A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 318

Backtrace:

File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 319

Backtrace:

File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 320

Backtrace:

File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler

File: /Appdata/padakanaja.karnataka.gov.in/index.php
Line: 318
Function: require_once

Padakanaja - Dictionary View
ಅನಿಸಿಕೆ

ಪದಕೋಶ: ಕೃಷಿ ರಸಾಯನಶಾಸ್ತ್ರ ಶಬ್ದಾರ್ಥ ನಿರೂಪಣಾವಳಿ | ಇಂಗ್ಲೀಷ್-ಕನ್ನಡ | ಪ್ರಕಾಶಕರು - ಕೃಷಿ ವಿಶ್ವವಿದ್ಯಾನಿಲಯ (1973)

Show entries
ಕ್ರಮ ಸ೦ಖ್ಯೆ ಇಂಗ್ಲೀಷ್ ಪದ
(English Word)
ಕನ್ನಡ ಪದ
(Kannada Word)
ಕನ್ನಡ ಅರ್ಥ
(Kannada Meaning)
ವಿಷಯ ವರ್ಗೀಕರಣ
(Word Subject)
ವ್ಯಾಕರಣ ವಿಶೇಷ
(Word Grammer)
ಕನ್ನಡ ಉಚ್ಚಾರಣೆ
(Kannada Pronunciation)
ಪರ್ಯಾಯ ಪದ
(Word Synonyms)
ಇಂಗ್ಲೀಷ್ ಅರ್ಥ
(English Meaning)
ಸಂಕ್ಷಿಪ್ತ ವಿವರಣೆ
(Short Description)
ದೀರ್ಘ ವಿವರಣೆ
(Long Description)
ಆಡಳಿತಾತ್ಮಕ ಪದ
(Administrative Word)
11 Acid Rock ಆಮ್ಲ ಶಿಲೆ. ಇದರಲ್ಲಿ ಶೇಕಡ 67 ರಿಂದ 75 ರಷ್ಟು ಸಿಲಿಕಾಂಶವಿರುತ್ತದೆ. ಉದಾಹರಣೆ : ಗ್ರ್ಯಾನೈಟ್.
12 Acid Salt ಆಮ್ಲ ಲವಣ. ಇದರಲ್ಲಿ ಆಮ್ಲದ ಅಪೂರ್ಣ ತಟಸ್ಥೀಕರಣದಿಂದ ಜಲಜನಕದ ಶೇಷವಿರುತ್ತದೆ. ಉದಾಹರಣೆ : NA₂HPO₄.
13 Acid Soil ಆಮ್ಲ ಮಣ್ಣು. ಮಣ್ಣಿನಲ್ಲಿ, ‘OH’ ಅಯಾನ್ ಗಳಿಗಿಂತ ‘H’ ಅಯಾನ್ ಗಳು ಹೆಚ್ಚಾಗಿದ್ದು, ದೊರಕುವ ಪ್ರತ್ಯಾಮ್ಲ ಕಡಿಮೆ ಇರುವ ಸ್ಥಿತಿ.
14 Acidic Oxides ಆಮ್ಲೀಯ ಆಕ್ಸೈಡ್ ಗಳು. ನೀರಿನಲ್ಲಿ ಬೆರೆತು ಆಮ್ಲವನ್ನುಂಟುಮಾಡುವ ಆಕ್ಸೈಡ್ ಗಳಿಗೆ ಆಮ್ಲೀಯ ಆಕ್ಸೈಡ್ ಗಳು ಎನ್ನುವರು.
