A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 318

Backtrace:

File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 319

Backtrace:

File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 320

Backtrace:

File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler

File: /Appdata/padakanaja.karnataka.gov.in/index.php
Line: 318
Function: require_once

Padakanaja - Dictionary View
ಅನಿಸಿಕೆ

ಪದಕೋಶ: ಯಕ್ಷಗಾನ ಪದಕೋಶ | ಕನ್ನಡ-ಕನ್ನಡ | ಪ್ರಕಾಶಕರು - ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರ, ಎಂ.ಜಿ.ಎಂ. ಕಾಲೇಜು (1994)

Show entries
ಕ್ರಮ ಸ೦ಖ್ಯೆ ಇಂಗ್ಲೀಷ್ ಪದ
(English Word)
ಕನ್ನಡ ಪದ
(Kannada Word)
ಕನ್ನಡ ಅರ್ಥ
(Kannada Meaning)
ವಿಷಯ ವರ್ಗೀಕರಣ
(Word Subject)
ವ್ಯಾಕರಣ ವಿಶೇಷ
(Word Grammer)
ಕನ್ನಡ ಉಚ್ಚಾರಣೆ
(Kannada Pronunciation)
ಪರ್ಯಾಯ ಪದ
(Word Synonyms)
ಇಂಗ್ಲೀಷ್ ಅರ್ಥ
(English Meaning)
ಸಂಕ್ಷಿಪ್ತ ವಿವರಣೆ
(Short Description)
ದೀರ್ಘ ವಿವರಣೆ
(Long Description)
ಆಡಳಿತಾತ್ಮಕ ಪದ
(Administrative Word)
1601 ಹುಸಿಪೆಟ್ಟು 1. ತಾಳದ ಅಂಗಗಳಲ್ಲಿ ಒಂದು ಹುಸಿ. ಘಾತಾನಂತರ ಬಿಡುವಸ್ಥಳ. (ಇನ್ನೊಂದು ಘಾತ) 2. ತಾಳದ ಮುಖ್ಯ ಘಾತದ ಹೊರತು ಉಳಿದ ಪೆಟ್ಟುಗಳು. ಉದಾ: ಏಕತಾಳವನ್ನು ಮೂರು ಪೆಟ್ಟುಗಳಿಂದ ತೋರಿಸುವ ಕ್ರಮದಲ್ಲಿ ಧಿಂ| ದ²ತ್ತಾಂ³ -1. ಎಂಬುದು ಘಾತ ಪೆಟ್ಟು, 2. 3 ಇವು ಹುಸಿಪೆಟ್ಟುಗಳು. 