A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 318

Backtrace:

File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 319

Backtrace:

File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 320

Backtrace:

File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler

File: /Appdata/padakanaja.karnataka.gov.in/index.php
Line: 318
Function: require_once

Padakanaja - Dictionary View
ಅನಿಸಿಕೆ

ಪದಕೋಶ: ಯಕ್ಷಗಾನ ಪದಕೋಶ | ಕನ್ನಡ-ಕನ್ನಡ | ಪ್ರಕಾಶಕರು - ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರ, ಎಂ.ಜಿ.ಎಂ. ಕಾಲೇಜು (1994)

Show entries
ಕ್ರಮ ಸ೦ಖ್ಯೆ ಇಂಗ್ಲೀಷ್ ಪದ
(English Word)
ಕನ್ನಡ ಪದ
(Kannada Word)
ಕನ್ನಡ ಅರ್ಥ
(Kannada Meaning)
ವಿಷಯ ವರ್ಗೀಕರಣ
(Word Subject)
ವ್ಯಾಕರಣ ವಿಶೇಷ
(Word Grammer)
ಕನ್ನಡ ಉಚ್ಚಾರಣೆ
(Kannada Pronunciation)
ಪರ್ಯಾಯ ಪದ
(Word Synonyms)
ಇಂಗ್ಲೀಷ್ ಅರ್ಥ
(English Meaning)
ಸಂಕ್ಷಿಪ್ತ ವಿವರಣೆ
(Short Description)
ದೀರ್ಘ ವಿವರಣೆ
(Long Description)
ಆಡಳಿತಾತ್ಮಕ ಪದ
(Administrative Word)
1571 ಹಸಿಬಣ್ಣ ಹಸಿ ಹೊಳಪಿನ ಬಣ್ಣಗಾರಿಕೆ. ಎಣ್ಣೆ ಹೊಳಪು ಕಾಣುವ. ಪೌಡರ್ ಹಾಕಿ ಒಣಗಿಸದಿರುವ ಮುಖವರ್ಣಿಕೆ. ಹಿಂದೆ ಎಲ್ಲ ವೇಷಗಳಿಗೂ ಹಸಿಬಣ್ಣಗಳೇ ಇದ್ದುದು. ಈಗಲೂ ಕೆಲವೊಮ್ಮೆ ಒಂದು ಅಂದವೆಂದು, ವಿಶೇಷತೆಯೆಂದು, ಕೆಲವು ವೇಷಗಳನ್ನು ಹಸಿಬಣ್ಣಗಳಾಗಿ ಬರೆಯುವರು. (ಉದಾ : ಬಲರಾಮ, ಕೌಂಡ್ಲಿಕ, ವೀರವರ್ಮ). ಸಮಗ್ರ ಯಕ್ಷಗಾನ ರಂಗ ಅಥವಾ ಕರಾವಳಿಯ ಎಲ್ಲ ತಿಟ್ಟುಗಳಿಗೆ ಅನ್ವಯ
