A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 318

Backtrace:

File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 319

Backtrace:

File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 320

Backtrace:

File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler

File: /Appdata/padakanaja.karnataka.gov.in/index.php
Line: 318
Function: require_once

Padakanaja - Dictionary View
ಅನಿಸಿಕೆ

ಪದಕೋಶ: ಯಕ್ಷಗಾನ ಪದಕೋಶ | ಕನ್ನಡ-ಕನ್ನಡ | ಪ್ರಕಾಶಕರು - ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರ, ಎಂ.ಜಿ.ಎಂ. ಕಾಲೇಜು (1994)

Show entries
ಕ್ರಮ ಸ೦ಖ್ಯೆ ಇಂಗ್ಲೀಷ್ ಪದ
(English Word)
ಕನ್ನಡ ಪದ
(Kannada Word)
ಕನ್ನಡ ಅರ್ಥ
(Kannada Meaning)
ವಿಷಯ ವರ್ಗೀಕರಣ
(Word Subject)
ವ್ಯಾಕರಣ ವಿಶೇಷ
(Word Grammer)
ಕನ್ನಡ ಉಚ್ಚಾರಣೆ
(Kannada Pronunciation)
ಪರ್ಯಾಯ ಪದ
(Word Synonyms)
ಇಂಗ್ಲೀಷ್ ಅರ್ಥ
(English Meaning)
ಸಂಕ್ಷಿಪ್ತ ವಿವರಣೆ
(Short Description)
ದೀರ್ಘ ವಿವರಣೆ
(Long Description)
ಆಡಳಿತಾತ್ಮಕ ಪದ
(Administrative Word)
51 ಅಭ್ರಕ ಮುಖವರ್ಣಿಕೆ, ಅಲಂಕರಣಗಳಿಗೆ ಬಳಸುವ ಕಾಗೆಬಂಗಾರ. ಬಿಂಗ. ಸಮಗ್ರ ಯಕ್ಷಗಾನ ರಂಗ ಅಥವಾ ಕರಾವಳಿಯ ಎಲ್ಲ ತಿಟ್ಟುಗಳಿಗೆ ಅನ್ವಯ
