A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 318

Backtrace:

File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 319

Backtrace:

File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 320

Backtrace:

File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler

File: /Appdata/padakanaja.karnataka.gov.in/index.php
Line: 318
Function: require_once

Padakanaja - Dictionary View
ಅನಿಸಿಕೆ

ಪದಕೋಶ: ಯಕ್ಷಗಾನ ಪದಕೋಶ | ಕನ್ನಡ-ಕನ್ನಡ | ಪ್ರಕಾಶಕರು - ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರ, ಎಂ.ಜಿ.ಎಂ. ಕಾಲೇಜು (1994)

Show entries
ಕ್ರಮ ಸ೦ಖ್ಯೆ ಇಂಗ್ಲೀಷ್ ಪದ
(English Word)
ಕನ್ನಡ ಪದ
(Kannada Word)
ಕನ್ನಡ ಅರ್ಥ
(Kannada Meaning)
ವಿಷಯ ವರ್ಗೀಕರಣ
(Word Subject)
ವ್ಯಾಕರಣ ವಿಶೇಷ
(Word Grammer)
ಕನ್ನಡ ಉಚ್ಚಾರಣೆ
(Kannada Pronunciation)
ಪರ್ಯಾಯ ಪದ
(Word Synonyms)
ಇಂಗ್ಲೀಷ್ ಅರ್ಥ
(English Meaning)
ಸಂಕ್ಷಿಪ್ತ ವಿವರಣೆ
(Short Description)
ದೀರ್ಘ ವಿವರಣೆ
(Long Description)
ಆಡಳಿತಾತ್ಮಕ ಪದ
(Administrative Word)
81 ಅರ್ಧನಾರಿ ಸಭಾಲಕ್ಷಣ ಪೂರ್ವರಂಗ ಪ್ರಯೋಗದಲ್ಲಿ ಬರುವ ಒಂದು ವೇಷ. ಇದು ಚಂದಭಾಮಾ ಸ್ತ್ರೀವೇಷಗಳ ಅನಂತರ ಬರುತ್ತದೆ. ಇದರ ಪ್ರಯೋಗದ ಕುರಿತು ಎರಡು ಅಭಿಪ್ರಾಯಗಳಿವೆ : 1. ಇತ್ತೀಚೆಗಿನ ವರೆಗೆ ಪ್ರಯೋಗದಲ್ಲಿದ್ದ ಕ್ರಮದಂತೆ, ಅರ್ಧನಾರಿ, ಎಂದರೆ ಸ್ತ್ರೀವೇಷ, ಪಾರ್ವತಿ ವೇಷ, ಅರ್ಧನಾರಿ ಸನ್ನಿವೇಶದಲ್ಲಿ ಈಶ್ವರನೂ, ಪಾರ್ವತಿಯೂ ಒಬ್ಬರು ಇನ್ನೊಬ್ಬರ ವಿರಹದಿಂದ, ಹುಡುಕುವುದಿದೆ. ರಂಗದಲ್ಲಿ ಕೋಡಂಗಿ ಅಥವಾ ಮಾಧವರಾಯ (?) ನೆಂಬ ಹಾಸ್ಯವೇಷದೊಂದಿಗೆ ವಿಚಾರಿಸುತ್ತಾರೆ. ಪರ್ಯಾಯಕ್ರಮದಿಂದ ಎರಡೂ ವೇಷಗಳು ರಂಗಕ್ಕೆ ಬಂದು ನಿರ್ಗಮಿಸುತ್ತವೆ. ಕೊನೆಗೆ ಎರಡೂ ರಂಗಕ್ಕೆ ಬಂದು ನಿರ್ಗಮಿಸಬೇಕು. (ಸಭಾಲಕ್ಷಣ : ಪಾವಂಚೆ ಗುರುರಾವ್ ಪ್ರತಿ. ಸಭಾಲಕ್ಷಣ. ದಿ. ಕುಕ್ಕಿಲ ಕೃಷ್ಣಭಟ್ಟ ಸಂಪಾದಿತ ಪಾರ್ತಿಸುಬ್ಬನ ಯಕ್ಷಗಾನಗಳು : 1975) . 2. ಇನ್ನೊಂದು ಅಭಿಪ್ರಾಯದಂತೆ ಈ ಶತಮಾನದ ಆರಂಭದವರೆಗೂ ಅರ್ಧನಾರಿ ಎಂಬುದು ಅರ್ಧನಾರೀಶ್ವರ ವೇಷ, ಶಿವಪಾರ್ವತಿ ವೇಷಗಳ ಜೋಡಣೆ. ಒಂದು ಬದಿಗೆ ಮುಡಿ, ಮೀಸೆ, ದಗಲೆ, ಕಚ್ಚೆ ಇನ್ನೊಂದು ಭಾಗಕ್ಕೆ ತುರುಬು, ಮೂಗುತಿ, ದಗಲೆ, ಸೀರೆ - ಹೀಗೆ ಜೋಡಿಸಿ ತಯಾರಿಸುವ ವೇಷ. ಪಾರ್ವತಿಯ ಪಾತ್ರದ ಪದ್ಯಗಳಿಗೆ ಒಂದು ಭಾಗವನ್ನು ತೋರಿಸಿ ಕುಣಿಯುವುದು, ಶಿವನ ಪಾತ್ರದ ಪದ್ಯಗಳಿಗೆ ತಿರುಗಿ ಮತ್ತೊಂದು ಭಾಗ ತೋರಿಸಿ ಕುಣಿಯುವುದು ತೆರೆ ಹಿಡಿದುಕೊಂಡೇ ಇರಬೇಕು. ಈ ಕ್ರಮವು ಬದಲಾಗಿ, ಎರಡು ಪ್ರತ್ಯೇಕ ವೇಷಗಳು ಬಳಕೆಗೆ ಬಂದುವು. (ಮುಳಿಯ ಮಹಾಬಲ ಭಟ್ಟರು ನೀಡಿದ ಮಾಹಿತಿ : ನವೆಂಬರ 1991) ಸಮಗ್ರ ಯಕ್ಷಗಾನ ರಂಗ ಅಥವಾ ಕರಾವಳಿಯ ಎಲ್ಲ ತಿಟ್ಟುಗಳಿಗೆ ಅನ್ವಯ
82 ಅರ್ಧಪೆಟ್ಟು ಚೆಂಡೆ, ಮದ್ದಲೆಗಳ ಬಾರಿಸುವಿಕೆಯ ಪೆಟ್ಟಿನ ಒಂದು ವಿಧ. ಇಡಿ ಪೆಟ್ಟಿನ ಅರ್ಧದಷ್ಟು ನಾದವೆಂದರ್ಥ. ಅರೆಪೆಟ್ಟು. ಸಮಗ್ರ ಯಕ್ಷಗಾನ ರಂಗ ಅಥವಾ ಕರಾವಳಿಯ ಎಲ್ಲ ತಿಟ್ಟುಗಳಿಗೆ ಅನ್ವಯ
83 ಅರ್ಧಮುಕ್ತಾಯ ಪದ್ಯದ ಕೊನೆಯಲ್ಲಿ ಬಾರಿಸುವ ಮುಕ್ತಾಯವನ್ನು ಹ್ರಸ್ವಗೊಳಿಸಿ, ಅರ್ಧ ಅಥವಾ ಅಂಶತಃ ಬಾರಿಸುವುದು. ಉದಾ : ಏಕತಾಳದ ಮುಕ್ತಾಯ : 1 ತದ್ದಿಂದತ್ತಾ | 2 ಧಿಂದತ್ತಾ | 3 ದದಿಗಿಣತೊ | 4 ದದಿಗಿಣತೊ | 5 ದದಿಗಿಣ ತೊಂ | - ಇದರಲ್ಲಿ -3, 4, 5ನ್ನು ಯಾ 4,5ನ್ನು ಮಾತ್ರ ಬಾರಿಸುವುದು. ಇದೊಂದು ಹೊಂದಾಣಿಕೆ. ಸಮಗ್ರ ಯಕ್ಷಗಾನ ರಂಗ ಅಥವಾ ಕರಾವಳಿಯ ಎಲ್ಲ ತಿಟ್ಟುಗಳಿಗೆ ಅನ್ವಯ
84 ಅರ್ಧವೀಳ್ಯ ವೀಳ್ಯವೆಂದರೆ ಆಟಕ್ಕೆ ನೀಡುವ ಸಂಭಾವನೆ, ನಿಗದಿತ ಮೊತ್ತ. ಅದರ ಅರ್ಧದಷ್ಟನ್ನು ಮಾತ್ರ ನೀಡುವುದು ಅರ್ಧವೀಳ್ಯ. ಮಳೆ ಮೊದಲಾದ ಪ್ರತಿಬಂಧಕಗಳಿಂದ ಆಟಕ್ಕೆ ಅಡ್ಡಿಯಾದರೆ, ಅಂದರೆ, ಸಭಾಲಕ್ಷಣ ಮಾತ್ರ ಪ್ರದರ್ಶನವಾದರೆ, ಅರ್ಧವೀಳ್ಯ. ಪ್ರಸಂಗದ ಮೊದಲ ದೃಶ್ಯ, ಒಡ್ಡೋಲಗ ಆರಂಭವಾದರೆ ಆಟ ಆರಂಭವಾದಂತೆ. ಆಗ ಇಡಿ ವೀಳ್ಯ ಕೊಡಬೇಕು. ಸಭಾಲಕ್ಷಣವನ್ನು ಆರಂಭಿಸಲಾಗದಷ್ಟು ಅಡ್ಡಿ ಉಂಟಾದರೆ, ಪಡಿ ಮಾತ್ರ. ಜೋಡಾಟದಲ್ಲಿ ಸೋತಮೇಳಕ್ಕೆ ಅರ್ಧ ವೀಳ್ಯವೆಂಬ ನಿಯಮವು ಕೆಲವು ಕಾಲ ಜಾರಿಯಲ್ಲಿತ್ತು. ವೀಳ್ಯ ಸಮಗ್ರ ಯಕ್ಷಗಾನ ರಂಗ ಅಥವಾ ಕರಾವಳಿಯ ಎಲ್ಲ ತಿಟ್ಟುಗಳಿಗೆ ಅನ್ವಯ
85 ಅಲಂಕಾರವೇಷ ಜನಪದ ಪ್ರಶಂಸಾತ್ಮಕ ಶಬ್ದ, ಪಾರಿಭಾಷಿಕವಲ್ಲ. ಬಣ್ಣ, ಹಾಸ್ಯ ಪಾತ್ರಗಳನ್ನುಳಿದು, ಬಾಕಿವೇಷಗಳ ಕುರಿತು ಬಳಕೆ. ಸೊಗಸಾದ ಮುಖವರ್ಣಿಕೆ. ಅಚ್ಚುಕಟ್ಟಾದ ವೇಷ ಧರಿಸುವಿಕೆ ಇದ್ದಾಗ ಹೇಳುವ ಮಾತು. ಸಮಗ್ರ ಯಕ್ಷಗಾನ ರಂಗ ಅಥವಾ ಕರಾವಳಿಯ ಎಲ್ಲ ತಿಟ್ಟುಗಳಿಗೆ ಅನ್ವಯ
86 ಅಶರೀರವಾಣಿ ಕಥಾ ಸಂದರ್ಭದಲ್ಲಿ ಅಶರೀರವಾಣಿಯ ಸನ್ನಿವೇಶ ಇದ್ದಾಗ, (ಉದಾ - ಭೀಷ್ಮ ವಿಜಯದಲ್ಲಿ ಭೀಷ್ಮ - ಪರಶುರಾಮರ ಯುದ್ಧ ಸಂದರ್ಭ) ಚೌಕಿಯಲ್ಲಿ, ಭಾಗವತರ ಹಿಂಬದಿಯಲ್ಲಿ ನಿಂತು (ಇತರರು, ಸಾಮಾನ್ಯವಾಗಿ ಹಾಸ್ಯಗಾರ) ಹೇಳುವ ಮಾತುಗಳು. ಸಮಗ್ರ ಯಕ್ಷಗಾನ ರಂಗ ಅಥವಾ ಕರಾವಳಿಯ ಎಲ್ಲ ತಿಟ್ಟುಗಳಿಗೆ ಅನ್ವಯ
