Severity: Notice
Message: Trying to access array offset on value of type null
Filename: controllers/Dictionary.php
Line Number: 318
Backtrace:
File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 319
Backtrace:
File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 320
Backtrace:
File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler
File: /Appdata/padakanaja.karnataka.gov.in/index.php
Line: 318
Function: require_once
ಕ್ರಮ ಸ೦ಖ್ಯೆ | ಇಂಗ್ಲೀಷ್ ಪದ (English Word) |
ಕನ್ನಡ ಪದ (Kannada Word) |
ಕನ್ನಡ ಅರ್ಥ (Kannada Meaning) |
ವಿಷಯ ವರ್ಗೀಕರಣ (Word Subject) |
ವ್ಯಾಕರಣ ವಿಶೇಷ (Word Grammer) |
ಕನ್ನಡ ಉಚ್ಚಾರಣೆ (Kannada Pronunciation) |
ಪರ್ಯಾಯ ಪದ (Word Synonyms) |
ಇಂಗ್ಲೀಷ್ ಅರ್ಥ (English Meaning) |
ಸಂಕ್ಷಿಪ್ತ ವಿವರಣೆ (Short Description) |
ದೀರ್ಘ ವಿವರಣೆ (Long Description) |
ಆಡಳಿತಾತ್ಮಕ ಪದ (Administrative Word) |
---|---|---|---|---|---|---|---|---|---|---|---|
101 | ಅಂತರಿಕ್ಷ | (ಖ) ವಿಶ್ವದಲ್ಲಿ ಎಲ್ಲ ಕಾಯಗಳನ್ನೂ ಆವರಿಸಿರುವ ಬಲುಮಟ್ಟಿಗೆ ನಿರ್ದ್ರವ್ಯವಾದ ಪ್ರದೇಶ. ಭೂಮಿಯ ವಾತಾವರಣದ ಎಲ್ಲೆಯಾಚೆ ಇರುವ ವಿಶ್ವದ ಭಾಗ. ವ್ಯೋಮ. ಬಾಹ್ಯಾಕಾಶ | space | ||||||||
102 | ಅಂತರಿಕ್ಷ ಉಡುಪು | (ಅಂವಿ) ನಿರ್ವಾತ, ಉಷ್ಣತಾ ವೈಪರೀತ್ಯ ಮುಂತಾದ ಅನಾನು ಕೂಲಗಳಿರುವ ಅಂತರಿಕ್ಷ ಪರಿಸರ ದಲ್ಲಿ ಕಾರ್ಯನಿರ್ವಹಿಸುವ ಗಗನ ಯಾತ್ರಿಯನ್ನು ರಕ್ಷಿಸುವ ವಿಶೇಷ ಉಡುಪು. ಇದರಲ್ಲಿ ಒತ್ತಡಪೂರಿತ ಆಕ್ಸಿಜನ್ ಲಭ್ಯವಿರುತ್ತದೆ. ನಿಶ್ವಸಿತ ಗಾಳಿಯನ್ನು ಶುದ್ಧೀಕರಿಸುವ ವ್ಯವಸ್ಥೆಯೂ ಇರುತ್ತದೆ | space suit | ||||||||
103 | ಅಂತರಿಕ್ಷ ನಿಲ್ದಾಣ | (ಅಂವಿ) ಗಗನಯಾತ್ರಿಗಳ ದೀರ್ಘಕಾಲದ ವಾಸಕ್ಕೆ ಮತ್ತು ವೈಜ್ಞಾನಿಕ ಪ್ರಯೋಗಗಳಿಗೆ ಅನುವು ಮಾಡಿಕೊಡಲು ನಿರ್ಮಿಸಲಾದ ಒಂದು ದೊಡ್ಡ ಅಂತರಿಕ್ಷ ನೌಕೆ. ಭೂಮಿ ಯಿಂದ ತಂದ ವಿವಿಧ ಭಾಗ ಗಳನ್ನು ಜೋಡಿಸಿ ನಿರ್ಮಿಸಿದ ಈ ಅಂತರಿಕ್ಷ ನಿಲ್ದಾಣಗಳು ಭೂಮಿಯನ್ನು ಕೆಲವೇ ನೂರು ಕಿ.ಮೀ. ಎತ್ತರದಲ್ಲಿ ಸುತ್ತುತ್ತಿರುತ್ತವೆ. ಉದಾ: ಸ್ಕೈಲ್ಯಾಬ್, ಮೀರ್, ಅಂತರರಾಷ್ಟ್ರೀಯ ಅಂತರಿಕ್ಷ ನಿಲ್ದಾಣ | space station | ||||||||
