A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 318

Backtrace:

File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 319

Backtrace:

File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 320

Backtrace:

File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler

File: /Appdata/padakanaja.karnataka.gov.in/index.php
Line: 318
Function: require_once

Padakanaja - Dictionary View
ಅನಿಸಿಕೆ

ಪದಕೋಶ: ಯಕ್ಷಗಾನ ಪದಕೋಶ | ಕನ್ನಡ-ಕನ್ನಡ | ಪ್ರಕಾಶಕರು - ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರ, ಎಂ.ಜಿ.ಎಂ. ಕಾಲೇಜು (1994)

Show entries
ಕ್ರಮ ಸ೦ಖ್ಯೆ ಇಂಗ್ಲೀಷ್ ಪದ
(English Word)
ಕನ್ನಡ ಪದ
(Kannada Word)
ಕನ್ನಡ ಅರ್ಥ
(Kannada Meaning)
ವಿಷಯ ವರ್ಗೀಕರಣ
(Word Subject)
ವ್ಯಾಕರಣ ವಿಶೇಷ
(Word Grammer)
ಕನ್ನಡ ಉಚ್ಚಾರಣೆ
(Kannada Pronunciation)
ಪರ್ಯಾಯ ಪದ
(Word Synonyms)
ಇಂಗ್ಲೀಷ್ ಅರ್ಥ
(English Meaning)
ಸಂಕ್ಷಿಪ್ತ ವಿವರಣೆ
(Short Description)
ದೀರ್ಘ ವಿವರಣೆ
(Long Description)
ಆಡಳಿತಾತ್ಮಕ ಪದ
(Administrative Word)
1611 ಹೆಣ್ಣುಬಣ್ಣದ ಪೊರಪ್ಪಾಡು ಗಂಡು ಬಣ್ಣದ ರೀತಿಯಲ್ಲಿ ಮೂರು ಅಟ್ಟಹಾಸ, ತೆರಂ ಕುಣಿತವಾದ ಮೇಲೆ, ಸಭಾವೀಕ್ಷಣೆ ಆದ ಬಳಿಕ, ಸ್ನಾನ, ತಲೆ ಬಾಚುವುದು, ಶೃಂಗಾರ ಮಾಡಿ ಕೊಳ್ಳುವುದು ಮೊದಲಾದ ಅಭಿನಯಗಳಿರುತ್ತವೆ. ಆದಾದ ಬಳಿಕ ತೆರೆತೆಗೆದು ಧೀಗಿಣ ಪ್ರವೇಶ. ಹೆಣ್ಣುಬಣ್ಣದ ಆರ್ಭಟ, ಅಟ್ಟ ಹಾಸಗಳು. ‘ಆ .... ’ಕಾರಗಳಾಗಿದ್ದು, ಕೀರಲು ಸ್ವರದಲ್ಲಿರಬೇಕು ಹೆಣ್ಣುಬಣ್ಣದ ಪ್ರವೇಶ ನೃತ್ಯದಲ್ಲಿ ವೈಯ್ಯಾರವೂ, ಅನಂತರ ಭಾಗವತರೊಂದಿಗೆ ಸ್ವಲ್ಪ ಹಾಸ್ಯಯುಕ್ತ ಪರಿಚಯ ಸಂಭಾಷಣೆಯೂ ಇರುತ್ತವೆ. ಹೆಣ್ಣುಬಣ್ಣದ ಪ್ರವೇಶ ಸಮಗ್ರ ಯಕ್ಷಗಾನ ರಂಗ ಅಥವಾ ಕರಾವಳಿಯ ಎಲ್ಲ ತಿಟ್ಟುಗಳಿಗೆ ಅನ್ವಯ