52 ಅಮಾವಾಸ್ಯೆ ಪೂಜೆ ಆಟದ ಮೇಳಗಳಲ್ಲಿ ಅಮಾವಾಸ್ಯೆಯಂದು ಮಧ್ಯಾಹ್ನ ನಡೆಯುವ ವಿಶೇಷ ಪೂಜೆ. ಅಂದು ಹಿಮ್ಮೇಳದ ಸೇವೆಯೂ ಜರಗಬೇಕು. ಪಾಯಸದೂಟವೂ ಇರುತ್ತದೆ. ಕೆಲವು ಮೇಳಗಳಲ್ಲಿ ಸಂಕ್ರಮಣ ದಿನಗಳಲ್ಲೂ ಇಂತಹ ಪೂಜೆ ಇರುತ್ತದೆ. ಈ ಆಚರಣೆಗಳಿಗೆ 'ಪೂಜೆ' ಯೆಂದಷ್ಟೆ ಹೇಳುವುದಿದೆ. ಈಗ ಇರುವಂತೆ, ಮೇಳಗಳಲ್ಲಿ, ಹಿಂದೆ, ಮಧ್ಯಾಹ್ನ ನಿತ್ಯ ಪೂಜೆ ಇರಲಿಲ್ಲವೆಂಬುದಕ್ಕೆ ಇವು ಸೂಚಕಗಳಾಗಿವೆ. ಸಮಗ್ರ ಯಕ್ಷಗಾನ ರಂಗ ಅಥವಾ ಕರಾವಳಿಯ ಎಲ್ಲ ತಿಟ್ಟುಗಳಿಗೆ ಅನ್ವಯ
53 ಅರದಾಳ ಅರಿದಾಲ, ಅರ್ದಳ, ಅರ್ದಾಳ, ಹರಿತಾಲ, ಹರದಾಳ, ಹಳದಿ ಬಣ್ಣದ ದ್ರವ್ಯ, ಮುಖವರ್ಣಿಕೆಯ ಮೂಲಲೇಪನಕ್ಕೆ ಈ ಬಣ್ಣ. ಯಕ್ಷಗಾನ, ಭೂತ ವೇಷಗಳಲ್ಲಿ ಹಿಂದೆ ಬಳಕೆಯಾಗುತ್ತಿತ್ತು. ನಸುಗೆಂಪು ಛಾಯೆಯುಳ್ಳ ಹಳದಿ ಇದು. ಇದಕ್ಕೆ ಸ್ಪಲ್ಪ ಕೆಂಪು ಬಣ್ಣ ಮಿಶ್ರ ಮಾಡುವುದೂ ಉಂಟು. ಇದು ಮೂರು ಮೂಲಗಳಿಂದ ಲಭ್ಯ. 1. ಖನಿಜ ಅರದಾಳ - Arsenicum flavum. ಆರ್ಸೇನಿಕ್ ಮತ್ತು ಗಂಧಕಗಳ ಮಿಶ್ರಣ. ಇದಕ್ಕೆ ದುರ್ವಾಸನೆ ಇದೆ. ಇದೇ ಪ್ರಸಿದ್ಧ ಅರದಾಳ. yellow orpiment ಕಲ್ಲು ಅರದಾಳ. 2. ವೃಕ್ಷ ಅರದಾಳ - ಅ) ಅರಸಿನ ಗುರ್ಗಿ ಮರ, garcenia mosella ದ ತೊಗಟೆ, ಕಾಂಡದಿಂದ - ಆ) orpine - (Sedum telephium) ಗಿಡದಿಂದ. ಇದರಲ್ಲಿ ನೇರಳೆ, ಹಳದಿ ಜಾತಿಗಳಿವೆ. ಇ) ಮರದರಸಿನ ಬೇರುಗಳಿಂದ. (Morinda umbelata) ಈ) ಹಲಸಿನ ಮರಕ್ಕೆ ಬರುವ ಗಡ್ಡೆ ಅರೆದು ತಯಾರಿಸುವುದು. 