3. ಚೆಂಡೆ, ಮದ್ದಲೆಗಳಲ್ಲಿ, ಪೆಟ್ಟುಗಳನ್ನು ಬಿಟ್ಟು, ಬಾರಿಸುವಾಗ ಬರುವ ವಿರಾಮ, ಆ ಅವಧಿಯ ಪೆಟ್ಟುಗಳು. ಉದಾ- ‘ತ ರಿ ಕಿ ಟ ತಾಂ’ – ಎಂಬುದನ್ನು ‘ತ.... ತಾಂ’ ಎಂದು ಬಾರಿಸಿದರೆ, ‘ರಿ, ಕಿ, ಟ’ ಗಳು ಹುಸಿಪೆಟ್ಟಗಳು. ನೃತ್ಯದಲ್ಲೂ ಹೀಗೆಯೇ. ‘ಮನೋಧರ್ಮ’ದ ಒಂದು ಕ್ರಮ. ಸಮಗ್ರ ಯಕ್ಷಗಾನ ರಂಗ ಅಥವಾ ಕರಾವಳಿಯ ಎಲ್ಲ ತಿಟ್ಟುಗಳಿಗೆ ಅನ್ವಯ
1602 ಹುಸಿಯುದ್ಧ ಹಾಸ್ಯ ಪಾತ್ರಕ್ಕೂ, ಗಂಭೀರ ಪಾತ್ರಕ್ಕೂ ಜರಗುವ ಅಣಕುಯುದ್ಧ. ಉದಾ-ದಿಗ್ವಿಜಯಕ್ಕೆ ಬಂದ ವೀರರಿಗೂ, ಅವರು ಗೆಲ್ಲಬೇಕಾದ ರಾಜ್ಯದ ಚಾರಕನಿಗೂ ನಡೆಯುವ ಯುದ್ಧದ ದೃಶ್ಯ. ಸಮಗ್ರ ಯಕ್ಷಗಾನ ರಂಗ ಅಥವಾ ಕರಾವಳಿಯ ಎಲ್ಲ ತಿಟ್ಟುಗಳಿಗೆ ಅನ್ವಯ
1603 ಹೂವಿನ ಕೋಲು ಯಕ್ಷಗಾನದ ಒಂದು ಚಿಕ್ಕ ಪ್ರಕಾರ (minor form). ನವರಾತ್ರಿಯ ಸಮಯದಲ್ಲಿ, ಓರ್ವ ಭಾಗವತ, ಮದ್ದಲೆಗಾರ, ಶ್ರುತಿವಾದಕ, ಇಬ್ಬರು ಹುಡುಗರು ಇರುವ ತಂಡವು ಮನೆಮನೆಗೆ ತಿರುಗಾಡುತ್ತ ಕೆಲವು ಪದ್ಯಗಳನ್ನು ಹಾಡಿ ಒಂದು ಚಿಕ್ಕ ತಾಳ ಮದ್ದಲೆಯನ್ನು ಪ್ರದರ್ಶಿಸುತ್ತದೆ. ಈ ಹುಡುಗರ ಕೈಯಲ್ಲಿ ಅಲಂಕಾರ ಮಾಡಿದ ಒಂದೊಂದು ಕೋಲು ಇರುತ್ತದೆ. ಈ ಕೋಲುಗಳಿಂದಲೇ ಈ ಪ್ರಕಾರಕ್ಕೆ ಈ ಹೆಸರು ಬಂದಿದೆ. ಮೊದಲಾಗಿ, ಈ ಹುಡುಗರು ಈ ಕೋಲುಗಳನ್ನು ಹಿಡಿದುಕೊಂಡು, ದಾನಿಗಳ ಮನೆಯ ಅಂಗಳದಲ್ಲಿ ಕುಳಿತು ಮಾನವಮಿ ಚೌಪದಿ ಪದಗಳನ್ನು ಹಾಡುತ್ತಾರೆ. ಆಸ್ವೀಜ ಶುದ್ಧ ಮಾನವಮಿ ಬರಲೆಂದು ಶಾಶ್ವತದಿ ಹರಸಿದೆವು ಬಾಲಕರ ಬಂದು| ಈಶ ನಿಮಗತ್ಯಧಿಕ ಸುಖವ ಕೊಡಲೆಂದು ಲೇಸಾಗಿ ಹರಸಿದೆವು ಬಾಲಕರು ಬಂದು|| ಇದು ಮೊದಲ ಪದ್ಯ. ಅನಂತರ ಸುಮಾರು ಇಪ್ಪತ್ತು ಪದ್ಯಗಳಿದ್ದು, ಅದರಲ್ಲಿ ಉಡುಗೊರೆ ಬೇಡುವುದು, ಲೋಭಿಗಳ ನಿಂದೆ, ದಾನಪ್ರಶಂಸೆ, ಶುಭ ಹಾರೈಕೆ ಮೊದಲಾದುವು ಇರುತ್ತವೆ. ಈ ಪದ್ಯಗಳಾದ ಬಳಿಕ, ಒಂದು ಚಿಕ್ಕ ತಾಳಮದ್ದಲೆ ಜರಗುವುದು. ಹುಡುಗರು ಅರ್ಥ ಹೇಳುವರು. ಕೊನೆಗೆ ಮನೆಯವರು ಭಾಗವತರಿಗೂ, ಹುಡುಗರಿಗೂ ಉಡುಗೊರೆ, ತಿಂಡಿ, ಹಣ ಕೊಡುವರು. ಇದು ಮೂಲತಃ ಐಗಳ ಮಂಠವೆಂಬ ಹಿಂದಿನ ಶಾಲೆಗಳ ಅಧ್ಯಾಪಕರಾದ ‘ಅಯ್ಯ’ ರೂ ಅವರ ವಿದ್ಯಾರ್ಥಿಗಳೂ ನಡೆಸುತ್ತಿದ್ದ ಕಾರ್ಯಕ್ರಮವಾಗಿರಬೇಕು. ಚೊಪದಿಗಳು ಮಾತ್ರ ಇದರ ಅಂಗವಾಗಿದ್ದು, ತಾಳಪದ್ದಲೆಯ ಭಾಗ, ಯಕ್ಷಗಾನ ಪ್ರಭಾವದಿಂದ ಸೇರಿರಬೇಕು. (ಐಗಳ ಮಠದಲ್ಲಿ ಯಕ್ಷಗಾನ ಪ್ರಸಂಗಗಳನ್ನೂ ಕಲಿಸುತ್ತಿದ್ದರು.) ಕಾಲಕ್ರಮದಲ್ಲಿ, ಐಗಳ ಮಠಗಳ ಈ ಪ್ರಕಾರವು, ಭಾಗವತರುಗಳ ಕೈಯಲ್ಲಿ ಉಳಿದು ಬಂತು. ಹಲವು ಕಲಾವಿದರು, ಭಾಗವತರಲ್ಲದವರೂ ಕೂಡ, ಹೂವಿನ ಕೋಲು ತಿರುಗಾಟಗಳನ್ನು ನಡೆಸುತ್ತಿದ್ದರು, ನಡೆಸುತ್ತಿದ್ದಾರೆ. ಕುಂದಾಪುರ, ಉಡುಪಿ ಪ್ರದೇಶದಲ್ಲಿ ತುಂಬ ಪ್ರಚಲಿತವಾಗಿದ್ದ ಈ ಪ್ರಕಾರವು ಈಗ ಕ್ಷೀಣವಾಗುತ್ತ ಬಂದಿದೆ. ಚಿಕ್ಕಮೇಳ, ದಾನಾವರ್ತ ಬಡಗುತಿಟ್ಟು
1604 ಹೂವಿನ ಚೆಂಡು ಕೇದಗೆ ಮುಂದಲೆ (ಪಗಡಿ) ಮುಂಡಾಸುಗಳ ತುದಿಗೆ ಅಲಂಕಾರವಾಗಿ ಸಿಕ್ಕಿಸುವ ಹೂವಿನಚೆಂಡು. ಹೆಚ್ಚಾಗಿ ಮಲ್ಲಿಗೆ ಹೂವಿನದು. ಈಗ ಬಿಳೆ ಕಾಗದದ ಹೂವೂ ಬಳಕೆಯಿದ. ಅಲ್ಲದೆ, ಸುತ್ತು, ಬೆಂಡಿನದಂಡ, ಹೂಚೆಂಡು-ಎಲ್ಲವೂ ಸೇರಿರುವ ಬಟ್ಟೆಯ ಸುತ್ತು ಬಂದಿದೆ. ಬಡಗುತಿಟ್ಟು
1605 ಹೂವು, ಹೂ ಕಿರೀಟ, ಪಗಡಿ, ಮುಂಡಾಸುಗಳ ಮಧ್ಯಕ್ಕೆ ನಿಲ್ಲುವ ಉರುಟು ಪದಕಾಕೃತಿ ಆಭರಣ. ಕುಚ್ಚು, ತಾವರೆ ಸಮಗ್ರ ಯಕ್ಷಗಾನ ರಂಗ ಅಥವಾ ಕರಾವಳಿಯ ಎಲ್ಲ ತಿಟ್ಟುಗಳಿಗೆ ಅನ್ವಯ
