A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 318

Backtrace:

File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 319

Backtrace:

File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 320

Backtrace:

File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler

File: /Appdata/padakanaja.karnataka.gov.in/index.php
Line: 318
Function: require_once

Padakanaja - Dictionary View
ಅನಿಸಿಕೆ

ಪದಕೋಶ: ಯಕ್ಷಗಾನ ಪದಕೋಶ | ಕನ್ನಡ-ಕನ್ನಡ | ಪ್ರಕಾಶಕರು - ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರ, ಎಂ.ಜಿ.ಎಂ. ಕಾಲೇಜು (1994)

Show entries
ಕ್ರಮ ಸ೦ಖ್ಯೆ ಇಂಗ್ಲೀಷ್ ಪದ
(English Word)
ಕನ್ನಡ ಪದ
(Kannada Word)
ಕನ್ನಡ ಅರ್ಥ
(Kannada Meaning)
ವಿಷಯ ವರ್ಗೀಕರಣ
(Word Subject)
ವ್ಯಾಕರಣ ವಿಶೇಷ
(Word Grammer)
ಕನ್ನಡ ಉಚ್ಚಾರಣೆ
(Kannada Pronunciation)
ಪರ್ಯಾಯ ಪದ
(Word Synonyms)
ಇಂಗ್ಲೀಷ್ ಅರ್ಥ
(English Meaning)
ಸಂಕ್ಷಿಪ್ತ ವಿವರಣೆ
(Short Description)
ದೀರ್ಘ ವಿವರಣೆ
(Long Description)
ಆಡಳಿತಾತ್ಮಕ ಪದ
(Administrative Word)
101 ಆಟದವ ಆಟಕ್ಕೆ ಸಂಬಂಧಿಸಿದವನು. ಯಕ್ಷಗಾನ ಕಲಾವಿದ, ಸಿಬ್ಬಂದಿ ಸಹ. ಇದು ಕೆಲವೊಮ್ಮೆ ನಿಂದಾರ್ಥಕವಾಗಿಯೂ ಬಳಕೆಯಾಗುವುದುಂಟು. ಸಮಗ್ರ ಯಕ್ಷಗಾನ ರಂಗ ಅಥವಾ ಕರಾವಳಿಯ ಎಲ್ಲ ತಿಟ್ಟುಗಳಿಗೆ ಅನ್ವಯ
102 ಆಟದವರ ಗಾಡಿ ಆಟದ ಮೇಳದ ಸಾಮಗ್ರಿ ಸಾಗಿಸುವ ಎತ್ತಿನ ಗಾಡಿ. ಮೇಳದ ಗಾಡಿ. ಆಟದ ಗಾಡಿ ಸಮಗ್ರ ಯಕ್ಷಗಾನ ರಂಗ ಅಥವಾ ಕರಾವಳಿಯ ಎಲ್ಲ ತಿಟ್ಟುಗಳಿಗೆ ಅನ್ವಯ