1572 ಹಸುರು 1. ಹಸಿರು ವರ್ಣದ್ರವ್ಯ, ಹಿಂದೆ ಜಂಗಮ ಅಥವಾ ನೆಲ್ಲಿ ಎಲೆಗಳ ಹುಡಿ ಬಳಸುತ್ತಿದ್ದರು. ಈಗ ರಾಸಾಯನಿಕ ಬಣ್ಣವನ್ನು ಬಳಸುತ್ತಾರೆ. 2. ಹಸಿರು ಮುಖದ ಬಣ್ಣಗಾರಿಕೆ, ವೇಷ. ಅತಿಕಾಯ, ವೀರವರ್ಮ, ಕೌಂಡ್ಲಿಕ, ಕೃಷ್ಣ (ತೆಂ) ಇತ್ಯಾದಿ. ಸಮಗ್ರ ಯಕ್ಷಗಾನ ರಂಗ ಅಥವಾ ಕರಾವಳಿಯ ಎಲ್ಲ ತಿಟ್ಟುಗಳಿಗೆ ಅನ್ವಯ
1573 ಹಸ್ತ ಉರುಳಿಕೆ ಮದ್ದಲೆಯಲ್ಲಿ ಬಾರಿಸುವ ಉರುಳಿಕೆ ಪೆಟ್ಟುಗಳ ಒಂದು ವಿಧ. ಅಂಗೈಯ ಮೇಲ್ಭಾಗ, ಹೆಬ್ಬೆರಳು ಮತ್ತು ಉಳಿದ ನಾಲ್ಕು ಬೆರಳನ್ನು ಒಟ್ಟಾಗಿ ಜೋಡಿಸಿ ಹಿಡಿದು ಮದ್ದಲೆಯ ಮೇಲೆ ಉರುಳಿಸುವುದು. ಮದ್ದಲೆ ಬಲದ ಬಾಯಿ ಕಿರಿದಾಗುತ್ತ ಬಂದಂತೆ ರೂಢಿಸಿದ ವಾದನ ವಿಧಾನ. (ಇದಕ್ಕೆ ಭಿನ್ನವಾಗಿ, ನಾಲ್ಕು ಬೆರಳುಗಳನ್ನು ಬಿಡಿಯಾಗಿ ಬಳಸಿ ಬಾರಿಸುವುದು - ಬೆರಳು ಉರುಳಿಕೆ) ಗಂಟು ಉರುಳಿಕೆ ಉತ್ತರ ಕನ್ನಡತಿಟ್ಟು ಬಡಗ-ಬಡಗು
1574 ಹಾರ್ಮೋನಿಯಂ ಶ್ರುತಿಗಾಗಿ ಬಳಕೆಗೊಳ್ಳುವ ಹಾರ್ಮೋನಿಯೆಂ. ಹಾರ್ಮೋನಿಯಂ ಪೆಟ್ಟಿಗೆ. ಸಮಗ್ರ ಯಕ್ಷಗಾನ ರಂಗ ಅಥವಾ ಕರಾವಳಿಯ ಎಲ್ಲ ತಿಟ್ಟುಗಳಿಗೆ ಅನ್ವಯ
1575 ಹಾಲಕ್ಕಿ ಹಾಸ್ಯ ಕಟ್ಟು ಹಾಸ್ಯಗಳಲ್ಲೊಂದು, ಹಾಲಕ್ಕಿ ಒಕ್ಕಲಿಗ ಮತ್ತು ಹಾಲಕ್ಕಿ ನರ್ಸಣ್ಣ (ಶಕುನಗಾರ) ನ ಅಣಕ. ಸಮಗ್ರ ಯಕ್ಷಗಾನ ರಂಗ ಅಥವಾ ಕರಾವಳಿಯ ಎಲ್ಲ ತಿಟ್ಟುಗಳಿಗೆ ಅನ್ವಯ
