A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 318

Backtrace:

File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 319

Backtrace:

File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 320

Backtrace:

File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler

File: /Appdata/padakanaja.karnataka.gov.in/index.php
Line: 318
Function: require_once

Padakanaja - Dictionary View
ಅನಿಸಿಕೆ

ಪದಕೋಶ: ಯಕ್ಷಗಾನ ಪದಕೋಶ | ಕನ್ನಡ-ಕನ್ನಡ | ಪ್ರಕಾಶಕರು - ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರ, ಎಂ.ಜಿ.ಎಂ. ಕಾಲೇಜು (1994)

Show entries
ಕ್ರಮ ಸ೦ಖ್ಯೆ ಇಂಗ್ಲೀಷ್ ಪದ
(English Word)
ಕನ್ನಡ ಪದ
(Kannada Word)
ಕನ್ನಡ ಅರ್ಥ
(Kannada Meaning)
ವಿಷಯ ವರ್ಗೀಕರಣ
(Word Subject)
ವ್ಯಾಕರಣ ವಿಶೇಷ
(Word Grammer)
ಕನ್ನಡ ಉಚ್ಚಾರಣೆ
(Kannada Pronunciation)
ಪರ್ಯಾಯ ಪದ
(Word Synonyms)
ಇಂಗ್ಲೀಷ್ ಅರ್ಥ
(English Meaning)
ಸಂಕ್ಷಿಪ್ತ ವಿವರಣೆ
(Short Description)
ದೀರ್ಘ ವಿವರಣೆ
(Long Description)
ಆಡಳಿತಾತ್ಮಕ ಪದ
(Administrative Word)
41 ಅಪಶಕುನ ಹಾಸ್ಯ ಯುದ್ಧ, ದಿಗ್ವಿಜಯಗಳಿಗೆ ಹೊರಟ ಪಾತ್ರಕ್ಕೆ, ವಿಶೇಷತಃ ರಾಕ್ಷಸರಿಗೆ ದಾರಿಯಲ್ಲಿ ಸಿಗುವ ಅಪಶಕುನದ ಪಾತ್ರಗಳು. ಇದನ್ನು ಹಾಸ್ಯಗಾರನೇ ನಿರ್ವಹಿಸುತ್ತಾನೆ. ಇವು ಮುಖ್ಯವಾಗಿ ಒಂಟಿ ಬ್ರಾಹ್ಮಣ, ಮಡಕೆ ಕುಂಬಾರ, ಕಟ್ಟಿಗೆ ಮಾರುವವನು, ವಿಧವೆ - ಎಂದು ನಾಲ್ಕು. ಬಡಗುತಿಟ್ಟಿನಲ್ಲಿ ತಟ್ಟೀಬಳಿ ಎಂಬುದೂ ಒಂದು ಹೆಚ್ಚಿಗೆ ಇದೆ. ಈ ಹಾಸ್ಯ ಪಾತ್ರಗಳು ವೇಷದೊಂದಿಗೆ ಹಾಸ್ಯ ಸಂಭಾಷಣೆ ಮಾಡಿ ಹೋಗುತ್ತವೆ. ಆದರೆ, ಕೊನೆಗೆ ಅವುಗಳನ್ನು ಭರ್ತ್ಸನೆ ಮಾಡುವುದಿಲ್ಲ, ಬದಲಾಗಿ ಸಹಾನುಭೂತಿಯಿಂದ ಕಳಿಸುತ್ತಾರೆ. ಹಾಸ್ಯಗಾರನು ಈ ಪಾತ್ರಗಳನ್ನು, ಬೇಗ ಬೇಗನೆ ವೇಷ ಬದಲಾಯಿಸಿ ನಿರ್ವಹಿಸಬೇಕು. ಅವನಿಗೆ ಬಿಡುವು ನೀಡಲು, ವೇಷಗಳು ಪ್ರಯಾಣ ಮುಂದುವರಿಸಿ, ಸ್ವಲ್ಪ ಮಾತಾಡಿಕೊಳ್ಳುತ್ತವೆ. ಪಾತ್ರಗಳಿಗೆ ಶುಭಶಕುನವಾಗುವ ಸಂದರ್ಭವಿದ್ದರೆ ಅದನ್ನು ದೃಶ್ಯದಲ್ಲಿ ತೋರಿಸುವುದಿಲ್ಲ. ಮಾತಿನಲ್ಲಿ ಹೇಳುವರು. ಸಮಗ್ರ ಯಕ್ಷಗಾನ ರಂಗ ಅಥವಾ ಕರಾವಳಿಯ ಎಲ್ಲ ತಿಟ್ಟುಗಳಿಗೆ ಅನ್ವಯ
42 ಅಪಶ್ರುತಿ ಹಾಡು ಅಥವಾ ವಾದ್ಯಗಳ ಶ್ರುತಿ ತಪ್ಪುವಿಕೆ. ಶ್ರುತಿಭಂಗ. ಸಮಗ್ರ ಯಕ್ಷಗಾನ ರಂಗ ಅಥವಾ ಕರಾವಳಿಯ ಎಲ್ಲ ತಿಟ್ಟುಗಳಿಗೆ ಅನ್ವಯ
43 ಅಪ್ಪುಕುಟ್ಟಿ ಬಡಗುತಿಟ್ಟಿನಲ್ಲಿ, ಬೈಂದೂರು ಸೀಮೆಯಲ್ಲಿ, ಕೋಡಂಗಿ ವೇಷಗಳ ನಾಮಾಂತರ. ಬಡಗುತಿಟ್ಟು
44 ಅಬ್ಬರ 1. ಆಟ ಆರಂಭವಾಗುವ ಮೊದಲು, ಚಂಡೆ, ಮದ್ದಲೆ, ತಾಳ (ಜಾಗಟೆ) ಗಳನ್ನು ಮಾತ್ರ, ಹಾಡುವಿಕೆಯಿಲ್ಲದೆ, ಬಾರಿಸುವ ಕ್ರಮ, ಅಬ್ಬರ ಬಿಡ್ತಿಗೆ, ಶುಷ್ಕವಾದನ. ಇದಕ್ಕೆ ಅಬ್ಬರ ತಾಳವೆಂದೂ ಹೇಳುವರು. ಬಡಗುತಿಟ್ಟಿನಲ್ಲಿ ಇದು ನಾಲ್ಕು ಬಗೆ : I. ಗುಡ್ಡದ ಅಬ್ಬರ : ಸಾಯಂಕಾಲ ಸಮಯ, ಆಟ ನಡೆಯುವ ಸ್ಥಳದ ಬಳಿ ಎತ್ತರದ ಗುಡ್ಡೆಗೆ ಹೋಗಿ ಬಾರಿಸುವುದು. ಇದೇ ಕೇಳಿ ಬಾರಿಸುವಿಕೆ ಯಾನೆ ಕೇಳಿ ಅಬ್ಬರ. II. ಚೌಕಿ ಅಬ್ಬರ : ಸಂಜೆ ಚೌಕಿಯಲ್ಲಿ, ಗಣಪತಿ ಪೂಜೆಗೆ ಮೊದಲು ಬಾರಿಸುವುದು. III. ರಂಗಸ್ಥಳದ ಅಬ್ಬರ : ಸಭಾಲಕ್ಷಣವೆಂಬ ಪೂರ್ವರಂಗದ ಆರಂಭಕ್ಕೆ ಮೋದಲು ರಂಗಸ್ಥಳದಲ್ಲಿ ಬಡಿಯುವುದು. IV. ಪ್ರಸಂಗ ಪೀಠಿಕೆ ಅಬ್ಬರ: ಸಭಾಲಕ್ಷಣ ಮುಗಿದು, ಕಥಾರಂಭಕ್ಕೆ ಮೊದಲು ಬಡಿಯುವುದು. ಇವೆಲ್ಲವೂ ಏಕತಾಳದಲ್ಲಿದ್ದು, ನಾಲ್ಕೂ ಸುಮಾರಾಗಿ ಒಂದೇ ತೆರದ ನಡೆಯಲ್ಲಿರುತ್ತವೆ. ಗುಡ್ಡದ ಅಬ್ಬರ, ಪ್ರಸಂಗ ಪೀಠಿಕೆಗಳು ದೀರ್ಘ. ಉಳಿದ ಎರಡು ಹ್ರಸ್ವ. ತೆಂಕುತಿಟ್ಟಿನಲ್ಲಿ : ಗುಡ್ಡದ ಅಬ್ಬರಕ್ಕೆ ಮಾತ್ರ ಅಬ್ಬರ, ಅಬ್ಬರ ತಾಳವೆಂದು ಹೆಸರು. 2. ವರ್ಣನಾತ್ಮಕ ಯಾ ಪ್ರಶಂಸಾತ್ಮಕವಾಗಿ ವೇಷದ ಕೆಲಸದ, ವೇಷಧಾರಿಯ, ಸನ್ನಿವೇಶದ ರಭಸ, ಉತ್ಸಾಹ, ಅಂದಗಳನ್ನು ಸೂಚಿಸುವ ಶಬ್ದ. ಆಟಕ್ಕೆ ಅಬ್ಬರ ತೋಟಕ್ಕೆ ಗೊಬ್ಬರ - ಗಾದೆ. ಕೇಳಿ ಸಮಗ್ರ ಯಕ್ಷಗಾನ ರಂಗ ಅಥವಾ ಕರಾವಳಿಯ ಎಲ್ಲ ತಿಟ್ಟುಗಳಿಗೆ ಅನ್ವಯ