3. ಹಳದಿಕಲ್ಲು - ವಿಶೇಷತಃ ಹೊಳೆಗಳಲ್ಲಿ, ತೋಡುಗಳಲ್ಲಿ ಲಭ್ಯ. ಅರದಾಳವನ್ನು ಅರೆದು ಮುಖಕ್ಕೆ ಬಳಿದ ಅನಂತರ, ಅದರ ಮೇಲೆ ಯಾವುದೇ ಶುಷ್ಕಕ - ಪೌಡರ್ ವಗೈರೆ - ಹೆಚ್ಚುವ ಕ್ರಮವಿರಲಿಲ್ಲ. ಹಾಗಾಗಿ ಹಿಂದಿನ ಬಣ್ಣಗಾರಿಕೆಗೆ ಹಸಿ ಬಣ್ಣ ಎನ್ನುವರು. ಮಂದವಾದ ಬೆಳಕಿಗೆ ಇದು ಬಹು ಸುಂದರವಾಗಿ ಕಾಣುವುದು. ಸಮಗ್ರ ಯಕ್ಷಗಾನ ರಂಗ ಅಥವಾ ಕರಾವಳಿಯ ಎಲ್ಲ ತಿಟ್ಟುಗಳಿಗೆ ಅನ್ವಯ
54 ಅರದಾಳ 1. ಈ ಅರದಾಳದ ಬಣ್ಣಕ್ಕೆ 'ಚಾಯ' (ಗೌರವರ್ಣ) ವೆಂದು ಹೆಸರು. ಇದು ಸಾಮಾನ್ಯ ಮನುಷ್ಯ ವರ್ಣವೆಂದು ತಾತ್ಪರ್ಯ. ಬಣ್ಣದ ವೇಷ, ಪಚ್ಚೆ ವೇಷಗಳನ್ನು ಬಿಟ್ಟರೆ, ಉಳಿದೆಲ್ಲ ಪಾತ್ರಗಳಿಗೆ ಇದೇ ಮೂಲವರ್ಣ (base make - up). 2. ಈಗ ಅರದಾಳದ ಬದಲು ಸಪೇತ (Zinc oxide) ವೆಂಬ ಬಿಳಿ ಬಣ್ಣಕ್ಕೆ ಅರಸಿನ, ಕೆಂಪು ಸೇರಿಸಿ ಎಣ್ಣೆಯಲ್ಲಿ ಕಲಸಿ ಲೇಪಿಸುವರು. ಚಾಯ, ಸಪೇತ ತೆಂಕುತಿಟ್ಟು
55 ಅರದಾಳದ ಕಲ್ಲು 1. ಮೇಲೆ ಹೇಳಿದ ಖನಿಜ ಅರದಾಳದ ಕಲ್ಲು, ಖನಿಜದ ಹೆಂಟೆ 2. ಹಳದಿ ಬಣ್ಣದ ಕಲ್ಲು. 3. ಅರದಾಳ, ಯಾ ಸಪೇತ + ಅರಸಿನ - ಅರೆದು ತಯಾರಿಸಿಡುವ ಕಲ್ಲು. ಸಮಗ್ರ ಯಕ್ಷಗಾನ ರಂಗ ಅಥವಾ ಕರಾವಳಿಯ ಎಲ್ಲ ತಿಟ್ಟುಗಳಿಗೆ ಅನ್ವಯ
56 ಅರಳೆಲೆ 1. ಅಶ್ವತ್ಥದ ಎಲೆಗಳಂತಿರುವ ಪದಕಗಳುಳ್ಳ ಅರಳೆಲೆ ಸರ 2. ಅರಳಲೆ ಆಕಾರದ ಕಿವಿಯೋಲೆ 3. ಅರಳೆಲೆ ಆಕಾರದ ಚಿಕ್ಕಚಿಕ್ಕ ಪದಕಗಳು. ಇವು ಕಿರೀಟದ ಮೇಲ್ಭಾಗದ ಅಲಂಕರಣಕ್ಕೆ, ಕೇಶಾವರಿ (ತಡ್ಡೆ) ಕಿರೀಟಗಳಲ್ಲಿರುವ ಸತ್ತಿಗೆ ಎಂಬ ರಚನೆಗಳಲ್ಲಿ ಬಳಕೆಯಾಗುತ್ತವೆ. ಅರಳೋಲೆ ಸಮಗ್ರ ಯಕ್ಷಗಾನ ರಂಗ ಅಥವಾ ಕರಾವಳಿಯ ಎಲ್ಲ ತಿಟ್ಟುಗಳಿಗೆ ಅನ್ವಯ