1576 ಹಾಲೆ (ಳೆ) ಮರ ಒಂದು ಬಗೆಯ ಹಗುರವಾದ, ಮೆದು ಮರ (Alstonia scholaris), ಸಪ್ತಪರ್ಣ, ಬೊಂಬೆ, ವೇಷ ಸಾಮಗ್ರಿ ತಯಾರಿಗೆ ಉಪಯುಕ್ತ. ಸಮಗ್ರ ಯಕ್ಷಗಾನ ರಂಗ ಅಥವಾ ಕರಾವಳಿಯ ಎಲ್ಲ ತಿಟ್ಟುಗಳಿಗೆ ಅನ್ವಯ
1577 ಹಾಸ್ಯ 1. ಹಾಸ್ಯಗಾರ. 2. ಹಾಸ್ಯಪಾತ್ರ. 3. ಹಾಸ್ಯ ಸನ್ನಿವೇಶ ಹಾಸ್ಯವು ಪೂರ್ವ ರಂಗದಲ್ಲಿ ಕೋಡಂಗಿ ಮತ್ತು ಕಟ್ಟು ಹಾಸ್ಯಗಳ ರೂಪದಲ್ಲೂ, ಕತೆಯಲ್ಲಿ ಹೊಗಳಿಕೆ ದೂತ, ಯುದ್ಧ ದೂತ, ಕಿರಾತ ಪಡೆ, ಮಂತ್ರವಾದಿ, ಜ್ಯೋತಿಷಿ, ಪುರೋಹಿತ, ಅಪಶಕುನ ಹಾಸ್ಯ, ಚಾರಕ, ಗೂಢಚಾರ, ಸಂದೇಶಚರ, ಸಖಿ, ಹಾಸ್ಯಗಾರನ ಹೆಂಡತಿ, ಕೊರವಂಜಿ, ದೂತಿ - ಮೊದಲಾಗಿ ಹೆಣ್ಣು ಹಾಸ್ಯರೂಪದಲ್ಲೂ ಬರುತ್ತದೆ. ಹಾಸ್ಯಗಾರನು ವಹಿಸುವಾಗ ಬ್ರಹ್ಮ, ಋಷಿ, ನಾರದ ಮೊದಲಾದವೂ - ಹಾಸ್ಯಪಾತ್ರಗಳೆಂದೇ ಗ್ರಹಿಕೆ. ಹಾಸ್ಯಕ್ಕೆ ಸಂಬಂಧಿಸಿ ಕೆಲವು ಸಂಪ್ರದಾಯ ಗಳಿದ್ದು, ಉಳಿದ ಪಾತ್ರಗಳು, ಹಾಸ್ಯಕ್ಕೆ ಅನುವಾಗುವಂತೆ, ಅದನ್ನು ಅನುಸರಿಸಬೇಕು. ನಿರ್ದಿಷ್ಟ ಪ್ರಶ್ನೆಗಳನ್ನು ಕೇಳಬೇಕು, 'ಕ್ರಮ' ದಂತೆ 'ಹಾಸ್ಯ' ವನ್ನು ಮಾತಾಡಿಸಬೇಕೆಂಬುದು ಪದ್ಧತಿ. ಸಮಗ್ರ ಯಕ್ಷಗಾನ ರಂಗ ಅಥವಾ ಕರಾವಳಿಯ ಎಲ್ಲ ತಿಟ್ಟುಗಳಿಗೆ ಅನ್ವಯ
1578 ಹಾಸ್ಯಗಾರ ಹಾಸ್ಯಕಾರ, ವಿದೂಷಕ. ಮೇಳದ ಪ್ರಮುಖ ವ್ಯಕ್ತಿಗಳಲ್ಲೊಬ ಬಡಗುತಿಟ್ಟು ಭಾಗವತನ ಬಳಿಕ, ಮದ್ದಲೆಗಾರ, ಮುಖ್ಯವೇಷದವನು (ತೆಂಕುತಿಟ್ಟಿನಲ್ಲಿ ಬಣ್ಣದ ವೇಷಧಾರಿ, ಬಡಗುತಿಟ್ಟಿನಲ್ಲಿ ಎರಡನೆಯ ವೇಷಧಾರಿ), ಹಾಸ್ಯಗಾರ- ಇವರಿಗೆ ಸಮಾನ ಸ್ಥಾನವೆಂಬ ಸಂಪ್ರದಾಯ. ಹಾಸ್ಯಗಾರನಿಗೆ, ಹಾಸ್ಯ ಪ್ರತಿಭೆಯೊಂದಿಗೆ, ಯಕ್ಷಗಾನದ ಅಂಗೋಪಾಂಗಗಳ ಜ್ಞಾನವಿರಬೇಕೆಂದೂ, ಭಾಗವತಿಕೆ, ಮದ್ದಲೆ ವಾದನಗಳಲ್ಲಿ ಪ್ರಯೋಗ ಸಾಮರ್ಥ್ಯ ಮತ್ತು ಇತರ ವೇಷಗಳನ್ನೂ ಮಾಡಬಲ್ಲ ಸಾಮರ್ಥ್ಯವಿರಬೇಕೆಂದೂ ಸಾಂಪ್ರದಾಯಿಕ ನಿರ್ಣಯ. ಹಿಂದೆ, ಈಗಿನಂತೆ, ಕಲಾವಿದನು ನೇರವಾಗಿ ಹಾಸ್ಯಗಾರನಾಗಿ ಬರುವ ಕ್ರಮವಿರಲಿಲ್ಲ. ಕೋಡಂಗಿ, ನಿತ್ಯವೇಷ, ಪುಂಡುವೇಷ, ಸ್ತ್ರೀವೇಷಗಳನ್ನು ಮಾಡಿದ ಬಳಿಕ ಹಾಸ್ಯಗಾರನಾಗುವ ಕ್ರಮವಿತ್ತು. ಅಥವಾ ಪ್ರಧಾನ ವೇಷಧಾರಿಯಾಗಿ, ಬಣ್ಣದ ವೇಷಗಳ ಹಂತವನ್ನೂ ಮುಗಿಸಿ ಹಾಸ್ಯಗಾರನ ಸ್ಥಾನಕ್ಕೆ ಬರುವುದೂ ಇತ್ತು. ಈ ಹಾಸ್ಯಗಾರನೆಂಬವನು, ವಿದೂಷಕನೂ, ರಂಗಕರ್ಮಿಯೂ, ಸಾಮಾಜಿಕನೂ ಎಲ್ಲವೂ ಆಗಿದ್ದು, ಈ ಪಾತ್ರವು ಭಾರತದ ಬಹುಶಃ ಎಲ್ಲ ಸಾಂಪ್ರದಾಯಿಕ ರಂಗಭೂಮಿಗಳಲ್ಲೂ ಇರುವಂತಹದು. 'ಮೂಡಲಪಾಯ' ದ 'ಸಾರಥಿ'ಯಲ್ಲೂ, ತೆರುಕ್ಕೂತ್ತಿನ 'ಕಟ್ಟಿಯಕ್ಕಾರ' ನಲ್ಲೂ, ಇದರ ಪ್ರಾಚೀನ ರೂಪದ ಹೆಚ್ಚಿನ ಅಂಶಗಳು ಕಾಣುತ್ತವೆ. ಹಾಸ್ಯಗಾರಿನ ಕೆಲಸಗಳನ್ನು ಎರಡು ವಿಭಾಗವಾಗಿ ನೊಡಬಹುದು : ರಂಗದ ಒಳಗೆ ಮತ್ತು ಹೊರಗೆ. ರಂಗದ ಹೊರಗೆ, ಭಾಗವತನಿಗೆ ಈತನು ಸಹಾಯಕನೆನ್ನಬಹುದು. ರಾತ್ರಿಯಿಡೀ ರಂಗಕ್ಕೂ ಚೌಕಿಗೂ ಹೊಂದಾಣಿಕೆ ಇರುವಂತೆ ಮಾಡುವುದು ಇವನ ಒಂದು ಕೆಲಸ. ವೇಷಗಳು ಸಮಯಕ್ಕೆ ಸರಿಯಾಗಿ ರಂಗಕ್ಕೆ ಹೋಗುವಂತೆ ನೋಡಿಕೊಳ್ಳುವುದು ಇವನ ಹೊಣೆ. ಅಗತ್ಯವಿದ್ದಲ್ಲಿ, ಬದಲಿವೇಷ ಮಾಡಿಸುವ ಅಧಿಕಾರವೂ ಇವನಿಗಿದ್ದಿತು. ಮೇಳವು ಆಟ ಆಡಿಸುವವರ ಮನೆಗೆ ಬಂದಾಗ, ನೀಡುವ ಬೆಲ್ಲ ನೀರು ಮತ್ತು ತಾಂಬೂಲಗಳನ್ನು ಪಡೆದು ಹಂಚುವುದು ಈತನಿಗೆ ಸೇರಿದ್ದು. ಆಟದ ಕೊನೆಯಲ್ಲಿ ವೀಳ್ಯವನ್ನು ಈತನೇ ಪಡೆದು ಭಾಗವತರ ಕೈಗೆ ನೀಡುತ್ತಾನೆ. (ಬಡಗುತಿಟ್ಟಿನಲ್ಲಿ ಸ್ತ್ರೀ ವೇಷದವನು ಈ ಕೆಲಸ ಮಾಡುವನು). ರಂಗದಲ್ಲಿ, ಹಲವು ಪಾತ್ರಗಳನ್ನು