Severity: Notice
Message: Trying to access array offset on value of type null
Filename: controllers/Dictionary.php
Line Number: 318
Backtrace:
File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 319
Backtrace:
File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 320
Backtrace:
File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler
File: /Appdata/padakanaja.karnataka.gov.in/index.php
Line: 318
Function: require_once
ಕ್ರಮ ಸ೦ಖ್ಯೆ | ಇಂಗ್ಲೀಷ್ ಪದ (English Word) |
ಕನ್ನಡ ಪದ (Kannada Word) |
ಕನ್ನಡ ಅರ್ಥ (Kannada Meaning) |
ವಿಷಯ ವರ್ಗೀಕರಣ (Word Subject) |
ವ್ಯಾಕರಣ ವಿಶೇಷ (Word Grammer) |
ಕನ್ನಡ ಉಚ್ಚಾರಣೆ (Kannada Pronunciation) |
ಪರ್ಯಾಯ ಪದ (Word Synonyms) |
ಇಂಗ್ಲೀಷ್ ಅರ್ಥ (English Meaning) |
ಸಂಕ್ಷಿಪ್ತ ವಿವರಣೆ (Short Description) |
ದೀರ್ಘ ವಿವರಣೆ (Long Description) |
ಆಡಳಿತಾತ್ಮಕ ಪದ (Administrative Word) |
---|---|---|---|---|---|---|---|---|---|---|---|
111 | ಅಂತರ್ನಿವೇಶನ | (ವೈ) ೧. ಸ್ತನಿಯ ಅಂಡ ವಾಹಕ ನಾಳದಲ್ಲಿ ನಿಷೇಚಿತವಾದ ಅಂಡವನ್ನು ಸೇರಿಸುವುದು. ಅಲ್ಲಿ ಅದು ೬-೭ ದಿವಸಗಳಲ್ಲಿ ಸತತವಾಗಿ ವಿಭಜನೆಗೊಂಡು ಜೀವಕೋಶಗಳ ಒಂದು ಚೆಂಡನ್ನು (ಬ್ಲಾಸ್ಟೋಸಿಸ್ಟ್) ರೂಪಿಸುತ್ತದೆ. ಇದು ಗರ್ಭಾಶಯದ ಒಳಪೊರೆಯಲ್ಲಿ ಬಂದು ನಾಟಿಕೊಳ್ಳುತ್ತದೆ. ೨. ಕೃತಕವಾಗಿ ರೂಪಿಸಿದ ಹಲ್ಲುಗೂಡಿನಲ್ಲಿ ನೈಜ ಹಲ್ಲನ್ನು ನಾಟುವುದು. ೩. ಊತಕ ಬದಲಿ ಜೋಡಣೆಯಲ್ಲಿ ಊತಕವನ್ನು ಉಪಕರಣದ ನೆರವಿನಿಂದ ನೆಡುವುದು. ೪. ಮೂಳೆಮುರಿತದಲ್ಲಿ ಯಾಂತ್ರಿಕ ದುರಸ್ತಿಗಾಗಿ ವೈವಿಧ್ಯಮಯವಾದ ಸಾಧನಗಳನ್ನು ಶರೀರದೊಳಗೆ ಸ್ಥಾಪಿಸುವುದು. ೫. ವಸ್ತುಗಳನ್ನು ಚರ್ಮದ ಅಡಿಯಲ್ಲಿ ಇಡುವುದು. ಚರ್ಮ ತಳ ಅಂತರ್ನಿವೇಶನ. ೬. ನರ ವೊಂದನ್ನು ಮತ್ತೊಂದು ನರದ ಹೊದಿಕೆಯಲ್ಲಿ ನಾಟುವುದು. ನರ ಅಂತರ್ನಿವೇಶನ. ೭. ಚರ್ಮದ ಕೆಳಗೆ ಅಥವಾ ಸ್ನಾಯುವಿನೊಳಗೆ ಔಷಧಯುಕ್ತ ಕಿರುಗೋಲಿಯನ್ನು (ಪೆಲ್ಲೆಟ್) ಸ್ಥಾಪಿಸುವುದು. ಕಿರುಗೋಲಿ ಅಂತರ್ನಿವೇಶನ | implantation | ||||||||
112 | ಅಂತರ್ನಿಷೇಚನ | (ಸ) ಒಂದೇ ಸಸ್ಯದ ಎರಡು ಹೂಗಳ ನಡುವೆ ಸಂಭವಿಸುವ ಪರಾಗಸ್ಪರ್ಶ. (ಪ್ರಾ) ತೀರ ಸಮೀಪ ಸಂಬಂಧಿ ಮಾತಾಪಿತೃ ಯುಗ್ಮಕಗಳ ನಡುವೆ ಆಗುವ ಸಂಯೋಗ. ಅಂತರ್ವಿವಾಹ. ಸಗೋತ್ರ ವಿವಾಹ | endogamy | ||||||||
