A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 318

Backtrace:

File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 319

Backtrace:

File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 320

Backtrace:

File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler

File: /Appdata/padakanaja.karnataka.gov.in/index.php
Line: 318
Function: require_once

Padakanaja - Dictionary View
ಅನಿಸಿಕೆ

ಪದಕೋಶ: ಯಕ್ಷಗಾನ ಪದಕೋಶ | ಕನ್ನಡ-ಕನ್ನಡ | ಪ್ರಕಾಶಕರು - ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರ, ಎಂ.ಜಿ.ಎಂ. ಕಾಲೇಜು (1994)

Show entries
ಕ್ರಮ ಸ೦ಖ್ಯೆ ಇಂಗ್ಲೀಷ್ ಪದ
(English Word)
ಕನ್ನಡ ಪದ
(Kannada Word)
ಕನ್ನಡ ಅರ್ಥ
(Kannada Meaning)
ವಿಷಯ ವರ್ಗೀಕರಣ
(Word Subject)
ವ್ಯಾಕರಣ ವಿಶೇಷ
(Word Grammer)
ಕನ್ನಡ ಉಚ್ಚಾರಣೆ
(Kannada Pronunciation)
ಪರ್ಯಾಯ ಪದ
(Word Synonyms)
ಇಂಗ್ಲೀಷ್ ಅರ್ಥ
(English Meaning)
ಸಂಕ್ಷಿಪ್ತ ವಿವರಣೆ
(Short Description)
ದೀರ್ಘ ವಿವರಣೆ
(Long Description)
ಆಡಳಿತಾತ್ಮಕ ಪದ
(Administrative Word)
91 ಆಂಧ್ರ ಯಕ್ಷಗಾನ 1. ಆಂಧ್ರದ ಯಕ್ಷಗಾನದ ಅಧ್ಯಯನವು ನಮ್ಮ ಯಕ್ಷಗಾನದ ತಿಳುವಳಿಕೆಗೆ ಅಗತ್ಯ. ತೆಲುಗಿನಲ್ಲಿ ಮೂಲತಃ 'ಯಕ್ಷಗಾನ' ವೆಂಬ ಪದಕ್ಕೆ ಗೀತಪ್ರಬಂಧವೆಂದು ಅರ್ಥ, ನಾವು ಹೇಳುವ "ಯಕ್ಷಗಾನ ಪ್ರಸಂಗ" ಅಥವಾ "ಯಕ್ಷಗಾನ ಕಾವ್ಯ" ಎಂಬಂತೆ. ಕನ್ನಡದಲ್ಲೂ ಪ್ರಾಯಃ ಮೂಲ ಶಬ್ದಾರ್ಥವು ಪ್ರಬಂಧಪರವೇ ಆಗಿತ್ತು. ಈಗ ಆಂಧ್ರದಲ್ಲೂ, ನಮ್ಮಲ್ಲಿಯಂತೆ, ಗೀತಪ್ರಬಂಧಕ್ಕೂ ಅದರ ಪ್ರದರ್ಶನಕ್ಕೂ ಯಕ್ಷಗಾನವೆಂದು ಕರೆಯುವುದು ಈಚೆಗೆ ರೂಢಿಗೆ ಬಂದಿದೆ. ಯಕ್ಷಗಾನ ಶಬ್ದವು ಆಂಧ್ರದ ಛಂದೋಗ್ರಂಥಗಳಲ್ಲಿ ಹದಿಮೂರನೇ ಶತಮಾನದಿಂದಲೂ, ಶಾಸನಗಳಲ್ಲಿ ಹದಿನಾಲ್ಕನೇ ಶತಮಾನದಿಂದಲೂ ಉಕ್ತವಾಗಿದೆ. ಆಂಧ್ರದಲ್ಲಿ ಯಕ್ಷಗಾನವು ದೇವಾಲಯಗಳಲ್ಲಿ ಹಾಡುವ ಪ್ರಬಂಧವಾಗಿ ಮೊದಲು ಬಳಕೆಗೆ ಬಂದು, ಅನಂತರ ರಂಗ ಪ್ರದರ್ಶನಕ್ಕೆ ಅಳವಟ್ಟಿತೆನ್ನುವರು. ಸದ್ಯ, ಕೂಚಿಪುಡಿ, ಕೇಳಿಕೆ, ಭಾಗವತ ಮೇಳ, ಕಲಾಪ, ಚಿಂದು, ವೀಥಿ ನಾಟಕ ಇವುಗಳಿಗೆಲ್ಲ ಯಕ್ಷಗಾನವೆನ್ನುವರು. ಈ ಪ್ರಕಾರಗಳೊಳಗೆ ಹಲವು ಸಮಾನ ಅಂಶಗಳಿದ್ದು. ಆ ಪೈಕಿ ಚಿಂದು ಯಕ್ಷಗಾನಗಳೊಂದಿಗೆ ಹತ್ತಿರದ ಸಾಮ್ಯ ಹೊಂದಿದೆ. 'ಚಿಂದು' ವು ಪ್ರಾಯಃ ಅಲ್ಲಿಯ ಸಾಂಪ್ರದಾಯಿಕ ರಂಗಭೂಮಿಯ ಹಳೆಯ ಅಂಶಗಳನ್ನು ಸಾಕಷ್ಟು ಹೊಂದಿದೆ. ಕನ್ನಡದ ಯಕ್ಷಗಾನ ರಚನೆಗಳಿಗೂ, ರಂಗ ಪ್ರಯೋಗಕ್ಕೂ ಆಂಧ್ರವೇ ಮೂಲ ಪ್ರೇರಕವೆಂದು ದಿ | ಕುಕ್ಕಿಲ ಕೃಷ್ಣಭಟ್ಟರು ಸವಿಮರ್ಶವಾಗಿ ಸಾಧಿಸಿದ್ದಾರೆ (ರಂಗವೈಖರಿ : 1981 : ಕುಕ್ಕಿಲರ ಲೇಖನ) ಯಕ್ಷಗಾನವೆಂಬ ಶಬ್ದವು ಬಹು ಪ್ರಾಚೀನ ಕಾಲದಿಂದಲೇ ತೆಲುಗಿನಲ್ಲಿ ರೂಢಿಯಲ್ಲಿದೆ. ನಮ್ಮ ಯಕ್ಷಗಾನ ಪ್ರಸಂಗಗಳಲ್ಲಿ ಅವಶ್ಯಕ ಅಂಗವೆಂದು ಭಾವಿಸಲಾಗುವ ದ್ವಿಪದಿ ಛಂದಸ್ಸು ತೆಲುಗು ಮೂಲದ್ದು. ತೆಲುಗಿನ ಎಲೆಗಳೂ, ರಗಡ ಪ್ರಭೇದಗಳೂ ನಮ್ಮ ರಚನೆಗಳಲ್ಲಿ ಪಡಿಮೂಡಿವೆ. ಸಭಾಲಕ್ಷಣದಲ್ಲಿ ಬರುವ "ಹರಿಹರ ವಿಧಿನುತ | ಅಮರ ಪೂಜಿತರೇ... " ಎಂಬ ತೆಲುಗು ಹಾಡು ತಿರುಪತಿ ಅಣ್ಣಮಾಚಾರ್ಯರ ಕೃತಿ. ಕರಾವಳಿಯ ಬಡಗು ಯಕ್ಷಗಾನಕ್ಕೂ, ಆಂಧ್ರದ ಬಯಲಾಟಗಳಿಗೂ ಸಾಮ್ಯವಿದೆ. "ಬಡಗ" ಎಂದರೆ ಆಂಧ್ರವೆಂದು ಕನ್ನಡದಲ್ಲಿ ಅರ್ಥವಿದೆ - ಈ ಕಾರಣಗಳನ್ನು ಅವರು ನೀಡಿದ್ದಾರೆ. ಇಷ್ಟಲ್ಲದೆ, ನಮ್ಮ ಸಭಾಲಕ್ಷಣತದಲ್ಲಿ ಬರುವ "ಚಂದಭಾಮಾ" ಸ್ತ್ರೀವೇಷಗಳೂ, ಕೆಲವು