A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 318

Backtrace:

File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 319

Backtrace:

File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 320

Backtrace:

File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler

File: /Appdata/padakanaja.karnataka.gov.in/index.php
Line: 318
Function: require_once

Padakanaja - Dictionary View
ಅನಿಸಿಕೆ

ಪದಕೋಶ: ನವಕರ್ನಾಟಕ ವಿಜ್ಞಾನ - ತಂತ್ರಜ್ಞಾನ ಪದಸಂಪದ | ಕನ್ನಡ-ಕನ್ನಡ-ಇಂಗ್ಲೀಷ್ |ಪ್ರಕಾಶಕರು - ನವಕರ್ನಾಟಕ ಪಬ್ಲಿಕೇಷನ್ಸ್‌ ಪ್ರೈವೇಟ್ ಲಿಮಿಟೆಡ್ (2012)

Show entries
ಕ್ರಮ ಸ೦ಖ್ಯೆ ಇಂಗ್ಲೀಷ್ ಪದ
(English Word)
ಕನ್ನಡ ಪದ
(Kannada Word)
ಕನ್ನಡ ಅರ್ಥ
(Kannada Meaning)
ವಿಷಯ ವರ್ಗೀಕರಣ
(Word Subject)
ವ್ಯಾಕರಣ ವಿಶೇಷ
(Word Grammer)
ಕನ್ನಡ ಉಚ್ಚಾರಣೆ
(Kannada Pronunciation)
ಪರ್ಯಾಯ ಪದ
(Word Synonyms)
ಇಂಗ್ಲೀಷ್ ಅರ್ಥ
(English Meaning)
ಸಂಕ್ಷಿಪ್ತ ವಿವರಣೆ
(Short Description)
ದೀರ್ಘ ವಿವರಣೆ
(Long Description)
ಆಡಳಿತಾತ್ಮಕ ಪದ
(Administrative Word)
121 ಅಂತರ್ವೃತ್ತ (ಗ) ನೋಡಿ: ಅಂತಃಸ್ಪರ್ಶಕ ವೃತ್ತ incircle
122 ಅಂತರ್ವೇಶ (ಸಾ) ಅನ್ಯಾವೃತ ಭಾಗ. ಪರಾವೃತ ಪ್ರದೇಶ. (ವೈ) ಬೇರ್ಪಟ್ಟ ಒಂದು ಬಗೆಯ ಊತಕ ಮತ್ತೊಂದು ಊತಕದಲ್ಲಿ ಹುದುಗಿರುವುದು. ಉದಾ: ಮುಖ್ಯ ಗ್ರಂಥಿಯಿಂದ ಬೇರ್ಪಟ್ಟು ಮತ್ತೆಲ್ಲೋ ಹುದುಗಿರುವ ಗ್ರಂಥಿ ತುಣುಕು. ಪರಾವರಣ enclave
123 ಅಂತರ್ವೇಶನ (ಗ) ಫಲನದ ಎರಡು eತ ಬೆಲೆಗಳ ನಡುವಿನ ಒಂದು ಬೆಲೆಯನ್ನು ಆ ಫಲನವೇ ಸೂಚಿಸುವ ನಿಯಮದ ಹೊರತಾಗಿ ಬೇರಾವುದೇ ನಿಯಮ ವಿಧಾನದಿಂದ ಶೋಧಿಸುವ ಪ್ರಕ್ರಿಯೆ. ಉದಾ: ರೇಖೀಯ ಅಂತರ್ವೇಶನ interpolation
124 ಅಂತರ್ವೇಶನ (ತಂ) ಬಿಟುಮೆನ್ ಸಾಮಗ್ರಿಯ ತಪಾಸಣೆಯಲ್ಲಿ ಬಳಸುವ ಪದ. ನಿರ್ದಿಷ್ಟ ಹೇರಿಕೆ, ಕಾಲ ಹಾಗೂ ಉಷ್ಣತೆ ಇರುವ ಪರಿಸ್ಥಿತಿಗಳಲ್ಲಿ ಸಾಮಗ್ರಿಯೊಳಕ್ಕೆ ಸೂಜಿಯೊಂದು ಲಂಬವಾಗಿ ಎಷ್ಟು ಒಳಕ್ಕೆ ತೂರಬಲ್ಲದು ಎಂಬುದರ ಮೂಲಕ ಆ ಸಾಮಗ್ರಿಯ ಅಂತರ್ವೇಶನ ಪ್ರಮಾಣವನ್ನು ವ್ಯಕ್ತಪಡಿಸಲಾಗುತ್ತದೆ penetration