87 ಅಶ್ವತ್ಥನ ಎಲೆ 1. ಬಣ್ಣದ ವೇಷದ ಮುಖ ವರ್ಣಿಕೆಯಲ್ಲಿ ಬರುವ ಒಂದು ಬಗೆಯ ಸುಳಿ. 2. ವೇಷದ ಹಣೆಯಲ್ಲಿ ಬಿಡಿಸುವ ಒಂದು ವಿನ್ಯಾಸ. ಆಟೀನ್ ಉತ್ತರ ಕನ್ನಡತಿಟ್ಟು-ಬಡಗ ಬಡಗು
88 ಅಶ್ವಮೇಧದ ಕುದುರೆ ಪಾಂಡವಾಶ್ವಮೇಧ, ರಾಮಾಶ್ವಮೇಧ ಮೊದಲಾದ ಪ್ರಸಂಗಗಳಲ್ಲಿ ಬರುವ ವೇಷ. ಇದಕ್ಕೆ ಮಾತು ಇಲ್ಲ. ಇಬ್ಬರು ಹುಡುಗರು, ಒಬ್ಬನು ನೇರ, ಮತ್ತೊಬ್ಬನು ಅವನ ಬೆನ್ನಿಗೆ ತಲೆಕೊಟ್ಟು ನಿಲ್ಲುವರು. ಅವರಿಬ್ಬರ ಮೇಲೆ ತೆರೆಸೀರೆ ಅಥವಾ ವಲ್ಲಿಯನ್ನು ಹೊದೆಸಿ, ನೇರ ನಿಂತವನ ಮುಖಕ್ಕೆ ಕುದುರೆ ಮುಖವಾಡ ಇಡುವರು. ಕುದುರೆ ದೂತನೆಂಬ ಪಾತ್ರವು (ಹಾಸ್ಯಗಾರ) ಇದನ್ನು ಬೇರೆ ಬೇರೆ ಭಾಷೆಯಲ್ಲಿ ಮಾತಾಡಿಸಿ, ಆಚೀಚೆ ನಡೆಸುವುದು, ಸಂಜ್ಞೆ ಮಾಡಿಸುವುದು ಇರುತ್ತವೆ. ಅರ್ಥಗಾರಿಕೆ ಸಮಗ್ರ ಯಕ್ಷಗಾನ ರಂಗ ಅಥವಾ ಕರಾವಳಿಯ ಎಲ್ಲ ತಿಟ್ಟುಗಳಿಗೆ ಅನ್ವಯ
89 ಅಷ್ಟತಾಳ ತಾಳಗಳಲ್ಲೊಂದು, ಬಡಗಿನಲ್ಲಿ ಐದು ಪೆಟ್ಟುಗಳಲ್ಲೂ, ತೆಂಕಿನಲ್ಲಿ ನಾಲ್ಕು ಪೆಟ್ಟುಗಳಲ್ಲೂ (ತಾಳ, ಜಾಗಟೆಗಳಲ್ಲಿ) ಬಾರಿಸಿ ತೋರಿಸುವ ಕ್ರಮ. ತಧೀಂ | ತಕಧೀಂ || ತಕಿಟ | ತಕಧಿಂ - ಇವು ಇದರ ಮೂಲ ಪೆಟ್ಟುಗಳು. ತ್ರಿವುಡೆಯನ್ನು ಹೋಲುತ್ತದೆ. ಇದರ ಬಿಡ್ತಿಗೆ (ತೆಂಕುತಿಟ್ಟಿನಲ್ಲಿ ಮಾತ್ರ) ಮೂರು ಪೆಟ್ಟುಗಳ ಖಂಡಗಳು. ದೀತರಿಕಿಟ | ಕಿಟತಕತಾಂ - ಮೂರು ಬಾರಿ, ದೀತರಿಕಿಟ ಕಿಟ್ತಕ ತರಿಕಿಟ | ತಾತರಿಕಿಟಕಿಟ್ತಕತರಿಕಿಟ , ದಿಧೊಂ | ದತ್ತಾಂ || ಧೀಂತ ದದಿಗಿಣ | ತೊ | ಮುಕ್ತಾಯ : ತೆಂಕು : ಧಿನ ಧಿನ | ದದಿಂತ್ತಾ | ಧೀಂತ | ದದಿಗಿಣ | ತೋ. ಬಡಗು : ತಕ್ಕು | ತಾಕಿಟ | ತಕಿಟ | ಕಿಟತಕ | ದದಿನ್ನಾಂತಾ | ತೈತ | ದದಿಗಿಣ | ತೊ | ಅಷ್ಟತಾಳಕ್ಕೆ ಉಡಾಪೆ ಎಂಬ ಗತಿ ಭೇದವೂ, ತ್ವರಿತ ಅಷ್ಟ ಯಾನೆ ಭೈರವಿ ಅಷ್ಟವೆಂಬ ಪ್ರಭೇದಗಳೂ ಇವೆ. ಅಷ್ಟತಾಳದ ಪದ್ಯಗಳನ್ನು, ಅರ್ಧದಿಂದ (ಬಡಗುತಿಟ್ಟಿನಲ್ಲಿ) ಅಥವಾ ಕೊನೆಯಲ್ಲಿ (ತೆಂಕು ತಿಟ್ಟಿನಲ್ಲಿ) ಉಡಾಪೆ ಗತಿಗೆ ಕೊಂಡು ಹೋಗುವ ಕ್ರಮವಿದೆ. ಕೆಲವೊಮ್ಮೆ ಉಡಾಪೆಯಿಂದ 'ತಿತ್ತಿತ್ತೈ' ಎಂಬ ಕೋರೆತಾಳಕ್ಕೂ ಬದಲಿಸುವುದಿದೆ. ಉಡಾಪೆಯಲ್ಲಿ ಹೇಳಿ, ಪುನಃ ಮೊದಲಿನ ಅಷ್ಟತಾಳದಲ್ಲೆ ಹೇಳಿ ಮುಕ್ತಾಯ ಮಾಡುವುದೂ ಇದೆ. ಈ ಗತಿ ಭೇದಗಳು ಭಾಗವತನ ಮನೋಧರ್ಮಕ್ಕೆ ಸಂಬಂಧಿಸಿದ ಐಚ್ಛಿಕಗಳು. ಗಂಭೀರ ಸನ್ನಿವೇಶಗಳಲ್ಲಿ, ದುಃಖ ಸಂದರ್ಭಗಳಲ್ಲಿ ಗತಿಬದಲಾವಣೆ ಮಾಡಬಾರದೆಂದು ಸಂಪ್ರದಾಯ. ಸಮಗ್ರ ಯಕ್ಷಗಾನ ರಂಗ ಅಥವಾ ಕರಾವಳಿಯ ಎಲ್ಲ ತಿಟ್ಟುಗಳಿಗೆ ಅನ್ವಯ
90 ಅಷ್ಟಬಾರ ಎಂಟು ಬಾರಗಳು. ಬಾರವೆಂದರೆ ಚರ್ಮದ ಹಗ್ಗ ಅಥವಾ ಪಟ್ಟಿ. ಮದ್ದಲೆಗೆ ಚರ್ಮವನ್ನು ಕೂರಿಸಲು, ಎಡ, ಬಲ ಜೀವ ಕವಳ ಚರ್ಮಗಳಿಗೆ ತೂತುಗಳ ಮೂಲಕ ಸುರಿಯುವ ಬಾರಗಳು ಎಂಟು. ಚರ್ಮಗಳಿಗೆ ಹದಿನಾರು ತೂತು ಕೊರೆದು ಈ ಎಂಟು ಬಾರಗಳನ್ನು ಸಿಕ್ಕಿಸಿ ಎಳೆಯುತ್ತಾರೆ. ಎಂಟು ಹಗ್ಗಗಳ ಎರಡೂ ತುದಿಗಳನ್ನು ತುರುಕಿಸುವುದರಿಂದ, ಹದಿನಾರು ತೂತುಗಳಿಗೆ ಎಂಟು ಬಾರಗಳು, ಚರ್ಮಗಳು ಸರಿಯಾಗಿ ಕುಳಿತ ಅನಂತರ ಇವುಗಳನ್ನು ಎಳೆದು ತೆಗೆದು, ನಿಜ ಬಾರಗಳನ್ನು ತುರುಕಿಸಿ ಕಟ್ಟುವುದು. ಚೆಂಡೆ ಮುಚ್ಚಿಗೆಗೆ ಎಂಟು ಬಾರಗಳ ಬದಲು, ಆರೇ ಬಾರಗಳು. ಕಾರಣ ಅದರ 'ಕಣ್ಣು' (ತೂತು) ಗಳು ಹನ್ನೆರಡು ಮಾತ್ರ. ಮುಚ್ಚಿಗೆ ಸಮಗ್ರ ಯಕ್ಷಗಾನ ರಂಗ ಅಥವಾ ಕರಾವಳಿಯ ಎಲ್ಲ ತಿಟ್ಟುಗಳಿಗೆ ಅನ್ವಯ