113 | ಅಂತರ್ಮುಖಿ | (ವೈ) ತನ್ನದೇ ಆದ ಆಲೋಚನೆಗಳಲ್ಲಿ ಮತ್ತು ಭಾವನೆಗಳಲ್ಲಿ ಮುಳುಗಿ ಹೊರಗಿನ ವಸ್ತು ವಿಷಯಗಳ ಬಗ್ಗೆ ಆಸಕ್ತಿ ಇಲ್ಲದವನು. ಅಂತರ್ವರ್ತಿ. ನೋಡಿ: ಬಹಿರ್ಮುಖಿ | introvert | ||||||||
114 | ಅಂತರ್ಲೇಖನ | (ಗ) ಒಂದು ತ್ರಿಭುಜದ ಒಳಗೆ ಮೂರು ಭುಜಗಳೂ ಒಂದು ವೃತ್ತಕ್ಕೆ ಸ್ಪರ್ಶರೇಖೆಗಳಾಗುವಂತೆ ವೃತ್ತವನ್ನು ರಚಿಸುವುದು. ತ್ರಿಭುಜದ ಬದಲಿಗೆ ಇನ್ನೂ ಹೆಚ್ಚು ಭುಜಗಳನ್ನು ಹೊಂದಿರುವ ಒಂದು ಬಹುಭುಜ (ಪಾಲಿಗನ್)ವೂ ಆಗಿರಬಹುದು | endogeny | ||||||||
115 | ಅಂತರ್ವರ್ಧನ | (ಜೀ) ಸಸ್ಯದ ಅಥವಾ ದೇಹದ ಒಳಭಾಗದಿಂದ ಬೆಳವಣಿಗೆ ಆಗುವುದು | endogeny | ||||||||
116 | ಅಂತರ್ವಲನ | (ಪ್ರಾ) ಕೊಳವೆಯೊಳಕ್ಕೆ ಮಡಚುವುದು. ಹೊರಮೈ ಒಳಮೈ ಆಗುವಂತೆ ಶರೀರದ ಯಾವುದೇ ಭಾಗವನ್ನು ಒಳಕ್ಕೆ ಮಡಚುವುದು. ಬ್ಲಾಸ್ಟುಲದ ಭಿತ್ತಿಯ ಒಂದು ಭಾಗವನ್ನು ಗ್ಯಾಸ್ಟುಲ ಆಗುವಂತೆ ಆವರಿಸುವುದು | invagination | ||||||||
117 | ಅಂತರ್ವಲಿತ | (ಗ) ಸಮತಲ ವಕ್ರರೇಖೆಯನ್ನು ಸುತ್ತಿರುವ ಅನಮ್ಯ ದಾರವನ್ನು ಬಿಗಿಯಾಗಿ ಎಳೆದು ಬಿಚ್ಚುತ್ತ ಇರುವಾಗ ದಾರದ ಮೇಲಿನ ಯಾವುದೇ ಸ್ಥಿರ ಬಿಂದುವನ್ನು ರೇಖಿಸುವ ಪಥ. ನೋಡಿ: ಕೇಂದ್ರಜ. ಪ್ರತಿಯೊಂದು ವಕ್ರರೇಖೆಗೂ ಅಸಂಖ್ಯ ಆಂತರ್ವಲಿತಗಳು ಇವೆ. (ಸ) ಅಂಚುಗಳು ಒಳಮುಖಿಯಾಗಿ ಸುರುಳಿ ಸುತ್ತಿರುವುದು | involute | ||||||||
118 | ಅಂತರ್ವಿಷ್ಟ | (ಸ) ಇತರ ಕಾಯಗಳ ನಡುವೆ ಅಥವಾ ಕಾಂಡ, ತಂತು, ಹೈಫ ಇತ್ಯಾದಿಗಳ ನಡುವೆ ಇರಿಸಿದ. (ತಂ) ಎರಡು ಮೂಲ ಘಟಕಗಳ ನಡುವೆ ಜೋಡಿಸಿದ. (ಖ) ಸೌರವರ್ಷಕ್ಕೆ ಸರಿ ಹೊಂದಿಸಲು ಚಾಂದ್ರವರ್ಷಕ್ಕೆ ಸೇರಿಸಿದ ಅಧಿಕಮಾಸ. ಸಾಧಾರಣ ವರ್ಷಕ್ಕೆ (೩೬೫ ದಿವಸಗಳು) ಸೇರಿಸಿದ ಅಧಿಕ ದಿನ (ಫೆಬ್ರವರಿ ೨೯) | intercalary | ||||||||
119 | ಅಂತರ್ವಿಷ್ಟನ | (ಖ) ಅಧಿಕಗೊಳಿಸುವುದು. ಪಂಚಾಂಗ ವರ್ಷವನ್ನು ಋತು ವರ್ಷದೊಂದಿಗೆ ಸರಿ ಹೊಂದಿಸಲು ಪಂಚಾಂಗ ವರ್ಷಕ್ಕೆ ಅಧಿಕ ದಿನಗಳನ್ನು ಸೇರಿಸುವುದು. (ಭೂವಿ) ಶಿಲಾಸ್ತರಗಳ ಮಧ್ಯದಲ್ಲಿ ಸೇರಿಸುವುದು | intercalation | ||||||||
120 | ಅಂತರ್ವಿಷ್ಟ ಫಲನ | (ಗ) A ಮತ್ತು B ಗಣಗಳಲ್ಲಿ A B ಆಗಿರುವಾಗ A ಸರ್ವತ್ರ ಎಲ್ಲ xಗಳಿಗೂ f(x)=x ಆಗಿರುವಂಥ ಫಲನ. f(A)=B ಆದಾಗ ಅಂತರ್ವಿಷ್ಟ ಫಲನ ಅನನ್ಯ (ತಾದಾತ್ಮ್ಯ) ಫಲನವಾಗಿರುತ್ತದೆ | inclusion function |