A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 318

Backtrace:

File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 319

Backtrace:

File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 320

Backtrace:

File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler

File: /Appdata/padakanaja.karnataka.gov.in/index.php
Line: 318
Function: require_once

Padakanaja - Dictionary View
ಅನಿಸಿಕೆ

ಪದಕೋಶ: ನವಕರ್ನಾಟಕ ವಿಜ್ಞಾನ - ತಂತ್ರಜ್ಞಾನ ಪದಸಂಪದ | ಕನ್ನಡ-ಕನ್ನಡ-ಇಂಗ್ಲೀಷ್ |ಪ್ರಕಾಶಕರು - ನವಕರ್ನಾಟಕ ಪಬ್ಲಿಕೇಷನ್ಸ್‌ ಪ್ರೈವೇಟ್ ಲಿಮಿಟೆಡ್ (2012)

Show entries
ಕ್ರಮ ಸ೦ಖ್ಯೆ ಇಂಗ್ಲೀಷ್ ಪದ
(English Word)
ಕನ್ನಡ ಪದ
(Kannada Word)
ಕನ್ನಡ ಅರ್ಥ
(Kannada Meaning)
ವಿಷಯ ವರ್ಗೀಕರಣ
(Word Subject)
ವ್ಯಾಕರಣ ವಿಶೇಷ
(Word Grammer)
ಕನ್ನಡ ಉಚ್ಚಾರಣೆ
(Kannada Pronunciation)
ಪರ್ಯಾಯ ಪದ
(Word Synonyms)
ಇಂಗ್ಲೀಷ್ ಅರ್ಥ
(English Meaning)
ಸಂಕ್ಷಿಪ್ತ ವಿವರಣೆ
(Short Description)
ದೀರ್ಘ ವಿವರಣೆ
(Long Description)
ಆಡಳಿತಾತ್ಮಕ ಪದ
(Administrative Word)
91 ಅಂತರರಾಷ್ಟ್ರೀಯ ದಿನಾಂಕ ರೇಖೆ (ಖ) ಉತ್ತರ ದಕ್ಷಿಣ ಧ್ರುವಗಳನ್ನು ಸಂಧಿಸುವಂತೆ ಗೋಳದ ಮೇಲ್ಮೈ ಮೇಲೆ ಎಳೆದ ಕಾಲ್ಪನಿಕ ರೇಖೆ. ೧೮೦0 ರೇಖಾಂಶ ವೃತ್ತ ಪೆಸಿಫಿಕ್ ಸಾಗರದ ನಿರ್ಜನ ಪ್ರದೇಶದ ಮೇಲೆ ಹಾದು ಹೋಗುತ್ತದೆ. ಹೀಗೆ ಸಾಗುವಾಗ ಒಂದೆರಡು ದ್ವೀಪಗಳನ್ನು ಬಳಸಿ ಹೋಗುವಂತೆ ಎಳೆದಿದೆ. ಈ ರೇಖೆಯಿಂದ ಜಪಾನ್ ಕಡೆಗೆ ಪೂರ್ವ, ಅಮೆರಿಕ ಕಡೆಗೆ ಪಶ್ಚಿಮ ಎಂದು ಅಂಗೀಕರಿಸಿದೆ. ಎಂದೇ ಪಶ್ಚಿಮದಿಂದ ಪೂರ್ವಕ್ಕೆ ಇದನ್ನು ದಾಟುವಾಗ ತಾರೀಖು ಪಟ್ಟಿಯಲ್ಲಿ ೧ ದಿವಸ ಹೆಚ್ಚು ಮಾಡಬೇಕು. ಪೂರ್ವದಿಂದ ಪಶ್ಚಿಮಕ್ಕೆ ದಾಟುವಾಗ ಕಡಿಮೆ ಮಾಡಬೇಕು. ನಾಗರಿಕ ಜೀವನದ ಸೌಲಭ್ಯಕ್ಕಾಗಿ ಈ ಏರ್ಪಾಡು. ‘ಅಂತರರಾಷ್ಟ್ರೀಯ ಮೆರಿಡಿಯನ್ ಸಮ್ಮೇಳನ’ ೧೮೮೪ರಲ್ಲಿ ಈ ೧೮೦0 ರೇಖಾಂಶ ವೃತ್ತವನ್ನು ದಿನಾಂಕ ರೇಖೆಯಾಗಿ ಆಯ್ಕೆ ಮಾಡಿತು international dateline