103 ಆಟದ ಸೂಳೆ ಸ್ತ್ರೀವೇಷ, ಮುಖ್ಯವಾಗಿ, ಸಭಾಲಕ್ಷಣದಲ್ಲಿ ಬರುವ ಮುಖ್ಯ ಸ್ತ್ರೀವೇಷ. ಈ ಶಬ್ದವು ಹೀನಾರ್ಥಕವೆಂದು ಕೆಲವರು ಭಾವಿಸಿದಂತಿದೆ. ಆದರೆ, ಇದು ಕೇವಲ ವರ್ಣನಾತ್ಮಕ ಮಾತ್ರವಾಗಿದೆ. 'ಸೂಳೆ' ಎಂದರೆ ನರ್ತಕಿ ಎಂದಷ್ಟೆ ಅರ್ಥ. ಹಿಂದೆ ನರ್ತನ ವೃತ್ತಿಯ ತಂಡಗಳಿಗೆ ಸೂಳೆಯರ ಮೇಳವೆಂದೇ ಹೇಳುತ್ತಿದ್ದರು. ಅದರಿಂದ ಬಂದ ಪದಪ್ರಯೋಗ. ಆಟದಸೂಳೆ ಎಂದರೆ, ಗಂಡಸು ಧರಿಸುವ ವೇಷ, ನಿಜಸೂಳೆ (ಸ್ತ್ರೀ ನರ್ತಕಿ) ಅಲ್ಲವೆಂದೂ ಇದಕ್ಕೆ ಅರ್ಥ. ಬಡಗುತಿಟ್ಟು
104 ಆಟದ ಹುಚ್ಚು 1. ಆಟ ನೋಡುವ ಆಸಕ್ತಿ. 2. ಅತಿರೇಕದ ಆಸಕ್ತಿ. ಕಲಾವಿದರ ನೆಲೆಯಲ್ಲಾದರೆ ಪ್ರಾವಿಣ್ಯವಿಲ್ಲದ, ಆಸಕ್ತಿ ಮಾತ್ರ ಎಂದರ್ಥ. ಸಮಗ್ರ ಯಕ್ಷಗಾನ ರಂಗ ಅಥವಾ ಕರಾವಳಿಯ ಎಲ್ಲ ತಿಟ್ಟುಗಳಿಗೆ ಅನ್ವಯ
105 ಆಟೀನ್ ಅರಳಿ ಎಲೆ ಆಕಾರದ ಬರವಣಿಗೆ. ಇಸ್ಪೀಟು ಆಟದ ಆಟೀನ್ (ಹಾರ್ಟ್ಸ್) ನಿಂದ ಈ ಹೆಸರು. ಇದನ್ನು ಇಂದ್ರಜಿತು ವೇಷದ ಹಣೆಯಲ್ಲಿ ಬರೆಯುವರು. ಅಶ್ವತ್ಥನ ಎಲೆ ತೆಂಕುತಿಟ್ಟು
106 ಆಡಿಕೆ 1. ವೇಷಕ್ಕೆ ಕಟ್ಟಿದ ಸಾಮಗ್ರಿಯ ಸಡಿಲುತನದ ಹದ. 2. ಕುಣಿತದಲ್ಲಿ ಅಂಗಾಲುಗಳ ಚಲನ, ಬಳುಕು, ಆಡುವಿಕೆ. "ಈತನ ಕುಣಿತದಲ್ಲಿ ಅಡಿಕೆ ಚೆನ್ನಾಗಿದೆ." 3. ಮೇಳಕ್ಕೆ ಬಿಡುವು ಇರುವ ಅವಧಿ. ಹಬ್ಬದ ರಜೆ ಇತ್ಯಾದಿ ಬಡಗುತಿಟ್ಟು
107 ಆಡಿಸುವುದು 1. ಆಟದ ಮೇಳವನ್ನು ಕರೆಸಿ, ಹರಕೆಗಾಗಿ ಅಥವಾ ಕರಾರಿನ ರೂಪದಲ್ಲಿ ಗಳಿಕೆಗಾಗಿ, ಪ್ರದರ್ಶನ ವ್ಯವಸ್ಥೆಗೊಳಿಸುವುದು. ಹೀಗೆ ಮಾಡುವವನಿಗೆ ಆಡಿಸುವವನೆನ್ನುವರು. 2. ಭಾಗವತನು ಆಟವನ್ನು ನಿರ್ವಹಿಸುವುದು, ರಂಗ ನಿರ್ದೇಶನ ಕಾರ್ಯ. ಉದಾ : "ಪದ ಹೇಳಿದರೆ ಸಾಲದು, ಆಡಿಸಲು ಗೊತ್ತಿರಬೇಕು." "ಈ ಭಾಗವತರು ಆಟ ಆಡಿಸುವುದರಲ್ಲಿ ಗಟ್ಟಿಗ." ಇತ್ಯಾದಿ. ಸಮಗ್ರ ಯಕ್ಷಗಾನ ರಂಗ ಅಥವಾ ಕರಾವಳಿಯ ಎಲ್ಲ ತಿಟ್ಟುಗಳಿಗೆ ಅನ್ವಯ
