A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 318

Backtrace:

File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 319

Backtrace:

File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 320

Backtrace:

File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler

File: /Appdata/padakanaja.karnataka.gov.in/index.php
Line: 318
Function: require_once

Padakanaja - Dictionary View
ಅನಿಸಿಕೆ

ಪದಕೋಶ: ಯಕ್ಷಗಾನ ಪದಕೋಶ | ಕನ್ನಡ-ಕನ್ನಡ | ಪ್ರಕಾಶಕರು - ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರ, ಎಂ.ಜಿ.ಎಂ. ಕಾಲೇಜು (1994)

Show entries
ಕ್ರಮ ಸ೦ಖ್ಯೆ ಇಂಗ್ಲೀಷ್ ಪದ
(English Word)
ಕನ್ನಡ ಪದ
(Kannada Word)
ಕನ್ನಡ ಅರ್ಥ
(Kannada Meaning)
ವಿಷಯ ವರ್ಗೀಕರಣ
(Word Subject)
ವ್ಯಾಕರಣ ವಿಶೇಷ
(Word Grammer)
ಕನ್ನಡ ಉಚ್ಚಾರಣೆ
(Kannada Pronunciation)
ಪರ್ಯಾಯ ಪದ
(Word Synonyms)
ಇಂಗ್ಲೀಷ್ ಅರ್ಥ
(English Meaning)
ಸಂಕ್ಷಿಪ್ತ ವಿವರಣೆ
(Short Description)
ದೀರ್ಘ ವಿವರಣೆ
(Long Description)
ಆಡಳಿತಾತ್ಮಕ ಪದ
(Administrative Word)
11 ಅಚ್ಚುಕಟ್ಟು ಬಣ್ಣದ ವೇಷಗಳ ಮುಖವರ್ಣಿಕೆಯ ಮೊದಲ ಹಂತ. ಮುಖದಲ್ಲಿ ಇಡಬೇಕಾದ 'ಚುಟ್ಟಿ' ಗಳ ಸಾಲುಗಳ ವಿನ್ಯಾಸದ ಮೂಲ ರೇಖೆಗಳನ್ನು ಕಪ್ಪುಬಣ್ಣದಲ್ಲಿ ಬರೆಯುವುದು. ಚುಟ್ಟಿ, ಜೀವರೇಖೆ ತೆಂಕು ತಿಟ್ಟು