45 ಅಬ್ಬರ ಕುಣಿತ 1. ರಭಸದ, ವೀರಾವೇಶದ ಕುಣಿತ. 2. ಬಣ್ಣದ ವೇಷದ ಪ್ರವೇಶ ನೃತ್ಯ. ಸಮಗ್ರ ಯಕ್ಷಗಾನ ರಂಗ ಅಥವಾ ಕರಾವಳಿಯ ಎಲ್ಲ ತಿಟ್ಟುಗಳಿಗೆ ಅನ್ವಯ
46 ಅಬ್ಬರತಾಳ ಅಬ್ಬರ' ವೆಂಬ ಬಡಿತ, ಮತ್ತು ಅದರ ತಾಳದಸ್ತೆಗಳು, ಸೊಲ್ಲುಗಳು. ತೆಂಕುತಿಟ್ಟಿನಲ್ಲಿ ಇದು ಮೊದಲನೆಯ, ಗುಡ್ಡದ ಅಬ್ಬರಕ್ಕೆ ಮಾತ್ರ ಸಂಬಂಧಿಸುತ್ತದೆ. ಸಮಗ್ರ ಯಕ್ಷಗಾನ ರಂಗ ಅಥವಾ ಕರಾವಳಿಯ ಎಲ್ಲ ತಿಟ್ಟುಗಳಿಗೆ ಅನ್ವಯ
47 ಅಬ್ಬರ ಬಿಡ್ತಿಗೆ ಅಬ್ಬರ' ಕ್ಕೆ ಸಂಬಂಧಿಸಿದ ಬಡಿತದ ಬಿಡ್ತಿಗೆಗಳು ಸಂಪೂರ್ಣವಾಗಿ ಯಾ ಅದರ ಖಂಡಗಳು. ಸಮಗ್ರ ಯಕ್ಷಗಾನ ರಂಗ ಅಥವಾ ಕರಾವಳಿಯ ಎಲ್ಲ ತಿಟ್ಟುಗಳಿಗೆ ಅನ್ವಯ
48 ಅಬ್ಬರ ಮುಕ್ತಾಯ ಅಬ್ಬರ' ದ ಮುಕ್ತಾಯ ಕ್ರಮ, ಅದರ ನುಡಿಕಾರಗಳು, ಸೊಲ್ಲು ಕಟ್ಟುಗಳು. ಬಡಗುತಿಟ್ಟು
49 ಅಭಿನಯ 1. ಸಾಮಾನ್ಯವಾಗಿ, ರಂಗದ ಪಾತ್ರಗಳ ಕೆಲಸ, ರಂಗ ವ್ಯವಹಾರ, ಪಾತ್ರಾಭಿನಯ. 2. ಪದ್ಯಗಳಿಗೆ ಸರಿಯಾಗಿ ಮಾಡುವ ಪದಾಭಿನಯ ಮತ್ತು ಪದ್ಯಾಭಿನಯ. ಮುದ್ರೆಗಳ ಮೂಲಕ, ಚಲನೆಯ ಮೂಲಕ ಅಭಿವ್ಯಕ್ತಿ. 3. ಕಥಾಸಂದರ್ಭದಲ್ಲೆ, ಒಂದು ಪಾತ್ರವು ಇನ್ನೊಂದು ಪಾತ್ರದೊಂದಿಗೆ, ನಿಜವನ್ನು ಮರೆ ಮಾಚಿ, ಬೇರೆ ರೀತಿಯಲ್ಲಿ ಹೇಳುವುದು ಯಾ ತೋರಿಸುವುದು. 'ಸುಳ್ಳು ಅಭಿನಯ', ವಂಚಕ ನಟನೆಯ ಸನ್ನಿವೇಶದ ಕೆಲಸ. ನಟನೆ ಸಮಗ್ರ ಯಕ್ಷಗಾನ ರಂಗ ಅಥವಾ ಕರಾವಳಿಯ ಎಲ್ಲ ತಿಟ್ಟುಗಳಿಗೆ ಅನ್ವಯ
50 ಅಭಿಷೇಕ 1. ವೇಷದ ಬೆನ್ನಿಗೆ ಕಟ್ಟುವ ಬೆನ್ನುತುಂಡು ಯಾನೆ ಬೆನ್ನು ಶಾಲು. 2. ಬಣ್ಣದ ವೇಷವು ಪೊರಪ್ಪಾಡು ಅಥವಾ ಪ್ರವೇಶ ನೃತ್ಯದಲ್ಲಿ ಅಭಿನಯಿಸುವ ಶಿವಪೂಜೆಯಲ್ಲಿ ಬರುವ ಅಭಿಷೇಕದ ಹಸ್ತಭಾವಗಳು, ಮುದ್ರೆಗಳು. ಉತ್ತರ ಕನ್ನಡತಿಟ್ಟು-ಬಡಗ ಬಡಗು