ಪ್ರಸಂಗ ರಚನೆಗಳಲ್ಲಿ ಕಾಣುವ ದರುಪದ, ದರುವು ಎಂಬವುಗಳೂ ಆಂಧ್ರಮೂಲದ್ದಾಗಿ ಕಾಣುತ್ತವೆ. ನಮ್ಮ ಮೂಡಲಪಾಯದ ವೇಷಗಳಿಗೂ ಕೆಲವು ವಿಷಯಗಳಲ್ಲಿ ಆಂಧ್ರದ ಆಟಗಳ ಹೋಲಿಕೆ ಉಂಟೆನ್ನುವರು. ಹೀಗೆ, ಪ್ರಬಂಧ ರಚನೆ, ಸಾಮಗ್ರಿಗಳು, ರಂಗ ಪ್ರಯೋಗಗಳ ಸಾಮ್ಯಗಳನ್ನು ನೋಡಿದರೆ ನಮ್ಮ ಯಕ್ಷಗಾನವು ಆಂಧ್ರ ಮೂಲದ್ದಾಗಿರುವುದು ಸಂಭವನೀಯ. ಬಹುಶಃ, ಕನ್ನಡ - ತೆಲುಗು ಪ್ರದೇಶಗಳನ್ನಾಳಿದ ವಿಜಯನಗರದ ಕಾಲದಲ್ಲಿ ಇವು ಕರ್ನಾಟಕಕ್ಕೆ ಪ್ರಸರಣಗೊಂಡಿರಬಹುದು. 2. ಇತ್ತೀಚೆಗಿನವರೆಗೂ, ತೆಲುಗಿನ "ಚಿಕ್ಕ ಮೇಳ" ಗಳು ಈ ಕಡೆ ಸಂಭಾವನೆಗಾಗಿ ತಿರುಗಾಟ ಮಾಡುತ್ತಿದ್ದುವು. ಹಾಡುಗಾರ, ಮದ್ದಲೆಗಾರ ಮತ್ತು ಎರಡು ವೇಷಗಳಿರುತ್ತಿದ್ದುವು. ವೇಷಗಳು ಸರಳ, ಒಂದು ಪುರುಷ, ಒಂದು ಸ್ತ್ರೀವೇಷ. ಇದು ನಮ್ಮಲ್ಲಿಯ ರಾಧಾಕೃಷ್ಣವೇಷ, ದಾನಾವರ್ತಗಳನ್ನು ಹೋಲುತ್ತವೆ. ಇವುಗಳಿಗೂ ನಮ್ಮಲ್ಲಿ ಆಂಧ್ರದವರ ಯಕ್ಷಗಾನ, ತೆಲುಗಿನ ಆಟ ಎನ್ನುತ್ತಿದ್ದರು. ರಾಧಾಕೃಷ್ಣವೇಷ; ದಾನಾವರ್ತ ಸಮಗ್ರ ಯಕ್ಷಗಾನ ರಂಗ ಅಥವಾ ಕರಾವಳಿಯ ಎಲ್ಲ ತಿಟ್ಟುಗಳಿಗೆ ಅನ್ವಯ
92 ಆಚಾರ್ರ ಹಾಸ್ಯ 1. ಪೂರ್ವರಂಗ ಸಭಾಲಕ್ಷಣ ಪ್ರಯೋಗದಲ್ಲಿ ಬರುವ ಒಂದು ಕಟ್ಟು ಹಾಸ್ಯ. ಬ್ರಾಹ್ಮಣ ಪುರೋಹಿತ ಹಾಸ್ಯ. 2. ಇನ್ನೊಂದು ಕಟ್ಟುಹಾಸ್ಯ. ಆಚಾರಿ ಭಟ್ಟನ ಹಾಸ್ಯ. ವಿಶ್ವಕರ್ಮಬ್ರಾಹ್ಮಣನ ಅಣಕ. ಸಮಗ್ರ ಯಕ್ಷಗಾನ ರಂಗ ಅಥವಾ ಕರಾವಳಿಯ ಎಲ್ಲ ತಿಟ್ಟುಗಳಿಗೆ ಅನ್ವಯ
93 ಆಟ ನಾವೀಗ ಶಿಷ್ಟವಾಗಿ, "ಯಕ್ಷಗಾನ ಪ್ರದರ್ಶನ" ಅನ್ನುವುದಕ್ಕೆ ಸರ್ವತ್ರ ಬಳಕೆ ಇದ್ದ, ಇರುವ ಹೆಸರು, ಆಟ, ಬಯಲಾಟ. ವೇಷ ಸಹಿತ ಆಡಿ ತೋರಿಸುವುದು ಆಟ. ಇಂಗ್ಲೀಷ್‌ನಲ್ಲೂ ರಂಗ ಪ್ರದರ್ಶನಕ್ಕೆ, ನಾಟಕಕ್ಕೆ ಆಟ "ಪ್ಲೇ" ಎಂದೇ ಹೆಸರೆಂಬುದು ಗಮನಾರ್ಹ. ಮರಾಠಿಯಲ್ಲೂ ಆಟವೆಂಬರ್ಥದ ಖೇಳ. ಕೊಂಕಣಿಯಲ್ಲಿ ಖೇಳು