12 ಅಟತಾಳ, ಅಷ್ಟತಾಳ 14 ಮಾತ್ರಾ ಕಾಲದ ತಾಳ ಅಷ್ಟತಾಳ ಸಮಗ್ರ ಯಕ್ಷಗಾನ ರಂಗ ಅಥವಾ ಕರಾವಳಿಯ ಎಲ್ಲ ತಿಟ್ಟುಗಳಿಗೆ ಅನ್ವಯ
13 ಅಟ್ಟ 1. ಆಟ ಆಡುವ ರಂಗಸ್ಥಳ; ವೇದಿಕೆ. 2. ರಂಗಸ್ಥಳ ಮತ್ತು ಸಭೆಯ ಚಪ್ಪರ. 3. ರಂಗಸ್ಥಳದ ಮೇಲೆ ಬರುವಂತೆ ಕಟ್ಟುವ ಇನ್ನೊಂದು ರಂಗಸ್ಥಳ; ಅಟ್ಟಳಿಗೆ ಅಟ್ಟಳಿಗೆ ಸಮಗ್ರ ಯಕ್ಷಗಾನ ರಂಗ ಅಥವಾ ಕರಾವಳಿಯ ಎಲ್ಲ ತಿಟ್ಟುಗಳಿಗೆ ಅನ್ವಯ
14 ಅಟ್ಟಳಿಗೆ / ಅಟ್ಟಣಿಗೆ ಆಟದ ರಂಗಸ್ಥಳದ ಮೇಲೆ ಕಟ್ಟುವ ಅಟ್ಟ. ಬಿದಿರು, ಕಟ್ಟಿಗೆ, ಅಡಿಕೆಮರ ಮೊದಲಾದುವನ್ನು ಉಪಯೋಗಿಸಿ ಕಟ್ಟುವ ಮೇಲಿನ ರಂಗಸ್ಥಳ. ಇದು ಕೆಳಗಿನ ರಂಗಸ್ಥಳದ ಅರ್ಧದಷ್ಟಕ್ಕೆ ಬರುವಂತೆ ಇರುತ್ತದೆ. ಹಿಂಬದಿಯಲ್ಲಿ ಅದಕ್ಕೆ ಸಂಕದಂತಹ ಏರುಹಲಗೆಯೂ ಮುಂದಿನಿಂದ ಏಣಿಯೂ ಇರುತ್ತವೆ. ತ್ರಿಶಂಕು ಚರಿತ್ರೆಯಲ್ಲಿ ಇಂದ್ರನು, ತ್ರಿಶಂಕುವು ಸ್ವರ್ಗಕ್ಕೆ ಹೋಗುವ ದೃಶ್ಯದಲ್ಲಿ, ಇದನ್ನು ಬಳಸಿ ತ್ರಿಶಂಕುವನ್ನು ಕೆಳಕ್ಕೆ ತಳ್ಳುವ ದೃಶ್ಯ ತೋರಿಸುತ್ತಾರೆ. ವಿಶ್ವಾಮಿತ್ರನು ಮುಖ್ಯ ರಂಗಸ್ಥಳದಿಂದ ತ್ರಿಶಂಕುವನ್ನು ಏಣಿಯ ಮೂಲಕ ಮೇಲೆ ಕಳಿಸುತ್ತಾನೆ. ಇಂದ್ರನು ಮೇಲೆ ಇರುತ್ತಾನೆ. ಸಮುದ್ರ ಮಥನ ಪ್ರಸಂಗದ ಇಂದ್ರ - ದೂರ್ವಾಸ ಸಂವಾದಕ್ಕೂ ಇದನ್ನು ಬಳಸುವರು. ಐಚ್ಚಿಕ. ಈಗ ಬಳಕೆಯಲ್ಲಿಲ್ಲ. ಸಮಗ್ರ ಯಕ್ಷಗಾನ ರಂಗ ಅಥವಾ ಕರಾವಳಿಯ ಎಲ್ಲ ತಿಟ್ಟುಗಳಿಗೆ ಅನ್ವಯ
15 ಅಟ್ಟಳಿಗೆ ಆಟ ಮೇಲೆ ಹೇಳಿದಂತೆ ಅಟ್ಟಳಿಗೆಯನ್ನು ಅಳವಡಿಸಿ ಆಡುವ ಆಟ. ಅರೆಪ್ಪಾವಿನಾಟ; ಚಪ್ಪರ ಮಂಚ ಸಮಗ್ರ ಯಕ್ಷಗಾನ ರಂಗ ಅಥವಾ ಕರಾವಳಿಯ ಎಲ್ಲ ತಿಟ್ಟುಗಳಿಗೆ ಅನ್ವಯ
