A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 318

Backtrace:

File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 319

Backtrace:

File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 320

Backtrace:

File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler

File: /Appdata/padakanaja.karnataka.gov.in/index.php
Line: 318
Function: require_once

Padakanaja - Dictionary View
ಅನಿಸಿಕೆ

ಪದಕೋಶ: ಯಕ್ಷಗಾನ ಪದಕೋಶ | ಕನ್ನಡ-ಕನ್ನಡ | ಪ್ರಕಾಶಕರು - ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರ, ಎಂ.ಜಿ.ಎಂ. ಕಾಲೇಜು (1994)

Show entries
ಕ್ರಮ ಸ೦ಖ್ಯೆ ಇಂಗ್ಲೀಷ್ ಪದ
(English Word)
ಕನ್ನಡ ಪದ
(Kannada Word)
ಕನ್ನಡ ಅರ್ಥ
(Kannada Meaning)
ವಿಷಯ ವರ್ಗೀಕರಣ
(Word Subject)
ವ್ಯಾಕರಣ ವಿಶೇಷ
(Word Grammer)
ಕನ್ನಡ ಉಚ್ಚಾರಣೆ
(Kannada Pronunciation)
ಪರ್ಯಾಯ ಪದ
(Word Synonyms)
ಇಂಗ್ಲೀಷ್ ಅರ್ಥ
(English Meaning)
ಸಂಕ್ಷಿಪ್ತ ವಿವರಣೆ
(Short Description)
ದೀರ್ಘ ವಿವರಣೆ
(Long Description)
ಆಡಳಿತಾತ್ಮಕ ಪದ
(Administrative Word)
21 ಅಡಿಕ್ಕೊಲ್ಲ ಒಂದು ಬಗೆಯ ಕಟ್ಟುಹಾಸ್ಯ. ಅಂಡುಕುಟ್ಟಿ ತೆಂಕುತಿಟ್ಟು
22 ಅಡುಗೆ ಮೇಳದ ತಿರುಗಾಟದಲ್ಲಿಯ ಅಡುಗೆ ವ್ಯವಸ್ಥೆ. ಹಿಂದೆ ಕೆಲವು ಮೇಳಗಳಲ್ಲಿ ಎರಡು ಅಡುಗೆ ವ್ಯವಸ್ಥೆಗಳಿದ್ದುವು. ಬ್ರಾಹ್ಮಣರ ಅಡುಗೆ, ಸಸ್ಯಾಹಾರ. ಇತರರ ಅಡುಗೆ ಮೀನು ಪದಾರ್ಥ ಮೊದಲಾದವು. ಈಗ ಒಂದೇ ಅಡುಗೆಯಿದ್ದು ಸಸ್ಯಾಹಾರದ್ದೆ ಆಗಿದೆ. ಸಮಗ್ರ ಯಕ್ಷಗಾನ ರಂಗ ಅಥವಾ ಕರಾವಳಿಯ ಎಲ್ಲ ತಿಟ್ಟುಗಳಿಗೆ ಅನ್ವಯ