57 ಅರಳೋಲೆ ಅರಳಿ ಎಲೆ ಆಕಾರದ ಕಿವಿಯೋಲೆ. ಸಮಗ್ರ ಯಕ್ಷಗಾನ ರಂಗ ಅಥವಾ ಕರಾವಳಿಯ ಎಲ್ಲ ತಿಟ್ಟುಗಳಿಗೆ ಅನ್ವಯ
58 ಅರುವತ್ತನಾಲ್ಕು ಕಟ್ಟು, ನಾಲ್ಕುಕುತ್ತು ತೆಂಕುತಿಟ್ಟಿನ ಇಡಿವೇಷ (ಕಿರೀಟ ವೇಷ ಯಾ ಬಣ್ಣದ ವೇಷ) ವನ್ನು ಪೂರ್ತಿಯಾಗಿ ಧರಿಸಿದಾಗ ವೇಷಧಾರಿಯ ವೇಷದ ಮೇಲೆ ಮತ್ತು ಮೈಯ ಮೇಲೆ ಒಟ್ಟು ಅರುವತ್ತನಾಲ್ಕು ಕಟ್ಟು (ಗಂಟು ಯಾ ಬಿಗಿತಕಟ್ಟು) ಗಳಿರಬೇಕೆಂದೂ, ನಾಲ್ಕು ಕುತ್ತವಿಕೆ ಎಂದರೆ ಒತ್ತಿಸುರಿಯುವಿಕೆಗಳು, ಇರಬೇಕೆಂದೂ ಹಳೆಯ ನಿಯಮ. ಈಗ ಬದಲಾವಣೆಗಳಿಂದಾಗಿ ಈ ಸಂಖ್ಯೆ ಕಡಿಮೆಯಾಗಿದೆ. ಈ ಅರುವತ್ತನಾಲ್ಕು ಕಟ್ಟುಗಳು ಯಾವುವು ಎಂಬ ಬಗ್ಗೆ ಸ್ಪಲ್ಪ ಮಟ್ಟಿನ ಅಭಿಪ್ರಾಯ ಭೇದಗಳಿದ್ದರೂ ಸಾಮಾನ್ಯವಾಗಿ ಅದನ್ನು ಹೀಗೆ ಪಟ್ಟಿಮಾಡಬಹುದು : ಒಳಚಲ್ಲಣಕ್ಕೆ - 3, ಅಂಡಿಗೆ - 1, ಗೆಜ್ಜೆಗಳಿಗೆ - 2, ಕಾಲಕಡಗಗಳಿಗೆ - 2, ಕಾಲು ಮುಳ್ಳುಗಳಿಗೆ - 6, ಕಾಲು ಚೆಂಡುಗಳಿಗೆ - 6, ಮೊಣಕಾಲ ಕೆಳಗೆ ಜಂಗುಗಳಿಗೆ - 2, ಕಚ್ಚೆಗೆ - 2, ಕಚ್ಚೆ ಲಾಡಿಗೆ - 1, ದಟ್ಟಿ (ಜಟ್ಟಿ) ಗೆ - 3, ಬಾಲು ಮುಂಡಿಗೆ - 1, ವೀರಕಸೆಗೆ - 1, ಮಾರುಮಾಲೆಗೆ - 1, ಡಾಬುಗಳಿಗೆ - 3, ದಗಲೆಗಳಿಗೆ - 6, ಕೈಕಟ್ಟುಗಳಿಗೆ - 2, ತೋಳ್ಕಟ್ಟುಗಳಿಗೆ -2, ಭುಜಮುಳ್ಳುಗಳಿಗೆ - 4, ಎದೆಪದಕಕ್ಕೆ - 2, ಅಡ್ಡಗೆಗಳಿಗೆ - 2, ಹಾರಕ್ಕೆ - 1, ಮೀಸೆಗೆ - 1, ಚಿಟ್ಟಿಪಟ್ಟಿಗಳಿಗೆ - 3, ಕರ್ಣಪಾತ್ರಕ್ಕೆ -1, ಕಿರೀಟಕ್ಕೆ - 3, ಕೇದಗೆಗೆ - 1, ಕೇಸರಿಗೆ - 1, ಗಡ್ಡಕ್ಕೆ - 1, ಹೀಗೆ ಅಡಿಯಿಂದ ಮುಡಿಯವರೆಗೆ ಒಟ್ಟು 