16 ಅಟ್ಟಹಾಸ / ಅಟ್ಟಾಸು ಬಣ್ಣದ ವೇಷಗಳು ಹೊಡೆಯುವ ಬೊಬ್ಬೆ; ಆರ್ಭಟೆ. ವೇಷ ಪ್ರವೇಶಕ್ಕೆ ಮೊದಲು, ಪ್ರವೇಶ ನೃತ್ಯದೊಂದಿಗೆ ಮತ್ತು ರಂಗದಲ್ಲಿ ಅಟ್ಟಹಾಸದ ಪ್ರಯೋಗವಿರುತ್ತದೆ. ಬಣ್ಣದ ವೇಷವು ಚೌಕಿಯಲ್ಲಿಯ ತನ್ನ ಸ್ಥಳದಲ್ಲಿ ಒಂದು, ಚೌಕಿಯ ಮಧ್ಯದಲ್ಲಿ ಒಂದು, (ರಂಗಕ್ಕೆ ಬೆನ್ನು ಹಾಕಿ) ರಂಗದ ಬದಿಗೆ ಒಂದು, (ರಂಗಕ್ಕೆ ಬೆನ್ನು ಹಾಕಿ) ರಂಗದ ಬದಿಗೆ ಒಂದು, ಹೀಗೆ ಮೂರು ಅಟ್ಟಹಾಸ ಕೊಟ್ಟು, ಅನಂತರ ಪ್ರವೇಶ ನೃತ್ಯ ಆರಂಭಿಸುತ್ತದೆ. ರಂಗಕ್ಕೆ ಬಂದು ಎರಡು ಆರ್ಭಟೆ. ಅನಂತರ ದಂತಧಾವನ, ಸ್ನಾನ, ಭಸ್ಮಧಾರಣ, ಶಿವಪೂಜೆ ಮುಂತಾಗಿ ಒಂದೊಂದು ಆರ್ಭಟೆ. ಬಡಗುತಿಟ್ಟಿನಲ್ಲಿ, ಹಲ್ಲುಜ್ಜುವಿಕೆ ಮುಂತಾದೆಡೆ ಒಂದೊಂದು ಕೈಕರಣಕ್ಕೂ ಒಂದೊಂದು ಆರ್ಭಟೆ ಕೊಡುತ್ತಾರೆ- ಪೀಠದಲ್ಲಿ ಕುಳಿತ ಬಳಿಕ ಒಂದು, ಭಾಗವತನು ಮಾತಾಡಿಸಿದೊಡನೆ (ಭಳಿರೇ...) ಒಂದು ಆರ್ಭಟೆ. ಅನಂತರ ಪದ್ಯದ ಅರ್ಥವನ್ನು ಆರಂಭಿಸುವುದಕ್ಕೊಂದು. ಹೀಗೆ, ಒಂದು ಪೂರ್ಣಪ್ರಮಾಣದ ಪ್ರವೇಶ ಇರುವ ರಾಜ ಬಣ್ಣವಾದರೆ, ಅದಕ್ಕೆ ಹದಿನೆಂಟು ಅಟ್ಟಹಾಸ ಆಗಬೇಕು. ಕಾಟು ಬಣ್ಣ (ಕ್ಷುದ್ರ ರಾಕ್ಷಸ) ಪಾತ್ರಕ್ಕಾದರೆ ಕಡಮೆ. ಬಣ್ಣದ ವೇಷಗಳು ಮಾತಾಡುವಾಗಲೂ ಮಧ್ಯೆ ಆರ್ಭಟೆ ಕೊಡಬೇಕು. ಗಂಡು ಬಣ್ಣದ ವೇಷಕ್ಕೆ ಆರ್ಭಟೆ 'ಓ' ಕಾರವಾಗಿ, ಹೆಣ್ಣು ಬಣ್ಣವಾದರೆ 'ಆ' ಕಾರವಾಗಿರಬೇಕು. ವಾಲಿಸುಗ್ರೀವಾದಿ ಕಪಿ ಪಾತ್ರಗಳಿಗೆ "ಬುಯ್ಯೋ... ಹ ಹ ಹ" ಎಂದಾಗಬೇಕು. ಹಿಂದೆ, ತಾಳಮದ್ದಲೆಯಲ್ಲೂ 'ಬಣ್ಣದ ಅರ್ಥ' (ರಾಕ್ಷಸಾದಿಪಾತ್ರ) ಗಳು ಆರ್ಭಟೆ ಕೊಡುವ ಕ್ರಮವಿತ್ತು. ಬಣ್ಣದ ವೇಷ, ಸಾಯುವಾಗಲೂ ಆರ್ಭಟೆ ಕೊಡಬೇಕು. ಸಾಯುವಾಗ ಕೊಡುವುದಕ್ಕೆ ಮಾತ್ರ ಆರ್ಭಟೆ, ಉಳಿದುದು ಅಟ್ಟಹಾಸವೆಂದು ಒಂದು ಅಭಿಪ್ರಾಯ. ಎಂತಿದ್ದರೂ ಎರಡೂ ಬೊಬ್ಬೆಗಳೇ. ಸಾಯುವಾಗಿನದರ ಧ್ವನಿ ಬೇರೆ ರೀತಿ ಇರಬೇಕೆಂದು ಸಂಪ್ರದಾಯ. ಹಾಗೆಯೇ ರಾಜ ಬಣ್ಣದ ಅಟ್ಟಹಾಸವು ಗಂಭೀರವಾಗಿ, ಕಾಟು ಬಣ್ಣದ್ದು ಸ್ವಲ್ಪ ಅಪರಿಷ್ಕ್ರತವಾಗಿ, ಹೆಣ್ಣು ಬಣ್ಣದ್ದು ಕೀರಲಾಗಿ, ಕಿರಾತನದಾದರೆ "ಲಲಲಲ ಹೇ ಹಾ" ಎಂದು ವಿಚಿತ್ರವಾಗಿ ಇರುತ್ತದೆ. ಅಟ್ಟಹಾಸ ಹೊಡೆಯಲು, ಕುತ್ತಿಗೆವರೆಗೆ ಮುಳುಗುವಂತೆ ನೀರಿನ ಹೊಂಡದಲ್ಲಿ ನಿಂತು, ಅಭ್ಯಾಸ ಮಾಡುವ ಕ್ರಮವಿತ್ತೆಂಬ ಹೇಳಿಕೆ ಇದೆ. ಅಟ್ಟಹಾಸ, ಅಭ್ರಟೆಗಳ ಕ್ರಮ, ಮತ್ತು ಪ್ರಯೋಗದಲ್ಲಿ, ತಿಟ್ಟುಗಳಿಗನುಸರಿಸಿ ಸ್ವಲ್ಪ ವ್ಯತ್ಯಾಸಗಳಿವೆ. ತೆಂಕುತಿಟ್ಟಿನಲ್ಲಿ ಅಟ್ಟಹಾಸಗಳ ಬಳಕೆ ವಿಸ್ತೃತವಾಗಿದೆ. ಘಟ್ಟದ ಕೋರೆ ತಿಟ್ಟಿನಲ್ಲಿ ಬಡಗುತಿಟ್ಟಿನಂತೆಯೇ ಇದೆ. ಮೂಡಲಪಾಯದಲ್ಲೂ ಘೋರಪಾತ್ರಗಳಿಗೆ ಆರ್ಭಟೆ ಇದೆ. ಆದರೆ, ಕರಾವಳಿಯ ತಿಟ್ಟುಗಳಂತೆ ಸಂಖ್ಯಾ ನಿಯಮವಿಲ್ಲ. ಅಟ್ಟಹಾಸವನ್ನು ಕೆಲವೆಡೆ 'ಕಾಕು' ಎಂದೂ ಹೇಳುವರು. ಆರ್ಭಟೆ; ಕಾಕು; ತೆರೆಪೊರಪ್ಪಾಡು, ಬಣ್ಣದ ವೇಷ, ಬಣ್ಣದ ಪ್ರವೇಶ ಸಮಗ್ರ ಯಕ್ಷಗಾನ ರಂಗ ಅಥವಾ ಕರಾವಳಿಯ ಎಲ್ಲ ತಿಟ್ಟುಗಳಿಗೆ ಅನ್ವಯ
17 ಅಟ್ಟೆ ಉರುಟಾದ ದೊಡ್ಡ ಬಳೆಯಾಕಾರ ಎಂದು ಸಾಮಾನ್ಯ ಅರ್ಥ - 1. ಬಣ್ಣದ ವೇಷದ ಬಟ್ಟಲು ಕಿರೀಟದ ಚಕ್ರಾಕಾರವಾದ ಭಾಗ, ತಟ್ಟಿ. 2. ಬಟ್ಟಲು ಕಿರೀಟದ ಸುತ್ತ ಬರುವ ಉಣ್ಣೆಯ ಚಕ್ರ. 3. ಮುಂಡಾಸು ಮತ್ತು ಕೇದಗೆ ಮುಂದಲೆಗಳನ್ನು ಕಟ್ಟಲು ಒಳಗಿಂದ ಆಧಾರವಾಗಿ ಕಟ್ಟುವ ಹುಲ್ಲು ಮತ್ತು ಬಟ್ಟೆಯ ಗೋಪುರಾಕೃತಿಗಳು. 