ನಿರ್ವಹಿಸುವ ಈತನು, ನಿಜವಾಗಿಯೂ ಬಹುರೂಪಿ. ಹಳೆಯ ಕ್ರಮದಂತೆ ಆಟದ ಅವಧಿಯ ಬಹುಭಾಗ, ಹೆಚ್ಚು ಕಡಿಮೆ ರಾತ್ರಿ ಯುದ್ಧಕ್ಕೂ ಈತನು ರಂಗದಲ್ಲಿರಬೇಕಿತ್ತು. ಈಗೀಗ ಈ ಅವಧಿ ತುಸು ಕಡಿಮೆಯಾಗಿದೆ. ಹಾಸ್ಯಗಾರನು ವಹಿಸುವ ಪಾತ್ರಗಳು: 1. ದೂತ/ ಚಾರಕರು : ಸ್ವರ್ಗದೂತ, ರಾಕ್ಷಸ ದೂತ, ದ್ವಾರಪಾಲಕ, ಕುದುರೆದೂತ, ಗಡಿಬಿಡಿ ದೂತ, ಕಾವಲುಗಾರ, ಸಂದೇಶ ವಾಹಕ, ಹೊಗಳಿಕೆ ದೂತ, ಸುದರಿಕೆ ಹಾಸ್ಯ, ಕರೆದಾಗ ಬರುವ ಸೇವಕ ಇತ್ಯಾದಿ- ಇಲ್ಲೆಲ್ಲ ದೂತನೆಂದರೆ ಚಾರಕ, ಸೇವಕನೆಂದರ್ಥ. 2. ಋಷಿಗಳು: ನಾರದ, ದೂರ್ವಾಸ, ಶಾಪಕೊಡುವ ಋಷಿಗಳು, ಕೆಲವು ಅಮುಕ್ಯ ಋಷಿ ಪಾತ್ರಗಳು, ಬೈರಾಗಿ. 3. ಅಪಶಕುನ ಬ್ರಾಹ್ಮ, ಪುರೋಹಿತ, ಜ್ಯೋತಿಷಿ, ಮಂತ್ರವಾದಿ. 4. ಅಪಶಕುನ ಹಾಸ್ಯಗಳು : ಒಂಟಿ ಬ್ರಾಹ್ಮಣ, ವಿಧವೆ, ಕುಂಬಾರ, ಗಾಣಿಗ ಇತ್ಯಾದಿ. 5. ಆಪ್ತ ಸಖ, ಕೊಕ್ಕೆಚಿಕ್ಕ ಮೊದಲಾದವು. 6. ಮಂತ್ರಿ: ಬಭ್ರುವಾಹನನ ಮಂತ್ರಿ, ಗದಾಪರ್ವದ ಸಂಜಯ. 7. ಕೆಲವು ವಿಶಿಷ್ಟ ಪಾತ್ರಗಳು : ಮುದಿಯಪ್ಪಣ್ಣ, (ಬೇಟೆಗಾರರ ಮುಖ್ಯಸ್ಥ) ವನಪಾಲಕ, ನಳಚರಿತ್ರೆಯ ಶನಿ ಬ್ರಾಹ್ಮಣ, ಬಾಹುಕ, ಕೊರವಂಜಿ, ಚಿತ್ರಗುಪ್ತ, ದಾರುಕ, ಭಿಕ್ಷುಕ, ಜಾಂಬವಂತ, ಗುಹ, ದಾಶರಾಜ, ಅಧಿರಥ ಇತ್ಯಾದಿ. 8. ವರಕೊಡುವ ಬ್ರಹ್ಮ (ಪ್ರತ್ಯಕ್ಷ ಬ್ರಹ್ಮ), ಮಿತಾವಕಾಶದ ಬೃಹಸ್ಪತಿ, ಶುಕ್ರ, ವಸಿಷ್ಠ ಇತ್ಯಾದಿ. 9. ಸ್ತ್ರೀ ಪಾತ್ರಗಳು : ಅತ್ತೆ, ಭಿಕ್ಷುಕಿ, ಮುದುಕಿ, ಮಂಥರೆ, ಕುಬ್ಜೆ, ಕೊರವಂಜಿ, ದೂತಿ. 10. ಪೂರ್ವರಂಗದ ಕಟ್ಟು ಹಾಸ್ಯಗಳು ಹಲವು. 11. ತೆ. ಹೊಗಳಿಕೆ ಹಾಸ್ಯ : ಎಂದರೆ, ಪೂರ್ವರಂಗದ ಕೊನೆಯ ಭಾಗದಲ್ಲಿ ಮುಖ್ಯ ಸ್ತ್ರೀ ವೇಷದೊಡನೆ ಈ ಪಾತ್ರ ಬರುತ್ತದೆ. ಮೇಳದ ದೇವರು, ಸ್ಥಳ ದೇವರು, ಆಟ ಆಡಿಸಿದವರ ಹೊಗಳಿಕೆಗಳನ್ನು, ಭಾಗವತನೊಂದಿಗೆ ಸೇರಿಕೊಂಡು, ಹೇಳಬೇಕು. ಇದೇ ರೀತಿಯಲ್ಲಿ ಆಟದ ಕೊನೆಗೆ ವೀಳ್ಯ ಪಡೆಯುವಾಗ ದೇವರ ಮತ್ತು ಆಡಿಸಿದವರ ಹೊಗಳಿಕೆ ಹೇಳಬೇಕು. ಹಾಸ್ಯಗಾರನು ಬಣ್ಣಕ್ಕೆ ಕುಳಿತುಕೊಳ್ಳುವ ಸ್ಥಳಕ್ಕೆ ಅಡ್ಡಚೌಕಿ ಎನ್ನುವರು. ಇದು ಚೌಕಿಯಲ್ಲಿ ದೇವರಿಗೆ ಇದಿರಾಗಿದ್ದು, ವೇಷಧಾರಿಗಳ ಎರಡು ಸಾಲುಗಳ ಕೊನೆಗೆ ಇರುತ್ತದೆ. ಹಾಸ್ಯವೆಂಬುದು ಒಂದು ಅರ್ಥದಲ್ಲಿ 'ವೇಷ' ಅಲ್ಲ. ವ್ಯಕ್ತಿಯೇ. ಹಾಸ್ಯಗಾರನೇ ಹಾಸ್ಯಪಾತ್ರ. ಅವನಿಗೊಂದು ಪ್ರತ್ಯೇಕತೆ ಇದ್ದು, ಅವನ ಮಟ್ಟಿಗೆ ಔಚಿತ್ಯದ ನಿಯಮಗಳು ಸಡಿಲಾಗಿರುತ್ತವೆ. ಈ ಹಾಸ್ಯಗಾರನೆಂಬವನು, ಏಕಕಾಲಕ್ಕೆ ಒಂದು ಪಾತ್ರವೂ, ರಂಗದ ಪಾತ್ರಗಳ ಆತ್ಮೀಯ ವ್ಯಕ್ತಿಯೂ, ಅವರ ಅಂತರಂಗದ ಒಂದು ಅಂಶವೂ, ಪ್ರೇಕ್ಷಕರ ಪ್ರತಿನಿಧಿಯೂ ಆಗಿದ್ದು, ಪುರಾಣ-ವರ್ತಮಾನ, ಪಾತ್ರ-ಪೇಕ್ಷಕ, ಪ್ರಸಂಗ-ಪ್ರದರ್ಶನ, ಕಥೆ-ನಿಜಜಗತ್ತು ಹೀಗೆ ವಿವಿಧ ದ್ವಂದ್ವಗಳ ಕೊಂಡಿಯೂ, ಆಗಿರುವ ಒಂದು ಸಂಕೀರ್ಣ ಪರಿಕಲ್ಪನೆಯಾಗಿದ್ದಾನೆ. ಹಾಸ್ಯಗಾರನು ಭಾಗವತರನ್ನು, ಪಾತ್ರಗಳನ್ನು, ದೇವರನ್ನು ಸಹ ಟೀಕಿಸಬಹುದು. ತಮಾಷೆ ಮಾಡಬಹುದು. ಇದು ಹೆಚ್ಚು ಮುಕ್ತವಾದ, ಒಂದು ಸ್ಥಾನ. ಹಾಸ್ಯ ಪಾತ್ರಗಳ ಮುಖವರ್ಣಿಕೆಗಳಲ್ಲಿ ಹಿಂದೆ ಅಂತಹ ವೈವಿಧ್ಯವಿರಲಿಲ್ಲ. ಅಲ್ಪಾಲ್ಪ ವ್ಯತ್ಯಾಸಗಳು ಮಾತ್ರ, ಆಗಿಂದಾಗ ಮೂಡಿ ಬರುತ್ತಿದ್ದುವು. ವೇಷ ಸಾಮಗ್ರಿಯೂ ಮಿತವಾಗಿತ್ತು. ಈಗ ದೂತರ ಹಲವು ಬಗೆಗಳನ್ನು ಬೇರೆ ಬೇರೆಯಾಗಿ, ಚಿತ್ರಿಸುವ ಕ್ರಮವಿದೆ. ಅದೆ ರೀತಿಯಲ್ಲಿ ಮಾಂತ್ರಿಕ, ಗೂಢಚಾರಕ, ಗೋಪಾಲಕ, ಮುದಿಯಪ್ಪಣ್ಣ, ವನಪಾಲಕ ಮೊದಲಾದ ಪಾತ್ರಗಳಿಗೆ ಬೇರೆ ಬೇರೆ ವೇಷ ಸಾಮಗ್ರಿಗಳೂ ಇವೆ. ಸಮಗ್ರ ಯಕ್ಷಗಾನ ರಂಗ ಅಥವಾ ಕರಾವಳಿಯ ಎಲ್ಲ ತಿಟ್ಟುಗಳಿಗೆ ಅನ್ವಯ