92 ಅಂತರರಾಷ್ಟ್ರೀಯ ವ್ಯಾವಹಾರಿಕ ಉಷ್ಣತಾ ಮಾನಕ (ಭೌ) ಉಷ್ಣಗತೀಯ ಮಾನಕಕ್ಕೆ ಆದಷ್ಟೂ ಸಮೀಪವಿರುವಂತೆ ೧೯೬೮ರಲ್ಲಿ ನಿರೂಪಿಸಿದ ವ್ಯಾವಹಾರಿಕ ಉಷ್ಣತಾಮಾನಕ. ಆರಂಭದಲ್ಲಿ ಅನಿಲ ಉಷ್ಣತಾಮಾಪಕ ಬಳಸಿಕೊಂಡು ಹನ್ನೊಂದು ಸ್ಥಿರ ಬಿಂದುಗಳನ್ನು ನಿರೂಪಿಸಲಾಯಿತು. ಉಷ್ಣತಾ ವ್ಯಾಪ್ತಿಗನುಸಾರ ಗೊತ್ತಾದ ಉಷ್ಣತಾ ಮಾಪಕದಿಂದ ಮಧ್ಯಂತರ ಉಷ್ಣತೆಗಳನ್ನು ಅಳೆಯಲಾಗುತ್ತದೆ. ಈಗ ಈ ಮಾನಕದ ಬಲುಮಟ್ಟಿಗಿನ ಉಷ್ಣತೆಯ ಅಳತೆಗಳನ್ನು ಪ್ಲಾಟಿನಮ್ ರೋಧಕ ಉಷ್ಣತಾ ಮಾಪಕದಿಂದ ಮಾಡಲಾಗುತ್ತದೆ international practical temperature scale
93 ಅಂತರವಕಾಶ (ಜೀ) ಕೆಲವು ಬಗೆಯ ಸಂಯೋಜಕ ಊತಕಗಳಲ್ಲಿ ಕೋಶಗಳ ಮತ್ತು ತಂತುಗಳ ನಡುವಿನ ತೆರಪುಗಳ ಪೈಕಿ ಒಂದು. ಎಲೆಯ ಸಿರೆಗಳ ನಡುವಣ ಅಥವಾ ಕೀಟದ ರೆಕ್ಕೆಯ ಮೇಲಿನ ನರಗಳ ನಡುವಣ, ಬಲು ಸಣ್ಣ ಪ್ರದೇಶ. ಕಿರುಸಂಧಿ. (ವೈ) ವರ್ಣವಲಯ, ದುಂಡಗಿರುವ ಬಣ್ಣದ ಭಾಗ. ಉದಾ: ಮೊಲೆ ತೊಟ್ಟಿನ ಅಥವಾ ಕಣ್ಣಿನ ಪಾಪೆಯ ಸುತ್ತಲಿನ ಭಾಗ areola
94 ಅಂತರವಾಹ (ಭೌ) ವಿದ್ಯುನ್ಮಂಡಲದ ಯಾವುದೋ ಬಿಂದುವಿನಲ್ಲಿ ಹಾಕಿದ ವಿದ್ಯುತ್ ಪ್ರೇರಕಬಲದ ಪ್ರತಿಯೊಂದು ಏಕಮಾನ ಆಧಿಕ್ಯಕ್ಕೆ ಆ ಮಂಡಲದ ಇನ್ನೊಂದು ಭಾಗದಲ್ಲಿ ಕಂಡುಬರುವ ವಿದ್ಯುತ್ ಪ್ರವಾಹದ ಆಧಿಕ್ಯ. ಪರಸ್ಪರ ವಾಹ ಒಂದು ವಿಶಿಷ್ಟ ನಿದರ್ಶನ transconductance
95 ಅಂತರಸಂಸ್ತರಿತ (ಭೂವಿ) ಎರಡು ಶಿಲಾ ಸ್ತರಗಳ ಮಧ್ಯೆ ಇರುವ; ಭಿನ್ನ ಸಾಮಗ್ರಿಯ ಇತರ ಸ್ತರಗಳಿಗೆ ಸಮಾಂತರವಾದ ಸ್ತರದಲ್ಲಿರುವ interbedded
96 ಅಂತರಹೃತ್‌ಸ್ತರ (ಜೀ) ಕಶೇರುಕಗಳಲ್ಲಿ ಹೃದಯದ ಪೊಳ್ಳುಭಾಗವನ್ನು ಆವರಿಸಿರುವ ಒಳಪೊರೆ. ಹೃದಯದ ಒಳಪೊರೆ. ಹೃತ್ಪೊರೆ endocardium
97 ಅಂತರಾಂಗಗಳು (ಪ್ರಾ) ಜೀವಿಯ ದೇಹ ಕುಹರಗಳೊಳಗಿನ ಅಂಗಗಳು. ಉದಾ: ಮಿದುಳು, ಶ್ವಾಸಕೋಶ, ಹೃದಯ, ಜಠರ viscera
98 ಅಂತರಾಣವಿಕ ಬಲಗಳು (ಭೌ) ಯಾವುದೇ ಸಂಯುಕ್ತದಲ್ಲಿ ಒಂದು ಅಣುವನ್ನು ಇನ್ನೊಂದ ರೊಂದಿಗೆ ಬಂಧಿಸುವ ಬಲಗಳು. ಇವು ಒಂದು ಅಣುವಿನಲ್ಲೇ ಪರಮಾಣುಗಳನ್ನು ಪರಸ್ಪರ ಬಂಧಿಸುವ ಬಲಗಳಿಗಿಂತ ತೀರ ದುರ್ಬಲವಾದವು intermolecular forces
99 ಅಂತರಾಯಿಕ (ಭೌ) ಬಿಟ್ಟು ಬಿಟ್ಟು ಪ್ರಾರಂಭ ವಾಗುವ. ಕ್ರಿಯೆಗಳ ನಡುವೆ ಕ್ರಮಬದ್ಧ ಅಥವಾ ಕ್ರಮರಹಿತ ಅಂತರಗಳಲ್ಲಿ ನಿಂತು ಮುಂದುವರಿಯುವ. ಸವಿರಾಮ. intermittent
100 ಅಂತರಾವಸ್ಥೆ (ಪ್ರಾ) ಪ್ರಾಣಿಯ ಜೀವನದಲ್ಲಿ ಯಾವುದೇ ಸುಸ್ಪಷ್ಟ ಗಮನಾರ್ಹ ಘಟ್ಟ , ವಿಶೇಷವಾಗಿ ಎರಡು ಅನುಕ್ರಮ ಪೊರೆ ಬಿಡುವಿಕೆಗಳ (ಉರ್ಚು) ನಡುವಿನ ಅವಧಿ stadium