125 ಅಂತರ್ವ್ಯಾಪನ (ವೈ) ೧. ಒಳಚಲಿಸುವ ಕ್ರಿಯೆ. ಜೀವಕೋಶ ಅಥವಾ ಊತಕದೊಳಕ್ಕೆ ಅನಿಲ, ದ್ರವ ಅಥವಾ ಕರಗಿರುವ ವಸ್ತುವಿನ ಒಳತೂರಿಕೆ. ೨. ಶರೀರದ ಅಂಗಗಳಲ್ಲಿ ಸೋಂಕು ಕ್ರಮೇಣ ಹರಡುವುದು. ಉದಾ: ಶ್ವಾಸಕೋಶ ಗಳಲ್ಲಿರುವ ಕ್ಷಯ ಸೋಂಕು. ೩. ಮೂಲಸ್ಥಾನದಿಂದ ಜೀವ ಕೋಶಗಳ ಹರಡುವಿಕೆ. ಹರಡಿದ ಜೀವಕೋಶಗಳು ನಿರ್ದಿಷ್ಟ ಸ್ಥಳದಲ್ಲಿ ಕೇಂದ್ರೀಕೃತವಾಗಬಹುದು, ಅನಿಯತವಾಗಿ ಸಂಗ್ರಹ ವಾಗಬಹುದು ಇಲ್ಲವೇ ವಿಸ್ತೃತ ಪ್ರದೇಶದಾದ್ಯಂತ ಹರಡ ಬಹುದು. ಈ ಕ್ರಿಯೆಯು ಸಾಮಾನ್ಯವಾಗಿ ಉರಿಯೂತದಲ್ಲಿ ಹಾಗೂ ಕೆಲವು ರೀತಿಯ ಕ್ಯಾನ್ಸರ್‌ಗಳಲ್ಲಿ ಕಂಡುಬರುತ್ತದೆ infiltration
126 ಅಂತಸ್ಥಶಿಲೆ (ಭೂವಿ) ಕಿರು ಪ್ರಾಯದ ಶಿಲಾಸ್ತರಗಳಿಂದ ಸುತ್ತುವರಿದ ಅಥವಾ ಆವೃತವಾದ ಯಾವುದೇ ಹಳೆಯ ಶಿಲಾಸ್ತರ inlier
127 ಅಂತಸ್ಥ ಸಮೀಕರಣ (ಗ) ವಕ್ರರೇಖೆಯ ಮೇಲಿನ ಯಾವುದೇ ಬಿಂದುವಿನ ಕಂಸದೂರ sನ್ನು ಅಲ್ಲಿಯ ಪ್ರವಣತೆಯ ಕೋನ ಜೊತೆ ಸಂಬಂಧಿಸುವ ಸಮೀಕರಣ: s=f((). ಇದು ಯಾವ ನಿರ್ದೇಶಕ ವ್ಯವಸ್ಥೆಯನ್ನೂ ಅವಲಂಬಿಸಿಲ್ಲ. ವಕ್ರರೇಖೆಯ ಅಂತರ್ಗತ ಗುಣ ನಿರೂಪಿಸುತ್ತದೆ intrinsic equation
128 ಅಂತಸ್ಸರಣ (ಭೂವಿ) ಒಂದು ಶಿಲೆಯನ್ನು ಛೇದಿಸಿದಂತೆ ಅಗ್ನಿಜನ್ಯ ಶಿಲೆಯೊಂದು ತೂರಿರುವುದು. ಉದಾ: ಗ್ರಾನೈಟ್ ಶಿಲೆಯೊಳಕ್ಕೆ ಡಾಲೆರೈಟ್ ಶಿಲೆ ನುಗ್ಗಿರುವುದು intrusion
129 ಅಂತಸ್ಸ್ನಾಯು (ವೈ) ಸ್ನಾಯುವಿನ ಒಳಗಿರುವ ಅಥವಾ ಒಳಕ್ಕೆ ಹೋಗುವ intramuscular
130 ಅಂತಸ್ಸ್ರಾವಕ ಗ್ರಂಥಿಗಳು (ವೈ) ಪ್ರಾಣಿ ಗಳಲ್ಲಿರುವ ಎರಡು ಸಂಪರ್ಕ ವ್ಯವಸ್ಥೆಗಳಲ್ಲಿ ಮೊದಲನೆಯದು ನರಮಂಡಲ. ಎರಡನೆಯದು ಅಂತಸ್ಸ್ರಾವಕ ಗ್ರಂಥಿಗಳ ವ್ಯವಸ್ಥೆ. ಈ ಗ್ರಂಥಿಗಳು ಪ್ರೊಟೀನ್ ರೂಪದ ತಮ್ಮ ಸ್ರಾವಗಳನ್ನು ಯಾವುದೇ ನಾಳಗಳ ನೆರವಿಲ್ಲದೆ ನೇರವಾಗಿ ರಕ್ತ ಪ್ರವಾಹದೊಳಕ್ಕೆ ಬಿಡುಗಡೆ ಮಾಡುತ್ತವೆ. ಹಾರ್ಮೋನುಗಳೆಂಬ ಈ ರಾಸಾಯನಿಕಗಳು ಒಂದು ಕಡೆ ಉತ್ಪಾದನೆಯಾಗಿ ಮತ್ತೆಲ್ಲಿಯೋ ಇರುವ ಅಂಗಗಳ ಮೇಲೆ ಪರಿಣಾಮವನ್ನು ಬೀರುತ್ತವೆ. ಗ್ರಂಥಿ ಸ್ರವಣದಲ್ಲಿ ಒಂದಕ್ಕಿಂತ ಹೆಚ್ಚಿನ ಹಾರ್ಮೋನುಗಳಿರಬಹುದು. ಉದಾ: ಅಪಾಯಕರ ಸನ್ನಿವೇಶಗಳಲ್ಲಿ ಅಡ್ರಿನಲ್ ಗ್ರಂಥಿಯು ಅಡ್ರಿನಾಲಿನ್ ಎಂಬ ಹಾರ್ಮೋನನ್ನು ಉತ್ಪಾದಿಸುತ್ತದೆ. ಇದು ಅಪಾಯವನ್ನು ಎದುರಿಸಲು ಅಥವಾ ಅಪಾಯದಿಂದ ಪಾರಾಗಲು ಅಗತ್ಯವಾದ ಸಿದ್ಧತೆಗಳನ್ನು ದೇಹದಲ್ಲಿ ಉಂಟುಮಾಡುತ್ತದೆ. ಅಂತಸ್ಸ್ರಾವಕ ಗ್ರಂಥಿಗಳು ಹೃದಯ, ಜಠರ ಮುಂತಾದವುಗಳ ಸ್ನಾಯುಗಳಂತೆ ಅನೈಚ್ಛಿಕವಾಗಿ ಕಾರ್ಯ ನಿರ್ವಹಿಸುತ್ತವೆ endocrine glands