1612 ಹೆಣ್ಣುಬಣ್ಣದ ಪ್ರವೇಶ (-ಪೊರಪ್ಪಾಡು) ಗಂಡು ಬಣ್ಣದ ರೀತಿಯಲ್ಲಿ ಮೂರು ಅಟ್ಟಹಾಸ, ತೆರಂ ಕುಣಿತವಾದ ಮೇಲೆ, ಸಭಾವೀಕ್ಷಣೆ ಆದ ಬಲಿಕ, ಸ್ನಾನ, ತಲೆ ಬಾಚುವುದು, ಶೃಂಗಾರ ಮಾಡಿ ಕೊಳ್ಳುವುದು ಮೊದಲಾದ ಅಭಿನಯಗಳಿರುತ್ತವೆ. ಆದಾದ ಬಳಿಕ ತೆರೆತೆಗೆದು ಧೀಗಿಣ ಪ್ರವೇಶ. ಹೆಣ್ಣುಬಣ್ಣದ ಆರ್ಭಟ, ಅಟ್ಟ ಹಾಸಗಳು. ‘ಆ .... ’ಕಾರಗಳಾಗಿದ್ದು, ಕೀರಲು ಸ್ವರದಲ್ಲಿರಬೇಕು ಹೆಣ್ಣುಬಣ್ಣದ ಪ್ರವೇಶ ನೃತ್ಯದಲ್ಲಿ ವೈಯ್ಯಾರವೂ, ಅನಂತರ ಭಾಗವತರೊಂದಿಗೆ ಸ್ವಲ್ಪ ಹಾಸ್ಯಯುಕ್ತ ಪರಿಚಯ ಸಂಭಾಷಣೆಯೂ ಇರುತ್ತವೆ. ಸಮಗ್ರ ಯಕ್ಷಗಾನ ರಂಗ ಅಥವಾ ಕರಾವಳಿಯ ಎಲ್ಲ ತಿಟ್ಟುಗಳಿಗೆ ಅನ್ವಯ
1613 ಹೆಣ್ಣು ಬಣ್ಣದ ವೇಷ ಹೆಣ್ಣು ಬಣ್ಣದ ವೇಷ, ರಾಕ್ಷಸಿ ಪಾತ್ರ. ಶೂರ್ಪನಖಿ, ಹಿಡಿಂಬಿ, ಅಜಮುಖಿ, ಲಂಕಿಣಿ, ವೃತ್ರಜ್ವಾಲೆ ಇತ್ಯಾದಿ ಪಾತ್ರಗಳು.ಇದರ ಮುಖದ ಬಣ್ಣ ಕಪ್ಪಾಗಿದ್ದು, ಮೂಗಿನಿಂದ ಹಣೆಯ ತನಕ ನಾಮವಿರುತ್ತದೆ. ಮೂಗಿನ ಹೊಳ್ಳೆಯ ಬದಿಗೆ ಬಿಳಿ ಬಣ್ಣದಲ್ಲಿ ಮೂಗುತಿ ಬರೆಯುತ್ತಾರೆ. ಹಣೆಯಲ್ಲೂ, ಕೆನ್ನೆಗಳಲ್ಲೂ ಚಕ್ರಗಳನ್ನು ಬರೆದು, ಅವುಗಳು ಸುತ್ತ ಕೆಂಪು ರೇಖೆ, ಮಧ್ಯಕ್ಕೆ ಕೆಂಪು ಬಣ್ಣ, ನಾಮದ ಮಧ್ಯಕ್ಕೂ ಕೆಂಪು ತುಂಬಿಸುವರು. ಕೆಳತುಟಿಯ ಕೆಳಗೆ, ಬಾಯಿಯ ಕ್ಕಡೆಗಳಲ್ಲಿ ಎರಡು ಕೋರೆ ಹಲ್ಲುಗಳನ್ನು ಬಿಳಿಬಣ್ಣದಲ್ಲಿ ಬರೆಯುತ್ತಾರೆ. ಹಣೆಗೆ ಚುಟ್ಟಿಯಲ್ಲಿ ಅಡ್ಡನಾಮವಿಡುವ ಕ್ರಮವೂ ಊಂಟು. ತುಟಿಯ ಕೆಳಗಿನ ಹಲ್ಲುಗಳ ಮಧ್ಯೆ ಒಂದು ಚಕ್ರವನ್ನೂ ಬಿಡಿಸುವುದಿದೆ. ಭುಜಕ್ಕೆ ಬಣ್ಣ ವೇಷದ ಭುಜಕೀರ್ತಿ (ದಂಬೆ)ಯನ್ನು ಕಟ್ಟಿ, ಹೆಗಲಮೇಲಿನಿಂದ ಮುಂದಕ್ಕೆ, ಗಂಡು