ಎಂದಿದೆ. ಕೇರಳದ ಪರಂಪರೆಯಲ್ಲೂ ರಾಮನಾಟ್ಟಂ, ಕೃಷ್ಣಾಟ್ಟಂ, ಮೋಹಿನಿ ಅಟ್ಟಂ ಎಂದೂ, ಪ್ರಬಂಧಕ್ಕೆ ಅಟ್ಟಕಥಾ ಎಂದೂ ಇದೆ. ಆಟಕ್ಕಿಂತ ಭಿನ್ನವಾಗಿ, ಇನ್ನೊಂದು ಪ್ರದರ್ಶನ ಪ್ರಕಾರವು 'ಕೂಟ', ಎಂದರೆ ತಾಳಮದ್ದಲೆ. ಸಮಗ್ರ ಯಕ್ಷಗಾನ ರಂಗ ಅಥವಾ ಕರಾವಳಿಯ ಎಲ್ಲ ತಿಟ್ಟುಗಳಿಗೆ ಅನ್ವಯ
94 ಆಟದ ಗಾಡಿ ಆಟದ ಮೇಳದ ಸಾಮಗ್ರಿ ಸಾಗಿಸುವ ಎತ್ತಿನ ಗಾಡಿ. ಮೇಳದ ಗಾಡಿ. ಸಮಗ್ರ ಯಕ್ಷಗಾನ ರಂಗ ಅಥವಾ ಕರಾವಳಿಯ ಎಲ್ಲ ತಿಟ್ಟುಗಳಿಗೆ ಅನ್ವಯ
95 ಆಟದ ಚಪ್ಪರ 1. ಆಟವಾಡುವ ರಂಗಸ್ಥಳ, ಚಪ್ಪರ. 2. ಆಡುವ ಮತ್ತು ನೋಡುವ ಸ್ಥಳಕ್ಕೆ ಹಾಕಿದ ಚಪ್ಪರ ಸಮಗ್ರ ಯಕ್ಷಗಾನ ರಂಗ ಅಥವಾ ಕರಾವಳಿಯ ಎಲ್ಲ ತಿಟ್ಟುಗಳಿಗೆ ಅನ್ವಯ
96 ಆಟದ ತಿರುಗಾಟ ಆಟದ ಮೇಳಗಳ, ಕಲಾವಿದರ ಸಂಚಾರ. ತಿರುಗಾಟ ಸಮಗ್ರ ಯಕ್ಷಗಾನ ರಂಗ ಅಥವಾ ಕರಾವಳಿಯ ಎಲ್ಲ ತಿಟ್ಟುಗಳಿಗೆ ಅನ್ವಯ
97 ಆಟದ ಪದವು ಆಟಗಳನ್ನಾಡುವ ಮೈದಾನು. ಕೆಲವು ಕಡೆ ನಿಶ್ಚಿತವಾದ ಸ್ಥಳದಲ್ಲೆ ತುಂಬ ಆಟಗಳು ಜರಗುವುದರಿಂದ ಆ ಸ್ಥಳಕ್ಕೆ ಈ ಹೆಸರು ಸಲ್ಲುತ್ತದೆ. ತೆಂಕುತಿಟ್ಟು
98 ಆಟದ ಪೆಟ್ಟಿಗೆ ಮೇಳದ ಸಾಮಗ್ರಿಗಳನ್ನು ತುಂಬಿಸುವ ಪೆಟ್ಟಿಗೆಗಳು. ಪೆಟ್ಟಿಗೆ, ಪೆಟ್ಟಿಗೆ ಜನ ಸಮಗ್ರ ಯಕ್ಷಗಾನ ರಂಗ ಅಥವಾ ಕರಾವಳಿಯ ಎಲ್ಲ ತಿಟ್ಟುಗಳಿಗೆ ಅನ್ವಯ
99 ಆಟದ ಪ್ರಸಂಗ 1. ಆಟಕ್ಕೆ ನಿರ್ಣೀತವಾದ ಕಥೆ, ಪ್ರಸಂಗ 2. ಆಟಕ್ಕೆ ಆಗುವ ಪ್ರಸಂಗ. ಕೂಟ ಅಂದರೆ ತಾಳಮದ್ದಲೆಗೆ ಪ್ರಶಸ್ತವಲ್ಲದ್ದು ಎಂಬ ಅರ್ಥ. ಉದಾ : ಮೀನಾಕ್ಷಿ ಕಲ್ಯಾಣ, ಮಹಿಷಾಸುರ ವಧೆ, ಮೈರಾವಣ ಕಾಳಗ ಇತ್ಯಾದಿ. ಇದಕ್ಕೆ ಭಿನ್ನವಾಗಿ ಕೂಟದ ಪ್ರಸಂಗ ಸಮಗ್ರ ಯಕ್ಷಗಾನ ರಂಗ ಅಥವಾ ಕರಾವಳಿಯ ಎಲ್ಲ ತಿಟ್ಟುಗಳಿಗೆ ಅನ್ವಯ
100 ಆಟದ ಮೇಳ ವೃತ್ತಿಪರ ಯಕ್ಷಗಾನ ತಂಡ. ಮೇಳ ಸಮಗ್ರ ಯಕ್ಷಗಾನ ರಂಗ ಅಥವಾ ಕರಾವಳಿಯ ಎಲ್ಲ ತಿಟ್ಟುಗಳಿಗೆ ಅನ್ವಯ