1579 ಹಾಸ್ಯಗಾರಿನ ಚಾಪೆ 1.ಚೌಕಿಯ ಬುಡದಲ್ಲಿ, ಹಾಸ್ಯಗಾರನು ಬಣ್ಣಕ್ಕೆ ಕುಳಿತುಕೊಳ್ಳುವ ಸ್ಥಾನ. ಅಡ್ಡಚಾಕಿ. 2. ರಂಗಸ್ಥಳದ ಹತ್ತಿರ, ಹಿಮ್ಮೇಳದ ಹಿಂಬದಿಯಲ್ಲಿ ಹಾಸ್ಯಗಾರನ ಹೆಚ್ಚಿವರಿ ಚಾಪೆ. ಬೇಗ ಬೇಗನೆ ವೇಷ ಬದಲಾವಣೆ ಮಾಡಲು ಅನುಕೂಲವಾಗುವಂತೆ, ಈ ಏರ್ಪಾಡು. ಅಗತ್ಯದ ಬಣ್ಣಗಳು, ಸಾಮಾಗ್ರಿಗಳೂ ಈ ಚಾಪೆಯಲ್ಲಿರುತ್ತವೆ. ಸಮಗ್ರ ಯಕ್ಷಗಾನ ರಂಗ ಅಥವಾ ಕರಾವಳಿಯ ಎಲ್ಲ ತಿಟ್ಟುಗಳಿಗೆ ಅನ್ವಯ
1580 ಹಾಸ್ಯಗಾರನ ಚೌಕಿ ಚೌಕಿ ಅಥವಾ ಬಣ್ಣದ ಮನೆಯಲ್ಲಿ ಹಾಸ್ಯಗಾರನು ಕುಳಿತುಕೊಳ್ಳುವ ಸ್ಥಳ. ಹಾಸ್ಯಗಾರನ ಚೌಕಿ. ಇದು ಚೌಕಿಯ ದೇವರಿಗೆ ಸರಿ ಎದುರಾಗಿ, ಅದರ ಇಕ್ಕಡೆ ಇರುವ ವೇಷಧಾರಿಗಳ ಸಾಲುಗಳ ಕೊನೆಗೆ ಇರುತ್ತದೆ. ಇದು ಸಾಲಿನಲ್ಲಿರುವುದಿಲ್ಲ. ಅಡ್ಡವಾಗಿರುತ್ತದೆ. ಹಾಗಾಗಿ ಅಡ್ಡಚೌಕಿ. ಹಾಸ್ಯಗಾರನು, ಒಂದು ಅರ್ಥದಲ್ಲಿ ವೇಷಧಾರಿಯಲ್ಲ. ಅವನದು ಸರ್ವವ್ಯಾಪಿಯಾದ ಹೆಚ್ಚುವರಿ ಸ್ಥಾನವೆಂಬುದರಿಂದ ಹೀಗಿರಬಹುದು. ಆತನು ಆಗಾಗ ರಂಗಕ್ಕೆ ಹೋಗುತ್ತ ಇರಬೇಕಾದುದರಿಂದ ಅವನ ಸ್ಥಳವು ರಂಗಕ್ಕೆ ಹತ್ತಿರ ಇರಬೇಕಾದುದೂ ಅಗತ್ಯ. ಬಡಗುತಿಟ್ಟಿನಲ್ಲಿ ಅಡ್ಡಚೌಕ (ಕಿ) ಎಂದರೆ, ರಂಗಸ್ಥಳದ ಹಿಂಬದಿಯಲ್ಲಿ ವೇಷಧಾರಿಗಳ ವಿಶ್ರಾಂತಿಗಾಗಿ ಹಾಕಿರುವ ಚಾಪೆ. ಇದು ಹಾಸ್ಯಗಾರನ ಚೌಕಿಗೆ ತಾಗಿಕೊಂಡೇ ಇರುತ್ತದೆ. ಅಡ್ಡಚೌಕಿ ಸಮಗ್ರ ಯಕ್ಷಗಾನ ರಂಗ ಅಥವಾ ಕರಾವಳಿಯ ಎಲ್ಲ ತಿಟ್ಟುಗಳಿಗೆ ಅನ್ವಯ