ವೇಷಗಳಂತೆ ಸೋಗೆವಲ್ಲಿಗಳನ್ನು ಇಳಿಸುವರು. ಇಡಿತೋಳಿನ ದಗಲೆ ಹಾಕಿರುತ್ತಾರೆ. ಕೈಗೆ ಕೈಕಟ್ಟು, ತೋಳ್ಕಟ್ಟು ಕೊರಳಿಗೆ ಅಡ್ಡಿಗೆ ಮತ್ತು ಬಣ್ಣಬಣ್ಣದ ಮಣಿಸರಗಳು, ಸೊಂಟಕ್ಕೆ ಡಾಬುಗಳಿರುತ್ತವೆ. ಹಿಂದಿನಿಂದ ಕೇಸರಿಯನ್ನು ಇಳಿಬಿಡುವರು. ಎದೆಪದಕವಾಗಿ, ವೀರಗಸೆಯನ್ನೆ ಕೊರಳಿಗೆ ಕಟ್ಟಿ ಇಳಿಬಿಡುವ ಕ್ರಮವಿದ್ದಿತು. ಈಗ ಗಂಡು ಬಣ್ಣದ ಎದೆಪದಕವನ್ನು ಕಟ್ಟುತ್ತಾರೆ. ಸೊಂಟದ ಕೆಳಗೆ ಮೂರಂತರದ ನೆರಿಗೆ ಲಂಗವಿರುತ್ತದೆ. ಇದು ಸಿದ್ಧವಲ್ಲ, ಜೋಡಣೆ. ಕೆಂಪು ತೊಟ್ಟುಗಳುಳ್ಳ ದೊಡ್ಡ ಮೊಲೆಕಟ್ಟುಗಳನ್ನು ಎದ್ದು ಕಾಣುವಂತೆ ಕಟ್ಟುವ ಕ್ರಮವಿತ್ತು. ಈಗ ದಗಲೆಯ ಒಳಗಿಂದ ಬಟ್ಟಿಯಿಟ್ಟು ಉಬ್ಬು ಮಾಡುವ ಕ್ರಮು ಬಂದಿದೆ. ಈ ವೇಷದ ಕಿರೀಟಕ್ಕೆ ಹೆಣ್ಣು ಬಣ್ಣದ ಕರೀಟ ಅಥವಾ ಶೂರ್ಪನಖಿ ಕಿರೀಟವೆನ್ನುವರು. (ರಾಮಾಯಣ ಪ್ರಸಂಗಗಳೇ ಪ್ರಾಚೀನ ಎಂಬುದಕ್ಕೆ ಇದೊಂದು ಆಧಾರ.) ಈ ಕಿರೀಟವು ಕೆಳಗಿಂದ ಮೇಲಕ್ಕೆ ಅಗಲವಾಗುತ್ತ ಹೋಗುವ, ಬಾಲ್ದಿಯಂತಿರುತ್ತದೆ. (ಬಕೆಟ್ ಆಕಾರ) ಇದಕ್ಕೆ ಮೇಲ್ಬದಿಯಲ್ಲಿ ಉದ್ದವಾದ ನವಿಲುಗರಿಗಳನ್ನು ಸಿಕ್ಕಿಸಿರುತ್ತದೆ. ದೊಡ್ಡಗಾತ್ರದ ಕರ್ಣಪಾತ್ರ (ಓಲೆ) ಗಳನ್ನು ಕಟ್ಟುವರು. (ಮೂಡಲ ಪಾಯದ ಸುಮಾರಾಗಿ ಇದೇ ಆಕಾರದ ಕಿರೀಟಕ್ಕೆ ‘ಉದ್ದಂಡಿ ಕರೀಟ’ ಎನ್ನುವರು,) ಹೆಣ್ಣುಬಣ್ಣ ಸಮಗ್ರ ಯಕ್ಷಗಾನ ರಂಗ ಅಥವಾ ಕರಾವಳಿಯ ಎಲ್ಲ ತಿಟ್ಟುಗಳಿಗೆ ಅನ್ವಯ
1614 ಹೆರಳು ಸ್ತ್ರಿ ಪಾತ್ರಗಳ ಜಡೆಯಹರಳು, ಸಿದ್ಧಜಡೆ. ಸಮಗ್ರ ಯಕ್ಷಗಾನ ರಂಗ ಅಥವಾ ಕರಾವಳಿಯ ಎಲ್ಲ ತಿಟ್ಟುಗಳಿಗೆ ಅನ್ವಯ
1615 ಹೇಳುವಣಿಗೆ ಪದ್ಯದ ಹೇಳುವಿಕೆ, ಉಚ್ಚಾರಕ್ರಮ, ಲಯಶುದ್ಧಿ, ತಾಳಶುದ್ಧಿ, ಛಂದೋಗತಿಯ ಅನುಸರಣೆ ಮತ್ತು ಸ್ಪಷ್ಟತೆ ಎಂಬ ಆವಶ್ಯ ಅಂಗಗಳ ಸಂಯುಕ್ತ ಪರಿಕಲ್ಪನೆ. ಬಡಗುತಿಟ್ಟು