1606 ಹೆಗಲವಲ್ಲಿ ಪುರುಷ ವೇಷಗಳಲ್ಲಿ ಹೆಗಲಲ್ಲಿ ಧರಿಸಿ ಮುಂದಿನಿಂದ ಇಳಿಬಿಡುವವಲ್ಲಿ. ಶಾಲುಗಳು; ಹೆಗಲವಲ್ಲಿಗಳು ಕೆಂಪು ಮತ್ತು ಬಿಳಿ ಎಂದು ಎರಡು ಬಗೆ ಮಾತ್ರ. (ತೆಂಕುತಿಟ್ಟಿನ ಸೋಗೆವಲ್ಲಿಗೆ ಸಮಾನ. ಆದರೆ ಚಿಕ್ಕವು) ಇವು ಬಿಳಿ, ಕೆಂಪು ಬಣ್ಣದ ಶಾಲುಗಳಾಗಿದ್ದು, ಇವನ್ನು ಇಳಿಬಿಟ್ಟ ಅನಂತರ ಡಾಬು ಮತ್ತು ವೀರಗಸೆ, ಮಾರುಮಾಲೆ (ಸಂಪಿಗೆ ಸರ)ಗಳನ್ನು ಅದರ ಮೇಲಿಂದ ಕಟ್ಟುವರು. ಬಡಗುತಿಟ್ಟು / ಉತ್ತರ ಕನ್ನಡತಿಟ್ಟು ಬಡಗ-ಬಡಗು
1607 ಹೆಚ್ಚಿಗೆ ಗಂಟು ತಿರುಗಾಟದ ಮೇಳದ ಹೊರೆಗಳಲ್ಲಿ ಒಂದು. ಅಡುಗೆ ಮಾಡಿ ಉಳಿದ ಸಾಮಗ್ರಿ ಮತ್ತು ಚಿಕ್ಕಪುಟ್ಟ ಉಳಿಕೆ ಸಾಮಗ್ರಿ ಇರುವಗಂಟು. (sundry; Miscellaneous) ಇದನ್ನು ಅಡ್ಡಹೊರೆಯ ಜೊತೆ ಅಥವಾ ದಾಸ್ತಾನು ಪೆಟ್ಟಿಗೆಯಲ್ಲಿ ಸಾಗಿಸುತ್ತಾರೆ. ಸಮಗ್ರ ಯಕ್ಷಗಾನ ರಂಗ ಅಥವಾ ಕರಾವಳಿಯ ಎಲ್ಲ ತಿಟ್ಟುಗಳಿಗೆ ಅನ್ವಯ
1608 ಹೆಜ್ಜೆ ಕುಣಿತದ ವಿಧಗಳು, ಕ್ರಮ, ಸಂಪ್ರದಾಯಗಳು. ಹಜ್ಜೆಗಾರಿಕೆ ಸಮಗ್ರ ಯಕ್ಷಗಾನ ರಂಗ ಅಥವಾ ಕರಾವಳಿಯ ಎಲ್ಲ ತಿಟ್ಟುಗಳಿಗೆ ಅನ್ವಯ
1609 ಹೆಣ್ಣುಬಣ್ಣ / ಹೆಣ್ಣುಬಣ್ಣದ ವೇಷ ಹೆಣ್ಣು ಬಣ್ಣದ ವೇಷ, ರಾಕ್ಷಸಿ ಪಾತ್ರ. ಶೂರ್ಪನಖಿ, ಹಿಡಿಂಬಿ, ಅಜಮುಖಿ, ಲಂಕಿಣಿ, ವೃತ್ರಜ್ವಾಲೆ ಇತ್ಯಾದಿ ಪಾತ್ರಗಳು.ಇದರ ಮುಖದ ಬಣ್ಣ ಕಪ್ಪಾಗಿದ್ದು, ಮೂಗಿನಿಂದ ಹಣೆಯ ತನಕ ನಾಮವಿರುತ್ತದೆ. ಮೂಗಿನ ಹೊಳ್ಳೆಯ ಬದಿಗೆ ಬಿಳಿ ಬಣ್ಣದಲ್ಲಿ ಮೂಗುತಿ ಬರೆಯುತ್ತಾರೆ. ಹಣೆಯಲ್ಲೂ, ಕೆನ್ನೆಗಳಲ್ಲೂ ಚಕ್ರಗಳನ್ನು ಬರೆದು, ಅವುಗಳು ಸುತ್ತ ಕೆಂಪು ರೇಖೆ, ಮಧ್ಯಕ್ಕೆ ಕೆಂಪು ಬಣ್ಣ, ನಾಮದ ಮಧ್ಯಕ್ಕೂ ಕೆಂಪು ತುಂಬಿಸುವರು. ಕೆಳತುಟಿಯ ಕೆಳಗೆ, ಬಾಯಿಯ ಕ್ಕಡೆಗಳಲ್ಲಿ ಎರಡು ಕೋರೆ ಹಲ್ಲುಗಳನ್ನು ಬಿಳಿಬಣ್ಣದಲ್ಲಿ ಬರೆಯುತ್ತಾರೆ. ಹಣೆಗೆ ಚುಟ್ಟಿಯಲ್ಲಿ ಅಡ್ಡನಾಮವಿಡುವ ಕ್ರಮವೂ ಊಂಟು. ತುಟಿಯ ಕೆಳಗಿನ ಹಲ್ಲುಗಳ ಮಧ್ಯೆ ಒಂದು ಚಕ್ರವನ್ನೂ ಬಿಡಿಸುವುದಿದೆ. ಭುಜಕ್ಕೆ ಬಣ್ಣ ವೇಷದ ಭುಜಕೀರ್ತಿ (ದಂಬೆ)ಯನ್ನು ಕಟ್ಟಿ, ಹೆಗಲಮೇಲಿನಿಂದ ಮುಂದಕ್ಕೆ, ಗಂಡು ವೇಷಗಳಂತೆ ಸೋಗೆವಲ್ಲಿಗಳನ್ನು ಇಳಿಸುವರು. ಇಡಿತೋಳಿನ ದಗಲೆ ಹಾಕಿರುತ್ತಾರೆ. ಕೈಗೆ ಕೈಕಟ್ಟು, ತೋಳ್ಕಟ್ಟು ಕೊರಳಿಗೆ ಅಡ್ಡಿಗೆ ಮತ್ತು ಬಣ್ಣಬಣ್ಣದ ಮಣಿಸರಗಳು, ಸೊಂಟಕ್ಕೆ ಡಾಬುಗಳಿರುತ್ತವೆ. ಹಿಂದಿನಿಂದ ಕೇಸರಿಯನ್ನು ಇಳಿಬಿಡುವರು. ಎದೆಪದಕವಾಗಿ, ವೀರಗಸೆಯನ್ನೆ ಕೊರಳಿಗೆ ಕಟ್ಟಿ ಇಳಿಬಿಡುವ ಕ್ರಮವಿದ್ದಿತು. ಈಗ ಗಂಡು ಬಣ್ಣದ ಎದೆಪದಕವನ್ನು ಕಟ್ಟುತ್ತಾರೆ. ಸೊಂಟದ ಕೆಳಗೆ ಮೂರಂತರದ ನೆರಿಗೆ ಲಂಗವಿರುತ್ತದೆ. ಇದು ಸಿದ್ಧವಲ್ಲ, ಜೋಡಣೆ. ಕೆಂಪು ತೊಟ್ಟುಗಳುಳ್ಳ ದೊಡ್ಡ ಮೊಲೆಕಟ್ಟುಗಳನ್ನು ಎದ್ದು ಕಾಣುವಂತೆ ಕಟ್ಟುವ ಕ್ರಮವಿತ್ತು. ಈಗ ದಗಲೆಯ ಒಳಗಿಂದ ಬಟ್ಟಿಯಿಟ್ಟು ಉಬ್ಬು ಮಾಡುವ ಕ್ರಮು ಬಂದಿದೆ. ಈ ವೇಷದ ಕಿರೀಟಕ್ಕೆ ಹೆಣ್ಣು ಬಣ್ಣದ ಕರೀಟ ಅಥವಾ ಶೂರ್ಪನಖಿ ಕಿರೀಟವೆನ್ನುವರು. (ರಾಮಾಯಣ ಪ್ರಸಂಗಗಳೇ ಪ್ರಾಚೀನ ಎಂಬುದಕ್ಕೆ ಇದೊಂದು ಆಧಾರ.) ಈ ಕಿರೀಟವು ಕೆಳಗಿಂದ ಮೇಲಕ್ಕೆ ಅಗಲವಾಗುತ್ತ ಹೋಗುವ, ಬಾಲ್ದಿಯಂತಿರುತ್ತದೆ. (ಬಕೆಟ್ ಆಕಾರ) ಇದಕ್ಕೆ ಮೇಲ್ಬದಿಯಲ್ಲಿ ಉದ್ದವಾದ ನವಿಲುಗರಿಗಳನ್ನು ಸಿಕ್ಕಿಸಿರುತ್ತದೆ. ದೊಡ್ಡಗಾತ್ರದ ಕರ್ಣಪಾತ್ರ (ಓಲೆ) ಗಳನ್ನು ಕಟ್ಟುವರು. (ಮೂಡಲ ಪಾಯದ ಸುಮಾರಾಗಿ ಇದೇ ಆಕಾರದ ಕಿರೀಟಕ್ಕೆ ‘ಉದ್ದಂಡಿ ಕರೀಟ’ ಎನ್ನುವರು,) ಸಮಗ್ರ ಯಕ್ಷಗಾನ ರಂಗ ಅಥವಾ ಕರಾವಳಿಯ ಎಲ್ಲ ತಿಟ್ಟುಗಳಿಗೆ ಅನ್ವಯ
1610 ಹೆಣ್ಣುಬಣ್ಣದ ಕಿರೀಟ ರಾಕ್ಷಸಿ ಕಿರೀಟ. ಕುತ್ತರಿ. ಬಾಲ್ದಿ ಕಿರೀಟ: ಹೆಣ್ಣು ಬಣ್ಣ ಸಮಗ್ರ ಯಕ್ಷಗಾನ ರಂಗ ಅಥವಾ ಕರಾವಳಿಯ ಎಲ್ಲ ತಿಟ್ಟುಗಳಿಗೆ ಅನ್ವಯ