23 ಅಡುಗೆಯವ ಅಡುಗೆ ಮಾಡುವವನು. ಹಿಂದಿನ ಬಯಲಾಟಗಳ ತಿರುಗಾಟಗಳ ಕ್ರಮದಂತೆ ಈತನು ಮುಂದಿನ ಆಟದ ತಾಣಕ್ಕೆ ಮೇಳದ ಇತರರಿಗಿಂತ ಮೊದಲೇ ತಲುಪಿ ಕೆಲಸ ಆರಂಭಿಸಬೇಕು. ಅಡ್ಡಹೊರೆ (ಅಡ್ಡೋರೆ) ಆಳುಗಳು ಈತನಿಗೆ ಸಹಾಯಕರು. ಪಡಿ, ಪಾತ್ರೆ ಸಾಮಾನು ಸಮಗ್ರ ಯಕ್ಷಗಾನ ರಂಗ ಅಥವಾ ಕರಾವಳಿಯ ಎಲ್ಲ ತಿಟ್ಟುಗಳಿಗೆ ಅನ್ವಯ
24 ಅಡ್ಡ ಕೇದಗೆ ಸ್ತ್ರೀ ವೇಷದ ಒಂದು ಆಭರಣ, ಮುಡಿಯ ಮೇಲೆ ಅಡ್ಡಲಾಗಿ ಧರಿಸುವಂತಹದು. ಸಮಗ್ರ ಯಕ್ಷಗಾನ ರಂಗ ಅಥವಾ ಕರಾವಳಿಯ ಎಲ್ಲ ತಿಟ್ಟುಗಳಿಗೆ ಅನ್ವಯ
25 ಅಡ್ಡಚೌಕಿ ಚೌಕಿ ಅಥವಾ ಬಣ್ಣದ ಮನೆಯಲ್ಲಿ ಹಾಸ್ಯಗಾರನು ಕುಳಿತುಕೊಳ್ಳುವ ಸ್ಥಳ. ಹಾಸ್ಯಗಾರನ ಚೌಕಿ. ಇದು ಚೌಕಿಯ ದೇವರಿಗೆ ಸರಿ ಎದುರಾಗಿ, ಅದರ ಇಕ್ಕಡೆ ಇರುವ ವೇಷಧಾರಿಗಳ ಸಾಲುಗಳ ಕೊನೆಗೆ ಇರುತ್ತದೆ. ಇದು ಸಾಲಿನಲ್ಲಿರುವುದಿಲ್ಲ. ಅಡ್ಡವಾಗಿರುತ್ತದೆ. ಹಾಗಾಗಿ ಅಡ್ಡಚೌಕಿ. ಹಾಸ್ಯಗಾರನು, ಒಂದು ಅರ್ಥದಲ್ಲಿ ವೇಷಧಾರಿಯಲ್ಲ. ಅವನದು ಸರ್ವವ್ಯಾಪಿಯಾದ ಹೆಚ್ಚುವರಿ ಸ್ಥಾನವೆಂಬುದರಿಂದ ಹೀಗಿರಬಹುದು. ಆತನು ಆಗಾಗ ರಂಗಕ್ಕೆ ಹೋಗುತ್ತ ಇರಬೇಕಾದುದರಿಂದ ಅವನ ಸ್ಥಳವು ರಂಗಕ್ಕೆ ಹತ್ತಿರ ಇರಬೇಕಾದುದೂ ಅಗತ್ಯ. ಬಡಗುತಿಟ್ಟಿನಲ್ಲಿ ಅಡ್ಡಚೌಕ (ಕಿ) ಎಂದರೆ, ರಂಗಸ್ಥಳದ ಹಿಂಬದಿಯಲ್ಲಿ ವೇಷಧಾರಿಗಳ ವಿಶ್ರಾಂತಿಗಾಗಿ ಹಾಕಿರುವ ಚಾಪೆ. ಇದು ಹಾಸ್ಯಗಾರನ ಚೌಕಿಗೆ ತಾಗಿಕೊಂಡೇ ಇರುತ್ತದೆ. ಚೌಕಿ, ಹಾಸ್ಯಗಾರನ ಚಾಪೆ ಸಮಗ್ರ ಯಕ್ಷಗಾನ ರಂಗ ಅಥವಾ ಕರಾವಳಿಯ ಎಲ್ಲ ತಿಟ್ಟುಗಳಿಗೆ ಅನ್ವಯ
26 ಅಡ್ಡನಾಮ ವೇಷದ ಹಣೆಯಲ್ಲಿ ಬರೆಯುವ ಅಡ್ಡನಾಮ. ತ್ರಿಪುಂಡ್ರ ಅಥವಾ ಏಕ ಪುಂಡ್ರ. ಇದು ಬಿಳಿ ಅಥವಾ ಕೆಂಪು ಬಣ್ಣದ್ದಾಗಿದ್ದು ಅದರ ಸುತ್ತ ಸೀಮೆಯ ರೇಖೆ ಇರುತ್ತದೆ. ನಾಮದ ಗಾತ್ರದಲ್ಲಿ ಪಾತ್ರಾನುಗುಣವಾಗಿ ವ್ಯತ್ಯಾಸ ಇರುವುದು. ಹಿಂದೆ ಸ್ತ್ರೀ ಪಾತ್ರಗಳೆಲ್ಲ ಅಡ್ಡನಾಮ (ಅಡ್ಡ ಕುಂಕುಮ) ವನ್ನೆ ಧರಿಸುತ್ತಿದ್ದರು. ಅದರ ಕೆಳಗೆ ಬಣ್ಣದ ಅಥವಾ ಬೇಗಡೆಯ ಬೊಟ್ಟು ಇರುತ್ತಿತ್ತು. ದ್ರೋಣ, ಕರ್ಣ, ಋಷಿಗಳು, ಶಿವ, ಇವೆಲ್ಲ ಅಡ್ಡನಾಮದ ವೇಷಗಳು. ಅರ್ಧ ಚಂದ್ರಾಕೃತಿನಾಮ. ಗೀರುಗಂಧ ಸಮಗ್ರ ಯಕ್ಷಗಾನ ರಂಗ ಅಥವಾ ಕರಾವಳಿಯ ಎಲ್ಲ ತಿಟ್ಟುಗಳಿಗೆ ಅನ್ವಯ