108 ಆದಿಝಂಪೆ ನಿಧಾನ ಝಂಪೆಯ ನಾಮಾಂತರ. ನಿಧಾನ ಝಂಪೆ, ಉದ್ದ ಝಂಪೆ ಉತ್ತರ ಕನ್ನಡತಿಟ್ಟು-ಬಡಗ ಬಡಗು
109 ಆದಿತಾಳ ಎಂಟು ಮಾತ್ರೆಗಳ ತಾಳ; ಒಂದು ದ್ರುತ, ಎರಡು ಲಘು; ರಂಗದಲ್ಲಿ ಬಳಕೆಯಾಗುವುದು ಕಡಿಮೆಯಾಗಿದೆ. ಇದರ ಬಡಿತ ಮತ್ತು ನುಡಿತಗಳು, ವಿಶಿಷ್ಟವಾದ ನಿಶ್ಚಿತವಾದ ವಿನ್ಯಾಸಗಳಿಗೇ ಹೊಂದಿಕೊಂಡಿವೆ. ಸರಳ ನುಡಿತಗಳು ಸಾಧ್ಯವಿದ್ದರೂ, ಸಂಪ್ರದಾಯವಿಲ್ಲ. ಹಾಗಾಗಿ, ಬಳಕೆ ಕಡಮೆಯಾಗುತ್ತಿದೆ. ಸ್ತುತಿ ಪದ್ಯಗಳಿಗೆ ಬಳಕೆ ಇದೆ. ತೆಂಕುತಿಟ್ಟಿನಲ್ಲಿ, ಹದಿನಾರು ಮಾತ್ರಾಕಾಲದ ಪದ್ಧತಿಯಲ್ಲಿ ಬಳಕೆ ಇದೆ. ಕಾರಣ ಇದರ ಮೂಲ ಪೆಟ್ಟುಗಳು (ಪಾಠಾಕ್ಷರಗಳು) ಎರಡು ಆವರ್ತಗಳ ಅಳತೆಯಲ್ಲಿವೆ. ತಾಳದಸ್ತೆ- (ಬಡಗುತಿಟ್ಟು) ಮೂರು ದೊಡ್ಡ ಘಾತಗಳು ಮಾತ್ರ. ತಾ ಹತ್ತ ದಿಂದಾ ದಿಕುತಕ | ತಾ ತೋಂ | ತದ್ದಿನ್ನಕ. ಮುಕ್ತಾಯ : ತಾಕಿಟ | ಕಿಟತಕ | ತೊದಿನಕ ದಿಕುತಕ, ದಿನ್ನಾ ಕಡ್ತಧಿಂ | ದಿನ್ನಾಕಡ್ತಧಿಂ | ದಿನ್ನಾಕಡ್ತಧಿಂ || ತೆಂಕುತಿಟ್ಟು : ಐದು ದೊಡ್ಡಘಾತ. ತದ್ದಿದ್ದತ್ತಾ | ಧಿಂದತ್ತಾ, ದಿತ್ತಾಕಿಡತಕ | ತರಿಕಿಟತಾಂ ಬಿಡ್ತಿಗೆ : ಧೂಂ ಧೂಂ | ಕಿಟಾಂ ಕಿಟಧೀಂ | ಕಿಟಾಂ - ಮೂರುಬಾರಿ. ಧಿನ್ನಕ | ತರಿಕಿಟ | ಕಿಟತಕ | ತರಿಕಿಟ, ದದ್ದಿಂ | ದತ್ತಾ | ಧಿಂ ದತ್ತಾ | ದದಿಗಿಣತೊ | ದದಿಗಿಣತೊ | ದದಿಗಿಣತೊ || ಈ ತಾಳದ ಪದ್ಯಗಳನ್ನು, ಮಧ್ಯದಿಂದ ಏಕತಾಳದಲ್ಲೂ, ಕೊನೆಗೆ ತಿತ್ತಿತ್ತೈ (ಕೋರೆತಾಳ) ದಲ್ಲೂ ಹಾಡುವ ಕ್ರಮವಿದೆ. ಒಂಬತ್ತು ಮುಕ್ತಾಯದ ಬಾರಿಸುವಿಕೆಯೂ ಆದಿತಾಳದ ಪದ್ಯಗಳ ಹಾಡುವಿಕೆಯಲ್ಲಿನ ಒಂದು ವಿಶೇಷ. ಇದು ಕೆಲವು ಪದ್ಯಗಳಿಗೆ ಮಾತ್ರ ಇರುತ್ತದೆ. ಸಮಗ್ರ ಯಕ್ಷಗಾನ ರಂಗ ಅಥವಾ ಕರಾವಳಿಯ ಎಲ್ಲ ತಿಟ್ಟುಗಳಿಗೆ ಅನ್ವಯ
110 ಆದಿತ್ರಿವುಡೆ ತ್ವರಿತ ತ್ರಿವುಡೆ ತಾಳದ ನಾಮಾಂತರ ಗಿಡ್ಡ ತ್ರಿವುಡೆ. ನಿಧಾನತ್ರಿವುಡೆ, ಉದ್ದತ್ರಿವುಡೆ ಉತ್ತರ ಕನ್ನಡತಿಟ್ಟು-ಬಡಗ ಬಡಗು