15 Acidification ಆಮ್ಲೀಕರಣ. ಆಮ್ಲತೆಯನ್ನುಂಟುಮಾಡುವ ಗೊಬ್ಬರಗಳನ್ನು ಕೊಟ್ಟಾಗ ಮಣ್ಣು ಆಮ್ಲಗತಿಗೆ ಸಾಗುತ್ತದೆ.
16 Acidity ಆಮ್ಲೀಯತೆ; ಆಮ್ಲತೆ. ಪ್ರತ್ಯಾಮ್ಲ ಹಾಗೂ ಆಮ್ಲಗಳ ನಡುವೆ ಕ್ರಿಯೆ ನಡೆದಾಗ ಪ್ರತ್ಯಾಮ್ಲದ ಆಮ್ಲವು ಪಲ್ಲಟಿಸತಕ್ಕ ಜಲಜನಕದ ಪರಮಾಣುಗಳ ಸಂಖ್ಯೆಗೆ ಆಮ್ಲೀಯತೆ ಎಂದು ಹೆಸರು.
17 Activated Sludge ಜಾಗೃತ ರೊಜ್ಜು. ಚರಂಡಿ ರೊಜ್ಜಿನಲ್ಲಿ ಚದುರಿದ ವಾಯುವಿನ ಪ್ರವಾಹವನ್ನು ಸಾಕಷ್ಟು ಕಾಲ ಪ್ರವಹಿಸಿದಾಗ, ಅದರಲ್ಲಿನ ಸಾವಯವ ವಸ್ತು ತುಂತುಗಟ್ಟುತ್ತದೆ. ವಾಯು ಪ್ರವಾಹ ನಿಂತಾಗ, ಅದು ತಳದಲ್ಲಿ ಕಂದುಬಣ್ಣದ ಗಷ್ಟಾಗಿ ನಿಲ್ಲುತ್ತದೆ; ಮೇಲಿನ ನೀರು ತಿಳಿಯಾಗುತ್ತದೆ. ಈ ನೀರನ್ನು ತೆಗೆದು ಹೊಸ ರೊಜ್ಜನ್ನು ಬಿಟ್ಟು ಹೆಚ್ಚು ಹೆಚ್ಚು ಗಷ್ಟವನ್ನು ಕೂಡಿಸಬಹುದು. ಇಂತಹ ಗಷ್ಟಿಗೆ ಜಾಗೃತ ರೊಜ್ಜು ಎಂದು ಕರೆಯುತ್ತಾರೆ.
18 Active Immunity ಸ್ವಶಕ್ತಿ ರಕ್ಷಣೆ. ತನ್ನ ಸ್ವಶಕ್ತಿಯಿಂದಲೇ ಒಂದು ಜೀವಿಯು ರೋಗಕಾರಕ ಜೀವಿಗಳಿಂದ ರಕ್ಷಣೆ ಪಡೆಯುವುದು.
19 Activity Index ಚಟುವಟಿಕೆ ಸೂಚಿ. ಯೂರಿಯಾ ಫಾರ್ಮಾಲ್ಡಿಹೈಡ್ ಸಂಯುಕ್ತವಸ್ತುವಿನ ಚಟುವಟಿಕೆ ಸೂಚಿಯನ್ನು ಈ ಕೆಳಗಿನ ಸಮೀಕರಣದಿಂದ ವ್ಯಕ್ತಪಡಿಸಬಹುದು. ಚಟುವಟಿಕೆ ಸೂಚಿ = {[(% GWIN)-(%HWIN)] ➗ (% GWIN)} x 100 % GWIN = ತಣ್ಣೀರಿನಲ್ಲಿ ಕರಗದ ಸಾರಜನಕದ ಶೇಕಡ. % HWIN = ಬಿಸಿ ನೀರಿನಲ್ಲಿ ಕರಗದ ಸಾರಜನಕದ ಶೇಕಡ.
20 Actomag ಆಕ್ಟೋಮಾಗ್. ಕ್ಯಾಲ್ಸಿಯಂ ಕಾರ್ಬೊನೇಟ್ ಮತ್ತು ಮೆಗ್ನೀಸಿಯಂ ಆಕ್ಸೈಡ್ ಗಳನ್ನೊಳಗೊಂಡ ರಾಸಾಯನಿಕ ವಸ್ತುವಿನ ಮಾರಾಟದ ಹೆಸರು. ಈ ವಸ್ತು, ಶೇಕಡ 67 ರಷ್ಟು ಕ್ಯಾಲ್ಸಿಯಂ ಕಾರ್ಬೊನೇಟ್, 27 ರಷ್ಟು ಮೆಗ್ನೀಸಿಯಂ ಆಕ್ಸೈಡ್ ಮತ್ತು 2 ರಷ್ಟು ಕ್ಯಾಲ್ಸಿಯಂ ಆಕ್ಸೈಡ್ ಗಳನ್ನು ಹೊಂದಿರುತ್ತದೆ.