104 | ಅಂತರಿಕ್ಷ ಷಟಲ್ | (ಅಂವಿ) ಭೂಮಿಯಿಂದ ಕಕ್ಷೆಗೆ ಹೋಗುವ ಮತ್ತು ಮತ್ತೆ ಭೂಮಿಗೆ ಹಿಂದಿರುಗುವ ಮಾನವ ಚಾಲಿತ ಸಾರಿಗೆ ವ್ಯವಸ್ಥೆ. ಗಗನಯಾತ್ರಿಗಳನ್ನು ಮತ್ತು ಉಪಗ್ರಹ, ಸ್ವಯಂಚಾಲಿತ ಅಂತರಿಕ್ಷ ನೌಕೆ ಮುಂತಾದ ಸರಕುಗಳನ್ನು | space shuttle | ||||||||
105 | ಅಂತರುಷ್ಣಕ | (ರ) ಉಷ್ಣವನ್ನು ಹೀರಿಕೊಳ್ಳುವ. ಉಷ್ಣ ಶೋಷಣೆಯೊಂದಿಗೆ ಜರಗುವ ರಾಸಾಯನಿಕ ಕ್ರಿಯೆ. ಎಂಡೊಥರ್ಮಿಕ್. ನೋಡಿ: ಬಹಿರುಷ್ಣಕ (ಎಕ್ಸೊಥರ್ಮಿಕ್) | endothermic | ||||||||
106 | ಅಂತರ್ಜನ್ಯ ವರ್ತನೆ | (ಜೀ) ಹುಟ್ಟಿನಿಂದ ಬಂದ ಪ್ರವೃತ್ತಿ. ಕಲಿಯದೆ ವಂಶ ಪಾರಂಪರ್ಯವಾಗಿ ಹರಿದು ಬರುವ ನಡವಳಿಕೆ. ಉದಾ: ಹಕ್ಕಿಗಳು ಹಾಡುವುದು | innate behaviour | ||||||||
107 | ಅಂತರ್ಜಲ | (ಭೂವಿ) ನೆಲದಡಿಯಲ್ಲಿ ಶಿಲಾಸ್ತರಗಳ ನಡುವೆ ಶೇಖರವಾದ ನೀರು. ಇದು ಭೂಮಿಯ ಆಳವಾದ ಆಕರ ಗಳಿಂದ ಮೇಲೆ ಬಂದದ್ದಾಗಿರಬಹುದು, ಇಲ್ಲವೇ ಮಳೆ ನೀರು ಭೂಮಿ ಯೊಳಗೆ ಜಿನುಗಿದುದರ ಪರಿಣಾಮವಾಗಿರಬಹುದು. ಭೂಜಲ | ground water | ||||||||
108 | ಅಂತರ್ಜಲ ಮಟ್ಟ | (ಭೂವಿ) ನೀರಿನಿಂದ ಪರ್ಯಾಪ್ತ ಗೊಂಡಿರುವ ಭೂಸ್ತರ. ನೆಲಮಟ್ಟಕ್ಕಿಂತ ಜಲಮಟ್ಟ ಮೇಲೆ ಬಂದಾಗ ಒರತೆ, ಹೊಳೆ, ಕೆರೆ ಪ್ರಕಟವಾಗುತ್ತವೆ. ಜಲಮಟ್ಟ | water table | ||||||||
109 | ಅಂತರ್ದರ್ಶಕ | (ವೈ) ನೋಡಿ : ಎಂಡೊಸ್ಕೋಪ್ | endoscope | ||||||||
110 | ಅಂತರ್ದಹನ ಎಂಜಿನ್ | (ಭೌ) ಉಷ್ಣಶಕ್ತಿಯನ್ನು ಚಲನಶಕ್ತಿಯಾಗಿ ಮಾರ್ಪಡಿಸುವ ಸಾಧನ. ಅಗತ್ಯ ಎನಿಸುವಷ್ಟು ವಾಯುಭರಿತ ಇಂಧನ (ಪೆಟ್ರೋಲ್, ಡೀಸೆಲ್ ಮುಂತಾದವು) ಸೀಮಿತ ಆವರಣ ದೊಳಗೆ ದಹನಗೊಂಡಾಗ ಉತ್ಪತ್ತಿ ಯಾಗುವ ಅಧಿಕ ಪ್ರಮಾಣದ ದಹನಾನಿಲಗಳು ಆ ಆವರಣಕ್ಕೆ ಲಗತ್ತಿಸಿದ ಕೊಂತವನ್ನು ಅದುಮಿ ಚಲಿಸುವಂತೆ ಮಾಡುತ್ತವೆ. ಹೀಗೆ ಇಂಧನ ದಹನದಿಂದ ಚಲಿಸುವ ಶಕ್ತಿ, ಕೊಂತದ ಚಲನೆಯಲ್ಲಿ ಯಾಂತ್ರಿಕ ಶಕ್ತಿಯಾಗಿ ಮಾರ್ಪಟ್ಟಿರುತ್ತದೆ | internal combustion engine |