4. ಚಂಡೆಯ ಮುಚ್ಚಿಗೆಗಳ ಚರ್ಮಗಳಿಗೆ ಆಧಾರವಾಗಿ ಬಿಗಿಯುವ ಬೆತ್ತದ ಅಥವಾ ಲೋಹದ ಬಳೆ, ರಿಂಗು. 5. ಮದ್ದಲೆ ಮುಚ್ಚಿಗೆಗೆ ಆಧಾರವಾಗಿರುವ ಚರ್ಮದ ಬಳೆಗಳು 6. ವೀರಭದ್ರ, ಇಂದ್ರಜಿತು ಪಾತ್ರಗಳಿಗೂ, ಇತ್ತೀಚೆಗೆ ಬೇರೆ ಕೆಲವು ಪಾತ್ರಗಳಿಗೂ ಕಿರೀಟದ ಹಿಂಬದಿಗೆ ಕಟ್ಟುವ ಉರುಟು ಅಥವಾ ಗೋಪುರಾಕೃತಿ. 7. ಹೆಣ್ಣು ಬಣ್ಣ (ರಾಕ್ಷಸಿ) ವೇಷದ ಹೊಟ್ಟೆಗೆ, ಆಕಾರ ಬರಲು ಬಿಗಿಯುವ ಬಟ್ಟೆಯ ಸುತ್ತುವಿಕೆ. ಸಮಗ್ರ ಯಕ್ಷಗಾನ ರಂಗ ಅಥವಾ ಕರಾವಳಿಯ ಎಲ್ಲ ತಿಟ್ಟುಗಳಿಗೆ ಅನ್ವಯ
18 ಅಟ್ಟೆ ಸುಂದುವುದು (ಅಟ್ಟೆ ಸುತ್ತುವುದು) 1. ಹೆಣ್ಣು ಬಣ್ಣದ ವೇಷಗಳ ಹೊಟ್ಟೆಯ ಆಕಾರವನ್ನು ಹಿಗ್ಗಿಸಲು, ದಗಲೆಯ ಒಳಗಿಂದ ಬಟ್ಟೆಸುತ್ತಿ ಕೊಳ್ಳುವುದು. 2. ಮೇಲೆ ಹೇಳಿದ ಮುಂಡಾಸಿನ ಮತ್ತು ಕಿರೀಟದ ಅಟ್ಟೆಗಳನ್ನು ಸುತ್ತಿ ತಯಾರಿಸುವುದು ಮತ್ತು ಕಟ್ಟುವುದು. ತೆಂಕುತಿಟ್ಟು
19 ಅಟ್ಟೆ ಸುತ್ತುವುದು 1. ಹೆಣ್ಣು ಬಣ್ಣದ ವೇಷಗಳ ಹೊಟ್ಟೆಯ ಆಕಾರವನ್ನು ಹಿಗ್ಗಿಸಲು, ದಗಲೆಯ ಒಳಗಿಂದ ಬಟ್ಟೆಸುತ್ತಿ ಕೊಳ್ಳುವುದು. 2. ಮೇಲೆ ಹೇಳಿದ ಮುಂಡಾಸಿನ ಮತ್ತು ಕಿರೀಟದ ಅಟ್ಟೆಗಳನ್ನು ಸುತ್ತಿ ತಯಾರಿಸುವುದು ಮತ್ತು ಕಟ್ಟುವುದು. ಅಟ್ಟೆ ಸುಂದುವುದು ತೆಂಕುತಿಟ್ಟು
20 ಅಡಕೆ / ಅಡಿಕೆ ಅಡಕೆ, ವೀಳ್ಯದೆಲೆ ಸಹಿತ. ಮೇಳಕ್ಕೆ ಬಿಡಾರ ಕೊಡುವಾಗಲೂ, ಚೌಕಿಯ ಪೂಜೆಗೂ, ಆಟದ ವೀಳ್ಯ ಸಂಭಾವನೆ ಕೊಡುವಾಗಲೂ ಬೇಕು. ಸಮಗ್ರ ಯಕ್ಷಗಾನ ರಂಗ ಅಥವಾ ಕರಾವಳಿಯ ಎಲ್ಲ ತಿಟ್ಟುಗಳಿಗೆ ಅನ್ವಯ