27 ಅಡ್ಡಪೆಟ್ಟಿಗೆ ಸಾಂಪ್ರದಾಯಿಕ ಮೇಳದ ತಿರುಗಾಟದ ಹೊರೆಗಳಲ್ಲಿ ಒಂದು. ಅಡುಗೆಗೆ ಸಂಬಧಿಸಿದ ಪಾತ್ರೆ, ಸಾಮಾನುಗಳನ್ನು ಎರಡು ಹೊರೆಗಳನ್ನಾಗಿ ಕಟ್ಟಿ, ದೊಡ್ಡ ಸಲಿಕೆ ಅಥವಾ ಉರುಟು ದಿಮ್ಮಿಗೆ ಎರಡು ತುದಿಯಲ್ಲಿ ಕಟ್ಟಿ, ಭುಜದ ಮೇಲೆ ಸ್ವಲ್ಪ ಅಡ್ಡಲಾಗಿಟ್ಟು ಹೊರುವ ಹೊರೆ. ಎರಡು ಬದಿಗಳಿಗೆ ಚೆರಿಗೆಗಳನ್ನು ಕಟ್ಟಿ ಸಮತೋಲನಗೊಳಿಸುವರು. ಅಡ್ಡಹೊರೆ ಸಮಗ್ರ ಯಕ್ಷಗಾನ ರಂಗ ಅಥವಾ ಕರಾವಳಿಯ ಎಲ್ಲ ತಿಟ್ಟುಗಳಿಗೆ ಅನ್ವಯ
28 ಅಡ್ಡಸೋಗು / ಅಡ್ಡಹಾಸ್ಯ ಆಟದ ಮಧ್ಯೆ, ಕತೆಯನ್ನು ನಿಲ್ಲಿಸಿ, ಆಡಿತೋರಿಸುವ ಹಾಸ್ಯ ಪ್ರಸಂಗಗಳು. ಇವು ತೆಂಕುತಿಟ್ಟು, ಬಡಗುತಿಟ್ಟುಗಳ ಪೂರ್ವರಂಗದ ಕಟ್ಟು ಹಾಸ್ಯಗಳ ಹಾಗೆ, ಆದರೆ ಪ್ರದರ್ಶನದ ಮಧ್ಯೆ ಬರುತ್ತವೆ. ಸನ್ಯಾಸಿ, ಪೂಜಾರಿ, ದಾಸಯ್ಯ, ಹಾಲಕ್ಕಿ ಮೊದಲಾಗಿ ಅಡ್ಡಸೋಗುಗಳಿರುತ್ತವೆ. ಉತ್ತರ ಕನ್ನಡತಿಟ್ಟು-ಬಡಗ ಬಡಗು / ಗಟ್ಟದಕೋರೆ ಸಂಪ್ರದಾಯ
29 ಅಡ್ಡಹೊರೆ / ಅಡ್ಡೋರೆ ಸಾಂಪ್ರದಾಯಿಕ ಮೇಳದ ತಿರುಗಾಟದ ಹೊರೆಗಳಲ್ಲಿ ಒಂದು. ಅಡುಗೆಗೆ ಸಂಬಧಿಸಿದ ಪಾತ್ರೆ, ಸಾಮಾನುಗಳನ್ನು ಎರಡು ಹೊರೆಗಳನ್ನಾಗಿ ಕಟ್ಟಿ, ದೊಡ್ಡ ಸಲಿಕೆ ಅಥವಾ ಉರುಟು ದಿಮ್ಮಿಗೆ ಎರಡು ತುದಿಯಲ್ಲಿ ಕಟ್ಟಿ, ಭುಜದ ಮೇಲೆ ಸ್ವಲ್ಪ ಅಡ್ಡಲಾಗಿಟ್ಟು ಹೊರುವ ಹೊರೆ. ಎರಡು ಬದಿಗಳಿಗೆ ಚೆರಿಗೆಗಳನ್ನು ಕಟ್ಟಿ ಸಮತೋಲನಗೊಳಿಸುವರು. ಸಮಗ್ರ ಯಕ್ಷಗಾನ ರಂಗ ಅಥವಾ ಕರಾವಳಿಯ ಎಲ್ಲ ತಿಟ್ಟುಗಳಿಗೆ ಅನ್ವಯ
30 ಅಡ್ಡಹೊರೆಯವನು ಅಡ್ಡಹೊರೆಯನ್ನು ಹೊರುವವನು. ಈತನು ಆಟ ಮುಗಿಯುವ ಮೊದಲೇ ಅಡುಗೆಯವನೊಂದಿಗೆ ಹೊರಟು, ಮುಂದಿನ ಬಿಡಾರಕ್ಕೆ ತಲಪಬೇಕು. ಇವನು ಹಗಲು ಅಡುಗೆಗೆ ಮತ್ತು ರಾತ್ರಿ ಬಿಸಿ ನೀರು ತಯಾರಿಸಲು ಅಡುಗೆಯವನಿಗೆ ಸಹಾಯಕನಾಗಿರುತ್ತಾನೆ. ಮುಂದಿನ ಬಿಡಾರಕ್ಕೆ ಬರಲು, ಮೇಳದವರಿಗೆ ದಾರಿ ಸರಿಯಾಗಿ ಗೊತ್ತಾಗುವಂತೆ ಅಲ್ಲಲ್ಲಿ, ತಿರುಗು ರಸ್ತೆಗಳಲ್ಲಿ ಇವನು ಸೊಪ್ಪು ಹಾಕುತ್ತ ಹೋಗಬೇಕು. ಈಗ ವಾಹನ ವ್ಯವಸ್ಥೆಗಳಿರುವುದರಿಂದ ಅಡ್ಡಹೊರೆಯ ಕ್ರಮವಿಲ್ಲ. ದಾರಿಸೊಪ್ಪು ಸಮಗ್ರ ಯಕ್ಷಗಾನ ರಂಗ ಅಥವಾ ಕರಾವಳಿಯ ಎಲ್ಲ ತಿಟ್ಟುಗಳಿಗೆ ಅನ್ವಯ