64. ನಾಲ್ಕು ಕುತ್ತುಗಳೆಂದರೆ, ಕರ್ಣಪಾತ್ರದ ಮೇಲಿನ ಎಡೆಯಲ್ಲಿ, ಕಿವಿಯ ಮೇಲುಭಾಗಕ್ಕೆ ನಿಲ್ಲುವಂತೆ ಚೆನ್ನೆಪ್ಪೂಗಳಿಗೆ ಎರಡು, ಮತ್ತು ಕೆನ್ನೆಪ್ಪೂಗಳಿಗೆ ಎರಡು, ಬಣ್ಣದ ವೇಷಗಳಿಗೆ ಇವುಗಳಿಲ್ಲ. ಬದಲಾಗಿ ಓಲೆಗಳನ್ನು ಕಿರೀಟಕ್ಕೆ ಕಟ್ಟುತ್ತಾರೆ. ಕರ್ಣಶಿಖಿ ಪಾತ್ರಗಳನ್ನು (ಅಲವಟ್ಟ) ಗಳನ್ನು ಓಲೆ ಮತ್ತು ಕಿರೀಟದ ಮಧ್ಯೆ ಕುತ್ತುವುದೂ ಉಂಟು. ಈ ಮೇಲೆ ಹೇಳಿದ ಅರುವತ್ತುನಾಲ್ಕು ಮತ್ತು ನಾಲ್ಕರ ಲೆಕ್ಕ ಈಗ ಬದಲಾಗಿದೆ. ಕಚ್ಚೆಯ ಬದಲು ಚಲ್ಲಣ ಬಂದಿರುವುದರಿಂದ, ಕಾಲುಮುಳ್ಳು, ಕಾಲ ಚೆಂಡುಗಳು, ಕಡಗಗಳು ಮಾಯವಾಗಿರುವುದರಿಂದ ಸಂಖ್ಯೆ ಕಡಮೆಯಾಗಿದೆ. ವೀರಕಸೆ, ಮಾರುಮಾಲೆ ಸೇರಿ ಒಂದೇ ಆಭರಣವಾಗಿದೆ. ಜಂಗು ಬಳಕೆಯಲ್ಲಿಲ್ಲ. ಕೆನ್ನೆಪ್ಪೂ, ಚೆನೆಪ್ಪೂ ಸೇರಿ ಒಂದೇ ಆಭರಣವಾಗಿದೆ. ತೆಂಕುತಿಟ್ಟು
59 ಅರೆಕಚ್ಟೆ 1. ಮೊಣಕಾಲ ಕೆಳಗಿನವರೆಗೆ ಮಾತ್ರ ನಿಲ್ಲುವ ಬಿಗಿ ಡಬಲ್ ಕಚ್ಚೆ. 2. ಒಂದು ಕಾಲನ್ನು ಪೂರ್ತಿ ಸುತ್ತುವರಿದು, ಒಂದನ್ನು ತೆರೆದು ಇಡುವ ನಿರಿಗೆ ಕಚ್ಚೆ ಯಾ ಪುರೋಹಿತ ಕಚ್ಚೆ. ಇದಕ್ಕೂ, ಪೂರ್ತಿ ಎರಡೂ ಕಾಲು ಮುಚ್ಚುವ ವೀರಕಚ್ಚೆಗೂ ಇಡಿಕಚ್ಚೆಯೆಂದೂ ಹೆಸರುಂಟು. ಅರೆಕಚ್ಚೆಯು ಋಷಿ, ಬ್ರಾಹ್ಮಣ, ಬೇಟೆಗಾರ, ದೂತ ಇತ್ಯಾದಿ ಪಾತ್ರಗಳಿಗೆ ಬಳಕೆ. ಕಚ್ಛೆ, ಇಡಿ ಕಚ್ಚೆ ಸಮಗ್ರ ಯಕ್ಷಗಾನ ರಂಗ ಅಥವಾ ಕರಾವಳಿಯ ಎಲ್ಲ ತಿಟ್ಟುಗಳಿಗೆ ಅನ್ವಯ
60 ಅರೆಗುಂಪು ಮದ್ದಲೆಯ ಬಲಭಾಗಕ್ಕೆ, ನಾಲ್ಕೂ ಬೆರಳು ಜೋಡಿಸಿ ಮೆಲ್ಲನೆ ಯಾ ಒತ್ತಿ ಬಡಿಯುವ ಬಡಿ. ಸಣ್ಣ ತೋಂ ಕಾರ. ಗುಂಪು, ತೋಂ ಬಡಗುತಿಟ್ಟು