1616 ಹೈಕ್‌ಟುರ್ರ್ ಕಪಿ ಪಾತ್ರಗಳ ಮಾತಿನ ಮಧ್ಯೆ ಬರುವ ವಿಶಿಷ್ಟ ಧ್ವನಿವಿನ್ಯಾಸ; ಕಪಿಗಳ ಕೂಗಿನ ಅನುಕರಣವಾಚಿ. ಸಮಗ್ರ ಯಕ್ಷಗಾನ ರಂಗ ಅಥವಾ ಕರಾವಳಿಯ ಎಲ್ಲ ತಿಟ್ಟುಗಳಿಗೆ ಅನ್ವಯ
1617 ಹೊಂಗಾರಕ ಹೊಂಗಾರಕನ ಮರ. ಪೊಂಗಾರ. (Erithrina indica) ಕಿರೀಟ, ಆಭರಣ, ಬೊಂಬೆಗಳ ತಯಾರಿಯಲ್ಲಿ ಬಳಕೆ. ಸಮಗ್ರ ಯಕ್ಷಗಾನ ರಂಗ ಅಥವಾ ಕರಾವಳಿಯ ಎಲ್ಲ ತಿಟ್ಟುಗಳಿಗೆ ಅನ್ವಯ
1618 ಹೊಂತಕಾರಿ (-ವೇಷ) ಪುಂಡುವೇಷಕ್ಕೆ ಜನಪದರ ವರ್ಣನಾತ್ಮಕ ಪದ. ಸಮಗ್ರ ಯಕ್ಷಗಾನ ರಂಗ ಅಥವಾ ಕರಾವಳಿಯ ಎಲ್ಲ ತಿಟ್ಟುಗಳಿಗೆ ಅನ್ವಯ
1619 ಹೊಗಳಿಕೆ 1. ಸಭಾಲಕ್ಷಣದ ಕೊನೆಯ ಭಾಗದಲ್ಲಿ ಬರುವ ದೇವರ ಮತ್ತು ಆಟ ಆಡಿಸುವವರ ಪ್ರಶಂಸೆ. ಮೇಳದ ದೇವರು, (ಕೆಲವೊಮ್ಮೆ ಸ್ಥಾಪಕರು ಸಹ), ಆಟವಾಗುವ ಸ್ಥಳದ ದೇವರು, ಆಟ ಆಡಿಸುವವರು ಹೊಗಳಲ್ಪಡಬೇಕು. ಈ ‘ಹೂಗಳಿಕೆ’ಯನ್ನು ಹಾಸ್ಯಗಾರನೂ, ಭಾಗವತನೂ ನಡೆಸಿಕೊಡಬೇಕು. ಬಡಗುತಿಟ್ಟಿನಲ್ಲಿ ಈ ಹೂಗಳಿಕೆಯು ಆರಂಭದಲ್ಲಿಲ್ಲ. ಆಟದ ಕೊನೆಗೆ ಮಾತ್ರ ಇರುತ್ತದೆ. 2. (ಬಡಗುತಿಟ್ಟು / ತೆಂಕುತಿಟ್ಟು / ಉತ್ತರ ಕನ್ನಡತಿಟ್ಟು) ಆಟದ ಅಂತ್ಯದಲ್ಲಿ, ದೇವರ, ಆಡಿಸಿದವರ ಹೂಗಳಿಕೆ. ಭಾಗವತ ಹಾಸ್ಯಗಾರರಿಂದ (ಬಡಗುತಿಟ್ಟಿನ ಸ್ತ್ರೀವೇಷ-ಭಾಗವತ) 3. ಹೊಗಳಿಕೆ ದೂತ (ಹನುಮ ನಾಯಕ) ನಿಂದ, ರಾಜನ ಪ್ರಶಂಸೆ. ವಂದಿಮಾಗಧನ ಸ್ತುತಿ. ಉದಾ : ಧರ್ಮರಾಯನ ಹೊಗಳಿಕೆ. ಹನುಮನಾಯಕ: “ಶ್ರೀಕೃಷ್ಣಸುಪ್ರೀತ, ಪ್ರೇತಪಾಲನ ಜಾತ, ದುರಿತವಂಶ ವಿಘಾತ, ತ್ರೈಲೋಕ್ಯ ವಿಖ್ಯಾತ, ಸಕಲಾವನೀನಾಥ, ಶರಣ ಸಂಕುಲಧಾತ, ಕಾಮಕ್ರೋಧ ವಿಘಾತ, ಮೂರು ಜಗದೊಳಜಾತಶತ್ರುವಾದಾತ, ಸರ್ವ ಶಾಸ್ತ್ರಾ ಧೀತ, ಸದ್ದರ್ಮಪರಿಪೂತ, ಶ್ರೀ ಮದ್ರಾಜ ಕುಲಾಳಿಮಂಡಿತಪಾದಪದ್ಮರಾದಂಥ ಧರ್ಮರಾಜ ಮಹಾರಾಜ ಭೋ ಪರಾಕು”. ತೆಂಕುತಿಟ್ಟು
1620 ಹೊಗಳಿಕೆ ಹಾಸ್ಯ ಹೊಗಳಿಕೆ ಮಾಡುವ ಹಾಸ್ಯಪಾತ್ರ. ಹೊಗಳು ಭಟ. ಹನಮನಾಯಕ. ಸಮಗ್ರ ಯಕ್ಷಗಾನ ರಂಗ ಅಥವಾ ಕರಾವಳಿಯ ಎಲ್ಲ ತಿಟ್ಟುಗಳಿಗೆ ಅನ್ವಯ