ಹಲವು ತಂತ್ರಾಂಶಗಳು - ಮೊಬೈಲ್ ಆಪ್‌ಗಳು ಇವೆ. ಇ-ಪುಸ್ತಕಗಳ ಡಿಜಿಟಲ್ ಗ್ರಂಥಾಲಯಗಳೂ ರೂಪುಗೊಂಡಿವೆ. ಹೀಗೆ ಹಲವೆಡೆಗಳಲ್ಲಿ ದೊರಕುವ ಇ-ಪುಸ್ತಕಗಳ ಪೈಕಿ ಕೆಲವು ಉಚಿತವಾದರೆ ಇನ್ನು ಕೆಲವನ್ನು ದುಡ್ಡುಕೊಟ್ಟು ಕೊಳ್ಳಬೇಕು.